ಮಗುವಿನ ಜತೆಗೆ ಮಾತುಕತೆಯಾಡುವುದು ಎಷ್ಟು ಅಗತ್ಯ? 


Team Udayavani, Jan 8, 2017, 3:45 AM IST

Baby.jpg

(ಹಿಂದಿನ ವಾರದಿಂದ ) ವಿವಿಧ ಘಟನೆಗಳ ವಿವರಣೆ: ಇದರಲ್ಲಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚು ಭೂತಕಾಲಕ್ಕೆ ಸಂಬಂಧಿಸಿದ ಘಟನೆಗಳ ವಿವರಣೆ ಇರುತ್ತವೆ.

ಹಾರು ಕಪ್ಪೆಯಂತಹ ವಿವರಣೆ: ಎರಡು ಅಥವಾ ಹೆಚ್ಚು ಭೂತಕಾಲಕ್ಕೆ ಸಂಬಂಧಿಸಿದ ಘಟನೆಗಳ ವಿವರಣೆ ಇರುತ್ತದೆ. ಆದರೆ ಘಟನೆಗಳು ಸಮಯಾನುಕ್ರಮದಲ್ಲಿ ಇರುವುದಿಲ್ಲ ಮತ್ತು/ಅಥವಾ ಅದರಲ್ಲಿ ಮುಖ್ಯ ಘಟನೆಗಳು ಬಿಟ್ಟು ಹೋಗಿರಲೂ ಬಹುದು (ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ಮಾತನಾಡುವುದು). ನಾಲ್ಕು ವರ್ಷ ಪ್ರಾಯದಲ್ಲಿ ಈ ಬೆಳವಣಿಗೆ ಕಂಡುಬರುತ್ತದೆ. 

ಉದಾ: ಯಾರು ವೇಗವಾಗಿ ಓಡುವವರು ಎಂದು ಆಮೆ ಮತ್ತು ಮೊಲದ ಬೆಟ್‌. ಆಮೆ ಬಹಳ ನಿಧಾನ ಇದ್ದುದಕ್ಕೆ ಮೊಲ ತಮಾಷೆ ಮಾಡಿತು.  ಆದರೆ ಕೊನೆಗೆ ಮೊಲ ಗೆದ್ದಿತು. ಆ ಮೊಲ ಮರದ ಕೆಳಗೆ ನಿದ್ದೆ ಹೋಗುವುದಕ್ಕೆ ಮೊದಲೇ ಆಮೆ ಗೆದ್ದಿತ್ತು. 

ಕಾಲಗಣನೆ ಇದರಲ್ಲಿ ಎರಡು ಅಥವಾ ಹೆಚ್ಚು ಭೂತಕಾಲದ ಘಟನೆಗಳು ಇರುತ್ತವೆ ಮತ್ತು ಇವು ತರ್ಕಬದ್ಧ ರೀತಿಯಲ್ಲಿ ಇರಬಹುದು ಅಥವಾ ಮಾಮೂಲಿ ರೀತಿಯಲ್ಲಿ ಇರಬಹುದು. ಎಲ್ಲ  ವಯಸ್ಸಿನವರಲ್ಲಿಯೂ ಈ ಹಂತ ಕಂಡುಬರುತ್ತದೆ. 

ವಿಶೇಷ ಘಟ್ಟದಲ್ಲಿ ಅಂತ್ಯವಾಗುವ ವಿವರಣೆ ತರ್ಕಬದ್ಧ ರೀತಿಯಲ್ಲಿ ಅಥವಾ ಮಾಮೂಲಿ ರೀತಿಯಲ್ಲಿ ಇರುವಂತಹ2 ಅಥವಾ ಹೆಚ್ಚು ಭೂತಕಾಲದ ಘಟನೆಗಳ ವಿವರಣೆ. ಈ ವಿವರಣೆಯು ಒಂದು ವಿಶೇಷಘಟ್ಟವನ್ನು ಹೊಂದಿರುತ್ತದೆ. ಆದರೆ ಪರಿಸಮಾಪ್ತಿ (ಪರಿಹಾರ) ಇರುವುದಿಲ್ಲ. ಇದು ಐದನೆಯ ವಯಸ್ಸಿ ನಲ್ಲಿ ಕಂಡುಬರುತ್ತದೆ. ಉದಾ: ನನಗೆ ಒಂದು ಜೇನು ನೊಣ ಕಚ್ಚಿತು. ಅದು ನನ್ನ ಪಾದಕ್ಕೆ ಚುಚ್ಚಿತು. ನಾನು ಕಿರುಚಿದೆ, ಕಿರುಚಿದೆ ಮತ್ತು ಜೋರಾಗಿ ಅತ್ತುಬಿಟ್ಟೆ (ವಿಶೇಷ ಘಟ್ಟ- ನಾನು ಕಿರುಚಿದೆ, ಕಿರು ಚಿದೆ ಮತ್ತು ಜೋರಾಗಿ ಅತ್ತುಬಿಟ್ಟೆ ).

ವಿಶೇಷ ಘಟ್ಟದಲ್ಲಿ ಅಂತ್ಯವಾಗುವ ಅತ್ಯುನ್ನತ ವಿವರಣೆ ತರ್ಕಬದ್ಧ ರೀತಿಯಲ್ಲಿ ಅಥವಾ ಮಾಮೂಲಿ ರೀತಿಯಲ್ಲಿ ಇರುವಂತಹ ಎರಡು ಅಥವಾ ಹೆಚ್ಚು ಭೂತಕಾಲದ ಘಟನೆಗಳು. ಈ ವಿವರಣೆಯು ಒಂದು ವಿಶೇಷಘಟ್ಟವನ್ನು (ಘಟನೆಯ ವಿಶೇಷ ಘಟ್ಟ ) ಮತ್ತು ಪರಿಸಮಾಪ್ತಿ (ಪರಿಹಾರ) ಯನ್ನು ಹೊಂದಿರುತ್ತದೆ. ಇದು ಆರು ಮತ್ತು ಅದಕ್ಕಿಂತ ಮೇಲಿನ ವಯಸ್ಸಿನಲ್ಲಿ ಕಂಡುಬರುತ್ತದೆ. 
ಉದಾ: ನನಗೆ ಒಂದು ಜೇನು ನೊಣ ಕಚ್ಚಿತು. ಅದು ನನ್ನ ಪಾದಕ್ಕೆ ಚುಚ್ಚಿತು. ನಾನು ಕಿರುಚಿದೆ, ಕಿರುಚಿದೆ ಮತ್ತು ಜೋರಾಗಿ ಅತ್ತುಬಿಟ್ಟೆ (ವಿಶೇಷ ಘಟ್ಟ). ನನ್ನ ಅಪ್ಪ, ಅಮ್ಮ ಹೊರಗೆ ಬಂದರು ಮತ್ತು ನನ್ನನ್ನು ಮನೆಯೊಳಗೆ ಕರೆದುಕೊಂಡು ಹೋದರು (ಪರಿಸಮಾಪ್ತಿ).ಮಕ್ಕಳಲ್ಲಿನ ವಿವರಣಾ ಕೌಶಲದ ಬೆಳವಣಿಗೆಯ ಆರಂಭಿಕ ಹಂತಗಳು  (Hedburg and Stoel – Gammon,, 1986)

ಹಂತ 1: 
ಒಟ್ಟೊಟ್ಟಾಗಿ ಹೇಳುವುದು 
(2 ವರ್ಷ) 

ನಿಮ್ಮ ಮಗುವು ಒಂದಕ್ಕೊಂದು ಸಂಬಂಧವೇ ಇಲ್ಲದ ರಾಶಿ ರಾಶಿ ವಿಷಯಗಳನ್ನು ಬೆಸೆದು ಹೇಳಬಹುದು. ಕಥೆಯಲ್ಲಿ  ವಿಷಯವನ್ನು ಒಂದಕ್ಕೊಂದು ಬೆಸೆಯಲು ಪೂರಕ ಶಬ್ದವನ್ನು ಬಳಸದೆ ಮಾತುಕತೆಯಲ್ಲಿ  ವಿಷಯಗಳು ಆಗಾಗ ಮರುಕಳಿಸ ಬಹುದು ಮತ್ತು ಸರಳ ವರ್ತಮಾನ ಕಾಲವಾಚಕವನ್ನು ಬಳಸಬಹುದು.  ಉದಾ: ಒಬ್ಬಳು ಹುಡುಗಿ ಬಿಸ್ಕಿಟ್‌ ತಿನ್ನುತ್ತಾ ಇದ್ದಾಳೆ, ಒಬ್ಬ ವ್ಯಕ್ತಿ ಕಾರಿನ ಕಡೆ ಹೋದ, ಮಗು ನಿದ್ದೆ ಮಾಡುತ್ತಾ ಇದೆ.  

ಹಂತ 2: 
ಸರಣಿಗಳು (2-3 ವರ್ಷ) 

ಈ ಹಂತದಲ್ಲಿ ನಿಮ್ಮ ಮಗುವು ಮಗುವಿನ ಕಥಾ ಭಾಗವನ್ನು ಇಚ್ಛಾನುಸಾರ ಜೋಡಿಸಿ ಹೇಳಲು ಆರಂಭಿಸಬಹುದು. ಈ ಸರಣಿಯಲ್ಲಿ ಒಂದು ಕೇಂದ್ರ ಪಾತ್ರ, ಒಂದು ವಿಷಯ ಅಥವಾ ಪರಿಸರ ಇರಬಹುದು. 

ಉದಾ: ಅವಳು ತನ್ನ ತಂದೆಯ ಜತೆಗೆ ವಾಸಿಸುತ್ತಿದ್ದಳು. ಅವಳು ತನ್ನ ತಾಯಿಯ ಜತೆಗೆ ವಾಸಿಸುತ್ತಿದ್ದಳು. ಅಜ್ಜ ಮತ್ತು ಅಜ್ಜಿ ಜತೆಗೆ ವಾಸಿಸುತ್ತಿದ್ದರು. ಈ ಮೂರು ಮಕ್ಕಳು ತಮ್ಮ ಅಜ್ಜಿಯ ಜತೆಗೆ ಇದ್ದರು ಮತ್ತು ಈ ಎರಡು ಪ್ರಾಣಿಗಳು ಅವರ ಜತೆ ಇದ್ದವು. 

ಹಂತ 3: 
ಆರಂಭಿಕ ವಿವರಗಳು (2-4 ವರ್ಷ)

ಆರಂಭಿಕ ವಿವರಗಳು, ಒಂದು ಕೇಂದ್ರ ಪಾತ್ರ, ವಿಷಯ ಅಥವಾ ಪರಿಸರ ಇತ್ಯಾದಿ ವಿವರಗಳನ್ನು ಒಳಗೊಂಡ ಸರಣಿಯ ರೂಪದ ವಿವರಗಳು.  ಮಗುವಿನ ಚರ್ಚಾ ವಿಷಯ ಮತ್ತು ಪಾತ್ರಗಳ ಮೌಖೀಕ ಚಹರೆಗಳು ಅಥವಾ ದೇಹದ ಭಂಗಿಗಳು ಸರಣಿಯಲ್ಲಿ ಬದಲಾಗುತ್ತಿರುತ್ತವೆ. 

ಉದಾ: ನನ್ನ ಅಪ್ಪ, ಅವರು ಕೆಲಸಕ್ಕೆ ಹೊರಟು ಹೋದರು. ನನ್ನ ಅಮ್ಮ ಉಳಿದುಕೊಂಡರು ಮತ್ತು ನಿದ್ದೆ ಹೋದರು. ನನ್ನ ಇಬ್ಬರು ಸಹೋದರರು, ಅವರು ಆಟಿಕೆಗಳ ಜತೆಗೆ ಆಡಲು ಹೋದರು. ನನ್ನ ನಾಯಿ, ಅದು ಹೊರಗೆ ಹೋಯಿತು. ನನ್ನ ಕಿಟ್ಟಿ ಬೆಕ್ಕು ಮೇಲೆ ಬಂತು ಮತ್ತು ಅದು ನನಗೆ ಕಚಗುಳಿ ಮಾಡಿತು ಮತ್ತು ಮೇಲೆ ಬಂತು ಮತ್ತು ಮಿಯಾಂ ಅನ್ನಲು ಆರಂಭಿಸಿತು. ಆಮೇಲೆ ನಾನು ಅಳಲು ಆರಂಭಿಸಿದೆ. ಯಾಕೆಂದರೆ ಅದು ನನ್ನನ್ನು ಕಚ್ಚಿತು. ನನ್ನ ಸಹೋದರರು ಓಡುತ್ತಾ ಬಂದರು ಮೈಕ್‌ ಏನಾಯಿತು ಎಂದು ಕೇಳಿದ. ನನ್ನ ಕಿಟ್ಟಿ ಬೆಕ್ಕು ನಂಗೆ ಕಚ್ಚಿ ಬಿಟ್ಟಿತು ಅಂತ ಹೇಳಿದೆ. ಅಮ್ಮ ಓಡುತ್ತಾ ಬಂದರು, ಮತ್ತು ಅವರು  ಏನಾಯಿತು, ಓಹೋ ಕಿಟ್ಟಿ ಬೆಕ್ಕು ನಿನ್ನನ್ನು ಕಚ್ಚಿತಾ,  ಸರಿ ಎಂದು ಕೇಳಿದರು.  

ಕೇಂದ್ರೀಕೃತವಲ್ಲದ ಸರಣಿಗಳು 
(4-4 1/2 ವರ್ಷಗಳು)

ಒಂದು ಕೇಂದ್ರೀಕೃತವಲ್ಲದ ಸರಣಿಯಲ್ಲಿ ಕೇಂದ್ರ ಪಾತ್ರಗಳು ಇರುವುದಿಲ್ಲ. ಇವು ಘಟನೆಗಳ ಸರಣಿಗಳಾಗಿದ್ದು ಅವು ವ್ಯವಸ್ಥಿತವಾಗಿ ಅಥವಾ ಕಾರ್ಯ-ಕಾರಣ ಸಂಬಂಧದಿಂದ ಒಂದಕ್ಕೊಂದು ಬೆಸೆದಿರುತ್ತವೆ. ಜೋಡಿಸುವ ಶಬ್ದಗಳಾದ ಮತ್ತು, ಆದರೆ ಯಾಕೆಂದರೆ ಇತ್ಯಾದಿ ಶಬ್ದಗಳು ಇಲ್ಲಿ ಬಳಕೆ ಆಗಿರಬಹುದು.  
 
ಉದಾ:  ಈ ಮನುಷ್ಯ ನಡೆಯುತ್ತಾ ಇದ್ದಾನೆ. ಅವನು ಒಂದು ನಾಯಿ ಮತ್ತು ಒಂದು ಬೆಕ್ಕನ್ನು ನೋಡಿದ ಮತ್ತು ನಾಯಿ  ಮತ್ತು ಬೆಕ್ಕಿನ ಜತೆಗೆ ಒಂದು ಹುಡುಗಿಯನ್ನೂ ಸಹ ನೋಡಿದ.  ಆತ ಹಲೋ ಎಂದು ಹೇಳಿದ. ಆತ ಹಿಂದಕ್ಕೆ ಹೋಗಿ ಸಹೋದರಾ, ಇಲ್ಲಿ ಬಾ ಎಂದು ಹೇಳಿದ. ಹಾಗಾಗಿ ಆಕೆಯ ಅಜ್ಜಿ ಎದ್ದು ಆಕೆಯ ಕಡೆಗೆ ನಡೆದರು ಮತ್ತು ನಿಮ್ಗೆ ಡಾನ್ಸ್‌ ಮಾಡಲು ಹೋಗ್ಲಿಕ್ಕೆ ಇದೆಯಾ? ಎಂದು ಕೇಳಿದರು. ಅವರು ಡಾನ್ಸ್‌ ಮಾಡಲು ಹೋದರು ಮತ್ತು ಅದು ಬಹಳ ನಿಧಾನದ ಡಾನ್ಸ್‌ ಆಗಿತ್ತು. ಅವರು ಹಿಂದಕ್ಕೆ ಬಂದರು.  ಆಮೇಲೆ ಈ ಎರಡು ಮಕ್ಕಳು ಬಂದರು. ಆಮೇಲೆ ಮೊದಲಿಗೆ ಅವನು ಹೇಳಿದ. ನಾನಲ್ಲ. ಆಮೇಲೆ ಅವನು ಹೇಳಿದ ಏನು? ನನಗೆ ಹೊರಗೆ ಊಟಕ್ಕೆ ಹೋಗ್ಲಿಕ್ಕೆ ಇದೆ. ಹಾಗಾಗಿ ಅವರು ಊಟಕ್ಕೆ ಹೊರಗೆ ಹೋದರು. 

ಕೇಂದ್ರೀಕೃತ ಸರಣಿಗಳು (5 ವರ್ಷ)
ಕೇಂದ್ರೀಕೃತ ಸರಣಿಗಳಲ್ಲಿ ಒಂದು ಕೇಂದ್ರ ಪಾತ್ರ ಮತ್ತು ಘಟನೆಗಳ ಒಂದು ವ್ಯವಸ್ಥಿತ ಸರಣಿ ಇರುತ್ತದೆ. 
ಈ ಸರಣಿಗಳಲ್ಲಿ ವರ್ಣಿಸಲಾದ ಘಟನೆಗಳು ಸಾಹಸದ ರೂಪವನ್ನು ಪಡೆಯುತ್ತವೆ. 

ಉದಾ:  ಒಂದಾನೊಂದು ಕಾಲದಲ್ಲಿ ಕ್ರಿಸ್ಟೀ ಎಂಬ ಹೆಸರಿನ ತಾಯಿ ಒಬ್ಬಳು ಇದ್ದಳು. ಅವಳ ಗಂಡನ ಹೆಸರು ಟಾಮ್‌ ಮತ್ತು ಅವರಿಗೆ ಕೆಲವು ಮಕ್ಕಳು ಇದ್ದರು. ಅವರ ಹೆಸರು ಹೀಥರ್‌ ಮತ್ತು ಕ್ರಿಸ್ಟೀ. ಅವರಲ್ಲಿ ಒಬ್ಬ ಹುಡುಗ ಇದ್ದ. ಅವನ ಹೆಸರು ರಾನಿ. ತಾಯಿ ಹುಡುಗನನ್ನು ಹೊರಗೆ ಹೋಗಿ ಆಡುವಂತೆ ಹೇಳಿದರು. ಅನಂತರ ಹುಡುಗ ಒಳಗೆ ಬಂದು ಹೇಳಿದ  ಅಮ್ಮ, ಅಮ್ಮ ನಮ್ಮ ನಾಯಿ ಹೊರಗಡೆ ಇದೆ ಮತ್ತು ಅದು ಬೊಗಳುತ್ತಾ ಇದೆ. ನಾನು ಹೊರಗೆ ಹೋಗಿ ನೋಡುತ್ತೇನೆ ಏನು ನೀನು ಬೊಗಳುತ್ತಿರುವುದು?  ಅವನು ಯಾಕೆ ಬೊಗಳ್ತಾ ಇದ್ದಾನೆ ಅಂತ ನಂಗೆ ಗೊತ್ತಿಲ್ಲ, ಟಾಮಿ, ರಾನಿ, ರಾನಿ. ಅವನು ಯಾಕೆ ಬೊಗಳ್ತಾ ಇದ್ದಾನೆ ಅಂತ ನಂಗೆ ಗೊತ್ತಿಲ್ಲಾ. ಅವನಿಗೆ ಒಳಗೆ ಬಬೇìಕಾಗಿದೆ ನಾನು ಅವನನ್ನು ಒಳಗೆ ಕರ್ಕೊಂಡು ಬತೇìನೆ ಅಲ್ಲ, ನಾನು ಅವನನ್ನು ಒಳಗೆ ತತೇìನೆ. ಮಕ್ಕಳಲ್ಲಿ ಆರಂಭಿಕ ವಿವರಣಾ ಕೌಶಲ ಬೆಳವಣಿಗೆಯಿಂದ ಆರಿಸಲಾಗಿದೆ (ಹೆಡºರ್ಗ್‌ ಆ್ಯಂಡ್‌ ಸ್ಟಾಯೆಲ್‌ ಗ್ಯಾಮೊನ್‌ 1986) .

ಟಾಪ್ ನ್ಯೂಸ್

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-health

Mother: ತಾಯಂದಿರ ಮಾನಸಿಕ ಆರೋಗ್ಯ

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

3

Mental health: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Maharashtra Election: Election officials checked Amit Shah’s bag

Maharashtra Election: ಅಮಿತ್‌ ಶಾ ಅವರ ಬ್ಯಾಗ್‌ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.