ಹೆತ್ತವರಿಂದ ಮಗುವಿಗೆ ಎಚ್‌ಐವಿ ಪ್ರಸರಣ ತಡೆ ಹೇಗೆ?
Team Udayavani, Jun 9, 2019, 6:00 AM IST
ಸಾಂದರ್ಭಿಕ ಚಿತ್ರ.
ಐಸಿಟಿಸಿ/ಪಿಪಿಟಿಸಿಟಿಯು ಸೋಂಕಿತ ತಾಯಂದಿರ ಜೀವನದ ಗುಣಮಟ್ಟ ಹಾಗೂ ಜೀವಿತದ ಕಾಲಾವಧಿಯನ್ನು ಹೆಚ್ಚಿಸುವುದಕ್ಕೆ ಒಂದು ಪ್ರಮುಖ ಪಾತ್ರ ವಹಿಸುವ ಕೇಂದ್ರವಾಗಿದೆ. ಜೊತೆಗೆ ಮುಖ್ಯವಾಗಿ, ಶಿಶುವಿಗೆ ಹೆಚ್.ಐ.ವಿ. ವೈರಾಣು ಹರಡುವುದನ್ನು ತಡೆಗಟ್ಟಲು ಪ್ರಮುಖ ಪಾತ್ರ ವಹಿಸುತ್ತದೆ. ಈ ಐಸಿಟಿಸಿ ವ್ಯವಸ್ಥೆಯು ಎಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಕೆಲವು ಆಯ್ದ ಮೆಡಿಕಲ್ ಕಾಲೇಜುಗಳಲ್ಲಿ ಲಭ್ಯವಿರುತ್ತದೆ.
ತಾಯಿಯಿಂದ ಮಗುವಿಗೆ ಹೆಚ್.ಐ.ವಿ. ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಿದೆ. ಹಾಗಾಗಿ ಪ್ರಸವ ಪೂರ್ವದ ಮೂರು ತಿಂಗಳೊಳಗಾಗಿ ಎಲ್ಲಾ ಗರ್ಭಿಣಿ ಮಹಿಳೆಯರು ಐಸಿಟಿಸಿ ಕೇಂದ್ರದಲ್ಲಿ ತಪಾಸಣೆಗೊಳಪಡಬೇಕು. ಫಲಿತಾಂಶವು ನೆಗೆಟಿವ್ ಎಂದಾದರೆ, ಗರ್ಭಿಣಿ ಅಪಾಯಕಾರಿಯಂಚಿನಲ್ಲಿದ್ದರೆ, ಪುನಃ 3-6 ತಿಂಗಳಲ್ಲಿ ಮರು ರಕ್ತಪರೀಕ್ಷೆ ಮಾಡಿಸಬೇಕಾಗುತ್ತದೆ. ಪ್ರತಿ ಗರ್ಭಿಣಿಯರ ಸಂಗಾತಿಯ ಪರೀಕ್ಷೆಯು ಅಗತ್ಯವಾಗಿರುತ್ತದೆ. ಯಾಕೆಂದರೆ, ಗರ್ಭಿಣಿಯು ನೆಗೆಟಿವ್ ಆಗಿ ಆಕೆಯ ಸಂಗಾತಿಯ ಫಲಿತಾಂಶ ಪಾಸಿಟಿವ್ ಬಂದರೆ ಅಂತಹ ಗರ್ಭಿಣಿಗೆ ವಿಂಡೋ ಅವಧಿಯೆಂದು ಪರಿಗಣಿಸಿ ಮರು ಪರೀಕ್ಷೆಗೊಳಪಡಿಸಬಹುದು.
ತಾಯಿಯಿಂದ ಮಗುವಿಗೆ ಹೆಚ್.ಐ.ವಿ. ಹರಡುವ ಸಮಯ : ಐಸಿಟಿಸಿ ವ್ಯವಸ್ಥೆ/ಕಾರ್ಯಕ್ರಮಗಳು ಇಲ್ಲದಿದ್ದಾಗ ಹೆಚ್.ಐ.ವಿ.ಯನ್ನು ಈ ಕೆಳಗಿನ ಸಮಯಗಳಲ್ಲಿ ಹರಡಿಸಬಹುದು. ಒಟ್ಟಾರೆಯಾಗಿ ತಾಯಿಯಿಂದ ಮಗುವಿಗೆ ಶೇ. 5ರಿಂದ 30ರ ವರೆಗೆ ಹೆಚ್.ಐ.ವಿ. ಹರಡುವ ಸಾಧ್ಯತೆ ಇದೆ.
ಪ್ರಸವ ಮತ್ತು ಹೆರಿಗೆಯ ಸಮಯ ಹೆಚ್ಚಿನ ಅಪಾಯಕಾರಿ ಅಂಶವಾಗಿದೆ. ಸ್ತನಪಾನದ 24 ತಿಂಗಳುಗಳ ಸಮಯದಲ್ಲುಂಟಾಗುವ ಸೋಂಕು ಹೆರಿಗೆಯ 24 ಗಂಟೆಗಳ ಸಮಯದಲ್ಲಿ ಉಂಟಾಗುತ್ತದೆ. ಈ ಅವಧಿ, ಸ್ತನಪಾನದ ಮೂಲಕ ಹೆಚ್.ಐ.ವಿ. ಸೋಂಕು ಉಂಟಾಗಿರುವ ಶಿಶುಗಳ ಮೇಲೆ ಪ್ರಮುಖವಾಗಿ ಕೇಂದ್ರಿಕರಿಸುತ್ತದೆ.
ಗರ್ಭಾವಸ್ಥೆಯ ಸಮಯದಲ್ಲಿ ಹರಡಬಹುದಾದಂತಹ ಅಪಾಯಕಾರಿ ಅಂಶಗಳು
ಗರ್ಭಾವಸ್ಥೆಯ ಸಮಯದಲ್ಲಿ ಹೆಚ್.ಐ.ವಿ. ವೈರಾಣು ಮಾಸುಚೀಲದಿಂದ (ಪ್ಲಾಸೆಂಟ) ಭ್ರೂಣಕ್ಕೆ ಹಾದು ಹೋಗುವಾಗ ಹರಡುತ್ತದೆ. ಯಾವಾಗ ತಾಯಿಯು ಹೆಚ್.ಐ.ವಿ.ಗೆ ಚಿಕಿತ್ಸೆಯನ್ನು ಪಡೆಯುವುದಿಲ್ಲವೋ ಆಗ ಗರ್ಭಾವಸ್ಥೆಯ ಸಮಯದಲ್ಲಿ ಮಗುವಿಗೆ ಶೇಕಡ 5-10%ರಷ್ಟು ವೈರಾಣು ಪಾಸಿಟಿವ್ ತಾಯಿಯಿಂದ ಹರಡುವ ಸಾಧ್ಯತೆ ಇದೆ.
ಪ್ರಸವ ಹಾಗೂ ಹೆರಿಗೆಯ ಸಮಯದಲ್ಲಿ ಹರಡಬಹುದಾದಂತಹ ಅಪಯಕಾರಿ ಅಂಶಗಳು
– ಪ್ರಸವ ಮತ್ತು ಹೆರಿಗೆ ಹಚ್ಚಿನ ಅಪಾಯಕಾರಿ ಸಮಯವಾಗಿದೆ. ಈ ಸಮಯದಲ್ಲಿ ಶೇಕಡ 10-20%ರಷ್ಟು ಹೆಚ್.ಐ.ವಿ. ಹರಡುವ ಅಪಾಯದ ಸಾಧ್ಯತೆ ಇದೆ.
– ಪ್ರಸವ ಮತ್ತು ಹೆರಿಗೆ ಹೆಚ್ಚಿನ ಸಮಯದಲ್ಲಿ ಹೆಚ್ಚಿನದಾಗಿ ಶಿಶುಗಳು ಹೆಚ್.ಐ.ವಿ. ಹೊಂದಿರುವ ತಾಯಿಯ ರಕ್ತವನ್ನು ಅಥವಾ ಕೊರಳಿನ ಸ್ರಾವಗಳನ್ನು ಹೀರಿಕೊಂಡರೆ ಕುಡಿದರೆ ಅಥವಾ ಎಳೆದುಕೊಂಡರೆ ವೈರಾಣು ಹರಡುವ ಸಾಧ್ಯತೆಗಳಿರುತ್ತದೆ.
– ಸ್ತನಪಾನದ ಸಮಯದಲ್ಲಿ ಹೆಚ್.ಐ.ವಿ. ಹರಡುವಿಕೆ: ಮಕ್ಕಳ ಬೆಳವಣಿಗೆಗೆ ಸ್ತನಪಾನ ಬಹಳ ಮುಖ್ಯ ಪಾತ್ರವಹಿಸುತ್ತದೆ. ಆದರೆ ಸ್ತನಪಾನದಿಂದ ಶೇಕಡ 5-20%ರಷ್ಟು ಹೆಚ್.ಐ.ವಿ. ಹರಡುವ ಅಪಾಯವಿದೆ. ಪಾಸಿಟಿವ್ ತಾಯಿಯು ಪ್ರಸವದ ಮೊದಲ ಮೂರು ತಿಂಗಳಲ್ಲಿ ಎ.ಆರ್.ಟಿ. ಚಿಕಿತ್ಸೆ ಪಡೆಯುವುದರಿಂದ ಸ್ತನಪಾನದಿಂದ ಹೆಚ್.ಐ.ವಿ. ಹರಡುವುದನ್ನು ಕಡಿಮೆಗೊಳಿಸಬಹುದು. ಹೆಚ್.ಐ.ವಿ. ಸೋಂಕಿತ ತಾಯಿಗೆ ಸೂಕ್ತವಾದ ಸ್ತನಪಾನದ ಆಯ್ಕೆಯು ಆಕೆಯ ವೈಯಕ್ತಿಕ ಪರಿಸ್ಥಿತಿ, ಅವಳ ಆರೋಗ್ಯದ ಪರಿಸ್ಥಿತಿ ಮತ್ತು ಸುತ್ತಮುತ್ತಲಿನ ಸಂದರ್ಭದ ಮೇಲೆ ಅವಲಂಬಿತವಾಗಿರುತ್ತದೆ. ಸ್ತನಪಾನದ ಮಾದರಿ ಅಥವಾ ರೀತಿಯೂ ಕೂಡ ಹೆಚ್.ಐ.ವಿ. ಹರಡುವುದರ ಮೇಲೆ ಪರಿಣಾಮ ಬೀರುತ್ತದೆ. ಹುಟ್ಟಿದ ಮೊದಲ 6 ತಿಂಗಳಲ್ಲಿ ಸ್ತನಪಾನದ ಜೊತೆಗೆ ಇತರ ದ್ರವಗಳು, ಹಾಲು ಅಥವಾ ಗಟ್ಟಿ ಆಹಾರಗಳನ್ನು ಸೇವಿಸುವ ಶಿಶುಗಳಿಗಿಂತ ಪ್ರತ್ಯೇಕವಾದ ಸ್ತನಪಾನವಾಗುತ್ತಿರುವ ಶಿಶುಗಳಿಗೆ ಹೆಚ್.ಐ.ವಿ. ಹರಡುವ ಅಪಾಯವು ಬಹಳ ಕಡಿಮೆಯಿರುತ್ತದೆ. ಪಾಸಿಟಿವ್ ತಾಯಿಯು ಪ್ರಸವದ ಮೂರು ತಿಂಗಳಲ್ಲಿ ಎ.ಆರ್.ಟಿ. ಚಿಕಿತ್ಸೆ ಪಡೆಯುವುದರಿಂದ ಸ್ತನಪಾನದಿಂದ ಹೆಚ್.ಐ.ವಿ. ಹರಡುವುದನ್ನು ಕಡಿಮೆಗೊಳಿಸಬಹುದು. ಸ್ತನಪಾವನ್ನು ಆರಿಸಿಕೊಂಡು ಪಾಸಿಟಿವ್ ಮಹಿಳೆಯು ಶಿಶುವಿಗೆ 6 ತಿಂಗಳುಗಳ ಕಾಲ ಪರ್ಯಾಯ ಆಹಾರವನ್ನು ನೀಡಕೂಡದು. ಪರ್ಯಾಯ ಆಹಾರವನ್ನು ಆರಿಸಿಕೊಂಡ ಮಹಿಳೆಯು ಸ್ತನಪಾನವನ್ನು ಕೊಡುವ ಹಾಗಿಲ್ಲ. 6 ತಿಂಗಳ ತನಕ ಸ್ತನಪಾನ ಹಾಗೂ ಪರ್ಯಾಯ ಆಹಾರವನ್ನು ಒಟ್ಟಿಗೆ ಕೊಡುವಂತಿಲ್ಲ. 6 ತಿಂಗಳ ನಂತರ ಎರಡನ್ನು ಕೊಡಬಹುದು. ಸ್ತನಪಾನವನ್ನು ಮಗುವಿಗೆ 12 ತಿಂಗಳ ತನಕ ಕೊಡಿಸಿ ಮಗುವಿನ ಹೆಚ್.ಐ.ವಿ. ಫಲಿತಾಂಶ ನೆಗೆಟಿವ್ ಬಂದರೆ ಅದನ್ನು ನಿಲ್ಲಿಸಬೇಕು ಮತ್ತು ಮಗುವಿನ ಫಲಿತಾಂಶ ಪಾಸಿಟಿವ್ ಬಂದರೆ ಎರಡು ವರ್ಷಗಳ ತನಕ ಮುಂದುವರಿಸಬಹುದು.
-ಹರಿಣಾಕ್ಷಿ ಎಂ.ಕೆ.
ಐಸಿಟಿಸಿ ಕೌನ್ಸಿಲರ್, ಕೆಎಂಸಿ ಆಸ್ಪತ್ರೆ,
ಅತ್ತಾವರ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.