ಅಧಿಕ ರಕ್ತದೊತ್ತಡ; ನಿಯಂತ್ರಣಕ್ಕೆ ತರುವ ನೈಸರ್ಗಿಕ ವಿಧಾನಗಳು
Team Udayavani, Feb 20, 2022, 7:30 AM IST
ಅಧಿಕ ರಕ್ತದೊತ್ತಡವು ಇಂದು ಅತೀ ಸಾಮಾನ್ಯವಾದ ಒಂದು ಆರೋಗ್ಯ ಸಮಸ್ಯೆಯಾಗಿದ್ದು, ಯುವ ವಯಸ್ಸಿನ
ವರಲ್ಲಿಯೂ ಹೆಚ್ಚಾಗಿ ಕಂಡುಬರುತ್ತಿದೆ. ಅವರಲ್ಲಿಅನೇಕರು ಔಷಧ ಚಿಕಿತ್ಸೆ ಆರಂಭಿಸಲು ಹಿಂಜರಿಯುತ್ತಿದ್ದಾರೆ. ಹೀಗಾಗಿ ಔಷಧಶಾಸ್ತ್ರೀಯ ಚಿಕಿತ್ಸೆಯ ಹೊರತಾಗಿ ಅಧಿಕ ರಕ್ತದೊತ್ತಡವನ್ನು ಹೇಗೆ ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಎಂಬುದನ್ನು ನೋಡೋಣ.
ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ನೈಸರ್ಗಿಕವಾಗಿ ಅನುಸರಿಸಬಹುದಾದ ವಿಧಾನಗಳು ಯಾವುವು ಎಂದರೆ;
– ಸೋಡಿಯಂ ಸೇವನೆಯನ್ನು ಕಡಿಮೆ ಮಾಡುವುದು: ಅಧಿಕ ರಕ್ತದೊತ್ತಡವುಳ್ಳ ಜನರಲ್ಲಿ ಸುಮಾರು ಅರ್ಧಾಂಶದಷ್ಟು ಮತ್ತು ಸಹಜ ರಕ್ತದೊತ್ತಡ ಹೊಂದಿರುವವರಲ್ಲಿ ಕಾಲು ಭಾಗದಷ್ಟು ಮಂದಿ ಉಪ್ಪಿಗೆ ಸಂವೇದನಶೀಲತೆ ಹೊಂದಿರುತ್ತಾರೆ. ಹೀಗಾಗಿ ಉಪ್ಪಿನಂಶ ಸೇವನೆಯನ್ನು ದಿನಕ್ಕೆ 4ರಿಂದ 5 ಗ್ರಾಂ
ಗಳಿಗೆ ಮಿತಗೊಳಿಸಬೇಕು. ಇದು ಅಧಿಕ ರಕ್ತದೊತ್ತಡವನ್ನು ನೈಸರ್ಗಿಕವಾಗಿ ನಿಯಂತ್ರಣಕ್ಕೆ ತರುತ್ತದೆ.
– ನಿಯಮಿತವಾಗಿ ವ್ಯಾಯಾಮ ಮಾಡುವುದು: ರಕ್ತದೊತ್ತಡವನ್ನು ಕಡಿಮೆ ಮಾಡಲು ಅಥವಾ ನಿಯಂತ್ರಣಕ್ಕೆ ತರಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಒಂದು ಉತ್ತಮ ವಿಧಾನ. ನಿಯಮಿತವಾದ ವ್ಯಾಯಾಮದಿಂದ ನಿಮ್ಮ ಹೃದಯ ಸದೃಢವಾಗುತ್ತದೆ ಮತ್ತು ರಕ್ತವನ್ನು ಸಮರ್ಥವಾಗಿ ಪಂಪ್‌ಮಾಡಲು ಶಕ್ತವಾಗುತ್ತದೆ. ಇದರಿಂದ ಅಪಧಮನಿಗಳಲ್ಲಿ ರಕ್ತದೊತ್ತಡ ಕಡಿಮೆಯಾಗುತ್ತದೆ. ನಿಜ ಹೇಳಬೇಕೆಂದರೆ ದಿನಕ್ಕೆ 150 ನಿಮಿಷಗಳಷ್ಟು ಕಾಲ ವೇಗದ ನಡಿಗೆ ಅಥವಾ 75 ನಿಮಿಷಗಳ ಕಾಲ ಕಠಿನವ್ಯಾಯಾಮ ಮಾಡುವುದರಿಂದ ರಕ್ತದೊತ್ತಡ ತಗ್ಗುತ್ತದೆ ಮತ್ತು ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.
– ಮದ್ಯಪಾನವನ್ನು ಕಡಿಮೆ ಮಾಡುವುದು: ಮದ್ಯಪಾನದಿಂದ ರಕ್ತದೊತ್ತಡ ಹೆಚ್ಚುತ್ತದೆ. ಜಾಗತಿಕವಾಗಿ ಅಧಿಕ ರಕ್ತದೊತ್ತಡ ಹೊಂದಿರುವ ಪ್ರಕರಣಗಳಲ್ಲಿ ಶೇ. 16ರಷ್ಟು ಮದ್ಯಪಾನದ ಜತೆಗೆ ಸಂಬಂಧ ಹೊಂದಿರುತ್ತವೆ. ಹೀಗಾಗಿ ಮದ್ಯಪಾನವನ್ನು ಕಡಿಮೆ ಮಾಡುವುದು ಅಥವಾ ತ್ಯಜಿಸುವುದು ಹಾಗೂ ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳುವುದು ಉತ್ತಮ.
– ತೂಕ ಇಳಿಸಿಕೊಳ್ಳಿ: ದೇಹತೂಕವನ್ನು ನಿಯಂತ್ರಿಸಿಕೊಳ್ಳುವುದು ಅಥವಾ ಇಳಿಸಿಕೊಳ್ಳುವುದರಿಂದ ಹೃದಯ ಸಂಕುಚನ-ವಿಕಸನಗೊಳ್ಳುವುದು ಉತ್ತಮವಾಗುತ್ತದೆ, ಇದರಿಂದ ರಕ್ತನಾಳಗಳಿಗೆ ಸಹಾಯವಾಗುತ್ತದೆ. ಹೀಗಾಗಿ ಹೃದಯದ ಎಡಭಾಗವು ರಕ್ತವನ್ನು ಪಂಪ್ ಮಾಡುವುದಕ್ಕೆ ಹೆಚ್ಚು ಸಮರ್ಥವಾಗುತ್ತದೆ. ಹೀಗಾಗಿ ದೇಹತೂಕ ವನ್ನು ಕಡಿಮೆ ಮಾಡಿಕೊಳ್ಳುವವರಿಗೆ ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದು ಸುಲಭವಾಗುತ್ತದೆ.
– ಧೂಮಪಾನವನ್ನು ತ್ಯಜಿಸುವುದು: ಧೂಮಪಾನದಿಂದ ಹೃದ್ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚುತ್ತವೆ. ಇದರಿಂದಾಗಿ ಅಧಿಕ ರಕ್ತದೊತ್ತಡ ಉಂಟಾಗಬಹುದು, ರಕ್ತನಾಳಗಳಿಗೆ ಹಾನಿಯಾಗಬಹುದು. ಆದ್ದರಿಂದ ಭವಿಷ್ಯದ ಆರೋಗ್ಯ ಅಪಾಯಗಳನ್ನು ದೂರ ಮಾಡುವುದಕ್ಕಾಗಿ ಧೂಮಪಾನವನ್ನು ತ್ಯಜಿಸಿ.
– ಪೊಟ್ಯಾಸಿಯಂ ಅಂಶ ಅಧಿಕವಿರುವ ಆಹಾರವಸ್ತುಗಳನ್ನು ಹೆಚ್ಚು ಸೇವಿಸಿ: ಪೊಟ್ಯಾಸಿಯಂ ಅಂಶ ಹೆಚ್ಚಿರುವ ಆಹಾರವಸ್ತುಗಳನ್ನು ಸೇವಿಸುವುದರಿಂದ ದೇಹಕ್ಕೆ ಸೋಡಿಯಂ ಅಂಶವನ್ನು ಹೊರಹಾಕಲು ಸಹಾಯವಾಗುತ್ತದೆ ಮತ್ತು ರಕ್ತನಾಳಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆಧುನಿಕ ಆಹಾರ ಕ್ರಮಗಳಲ್ಲಿ ಸೋಡಿಯಂ ಅಂಶವೇ ಹೆಚ್ಚಾಗಿದ್ದು, ಪೊಟ್ಯಾಸಿಯಂ ಅಂಶ ಕಡಿಮೆಯಿರುತ್ತದೆ. ಹೀಗಾಗಿ ಡ್ಯಾಶ್ ಡಯಟ್ ಎಂದು ಕರೆಯಲ್ಪಡುವ ಆಹಾರಕ್ರಮವನ್ನು ಪಾಲಿಸಿ ಸಮತೋಲನ ಸಾಧಿಸುವುದು ಉತ್ತಮ. ಇದರಲ್ಲಿ ತಾಜಾ ಹಣ್ಣು ತರಕಾರಿ ಇತ್ಯಾದಿಗಳು ಹೆಚ್ಚು ಪ್ರಮಾಣದಲ್ಲಿರುತ್ತವೆ.
– ಜೀವನವಿಧಾನವನ್ನು ಬದಲಾಯಿಸಿಕೊಳ್ಳುವುದು: ಇತ್ತೀಚೆಗಿನ ದಿನಗಳಲ್ಲಿ ಮನೆಯಲ್ಲಿಯೇ ರಕ್ತದೊತ್ತಡದ ಮೇಲೆ ನಿಗಾ ಇರಿಸಬಹುದಾದ ಉಪಕರಣಗಳು ಲಭ್ಯವಿವೆ. ಈ ತಂತ್ರಜ್ಞಾನದ ಸದ್ಬಳಕೆಯನ್ನು ನಾವು ಮಾಡಿಕೊಳ್ಳಬೇಕು ಮತ್ತು ಪ್ರತಿದಿನವೂ ನಿಗಾ ಇರಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯ ಸ್ಥಿತಿಗತಿಯ ಅರಿವು ಹೊಂದಿರಬೇಕು.
-ಡಾ| ಬಸವಪ್ರಭು
ಕನ್ಸಲ್ಟಂಟ್, ಇಂಟರ್ನಲ್ ಮೆಡಿಸಿನ್ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.