IIT; ಸಂಬಾರ ಪದಾರ್ಥದಿಂದ ಕ್ಯಾನ್ಸರ್‌ಗೆ ಶೀಘ್ರ ಚಿಕಿತ್ಸೆ?
ಹೊಸ ಔಷಧಕ್ಕೆ ಮದ್ರಾಸ್ ಐಐಟಿ ಪೇಟೆಂಟ್
Team Udayavani, Feb 26, 2024, 6:30 AM IST
ಹೊಸದಿಲ್ಲಿ: ಮದ್ರಾಸ್ ಐಐಟಿ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸಂಶೋಧಕರು ಮಹತ್ವದ ಸಾಧನೆ ಮಾಡಿದ್ದಾರೆ. ಭಾರತೀಯ ಸಂಬಾರ ಪದಾರ್ಥಗಳನ್ನು, ಕ್ಯಾನ್ಸರ್ ಚಿಕಿತ್ಸೆಗೆ ಪರಿಣಾಮಕಾರಿಯಾಗಿ ಬಳಸುವ ಕುರಿತು ಸಂಶೋಧನೆ ಮಾಡಿರುವ ಅವರು, ಆ ಸಂಬಂಧ ಪೇಟೆಂಟ್‌ಗಳನ್ನು ಪಡೆದುಕೊಂಡಿದ್ದಾರೆ.
ಈ ಔಷಧವು 2028ಕ್ಕೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ. ಭಾರತದ ಸಂಬಾರ ಪದಾರ್ಥಗಳಿಂದ ಪಡೆದುಕೊಂಡ ನ್ಯಾನೋ ಔಷಧಗಳು, ಕ್ಯಾನ್ಸರ್ ಪ್ರತಿರೋಧಕ ಶಕ್ತಿಯನ್ನು ಹೊಂದಿರುವುದು ಪತ್ತೆಯಾಗಿದೆ. ಶ್ವಾಸಕೋಶ, ಸ್ತನ, ಕರುಳು, ಗರ್ಭಕೋಶ, ಮೌಖೀಕ, ಥೈರಾಯ್ಡ ಕೋಶಗಳ ಕ್ಯಾನ್ಸರ್ ನಿಗ್ರಹಕ್ಕೆ ಇವು ಸಹಾಯ ಮಾಡುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸಂಶೋಧನೆಗಳನ್ನು ಮುಂದಿಟ್ಟು ಪೇಟೆಂಟ್ ಪಡೆದುಕೊಂಡಿದ್ದಾರೆ.
ಸದ್ಯ ಐಐಟಿ ಸಂಶೋಧಕರು, ಔಷಧದ ಸುರಕ್ಷತೆ ಮತ್ತು ಖರ್ಚಿನ ಸವಾಲುಗಳನ್ನು ನಿಭಾ ಯಿಸಲು ಲೆಕ್ಕಾಚಾರ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಾಣಿಗಳ ಮೇಲೆ ಔಷಧವನ್ನು ಪ್ರಯೋಗ ಮಾಡಲಾಗಿದೆ. ವೈದ್ಯಕೀಯ ಪರೀಕ್ಷೆಗಳನ್ನೂ ಮಾಡಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.