ಎಚ್‌ಐವಿ ಇದ್ದರೆ ಸೂಕ್ತವಾದ ಆಹಾರವನ್ನೇ ಸೇವಿಸಿ


Team Udayavani, Dec 6, 2020, 8:23 PM IST

ಎಚ್‌ಐವಿ ಇದ್ದರೆ ಸೂಕ್ತವಾದ ಆಹಾರವನ್ನೇ ಸೇವಿಸಿ

ಎಚ್‌ಐವಿ ರೋಗಿಗಳಿಗೆಂದೇ ಪ್ರತ್ಯೇಕವಾದ ಆಹಾರ ಯೋಜನೆ ಇಲ್ಲ. ಆದರೆ ಒಟ್ಟಾರೆಯಾಗಿ ಆರೋಗ್ಯಪೂರ್ಣವಾದ ಪೌಷ್ಟಿಕ ಆಹಾರ ಸೇವನೆಯಿಂದ ಆರೋಗ್ಯಯುತವಾಗಿ ಉಳಿಯುವುದು ಸಾಧ್ಯ.  ಎಚ್‌ಐವಿ ವೈರಸ್‌ ವ್ಯಕ್ತಿಯ ದೇಹದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಸೋಂಕುಕಾರಕಗಳ ವಿರುದ್ಧ ಹೋರಾಡುವುದಕ್ಕೆ ದೇಹವು ಪೌಷ್ಟಿಕಾಂಶಗಳನ್ನು ಬಳಸಿಕೊಳ್ಳುವುದರಿಂದ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುವುದು ಸೋಂಕುಗಳನ್ನು ದೂರ ಇರಿಸುವಲ್ಲಿ ಬಹಳ ಮುಖ್ಯವಾಗಿದೆ. ಇದರಿಂದ ದೇಹದಲ್ಲಿ ಶಕ್ತಿಯ ಪ್ರಮಾಣ ಹೆಚ್ಚುತ್ತದೆ, ಸಾಮರ್ಥ್ಯ ವೃದ್ಧಿಸುತ್ತದೆ, ಆರೋಗ್ಯ ಸಮಸ್ಯೆಗಳನ್ನು ದೂರ ಇರಿಸುವುದಕ್ಕೆ ಸಹಾಯವಾಗುತ್ತದೆ ಮತ್ತು ಎಚ್‌ಐವಿ ಸೋಂಕು ಮತ್ತು ಅದರ ಚಿಕಿತ್ಸೆಗಳಿಂದ ಉಂಟಾಗುವ ಅಡ್ಡ ಪರಿಣಾಮಗಳನ್ನು ಕನಿಷ್ಠ ಮಟ್ಟದಲ್ಲಿ ಇರಿಸುವುದಕ್ಕೆ ಸಹಾಯವಾಗುತ್ತದೆ.

ಎಚ್‌ಐವಿ ಸೋಂಕಿನ ಪ್ರಾಮುಖ್ಯ ತೊಂದರೆಗಳಲ್ಲಿ ಪೌಷ್ಟಿಕತೆಗೆ ಸಂಬಂಧಿಸಿದವು ಮುಂಚೂಣಿಯಲ್ಲಿರುತ್ತವೆ ಎಂಬುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ನಿರ್ದಿಷ್ಟ ಪೋಷಕಾಂಶಗಳ ಕೊರತೆಯ ಸಹಿತ ಈ ಸಮಸ್ಯೆಗಳು ಕಾಲಾಂತರದಲ್ಲಿ ತೀವ್ರ ಸ್ವರೂಪ ತಾಳುತ್ತವೆ ಮತ್ತು ಅದರಿಂದ ಹಲವು ರೀತಿಗಳಲ್ಲಿ ರೋಗ ನಿರೋಧಕ ಶಕ್ತಿಯ ಕಾರ್ಯಾಚರಣೆ ಸ್ಥಗಿತಗೊಳ್ಳಬಹುದು ಮತ್ತು ರೋಗವು ಅಭಿವೃದ್ಧಿ ಹೊಂದಬಹುದಾಗಿದೆ.

ಪೌಷ್ಟಿಕಾಂಶ ಕೊರತೆಗಳು ಎಚ್‌ಐವಿ ರೋಗಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವುದಕ್ಕೆ ಹಲವು ಕಾರಣಗಳಿವೆ:

  • ಪೌಷ್ಟಿಕಾಂಶಗಳು ಬೇಗನೆ ಖರ್ಚಾಗುತ್ತವೆ: ಎಚ್‌ಐವಿ ನಿರೋಧಕ ಔಷಧಗಳನ್ನು ಸೇವಿಸುತ್ತಿರುವಾಗಲೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಸತತವಾಗಿ ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡುತ್ತಿರುತ್ತದೆ ಹಾಗೂ ವೈರಸ್‌ ಮತ್ತು ಇತರ ಸೋಂಕುಗಳಿಂದ ಉಂಟಾಗಿರುವ ಹಾನಿಯನ್ನು ದುರಸ್ತಿ ಮಾಡುತ್ತಿರುತ್ತದೆ. ಇದರಿಂದಾಗಿ ಪೌಷ್ಟಿಕಾಂಶಗಳು ಬಹಳ ಬೇಗನೆ ಖರ್ಚಾಗುತ್ತವೆ, ಇದರಿಂದಾಗಿ ದೇಹದಲ್ಲಿ ಅವುಗಳ ಪ್ರಮಾಣ ಬೇಗನೆ ಕುಸಿಯುತ್ತದೆ.
  • ಪೌಷ್ಟಿಕಾಂಶಗಳು ಸರಿಯಾಗಿ ಹೀರಿಕೆಯಾಗುವುದಿಲ್ಲ: ಕರುಳಿನಲ್ಲಿ ಉಂಟಾಗಿರುವ ಸೋಂಕು (ಸ್ವತಃ ಎಚ್‌ಐವಿ) ಮತ್ತು ಭೇದಿಯಿಂದಾಗಿ ದೇಹವು ಪೌಷ್ಟಿಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಲು ಆಗದೆ ಇರುವುದರಿಂದಲೂ ಪೌಷ್ಟಿಕಾಂಶಗಳ ಕೊರತೆ ಕಾಣಿಸಿಕೊಳ್ಳುತ್ತದೆ. ಎಚ್‌ಐವಿ ರೋಗಿಗಳಲ್ಲಿ ಕೆಲವರಿಗೆ ಕೊಬ್ಬನ್ನು ಹೀರಿಕೊಳ್ಳುವ ಸಮಸ್ಯೆ ಇರುತ್ತದೆ, ಇದರಿಂದಾಗಿ ಎ, ಇ, ಡಿ, ಕೆಯಂತಹ ಪ್ರಮುಖ ವಿಟಮಿನ್‌ಗಳನ್ನು ಹೀರಿಕೊಳ್ಳಲು ದೇಹಕ್ಕೆ ಅಡ್ಡಿ ಉಂಟಾಗುತ್ತದೆ.
  • ಕಳಪೆ ಆಹಾರಾಭ್ಯಾಸ: ಎಚ್‌ಐವಿ ಪೀಡಿತರಲ್ಲಿ ಅನೇಕ ಮಂದಿ ಸರಿಯಾದ ಆಹಾರಕ್ರಮವನ್ನು ಅನುಸರಿಸುವುದಿಲ್ಲ. ದಣಿವು, ಹಸಿವು ನಷ್ಟ, ವಾಸನೆ ಮತ್ತು ರುಚಿ ಗ್ರಹಣ ಇಂದ್ರಿಯಗಳಲ್ಲಿ ಆಗಿರುವ ಬದಲಾವಣೆ, ಹೊಟ್ಟೆ ತೊಳಸುವಿಕೆ, ವಾಂತಿ, ಬಾಯಿ ಮತ್ತು ಗಂಟಲಿನ ಸೋಂಕು ಅಥವಾ ಇತರ ಕಾರಣಗಳು ಅಥವಾ ಸರಳವಾಗಿ ಆರೋಗ್ಯಕ್ಕೆ ಪೂರಕವಾದ ಯಾವ ಆಹಾರವನ್ನು ಸೇವಿಸಬೇಕು ಎಂಬ ತಿಳಿವಳಿಕೆ ಇಲ್ಲದಿರುವುದು ಇದಕ್ಕೆ ಕಾರಣಗಳಾಗಿರುತ್ತವೆ.

 

ಎಚ್‌ಐವಿ ರೋಗಿಗಳಲ್ಲಿ ಪೌಷ್ಟಿಕಾಂಶ ಮಟ್ಟವನ್ನು ಉತ್ತಮಪಡಿಸುವುದು ಹೇಗೆ? :

ಆರಂಭಿಕವಾಗಿ ಕೆಳಗಿನ ಸರಳ ಸಲಹೆಗಳನ್ನು ಪಾಲಿಸಿ:

  1. ಹಣ್ಣು ಮತ್ತು ತರಕಾರಿಗಳನ್ನು ಧಾರಾಳವಾಗಿ ಸೇವಿಸಿ: ಇವುಗಳಲ್ಲಿ ಆ್ಯಂಟಿಓಕ್ಸಿಡೆಂಟ್‌ ಎನ್ನುವ ಪೌಷ್ಟಿಕಾಂಶಗಳಿದ್ದು, ಇವು ನಮ್ಮ ರೋಗ ನಿರೋಧಕ ಶಕ್ತಿಯ ಬಲವರ್ಧನೆಗೆ ಪೂರಕವಾಗಿರುತ್ತವೆ. ಈ ಗುರಿಯನ್ನು ಸಾಧಿಸಲು ಸರಳವಾದ ಮಾರ್ಗೋಪಾಯ ಎಂದರೆ, ಪ್ರತೀ ಭೋಜನದ ಸಂದರ್ಭದಲ್ಲಿಯೂ ಬಟ್ಟಲಿನ ಅರ್ಧದಷ್ಟು ಹಣ್ಣು ಮತ್ತು ತರಕಾರಿಗಳು ಇರುವಂತೆ ನೋಡಿಕೊಳ್ಳುವುದು.
  2. ಲಘು ಪ್ರೊಟೀನ್‌ಗಳನ್ನು ಆರಿಸಿಕೊಳ್ಳಿ: ನಿಮ್ಮ ದೇಹವು ಇವುಗಳನ್ನು ಸ್ನಾಯುಗಳು ಮತ್ತು ಬಲವಾದ ರೋಗನಿರೋಧಕ ಶಕ್ತಿಗಳನ್ನು ಬೆಳೆಸಿಕೊಳ್ಳಲು ಉಪಯೋಗಿಸುತ್ತದೆ. ಕೋಳಿಮಾಂಸ, ಮೀನು, ಮೊಟ್ಟೆಗಳು, ಬೀನ್ಸ್‌ ಮತ್ತು ಬೀಜಗಳಂತಹ ಆರೋಗ್ಯಪೂರ್ಣ ಆಹಾರವಸ್ತುಗಳನ್ನು ಆರಿಸಿಕೊಳ್ಳಿ. ರೋಗಿಯು ತೂಕ ನಷ್ಟ ಹೊಂದಿದ್ದರೆ ಅಥವಾ ಎಚ್‌ಐವಿಯ ಕೊನೆಯ ಹಂತದಲ್ಲಿ ಇದ್ದರೆ ಹೆಚ್ಚು ಪ್ರಮಾಣದಲ್ಲಿ ಪ್ರೊಟೀನ್‌ ಸೇವಿಸಬೇಕಾಗುತ್ತದೆ.
  3. ಇಡೀ ಧಾನ್ಯಗಳನ್ನು ಆರಿಸಿಕೊಳ್ಳಿ: ಕುಚ್ಚಲಕ್ಕಿ ಅನ್ನದಂತಹ ಇಡಿಯ ಧಾನ್ಯಗಳು, ಬೇಳೆಕಾಳುಗಳನ್ನು ಆರಿಸಿಕೊಳ್ಳಿ. ರೋಗಿಯು ಗ್ಲುಟೆನ್‌ ಸೂಕ್ಷ್ಮ ಸಂವೇದಿತ್ವ ಹೊಂದಿಲ್ಲದೆ ಇದ್ದರೆ ಇಡೀ ಗೋಧಿ, ಓಟ್ಸ್‌, ಬಾರ್ಲಿ ಕೂಡ ಉಪಯೋಗಿಸಬಹುದಾಗಿದೆ.
  4. ಸಕ್ಕರೆ ಮತ್ತು ಉಪ್ಪಿನ ಸೇವನೆ ಮಿತಿಯಲ್ಲಿರಲಿ: ಎಚ್‌ಐವಿ ವೈರಸ್‌ ಅಥವಾ ಅದಕ್ಕೆ ತೆಗೆದುಕೊಳ್ಳುತ್ತಿರುವ ಔಷಧದಿಂದಾಗಿ ಹೃದ್ರೋಗ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಹೆಚ್ಚು ಉಪ್ಪಿನಂಶ ಮತ್ತು ಸಕ್ಕರೆಗಳ ಸೇವನೆಯಿಂದ ಈ ಅಪಾಯ ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ನೀವು ಸೇವಿಸುವ ಆಹಾರ ಮತ್ತು ಪಾನೀಯಗಳಿಂದ ಶೇ. 10ಕ್ಕಿಂತ ಕಡಿಮೆ ಕ್ಯಾಲೊರಿ ಸಿಗುವಂತೆ ನೋಡಿಕೊಳ್ಳಿ. ದಿನಕ್ಕೆ 2,300 ಮಿಲಿಗ್ರಾಂಗಳಿಗಿಂತ ಹೆಚ್ಚು ಉಪ್ಪಿನ ಸೇವನೆಯೂ ಸರಿಯಲ್ಲ.
  5. ಆರೋಗ್ಯಪೂರ್ಣ ಕೊಬ್ಬಿನಾಂಶಗಳನ್ನು ಮಿತವಾದ ಪ್ರಮಾಣದಲ್ಲಿ ಸೇವಿಸಿ: ಕೊಬ್ಬು ಶಕ್ತಿಯನ್ನು ಒದಗಿಸುತ್ತದೆ. ಆದರೆ ಅದರಲ್ಲಿ ಕ್ಯಾಲೊರಿಗಳು ಹೆಚ್ಚು ಪ್ರಮಾಣದಲ್ಲಿ ಇರುತ್ತವೆ. ಹೃದಯಕ್ಕೆ ಆರೋಗ್ಯಪೂರ್ಣವಾದ ಆಯ್ಕೆಗಳಲ್ಲಿ ಬೀಜಗಳು, ವನಸ್ಪತಿ ಎಣ್ಣೆಗಳು, ಬೆಣ್ಣೆಹಣ್ಣು ಸೇರಿವೆ.
  6. ಪಥ್ಯಾಹಾರ ಮತ್ತು ತೂಕಕ್ಕೆ ಸಂಬಂಧಿಸಿದ ಸಮಸ್ಯೆಗಳು: ಎಚ್‌ಐವಿ ಸೋಂಕಿಗೆ ತೆಗೆದುಕೊಳ್ಳುವ ಔಷಧಗಳು ಅಥವಾ ಸ್ವತಃ ವೈರಸ್‌ ತೂಕ ನಷ್ಟ ಅಥವಾ ಆಹಾರ ಸೇವನೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗಬಹುದು.
  • ಹಸಿವು ನಷ್ಟ: ನಿಮಗೆ ಇಷ್ಟವಾದ ಆಹಾರ ವಸ್ತುಗಳನ್ನು ಸೇವಿಸಲು ಪ್ರಯತ್ನಿಸಿ. ಪ್ರತೀದಿನ ಮೂರು ಬಾರಿ ಆಹಾರ ಸೇವಿಸುವುದಕ್ಕೆ ಬದಲಾಗಿ ಸಣ್ಣ ಸಣ್ಣ ಪ್ರಮಾಣದಲ್ಲಿ ಆರರಿಂದ ಎಂಟು ಬಾರಿ ಆಹಾರ ಸೇವಿಸಿ. ಹೆಚ್ಚು ಕ್ಯಾಲೊರಿ, ಪ್ರೊಟೀನ್‌ಗಳುಳ್ಳ ಶೇಕ್‌ಗಳನ್ನು ನಿಮ್ಮ ಆಹಾರ ಮತ್ತು ಆಹಾರಗಳ ನಡುವೆ ಸೇವಿಸಿ.
  • ಹೊಟ್ಟೆ ತೊಳೆಸುವಿಕೆ: ಆಹಾರಗಳ ನಡುವೆ ಪಾನೀಯ ಸೇವಿಸುವುದನ್ನು ನಿಲ್ಲಿಸಿ. ಮೃದುವಾದ ರುಚಿಯನ್ನು ಹೊಂದಿರುವ ಆಹಾರ ಸೇವಿಸಿ. ಅತಿಯಾಗಿ ಬಿಸಿಯೂ ಅಲ್ಲದ, ಅತಿಯಾದ ಶೈತ್ಯವೂ ಅಲ್ಲದ ಮಧ್ಯಮ ಉಷ್ಣದಲ್ಲಿರುವ ಆಹಾರವಸ್ತುಗಳನ್ನು ಸೇವಿಸಿ. ಆಹಾರ ತಯಾರಿಯ ಪರಿಮಳದಿಂದಲೇ ಹೊಟ್ಟೆ ತೊಳಸುವಿಕೆ ಆರಂಭವಾಗುವಂತಹ ಸ್ಥಿತಿ ಇದ್ದರೆ, ಬೇರೆ ಯಾರಾದರೂ ಆಹಾರ ತಯಾರಿಸಿ ನೀಡುವಂತೆ ಕೇಳಬಹುದು.
  • ಬಾಯಿಯ ಸಮಸ್ಯೆಗಳು: ನುಂಗುವುದಕ್ಕೆ ಸಮಸ್ಯೆಯಾಗುತ್ತಿದ್ದರೆ ಅಥವಾ ಬಾಯಿ ಹುಣ್ಣುಗಳಿಂದ ನೋವು ಉಂಟಾಗುತ್ತಿದ್ದರೆ ತರಕಾರಿ, ಆಹಾರಗಳನ್ನು ಮೃದುವಾಗಿ ಬೇಯಿಸಿ ಸೇವಿಸಿ. ಮಸಾಲೆಯುಕ್ತ, ಖಾರವಾದ, ಆಮ್ಲಿàಯ ಆಹಾರಗಳನ್ನು ತ್ಯಜಿಸಿ. ಆಹಾರ ಸೇವನೆ ಮತ್ತು ಸೇವಿಸಿದ ಬಳಿಕ ಬಾಯಿ ಮುಕ್ಕಳಿಸಿ.
  • ಬೇಧಿ: ಕರಿದ ಪದಾರ್ಥಗಳು ಮತ್ತು ಬಟಾಟೆ ಚಿಪ್ಸ್‌ನಂತಹ ಇತರ ಹೆಚ್ಚು ಕ್ಯಾಲೊರಿಯುಕ್ತ ಆಹಾರ ಸೇವಿಸಬೇಡಿ. ಇದರ ಬದಲು ಮೃದುವಾದ, ಲಘು ಆಹಾರ ಸೇವಿಸಿ.
  1. ಸರಿಯಾದ ಪ್ರಮಾಣದಲ್ಲಿ ಕ್ಯಾಲೊರಿ ಸೇವಿಸಿ: ಎಚ್‌ಐವಿ ಹೊಂದಿರುವವರು ಸಾಮಾನ್ಯವಾಗಿ ಹೆಚ್ಚು ದೇಹತೂಕ ಹೊಂದಿರುತ್ತಾರೆ. ಅಧಿಕ ದೇಹತೂಕ ಅಥವಾ ಬೊಜ್ಜು ಹೊಂದಿರುವುದರಿಂದ ದೀರ್ಘ‌ಕಾಲಿಕ ರೋಗಗಳಾದ ಹೃದ್ರೋಗ, ಮಧುಮೇಹ, ಕೆಲವು ಬಗೆಯ ಕ್ಯಾನ್ಸರ್‌ಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದಲ್ಲದೆ ರೋಗ ನಿರೋಧಕ ಶಕ್ತಿಯೂ ದುರ್ಬಲವಾಗಬಹುದು.
  2. ಧಾರಾಳವಾಗಿ ದ್ರವಾಹಾರ, ನೀರು ಸೇವಿಸಿ: ಬಹುತೇಕ ಮಂದಿ ಈ ವಿಚಾರವನ್ನು ನಿರ್ಲಕ್ಷಿಸುತ್ತಾರೆ. ದಿನಕ್ಕೆ ಕನಿಷ್ಠ 10 ಲೋಟಗಳಷ್ಟು ನೀರು ಮತ್ತು ಇತರ ಆರೋಗ್ಯಯುತ ಪಾನೀಯಗಳನ್ನು ಸೇವಿಸಬೇಕು. ಪೋಷಕಾಂಶಗಳು ರವಾನೆಯಾಗಲು ಮತ್ತು ಔಷಧಗಳಿಂದ ಉತ್ಪಾದನೆಯಾದ ವಿಷಾಂಶಗಳನ್ನು ದೇಹದಿಂದ ಹೊರಹಾಕಲು ದ್ರವಾಹಾರಗಳು ನೆರವಾಗುತ್ತವೆ. ಅವು ನಿಮ್ಮ ಶಕ್ತಿಯ ಮಟ್ಟವನ್ನು ಎತ್ತರಿಸುತ್ತವೆ ಮತ್ತು ನಿರ್ಜಲೀಕರಣ ಉಂಟಾಗುವುದನ್ನು ತಡೆಯುತ್ತವೆ. ಭೇದಿ ಇದ್ದರೆ ಅಥವಾ ಹೊಟ್ಟೆ ತೊಳೆಸುವಿಕೆ ಇದ್ದರೆ ಹೆಚ್ಚು ನೀರು ಕುಡಿಯುವ ಅಗತ್ಯ ಇರುತ್ತದೆ.
  3. ಆಹಾರ ಸುರಕ್ಷಾ ಕ್ರಮಗಳನ್ನು ಪಾಲಿಸಿ: ಎಚ್‌ಐವಿಯು ಸೂಕ್ಷ್ಮಾಣುಗಳ ವಿರುದ್ಧ ಹೋರಾಡುವ ದೇಹದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಫ‌ುಡ್‌ ಪಾಯ್ಸನಿಂಗ್‌ನಂತಹ ಸಣ್ಣಪುಟ್ಟ ತೊಂದರೆಗಳು ಕೂಡ ಎಚ್‌ಐವಿ ಪೀಡಿತರಿಗೆ ದೊಡ್ಡ ತೊಂದರೆಯನ್ನು ನೀಡಬಲ್ಲವು.

ಹೀಗಾಗಿ ಉತ್ತಮ ಆಹಾರ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು:

  • ಆಹಾರ ಸೇವಿಸುವುದಕ್ಕೆ ಮೊದಲು ಮತ್ತು ಬಳಿಕ ಸಾಬೂನು ಮತ್ತು ನೀರು ಉಪಯೋಗಿಸಿ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳಬೇಕು. ತರಕಾರಿ ಕತ್ತರಿಸುವ ಮಣೆ, ಪಾತ್ರೆಗಳನ್ನು ಕೂಡ ಸರಿಯಾಗಿ ಸ್ವತ್ಛಗೊಳಿಸಿಕೊಳ್ಳಬೇಕು.
  • ಹಸಿ ಮೊಟ್ಟೆಯ ಸೇವನೆ ಬೇಡ. ಎಲ್ಲ ಮಾಂಸಗಳು, ಮೀನು, ಸಾಗರೋತ್ಪನ್ನಗಳನ್ನು ಚೆನ್ನಾಗಿ ಬೇಯಿಸಿಯೇ ಉಪಯೋಗಿಸಿ.
  • ಎಲ್ಲ ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆದು ಬಳಸಿ.
  • ಆಹಾರ ವಸ್ತುಗಳ ಅವಧಿ ಮೀರುವ ದಿನಾಂಕಗಳನ್ನು ಸರಿಯಾಗಿ ಪರೀಕ್ಷಿಸಿ, ಹಾಳಾದ, ಅವಧಿ ಮೀರಿದ ಆಹಾರವಸ್ತುಗಳನ್ನು ಉಪಯೋಗಿಸಲೇಬೇಡಿ.
  • ಬಾಕಿ ಉಳಿದ ಖಾದ್ಯಗಳನ್ನು ಸೇವಿಸುವ ಮುನ್ನ ಸರಿಯಾಗಿ ಬಿಸಿ ಮಾಡಿಕೊಳ್ಳಿ.
  • ನೀವು ಪ್ರವಾಸದಲ್ಲಿದ್ದು, ಗಮ್ಯ ಸ್ಥಳದಲ್ಲಿ ಶುದ್ಧ ನೀರು ಸಿಗುತ್ತದೆಯೇ ಇಲ್ಲವೇ ಎಂಬ ಖಾತರಿ ಇಲ್ಲದಿದ್ದಲ್ಲಿ ಬಾಟಲೀಕೃತ ನೀರನ್ನೇ ಬಳಸಿ; ಐಸ್‌, ಪ್ಯಾಶ್ಚರೀಕರಿಸದ ಆಹಾರಗಳನ್ನು ಬಳಸಬೇಡಿ.

 

ದಕ್ಷ ಕುಮಾರಿ

ಪಥ್ಯಾಹಾರ ತಜ್ಞೆ, ಪೌಷ್ಟಿಕಾಂಶ

ಮತ್ತು ಪಥ್ಯಾಹಾರ ವಿಭಾಗ,

ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.