ಮಗುವಿನ ಜೊತೆಗೆ ಮಾತುಕತೆಯಾಡುವುದು ಎಷ್ಟು ಅಗತ್ಯ? 


Team Udayavani, Jan 1, 2017, 3:45 AM IST

arogya.jpg

“”ಈ ದಿನ ಹೇಗೆ ಕಳೀತು ರಾಘವ”? 
“”ಇವತ್ತು ಶಾಲಿನಿ ಟೀಚರ್‌ ನನ್ನ ಬಯ್ದು ಬಿಟ್ರಾ”. 
“”ಹೌದಾ, ಯಾಕೆ ಏನಾಯ್ತು?” 
“”ನನ್ನನ್ನ ಜಾನ್‌ ದೂಡಿದ.” 
 “”ಹೌದಾ…….. ಯಾಕೆ?”
“”ನಾನು ವರಾಂಡದಲ್ಲಿ ನಡ್ಕೊಂಡ್‌ ಹೋಗ್ತಾ ಇದ್ದೆ, ಅವ್ನು ಓಡ್ತಾ ಬಂದು ನನ್ನ ತಳ್ಳಿದ”
 “”ಅಯ್ಯೋ ದೇವೆÅ! ಅದು ಒಳ್ಳೇದಲ್ಲ, ಹಾಗ್‌ ಮಾಡಾºರ್ದು!, ಸರಿ ಆಮೇಲೇನಾಯ್ತು?”
“”ಶಾಲಿನಿ ಟೀಚರ್‌ ನಮ್ಮನ್ನ ನೋಡಿದ್ರು ಮತ್ತು ನಮ್ಗೆ ಬಯ್ದು ಬಿಟ್ರಾ, ನಾವು ಒಬ್ಬರಿಗೊಬ್ಬರು ಸಾರಿ ಕೇಳ್ಬೇಕು ಅಂತ ಹೇಳಿದ್ರು ಮತ್ತು ಇನ್ಮುಂದೆ  ಗೆಳೆಯರಾಗಿ ಇಬೇìಕು ಅಂತ ಹೇಳಿದ್ರು.”
“”ಸರಿ, ಒಳ್ಳೆ ಹುಡುಗ ನೀನು, ಒಳ್ಳೇ ಹುಡುಗ್ರು ಇನ್ನೊಬ್ರ ಜೊತೆ ಯಾವತ್ತೂ ಕೆಟ್ಟದಾಗಿ ನಡ್ಕೊಳಲ್ಲ. ನೀನು ಎಲ್ಲರ ಜೊತೆಗೂ ಒಳ್ಳೇ ರೀತೀಲಿ ಇಬೇìಕು ಆಯ್ತಾ” 
ಇದು ರಾಘವ ಮತ್ತು ಅವನ ಅಮ್ಮನ ನಡುವೆ ನಡೆದ ಸಂಭಾಷಣೆ. ಪಾರಿಭಾಷಿಕ ಉದ್ದೇಶಕ್ಕಾಗಿ ನಾನು ಇದನ್ನು “”ವೈಯಕ್ತಿಕ ವಿವರಣೆ” ಎಂಬುದಾಗಿ ಕರೆಯುತ್ತೇನೆ. ನಾವೆಲ್ಲರೂ ನಮ್ಮ ಮಕ್ಕಳ ಜೊತೆ ಮಾತುಕತೆ ನಡೆಸುತ್ತೇವೆ. ಆದರೆ ಈ ರೀತಿಯ ಮಾತುಕತೆಗಳಿಂದ ಮಗುವಿನ ಶೈಕ್ಷಣಿಕ ಕೌಶಲಕ್ಕೆ ಅಥವಾ ಬೆಳವಣಿಗೆಗೆ ಪ್ರಯೋಜನವಾಗುತ್ತದೆ ಎಂದು ನೀವು ಭಾವಿಸುತ್ತೀರಾ? ಅಥವಾ ಹಾಗೆ ಭಾವಿಸುವುದು ಕೇವಲ ಭ್ರಮೆ ಅಥವಾ ತಪ್ಪು ಕಲ್ಪನೆ ಎಂಬುದು ನಿಮ್ಮ ಭಾವನೆಯೇ? ಇಂತಹ ಪ್ರಶ್ನೆಗಳು ನಿಮ್ಮದಾಗಿದ್ದಲ್ಲಿ  ಈ ಲೇಖನದಲ್ಲಿವೆ ಕೆಲವು ಉತ್ತರಗಳು.

ಖಂಡಿತವಾಗಿಯೂ ಅದೊಂದು ತಪ್ಪು ಕಲ್ಪನೆ ಅಲ್ಲ  ಮತ್ತು ಒಂದು ಘಟನೆ ಅಥವಾ ವಿಷಯವನ್ನು  ವಿವರಿಸುವುದು ಅಂದರೆ ಖಂಡಿತವಾಗಿಯೂ ಅದೊಂದು ಬಹುಮುಖ್ಯ ಕೌಶಲ. ವಿವರಿಸುವ ಕೌಶಲದ ಬಗ್ಗೆ ಸಂಶೋಧಕರು ಸಂಶೋಧನೆಯಲ್ಲಿ  ತೊಡಗಿದ್ದು, ಮಕ್ಕಳ ಜೊತೆಗೆ ನಾವು ದಿನನಿತ್ಯ ನಡೆಸುವ ಸಂವಹನದಲ್ಲಿನ ವಿವರಣಾ ಕೌಶಲ ಮತ್ತು ಅದರ ಬೆಳವಣಿಗೆಯ ವಿವಿಧ ಹಂತಗಳನ್ನು ಕೆಲವು ಕುತೂಹಲಕಾರಿ ಉದಾಹರಣೆಗಳ ಸಹಿತ ವಿವರಿಸುತ್ತಾರೆ.  

ನಾವೀಗ ಈ ಹೇಳಿಕೆಯ ಜೊತೆಗೆ ಆರಂಭಿಸೋಣ!

ಒಂದು ವಿವರಣೆ ಅನ್ನುವುದು ಒಬ್ಬ ಮಗುವಿನಿಂದ ಬಂದುದಾಗಿದ್ದರೆ ಅದು ಅಸಲಿಯಾಗಿರುತ್ತದೆ – ಯಾಕೆಂದರೆ ಅದು ಆ ವಿಷಯಕ್ಕೆ ಆ ಮಗುವಿನ ಮನಸ್ಸು  ಸ್ಪಂದಿಸಿದ ರೀತಿ ಆಗಿರುತ್ತದೆ 
– ಚಾರ್ಲೊಟ್‌ ಮೇಸನ್‌.

1. ಕಾಲ್ಪನಿಕ ಕತೆಗಳನ್ನು ಹೇಳುವುದು ಮತ್ತು ಅವುಗಳನ್ನು ಮರು-ನಿರೂಪಿಸುವುದು.
2.  ಘಟನೆಗಳನ್ನು ಕ್ರಮಬದ್ಧವಾಗಿ ವಿವರಿಸುವುದು 
3.  ವೈಯಕ್ತಿಕ ನೆನಪಿನ ಮೇರೆಗೆ ವಾಸ್ತವಿಕ ಘಟನೆಯನ್ನು ವಿವರಿಸುವುದು 
ಇವು ವಿವಿಧ ರೀತಿಯ ವಿವರಣಾ ಕೌಶಲಗಳು.  ಮಕ್ಕಳಲ್ಲಿ  ಸಾಮಾನ್ಯ ವಿವರಣಾ ಕೌಶಲ ಆರಂಭವಾಗುವುದಕ್ಕೆ ಬಹಳ ಮೊದಲೆ ವೈಯಕ್ತಿಕ ವಿವರಣಾ ಕೌಶಲ ಬೆಳೆದಿರುತ್ತದೆ. ಒಂದು ಮಗುವಿನಲ್ಲಿರುವ ವಿವರಣಾ ಕೌಶಲ ಅಥವಾ ವಿವರಿಸುವ ಕಲೆಯು ಅದರ ಶಿಕ್ಷಣ, ಉತ್ತಮ ಸಾಮಾಜಿಕ ಸಂವಹನ ಮತ್ತು ತಾತ್ತಿ$Ìಕ ಕಾರಣಗಳ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.

ಕಾಲ್ಪನಿಕ ಕಥೆ ಹೇಳುವುದು ಮತ್ತು ಅದನ್ನು ಮರು-ನಿರೂಪಣೆ ಮಾಡುವುದು ಇಲ್ಲಿ ಮಗುವು ತಾನು ಕೇಳಿದ ಸಂಗತಿಗಳನ್ನು ಕಲ್ಪಿಸಿಕೊಳ್ಳುತ್ತದೆ ಅನ್ನುವುದು ಬಹಳ ಕುತೂಹಲಕಾರಿಯಾದ ಅಂಶ. ಒಂದು ಸಂಗತಿಯನ್ನು ಮಗುವು ಕಥೆಯಲ್ಲಿ ಕೇಳಿರಬಹುದು ಅಥವಾ ಕಾಟೂìನ್‌, ಸಿನೆಮಾಗಳಲ್ಲಿ ನೋಡಿರಬಹುದು. ಕೆಲವು ಬಾರಿ ಮಕ್ಕಳು ಆ ಸಂಗತಿಗಳನ್ನು ತಮ್ಮದೇ ಅನುಭವ ಎನ್ನುವಂತೆ ಹೇಳುತ್ತಾರೆ. ಜಾನ್‌ನ ಒಂದು ಕಾಲ್ಪನಿಕ ಕಥೆ ಇಲ್ಲಿದೆ.

ಒಮ್ಮೆ ನಮ್ಮ ತೋಟಕ್ಕೆ ಒಂದು ನಾಗರಹಾವು ಬಂದಿತ್ತು. ಅದು ತುಂಬಾ ದೊಡ್ಡದಿತ್ತು ಮತ್ತು ಭಾರಿ ಉದ್ದ ಇತ್ತು. ನನ್ನ ಅಪ್ಪ ಆಫೀಸ್‌ಗೆ ಹೋಗಿದ್ರು, ನನ್ನ ಅಮ್ಮ ಮತ್ತು ಅಜ್ಜಿಗೆ ಆ ಹಾವನ್ನು ನೋಡಿ ತುಂಬಾ ಭಯ ಆಯ್ತು, ಅವ್ರು ಹೆದರಿಕೊಂಡು ಮನೆಯೊಳಗೆ ಓಡಿಬಿಟ್ರಾ. ನಾನು ಕೂಡ್ಲೆ ನಮ್ಮ ಅಡೆY ಕೋಣೆಗೆ ಹೋದೆ ಮತ್ತು ಚೋಟಾ ಭೀಮ್‌ನ ಹಾಗೆ ಒಂದು ಲಡ್ಡುವನ್ನು ತಿಂದೆ. ನಂಗೆ ಶಕ್ತಿ ಬಂತು. ನಾನು ಆ ಹಾವನ್ನು ಎತ್ತಿ ಆ ಕಡೆ ಬಿಸಾಡಿ ಬಿಟ್ಟೆ, ನಮ್ಮ ಮನೆಯವೆÅಲ್ಲಾ ನಂಗೆ ಒಳ್ಳೆ ಹುಡುಗ ಅತಂದ್ರು ಕ್ರಮಬದ್ಧವಾಗಿ ಘಟನೆಯನ್ನು ವಿವರಿಸುವುದು ಅಂದರೆ ಮುಂದೆ ಜರಗಲಿರುವ ಸಂಗತಿಗಳನ್ನು ಅವುಗಳು ಜರಗುವ ಸರಣಿಯಲ್ಲಿಯೇ ಅಥವಾ ಅವು ಜರುಗಬೇಕಾಗಿರುವ ಯೋಜಿತ ರೀತಿಯಲ್ಲಿಯೇ ಆ ಘಟನೆಗಳನ್ನು ವಿವರಿಸುವುದು.

ಈ ಬೇಸಗೆ ರಜೆಯಲ್ಲಿ ನನ್ನ ಅಪ್ಪ, ನಮ್ಮ ಮನೆಯವರನ್ನೆಲ್ಲಾ  ಟ್ರಿಪ್‌ ಕರ್ಕೊಂಡು ಹೋಗ್ಲಿಕ್ಕೆ ಯೋಜಿಸಿದ್ದಾರೆ. ಮೊದಲು ಊಟಿಗೆ, ನಂತರ ಕೊಡೈಕ್ಕೆನಾಲ್‌ಗೆ ಮತ್ತು ಕೊನೆಯಲ್ಲಿ ಅಮ್ಯೂಸ್‌ಮೆಂಟ್‌ ಪಾರ್ಕ್‌ಗೆ. ನನ್ನ ಅಪ್ಪ ನನಗಾಗಿ ತುಂಬಾ ಆಟಿಕೆ, ಕಾರ್‌ ಮತ್ತು ಐಸ್‌ ಕ್ರೀಂ ಅನ್ನು ತೆಗೆದುಕೊಡ್ತೇನೆ ಅಂತ ಹೇಳಿದ್ದಾರೆ. ರಜಾ ದಿನ ಬರೋವರೆಗೆ ಕಾಯೋದಿಕ್ಕೆ ನನೆY ಸಾಧ್ಯವೇ ಇಲ್ಲ.

ವೈಯಕ್ತಿಕ ನೆನಪಿನ ಮೇರೆಗೆ ವಾಸ್ತವಿಕ ಸಂಗತಿಯನ್ನು ವಿವರಿಸುವುದರೊಂದಿಗೆ ಈ ಲೇಖನ ಆರಂಭವಾಗಿತ್ತು. ಅಲ್ಲಿ ಆ ಮಗುವು ತನ್ನ ನಿತ್ಯ ಜೀವನದಲ್ಲಿ ಘಟಿಸಿದ ಅಥವಾ ತನಗೆ ಎದುರಾದ ಸನ್ನಿವೇಶವನ್ನು  ವಿವರಿಸುತ್ತಿದ್ದ.

ಕಥನ ನಿರೂಪಣೆ : ಅಂದರೆ ಹೆಚ್ಚಿನ ಸಂದರ್ಭಗಳಲ್ಲಿ ಪ್ರಚೋದನೆ ಸಿಕ್ಕಾಗ ತನಗಾದ ಒಂದು ವೈಯಕ್ತಿಕ ಅನುಭವವನ್ನು ಭೂತಕಾಲ ಪ್ರಯೋಗದಲ್ಲಿ  ವಿವರಿಸುವುದು. (ಹೆಡºರ್ಗ್‌ ಹಾಗೂ ವೆಸ್ಟ್‌ಬೈ 1993).

ಅಮ್ಮ : “”ರಾಮ್‌, ನಿಂಗೆ ನೆನಪಿದೆಯಾ, ಕಳೆದ ಶುಕ್ರವಾರ ನಾವು ಸರ್ಕಸ್‌ ನೋಡ್ಲಿಕ್ಕೆ ಹೋಗಿದ್ದಾಗ ಏನಾಗಿತ್ತು ಅಂತ?
ರಾಮ್‌: ಹೌದಮ್ಮಾ, ಅಲ್ಲಿ ಆನೆಗಳು, ಕುದುರೆ, ನಾಯಿಗಳು ಇದುÌ. ಅವುಗಳು ಹಾರೋದು ಮತ್ತು ಆಟವಾಡೋದು ನೋಡೋದಿಕ್ಕೆ ಬಹಳ ಮಜವಾಗಿತ್ತು. ಆನೆಗಳು ಬೈಸಿಕಲ್‌ ಓಡಿಸ್ತಾ ಇದ್ವಲ್ಲ ನಂಗೆ ಅದು ಬಹಳ ಇಷ್ಟ ಆಯ್ತು. ಅಮ್ಮ ನನೆY ಆಟ ಆಡೋದಿಕ್ಕೆ ಒಂದು ಆನೇನ ನಾವು ಯಾವತ್ತು ತರೋದು?

ಕಾರಣ ವಿವರಣೆ: ಒಂದು ವೈಯಕ್ತಿಕ ಅನುಭವವನ್ನು ಯಾವ ಪ್ರಚೋದನೆಯೂ ಇಲ್ಲದೆ ವಿವರಿಸುತ್ತಾ ಸಾಗುವುದು. ಆ ಅನುಭವವು ಸಾಮಾನ್ಯವಾಗಿ ಕೇಳುಗನು ಹಂಚಿಕೊಂಡದ್ದಾಗಿರುವುದಿಲ್ಲ. (ಹೆಡºರ್ಗ್‌ ಹಾಗೂ ವೆಸ್ಟ್‌ಬೈ 1993)

ಈ ದಿನ ಹೇಗೆ ಕಳೀತು ರಾಘವ? ಇವತ್ತು ಶಾಲಿನಿ ಟೀಚರ್‌ ನನ್ನ ಬಯ್ದು ಬಿಟ್ರಾ. ಹೌದಾ, ಯಾಕೆ ಏನಾಯ್ತು? ನನ್ನನ್ನ ಜಾನ್‌ ದೂಡಿದ.  ಹೌದಾ…….. ಯಾಕೆ?ನಾನು ವರಾಂಡದಲ್ಲಿ ನಡ್ಕೊಂಡ್‌ ಹೋಗ್ತಾ ಇದ್ದೆ, ಅವ್ನು ಓಡ್ತಾ ಬಂದು ನನ್ನ ತಳ್ಳಿದ ಅಯ್ಯೋ ದೇವೆÅ! ಅದು ಒಳ್ಳೇದಲ್ಲ, ಹಾಗ್‌ ಮಾಡಾºರ್ದು!, ಸರಿ ಆಮೇಲೇನಾಯ್ತು? ಶಾಲಿನಿ ಟೀಚರ್‌ ನಮ್ಮನ್ನ ನೋಡಿದ್ರು ಮತ್ತು ನಮ್ಗೆ ಬಯ್ದು ಬಿಟ್ರಾ, ನಾವು ಒಬ್ಬರಿಗೊಬ್ಬರು ಸಾರಿ ಕೇಳ್ಬೇಕು ಅಂತ ಹೇಳಿದ್ರು ಮತ್ತು ಇನ್ಮುಂದೆ  ಗೆಳೆಯರಾಗಿ ಇಬೇìಕು ಅಂತ ಹೇಳಿದ್ರು. ಸರಿ, ಒಳ್ಳೆ ಹುಡುಗ ನೀನು, ಒಳ್ಳೇ ಹುಡುಗ್ರು ಇನ್ನೊಬ್ರ ಜೊತೆ ಯಾವತ್ತೂ ಕೆಟ್ಟದಾಗಿ ನಡ್ಕೊಳಲ್ಲ. ನೀನು ಎಲ್ಲರ ಜೊತೆಗೂ ಒಳ್ಳೇ ರೀತೀಲಿ ಇಬೇìಕು ಆಯ್ತಾ.

ವಿಲ್ಲಿಯ ಲ್ಯಾಬೋವ್‌ ಅನ್ನುವವರು ವೈಯಕ್ತಿಕ ವಿವರಣೆಯ ಪ್ರಪ್ರಥಮ ಮತ್ತು ಬಹುದೊಡ್ಡ ಸಂಶೋಧಕರು. ನಾಲ್ಕು ಅಂಶಗಳನ್ನು ಆಧರಿಸಿ ಅವರು ವಿವರಣಾ ಕೌಶಲದ ಬೆಳವಣಿಗೆಯ ಸರಣಿಯನ್ನು ಅಭಿವೃದ್ಧಿಪಡಿಸಿದರು. 
1.  ವಸ್ತುಸ್ಥಿತಿ  (ವಸ್ತು ವಿಷಯದ ಬಗೆಗಿನ ವಿವರಣಾತ್ಮಕ ಮಾಹಿತಿ) 
2. ಕ್ರಿಯೆ (ಭಿನ್ನವಾದ, ಸರಣಿ ಕ್ರಮದ ಭೂತಕಾಲದ ಘಟನೆಗಳು) 
3. ವಿಶ್ಲೇಷಣೆ :ನಡೆದ ಘಟನೆಯ ಬಗ್ಗೆ ಹೇಗೆ, ಎಲ್ಲಿ, ಯಾಕೆ, ಏನು ಮತ್ತು ಯಾರು ಎಂಬ ಬಗ್ಗೆ ವಿವರಿಸುವಾತನ ಅನಿಸಿಕೆ 
4. ನಿರ್ಣಯ ಮತ್ತು ಪರಿಸಮಾಪ್ತಿ 
ಮಕ್ಕಳಲ್ಲಿ ಕಾಲ್ಪನಿಕ ವಿವರಣೆಯ ಅಂಶ ಬೆಳೆಯುವ ಮೊದಲೆ ಅವರ ವೈಯಕ್ತಿಕ ವಿವರಣೆಯ ಬೆಳವಣಿಗೆಯು ರಚನಾತ್ಮಕ ಜಟಿಲತೆಯ ಬೆಳವಣಿಗೆಗೆ ಕಾರಣವಾಗುತ್ತದೆ ಎಂಬುದನ್ನು  ವಿಲಿಯಂ ಲ್ಯಾಬೋವ್‌ ರುಜುವಾತು ಪಡಿಸಿದರು.  ಹಾಗಾಗಿ, ನಾವು ಮಕ್ಕಳಲ್ಲಿನ ವೈಯಕ್ತಿಕ ವಿವರಣಾ ಕೌಶಲಕ್ಕೆ ಉತ್ತೇಜನ ನೀಡಿದರೆ ಅದು ಮಕ್ಕಳ ಅಕ್ಷರಜಾnನ ಕೌಶಲವನ್ನು ಉತ್ತಮ ಪಡಿಸುತ್ತದೆ.

ಶಾಲಾ-ಪೂರ್ವ ಹಂತದಲ್ಲಿರುವ ಮಕ್ಕಳಲ್ಲಿ ಅಕ್ಷರ ಜಾnನ ಬೆಳೆಯಲು ವಿವರಣೆ ಸಹಿತ ಸಂವಾದವು ಬಲವಾದ ಉತ್ತೇಜನ ಆಗಬಲ್ಲದು.   ಸುಸಂಬದ್ಧ  ವಿವರಣಾ ಸಾಮರ್ಥ್ಯವು ಶೈಕ್ಷಣಿಕ ಅಭ್ಯಾಸವು ಯಾವ ಅಡೆ-ತಡೆಯೂ ಇಲ್ಲದಂತೆ ಸಾಗುತ್ತದೆ ಎಂಬುದರ ಮುನ್ಸೂಚನೆ ಆಗಿರುತ್ತದೆ. ಸಂಶೋಧಕರ ಒಂದು ತಂಡವು ಭಾಷಾ ನ್ಯೂನತೆ ಇದ್ದ ಮತ್ತು ಭಾಷೆಯನ್ನು ಕಲಿಯುತ್ತಿದ್ದ ನಾಲ್ಕರಿಂದ ಆರು ವರ್ಷ ನಡುವಿನ ವಯಸ್ಸಿನ 87 ಮಕ್ಕಳನ್ನು ಗಮನಿಸಿದರು. ಒಂದು ಸಣ್ಣ ಕಥೆಯನ್ನು ಮತ್ತೆ ನೆನಪು ಮಾಡಿಕೊಂಡು ಹೇಳುವ ಸಾಮರ್ಥ್ಯ ಇರುವ ಮಕ್ಕಳಲ್ಲಿ ಭಾಷೆಯ ಕಲಿಕೆಯ ಬೆಳವಣಿಗೆಯನ್ನೂ ಸಹ ಅತ್ಯುತ್ತಮವಾಗಿ ನಿರೀಕ್ಷಿಸಬಹುದು ಎಂಬ ಅಂಶವನ್ನು ಅವರು ಕಂಡುಕೊಂಡರು. ವೈಯಕ್ತಿಕ ವಿವರಣಾ ಕೌಶಲವು ಭಾಷಾ ಬೆಳವಣಿಗೆಗೆ ಪೂರಕ ಎಂಬುದನ್ನು ಅವರು ಕಂಡುಕೊಂಡರು. ಸಂವಾದ ಕೌಶಲದ ಕೊರತೆಗೂ ಓದುವಿಕೆಗೂ ಸಂಬಂಧ ಇದೆ ಎಂಬುದು ಅವರ ಅಭಿಪ್ರಾಯವಾಗಿತ್ತು.  ಹೆಚ್ಚಾಗಿ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ನಾವು ಇದನ್ನು ಕಾಣಬಹುದು.

ಭಾಷೆಗೆ ಸಂಬಂಧಿಸಿದ ಅರಿವಿನ ಸಮಸ್ಯೆ ಇದೆಯೇ ಎಂದು ವಿಶ್ಲೇಷಣೆ ಮಾಡುವ ಮೂಲಕ, ಇರುವ ಸಮಸ್ಯೆಗೆ ಪರಿಹಾರ ಕಂಡುಕೊಂಡು ಕಲಿಕೆಯ ಅಸಾಮರ್ಥ್ಯವನ್ನು ಆರಂಭದಲ್ಲೇ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ  ವಿವರಣಾ ಕೌಶಲವು ಸಹಾಯ ಮಾಡಬಹುದು. ಮಕ್ಕಳಲ್ಲಿನ ವಿವರಣಾ ಕೌಶಲ ಅನ್ನುವುದು ಮಕ್ಕಳಲ್ಲಿ ಉತ್ತಮ ಶೈಕ್ಷಣಿಕ ಮತ್ತು ಸಾಮಾಜಿಕ ಕೌಶಲವನ್ನು ನಿರೀಕ್ಷಿಸಬಹುದಾದ ಅದರಲ್ಲೂ  ವಿಶೇಷವಾಗಿ ಓದುವ ಮತ್ತು ಬರೆಯುವ ಕೌಶಲದ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಬಹುದಾದ ಪ್ರಮಾಣಿಕ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ.

ಎರಡನೆಯ ತರಗತಿಯಲ್ಲಿದ್ದು, ಓದುವಿಕೆಯ ತೊಂದರೆ ಇರುವ ಮಕ್ಕಳಲ್ಲಿ. ಅವರು ಎರಡರಿಂದ ಆರು ವರ್ಷಗಳ ವಯೋಮಾನದವರಾಗಿದ್ದಾಗ ಅವರಲ್ಲಿ ವಾಕ್ಯ ರಚನೆಯ ತೊಂದರೆ ಇತ್ತು ಎಂಬುದನ್ನು ಸ್ಕ್ಯಾರ್‌ ಬಾರೋ (1990) ಎಂಬ ಸಂಶೋಧಕರು ಕಂಡುಕೊಂಡರು. ಇಂತಹ ಮಕ್ಕಳು ಎರಡರಿಂದ ಆರು ವರ್ಷಗಳ ನಡುವೆ ಸರಾಗವಾಗಿ ಮಾತನಾಡಲು ಆಗದಿರುವ ತೊಂದರೆ, ವಾಕ್ಯ ರಚನೆಯ ತೊಂದರೆ ಉಚ್ಚಾರಣೆಯ ದೋಷ ಇತ್ಯಾದಿ ಸಮಸ್ಯೆಗಳನ್ನು ಅನುಭವಿಸಿರುತ್ತಾರೆ. ಓದುವ ತೊಂದರೆ ಇರುವ ಮಕ್ಕಳಿಗೆ ವಿವರಣೆ ಸಹಿತ ಸಂವಾದ ಕೌಶಲದ ಕೊರತೆಯೂ ಇರುತ್ತದೆ. ಅಂದರೆ ಬಹಳ ಪರಿಚಿತ ಇರುವ ಘಟನೆಯ ಹಂತಗಳನ್ನು ನೆನಪು ಮಾಡಿಕೊಳ್ಳಲು ಆಗದಿರುವುದು ಮತ್ತು ವಿವರಿಸಲು ವಾಕ್ಯ ಜೋಡಣೆ ಮಾಡಲು ಆಗದಿರುವುದು, ಮತ್ತು ಘಟನೆಯ ವಿವಿಧ ಹಂತಗಳನ್ನು ಜೋಡಿಸಲು ಸೂಕ್ತ ಜೋಡಣಾ ಶಬ್ದಗಳನ್ನು ಹೊಂದಿಸಲು ಆಗದಿರುವುದು, ನೆನಪು ಮಾಡಿಕೊಳ್ಳಲು ಹೇಳಿದಾಗ ಮಾಮೂಲಿ ಮತ್ತು ಬಹುಮುಖ್ಯ ಕೊಂಡಿಗಳನ್ನು ಬಿಟ್ಟು ಬಿಡುವುದು. ಒಂದು ಕತೆಯ ಬಹುಮುಖ್ಯ ಅಂಶಗಳಲ್ಲಿ ಕೆಲವೇ ಕೆಲವನ್ನು ಹೇಳುವುದು ಇವೆಲ್ಲವೂ ಓದುವಿಕೆಯ ತೊಂದರೆ ಇರುವ ಮಕ್ಕಳು ಎದುರಿಸುವ ಇನ್ನಿತರ ಸವಾಲುಗಳಾಗಿರುತ್ತವೆ. ಈ ಎಲ್ಲಾ ಅಂಶಗಳನ್ನು ಶಾಲೆಯಲ್ಲಿ ಅಧ್ಯಾಪಕರು ಪರೀಕ್ಷಿಸಿ ನೋಡಬಹುದು ಮತ್ತು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡರೆ ಅಂತಹ ಮಕ್ಕಳಿಗೆ ಬಹುದೊಡ್ಡ ಪ್ರಯೋಜನವಾದೀತು.

ಶಾಲಾಪೂರ್ವ ಹಂತದಲ್ಲಿರುವ ಮಕ್ಕಳಲ್ಲಿ ವಿಷಯವನ್ನು ಗ್ರಹಿಸುವ ಸಾಮರ್ಥ್ಯ ಮತ್ತು ಆರಂಭಿಕ ಅಕ್ಷರ ಜಾnನದ ಇತರ ಅಂಶಗಳಾದ ಶಬ್ದಗಳನ್ನು ಹೇಳುವ ಸಾಮರ್ಥ್ಯ, ಧ್ವನಿಯ ಬಗೆಗಿನ ಅರಿವು ಮತ್ತು ಬರಹದ ಆರಂಭಿಕ ಕೌಶಲಗಳಿಗೂ ಬಲವಾದ ಸಂಬಂಧ ಇದೆ ಎಂಬುದಾಗಿ ಸಂಶೋಧಕರು ಒತ್ತಿ ಹೇಳುತ್ತಾರೆ (ಡಿಕ್ಸನ್‌ ಮತ್ತು ಸ್ನೋ, 1987). ಭಾಷೆಯನ್ನು, ಓದುವಾಗ ಇರುವ ಕಷ್ಟದ ಮಟ್ಟವು ಅದನ್ನು ಅರ್ಥಮಾಡಿಕೊಳ್ಳುವಾಗ ಅಥವಾ ಗ್ರಹಿಸುವಾಗ ಇರುವುದಕ್ಕಿಂತ ಬಹಳ ಕಡಿಮೆ ಇರುತ್ತದೆ.

ಉದಾ: ಮಗುವು ತನಗೆ ಪರಿಚಿತ ಇರುವ ಚಿತ್ರ ಮತ್ತು ಕಥೆಗಳನ್ನು ಗ್ರಹಿಸಬಹುದು ಆದರೆ ಅದರಲ್ಲಿ ಕೆಲವನ್ನು ಮಾತ್ರ ಓದಬಹುದು. ಉದಾ: 6-7 ವರ್ಷದ ಹೆಚ್ಚಿನ ಮಕ್ಕಳು 4,000 ಅಥವಾ ಅದಕ್ಕಿಂತ ಹೆಚ್ಚಿನ ಶಬ್ದಗಳನ್ನು ಕೇಳಿ ಅರ್ಥಮಾಡಿಕೊಳ್ಳಬಹುದು ಆದರೆ ಅವರಿಗೆ ಓದಲು ಸಾಧ್ಯವಾಗುವುದು ಸುಮಾರು 600 ಶಬ್ದಗಳನ್ನು ಮಾತ್ರ. ಇದರ ಅರ್ಥ ವಿಷಯವನ್ನು ಓದಿ ಗ್ರಹಿಸುವುದಕ್ಕಿಂತಲೂ ಕೇಳಿ ಗ್ರಹಿಸುವ ಸಾಮರ್ಥ್ಯವು ಮುಂದಿರುತ್ತದೆ (0-14 ವರ್ಷಗಳು) ಆದರೆ ಆ ಬಳಿಕದ 15 ರಿಂದ 17 ವರ್ಷ ವಯೋಮಾನದಲ್ಲಿ ಕೇಳಿ ಗ್ರಹಿಸುವುದಕ್ಕಿಂತಲೂ ಓದಿ ಗ್ರಹಿಸುವ ಸಾಮರ್ಥ್ಯವು ಮುಂದಿರುತ್ತದೆ. ಹಾಗಾಗಿ ಮಕ್ಕಳನ್ನು ವಿವರಣಾ ಕೌಶಲಕ್ಕೆ ಹೆಚ್ಚು ಒತ್ತು ನೀಡಿದಂತೆಲ್ಲಾ ಅವರಲ್ಲಿನ ಓದುವಿಕೆಯ ಕೌಶಲವು ಇನ್ನಷ್ಟು ಉತ್ತಮಗೊಳ್ಳುತ್ತದೆ (ಜೀನೆ ಎಸ್‌ 1983).
ಅಕ್ಷರ ಜಾnನದ ಸಾಧನೆಯನ್ನು ಮುಂಗಾಣುವಲ್ಲಿ ಮೌಖೀಕ ವಿವರಣೆಯ ಪಾತ್ರ- ಪ್ರಾಮುಖ್ಯತೆ ಏನು ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

ನಾವು ಏನು ಮಾಡಬೇಕು?
ಹಂತ 1: ನಿಮ್ಮ ಮಗುವಿನ ಮಾತು ಮತ್ತು ಭಾಷಾ ಕೌಶಲವನ್ನು ಗುರುತಿಸುವುದು
ನಿಮ್ಮ ಮಗುವು ಓರಗೆಯ ಇತರ ಮಕ್ಕಳ ಹಾಗೆಯೆ ಮಾತನಾಡುತ್ತದೆಯೇ? ಅದಕ್ಕೆ ಇಲ್ಲ ಅಥವಾ ಅಷ್ಟೊಂದು ಅಲ್ಲ ಎಂಬುದು ನಿಮ್ಮ ಉತ್ತರ ಆಗಿದ್ದರೆ, ಯಾಕಿಲ್ಲ ಎಂದು ನೀವು ಯೋಚಿಸಬೇಕು. ಅದು ಮಗುವಿನಲ್ಲಿರುವ ತೆರೆದುಕೊಳ್ಳುವಿಕೆಯ ಕೊರತೆಯಿಂದ ಆಗಿರಬಹುದು, ಈ ನಿಟ್ಟಿನಲ್ಲಿ ಪೂರಕ ಪರಿಸರವನ್ನು ನೀವು ನಿಮ್ಮ ಮಗುವಿಗೆ ಒದಗಿಸಬೇಕು. ಅಥವಾ ಮಗುವಿನಲ್ಲಿ  ವಿವಿಧ ಕಾರಣಗಳಿಂದ ಬೆಳೆದಿರುವ ನಾಚಿಕೆಯ ಸ್ವಭಾವವೂ ಇದಕ್ಕೆ ಕಾರಣ ಆಗಿರಬಹುದು ಅಥವಾ ನಿಮ್ಮ ಮಗುವು ನಿಧಾನವಾಗಿ ತೆರೆದುಕೊಳ್ಳುವ ಸ್ವಭಾವದವನಾಗಿರಬಹುದು ಅಥವಾ ಆತನಲ್ಲಿ ಮಾತು ಮತ್ತು ಭಾಷಾ ಕೌಶಲದ ಬೆಳವಣಿಗೆ ಬಹಳ ನಿಧಾನವಾಗಿ ಆಗುತ್ತಿರಬಹುದು ಅಥವಾ ಇದು ಕಲಿಕೆಯ ನ್ಯೂನತೆಯ ಮೊದಲ ಹಂತವೂ ಸಹ ಆಗಿರಬಹುದು.

ಹಂತ 2: ಮಗುವಿನಲ್ಲಿ ಆಗುತ್ತಿರುವ ವಿವರಿಸುವ ಸಾಮರ್ಥ್ಯದ ಬೆಳವಣಿಗೆಯನ್ನು ಗಮನಿಸುವುದು.

ಒಂದು ಕಥೆಯನ್ನು ಮತ್ತೆ ಮತ್ತೆ ಹೇಳು ಎಂದು ಮಗುವನ್ನು ಒತ್ತಾಯಿಸುವುದಕ್ಕೆ ಬದಲಾಗಿ ಒಂದು ವೈಯಕ್ತಿಕ ಅನುಭವವನ್ನು ವಿವರಿಸುವಂತೆ ಮಗುವನ್ನು ಪ್ರೋತ್ಸಾಹಿಸಿ. ಅದು ಆ ಮಗುವಿನ ದಿನನಿತ್ಯದ ಚಟುವಟಿಕೆಯ ಸಂದರ್ಭ ಆಗಿರಬಹುದು ಅಥವಾ ಪ್ರತಿ ದಿನದ ಯಾವುದೋ ಒಂದು ಘಟನೆಯೂ ಆಗಿರಬಹುದು.  ಮಗು ಆ ಘಟನೆಯನ್ನು ವಿವರಿಸುತ್ತಾ ಇರುವಾಗ ಅದರಲ್ಲಿ ನಿಮಗೆ ಆಸಕ್ತಿ, ಕುತೂಹಲ ಇದೆ ಎಂದು ತೋರಿಸಿ. ಏನಾಯಿತು ಮತ್ತು ಹೇಗೆ ನಡೆಯಿತು ಎಂಬ ಬಗ್ಗೆ ನಿಮಗೆ ಆಸಕ್ತಿ ಇದೆ ಎಂದು ತೋರಿಸಿಕೊಳ್ಳಿ. ಆಮೇಲೆ ಏನಾಯಿತು? ಆಮೇಲೆ ನೀನೇನು ಮಾಡಿದೆ ಅಯ್ಯೋ…ಹಾಗಾಯ್ತಾ………ಇತ್ಯಾದಿ ಭಾವನೆಗಳನ್ನು ತೋರಿಸಿ.  ಲ್ಯಾಬೊವ್‌ ಹೇಳುತ್ತಾರೆ, ಮಕ್ಕಳು ಒಂದು ಸರಳ ಘಟನೆಯ ಒಳಹೊಕ್ಕು ನೋಡಿದ ಹಾಗೆಲ್ಲಾ ವೈಯಕ್ತಿಕ ವಿವರಣೆಯು ಅವರನ್ನು ಇನ್ನಷ್ಟು ಯೋಚಿಸುವಂತೆ ಮಾಡುತ್ತದೆ. ಕುತೂಹಲ ಮತ್ತು ಕಲ್ಪನೆಯ ಜೊತೆಗೆ ಅವರ ವೈಯಕ್ತಿಕ ಯೋಚನೆ ಮತ್ತು ಅನುಭವಗಳು ಇನ್ನಷ್ಟು ಸ್ತರಿಸುತ್ತವೆ ಎಂದು. ವಿವರಣಾ ಕೌಶಲದ ಬೆಳವಣಿಗೆಯ ಹಂತಗಳನ್ನು ಕೆಳಗೆ ಕೊಡಲಾಗಿದೆ ಇದು ಮಕ್ಕಳಲ್ಲಿನ ಕೌಶಲದ ಬೆಳವಣಿಗೆಯ ಮೇಲೆ ನಿಗಾ ಇರಿಸಲು ಸಹಾಯ ಮಾಡುತ್ತದೆ.

ಮಗುವನ್ನು ಯಾವುದರಲ್ಲಾದರೂ ಮಗ್ನಗೊಳಿಸುವುದು ಬಹಳ ಆವಶ್ಯಕ ಯಾಕೆಂದರೆ ಇದು ಮಗುವಿನ ಬೆಳವಣಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ವಾಸ್ತವ ಏನೆಂದರೆ ವಿವರಣಾ ಕೌಶಲ ಅನ್ನುವುದು ಆ ಮಗುವು ಶಾಲೆಯಲ್ಲಿ ಕಲಿಯುವ ಪಾಠದಷ್ಟೆ ಮಹತ್ವದ್ದು, ಪಂಚಾಂಗ ಗಟ್ಟಿ ಇಲ್ಲದಿದ್ದರೆ, ಮನೆ ಕಟ್ಟುವುದು ಅಸಾಧ್ಯ. ಹೀಗಾಗಿ, ಮಕ್ಕಳು ಹೆಚ್ಚು ಹೆಚ್ಚು ಕಲಿತು ಯಶಸ್ವಿಗಳೆನಿಸಲು ಶಿಕ್ಷಕರು ಮತ್ತು ಪಾಲಕರು ಒಂದು ಹೆಜ್ಜೆ ಮುಂದಿರಿಸಬೇಕು. ನೆನಪಿಡಿ, ಒಬ್ಬ  ಹಿರಿಯರನ್ನು ಸರಿಪಡಿಸುವುದಕ್ಕಿಂತಲೂ, ಒಂದು ಮಗುವನ್ನು ತಿದ್ದುವುದು ಹೆಚ್ಚು ಸುಲಭ.

ಮಕ್ಕಳಲ್ಲಿನ ವಿವರಣಾ ಕೌಶಲ ಅನ್ನುವುದು ಮಕ್ಕಳಲ್ಲಿ ಉತ್ತಮ ಶೈಕ್ಷಣಿಕ ಮತ್ತು ಸಾಮಾಜಿಕ ಕೌಶಲವನ್ನು ನಿರೀಕ್ಷಿಸಬಹುದಾದ ಅದರಲ್ಲೂ ವಿಶೇಷವಾಗಿ ಓದುವ ಮತ್ತು ಬರೆಯುವ ಕೌಶಲದ ಉತ್ತಮ ಬೆಳವಣಿಗೆಯನ್ನು ನಿರೀಕ್ಷಿಸಬಹುದಾದ ಪ್ರಮಾಣಕ ಎಂದು ಹೇಳುತ್ತಾರೆ ಸಂಶೋàಧಕರಾದ ಮೆಕ್‌ ಕೇಬ್‌ ಮತ್ತು ರಾಲಿನ್ಸ್‌  (2000).

ಜಟಿಲತೆ¿å  ಅಂಶಗಳಿಗೆ ಸಂಬಂಧಿಸಿದ ಹಾಗೆ ಬೆಳವಣಿಗೆ¿å ಹಂತಗಳ ಗಮನಿಸುವಿಕೆ (ವಸ್ತುಸ್ಥಿತಿ, ಕ್ರಿಯೆ, ವಿಶ್ಲೇಷಣೆ ಮತ್ತು ಪರಿಸಮಾಪ್ತಿ)

ವಿಲ್ಲಿಯಂ ಲೆಬೋವ್‌ ವ್ಯವಸ್ಥೆಗೊಳಿಸಿದ ಲೆಬೋವಿಯನ್‌ ನಿರ್ವಹಣಾ ವ್ಯವಸ್ಥೆಯು ವಿವರಣಾ ಕೌಶÇÂದ ಅಪಾಯದಲ್ಲಿ ಇರುವ ಮಕ್ಕಳನ್ನು ಗಮನಿಸಲು ನಮಗೆ ಸಹಾಯ ಮಾಡುತ್ತವೆ. ಇದನ್ನು ವಿಶೇಷ ಮಟ್ಟದ ವಿವರಣಾ ವಿನ್ಯಾಸದ ಬೆಳವಣಿಗೆಯ ಹಂತಗಳು ಎಂಬುದಾಗಿ ಕರೆಯುತ್ತಾರೆ. ಅದು ಈ ಕೆಳಗಿನಂತಿದೆ:

ಒಂದು ಘಟನೆಯ ವಿವರಣೆ: ಮಾತುಕತೆಯಲ್ಲಿ ಭೂತಕಾಲಕ್ಕೆ ಸಂಬಂಧಿಸಿದ ಒಂದೇ ಒಂದು ಘಟನೆಯ ವಿವರಣೆ ಇರುವುದು. ಮೂರೂವರೆ ವರ್ಷಕ್ಕೆ ಮೊದಲೇ ಇದು ಕಂಡುಬರುತ್ತದೆ. ಉದಾ.: ನನಗೆ ಒಂದು ಜೇನು ನೊಣ ಕಚ್ಚಿತು. 
 
ಎರಡು ಘಟನೆಗಳ ವಿವರಣೆ: ಇದರಲ್ಲಿ  ಭೂತಕಾಲದ ಎರಡು ಘಟನೆಗಳಿಗೆ ಸಂಬಂಧಿಸಿದ ವಿವರಣೆ ಇರುತ್ತವೆ. ಮೂರೂವರೆ ವರ್ಷದಲ್ಲಿ  ಈ ಬೆಳವಣಿಗೆ ಕಂಡುಬರುತ್ತದೆ. ಉದಾ: ನನಗೆ ಒಂದು ಜೇನು ನೊಣ ಕಚ್ಚಿತು. ಅದು ನನ್ನ ಪಾದಕ್ಕೆ ಚುಚ್ಚಿತು.

– ಮುಂದಿನ ವಾರಕ್ಕೆ  

– ಡಾ| ವೆಂಕಟರಾಜ ಐತಾಳ್‌ ಯು., 
ಪ್ರೊಫೆಸರ್‌, ಸ್ಪೀಚ್‌ ಎಂಡ್‌ ಹಿಯರಿಂಗ್‌ ವಿಭಾಗ,SOAHS ಮಣಿಪಾಲ.

ಟಾಪ್ ನ್ಯೂಸ್

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Nitish Kumar ನೇತೃತ್ವದಲ್ಲೇ ಬಿಹಾರ ಚುನಾವಣೆಗೆ ಎನ್‌ಡಿಎ ಸ್ಪರ್ಧೆ: ಬಿಜೆಪಿ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ

Hindu Temple: ಸಂಭಲ್‌ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

Allu Arjun ಮನೆಗೆ ದಾಳಿ: ಕಾಂಗ್ರೆಸ್‌ ಕೈವಾಡ?

1-sham

Shyam Benegal; ಸಾಮಾಜಿಕ ಕಳಕಳಿ ಚಿತ್ರಗಳ ಪ್ರವರ್ತಕ ವಿಧಿವಶ: ಉಡುಪಿಯ ಬೆನಗಲ್‌ ಮೂಲದವರು

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

INDIA ಕೂಟದ ನಾಯಕತ್ವ ಕಾಂಗ್ರೆಸ್‌ಗೆ ಬೇಡ: ಮಣಿಶಂಕರ್‌ ಅಯ್ಯರ್‌

ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

GST: ಪರೀಕ್ಷಾ ಫಾರಂ ಮೇಲೆ ಜಿಎಸ್‌ಟಿ: ಸರಕಾರ ವಿರುದ್ಧ ಪ್ರಿಯಾಂಕಾ ವಾಗ್ಧಾಳಿ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

JPC: ಒಂದು ರಾಷ್ಟ್ರ ಒಂದು ಚುನಾವಣೆ: ಜ.8ಕ್ಕೆ ಮೊದಲ ಜೆಪಿಸಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.