ರಜಾದಿನಗಳ ಮಜಾಕ್ಕೆ ತಡೆ ಒಡ್ಡಬಲ್ಲ; ಹಾಲಿಡೇ ಹಾರ್ಟ್‌ ಸಿಂಡ್ರೋಮ್‌


Team Udayavani, Dec 25, 2022, 3:57 PM IST

9

ರಜಾದಿನಗಳ ಸಮಯ ಮತ್ತೆ ಬಂದಿದೆ. ಕೆಲಸ ಕಾರ್ಯಗಳ ಒತ್ತಡವನ್ನು ಸ್ವಲ್ಪ ಕಾಲ ಮರೆತು ಹಾಯಾಗಿ ಮನಸ್ಸನ್ನು ಉಲ್ಲಾಸಗೊಳಿಸುವುದಕ್ಕೆ ಇದು ಸಂದರ್ಭ.

ರಜಾ ಸಮಯದಲ್ಲಿ ಆಯೋಜಿಸುವ ಪಾರ್ಟಿಗಳು ಗೆಳೆಯ ಗೆಳತಿಯರು, ಒಳ್ಳೆಯ ಆಹಾರ ಮತ್ತು ಹಿತಮಿತ ಪ್ರಮಾಣದ ಮದ್ಯ ಇಲ್ಲದೆ ಇದ್ದಲ್ಲಿ ರಂಗೇರುವುದಿಲ್ಲ.

ಹೀಗೆ ಸಂತೋಷ ಕೂಟದಲ್ಲಿ ಮಗ್ನರಾಗಿರುವಾಗ ನಿಮ್ಮ ಆಪ್ತ ಗೆಳೆಯರೊಬ್ಬರು ತೀವ್ರ ಹೃದಯ ಬಡಿತ, ಎದೆಯಲ್ಲಿ ತೊಂದರೆ, ತಲೆ ಸುತ್ತುವಿಕೆ ಉಂಟಾಗುತ್ತಿದೆ ಎಂದು ಹೇಳಿ ನಿರ್ಗಮಿಸಲು ಸಿದ್ಧರಾಗುತ್ತಾರೆ. ನಿಮಗೆ ಗೊತ್ತಿರುವ ಹಾಗೆ ಅವರು ನಿಯಮಿತವಾಗಿ ಜಿಮ್‌ಗೆ ಹೋಗಿ ವ್ಯಾಯಾಮ ಮಾಡುತ್ತಾರೆ, ಯಾವುದೇ ಆರೋಗ್ಯ ತೊಂದರೆಗಳು ಅವರಿಗಿಲ್ಲ ಮತ್ತು ಪಾರ್ಟಿಗಳಲ್ಲಿ ಮಾತ್ರ ಮದ್ಯ ಸೇವಿಸುವವರು ಅವರು. ಏನು ಪ್ರಮಾದವಾಗಿದೆ ಎಂದು ನೀವು ಚಿಂತೆಗೊಳಗಾಗುತ್ತೀರಿ.

ನಿಮ್ಮ ಗೆಳೆಯರಿಗೆ ಆಗಿರುವುದು “ಹಾಲಿಡೇ ಹಾರ್ಟ್‌ ಸಿಂಡ್ರೋಮ್‌’.

ಹಾಲಿಡೇ ಹಾರ್ಟ್‌ ಸಿಂಡ್ರೋಮ್‌ ಎಂದರೇನು?

ಹಾಲಿಡೇ ಹಾರ್ಟ್‌ ಸಿಂಡ್ರೋಮ್‌ ಅಥವಾ ಎಚ್‌ಎಚ್‌ಎಸ್‌ – ಇದನ್ನು ಮದ್ಯಪಾನದಿಂದ ಉಂಟಾಗುವ ಅರಿತ್ಮಿಯಾ ಎಂದು ವಿವರಿಸಲಾಗುತ್ತದೆ.

ಹೃದಯ ರೋಗಗಳ ಇತರ ಯಾವುದೇ ಸಾಕ್ಷ್ಯಗಳಿಲ್ಲದ ವ್ಯಕ್ತಿಗಳಲ್ಲಿ ಮದ್ಯಪಾನದಿಂದಾಗಿ ಹೃದಯ ಬಡಿತದ ಗತಿಯಲ್ಲಿ ಏರುಪೇರಾಗುವುದು ಮತ್ತು ಅಥವಾ ಅತಿಯಾದ ಮದ್ಯಪಾನದಿಂದಾಗಿ ಹೃದಯದ ಬಡಿತದಲ್ಲಿ ಅಸಹಜತೆ ಉಂಟಾಗುವುದು ಇದರ ಗುಣಲಕ್ಷಣವಾಗಿದೆ.

ಸರಳವಾಗಿ ಹೇಳಬೇಕೆಂದರೆ, ಅತಿಯಾದ ಮದ್ಯ ಸೇವನೆಯಿಂದಾಗಿ ಹೃದಯದ ಮೇಲ್ಭಾಗದ ಕೋಶ ಅತಿಯಾದ ವೇಗದಿಂದ ಅಂದರೆ ನಿಮಿಷಕ್ಕೆ 200-250 ಬಡಿತಗಳಂತೆ ಬಡಿದುಕೊಳ್ಳಲು ಆರಂಭಿಸುತ್ತದೆ ಮತ್ತು ಹೃದಯದ ಕೆಳಭಾಗದ ಕೋಶಗಳು ಕೂಡ ನಿಮಿಷಕ್ಕೆ 150+ ಬಡಿತಗಳಂತೆ ಬಡಿದುಕೊಳ್ಳಲು ಆರಂಭಿಸುತ್ತವೆ. ಇದರ ಪರಿಣಾಮವಾಗಿ ಹೃದಯದಲ್ಲಿ ರಕ್ತ ತುಂಬಿಕೊಳ್ಳುವುದಿಲ್ಲ ಮತ್ತು ದೇಹದ ಅಗತ್ಯಕ್ಕೆ ಅನುಗುಣವಾಗಿ ರಕ್ತವನ್ನು ಸರಬರಾಜು ಮಾಡಲು ಹೃದಯಕ್ಕೆ ಸಾಧ್ಯವಾಗುವುದಿಲ್ಲ.

1975ರಲ್ಲಿ ಫಿಲಿಪ್ಸ್‌ ಎಟ್ಟಿಂಜರ್‌ ಎಂಬವರು ಈ ಕಾಯಿಲೆಯನ್ನು ವ್ಯಾಖ್ಯಾನಿಸಿದರು. ಒಮ್ಮೆಲೆ ಅತಿಯಾಗಿ ಮದ್ಯ ಸೇವಿಸುವವರಲ್ಲಿ (ಒಂದು ಸಂದರ್ಭದಲ್ಲಿ ಬೇಗ ಬೇಗನೆ 5-6 ಬಾರಿಗಿಂತ ಹೆಚ್ಚು ಮದ್ಯ ಸೇವಿಸುವವರು)ಇದು ಉಂಟಾಗುತ್ತದೆ.

ಎಚ್‌ಎಚ್‌ಡಿಯಲ್ಲಿ ಏಟ್ರಿಯಲ್‌ ಫೈಬ್ರಿಲೇಶನ್‌ ಅತ್ಯಂತ ಸಾಮಾನ್ಯವಾದರೂ ಏಟ್ರಿಯಲ್‌ ಟ್ಯಾಕಿಕಾರ್ಡಿಯಾ, ಏಟ್ರಿಯರಲ್‌ ಫ್ಲಟರ್‌ ಅಥವಾ ವೆಂಟ್ರಿಕಲ್‌ ಪ್ರಿಮೆಚ್ಯುರ್  ಬಡಿತದಂತಹ ಇತರ ಅರಿತ್ಮಿಯಾಗಳು ಕೂಡ ಉಂಟಾಗಬಹುದು.

ಇತರ ಹೃದಯ ಕಾಯಿಲೆಗಳನ್ನು ಹೊಂದಿರದೆ ಇರುವವರಲ್ಲಿ ಇದು ಉಂಟಾಗುತ್ತದೆ ಎಂಬುದಾಗಿ ಸಾಂಪ್ರದಾಯಿಕವಾಗಿ ಹೇಳಲಾಗುತ್ತದೆಯಾದರೂ ಈಗಾಗಲೇ ಹೃದಯದ ತೊಂದರೆಗಳನ್ನು ಹೊಂದಿರುವವರಲ್ಲಿ ಕೂಡ ಇದು ಕಾಣಿಸಿಕೊಳ್ಳಬಹುದು; ಆಗ ಇದರ ಪರಿಣಾಮ ಗಂಭೀರವಾಗಿರುತ್ತದೆ.

ಮದ್ಯಪಾನದಿಂದಾಗಿ ಎಚ್‌ಎಚ್‌ಎಸ್‌ ಏಕೆ ಉಂಟಾಗುತ್ತದೆ?

  1. ಸೇವಿಸಿದ ಮದ್ಯದಿಂದಾಗಿ ಹೃದಯದ ಸ್ನಾಯುಗಳು ಪ್ರಚೋದನೆಗೊಳ್ಳುತ್ತವೆ ಮತ್ತು ಅವುಗಳ ಸಂಕುಚನ-ವಿಕಸನ ಅವಧಿ ಕಡಿಮೆಯಾಗುತ್ತದೆ (ಹೃದಯದ ಸ್ನಾಯುಗಳು ಪ್ರಚೋದನೆಗೆ ಸ್ಪಂದಿಸಿ ಬಡಿಯುವ ಅವಧಿ ಕಡಿಮೆಯಾಗುವುದು).
  2. ಮದ್ಯವು ಕಟಕೊಲಾಮೈನ್ಸ್‌ ಪ್ರಮಾಣ (ಒತ್ತಡದ ಹಾರ್ಮೋನ್‌)ವನ್ನು ಹೆಚ್ಚಿಸುತ್ತದೆ, ಇದು ಹೃದಯವನ್ನು ಅತಿಯಾದ ವೇಗದಿಂದ ಮತ್ತು ಅನಿಯಮಿತವಾಗಿ ಬಡಿಯುವಂತೆ ಪ್ರಚೋದಿಸುತ್ತದೆ.
  3. ರಕ್ತದಲ್ಲಿ ಫ್ರೀ ಫ್ಯಾಟಿ ಆ್ಯಸಿಡ್‌ಗಳ ಪ್ರಮಾಣ ಹೆಚ್ಚಿ ಸಿಂಪ್ಯಾಥಟಿಕ್‌ ನರ ವ್ಯವಸ್ಥೆ ಪ್ರಚೋದನೆಗೊಳ್ಳುತ್ತದೆ. ಇದು ಹೃದಯದ ಸ್ನಾಯುಗಳನ್ನು ಪ್ರಚೋದಿಸುತ್ತದೆ.
  4. ಹೆಚ್ಚು ಪ್ರಮಾಣದಲ್ಲಿ ಮದ್ಯವನ್ನು ಒಂದೇ ಬಾರಿಗೆ ಸೇವಿಸುವುದರಿಂದ “ಅಸಿಟಾಲ್ಡಿಹೈಡ್‌’ ಹೆಚ್ಚುತ್ತದೆ – ಇದು ಮದ್ಯದ ಮೆಟಾಬೊಲೈಟ್‌ ಆಗಿದ್ದು, ಹೃದಯ ಬಡಿತದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಎಚ್ಎಚ್ಡಿಯ ಲಕ್ಷಣಗಳು

„ ಪಾಲ್ಪಿಟೇಶನ್‌ – ಹೃದಯ ಬಡಿತದ ಅತಿಯಾಗಿ ಹೆಚ್ಚುವುದು

„ ಶಕ್ತಿಗುಂದುವುದು, ಅತಿಯಾದ ದಣಿವು

„ ತಲೆ ತಿರುಗುವುದು/ ತಲೆ ಹಗುರವಾದಂತೆ ಅನಿಸುವುದು

„ ಉಸಿರು ಹಿಡಿದುಕೊಳ್ಳುವುದು

„ ಎದೆಯಲ್ಲಿ ನೋವು ಮತ್ತು ತೊಂದರೆ

ಎಚ್‌ಎಚ್‌ಡಿಯನ್ನು ತಡೆಯುವುದು ಹೇಗೆ?

„ಎಚ್‌ಎಚ್‌ಡಿಯನ್ನು ತಡೆಯಲು ಮದ್ಯವನ್ನು ಹಿತಮಿತ ಪ್ರಮಾಣದಲ್ಲಿ ಸೇವಿಸುವುದು ಮುಖ್ಯ

„ ಮದ್ಯಪಾನದ ವೇಳೆ ಅತಿಯಾದ ಶ್ರಮ ಬೇಡ

„ಚೆನ್ನಾಗಿ ನೀರು ಕುಡಿಯಿರಿ

„ ಹೆಚ್ಚು ಉಪ್ಪಿನಂಶ ಇರುವ ಆಹಾರಗಳು, ಕೆಫಿನ್‌ ಮತ್ತು ಸಕ್ಕರೆ ಹೆಚ್ಚಿರುವ ಆಹಾರ, ಪಾನೀಯಗಳು ಬೇಡ

ಕೊನೆಯದಾಗಿ

ರಜಾದಿನಗಳನ್ನು ಸಂತೋಷವಾಗಿ ಕಳೆಯುವ ಉದ್ದೇಶದಿಂದ ಪಾರ್ಟಿ ಮಾಡುತ್ತಿರುವಾಗ ಅತಿಯಾದ ಮದ್ಯ ಸೇವನೆಯಿಂದ ಎಚ್‌ ಎಚ್‌ಡಿ ತೊಂದರೆ ಉಂಟಾಗುತ್ತದೆ. ಈಗಾಗಲೇ ಹೃದಯ ರೋಗ ಹೊಂದಿರದ ಆರೋಗ್ಯವಂತರಲ್ಲಿ ಇದು ಕಾಣಿಸಿಕೊಳ್ಳಬಹುದು. ಇದು ತಾನಾಗಿ ಪರಿಹಾರಗೊಳ್ಳುತ್ತದೆಯಾದರೂ ಉಪೇಕ್ಷಿಸಿದರೆ ಹೃದಯಕ್ಕೆ ಸಂಬಂಧಿಸಿದ ತೀವ್ರ ತೊಂದರೆಗಳಿಗೆ ಕಾರಣವಾಗಬಹುದು. ತಡೆಗಟ್ಟುವುದು, ಬೇಗನೆ ಗುರುತಿಸುವುದು ಮತ್ತು ಸರಿಯಾದ ಸಮಯದಲ್ಲಿ ಚಿಕಿತ್ಸೆ ಮಾಡಿಸಿಕೊಳ್ಳುವುದರಿಂದ ಉತ್ತಮ ಫ‌ಲಿತಾಂಶ ಪಡೆಯಬಹುದು.

ಜವಾಬ್ದಾರಿಯಿಂದಿರಿ, ಮಿತವಾಗಿ ಮದ್ಯ ಸೇವಿಸಿ, ರಜಾದಿನಗಳನ್ನು ಸಂತೋಷವಾಗಿ ಕಳೆಯಿರಿ.

ಏನು ಮಾಡಬೇಕು? ಹಾಲಿಡೇ ಹಾರ್ಟ್‌ ಸಿಂಡ್ರೋಮ್‌ ಅತಿಯಾದ ಮದ್ಯಪಾನದ ಪ್ರಭಾವ ಇಳಿಕೆಯಾದ ಬಳಿಕ ಅಂದರೆ ಕೆಲವು ತಾಸುಗಳ ಬಳಿಕ ಕಡಿಮೆಯಾಗುತ್ತದೆ. ಬಹುತೇಕ ಪ್ರಕರಣಗಳು 24 ತಾಸುಗಳ ಅವಧಿಯಲ್ಲಿ ಯಾವುದೇ ಚಿಕಿತ್ಸೆಯ ಅಗತ್ಯ ಬೀಳದೆ ಸರಿ ಹೋಗುತ್ತವೆ. ಕೆಲವು ಪ್ರಕರಣಗಳಲ್ಲಿ ಏಟ್ರಿಯಲ್‌ ಫೈಬ್ರಿಲೇಶನ್‌ ಹೆಚ್ಚು ಕಾಲ ಉಳಿದುಕೊಳ್ಳಬಹುದು ಅಥವಾ ತಾನಾಗಿ ಮರುಕಳಿಸಬಹುದು.

ಕೆಲವೊಮ್ಮೆ ಎಚ್‌ಎಚ್‌ಎಸ್‌ ಉಂಟಾಗಿದೆ ಎಂಬ ಸಂದೇಹ ಉಂಟಾದ ತತ್‌ಕ್ಷಣ ವೈದ್ಯಕೀಯ ನೆರವು ಪಡೆಯುವುದು ಒಳಿತು. ಆದರೆ ಇದು ಗಂಭೀರವಾಗುವುದು ಅಥವಾ ಇತರ ಸಂಕೀರ್ಣ ಸಮಸ್ಯೆಗಳಿಗೆ ಕಾರಣವಾಗುವುದು ಕಡಿಮೆ.

ಹೃದಯ ಬಡಿತದ ಗತಿಯನ್ನು ತಿಳಿಯಲು ವೈದ್ಯರು ಇಸಿಜಿ ಮಾಡಿಸಲು ಹೇಳುತ್ತಾರೆ. ಈಗಾಗಲೇ ಹೃದಯದ ಸಮಸ್ಯೆ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಕೆಲವು ರಕ್ತ ಪರೀಕ್ಷೆಗಳು ಮತ್ತು ಎಕೊಕಾರ್ಡಿಯಾಗ್ರಾಮ್‌ ಮಾಡಿಸಬಹುದು.

ರೋಗಿಯ ಲಕ್ಷಣಗಳ ತೀವ್ರತೆ, ವೆಂಟ್ರಿಕ್ಯುಲಾರ್‌ ಮತ್ತು ಹಿಮೊಡೈನಾಮಿಕ್‌ ಸ್ಥಿತಿಗತಿಯ ಆಧಾರದಲ್ಲಿ ವೈದ್ಯರು ಡಿಸಿ ಕಾರ್ಡಿಯೊವರ್ಟ್‌ ಹೃದಯ ಬಡಿತ ಗತಿ ಮತ್ತು ವೇಗವನ್ನು ನಿಯಂತ್ರಿಸುವ ಔಷಧಗಳನ್ನು ಐವಿ ಮೂಲಕ ನೀಡುವುದು ಅಥವಾ ತಾನಾಗಿ ಪರಿಹಾರಗೊಳ್ಳುವ ತನಕ ಕಾಯುವುದನ್ನು ನಿರ್ಧರಿಸುತ್ತಾರೆ.

ಡಾ| ರಾಜೇಶ್‌ ಭಟ್‌ ಯು., ಅಸೋಸಿಯೇಟ್‌ ಪ್ರೊಫೆಸರ್‌ ಮತ್ತು ಸೀನಿಯರ್‌ ಇನ್‌ವೆನ್ಶನಲ್‌ ಕಾರ್ಡಿಯಾಲಜಿಸ್ಟ್‌, ಕೆಎಂಸಿ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.