ಆತ್ಮಹತ್ಯೆ ತಡೆಯೋಣ


Team Udayavani, Oct 13, 2019, 4:00 AM IST

Suicide

ಸಾಂದರ್ಭಿಕ ಚಿತ್ರ.

ಆತ್ಮಹತ್ಯೆ ತಡೆಗಟ್ಟುವುದು ಒಂದು ಜಾಗತಿಕ ಸವಾಲು. ಜಗತ್ತಿನಾದ್ಯಂತ ಎಲ್ಲ ವಯಸ್ಸಿನವರಲ್ಲಿ ಸಾವಿಗೆ ಕಾರಣಗಳ ಪಟ್ಟಿಯಲ್ಲಿ ಮೊದಲ 20 ಸ್ಥಾನಗಳಲ್ಲಿ ಆತ್ಮಹತ್ಯೆ ಪ್ರತಿವರ್ಷ ಕಂಡುಬರುತ್ತದೆ.

ಇದು ಸುಮಾರು 8 ಲಕ್ಷ ಜನರ ಸಾವಿಗೆ ಕಾರಣವಾಗಿದೆ ಅಂದರೆ, ಸರಿಸುಮಾರು ಪ್ರತಿ 40 ಸೆಕೆಂಡಿಗೆ ಒಂದು ಆತ್ಮಹತ್ಯೆ ನಡೆಯುತ್ತಿದೆ ಎಂದರ್ಥ. ಜಾಗತಿಕ
ಮಟ್ಟದಲ್ಲಿ ಪ್ರತೀ ಒಂದು ಲಕ್ಷ ಜನಸಂಖ್ಯೆಯಲ್ಲಿ 11.4 ಜನ (15/1 ಲಕ್ಷ ಪುರುಷರಲ್ಲಿ ಮತ್ತು 8/ಲಕ್ಷ ಮಹಿಳೆಯರಲ್ಲಿ) ಆತ್ಮಹತ್ಯೆಗೀಡಾಗುತ್ತಾರೆ. 15ರಿಂದ 24ನೇ ವಯಸ್ಸಿನಲ್ಲಿ ಸಂಭವಿಸುವ ಸಾವುಗಳಿಗೆ ಮುಖ್ಯ ಕಾರಣ ಆತ್ಮಹತ್ಯೆ. ಪ್ರಪಂಚದಾದ್ಯಂತ ಮಹಿಳೆಯರಿಗಿಂತ ಹೆಚ್ಚಾಗಿ ಪುರುಷರಲ್ಲಿ ಆತ್ಮಹತ್ಯೆ ಕಂಡುಬಂದಿದೆ. 2012ರಲ್ಲಿ ಪ್ರಪಂಚದ ಶೇ.76ರಷ್ಟು ಆತ್ಮಹತ್ಯೆಗಳು ಕೆಳಮತ್ತು ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ ನಡೆದಿದ್ದವು ಮತ್ತು ಇವುಗಳಲ್ಲಿ ಶೇ. 39 ಆತ್ಮಹತ್ಯೆಗಳು ದಕ್ಷಿಣ ಏಶ್ಯಾದಲ್ಲಿ ನಡೆದಿದ್ದವು. ವಿಶ್ವ ಆರೋಗ್ಯ ಸಂಸ್ಥೆಯ ಸುಮಾರು 25 ದೇಶಗಳಲ್ಲಿ ಆತ್ಮಹತ್ಯೆಯನ್ನು ಕಾನೂನಿನ ಪ್ರಕಾರ ಒಂದು ಅಪರಾಧವೆಂದು ಪರಿಗಣಿಸಲಾಗುತ್ತದೆ. ಇನ್ನು 20 ದೇಶಗಳಲ್ಲಿ
ಶರಿಯಾ ಕಾನೂನಿನ ಪ್ರಕಾರ ಇದಕ್ಕೆ ಜೈಲುವಾಸ ಶಿಕ್ಷೆಯಿದೆ.

ಪ್ರತೀ ಅಳಿದ ಜೀವ ಯಾರಧ್ದೋ ಸಂಗಾತಿ, ಯಾರಧ್ದೋ ಗೆಳೆಯ/ಗೆಳತಿ, ಯಾರಧ್ದೋ ಅಪ್ಪ/ಅಮ್ಮ, ಯಾರಧ್ದೋ ಮಗ/ ಮಗಳು, ಯಾರಧ್ದೋ ಸಹೋದ್ಯೋಗಿಯಾಗಿ ಇದ್ದಂತಹವರು ಪ್ರತೀ ಆತ್ಮಹತ್ಯೆಗೆ ಅಂದಾಜು ಸುಮಾರು 135 ಜನ ಶೋಕಕ್ಕೀಡಾಗುತ್ತಾರೆ ಅಥವಾ ಇತರ ರೀತಿಯಲ್ಲಿ ಪ್ರಭಾವಿತರಾಗುತ್ತಾರೆ. ಇದರರ್ಥ ಪ್ರತಿವರ್ಷ ಆತ್ಮಹತ್ಯೆಯ ನಡವಳಿಕೆಯಿಂದಾಗಿ 10 ಕೋಟಿಗಿಂತಲೂ ಹೆಚ್ಚಿನ ಜನ ಗಂಭೀರವಾಗಿ ಬಾಧಿತರಾಗುತ್ತಾರೆ. ಆತ್ಮಹತ್ಯೆಯ ನಡವಳಿಕೆಯೆಂದರೆ: ಆತ್ಮಹತ್ಯೆ, ಆತ್ಮಹತ್ಯೆಯ ಆಲೋಚನೆ ಮತ್ತು ಆತ್ಮಹತ್ಯೆಯ ಪ್ರಯತ್ನ. ಒಂದು ಆತ್ಮಹತ್ಯೆಗೆ ಸಮನಾಗಿ, 25 ಜನರು ಆತ್ಮಹತ್ಯೆಗೆ ಪ್ರಯತ್ನಿಸಿರುವವರಿರುತ್ತಾರೆ ಹಾಗೂ ಇನ್ನೂ ಹೆಚ್ಚಿನ ಜನ ಆತ್ಮಹತ್ಯೆಯ ಬಗ್ಗೆ ಗಂಭೀರವಾಗಿ ಆಲೋಚಿಸಿರುವವರಿರುತ್ತಾರೆ.

ಆತ್ಮಹತ್ಯೆ ಎನ್ನುವುದು ಆನುವಂಶಿಕತೆಯ, ಮಾನಸಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತಿತರ ಅಂಶಗಳ ಸಮ್ಮಿಶ್ರಣದ ಪರಿಣಾಮ. ಕೆಲವೊಮ್ಮೆ ಆಘಾತ ಮತ್ತು ಕಳೆದುಕೊಳ್ಳುವುದು ಈ ಅಂಶಗಳ ಜತೆಗೆ ಸೇರಿಕೊಳ್ಳುತ್ತವೆ. ತನ್ನ ಪ್ರಾಣ ತೆಗೆದುಕೊಳ್ಳುವವರು ಒಂದು ವಿಭಿನ್ನ ಗುಂಪಿನವರಾಗಿ ತೋರುತ್ತಾರೆ: ಕೊನೆಯ ಘಟನೆಯ ಮುನ್ನ ತನ್ನದೇ ಆದ, ಜಟಿಲವಾದ ಹಾಗೂ ವಿಭಿನ್ನ ರೀತಿಯ ಕಾರಣಗಳು ಕಂಡುಬರುತ್ತವೆ. ಈ ರೀತಿಯ ವಿಭಿನ್ನವಾದ ಕಾರಣಗಳು ಆತ್ಮಹತ್ಯೆ ತಡೆಯಲು ನುರಿತ ವೈದ್ಯರು ಮಾಡುವ ಪ್ರಯತ್ನಗಳಿಗೆ ಸವಾಲಾಗಿ ಎದುರಾಗುತ್ತವೆ. ಈ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ವಿವಿಧ ಹಂತಗಳಲ್ಲಿ ಮತ್ತು ವಿವಿಧ ಆಯಾಮಗಳಲ್ಲಿ ಒಗ್ಗಟ್ಟಾಗಿ ಮುಂದುವರಿಯಬೇಕಾಗುತ್ತದೆ. ಆತ್ಮಹತ್ಯೆಯಿಂದ ಪ್ರಾಣ ಕಳೆದುಕೊಂಡವರಲ್ಲಿ ಮಾನಸಿಕ ಕಾಯಿಲೆಯಾದ ಖನ್ನತೆ ಅತಿ ಸಾಮಾನ್ಯವಾಗಿ ಕಂಡುಬಂದಿದೆ.

ಆತ್ಮಹತ್ಯೆಯನ್ನು ಹೆಚ್ಚಾಗಿ ಯಶಸ್ವಿಯಾಗಿ ತಡೆಗಟ್ಟಲು ಸಾಧ್ಯವಾಗಬಹುದು ಮತ್ತು ಇದನ್ನು ತಡೆಗಟ್ಟುವಲ್ಲಿ ಮುಖ್ಯ ಪಾತ್ರವಿರುವುದು ನಿಮ್ಮದು! ನೀವು ಬದಲಾವಣೆ ತರಬಹುದು: ಓರ್ವ ಸಮಾಜದ ಸದಸ್ಯನಾಗಿ, ಒಬ್ಬ ಮಗನಾಗಿ/ ಮಗಳಾಗಿ, ಓರ್ವ ಪೋಷಕನಾಗಿ, ಒಬ್ಬ ಸ್ನೇಹಿತನಾಗಿ, ಒಬ್ಬ ಸಹೋದ್ಯೋಗಿಯಾಗಿ ಅಥವಾ ಒಬ್ಬ ನೆರೆಮನೆಯವನಾಗಿ. ಆತ್ಮಹತ್ಯೆಯ ನಡವಳಿಕೆ ತಡೆಗಟ್ಟಲು ನೀವು ಹಲವಾರು ಕೆಲಸಗಳನ್ನು ದಿನಾಲು ಹಾಗೂ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯಂದು ಮಾಡಬಹುದು. ನೀವು ಈ ವಿಷಯದ ಬಗ್ಗೆ ಇತರರಲ್ಲಿ ಜಾಗೃತಿ ಮೂಡಿಸಬಹುದು, ಆತ್ಮಹತ್ಯೆಯ ಕಾರಣಗಳು ಹಾಗೂ ಅದರ ಮುನ್ಸೂಚನೆಗಳ ಬಗ್ಗೆ ನೀವು ತಿಳಿದುಕೊಳ್ಳುವುದಲ್ಲದೇ ಇತರರಿಗೂ ತಿಳಿಸುವುದು, ನಿಮ್ಮ ಸಮಾಜದಲ್ಲಿ ಕಷ್ಟದಲ್ಲಿ ಇರುವವರೊಟ್ಟಿಗೆ ಆತ್ಮೀಯವಾಗಿ ನಡೆದುಕೊಳ್ಳುವುದು, ಆತ್ಮಹತ್ಯೆ ಬಗ್ಗೆ ಇರುವ ತಪ್ಪುನಂಬಿಕೆಗಳನ್ನು / ಕಳಂಕವನ್ನು ಅಳಿಸಲು ಪ್ರಯತ್ನಿಸುವುದು, ಮಾನಸಿಕ ಸಮಸ್ಯೆಗಳ ಬಗ್ಗೆ ನಿರಾತಂಕವಾಗಿ ಚರ್ಚಿಸಲು ಮತ್ತು ಚಿಕಿತ್ಸೆ ಪಡೆಯಲು ಪ್ರೋತ್ಸಾಹಿಸುವುದು, ತನ್ನ ಅನುಭವಗಳನ್ನು ಹಂಚಿಕೊಳ್ಳುವುದು,ಇತ್ಯಾದಿ.

ಆತ್ಮಹತ್ಯೆ ತಡೆಗಟ್ಟಲು ಕಷ್ಟಪಡಬೇಕಾಗುತ್ತದೆ ಹೌದು, ಆದರೆ ಇದರ ಧನಾತ್ಮಕ ಪರಿಣಾಮಗಳು ಅಪರಿಮಿತವಾಗಿದ್ದು, ಜತೆಗೆ ಉಳಿದುಕೊಳ್ಳುವಂತಹವುಗಳು ಹಾಗೂ ಇವುಗಳು ಜೀವನದ ಮೇಲೆ ಮಹತ್ವದ ಪರಿಣಾಮ ಬೀರುತ್ತವೆ. ಈ ಕೆಲಸದಿಂದಾಗಿ ಕೇವಲ ಒತ್ತಡದಲ್ಲಿರುವ ವ್ಯಕ್ತಿಗಲ್ಲದೇ, ಆತನನ್ನು ಪ್ರೀತಿಸುವ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ ಮತ್ತು ಆತ್ಮಹತ್ಯೆ ತಡೆಗಟ್ಟಿದ ವ್ಯಕ್ತಿ ಹಾಗೂ ಇಡೀ ಸಮಾಜದಲ್ಲಿ ಬದಲಾವಣೆ ಕಂಡುಬರುತ್ತದೆ.

ಆತ್ಮಹತ್ಯೆ ತಡೆಗಟ್ಟಲು ಜತೆಗೂಡಿ ಕೆಲಸ ಮಾಡುವುದು ಅತ್ಯಂತ ಮುಖ್ಯವಾದ ಅಂಶವಾಗಿದೆ. ಒಂದು ಆತ್ಮಹತ್ಯೆಯನ್ನು ತಡೆಗಟ್ಟುವುದರಲ್ಲಿ ಹಲವಾರು ಜನರ ಪ್ರಯತ್ನದ ಆವಶ್ಯಕತೆಯಿರುತ್ತದೆ: ಕುಟುಂಬದವರು, ಸ್ನೇಹಿತರು, ಸಹೋದ್ಯೋಗಿಗಳು, ಸಮಾಜದವರು, ಶಿಕ್ಷಕರು, ಆರೋಗ್ಯ ಕ್ಷೇತ್ರದವರು, ಧಾರ್ಮಿಕಗುರುಗಳು, ರಾಜಕಾರಣಿಗಳು, ಸರಕಾರದವರು. ಆತ್ಮಹತ್ಯೆ ತಡೆಗಟ್ಟುವಲ್ಲಿ ಮಾಡುವ ಪ್ರಯತ್ನ ವ್ಯಕ್ತಿಯ, ಕುಟುಂಬದ, ಸಮಾಜದ ಸ್ತರದಲ್ಲಿ ಸಮ್ಮಿಶ್ರವಾಗಿ ಸಾಗಬೇಕು.
ಆತ್ಮಹತ್ಯೆ ತಡೆಗಟ್ಟಲು ಪ್ರತಿಯೋರ್ವ ವ್ಯಕ್ತಿಯೂ ಸಹಾಯ ಮಾಡಬಹುದು. ಆತ್ಮಹತ್ಯೆಯ ನಡವಳಿಕೆಯು ಒಂದು ಜಾಗತಿಕ ಸಮಸ್ಯೆಯಾಗಿದ್ದು, ಇದಕ್ಕೆ ಯಾವುದೇ ಸೀಮೆಗಳಿಲ್ಲ, ಇದು ಯಾರನ್ನೂ ಕಾಡಬಹುದು. ಆತ್ಮಹತ್ಯೆಯ ನಡವಳಿಕೆಯಿರುವ ಜನರ ಅನುಭವಗಳು ಅತ್ಯಮೂಲ್ಯವಾದವುಗಳು, ಅವರ ಅನುಭವ ಹಾಗೂ ಹೋರಾಟಗಳನ್ನು ಹಂಚಿಕೊಳ್ಳುವುದರಿಂದ ಸುತ್ತಮುತ್ತಲಿನ ಎಲ್ಲರಿಗೂ ಉಪಯೋಗವಾಗುತ್ತದೆ.

ಆತ್ಮಹತ್ಯೆಯ ಬಗ್ಗೆ ಅರಿವು ಮೂಡಿಸಲು, ಆತ್ಮಹತ್ಯೆಯನ್ನು ತಡೆಗಟ್ಟಲು “ಅಂತಾರಾಷ್ಟ್ರಿಯ ಆತ್ಮಹತ್ಯೆ ತಡೆಗಟ್ಟುವ ಸಂಸ್ಥೆ’ ಪ್ರತಿ ವರ್ಷ ಸೆಪ್ಟಂಬರ್‌ 10ರಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನವನ್ನಾಗಿ ಆಚರಿಸುತ್ತದೆ.

ಕಳೆದ ವರ್ಷದ ಧೈಯವಾಕ್ಯವನ್ನೇ, “ಆತ್ಮಹತ್ಯೆ ತಡೆಗಟ್ಟಲು ಜತೆಗೂಡಿ ಕೆಲಸ ಮಾಡುವುದು’ (ಗಟ್ಟkಜಿnಜ ಖಟಜಛಿಠಿಜಛಿr ಠಿಟ ಕrಛಿvಛಿnಠಿ ಖuಜಿcಜಿಛಛಿ) ಈ ವರ್ಷವೂ ಕೂಡ ಮುಂದುವರಿಸಲಾಗಿದೆ. ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಪ್ರತಿವರ್ಷ ಅಕ್ಟೋಬರ್‌ 10ರಂದು ಆಚರಿಸಲಾಗುತ್ತದೆ ಹಾಗೂ ಈ ವರ್ಷದ ಧ್ಯೇಯ ವಾಕ್ಯ ಆತ್ಮಹತ್ಯೆ ತಡೆಗಟ್ಟುವ ಬಗ್ಗೆ ಇದೆ. ಈ ನಿಟ್ಟಿನಲ್ಲಿ ಪ್ರಪಂಚಾದ್ಯಂತ ಈ ದಿನದಂದು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಎಲ್ಲ ಸ್ತರಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.

ನೆನಪಿಡಿ
ಆತ್ಮಹತ್ಯೆಯನ್ನು ತಡೆಗಟ್ಟುವುದು ನಮ್ಮೆಲ್ಲರ ಜವಾಬ್ದಾರಿ. ನಮ್ಮ ಸಣ್ಣ ಪ್ರಯತ್ನಗಳು ಕೂಡ ಇತರರ ಜೀವನದಲ್ಲಿ ಬೃಹತ್‌ ಬದಲಾವಣೆಗಳನ್ನು ತರಬಲ್ಲವು. ಎಲ್ಲ ಪ್ರಶ್ನೆಗಳಿಗೆ ನಮ್ಮ-ನಿಮ್ಮ ಬಳಿ ಉತ್ತರಗಳಿರದಿರಬಹುದು, ಆದರೆ ಮಾಡುವ ಪ್ರಯತ್ನಗಳಿಗೆ ತಕ್ಕ ಫಲ ದೊರೆಯುತ್ತದೆ.

ಡಾ| ರವೀಂದ್ರ ಮುನೋಳಿ,
ಸಹಪ್ರಾಧ್ಯಾಪಕ
ಮನೋರೋಗ ಚಿಕಿತ್ಸಾ ವಿಭಾಗ
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

11-elephant

Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್‌; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್

Sandalwood: ಮಾಸ್‌ ಸಿನಿಮಾಗಳಿಗ ಜೈ ಎಂದ ಪ್ರೇಕ್ಷಕ

Sandalwood: ಮಾಸ್‌ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

Goa ಕರಾವಳಿಯಲ್ಲಿ ನೌಕಾಪಡೆಯ ಸಬ್‌ ಮರೈನ್‌ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!

kop

Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಮಿಕ್ಸಿಂಗ್ ವಾಹನ ಪಲ್ಟಿ… ತಪ್ಪಿದ ಅನಾಹುತ

ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

BGT 24: ಕೆಎಲ್‌ ರಾಹುಲ್‌ ಔಟ್‌ ಅಥವಾ ನಾಟೌಟ್:‌ ಏನಿದು ವಿವಾದ? ಇಲ್ಲಿದೆ ಅಂಪೈರ್‌ ಉತ್ತರ

12-

Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.