ಮಗುವಿನ ಭಾಷಿಕ ಬೆಳವಣಿಗೆ : ನಿಖರ ಸಮಯ ಎಂಬುದಿದೆಯೇ?
Team Udayavani, Nov 22, 2020, 7:34 PM IST
ಸಾಂದರ್ಭಿಕ ಚಿತ್ರ
ಪ್ರತೀ ವರ್ಷ ಡಿಸೆಂಬರ್ ತಿಂಗಳ ಮೊದಲ ವಾರವನ್ನು ರಾಷ್ಟ್ರೀಯವಾಗಿ “ಮಾತು ಮತ್ತು ಶ್ರವಣ ಅರಿವಿನ ಸಪ್ತಾಹ’ವಾಗಿ ಆಚರಿಸುತ್ತೇವೆ. ಈ ವಾರವು ಭಾಷೆ, ಮಾತು ಮತ್ತು ಶ್ರವಣ ಶಕ್ತಿಯ ಕಲ್ಯಾಣ ಮತ್ತು ಇವುಗಳ ಸಮಸ್ಯೆಗಳ ಕುರಿತಾಗಿ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದಕ್ಕಾಗಿ ಮೀಸಲಾಗಿದೆ. ಪುಟ್ಟ ಮಕ್ಕಳಲ್ಲಿ ಉತ್ತಮ ಮಾತು ಮತ್ತು ಭಾಷೆಯ ಬೆಳವಣಿಗೆಯನ್ನು ಹೇಗೆ ಪೋಷಿಸಬೇಕು ಎಂಬ ಬಗ್ಗೆ ಹೆತ್ತವರಿಗೆ ಕೆಲವಾರು ಸಲಹೆಗಳು ಇಲ್ಲಿವೆ.
ಸಾಮಾನ್ಯ ಮನುಷ್ಯನೊಬ್ಬ ಒಂದು ದಿನದಲ್ಲಿ ಶೇ.50ರಿಂದ ಶೇ.70 ಭಾಗವನ್ನು ಇತರರೊಂದಿಗೆ ಸಂಭಾಷಣೆಯಲ್ಲಿ ಕಳೆಯುತ್ತಾನೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಈಗ ನಾವು ಸಂವಹನ ನಡೆಸಲು ಅಶಕ್ತರಾದರೆ ಎಷ್ಟು ಏಕಾಂಗಿತನ ಮತ್ತು ಪ್ರತಿಕೂಲ ಪರಿಣಾಮವನ್ನು ಅನುಭವಿಸಬೇಕಾದೀತು ಎಂಬುದನ್ನು ಕಲ್ಪಿಸಿಕೊಳ್ಳಿ. ಮನುಷ್ಯನಿಗೆ ಸಾಮಾಜಿಕವಾಗಿ ಜೀವಿಸುವುದಕ್ಕೆ ಮಾತು ಮತ್ತು ಭಾಷಿಕ ಕೌಶಲಗಳು ಅತ್ಯಂತ ಮೂಲಭೂತ ಅಗತ್ಯಗಳಾಗಿವೆ. ಮನುಷ್ಯನ ಭಾಷೆ ಮತ್ತು ಮಾತುಕತೆಯ ಕೌಶಲಗಳಲ್ಲಿ ಪ್ರಮುಖ ಭಾಗವು ಜೀವಿತದ ಆರಂಭಿಕ ಕಾಲಘಟ್ಟದಲ್ಲಿ, ಅಂದರೆ ಜನನದಿಂದ 5 ವರ್ಷಗಳ ವರೆಗಿನ ಅವಧಿಯಲ್ಲಿ ಬೆಳವಣಿಗೆ ಕಾಣುತ್ತವೆ. ಹೀಗಾಗಿ ಈ ಐದು ವರ್ಷಗಳನ್ನು “ನಿರ್ಣಾಯಕ ಕಾಲಘಟ್ಟ’ ಎಂಬುದಾಗಿ ಕರೆಯುತ್ತಾರೆ. ಈ ನಿರ್ಣಾಯಕ ಕಾಲಘಟ್ಟದಲ್ಲಿ ಮೆದುಳು ಅತ್ಯದ್ಭುತ ಗ್ರಹಣ ಸಾಮರ್ಥ್ಯ ಮತ್ತು ನಮನೀಯತೆಯನ್ನು ಹೊಂದಿರುವುದರಿಂದ ಮಕ್ಕಳು ಈ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಭಾಷಿಕ ಪ್ರಗತಿಯನ್ನು ಅನುಭವಿಸುತ್ತಾರೆ. ಇದೊಂದು ಪುಟ್ಟ ಕಿಟಕಿಯಂತಹ ಕಾಲಾವಧಿಯಾಗಿದ್ದು, ಈ ಅವಧಿಯಲ್ಲಿ ಮಕ್ಕಳ ಮಾತು ಮತ್ತು ಭಾಷಿಕ ಬೆಳವಣಿಗೆ ಚೆನ್ನಾಗಿ ನಡೆಯುವುದಕ್ಕಾಗಿ ಶ್ರವಣ, ದೃಶ್ಯ ಮತ್ತು ಅನುಭವ (ಸ್ಪರ್ಶ) ವಿಚಾರದಲ್ಲಿ ಸಮೃದ್ಧ ವಾತಾವರಣವನ್ನು ಅವರಿಗೆ ನಾವು ಕಲ್ಪಿಸಿಕೊಡಬೇಕಾಗಿದೆ. ಐದು ವರ್ಷಗಳ ಬಳಿಕ ಏನಾಗುತ್ತದೆ? ಮಕ್ಕಳು ಕಲಿಯುವುದನ್ನು ನಿಲ್ಲಿಸುತ್ತಾರೆಯೇ? ಖಂಡಿತ ಇಲ್ಲ. ಆದರೆ ಮಕ್ಕಳು ಭಾಷೆ ಮತ್ತು ಮಾತನ್ನು ಗ್ರಹಿಸುವ ಸಾಮರ್ಥ್ಯ ಐದು ವರ್ಷಗಳ ಬಳಿಕ ಕ್ರಮೇಣ ಕಡಿಮೆಯಾಗುತ್ತ ಹೋಗುತ್ತದೆ.
ಮಗುವಿನ ಆರಂಭಿಕ ನಿರ್ಣಾಯಕ ವರ್ಷಗಳಲ್ಲಿ ಅದರ ಹೆತ್ತವರಿಂದ ಮಾತು ಮತ್ತು ಭಾಷಿಕ ಬೆಳವಣಿಗೆಯ ತಳಪಾಯ ಎಷ್ಟು ದೃಢವಾಗಿ, ಗುಣಮಟ್ಟದ್ದಾಗಿ ಅಳವಡಿಕೆಯಾಗಿದೆ ಎಂಬುದನ್ನು ಆಧರಿಸಿ ಮಗುವಿನ ಭಾಷೆ ಮತ್ತು ಮಾತಿನ ಕೌಶಲಗಳ ಬೆಳವಣಿಗೆ ಆಗುತ್ತದೆ. ಶ್ರವಣ ಶಕ್ತಿ ನಷ್ಟ, ಮಾತಿನ ಸಮಸ್ಯೆ, ಆಟಿಸಮ್, ಅಪ್ರಾಕ್ಸಿಯಾ, ಭಾಷೆಯ ನಿರ್ದಿಷ್ಟ ವೈಕಲ್ಯ, ತೊದಲು, ಬುದ್ಧಿಮತ್ತೆಯ ಸಮಸ್ಯೆಯಂತಹ ಅನೇಕ ಅಭಿವೃದ್ಧಿಗೆ ಸಂಬಂಧಿಸಿದ ತೊಂದರೆಗಳು ನಿರ್ಣಾಯಕ ಕಾಲಘಟ್ಟದಲ್ಲಿ ಮಾತು ಮತ್ತು ಭಾಷೆಯ ಸಹಜ ಅಭಿವೃದ್ಧಿಗೆ ತೊಡಕು ಉಂಟುಮಾಡಬಹುದು. ಇವುಗಳನ್ನು ಆದಷ್ಟು ಬೇಗನೆ ಪತ್ತೆ ಹಚ್ಚಿ ಸೂಕ್ತ ಸಮಯದಲ್ಲಿ ಚಿಕಿತ್ಸೆಯನ್ನು ಒದಗಿಸಿದರೆ ಸಮಸ್ಯೆಯಿಂದಾಗುವ ಪ್ರತಿಕೂಲ ಪರಿಣಾಮವು ಅತೀ ಕನಿಷ್ಠ ಮಟ್ಟದಲ್ಲಿ ಇರುವಂತೆ ನೋಡಿಕೊಳ್ಳಬಹುದು ಹಾಗೂ ನಿರ್ಣಾಯಕ ಕಾಲಘಟ್ಟವನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಬಹುದು.
ಸಹಜವಾದ ಶ್ರವಣ, ಮಾತು ಮತ್ತು ಭಾಷಿಕ ಬೆಳವಣಿಗೆಯ ಮೈಲಿಗಲ್ಲುಗಳ ಬಗ್ಗೆ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ಅವರ ಜತೆಗೆ ಸಮಾಲೋಚನೆ ನಡೆಸಿ ನಿಮ್ಮ ಅರಿವನ್ನು ಹೆಚ್ಚಿಸಿಕೊಳ್ಳಿ. ಮಗುವಿನ ಬೆಳವಣಿಗೆಯ ಮೇಲೆ ನಿಗಾ ಇರಿಸುವುದಕ್ಕಾಗಿ ನಿಯಮಿತ ಪರೀಕ್ಷೆಯನ್ನೂ ಮಾಡಿಸಿಕೊಳ್ಳಬಹುದು. ಮಗುವಿನ ನಿರ್ಣಾಯಕ ಅವಧಿಯಲ್ಲಿ ಭಾಷೆ ಮತ್ತು ಮಾತಿನ ಕೌಶಲಗಳು ಚೆನ್ನಾಗಿ ಅಭಿವೃದ್ಧಿ ಹೊಂದುವಂತೆ ಮಾಡುವುದು ಹೇಗೆ ಎಂಬ ವಿಚಾರವಾಗಿ ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್ ನಿಮಗೆ ಮಾರ್ಗದರ್ಶನ ನೀಡಬಲ್ಲರು.
ಪ್ರತೀ ಮಗುವಿನ ಜತೆಗೆ ಅತ್ಯಂತ ನಿಕಟ ಸಂಪರ್ಕ ಮತ್ತು ಸಂಬಂಧವನ್ನು ಹೊಂದುವುದು ಅದರ ತಂದೆ ಮತ್ತು ತಾಯಿ. ಹೀಗಾಗಿ ಮಗುವಿನ ಭಾಷೆ ಮತ್ತು ಮಾತಿನ ಸಾಮರ್ಥ್ಯಗಳನ್ನು ರೂಪಿಸುವ ಹೊಣೆಗಾರಿಕೆಯೂ ಅವರ ಮೇಲಿರುತ್ತದೆ. ಹೆತ್ತವರು ಅತ್ಯದ್ಭುತ ಗುರುಗಳಾಗಿರುತ್ತಾರೆ. ಈ ನಡುವೆಯೇ ಅವರು ಅರಿವಿಲ್ಲದೆಯೇ ಮಕ್ಕಳ ಭಾಷೆ ಮತ್ತು ಮಾತಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಕೆಲವು ತಪ್ಪುಗಳನ್ನು ಮಾಡುವ ಸಾಧ್ಯತೆಗಳಿರುತ್ತವೆ. ಈ ಪ್ರಮಾದಗಳಿಂದಾಗಿ ಮಕ್ಕಳ ದೈಹಿಕ, ಭಾವನಾತ್ಮಕ ಮತ್ತು ಗ್ರಹಣ ಸಾಮರ್ಥ್ಯದ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆಗಳಿರುತ್ತವೆ. ಹೆತ್ತವರು ಮಾಡುವ ತಪ್ಪುಗಳೇನು ಮತ್ತು ಅದಕ್ಕೆ ಪರ್ಯಾಯವಾಗಿ ಏನು ಮಾಡಬಹುದು ಎಂಬುದನ್ನು ನೋಡೋಣ.
ನೀವು ಮಾಡಬಹುದಾದದ್ದು :
- ನಿಮ್ಮ ಮಗುವಿನ ಶ್ರವಣ, ಭಾಷೆ ಮತ್ತು ಮಾತಿನ ಬೆಳವಣಿಗೆಯ ಮೇಲೆ ನಿಗಾ ಇರಿಸದೆ ಇರುವುದು.
- “ನಿಮ್ಮ ಮಗು ಐದು ವರ್ಷಗಳಲ್ಲಿ ತಾನಾಗಿ ಮಾತನಾಡಲು ಆರಂಭಿಸುತ್ತದೆ’ ಎಂಬ ಯಾರದೋ ಉಪದೇಶವನ್ನು ನಂಬಿ ಮಗು ಇಂದಲ್ಲ ನಾಳೆ ಮಾತನಾಡಬಹುದು ಎಂದು ಕಾಯುತ್ತಿರುವುದು.
- ಮನೆಗೆಲಸ/ ಉದ್ಯೋಗಕ್ಕೆ ಅತಿಯಾಗಿ ಸಮಯ ವ್ಯಯಿಸಿ ಮಗುವಿನ ಕಡೆಗೆ ಗುಣಾತ್ಮಕ ಸಮಯವನ್ನು ವಿನಿಯೋಗಿಸದೆ ಇರುವುದು.
- ನೈಜ ವ್ಯಕ್ತಿಗಳ ಜತೆಗೆ ಮಾತುಕತೆ ಮತ್ತು ನೈಜ ವಸ್ತುಗಳನ್ನು ಭೌತಿಕವಾಗಿ ಅನುಭವಿಸುವ ಬದಲು ಡಿಜಿಟಲ್ ಗ್ಯಾಜೆಟ್ (ಟಿವಿ/ ಮೊಬೈಲ್) ನೋಡುತ್ತ ವ್ಯರ್ಥವಾಗಿ ಕಾಲ ಕಳೆಯುವುದಕ್ಕೆ ಅನುಮತಿ ನೀಡುವುದು.
- ಹೊಸ ವಿಚಾರಗಳನ್ನು, ಸಂಗತಿಗಳನ್ನು ಅನುಭವಿಸುವುದರಿಂದ ಮಗುವನ್ನು ಅತಿಯಾಗಿ ರಕ್ಷಿಸುವುದು, ನಿರ್ಬಂಧಿಸುವುದು.
- ನಿಮ್ಮ ಮಗುವಿಗೆ ಸಂವಹನ ನಡೆಸಲು ಅವಕಾಶ ನೀಡದೆ ನೀವಾಗಿಯೇ ಎಲ್ಲವನ್ನೂ ಒದಗಿಸಿಕೊಡುವುದು.
- ಮಗುವಿನ ಜತೆಗೆ ಹಿರಿಯರಂತೆ ಮಾತನಾಡುವುದು ಅಥವಾ ಬೆಳೆದ ಮಗುವಿನ ಜತೆಗೆ ಮಕ್ಕಳಂತೆ ಮಾತನಾಡುವುದು.
- ಮಾತನಾಡಲು ಮಗುವಿಗೆ ಸಾಕಷ್ಟು ಅವಕಾಶಗಳನ್ನು ಒದಗಿಸದೆ ಇರುವುದು.
- ಅತಿಯಾಗಿ ಪ್ರತಿಕ್ರಿಯಿಸುವುದು ಮತ್ತು ನಿಮ್ಮ ಮಗುವನ್ನು ಇತರರ ಮಕ್ಕಳ ಜತೆಗೆ ಹೋಲಿಸುವುದು.
ಪರ್ಯಾಯವಾಗಿ ಮಾಡಬೇಕಾದ್ದು :
- ಮಗುವಿನ ಭಾಷೆ, ಶ್ರವಣ, ಮಾತಿನ ಬೆಳವಣಿಗೆಯ ಜತೆಗೆ ಚಲನೆಯ ಮೈಲಿಗಲ್ಲುಗಳ ಬಗ್ಗೆಯೂ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.
- ಭಾಷಿಕ ಮತ್ತು ಮಾತಿನ ಮೈಲಿಗಲ್ಲುಗಳ ಅನುಸಾರವಾಗಿ ನಿಮ್ಮ ಮಗು ಕೌಶಲಗಳನ್ನು ಸಾಧಿಸದೆ ಇದ್ದರೆ ತಡಮಾಡದೆ ಅದರ ಸಾಮರ್ಥ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಈ ನಿರ್ಣಾಯಕ ಅವಧಿ ಕೈತಪ್ಪದಂತೆ ಎಚ್ಚರಿಕೆ ವಹಿಸಿ.
- ಮಗುವಿನ ಜತೆಗೆ ಕುಟುಂಬವಿಡೀ ಆಟವಾಡುವ ಸಮಯವನ್ನು ನಿಗದಿಪಡಿಸಿ, ಅರ್ಥವತ್ತಾದ ಆಟಗಳನ್ನು ಆಡುವುದು.
- ಅತಿ ರಕ್ಷಣೆ, ನಿರ್ಬಂಧಗಳ ಬದಲಿಗೆ ಮಗುವಿಗೆ ಕಾರಣ ಮತ್ತು ಪರಿಣಾಮಗಳ ಬಗ್ಗೆ ತಿಳಿಸಿಕೊಡಿ.
- ಡಿಜಿಟಲ್ ಗ್ಯಾಜೆಟ್‌ಗಳಲ್ಲಿ ಕಳೆಯುವ ಸಮಯಕ್ಕೆ ಮಿತಿ ಹಾಕಿ ಮತ್ತು ಅದನ್ನು ಕಟ್ಟುನಿಟ್ಟಾಗಿ ಪಾಲಿಸಿ. ಇದು ಮಗು ಮತ್ತು ಹೆತ್ತವರಿಗೆ ಸಮಾನವಾಗಿ ಅನ್ವಯಿಸಲಿ.
- ಮಗು ತನಗೇನು ಬೇಕು ಎಂಬುದನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವುದನ್ನು ರೂಢಿಸಿಕೊಳ್ಳಿ. ಮಗುವಿಗೆ ಅದು ಸಾಧ್ಯವಾಗದೆ ಇದ್ದರೆ ಆಯ್ಕೆಗಳನ್ನು ಒದಗಿಸಿ.
- ನಿಮ್ಮ ಮಗು ಪರಿಣಾಮಕಾರಿಯಾಗಿ ಮಾತನಾಡಲು ಸಮರ್ಥವಾಗುವಂತೆ ಮಾಡುವ ಗುರಿಯನ್ನು ಗಮನದಲ್ಲಿ ಇರಿಸಿಕೊಂಡು ಮಗುವಿನ ಜತೆಗೆ ಸಂಭಾಷಿಸಿ.
- ಮಗು ಅರ್ಥವಿಲ್ಲದ ಮಾತುಗಳನ್ನು ಆಡಿದರೂ ಅದು ಹೇಳಲು ಬಯಸುತ್ತಿರುವುದು ಏನನ್ನು ಎಂಬುದಕ್ಕೆ ಗಮನ ನೀಡಿ.
- ಮಗು ತನ್ನ ಇನ್ನಷ್ಟು ಬೆಳವಣಿಗೆಯ ಅಗತ್ಯವನ್ನು ಮನದಟ್ಟು ಮಾಡಿಕೊಳ್ಳುವುದಕ್ಕಾಗಿ ಮತ್ತು ಆ ನಿಟ್ಟಿನಲ್ಲಿ ಮಗುವಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಅದು ಪ್ರದರ್ಶಿಸುವ ಪ್ರತೀ ಉತ್ತಮ ನಡತೆಯನ್ನೂ ಪುರಸ್ಕರಿಸಿ.
ಡಾಸ್ಮಿನ್ ಎಫ್. ಡಿ’ಸೋಜಾ
ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ,
ಕೆಎಂಸಿ ಕಾಲೇಜು ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.