ಮೈಗ್ರೇನ್ ಎಂಬ ತಲೆಶೂಲೆ
Team Udayavani, Aug 5, 2018, 6:00 AM IST
ಹಿಂದಿನ ವಾರದಿಂದ- ತೀವ್ರ ತರಹದ ಭಾವನಾತ್ಮಕ ಬದಲಾವಣೆಗಳು, ಕಣ್ಣಿಗೆ ಇರಿಯುವಂತಹ ಪ್ರಕಾಶಮಾನವಾದ ದೀಪಗಳು, ತೀಕ್ಷ್ಣ ಘಾಟು ವಾಸನೆಗಳು ಮೈಗ್ರೇನನ್ನು ಪ್ರಚೋದಿಸಬಹುದು. ಮಹಿಳೆಯರಲ್ಲಿ, ಗರ್ಭ ಧರಿಸಿದ ಸಂದರ್ಭದಲ್ಲಿ ಮತ್ತು ಋತುಚಕ್ರದ ಅವಧಿಯಲ್ಲಿ ಅಥವಾ ಹಾರ್ಮೋನ್ ಸಂಬಂಧಿ ಔಷಧಗಳನ್ನು ಉಪಯೋಗಿಸಿದ ಚಿಕಿತ್ಸೆಯಿಂದ ಮೈಗ್ರೇನ್ ಪ್ರಚೋದನೆಗೊಳ್ಳಬಹುದು.
ಮೈಗ್ರೇನ್ ಚಿಕಿತ್ಸೆಯ ವಿಧಾನವು ಈ ಕೆಳಗಿನಂತೆ ನಡೆಯುತ್ತದೆ:
ಕ್ಷಿಪ್ರ (ತಡೆ) ಮತ್ತು ಪ್ರತಿಬಂಧನಾತ್ಮಕ (ಪ್ರಾಫಿಲ್ಯಾಕ್ಟಿಕ್) ಚಿಕಿತ್ಸೆ.ಕ್ಷಿಪ್ರ ಚಿಕಿತ್ಸೆಯು ತಲೆನೋವನ್ನು ತಡೆಯುವ, ಅದು ವೃದ್ಧಿಸುವುದನ್ನು ತಡೆಯುವ ಅಥವಾ ಈಗಾಗಲೇ ಆರಂಭವಾಗಿರುವ ತಲೆನೋವನ್ನು ನಿವಾರಿಸುವ ಗುರಿ ಹೊಂದಿರುತ್ತದೆ. ತಲೆನೋವು ಇಲ್ಲದಿದ್ದರೂ ಒದಗಿಸುವ ಪ್ರತಿಬಂಧನಾತ್ಮಕ ಚಿಕಿತ್ಸೆಯು ಮೈಗ್ರೇನ್ ಹಾವಳಿಯ ಆವರ್ತನಗಳನ್ನು ಮತ್ತು ತೀವ್ರತೆಯನ್ನು ಕಡಿಮೆ ಮಾಡುವ ಗುರಿ ಹೊಂದಿರುತ್ತದೆ. ಅಲ್ಲದೆ, ಹಠಾತ್ ಮೈಗ್ರೇನ್ ತಲೆನೋವುಗಳನ್ನು ಕ್ಷಿಪ್ರ ಚಿಕಿತ್ಸೆಗೆ ಪ್ರತಿಸ್ಪಂದನಾತ್ಮಕವಾಗಿ ಮಾರ್ಪಡಿಸುವ ಗುರಿ ಹೊಂದಿರುತ್ತದೆ. ಜತೆಗೆ ರೋಗಿಯ ಜೀವನ ಗುಣಮಟ್ಟವನ್ನು ವೃದ್ಧಿಸುವುದು ಕೂಡ ಈ ಚಿಕಿತ್ಸೆಯ ಗುರಿಯಾಗಿರುತ್ತದೆ.
ಚಿಕಿತ್ಸೆ ಯಶಸ್ವಿಯಾಗಿ ಮುಂದುವರಿದರೆ 6ರಿಂದ 12 ತಿಂಗಳುಗಳ ಕಾಲ ಪ್ರೊಫಿಲ್ಯಾಕ್ಟಿಕ್ ಔಷಧಗಳನ್ನು ಉಪಶಮನಾತ್ಮಕವಾಗಿ ನೀಡುವುದನ್ನು ಪರಿಗಣಿಸಬಹುದು. ಮೈಗ್ರೇನ್ ರೋಗಿಗಳು ಒತ್ತಡ ರಹಿತ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು. ಪರಿಣಾಮಕಾರಿ ಔಷಧಗಳು ಮತ್ತು ಒತ್ತಡ ನಿವಾರಕ ತಂತ್ರಗಳಾದ ಯೋಗ, ಧ್ಯಾನ ಹಾಗೂ ಗುರುತಿಸಲಾದ ಮೈಗ್ರೇನ್ ಪ್ರಚೋದಕಗಳಿಂದ ದೂರ ಇರುವುದು ಯಶಸ್ಸಿಗೆ ಕೀಲಿಕೈಯಾಗಿರುತ್ತದೆ.
ಔಷಧವನ್ನು ಶಿಫಾರಸು ಮಾಡುವುದಕ್ಕೆ ಮುನ್ನ ಶಿಕ್ಷಣ ಮತ್ತು ಆರೋಗ್ಯ ಪುನರ್ ಸ್ಥಾಪನೆಯ ಖಾತರಿಯನ್ನು ಒದಗಿಸುವ ವರ್ತನಾತ್ಮಕ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಚಲನಾತ್ಮಕ ಪುನರ್ ಸಂಯೋಜನೆ, ಜೈವಿಕ ಪುನರ್ ಅನುಸರಣೆ ಮತ್ತು ವಿಶ್ರಾಂತಿದಾಯಕ ತಂತ್ರಗಳು ತಲೆನೋವಿನ ಚಟುವಟಿಕೆಯನ್ನು ಮತ್ತು ಔಷಧ ಬಳಕೆಯನ್ನು ಕಡಿಮೆ ಮಾಡಲು ಸಹಾಯಕವಾಗಿರುತ್ತವೆ. ಮಕ್ಕಳಲ್ಲಿ, ವರ್ತನಾತ್ಮಕ ಚಿಕಿತ್ಸೆಯು ಬಹಳ ಪರಿಣಾಮಕಾರಿಯಾಗಿರುತ್ತದೆಯಲ್ಲದೆ, ವಯಸ್ಕರಾದಂತೆ ಮೈಗ್ರೇನ್ ನಿಭಾವಣೆಗೆ ಉತ್ತಮ ನೆರವು ನೀಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.