ವಯಸ್ಕರು ಮತ್ತು ಹಿರಿಯ ನಾಗರಿಕರಲ್ಲಿ ಮೂತ್ರಪಿಂಡ ಕಾಯಿಲೆಗಳು
Team Udayavani, May 13, 2018, 6:35 AM IST
ಹಿಂದಿನ ವಾರದಿಂದ- ಮಧುಮೇಹಿಗಳು ತಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಸೂಕ್ತ ಪಥ್ಯಾಹಾರ ಅನುಸರಣೆ, ಔಷಧ ಹಾಗೂ ನಿಯಮಿತ ವ್ಯಾಯಾಮದಿಂದ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ಮಧುಮೇಹಿಗಳು ಮೂತ್ರಪಿಂಡ ಕಾಯಿಲೆಗಳಿಗೆ ತುತ್ತಾಗುವ ಅಪಾಯ ಅತ್ಯಂತ ಹೆಚ್ಚು; ಆದ್ದರಿಂದ ಅವರು ಮೂತ್ರದಲ್ಲಿ ವಿಸರ್ಜನೆಯಾಗುವ ಪ್ರೊಟೀನ್ ತಪಾಸಣೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು ಅಗತ್ಯ, ಜತೆಗೆ ರಕ್ತದಲ್ಲಿ ಯೂರಿಯಾ ಹಾಗೂ ಸೀರಮ್ ಕ್ರಿಯಾಟಿನಿನ್ ಮಟ್ಟ ಪರೀಕ್ಷೆಯ ಮೂಲಕ ಮೂತ್ರಪಿಂಡ ಕಾರ್ಯಚಟುವಟಿಕೆಯನುಯನ ವಿಶ್ಲೇಷಿಸಿಕೊಳ್ಳಬೇಕು. ಈ ತಪಾಸಣೆಗಳಲ್ಲಿ ವ್ಯತ್ಯಸ್ಥ ಫಲಿತಾಂಶ ಕಂಡುಬಂದಿರುವವರು ಮೂತ್ರಪಿಂಡ ತಜ್ಞರನ್ನು ಆದಷ್ಟು ಶೀಘ್ರವಾಗಿ ಸಂಪರ್ಕಿಸಬೇಕು.
ಅಧಿಕ ರಕ್ತದೊತ್ತಡ ಉಳ್ಳವರು ಸೂಕ್ತ ಔಷಧೋಪಚಾರದ ಮೂಲಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು.
ಮೂತ್ರಪಿಂಡ ಕಾಯಿಲೆ ಪ್ರಗತಿ ಹೊಂದುವುದನ್ನು ತಡೆಯಲು ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ವರ್ಜಿಸುವುದು ಅತ್ಯಂತ ಮುಖ್ಯ.
ಮೂತ್ರಪಿಂಡ ಕಾಯಿಲೆಗಳು ಮುಂದುವರಿದ ಹಂತದಲ್ಲಿದ್ದಾಗ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಅಗತ್ಯವಾಗಬಹುದು. ವಯಸ್ಸು ಹಾಗೂ ಇತರ ಕಾರಣಗಳಿಂದಾಗಿ ವಯಸ್ಕರು ಹಾಗೂ ಹಿರಿಯ ನಾಗರಿಕರಲ್ಲಿ ಡಯಾಲಿಸಿಸ್ ಹಾಗೂ ಮೂತ್ರಪಿಂಡ ಕಸಿ ಎರಡೂ ಸವಾಲಿನ ಪರಿಹಾರ ಮಾರ್ಗಗಳಾಗಿರುತ್ತವೆ. ಆದರೆ ಹಿಮೊಡಯಾಲಿಸಿಸ್, ಪೆರಿಟೋನಿಯಲ್ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಸರ್ವಥಾ ಅಸಾಧ್ಯ ಎಂದೇನಲ್ಲ. ಡಯಾಲಿಸಿಸ್‌ಗೆ ಒಳಪಟ್ಟಾಗ ರೋಗಿಗಳ ಒಟ್ಟಾರೆ ಆರೋಗ್ಯ ಹಾಗೂ ಸೌಖ್ಯ ಮತ್ತು ಜೀವನ ಮಟ್ಟದಲ್ಲಿ ಉತ್ತಮ ಪ್ರಗತಿ ಕಂಡುಬರುವುದು ಸಾಧ್ಯ. ಆದ್ದರಿಂದ ವಯಸ್ಕರು ಮತ್ತು ಹಿರಿಯರು ಡಯಾಲಿಸಿಸ್ ಅನ್ನು ಅಸಾಧ್ಯವೆಂದು ಪರಿಗಣಿಸದೆ ಈ ವಿಚಾರದಲ್ಲಿ ಮೂತ್ರಪಿಂಡ ತಜ್ಞರ ಮಾರ್ಗದರ್ಶನವನ್ನು ಪಡೆಯಬೇಕು. ಕೆಲವು ಆಯ್ದ ವಯಸ್ಕರಲ್ಲಿ ಮೂತ್ರಪಿಂಡ ಕಸಿಯೂ ಸಾಧ್ಯ ಹಾಗೂ ಸಾಧ್ಯವಾದಲ್ಲೆಲ್ಲ ಇದನ್ನೂ ಪ್ರೋತ್ಸಾಹಿಸಬೇಕು.
ಒಟ್ಟಾರೆಯಾಗಿ ಹಿರಿಯರು ಹಾಗೂ ವಯಸ್ಕರು ಮೂತ್ರಪಿಂಡ ಕಾಯಿಲೆಗಳ ಅಪಾಯ, ಚಿಹ್ನೆಗಳು ಹಾಗೂ ಲಕ್ಷಣಗಳ ಬಗ್ಗೆ ಅರಿವುಳ್ಳವರಾಗಿದ್ದು, ಶಂಕೆ ಮೂಡಿದಾಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯುವುದು ಅತ್ಯಂತ ಪ್ರಾಮುಖ್ಯವಾದುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.