ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ
Team Udayavani, Mar 17, 2019, 12:30 AM IST
ಮುಂದುವರಿದುದು– 5. ಸೆಕೆಂಡ್ ಒಪೀನಿಯನ್ ಕ್ಯಾನ್ಸರ್ ಕ್ಲಿನಿಕ್‌ನ ಲಭ್ಯತೆ ಹೇಗೆ?
ಮೇಲೆ ವಿವರಿಸಿರುವಂತೆ, ಸೆಕೆಂಡ್ ಒಪೀನಿಯನ್ ಕ್ಯಾನ್ಸರ್ ಕ್ಲಿನಿಕ್ ಎಂಬುದು ಭಾಗ ನಿರ್ದಿಷ್ಟ ಟ್ಯೂಮರ್ ಬೋರ್ಡ್‌ಗೆ ಸಂಬಂಧ ಪಟ್ಟಿದೆ. ಆದ್ದರಿಂದ ಕ್ಯಾನ್ಸರ್ ಯಾವ ಭಾಗದಲ್ಲಿದೆ ಎಂಬುದನ್ನು ಆಧರಿಸಿ ಸೆಕೆಂಡ್ ಕ್ಲಿನಿಕ್‌ನ ದಿನಾಂಕ ಮತ್ತು ಸಮಯ ನಿರ್ಧಾರವಾಗುತ್ತದೆ. ರೋಗಿ ಮತ್ತು ರೋಗಿಯ ಕುಟುಂಬ ಜತೆಯಾಗಿ ಅಥವಾ ಕುಟುಂಬ ಮಾತ್ರವಾಗಿ ಶಿರ್ಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಯ ರಿಸೆಪ್ಶನ್‌ನಲ್ಲಿ ಫೈಲ್ ಮತ್ತು ಸೆಕೆಂಡ್ ಒಪೀನಿಯನ್ ಪೇಪರ್ ತೆರೆಯಬಹುದು. ಇದನ್ನು ಓಂಕಾಲಜಿ ಕ್ಲಿನಿಕ್‌ನಲ್ಲಿ ಪರಿಶೀಲಿಸಲಾಗುತ್ತದೆ ಹಾಗೂ ರೋಗಿಯ ಕ್ಯಾನ್ಸರ್, ಸ್ಕ್ಯಾನ್‌ಗಳು ಮತ್ತು ಬಯಾಪ್ಸಿ ವರದಿಗಳನ್ನು ಸಂಗ್ರಹಿಸಲಾಗುತ್ತದೆ; ಕ್ಯಾನ್ಸರ್ ಬಾಧಿಸಿದ ಅಂಗಾಂಗಕ್ಕೆ ನಿಗದಿಯಾದ ದಿನದಂದ ಟ್ಯೂಮರ್ ಬೋರ್ಡ್‌ನಲ್ಲಿ ಮಂಡಿಸಲಾಗುತ್ತದೆ. ಟ್ಯೂಮರ್ ಬೋರ್ಡ್‌ನಲ್ಲಿ ಚರ್ಚಿಸಿದ ಬಳಿಕ ಓಂಕಾಲಜಿ ಸ್ಪೆಶಲಿಸ್ಟ್‌ಗಳು ರೋಗಿ ಮತ್ತು ಅವರ ಕುಟುಂಬ ಅಥವಾ ಕುಟುಂಬವನ್ನು ಮಾತ್ರ ಕರೆದು ಕ್ಯಾನ್ಸರ್ ಚಿಕಿತ್ಸೆಯ ಯೋಜನೆಯನ್ನು ವಿವರಿಸುತ್ತಾರೆ. ಟ್ಯೂಮರ್ ಬೋರ್ಡ್‌ನಲ್ಲಿ ನಡೆದ ಚರ್ಚೆ ಮತ್ತು ಅಂತಿಮ ನಿರ್ಧಾರದ ಮುದ್ರಿತ ಪ್ರತಿಯನ್ನು ಕೂಡ ಒದಗಿಸಲಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆಯ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ರೋಗಿ ಮತ್ತವರ ಕುಟುಂಬಗಳು ಈ ಮಾಹಿತಿಯನ್ನು ಉಪಯೋಗಿಸಿಕೊಳ್ಳಬಹುದು. ಕೆಲವೊಮ್ಮೆ, ಒಂದೇಟಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ; ಯಾಕೆಂದರೆ ಕ್ಲಿನಿಕಲ್, ಪೆಥಾಲಜಿ ಮತ್ತು ಸ್ಕ್ಯಾನ್ ಮಾಹಿತಿಗಳು ಸಂಪೂರ್ಣವಾಗಿ ಲಭಿಸಿರುವುದಿಲ್ಲ. ಟ್ಯೂಮರ್ ಬೋರ್ಡ್ ಇನ್ನಷ್ಟು ಪರೀಕ್ಷೆಗಳನ್ನು ಶಿಫಾರಸು ಮಾಡಬಹುದು ಮತ್ತು ನಿರ್ಧಾ ತೆಗೆದುಕೊಳ್ಳುವುದಕ್ಕಾಗಿ ಪ್ರಕರಣವನ್ನು ಮುಂದಿನ ಸಭೆಯಲ್ಲಿ ಕೈಗೆತ್ತಿಕೊಳ್ಳಬಹುದು. ಎಲ್ಲ ರೋಗಿಗಳು ಸಮರ್ಪಕವಾದ ಮತ್ತು ಸರಿಯಾದ, ನಿಖರ ಚಿಕಿತ್ಸೆ ಮತ್ತು ಆರೈಕೆಯನ್ನು ಪಡೆಯಬೇಕು ಎಂಬುದೇ ಇದಕ್ಕೆ ಕಾರಣ.
6. ಟ್ಯೂಮರ್ ಬೋರ್ಡ್ ಮತ್ತು ಸೆಕೆಂಡ್ ಒಪೀನಿಯನ್
ಕ್ಯಾನ್ಸರ್ ಕ್ಲಿನಿಕ್‌ನ ಪ್ರಯೋಜನಗಳೇನು?
ಎ. ತುಂಬ ನಿಖರವಾದ, ಅಪ್ ಟು ಡೇಟ್, ನೈತಿಕ ಹೊಣೆಯುಳ್ಳ ಕ್ಯಾನ್ಸರ್ ಚಿಕಿತ್ಸಾ ಯೋಜನೆ.
ಬಿ. ರೋಗಿಯ ಸಾಮಾಜಿಕ, ಕೌಟುಂಬಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಪರಿಗಣಿಸಿದ ಕೈಗೆಟಕುವ ಕ್ಯಾನ್ಸರ್ ಚಿಕಿತ್ಸೆ.
ಸಿ. ಏಕ ವೈದ್ಯರು ನಿರ್ಧಾರ ತೆಗೆದುಕೊಳ್ಳುವಾಗ ಉಂಟಾಗಬಹುದಾದ ಪ್ರಮಾದಗಳನ್ನು ನಿವಾರಿಸುವ ಸಮಗ್ರ ಯೋಜನೆ ಮತ್ತು ಸರ್ವಾನುಮತದ ನಿರ್ಧಾರಗಳು.
ಡಿ. ಚಿಕಿತ್ಸೆಯ ಅವಧಿಯಲ್ಲಿ ಮತ್ತು ಆ ಬಳಿಕ ರೋಗಿಯು ಉತ್ತಮ ನೋವು ಮತ್ತು ರೋಗ ಲಕ್ಷಣ ನಿವಾರಣೆ, ಮಾನಸಿಕ ಮತ್ತು ಸಾಮಾಜಿಕ ಬೆಂಬಲ ಹಾಗೂ ಜೀವನ ಶೈಲಿಯನ್ನು ಉತ್ತಮ ಪಡಿಸುವ ಕ್ರಮಗಳುಳ್ಳ ಸಮಗ್ರ ಚಿಕಿತ್ಸೆ.
7. ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದಲ್ಲಿ ಲಭ್ಯವಾಗುವ ವಿವಿಧ ಸೇವೆಗಳು ಯಾವುವು?
ಎ. ರೇಡಿಯೇಶನ್ ಚಿಕಿತ್ಸೆ
ಕೇಂದ್ರದಲ್ಲಿ ಅತ್ಯುತ್ಕೃಷ್ಟ ಗುಣದರ್ಜೆಯ ಎಲೆಕ್ಟಾ ವರ್ಸಾ – ಎಚ್‌ಡಿ ಮಲ್ಟಿ ಎನರ್ಜಿ ಲೀನಿಯರ್ ಆಕ್ಸಲರೇಟರ್ ಯಂತ್ರವಿದೆ. ಇದು ವ್ಯಾಲ್ಯೂಮೆಟ್ರಿಕ್ ಇಮೇಜ್ ಗೈಡೆನ್ಸ್ (ಕೆವಿ-ಸಿಬಿಸಿಟಿ)ಯೊಂದಿಗೆ ಇಂಟೆನ್ಸಿಟಿ ಮಾಡ್ಯುಲೇಟೆಡ್ ರೇಡಿಯೋಥೆರಪಿ (ಐಎಂಆರ್‌ಟಿ); ವ್ಯಾಲ್ಯುಮೆಟ್ರಿಕ್ ಮಾಡ್ಯುಲೇಟೆಡ್ ಆರ್ಕ್ ಥೆರಪಿ (ವಿಎಂಎಟಿ) ಮತ್ತು ಸ್ಟಿರಿಯೋಟ್ಯಾಕ್ಟಿಕ್ ರೇಡಿಯೊಸರ್ಜರಿ/ ಸ್ಟೀರಿಯೊಟ್ಯಾಕ್ಟಿಕ್ ಅಬಲೇಟಿವ್ ಬಾಡಿ ರೇಡಿಯೋಥೆರಪಿ (ಎಸ್‌ಎಬಿಆರ್)ನಂತಹ ಅತ್ಯಾಧುನಿಕ ರೇಡಿಯೇಶನ್ ಚಿಕಿತ್ಸೆಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕೇಂದ್ರವು ಟೆಲಿಥೆರಪಿ ಮತ್ತು ಬ್ರ್ಯಾಕಿಥೆರಪಿ ಸೌಲಭ್ಯಗಳನ್ನೂ ಹೊಂದಿದೆಯಲ್ಲದೆ, ಬ್ರ್ಯಾಕಿಥೆರಪಿಗಾಗಿ ಇಲ್ಲಿರುವ ಮೈಕ್ರೊ ಸೆಲೆಕ್ಟ್ರಾನ್ ಮಲ್ಟಿಚ್ಯಾನೆಲ್ ಎಚ್‌ಡಿಆರ್ ಘಟಕವು ಇಮೇಜ್ ಗೈಡೆಡ್ ಬ್ರ್ಯಾಕಿಥೆರಪಿ (ಐಜಿಬಿಟಿ) ಒದಗಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇಂಟ್ರಾಓಪರೇಟಿವ್ ಇಂಟರ್‌ಸ್ಟೀಶಿಯಲ್ ಇಂಪ್ಲಾಂಟ್ಸ್ ಮತ್ತು ಆಕ್ಸಲರೇಟೆಡ್ ಬ್ರೆಸ್ಟ್ ಪಾರ್ಶಿಯಲ್ ಇರ್ರಾéಡಿಯೇಶನ್ ಸೌಲಭ್ಯಗಳೂ ಇಲ್ಲಿವೆ.
ಬಿ. ಕಿಮೊಥೆರಪಿ
ಇದು ಈ ಪ್ರಾಂತದಲ್ಲಿ ಅತ್ಯಂತ ದೊಡ್ಡದಾದ ಡೇಕೇರ್ ಸೌಲಭ್ಯವಾಗಿದ್ದು, ಡೇಕೇರ್ ಕಿಮೋಥೆರಪಿ ಗಾಗಿ 18 ಹಾಸಿಗೆಗಳನ್ನು ಹೊಂದಿದೆ. ಮಕ್ಕಳ ಮತ್ತು ಪ್ರೌಢರ ಎಲ್ಲ ಕ್ಯಾನ್ಸರ್‌ಗಳಿಗೆ ಇಲ್ಲಿ ಚಿಕಿತ್ಸೆ ಒದಗಿಸಲಾಗು ತ್ತದೆಯಲ್ಲದೆ ಇದು ಕಿಮೊಥೆರಪಿ, ಇಮ್ಯುನೊಥೆರಪಿ ಮತ್ತು ಗುರಿನಿರ್ದೇಶಿತ ಚಿಕಿತ್ಸಾ ಆಯ್ಕೆಗಳನ್ನು ಒದಗಿಸ ಬಲ್ಲುದಾಗಿದೆ. ಅಸ್ತಿಮಜ್ಜೆ ಕಸಿ ಘಟಕವು ಆಟೊಲಾಗಸ್ ಕಸಿಯನ್ನು ನಡೆಸುವ ಸಾಮರ್ಥ್ಯ ಹೊಂದಿದೆ.
ಸಿ. ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳು
ಎಲ್ಲ ಪ್ರಾಥಮಿಕ ಮತ್ತು ಮುಂದುವರಿದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳನ್ನು ನಡೆಸಬಲ್ಲ ಸಾಮರ್ಥ್ಯವನ್ನು ಕ್ಯಾನ್ಸರ್ ಕೇಂದ್ರವು ಹೊಂದಿದೆ. ಸ್ತನ ಕ್ಯಾನ್ಸರ್ ಪ್ರಕರಣಗಳಲ್ಲಿ ಸ್ತನ ಉಳಿಸುವ ಶಸ್ತ್ರಚಿಕಿತ್ಸೆಗಳು ಮತ್ತು ಸೆಂಟಿನೆಲ್ ಲಿಂಫ್ ನೋಡ್ ಕ್ಲಿಯರೆನ್ಸ್ ನಡೆಸಲಾಗುತ್ತದೆ, ಕೊಲೊರೆಕ್ಟಲ್ ಕ್ಯಾನ್ಸರ್‌ಗಳಲ್ಲಿ ಇಂಟರ್ ಸಿ#ಂಕ್ಟರಿಕ್ ರಿಸೆಕ್ಷನ್ ಆಗಿ ಸಿ#ಂಕ್ಟರ್ ಪ್ರಿಸರ್ವೇಶನ್ (ಸ್ಟೊಮಾ ವಿರಹಿತ ಶಸ್ತ್ರಚಿಕಿತ್ಸೆ), ಕಿಡ್ನಿ ಕ್ಯಾನ್ಸರ್ ಸಂದರ್ಭದಲ್ಲಿ ನೆಫ್ರಾನ್ ವಿರಹಿತ ಶಸ್ತ್ರಚಿಕಿತ್ಸೆ, ತೋಳುಗಳ ಮೃದು ಅಂಗಾಂಶ ಮತ್ತು ಎಲುಬಿನ ಸರ್ಕೊಮಾ ಸಂದರ್ಭದಲ್ಲಿ ಲಿಂಬ್ ಸಾಲ್ವೇಜ್ ಶಸ್ತ್ರಚಿಕಿತ್ಸೆ, ಇಂಟ್ರಾ ಅಬಾxಮಿನಲ್ ಅಪಾಯಕಾರಿ ಗಡ್ಡೆಗಳಿದ್ದಾಗ ಲ್ಯಾಪ್ರೊಸ್ಕೊಪಿಕ್ (ಕೀಹೋಲ್ ಶಸ್ತ್ರಚಿಕಿತ್ಸೆ), ಇಸೊಫೇಗಲ್ ಮತ್ತು ಶ್ವಾಸಕೋಶದ ಕ್ಯಾನ್ಸರ್ ಇದ್ದಾಗ ವಿಎಟಿಎಸ್ (ವಿಡಿಯೋ ಅಸಿಸ್ಟೆಡ್ ಥೊರಾಸ್ಕೊಪಿಕ್ ಶಸ್ತ್ರಚಿಕಿತ್ಸೆ), ಕೊಲೊರೆಕ್ಟಲ್ ಮತ್ತು ಜಠರದ ಕ್ಯಾನ್ಸರ್‌ಗಳಿಗಾಗಿ ಹೈಪೆಕ್ (ಹೈಪರ್‌ಥರ್ಮಿಕ್ ಇಂಟ್ರಾಪೆರಿಟೋನಿಯಲ್ ಕಿಮೊಥೆರಪಿ)ಯ ಜತೆಗೆ ಸೈಟೊರಿಡಕ್ಟಿವ್ ಶಸ್ತ್ರಚಿಕಿತ್ಸೆಯಂತಹ ಉನ್ನತ ಶಸ್ತ್ರಕ್ರಿಯೆಗಳು, ಕೆಲವು ನಿರ್ದಿಷ್ಟ ತುಂಬಾ ಮುಂದುವರಿದ ಪೆಲ್ವಿಕ್ ಕ್ಯಾನ್ಸರ್‌ಗಳಿಗಾಗಿ ಸುಪ್ರಾ -ಮೇಜರ್ ಶಸ್ತ್ರಚಿಕಿತ್ಸೆಗಳಾಗಿರುವ ಪೆಲ್ವಿಕ್ ಎಕ್ಸೆಂಟರೇಶನ್/ ಎಕ್ಸ್ ಟೆಂಡೆಡ್ ರಿಸೆಕ್ಷನ್‌ಗಳನ್ನು ನಡೆಸುವ ಸಾಮರ್ಥ್ಯ ಕೇಂದ್ರದಲ್ಲಿದೆ. ಕೇಂದ್ರವು ಅತ್ಯಾಧುನಿಕ ಪರಿಕರಗಳನ್ನು ಹೊಂದಿರುವ ಪ್ಲಾಸ್ಟಿಕ್ ಸರ್ಜರಿ ವಿಭಾಗವನ್ನು ಹೊಂದಿದ್ದು, ಸ್ತನ, ತಲೆ, ಕುತ್ತಿಗೆ ಹಾಗೂ ಮೃದು ಅಂಗಾಂಶ ಕ್ಯಾನ್ಸರ್ ಸಂದರ್ಭಗಳಲ್ಲಿ ಪುನಾರೂಪಕ ಶಸ್ತ್ರಚಿಕಿತ್ಸೆಗಳನ್ನು ಒದಗಿಸಬಲ್ಲುದಾಗಿದೆ.
ಮುಂದುವರಿಯುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Oscars 2025: ಹೀನಾಯವಾಗಿ ಸೋತರೂ ʼಆಸ್ಕರ್ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.