ತಾಯಿ-ಮಕ್ಕಳ ಆರೈಕೆಯ ಹಾದಿಯಲ್ಲಿ ಸೂಲಗಿತ್ತಿಯರು
Team Udayavani, Apr 29, 2018, 6:05 AM IST
ಸೂಲಗಿತ್ತಿ ವೃತ್ತಿಯು ಮನುಷ್ಯ ಜನಾಂಗದಷ್ಟೇ ಪುರಾತನ ಇತಿಹಾಸವುಳ್ಳ ಒಂದು ವೃತ್ತಿಯಾಗಿದೆ. ಅದರ ಅಸ್ತಿತ್ವವು ಕ್ರಿಸ್ತಪೂರ್ವ 5000 ವರ್ಷಗಳಿಗೂ ಹಿಂದಿನದ್ದಾಗಿದೆ. ಹೆರಿಗೆ ಮಾಡಿಸಿಕೊಳ್ಳುವ ಹಿಬ್ರೂ ಮಹಿಳೆಯರಿಗೆ ಸಹಾಯ ಮಾಡುತ್ತಿದ್ದ ಸೂಲಗಿತ್ತಿಯರ ಜತೆಗೆ ಈಜಿಪ್ಟಿನ ದೊರೆ ಮಾತನಾಡುತ್ತಿದ್ದ ಉಲ್ಲೇಖ ಪುರಾತನ ಇತಿಹಾಸದಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಸ್ವಯಂ ಸೇವಕ ಸಂಸ್ಥೆಗಳ ಸಹಾಯದೊಂದಿಗೆ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು ಆರಂಭವಾದವು. ಆಧುನಿಕ ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಗಳು ಕ್ರೈಸ್ತ ಮಿಶನರಿಗಳಿಂದ ತರಬೇತು ಹೊಂದಿದ ದಾಯಿಗಳಿಂದ ಆರಂಭವಾದವು.
ತಾಯಿ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸಾರ್ವಜನಿಕ ಆರೋಗ್ಯ ವಿಭಾಗದ ಅಡಿಯಲ್ಲಿ ಸಾರ್ವಜನಿಕ ಆರೋಗ್ಯ ಸಹಾಯಕ ನಿರ್ದೇಶಕರ ಮೇಲ್ವಿಚಾರಿಕೆಯಲ್ಲಿ ಪ್ರತ್ಯೇಕ ವಿಭಾಗವನ್ನು ಮೊತ್ತಮೊದಲಿಗೆ ಆರಂಭಿಸಿದ್ದು ಮದ್ರಾಸ್ ರಾಜ್ಯ. ಸೂಲಗಿತ್ತಿಯರು ಮತ್ತು ತರಬೇತಿ ಪಡೆಯುತ್ತಿರುವ ಸೂಲಗಿತ್ತಿಯರಂತಹ ವಿದ್ಯಾರ್ಹತೆಯುಳ್ಳ ಪರಿಣಿತ ಸಿಬಂದಿಯ ಸೇವೆಗಳನ್ನು ಆರಂಭಿಸುವ ಪ್ರಯತ್ನವನ್ನು ಮೊತ್ತಮೊದಲ ಬಾರಿಗೆ ಆರಂಭಿಸಿದ್ದು ಕೂಡ ಮದ್ರಾಸ್ ರಾಜ್ಯವೇ. 1938ರಲ್ಲಿ ಭಾರತೀಯ ರಿಸರ್ಚ್ ಫಂಡ್ ಅಸೋಸಿಯೇಶನನ್ನು ಆರಂಭಿಸಲಾಯಿತು, ಇದು ಬಾಣಂತಿಯರು ಮತ್ತು ಶಿಶುಗಳ ಮರಣ ಮತ್ತು ರೋಗಗಳ ಕಾರಣ ಮತ್ತು ಉಂಟಾಗುವಿಕೆಯ ಬಗ್ಗೆ ಸಮಿತಿಯೊಂದನ್ನು ರಚಿಸಿತ್ತು.
ಭಾರತೀಯ ಕುಟುಂಬ ಕಲ್ಯಾಣ ಯೋಜನೆ ಮತ್ತು ಮಕ್ಕಳ ಕಲ್ಯಾಣ ಕಾರ್ಯಕ್ರಮ ಹಾಗೂ ದೇಶವ್ಯಾಪಿ ಪ್ರಜನನ ಆರೋಗ್ಯ ಕಾರ್ಯಕ್ರಮಗಳನ್ನು ಆರಂಭಿಸುವ ಮೂಲಕ ಅಭಿವೃದ್ಧಿಶೀಲ ದೇಶಗಳ ಪೈಕಿ ಇಂತಹ ಕಾಯಕ್ರಮಗಳನ್ನು ಮೊತ್ತಮೊದಲ ಬಾರಿಗೆ ಆರಂಭಿಸಿದ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶವು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಉಪ ಕೇಂದ್ರಗಳ ವ್ಯಾಪಕ ಜಾಲವನ್ನು ಆರಂಭಿಸುವ ಮೂಲಕ ಗ್ರಾಮೀಣ ಜನಸಂಖ್ಯೆಯ ಶೇ. 80ಕ್ಕೂ ಹೆಚ್ಚು ಜನತೆಗೆ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ಒದಗಿಸು ಪ್ರಯತ್ನ ಮಾಡಿದೆ. ಗ್ರಾಮೀಣ ಆರೋಗ್ಯ ಸೇವಾ ವ್ಯವಸ್ಥೆಯಲ್ಲಿ ಆಕ್ಸಿಲಿಯರ್ ನರ್ಸ್ ಮಿಡ್‌ವೈಫ್ (ಎಎನ್‌ಎಂ) ಅಥವಾ ಸೂಲಗಿತ್ತಿ ದಾದಿಯರು ತಳಮಟ್ಟದ ಕಾರ್ಯನಿರ್ವಾಹಕ ಸಿಬಂದಿಯಾಗಿದ್ದು, ಸಮುದಾಯದಲ್ಲಿ ಇರುವ ಜನರೊಂದಿಗೆ ನೇರವಾಗಿ ಸಂಪರ್ಕ ಹೊಂದಿರುತ್ತಾರೆ. ಅಲ್ಲದೆ, ಪ್ರಜನನ ಮತ್ತು ಮಕ್ಕಳ ಆರೋಗ್ಯ ಕಾರ್ಯಕ್ರಮಗಳಲ್ಲಿ ಪ್ರಧಾನ ಬಿಂದುವೂ ಆಗಿದ್ದಾರೆ. ಇದು 1960ರ ದಶಕದಲ್ಲಿ ಅಸ್ತಿತ್ವದಲ್ಲಿದ್ದು ಸಮುದಾಯಕ್ಕೆ ಪ್ರಸೂತಿ ಮತ್ತು ಚಿಕಿತ್ಸಾ ಸೇವೆಗಳನ್ನು ಒದಗಿಸುತ್ತಿದ್ದ ಸ್ಥಾನಿಕ ಆಕ್ಸಿಲಿಯರಿ ನರ್ಸ್ ಮಿಡ್‌ವೈಫ್‌ಗಳಿಗೂ ಈಗಿನ ದಾದಿ ಎಎನ್‌ಎಂಗಳಿಗೂ ಇರುವ ವ್ಯತ್ಯಾಸವಾಗಿದೆ.
ಬಾಣಂತಿ – ತಾಯಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಮುಟ್ಟಬೇಕಾದರೆ ಎಎನ್‌ಎಂಗಳ ಸೂಲಗಿತ್ತಿ ಪಾತ್ರವನ್ನು ಪುನರ್‌ಸ್ಥಾಪನೆ ಮಾಡಬೇಕಾಗಿದೆ. ಆದ್ಯತೆಯು ಕುಟುಂಬ ಯೋಜನೆ, ಲಸಿಕೆ ಹಾಕುವುದು ಇತ್ಯಾದಿಗಳಿಂದ ತಾಯಿ ಹಾಗೂ ನವಜಾತ ಶಿಶುವಿನ ಆರೈಕೆಯನ್ನು ಒಳಗೊಂಡು ಸಮಗ್ರ ಪ್ರಜನನ ಆರೋಗ್ಯ ಸೇವೆಯತ್ತ ಹೊರಳಬೇಕಾಗಿದೆ. ಈ ಬದಲಾವಣೆಗಳಿಗೆ ಸುಸ್ಥಿರ ಮತ್ತು ಜಾಗರೂಕ ಯೋಜನೆ ಅಗತ್ಯ, ಜತೆಗೆ ಸಂಪನ್ಮೂಲ ಒದಗಣೆಯೂ ಅಗತ್ಯ. ಸಂಪನ್ಮೂಲಗಳನ್ನು ಹೆಚ್ಚಿಸುವುದರ ಜತೆಗೆ ವ್ಯವಸ್ಥಿತ ಸುಧಾರಣೆಗಳ ಮೂಲಕ ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಸ್ಥಿತಿಯನ್ನು ಉತ್ತಮಪಡಿಸುವುದು ಸಾಧ್ಯ, ಪ್ರಜನನ ಮಕ್ಕಳ ಆರೋಗ್ಯ ಕಾರ್ಯಕ್ರಮಗಳ ಗುರಿಯೂ ಇದೇ ಆಗಿದೆ.
ಪ್ರತೀ ವರ್ಷ ಮೇ 5ರಂದು ವಿಶ್ವ ಮಟ್ಟದಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ಜಾಗತಿಕ ಸೂಲಗಿತ್ತಿಯರ ದಿನವನ್ನು ಉತ್ಸಾಹ ಮತ್ತು ಸಂಭ್ರಮಗಳಿಂದ ಆಚರಿಸಲಾಗುತ್ತದೆ. ಜನರ ಆರೋಗ್ಯದ ಕುರಿತಾಗಿ ಸೂಲಗಿತ್ತಿಯರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ ಗೌರವಿಸುವುದು ಈ ದಿನಾಚರಣೆಯ ಉದ್ದೇಶವಾಗಿದೆ. 1991ರ ಮೇ 5ರಂದು ಮೊತ್ತಮೊದಲ ಬಾರಿಗೆ ಜಾಗತಿಕ ಸೂಲಗಿತ್ತಿಯರ ದಿನವನ್ನು 2000ನೇ ಇಸವಿಯ ಒಳಗಾಗಿ ಎಲ್ಲರಿಗೂ ಸುರಕ್ಷಿತ ಪ್ರಸೂತಿ ಎಂಬ ಧ್ಯೇಯದೊಂದಿಗೆ ಆಚರಿಸಲಾಯಿತು. 2018ರ ಅಂದರೆ ಈ ವರ್ಷದ ಜಾಗತಿಕ ಸೂಲಗಿತ್ತಿಯರ ದಿನದ ಧ್ಯೇಯವು ಗುಣಮಟ್ಟದ ಆರೈಕೆಯೊಂದಿಗೆ ಸೂಲಗಿತ್ತಿಯರು ಮಾರ್ಗದರ್ಶಕರಾಗಿದ್ದಾರೆ ಎಂಬುದಾಗಿದೆ. ಜಾಗತಿಕ ಸೂಲಗಿತ್ತಿಯರ ದಿನದ ಪ್ರಧಾನ ಉದ್ದೇಶವು ಸೂಲಗಿತ್ತಿಯರ ಸೌಹಾರ್ದ, ಅವರ ಜ್ಞಾನ ಮತ್ತು ಕೌಶಲಗಳನ್ನು ವೃದ್ಧಿಸುವುದು ಆಗಿದೆ. ಸುರಕ್ಷಿತ ತಾಯ್ತನಕ್ಕೆ ನೆರವು ನೀಡುವುದಕ್ಕಾಗಿ ಸೂಲಗಿತ್ತಿಯರು ಇನ್ನಷ್ಟು ಚೆನ್ನಾಗಿ ಕೆಲಸ ಮಾಡುವ ನೆಲೆಯಲ್ಲಿ ಅವರಿಗೆ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ ಅವರಿಗೆ ತರಬೇತಿಯನ್ನೂ ನೀಡುವ ನಿಟ್ಟಿನಲ್ಲಿ ಈ ದಿನ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಜಾಗತಿಕ ಸೂಲಗಿತ್ತಿಯರ ದಿನವನ್ನು ಇಡೀ ವಾರಕಾಲ ಅನೇಕ ವಿಚಾರಸಂಕಿರಣ ಗಳು, ಕಾರ್ಯಾಗಾರ ಗಳು ಮತ್ತು ಕೌಶಲ ವೃದ್ಧಿಗಾಗಿ ಸೃಜನಶೀಲ ತರಬೇತಿಗಳನ್ನು ಆಯೋಜಿಸುವ ಮೂಲಕ ಆಚರಿಸಲಾಗುತ್ತದೆ.
– ಮುಂದಿನ ವಾರಕ್ಕೆ
– ಡಾ| ಮರಿಯಾ ಪಾçಸ್
ಅಸಿಸ್ಟೆಂಟ್ ಪ್ರೊಫೆಸರ್,
ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್‌ಮಣಿಪಾಲ ವಿವಿ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.