ಬಂಜೆತನ ನಿವಾರಣೆ ; ನಿಮ್ಮ ಸಮಸ್ಯೆಗೆ ತಜ್ಞರ ಪರಿಹಾರ


Team Udayavani, Oct 8, 2017, 6:45 AM IST

arogav.jpg

ಪ್ರಶ್ನೆ: ಎರಡು ತಿಂಗಳುಗಳ ಮೊದಲು ನಾನು ಐ.ವಿ.ಎಫ್ ಚಿಕಿತ್ಸೆಗೆ ಒಳಗಾಗಿದ್ದೆ, ಆದರೆ ಚಿಕಿತ್ಸೆ ಫ‌ಲಕಾರಿಯಾಗಲಿಲ್ಲ. ನಾನು ಇನ್ನೆಷ್ಟು ಬಾರಿ ಐ.ವಿ.ಎಫ್ ಚಿಕಿತ್ಸೆಗೆ ಪ್ರಯತ್ನಿಸಬಹುದು? ಈ ಚಿಕಿತ್ಸೆಯಲ್ಲಿ  ನೀಡಲಾಗುವ ಔಷಧಿಗಳಿಂದ ಮುಂದೆ ಏನಾದರೂ ತೊಂದರೆಯಾಗಬಹುದೇ?
 - ಸರಸ್ವತಿ, ಕುಂದಾಪುರ

ಒಂದಕ್ಕಿಂತ ಹೆಚ್ಚು ಬಾರಿಐ.ವಿ.ಎಫ್  (IVF) ಚಿಕಿತ್ಸೆಗೆ ಒಳಗಾಗುವುದರಿಂದ ನಿಮ್ಮದೇಹದ ಮೇಲೆ ಭವಿಷ್ಯದಲ್ಲಿ ಯಾವುದೇ ಅಡ್ಡ ಪರಿಣಾಮಗಳಾಗುವ ಸಾಧ್ಯತೆ ತುಂಬಾ ಕಡಿಮೆಎಂದು ಸಂಶೋಧನೆಗಳಿಂದ ನಿರೂಪಿತವಾಗಿದೆ.  ಈ ಚಿಕಿತ್ಸೆಯ ಯಶಸ್ಸು ಶೇ 30-35 ಇರುವಾಗ, ಒಂದಕ್ಕಿಂತ ಹೆಚ್ಚಿನ ಬಾರಿ ಐ.ವಿ.ಎಫ್(IVF) ಪ್ರಕ್ರಿಯೆಗೆ ಒಳಗಾಗುವ ಅಗತ್ಯ ತುಂಬಾ ಮಂದಿಯಲ್ಲಿ ಇರುತ್ತದೆ.

ಪ್ರಶ್ನೆ: ನನ್ನ ಪತಿಯ ವೀರ್ಯ ಪರೀಕ್ಷೆಯ ರಿಪೋರ್ಟ್‌ನ್ನಲ್ಲಿ ಮೊಟಿಲಿಟಿ 0% ಎಂದಿದೆ. ಇದುಅಸಹಜವೇ?ನಮಗೆ ಮಕ್ಕಳಾಗದಿರಲು ಇದುಕಾರಣವಿರಬಹುದೇ?
-ಅಂಕಿತಾ, ಸುಳ್ಯ

ಮೊಟಿಲಿಟಿ 0%ಅಂದರೆ, ನಿಮ್ಮಪತಿಯವೀರ್ಯದಲ್ಲಿರುವ ವೀರ್ಯಾಣುಗಳು  ಚಲನಾ ಸಾಮರ್ಥ್ಯವನ್ನು ಹೊಂದಿಲ್ಲ, ಹಾಗಾಗಿ ಸಂಭೋಗದ ವೇಳೆಯಲ್ಲಿ, ಸ್ತ್ರೀ ಜನನಾಂಗದ ಒಳಗೆ ಸೇರಿದ ವೀರ್ಯದಲ್ಲಿರುವಂತಹ ವೀರ್ಯಾಣುಗಳು ಅಂಡಾಣುವಿನತ್ತ ಚಲಿಸಲಾಗದೆ ಅಂಡಾಣುವನ್ನು ಫ‌ಲೀಕರಿಸಲು ಆಗುವುದಿಲ್ಲ. ನೀವು ಗ್ರಹಿಸಿದಂತೆ ಇದು ನಿಮಗೆ ಮಕ್ಕಳಾಗದಿರಲು ಒಂದುಕಾರಣವಿರಬಹುದು. 

ವೀರ್ಯಾಣುವಿನ ರಚನೆಯ ವ್ಯತ್ಯಯದಿಂದ ಈ ದೋಷಕಂಡುಬರುತ್ತದೆ. ಪ್ರಣಾಳ ಶಿಶು ತಜ್ಞರನ್ನು ಭೇಟಿಯಾಗಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.

ಪ್ರಶ್ನೆ : ಮಹಿಳೆಯರಲ್ಲಿ 35 ವಯಸ್ಸಿನ ನಂತರ ಪ್ರಜನನ ಶಕ್ತಿ ಕಡಿಮೆಯಾಗುವುದೆಂದು ಕೇಳಿದ್ದೇನೆ.  ಅದು ಗಂಡಸರಲ್ಲಿ ಕೂಡಾ ಆಗುತ್ತದೆಯೇ ?
-ಸುರೇಶ್‌, ಮಣಿಪಾಲ

ಮಹಿಳೆಯರಲ್ಲಿ ಆಂಡಾಣುಗಳು ಅವರು ತಾಯಿ ಗರ್ಭದಲ್ಲಿರುವಾಗಲೇ ಉತ್ಪಾದನೆಯಾಗಿ, ನಂತರ ಪ್ರಬುದ್ಧರಾದಾಗ, ಪ್ರತೀ ಋತುಚಕ್ರದ ವೇಳೆಯಲ್ಲಿ ಬೆಳೆದು ಬಿಡುಗಡೆಯಾಗುತ್ತವೆ ಹಾಗಾಗಿ 35 ವಯಸ್ಸಿನ ನಂತರ ಅಂಡಾಣುಗಳ ಸಂಖ್ಯೆ ಅಥವಾ ಗುಣಮಟ್ಟ ಕಡಿಮೆಯಾಗಬಹುದು. ಆದರೆ ಗಂಡಸರಲ್ಲಿ ಪ್ರಬುದ್ಧತೆಯ ನಂತರ ನಿತ್ಯವೂ ಹೊಸ ವೀರ್ಯಾಣುಗಳ ಉತ್ಪಾದನೆಯಾಗುತ್ತದೆ. ಮಧ್ಯ ವಯಸ್ಸಿನ ನಂತರ, ಈ ಸಂಖ್ಯೆಯಲ್ಲಿ ಸ್ವಲ್ಪಏರುಪೇರಾದರೂ ಆರೋಗ್ಯವಂತ ಪುರುಷರಲ್ಲಿ ಸಂತಾನ ಶಕ್ತಿಯು ತೀವ್ರವಾಗಿ ಕಡಿಮೆಯಾಗುವುದಿಲ್ಲ.

ಪ್ರಶ್ನೆ: ಪ್ರಾಯ 33 ವರ್ಷ. ಮದುವೆಯಾಗಿ ಒಂದು ವರ್ಷವಾಗಿದೆ. ನನ್ನ ಸಮಸ್ಯೆ ಏನೆಂದರೆ ಸಂಭೋಗ ಅಥವಾ ಮುಷ್ಟಿ ಮೈಥುನದ ವೇಳೆಯಲ್ಲಿ ಸ್ಕಲನದ ಅನುಭವವಾದರೂ ನನ್ನ ಜನನಾಂಗದಿಂದ ವೀರ್ಯವು ಹೊರಬರುವುದಿಲ್ಲ. ಇದರಿಂದ ತೊಂದರೆಯಾಗಬಹುದೇ ?
-ಹಷೇìಂದ್ರ, ಬೆಳ್ತಂಗಡಿ

ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ರಿಟ್ರೋಗ್ರೇಡ್‌ ಇಜಾಕ್ಯುಲೇಷನ್‌ಎಂದು ಕರೆಯುತ್ತಾರೆ.ಅಂದರೆ ಸ್ಕಲನದ ವೇಳೆಯಲ್ಲಿ ವೀರ್ಯವು ಹೊರಚೆಲ್ಲದೆ, ಅದು ಮೂತ್ರಕೋಶದ ಒಳಗ್ಗೆ ಹಿಮ್ಮುಖವಾಗಿ ಚಲಿಸುತ್ತದೆ. ವೀರ್ಯಾಣುಗಳು ಮೂತ್ರದೊಂದಿಗೆ ಬೆರೆತು ತಮ್ಮ ಫ‌ಲೀಕರಣ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ನೀವು ಕೂಡಲೇ ಆಂಡ್ರೋಲೋಜಿಸ್ಟ್‌ (Andrologist) ಅಥವಾ ಯುರೋಲೋಜಿಸ್ಟ್‌  (Urologist)ಅವರನ್ನು ಕಾಣುವುದು ಉತ್ತಮ.

– ಡಾ| ಪ್ರತಾಪ್‌ ಕುಮಾರ್‌,
ಪ್ರೊಫೆಸರ್‌, MARC,
ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ

– ಡಾ| ಸತೀಶ್‌ ಅಡಿಗ,
ಪ್ರೊಫೆಸರ್‌, ಕ್ಲಿನಿಕಲ್‌ ಎಂಬ್ರಿಯೋಲಜಿ
ಕೆ.ಎಂ.ಸಿ. ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.