ಕೋವಿಡ್‌ -19 ಮತ್ತು ಬಾಯಿಯ ಆರೋಗ್ಯ ಪರಸ್ಪರ ಸಂಬಂಧ ಇದೆಯೇ?


Team Udayavani, Aug 29, 2021, 6:00 AM IST

ಕೋವಿಡ್‌ -19 ಮತ್ತು ಬಾಯಿಯ ಆರೋಗ್ಯ ಪರಸ್ಪರ ಸಂಬಂಧ ಇದೆಯೇ?

ವಿಶ್ವವ್ಯಾಪಿಯಾಗಿ ಹರಡುತ್ತಿರುವ ಕೋವಿಡ್‌ -19 ಸಾಂಕ್ರಾಮಿಕ ಕಾಯಿಲೆ ಬಹಳಷ್ಟು ಆತಂಕವನ್ನು ಸೃಷ್ಟಿಸಿದೆ. ಕೋವಿಡ್‌ -19 ವೈರಾಣು ಹಲ್ಲುಗಳು ಮತ್ತು ಬಾಯಿಯ ಅಂಗಾಂಶದ ಮೇಲೆ ಉಂಟುಮಾಡುವ ಅನೇಕ ಪರಿಣಾಮಗಳ ಬಗ್ಗೆ ಹೊಸ ಹೊಸ ಸಂಶೋಧನೆಗಳು ಇನ್ನೂ ನಡೆಯುತ್ತಲೇ ಇವೆ. ಅಧ್ಯಯನದ ಪ್ರಕಾರ ನಾಲಗೆ, ವಸಡು ಮತ್ತು ಬಾಯಿಯ ಕುಹರದ ಜೀವಕೋಶಗಳಲ್ಲಿ ಎಸಿಇ-2 ರಿಸೆಪ್ಟರ್‌ ಕಂಡು ಬರುತ್ತದೆ. ಇದು ವೈರಸ್‌ ಪ್ರವೇಶಿಸಲು ಅನುಮತಿ ನೀಡುವ ಪ್ರೊಟೀನ್‌ ಹಾಗೂ ಇದು ಕೋವಿಡ್‌ -19 ವೈರಾಣುವಿಗೆ ಪ್ರವೇಶ ಬಿಂದುವಾಗಿ ಕೆಲಸ ನಿರ್ವಹಿಸುತ್ತದೆ. ಬಾಯಿಯ ಆರೋಗ್ಯ ಕಡಿಮೆ ಇರುವವರಲ್ಲಿ ಎಸಿಇ-2 ರಿಸೆಪ್ಟರ್‌ಉಪಸ್ಥಿತಿ ಅಧಿಕವಾಗಿ ಕಂಡುಬರುತ್ತದೆ. ಹಾಗಾಗಿ ಬಾಯಿಯ ನೈರ್ಮಲ್ಯದ ಕೊರತೆಯಿಂದ ಸೋಂಕು ಹರಡುವ ಅಪಾಯ ಹೆಚ್ಚು. ಕೋವಿಡ್‌ -19 ಸೋಂಕಿಗೆ ಒಳಗಾದ ಸಮಯದಲ್ಲಿ ಅಥವಾ ಕೋವಿಡ್‌ -19ನಿಂದ ಚೇತರಿಸಿಕೊಂಡ (ಪೋಸ್ಟ್‌ ಕೋವಿಡ್‌) ಅವಧಿಯಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಬಾಯಿಯ ಸಮಸ್ಯೆಗಳನ್ನು ಇತ್ತೀಚೆಗಿನ ಸಂಶೋಧನೆಯ ಆಧಾರದ ಮೇರೆಗೆ ಪ್ರಸ್ತುತಪಡಿಸುವುದೇ ಈ ಲೇಖನದ ಉದ್ದೇಶ.

ಅಹಿತಕರ ರುಚಿ (Disguesia)
ಕೆಟ್ಟ ಉಸಿರು, ಬಾಯಿಯಲ್ಲಿ ರುಚಿ ಗ್ರಹಿಸಲು ಅಸಾಧ್ಯವಾಗದಿರುವುದು ಅಥವಾ ಅಹಿತಕರ ರುಚಿ ಕೊರೋನಾ ರೋಗಿಗಳಲ್ಲಿ ಕಂಡುಬರುವಂತಹ ಮೊತ್ತಮೊದಲ ಲಕ್ಷಣ.

ಒಣ ಬಾಯಿಯ ಸಮಸ್ಯೆ
(Xerostomia)
ಬಾಯಿ ಯನ್ನು ತೇವವಾಗಿ ಡಲು ಬೇಕಾದ ಲಾಲಾರಸದ ಕೊರತೆಯಿಂದ ಒಣ ಬಾಯಿಯ ಸಮಸ್ಯೆ ಉಂಟಾಗುತ್ತದೆ. ಇದು ಕೋವಿಡ್‌ -19ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಕೋವಿಡ್‌ ವೈರಾಣು ಲಾಲಾರಸ ಸ್ರವಿಸುವ ಗ್ರಂಥಿಗಳಿಗೆ ಸೋಂಕನ್ನು ಉಂಟುಮಾಡುತ್ತದೆ ಎಂದು ಇತ್ತೀಚೆಗಿನ ಅಧ್ಯಯನ ವರದಿ ಮಾಡಿದೆ. ಇದಲ್ಲದೆ ಕೆಲವರಿಗೆ ಸತತವಾಗಿ ಮಾಸ್ಕ್ ಧರಿಸುವುದರಿಂದ ಉಸಿರಾಟದ ತೊಂದರೆಯಾಗಿ ಬಾಯಿಯ ಮೂಲಕ ಶ್ವಾಸ ತೆಗೆದುಕೊಂಡಾಗ ಬಾಯಿಯಲ್ಲಿಯ ಲಾಲಾರಸ ಒಣಗಿ ಒಣ ಬಾಯಿಯ ಸಮಸ್ಯೆ ಉಂಟಾಗುತ್ತದೆ.

ಬಾಯಿಯ ಹುಣ್ಣುಗಳು (Oral ulcers)
ಕೋವಿಡ್‌ ವೈರಾಣು ದೇಹದ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಬಾಯಿಯ ಅಂಗಾಂಶದ ಸುತ್ತ ಇರುವ ರಕ್ತ ನಾಳಗಳನ್ನು ನಾಶ ಮಾಡಿ ಜೀವಕಣಗಳಿಗೆ ಆಮ್ಲಜನಕದ ಕೊರತೆ ಉಂಟುಮಾಡುತ್ತದೆ. ಇದರಿಂದ ನಾಲಗೆ ಹಾಗೂ ವಸಡುಗಳಲ್ಲಿ ಹುಣ್ಣುಗಳು ಕಂಡುಬರುತ್ತವೆ. ಹುಣ್ಣುಗಳು ಎರಡು ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ಕೂಡಲೇ ತಜ್ಞ ದಂತ ವೈದ್ಯರಲ್ಲಿ ಸಮಾಲೋಚಿಸಬೇಕು.

ಬಾಯಿಯಲ್ಲಿ ಬಿಳಿ ಅಥವಾ
ಕೆಂಪು ಮಚ್ಚೆಗಳು (COVID Tongue)
ಕೋವಿಡ್‌ -19 ಸೋಂಕಿಗೆ ಒಳಗಾದವರಲ್ಲಿ ನಾಲಗೆ ಮತ್ತು ಬಾಯಿಯ ಮೇಲ್ಭಾಗದಲ್ಲಿ ಬಿಳಿ ಅಥವಾ ಕೆಂಪು ಮಚ್ಚೆಗಳು ಕಂಡುಬರಬಹುದು. ಇದರಿಂದ ವಿಪರೀತ ನೋವು, ಸೋಂಕು ಹಾಗು ಸುಡುವ ಸಂವೇದನೆ ಉಂಟಾಗಬಹುದು. ಆದ್ದರಿಂದ ಈ ಲಕ್ಷಣಗಳು ಕಂಡುಬಂದರೆ ಕೂಡಲೇ ದಂತ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.

ಹಲ್ಲಿನ ಸಂವೇದನೆ (Hypersensitivity)
ಹಲ್ಲುಗಳನ್ನು ರಕ್ಷಿಸುವ ಗಟ್ಟಿಯಾದ ಹೊರಪದರ (ಎನಾಮಲ್‌) ದುರ್ಬಲಗೊಂಡಾಗ ಹಲ್ಲಿನ ಸಂವೇದನೆ ಉಂಟಾಗುತ್ತದೆ. ಇದರಿಂದ ತಣ್ಣನೆ ಅಥವಾ ಬಿಸಿ ಆಹಾರ ಪದಾರ್ಥಗಳ ಸೇವನೆಯಿಂದ ಸೂಕ್ಷ್ಮತೆ, ಸಿಹಿ ಮತ್ತು ಆಮ್ಲಿಯ ಆಹಾರದಿಂದ ಸಂವೇದನೆ ಕಂಡುಬರುತ್ತದೆ.

ವಸಡಿನ ಉರಿಯೂತ (Gingivitis)
ಕೋವಿಡ್‌-19ನಿಂದ ದುರ್ಬಲಗೊಂಡು ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ತನ್ನ ಮೌಖೀಕ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಸಾಧ್ಯವಾಗದೆ ಇದ್ದಾಗ ಹಲ್ಲಿನ ಸುತ್ತ ಪ್ಲೇಕ್‌ ಹಾಗೂ ಕ್ಯಾಲ್ಕುಲಸ್‌ (ಸೂಕ್ಷ್ಮಾಣುಯುಕ್ತ ಗಟ್ಟಿಯಾದ ಪದರ) ಬೆಳೆಯುತ್ತದೆ. ಇದರಿಂದ ಬಾಯಿಯ ದುರ್ವಾಸನೆ, ವಸಡಿನ ಉರಿಯೂತ, ಬ್ರಷ್‌ ಮಾಡಿದಾಗ ರಕ್ತ ಬರುವುದು, ವಸಡು ಕೆಂಪಾಗಿ ಊದಿಕೊಳ್ಳುವುದು ಕಂಡುಬರುತ್ತದೆ.ಕೋವಿಡ್‌-19 ಸೋಂಕುಪೀಡಿತ ವ್ಯಕ್ತಿಗೆ ಬಾಯಿಯ ಸಮಸ್ಯೆಗಳು ಬರುವ ಸಂಭವ ಹೆಚ್ಚು. ಹಾಗಾಗಿ ಈ ಮೇಲ್ಕಂಡ ಯಾವುದೇ ಸಮಸ್ಯೆ ಇದ್ದರೆ ಕೂಡಲೇ ದಂತವೈದ್ಯರಲ್ಲಿ ಸಲಹೆ ಪಡೆಯಬೇಕು. ದಿನನಿತ್ಯದ ಚಟುವಟಿಕೆಗಳನ್ನು ಆರಂಭಿಸುವ ತರಾತುರಿಯಲ್ಲಿ ಹಲ್ಲಿನ ಆರೋಗ್ಯವನ್ನು ನಾವು ನಿರ್ಲಕ್ಷಿಸಬಾರದು. ಬಾಯಿಯ ಸೋಂಕಿನಿಂದ ಸೂಕ್ಷ್ಮಾಣು ಜೀವಿಗಳು ನಮ್ಮ ರಕ್ತಸಂಚಾರಕ್ಕಿಳಿದು ಅನೇಕ ರೋಗಗಳು ಉಂಟಾಗಬಹುದು. ಹಲ್ಲು, ವಸಡುಗಳನ್ನು ಶುಚಿಯಾಗಿ, ಆರೋಗ್ಯಪೂರ್ಣವಾಗಿ ಇರಿಸಿಕೊಳ್ಳುವುದು ದಿನನಿತ್ಯದ ಚಟುವಟಿಕೆಯಲ್ಲಿ ಅವಿಭಾಜ್ಯ ಅಂಗವಾಗಿರಬೇಕು.

-ಡಾ| ನೀತಾ ಶೆಣೈ
ಉಪನ್ಯಾಸಕಿ, ಕನ್ಸರ್ವೇಟಿವ್‌ ಡೆಂಟಿಸ್ಟ್ರಿ ಮತ್ತು ಎಂಡೊಡಾಂಟಿಕ್ಸ್‌ ವಿಭಾಗ,
ಮಣಿಪಾಲ ದಂತವೈದ್ಯಕೀಯ ಮಹಾವಿದ್ಯಾಲಯ, ಮಾಹೆ, ಮಣಿಪಾಲ

 

ಟಾಪ್ ನ್ಯೂಸ್

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vishwaprabha Award 2025 to Actor Naveen D. Padil

Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.