ಹದಿಹರೆಯ ಮತ್ತು ಎಚ್‌ಐವಿ/ಏಡ್ಸ್
Team Udayavani, Dec 2, 2018, 6:00 AM IST
ಹದಿಹರೆಯ ಎಂದರೇನು?
ಹದಿಹರೆಯವು ಜೀವನದ ಒಂದು ಪ್ರಮುಖವಾದ ಹಂತವೆಂದು ಪರಿಗಣಿಸಲ್ಪಡುತ್ತದೆ. 10-19 ವರ್ಷದೊಳಗಿನ ಹದಿಹರೆಯದವರಿಗೆ ವಿಶೇಷ ಕಾಳಜಿ ನೀಡುವ ಅಗತ್ಯವಿದೆ. ಏಕೆಂದರೆ, ಬಾಲ್ಯಾವಸ್ಥೆಯಿಂದ ಪ್ರೌಢಾವಸ್ಥೆಗೆ ತಲುಪುವ ಅವಧಿಯಲ್ಲಿ ಶಾರೀರಿಕ ಬೆಳವಣಿಗೆ ಜತೆಗೆ ಮಾನಸಿಕ ಮತ್ತು ನಡವಳಿಕೆಯಲ್ಲಿ ಹೆಚ್ಚಿನ ಬದಲಾವಣೆಗಳು ಕಂಡುಬರುವುವು.
ವ್ಯಕ್ತಿಯ ಜೀವನದಲ್ಲಿ ಹದಿಹರೆಯ ಎಂಬುದು ಗುರುತಿಸಲ್ಪಡುವ ಒಂದು ವಿಶೇಷ ಹಂತ. ದೈಹಿಕ ಬೆಳವಣಿಗೆಯೊಂದಿಗೆ ಲೈಂಗಿಕ ಬೆಳವಣಿಗೆಗಳು ಕಂಡುಬರುವುವು. ದೇಹದಲ್ಲಿ ಹಾರ್ಮೋನುಗಳ ಬದಲಾವಣೆ ಫಲವಾಗಿ ಲೈಂಗಿಕ ವಿಷಯಗಳಲ್ಲಿ ಕುತೂಹಲ, ಕಿರಿಕಿರಿಗಳಾಗುವುದು, ಕೋಪೋದ್ರೇಕ, ಚಾಂಚಲ್ಯ, ಮಾನಸಿಕ ಒತ್ತಡ ಮುಂತಾದ ಪರಿಣಾಮಗಳನ್ನು ಕಾಣಬಹುದಾಗಿದೆ.
ಲೈಂಗಿಕ ಆಕರ್ಷಣೆ ಫಲವಾಗಿ ಅನ್ಯಲಿಂಗದವರ ಜತೆಗೆ ಮುಕ್ತವಾಗಿ ಬೆರೆಯುವ ಆಸೆ-ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಾರೆ. ಹಾಗಿದ್ದರೂ ವಿವಾಹಪೂರ್ವ ಲೈಂಗಿಕ ಚಟುವಟಿಕೆಯ ಬಗೆಗಿರುವ ಸಾಮಾಜಿಕ ನಿರ್ಬಂಧನೆಗಳಿಂದಾಗಿ ಹದಿಹರೆಯದವರು ಮುಕ್ತವಾಗಿ ಬೆರೆಯಲು ಸಾಧ್ಯವಾಗುವುದಿಲ್ಲ. ಆದರೂ ತಮ್ಮ ಆಸೆ ಮತ್ತು ಅಗತ್ಯಗಳನ್ನು ಪೂರೈಸಿಕೊಳ್ಳಲಾಗದೆ ಗೊಂದಲಮಯ ಸನ್ನಿವೇಶಕ್ಕೆ ಒಳಗಾಗುತ್ತಾರೆ ಮತ್ತು ಹಗಲುಗನಸು ಕಾಣುವ ಮೂಲಕ ತಕ್ಕಮಟ್ಟಿಗೆ ತಮ್ಮ ಆಸೆಯನ್ನು ಪೂರೈಸುತ್ತಾರೆ.ಹದಿಹರೆಯದ ಗಂಡು, ಹೆಣ್ಣು ಮಕ್ಕಳಲ್ಲಿ ಭಾವನಾತ್ಮಕ ಮತ್ತು ಸಾಮಾಜಿಕ ಬದಲಾವಣೆಗಳು
– ದೈಹಿಕವಾಗಿ ಸುಂದರವಾಗಿ ಕಾಣಿಸಿಕೊಳ್ಳುವುದು
– ಸ್ವಂತ ವ್ಯಕ್ತಿತ್ವ ಬೆಳೆಸಿಕೊಳ್ಳುವುದು
– ಹಗಲುಗನಸು ಕಾಣುವುದು
– ಆಕರ್ಷಿಸಬೇಕೆಂಬ ಹಂಬಲ
– ಲೈಂಗಿಕ ಆಕರ್ಷಣೆ
– ಯೋಚನಾ ಸಾಮರ್ಥ್ಯ ಹೆಚ್ಚುವುದು
– ಸಹಪಾಠಿ ನಡವಳಿಕೆಯನ್ನು ಅನುಕರಿಸುವುದು.
ಲೈಂಗಿಕತೆ ಎಂದರೇನು?
ಲೈಂಗಿಕತೆಯನ್ನು ಬೇರೆ ಬೇರೆ ಜನರು ಬೇರೆ ಬೇರೆ ರೀತಿಯಲ್ಲಿ ಅರ್ಥೈಸುತ್ತಾರೆ. ಬಹುಜನರು ಲೈಂಗಿಕತೆ ಎಂದರೆ ಲೈಂಗಿಕ ಸಂಪರ್ಕ, ಸಂತಾನೋತ್ಪತ್ತಿ ಮತ್ತು ಸಾಮಾನ್ಯ ಲೈಂಗಿಕ ನಡವಳಿಕೆಗಳು (ಚುಂಬನ, ದೈಹಿಕ ಸಂಪರ್ಕ ಹೊಂದುವುದು, ಉತ್ತೇಜನಕಾರಿ ನಡವಳಿಕೆ) ಎಂದು ತಿಳಿದಿರುತ್ತಾರೆ.
ಲೈಂಗಿಕತೆ ಒಂದು ವಿಶಾಲವಾದ ಪದ. ಇದು ಒಬ್ಬ ವ್ಯಕ್ತಿಯ ಸಮಗ್ರ ವ್ಯಕ್ತಿತ್ವ, ಆಲೋಚನಾ ಶಕ್ತಿ ಹಾಗೂ ಲೈಂಗಿಕ ನಡವಳಿಕೆಗಳನ್ನು ಒಳಗೊಂಡಿದೆ. ಇದಲ್ಲದೆ ಒಬ್ಬ ವ್ಯಕ್ತಿಯ ಉದ್ದೇಶಗಳು, ಭಾವನೆಗಳು, ಚಟುವಟಿಕೆಗಳು, ಸಂಬಂಧಗಳು, ಪ್ರೀತಿ ಮೊದಲಾದವುಗಳನ್ನು ಒಳಗೊಂಡಿರುತ್ತದೆ. ಲೈಂಗಿಕ ಬಲಾತ್ಕಾರ, ಹೆಣ್ಣು ಮಕ್ಕಳನ್ನು ಚುಡಾಯಿಸುವುದು, ಲೈಂಗಿಕ ಕಿರುಕುಳ, ಮಾನಭಂಗ ಮತ್ತು ವೇಶ್ಯಾವೃತ್ತಿ ನಡೆಸುವುದು ಇವು ಲೈಂಗಿಕತೆಯ ನಕಾರಾತ್ಮಕ ಅಂಶಗಳು.
ಸಾಮಾನ್ಯವಾಗಿ ಹೆಣ್ಣು ಮಕ್ಕಳು ಮೋಸ, ಹೆದರಿಕೆಗೆ ಒಳಗಾಗಿ ಅಥವಾ ಬಲಾತ್ಕಾರದ ಮೂಲಕ ವಯಸ್ಕರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಮಕ್ಕಳು ಮತ್ತು ಮನಃಸ್ಥಿತಿ ಸರಿಯಿಲ್ಲದವರಲ್ಲಿಯೂ ಕೂಡ ಲೈಂಗಿಕ ದೌರ್ಜನ್ಯ ಮತ್ತು ಹಿಂಸೆಗಳು ಕಂಡುಬರುತ್ತಿವೆ. ಒಟ್ಟಾರೆ ಇವೆಲ್ಲವೂ ಜೀವನದ ಮೇಲೆ ದುಷ್ಪರಿಣಾಮಗಳನ್ನುಂಟು ಮಾಡುತ್ತವೆ. ಇದಲ್ಲದೆ, ಅನಾರೋಗ್ಯ ಮತ್ತು ಜೀವನವನ್ನೇ ಘಾಸಿಗೊಳಿಸುವ ಸೋಂಕುಗಳು ಕಂಡುಬರುತ್ತವೆ.
ಲೈಂಗಿಕ ಸಂಪರ್ಕದ ಸೋಂಕುಗಳು
1. ಜನನೇಂದ್ರಿಯ ಮಾರ್ಗದ ಸೋಂಕುಗಳು (ಆರ್‌ಟಿಐ)
2. ಲೈಂಗಿಕ ಮಾರ್ಗದ (ಎಸ್‌ಟಿಐ) ಸೋಂಕುಗಳು
ಸಂತಾನೋತ್ಪತ್ತಿ ಅವಯವಗಳ ಸೋಂಕುಗಳು (ಆರ್‌ಟಿಐ) ಲೈಂಗಿಕ ಸಂಪರ್ಕದಿಂದ ಅಥವಾ ಬೇರೆ ಬೇರೆ ವಿಧಾನದಿಂದ ಬರಬಹುದು.
ಉದಾ: 1. ಬ್ಯಾಕ್ಟೀರಿಯಾ
2. ಕ್ಯಾಂಡಿಡಾಗಳಿಂದ ಯೋನಿಯಲ್ಲಿ ಆಗುವ ಕೆಲವು ಸೋಂಕುಗಳು
ಅಸುರಕ್ಷಿತ ಗರ್ಭಪಾತದಿಂದ ಅಥವಾ ಚಿಕಿತ್ಸೆ ಪಡೆಯುವಾಗ ಕಠೀರದ ಬಾಯಿ ಸೋಂಕು ಉಂಟಾಗಬಹುದು.
(ಎಸ್‌ಟಿಐ) ಲೈಂಗಿಕ ಮಾರ್ಗದ ಸೋಂಕುಗಳು ಯಾವುವು?
ಲೈಂಗಿಕ ಮಾರ್ಗದ ಸೋಂಕುಗಳು ಒಬ್ಬರಿಂದ ಒಬ್ಬರಿಗೆ ಲೈಂಗಿಕ ಸಂಪರ್ಕದಿಂದ ಹರಡುವ ಸೋಂಕುಗಳು. ಸೋಂಕಿದ್ದ ವ್ಯಕ್ತಿಗಳ ಮೇಲೆ ಎಸ್‌ಟಿಐಗಳು ಗಂಭೀರವಾದ ವೈದ್ಯಕೀಯ, ಸಾಮಾಜಿಕ ಹಾಗೂ ಮಾನಸಿಕ ದುಷ್ಪರಿಣಾಮಗಳನ್ನುಂಟು ಮಾಡುತ್ತವೆ. ಒಂದು ವೇಳೆ ಈ ಸೋಂಕು ಮಹಿಳೆಯಲ್ಲಿದ್ದರೆ ಗರ್ಭದಲ್ಲಿರುವ ಮಗುವಿಗೂ ಸೋಂಕು ತಗಲುವ ಸಾಧ್ಯತೆ ಇದೆ.
ಜನನಾಂಗದ ಹುಣ್ಣು ಇರುವ ಎಸ್‌ಟಿಐ ಹೊಂದಿರುವವರ ಜತೆ ಲೈಂಗಿಕ ಸಂಪರ್ಕ ಹೊಂದುವುದರಿಂದ ಎಚ್‌ಐವಿ ಹರಡುವ ಸಂಭವ ಹೆಚ್ಚು. ಎಸ್‌ಟಿಐ ರೋಗವಿದ್ದರೆ ಬೇಗನೆ ಕಂಡು ಹಿಡಿದು ಸೂಕ್ತ ಚಿಕಿತ್ಸೆ ಕೊಡುವುದು ಉತ್ತಮ.
ಎಚ್‌ಐವಿ / ಏಡ್ಸ್ ಎಚ್‌ಐವಿ ಎಂದರೆ ಮಾನವರಲ್ಲಿ ರೋಗ ನಿರೋಧಕ ಕೊರತೆಯುಂಟು ಮಾಡುವ ವೈರಾಣು.
ಏಡ್ಸ್ ಎಂದರೆ
ಎ ಪಡೆದ ಆನುವಂಶಿಕವಾಗಿ ಪಡೆಯದೇ ಬೇರೊಬ್ಬರಿಂದ ಪಡೆದ
ಐ ರೋಗ ನಿರೋಧಕ ಶಕ್ತಿಯ
ಡಿ ಕೊರತೆಯುಂಟಾಗುವುದು
ಎಸ್ ರೋಗದ ಲಕ್ಷಣಗಳ ಗುಂಪು
ಎಚ್.ಐ.ವಿ. ಹೇಗೆ ಹರಡುತ್ತದೆ?
– ಅಸುರಕ್ಷಿತ ಲೈಂಗಿಕ ಕ್ರಿಯೆ
– ಸೋಂಕಿತ ವ್ಯಕ್ತಿಯ ಸೂಜಿ ಮತ್ತು ಸಿರಿಂಜ್‌ಗಳನ್ನು ಬಳಸುವುದರಿಂದ
– ಸೋಂಕಿತ ವ್ಯಕ್ತಿಯ ರಕ್ತ ಪಡೆಯುವುದರಿಂದ
– ಸೋಂಕುಳ್ಳ ತಾಯಿಯಿಂದ ಮಗುವಿಗೆ
ಎಚ್‌ಐವಿ ಸೋಂಕನ್ನು ಗುರುತಿಸುವುದು ಹೇಗೆ?
ಒಬ್ಬ ವ್ಯಕ್ತಿಯನ್ನು ನೋಡಿ ಅಥವಾ ಅವನ ಚಟುವಟಿಕೆಯನ್ನು ನೋಡಿ ಅವನಿಗೆ ಎಚ್‌ಐವಿ / ಏಡ್ಸ್ ಇದೆ ಎಂದು ಹೇಳಲು ಸಾಧ್ಯವಿಲ್ಲ. ಕೇವಲ ರಕ್ತ ಪರೀಕ್ಷೆಯಿಂದ ಮಾತ್ರ ಗುರುತಿಸುವುದು ಸಾಧ್ಯ.
ಎಚ್‌ಐವಿ ಸೋಂಕುಳ್ಳ ವ್ಯಕ್ತಿಗೆ ಯಾವುದೇ ನಿಶ್ಚಿತ ರೋಗ ಲಕ್ಷಣಗಳು ಇಲ್ಲದೆ ಇರುವುದರಿಂದ ಪ್ರಯೋಗಾಲಯದ ಪರೀಕ್ಷೆಯ ಹೊರತಾಗಿ ರೋಗ ಇದೆಯೇ ಇಲ್ಲವೋ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಈ ಪರೀಕ್ಷೆಯನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಮಾಡಿಸಬಹುದು. ಪರೀಕ್ಷೆಯ ಮೊದಲು ಮತ್ತು ಅನಂತರ ಆಪ್ತ ಸಮಾಲೋಚನೆ ಮಾಡುವುದು ಈ ಪರೀಕ್ಷೆಯ ಅವಿಭಾಜ್ಯ ಅಂಗವಾಗಿದೆ.
ಇಂತಹ ಸ್ವಯಂಪ್ರೇರಿತ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಸೇವೆಗಳು ಎಲ್ಲಾ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತವೆ.
ವಿದ್ಯಾವಂತ ಯುವಕರಲ್ಲಿ ಎಚ್‌ಐವಿ/ಏಡ್ಸ್ ಬಗ್ಗೆ ಹೆಚ್ಚಿನ ಅರಿವು ಇದೆ. ಆದರೂ ಎಚ್‌ಐವಿ/ಏಡ್ಸ್ ಹರಡುವ ಕುರಿತು ಸಾಕಷ್ಟು ತಪ್ಪು ಕಲ್ಪನೆಗಳನ್ನು ಸಮಾಜದಲ್ಲಿ ಕಾಣಬಹುದಾಗಿದೆ. ಅತ್ಯಧಿಕ ಎಚ್‌ಐವಿ ಪಾಸಿಟಿವ್ ಸೋಂಕಿನವರು 20-40 ವರ್ಷದೊಳಗಿನವರಾಗಿದ್ದಾರೆ. ಆದ್ದರಿಂದ, ಹದಿಹರೆಯದವರಿಗೆ ಸೂಕ್ತ ಆರೋಗ್ಯ ಶಿಕ್ಷಣ ನೀಡಬೇಕಾಗಿದೆ ಎಂಬುದು ಇದರಿಂದ ಕಂಡು ಬರುವ ಮುಖ್ಯಾಂಶ.
ಹದಿಹರೆಯದವರಿಗೆ ಉತ್ತಮ ಸೇವೆಗಳನ್ನು ಒದಗಿಸುವುದು ಹೇಗೆ?
ಹದಿಹರೆಯದವರಿಗೆ ಸ್ನೇಹಪರ ಆರೋಗ್ಯ ಸೇವೆಗಳನ್ನು ಆಸ್ಪತ್ರೆಗಳಲ್ಲಿ, ಆರೋಗ್ಯ ಕೇಂದ್ರಗಳಲ್ಲಿ, ಶಾಲೆಗಳಲ್ಲಿ ಮತ್ತು ಸಮುದಾಯದ ಮಟ್ಟದಲ್ಲಿ ಒದಗಿಸಬಹುದು. ಹದಿಹರೆಯದವರ ಸಮಸ್ಯೆಗಳನ್ನು ಅರಿತು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಉತ್ತಮ.
ಹದಿಹರೆಯದವರ ಜೀವನದಲ್ಲಿ ರೂಢಿಸಿಕೊಂಡ ನಡವಳಿಕೆಗಳು ಹಾಗೂ ಜೀವನ ಶೈಲಿಗಳು ಈಗಿನ ಮತ್ತು ಮುಂದಿನ ಜೀವನಕ್ಕೆ ಬುನಾದಿಯಾಗಲಿವೆ. ಹದಿಹರೆಯದಲ್ಲಿ ರೂಢಿಸಿಕೊಂಡ ಉತ್ತಮ ಅಭ್ಯಾಸಗಳು ಹದಿಹರೆಯ ವಯಸ್ಸಿಗೆ ಸೀಮಿತವಾಗದೆ ಜೀವನ ಪರ್ಯಂತ ಮುಂದುವರಿಯುವುವು. ಇದರಿಂದ, ಮುಂದಿನ ಜನಾಂಗದ ಮೇಲೂ ಉತ್ತಮ
ಪರಿಣಾಮ ಉಂಟಾಗುತ್ತದೆ.
ಹದಿಹರೆಯದವರಲ್ಲಿ ಎಚ್.ಐ.ವಿ. ಯಾಕೆ ಹೆಚ್ಚು?
ಈ ದಿನಗಳಲ್ಲಿ ಹದಿಹರೆಯದವರಲ್ಲಿ ಮದುವೆಗಿಂತ ಮೊದಲೇ ಲೈಂಗಿಕ ಚಟುವಟಿಕೆ ಪ್ರಾರಂಭಗೊಳ್ಳುತ್ತದೆ. ಲೈಂಗಿಕ ಸಂಬಂಧಗಳು ಕೆಲವೊಮ್ಮೆ ಒತ್ತಡದಿಂದಾಗಿ ಸಂಗಾತಿ ದೋಷದಿಂದಾಗಿ ಅಥವಾ ಮುಂದಾಲೋಚನೆ ಇಲ್ಲದೆ ಆಗಬಹುದು.
ಅದಕ್ಕಾಗಿ ಹದಿಹರೆಯದವರನ್ನು ಆರೋಗ್ಯವಂತ ವಯಸ್ಕರನ್ನಾಗಿ ಮಾಡಿ ವೈವಾಹಿಕ ಜೀವನಕ್ಕೆ ಸಿದ್ಧಪಡಿಸುವುದು. ಇಂದು ಹದಿಹರೆಯದವರ ಆರೋಗ್ಯದ ಮೇಲೆ ವಿನಿಯೋಗಿಸುವ ಸಂಪತ್ತಿನಿಂದ ಮುಂದೆ ಅವರು ರೋಗರುಜಿನಗಳಿಂದ ಪೀಡಿತಗಾರದೇ ಒಳ್ಳೆಯ ಜೀವನವನ್ನು ನಡೆಸಲು ಅನುಕೂಲವಾಗುವುದು.
ಆರೋಗ್ಯವೆಂದರೆ ಶಾರೀರಿಕವಾಗಿ, ಮಾನಸಿಕವಾಗಿ ಚೆನ್ನಾಗಿರುವುದು ಎಂದರ್ಥ. ಆರೋಗ್ಯವಂತ ವ್ಯಕ್ತಿ ದೈಹಿಕವಾಗಿ, ಮಾನಸಿಕವಾಗಿ ದೃಢವಾಗಿರುವನು. ಆರೋಗ್ಯವಂತ ವ್ಯಕ್ತಿಗಳನ್ನು ಸಮಾಜವು ಗುರುತಿಸುತ್ತದೆ. ಅಲ್ಲದೆ, ಅವರು ತಮ್ಮ ವ್ಯಕ್ತಿತ್ವವನ್ನು ತಾವೇ ರೂಢಿಸಿಕೊಳ್ಳಲು ಸಹಾಯ ಮಾಡುತ್ತದೆ. ಯಾವುದೇ ವ್ಯಕ್ತಿ ಉತ್ತಮ ಉದ್ಯೋಗ, ಉತ್ತಮ ಆದಾಯ ಗಳಿಸಬೇಕಾದರೆ ಆತನ ಆರೋಗ್ಯ ಸ್ಥಿತಿ ಉತ್ತಮವಾಗಿರಬೇಕು. ಆರೋಗ್ಯವಂತ ಯುವ ಜನರು ನಮ್ಮ ದೇಶದ ಸಂಪತ್ತು.
Student life is golden life”,
“Student Health is future wealth
– ಡಯಾನಾ ಕ್ರಾಸ್ತ,
ಪ್ರಯೋಗ ಶಾಲಾ ತಂತ್ರಜ್ಞರು
ವಿಸಿಟಿಸಿ / ಎಆರ್‌ಟಿ ಕೆ.ಎಂ.ಸಿ. ಆಸ್ಪತ್ರೆ, ಅತ್ತಾವರ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.