Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ


Team Udayavani, Nov 17, 2024, 4:01 PM IST

4(1)

ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯ ಆಯ್ಕೆಗಳು
ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯು ಉರಿಯೂತವನ್ನು ಕಡಿಮೆ ಮಾಡುವುದು, ಲಕ್ಷಣಗಳನ್ನು ನಿಯಂತ್ರಿಸುವುದು ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುತ್ತದೆ. ಕಳೆದ 10 ವರ್ಷಗಳಲ್ಲಿ ಆಗಿರುವ ಅತ್ಯಾಧುನಿಕ ಬೆಳವಣಿಗೆಗಳು ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯ ಫ‌ಲಿತಾಂಶ ಸಾಕಷ್ಟು ಉತ್ತಮವಾಗುವುದಕ್ಕೆ ಕಾರಣವಾಗಿವೆ. ರುಮಟಾಲಜಿ ಸ್ಪೆಶಲಿಸ್ಟ್‌ ಜತೆಗೆ ಕ್ಲಪ್ತ ಕಾಲದಲ್ಲಿ ಸಮಾಲೋಚನೆ ನಡೆಸಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಸಹಜಕ್ಕೆ ನಿಕಟ ಜೀವನವನ್ನು ನಡೆಸುವುದಕ್ಕೆ ಸಾಧ್ಯವಿದೆ.
ಔಷಧಗಳು

– ಕಾರ್ಟಿಕೊಸ್ಟಿರಾಯ್ಡಗಳು: ಮೂತ್ರಪಿಂಡಗಳಲ್ಲಿ ಉರಿಯೂತವನ್ನು ತತ್‌ಕ್ಷಣ ನಿಯಂತ್ರಣಕ್ಕೆ ತರಲು ಈ ಔಷಧಗಳನ್ನು ಉಪಯೋಗಿಸಲಾಗುತ್ತದೆ. ಇದನ್ನು 6ರಿಂದ 9 ತಿಂಗಳುಗಳ ನಿರ್ದಿಷ್ಟ ಅವಧಿಗೆ ರುಮಟಾಲಜಿಸ್ಟ್‌ ಅವರ ವಿವೇಚನೆಯನ್ನು ಆಧರಿಸಿ ನೀಡಲಾಗುತ್ತದೆ. ಸ್ಟಿರಾಯ್ಡಗಳು ಜೀವಸಂರಕ್ಷಕ ಔಷಧಗಳಾದರೂ ಅವುಗಳ ದೀರ್ಘ‌ಕಾಲೀನ ಬಳಕೆಯಿಂದ ಸಮಸ್ಯೆಗಳು ಉಂಟಾಗಬಹುದಾಗಿದೆ.
-ಇಮ್ಯುನೊಸಪ್ರಸೆಂಟ್‌ಗಳು: ದೀರ್ಘ‌ಕಾಲೀನ ನಿರ್ವಹಣೆಗಾಗಿ ಮೈಕೊಫಿನಲೇಟ್‌, ಅಝಾತಿಯೊಪ್ರಿನ್‌, ರಿಟುಕ್ಸಿಮಾಬ್‌ ಮತ್ತು ಸೈಕ್ಲೊಫಾಸ್ಮೊಮೈಡ್‌ಗಳನ್ನು ಉಪಯೋಗಿಸಬಹುದಾಗಿದೆ.
– ಆ್ಯಂಟಿಮಲೇರಿಯಲ್‌ ಔಷಧಗಳು: ಎಚ್‌ಸಿಕ್ಯು ಎಂಬುದು ಲೂಪಸ್‌ ನೆಫ್ರೈಟಿಸ್‌ಗೆ ತಳಪಾಯ ಔಷಧವಾಗಿದೆ. ಇದು ರೋಗಲಕ್ಷಣಗಳು ಆಗಾಗ ಉಲ್ಬಣಿಸುವುದನ್ನು ತಡೆಯುತ್ತದೆ ಮತ್ತು ಒಟ್ಟಾರೆ ಜೀವ ರಕ್ಷಣೆಯನ್ನು ಸುಧಾರಿಸುತ್ತದೆ.
ಜೀವನಶೈಲಿ ಬದಲಾವಣೆಗಳು
– ಆಹಾರಾಭ್ಯಾಸ: ಕಡಿಮೆ ಉಪ್ಪಿನಂಶ, ಹಣ್ಣು, ತರಕಾರಿಗಳು, ಇಡೀ ಧಾನ್ಯಗಳು ಹೆಚ್ಚು ಇರುವ ಆಹಾರ ಕ್ರಮವು ಮೂತ್ರಪಿಂಡಗಳ ಆರೋಗ್ಯಕ್ಕೆ ನೆರವಾಗುತ್ತದೆ. ಸಂಸ್ಕರಿತ ಸಕ್ಕರೆ, ಅತಿಯಾಗಿ ಕರಿದ ಆಹಾರವಸ್ತುಗಳು ಮತ್ತು ಕೆಂಪು ಮಾಂಸ ಸೇವನೆಯನ್ನು ವರ್ಜಿಸುವುದು ಅತ್ಯಗತ್ಯವಾಗಿದೆ.
– ನಿಯಮಿತವಾದ ವ್ಯಾಯಾಮ: ಇದು ದೇಹತೂಕ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
– ದ್ರವಾಂಶ: ದೇಹದಲ್ಲಿ ಸಾಕಷ್ಟು ದ್ರವಾಂಶ ಕಾಪಾಡಿಕೊಳ್ಳುವುದು ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ನೆರವಾಗುತ್ತದೆ.

ದೀರ್ಘ‌ಕಾಲೀನ ಫ‌ಲಿತಾಂಶಗಳು
ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯು ಉತ್ತಮ ಫ‌ಲಿತಾಂಶ ಪಡೆಯುವುದಕ್ಕೆ ಶೀಘ್ರ ಪತ್ತೆ ಮತ್ತು ಕ್ಲಪ್ತ ಕಾಲದಲ್ಲಿ ಚಿಕಿತ್ಸೆ ಮುಖ್ಯವಾಗಿದೆ. ಬಹುತೇಕ ರೋಗಿಗಳಲ್ಲಿ ಲಕ್ಷಣಗಳು ಪ್ರಕಟವಾಗದೆ ಇರುವಾಗಲೇ ಲೂಪಸ್‌ ನೆಫ್ರೈಟಿಸ್‌ ಆರಂಭವಾಗಿರುತ್ತದೆ. ಆದ್ದರಿಂದ ರುಮಟಾಲಜಿಸ್ಟ್‌ ಬಳಿ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ರೋಗವನ್ನು ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚುವುದಕ್ಕೆ ಸಹಾಯವಾಗುತ್ತದೆ. ಪ್ರಸ್ತುತ ಕಾಲದಲ್ಲಿ ಇನ್ನಷ್ಟು ಉತ್ತಮ ಆಯ್ಕೆಗಳು ಲಭ್ಯವಿರುವುದರಿಂದ ದೀರ್ಘ‌ಕಾಲೀನ ಸ್ಟಿರಾಯ್ಡ ಚಿಕಿತ್ಸೆ ಉತ್ತಮವಲ್ಲ. ಆದರೂ ತಿಳಿವಳಿಕೆಯ ಕೊರತೆಯಿಂದಾಗಿ ಅನೇಕ ರೋಗಿಗಳು ಸೂಕ್ತವಾದ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ ಮತ್ತು ರೋಗ ಸಾಕಷ್ಟು ಉಲ್ಬಣಗೊಂಡ ಬಳಿಕ ರುಮಟಾಲಜಿಸ್ಟ್‌ರನ್ನು ಸಂಪರ್ಕಿಸುತ್ತಾರೆ.

ಗರ್ಭಧಾರಣೆ ಮತ್ತು ಲೂಪಸ್‌ ನೆಫ್ರೈಟಿಸ್‌
ಲೂಪಸ್‌ ನೆಫ್ರೈಟಿಸ್‌ಗೆ ತುತ್ತಾದವರು ಕೂಡ ಗರ್ಭಧಾರಣೆಯನ್ನು ಯೋಜಿಸಿಕೊಳ್ಳಬಹುದು ಮತ್ತು ಯಶಸ್ವಿ ಫ‌ಲಿತಾಂಶವನ್ನು ಪಡೆಯಬಹುದು. ಆದರೆ ರೋಗಕ್ಕೆ ಸಮರ್ಪಕವಾಗಿ ಚಿಕಿತ್ಸೆಯನ್ನು ಒದಗಿಸುತ್ತಿರಬೇಕು ಮತ್ತು ಕನಿಷ್ಠ 2 ವರ್ಷಗಳಿಂದ ಅದು ನಿಯಂತ್ರಣದಲ್ಲಿ ಇರಬೇಕು. ಗರ್ಭಧಾರಣೆಯ ಅವಧಿಯಲ್ಲಿ ಔಷಧವನ್ನು ನಿಲ್ಲಿಸಬಾರದು, ಆದರೆ ಗರ್ಭಧಾರಣೆಗೆ ಸುರಕ್ಷಿತ ಔಷಧಗಳಿಗೆ ಬದಲಾಯಿಸಿಕೊಳ್ಳಬೇಕು. ಯೋಜಿತ ಗರ್ಭಧಾರಣೆಗೆ ಕನಿಷ್ಠ 3 ತಿಂಗಳು ಮುನ್ನ ಈ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಎಲ್ಲ ಲೂಪಸ್‌ ರೋಗಿಗಳು ಗರ್ಭಧಾರಣೆಗೆ ಯೋಜಿಸುವ ಮುನ್ನ ಎಪಿಎಲ್‌ಎ ಆ್ಯಂಟಿಬಾಡಿ ಪರೀಕ್ಷೆಗೆ ಒಳಗಾಗಬೇಕು.

ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯ ಆಯ್ಕೆಗಳು

ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯು ಉರಿಯೂತವನ್ನು ಕಡಿಮೆ ಮಾಡುವುದು, ಲಕ್ಷಣಗಳನ್ನು ನಿಯಂತ್ರಿಸುವುದು ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುತ್ತದೆ. ಕಳೆದ 10 ವರ್ಷಗಳಲ್ಲಿ ಆಗಿರುವ ಅತ್ಯಾಧುನಿಕ ಬೆಳವಣಿಗೆಗಳು ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯ ಫ‌ಲಿತಾಂಶ ಸಾಕಷ್ಟು ಉತ್ತಮವಾಗುವುದಕ್ಕೆ ಕಾರಣವಾಗಿವೆ. ರುಮಟಾಲಜಿ ಸ್ಪೆಶಲಿಸ್ಟ್‌ ಜತೆಗೆ ಕ್ಲಪ್ತ ಕಾಲದಲ್ಲಿ ಸಮಾಲೋಚನೆ ನಡೆಸಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದರಿಂದ ಸಹಜಕ್ಕೆ ನಿಕಟ ಜೀವನವನ್ನು ನಡೆಸುವುದಕ್ಕೆ ಸಾಧ್ಯವಿದೆ.

ಔಷಧಗಳು

 ಕಾರ್ಟಿಕೊಸ್ಟಿರಾಯ್ಡಗಳು: ಮೂತ್ರಪಿಂಡಗಳಲ್ಲಿ ಉರಿಯೂತವನ್ನು ತತ್‌ ಕ್ಷಣ ನಿಯಂತ್ರಣಕ್ಕೆ ತರಲು ಈ ಔಷಧಗಳನ್ನು ಉಪಯೋಗಿಸಲಾಗುತ್ತದೆ. ಇದನ್ನು 6ರಿಂದ 9 ತಿಂಗಳುಗಳ ನಿರ್ದಿಷ್ಟ ಅವಧಿಗೆ ರುಮಟಾಲಜಿಸ್ಟ್‌ ಅವರ ವಿವೇಚನೆಯನ್ನು ಆಧರಿಸಿ ನೀಡಲಾಗುತ್ತದೆ. ಸ್ಟಿರಾಯ್ಡಗಳು ಜೀವಸಂರಕ್ಷಕ ಔಷಧಗಳಾದರೂ ಅವುಗಳ ದೀರ್ಘ‌ಕಾಲೀನ ಬಳಕೆಯಿಂದ ಸಮಸ್ಯೆಗಳು ಉಂಟಾಗಬಹುದಾಗಿದೆ.

ಇಮ್ಯುನೊಸಪ್ರಸೆಂಟ್‌ಗಳು: ದೀರ್ಘ‌ಕಾಲೀನ ನಿರ್ವಹಣೆಗಾಗಿ ಮೈಕೊಫಿನಲೇಟ್‌, ಅಝಾತಿಯೊಪ್ರಿನ್‌, ರಿಟುಕ್ಸಿಮಾಬ್‌ ಮತ್ತು ಸೈಕ್ಲೊಫಾಸ್ಫೊಮೈಡ್‌ ಗಳನ್ನು ಉಪಯೋಗಿಸಬಹುದಾಗಿದೆ.

 ಆ್ಯಂಟಿಮಲೇರಿಯಲ್‌ ಔಷಧಗಳು: ಎಚ್‌ಸಿಕ್ಯು ಎಂಬುದು ಲೂಪಸ್‌ ನೆಫ್ರೈಟಿಸ್‌ ಗೆ ತಳಪಾಯ ಔಷಧವಾಗಿದೆ. ಇದು ರೋಗಲಕ್ಷಣಗಳು ಆಗಾಗ ಉಲ್ಬಣಿಸುವುದನ್ನು ತಡೆಯುತ್ತದೆ ಮತ್ತು ಒಟ್ಟಾರೆ ಜೀವ ರಕ್ಷಣೆಯನ್ನು ಸುಧಾರಿಸುತ್ತದೆ.

ಜೀವನಶೈಲಿ ಬದಲಾವಣೆಗಳು

 ಆಹಾರಾಭ್ಯಾಸ: ಕಡಿಮೆ ಉಪ್ಪಿನಂಶ, ಹಣ್ಣು, ತರಕಾರಿಗಳು, ಇಡೀ ಧಾನ್ಯಗಳು ಹೆಚ್ಚು ಇರುವ ಆಹಾರ ಕ್ರಮವು ಮೂತ್ರಪಿಂಡಗಳ ಆರೋಗ್ಯಕ್ಕೆ ನೆರವಾಗುತ್ತದೆ. ಸಂಸ್ಕರಿತ ಸಕ್ಕರೆ, ಅತಿಯಾಗಿ ಕರಿದ ಆಹಾರವಸ್ತುಗಳು ಮತ್ತು ಕೆಂಪು ಮಾಂಸ ಸೇವನೆಯನ್ನು ವರ್ಜಿಸುವುದು ಅತ್ಯಗತ್ಯವಾಗಿದೆ.

 ನಿಯಮಿತವಾದ ವ್ಯಾಯಾಮ: ಇದು ದೇಹತೂಕ ಮತ್ತು ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

 ದ್ರವಾಂಶ: ದೇಹದಲ್ಲಿ ಸಾಕಷ್ಟು ದ್ರವಾಂಶ ಕಾಪಾಡಿಕೊಳ್ಳುವುದು ಮೂತ್ರಪಿಂಡಗಳ ಕಾರ್ಯನಿರ್ವಹಣೆಗೆ ನೆರವಾಗುತ್ತದೆ.

ದೀರ್ಘ‌ಕಾಲೀನ ಫ‌ಲಿತಾಂಶಗಳು ಲೂಪಸ್‌ ನೆಫ್ರೈಟಿಸ್‌ಗೆ ಚಿಕಿತ್ಸೆಯು ಉತ್ತಮ ಫ‌ಲಿತಾಂಶ ಪಡೆಯುವುದಕ್ಕೆ ಶೀಘ್ರ ಪತ್ತೆ ಮತ್ತು ಕ್ಲಪ್ತ ಕಾಲದಲ್ಲಿ ಚಿಕಿತ್ಸೆ ಮುಖ್ಯವಾಗಿದೆ. ಬಹುತೇಕ ರೋಗಿಗಳಲ್ಲಿ ಲಕ್ಷಣಗಳು ಪ್ರಕಟವಾಗದೆ ಇರುವಾಗಲೇ ಲೂಪಸ್‌ ನೆಫ್ರೈಟಿಸ್‌ ಆರಂಭವಾಗಿರುತ್ತದೆ. ಆದ್ದರಿಂದ ರುಮಟಾಲಜಿಸ್ಟ್‌ ಬಳಿ ನಿಯಮಿತವಾಗಿ ತಪಾಸಣೆಗೆ ಒಳಗಾಗುವುದು ರೋಗವನ್ನು ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚುವುದಕ್ಕೆ ಸಹಾಯವಾಗುತ್ತದೆ. ಪ್ರಸ್ತುತ ಕಾಲದಲ್ಲಿ ಇನ್ನಷ್ಟು ಉತ್ತಮ ಆಯ್ಕೆಗಳು ಲಭ್ಯವಿರುವುದರಿಂದ ದೀರ್ಘ‌ಕಾಲೀನ ಸ್ಟಿರಾಯ್ಡ ಚಿಕಿತ್ಸೆ ಉತ್ತಮವಲ್ಲ. ಆದರೂ ತಿಳಿವಳಿಕೆಯ ಕೊರತೆಯಿಂದಾಗಿ ಅನೇಕ ರೋಗಿಗಳು ಸೂಕ್ತವಾದ ಚಿಕಿತ್ಸೆಯಿಂದ ವಂಚಿತರಾಗುತ್ತಾರೆ ಮತ್ತು ರೋಗ ಸಾಕಷ್ಟು ಉಲ್ಬಣಗೊಂಡ ಬಳಿಕ ರುಮಟಾಲಜಿಸ್ಟ್‌ರನ್ನು ಸಂಪರ್ಕಿಸುತ್ತಾರೆ.

ಗರ್ಭಧಾರಣೆ ಮತ್ತು ಲೂಪಸ್‌ ನೆಫ್ರೈಟಿಸ್‌ ಲೂಪಸ್‌ ನೆಫ್ರೈಟಿಸ್‌ಗೆ ತುತ್ತಾದವರು ಕೂಡ ಗರ್ಭಧಾರಣೆಯನ್ನು ಯೋಜಿಸಿಕೊಳ್ಳಬಹುದು ಮತ್ತು ಯಶಸ್ವಿ ಫ‌ಲಿತಾಂಶವನ್ನು ಪಡೆಯಬಹುದು. ಆದರೆ ರೋಗಕ್ಕೆ ಸಮರ್ಪಕವಾಗಿ ಚಿಕಿತ್ಸೆಯನ್ನು ಒದಗಿಸುತ್ತಿರಬೇಕು ಮತ್ತು ಕನಿಷ್ಠ 2 ವರ್ಷಗಳಿಂದ ಅದು ನಿಯಂತ್ರಣದಲ್ಲಿ ಇರಬೇಕು. ಗರ್ಭಧಾರಣೆಯ ಅವಧಿಯಲ್ಲಿ ಔಷಧವನ್ನು ನಿಲ್ಲಿಸಬಾರದು, ಆದರೆ ಗರ್ಭಧಾರಣೆಗೆ ಸುರಕ್ಷಿತ ಔಷಧಗಳಿಗೆ ಬದಲಾಯಿಸಿಕೊಳ್ಳಬೇಕು. ಯೋಜಿತ ಗರ್ಭಧಾರಣೆಗೆ ಕನಿಷ್ಠ 3 ತಿಂಗಳು ಮುನ್ನ ಈ ಬದಲಾವಣೆಯನ್ನು ಮಾಡಿಕೊಳ್ಳಬೇಕು. ಎಲ್ಲ ಲೂಪಸ್‌ ರೋಗಿಗಳು ಗರ್ಭಧಾರಣೆಗೆ ಯೋಜಿಸುವ ಮುನ್ನ ಎಪಿಎಲ್‌ಎ ಆ್ಯಂಟಿಬಾಡಿ ಪರೀಕ್ಷೆಗೆ ಒಳಗಾಗಬೇಕು.

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.