ಬಾಯಿ ಹುಣ್ಣು ಪರೀಕ್ಷೆ ಮತ್ತು ನಿರ್ವಹಣೆಯ ಮಾರ್ಗದರ್ಶಿ
Team Udayavani, Nov 1, 2020, 1:34 PM IST
ಬಾಯಿ ಅಥವಾ ವಸಡುಗಳ ತಳದಲ್ಲಿ ಕಾಣಿಸಿಕೊಳ್ಳುವ ನೋವು ಸಹಿತವಾದ ಸಣ್ಣ ಹುಣ್ಣುಗಳನ್ನು ಬಾಯಿ ಹುಣ್ಣು ಅಥವಾ ಮೌತ್ ಅಲ್ಸರ್ ಎಂಬುದಾಗಿ ಕರೆಯಲಾಗುತ್ತದೆ. ಆಹಾರ ಸೇವನೆ, ಕುಡಿಯುವುದು ಮತ್ತು ಮಾತನಾಡುವುದಕ್ಕೆ ಇವು ಅಡಚಣೆ ಉಂಟು ಮಾಡುತ್ತವೆ. ಮಹಿಳೆಯರು, ಹದಿಹರೆಯದವರು ಮತ್ತು ಬಾಯಿ ಹುಣ್ಣುಗಳ ಕುಟುಂಬ ಇತಿಹಾಸ ಇರುವವರಿಗೆ ಬಾಯಿ ಹುಣ್ಣುಗಳು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಬಾಯಿ ಹುಣ್ಣುಗಳು ಸಾಂಕ್ರಾಮಿಕವಲ್ಲ ಮತ್ತು ಸಾಮಾನ್ಯವಾಗಿ ಒಂದೆರಡು ವಾರಗಳಲ್ಲಿ ತಾವಾಗಿ ವಾಸಿಯಾಗುತ್ತವೆ. ಆದರೆ ತಿಂಗಳುಗಳ ಕಾಲ ಗುಣವಾಗದೆ ಉಳಿದರೆ ಅದು ಕ್ಯಾನ್ಸರ್‌ನ ಲಕ್ಷಣವಾಗಿರಬಹುದಾಗಿದ್ದು, ದಂತ ವೈದ್ಯರ ಬಳಿ ಪರೀಕ್ಷಿಸಿಕೊಂಡು ಸಲಹೆ ಪಡೆಯುವುದು ಒಳಿತು.
ಬಾಯಿಹುಣ್ಣು ಉಂಟಾಗಲು ಕಾರಣವೇನು? : ಬಾಯಿಹುಣ್ಣುಗಳು ಉಂಟಾಗುವುದಕ್ಕೆ ನಿರ್ದಿಷ್ಟ ಕಾರಣ ಇಲ್ಲ. ಆದರೆ ಕೆಲವು ಅಂಶಗಳು ಮತ್ತು ಪ್ರಚೋದಕಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ:
- ದಂತ ವೈದ್ಯಕೀಯ ಚಿಕಿತ್ಸೆಯ ಸಂದರ್ಭದಲ್ಲಿ ಉಂಟಾದ ಸಣ್ಣ ಗಾಯ, ಬಲವಾಗಿ ಹಲ್ಲುಜ್ಜುವುದು ಅಥವಾ ಅಕಸ್ಮಾತ್ ಕಚ್ಚಿಕೊಂಡಿರುವುದು.
- ಸೋಡಿಯಂ ಲಾರಿಲ್ ಸಲ್ಫೆಟ್ ಹೊಂದಿರುವ ಟೂತ್‌ಪೇಸ್ಟ್ ಮತ್ತು ಬಾಯಿ ಮುಕ್ಕಳಿಸುವ ದ್ರಾವಣದ ಬಳಕೆ.
- ಸ್ಟ್ರಾಬೆರಿ, ಸಿಟ್ರಸ್ ಹಣ್ಣುಗಳು ಮತ್ತು ಅನಾನಸಿನಂಥವು ಹಾಗೂ ಚಾಕಲೇಟ್ ಮತ್ತು ಕಾಫಿಯಂತಹ ಇತರ ಪ್ರಚೋದಕ ಆಹಾರಗಳಿಗೆ ಸೂಕ್ಷ್ಮ ಸಂವೇದನೆ.
- ಆವಶ್ಯಕ ವಿಟಾಮಿನ್‌ಗಳ ಕೊರತೆ, ಅದರಲ್ಲೂ ಬಿ-12, ಫೊಲೇಟ್ ಮತ್ತು ಕಬ್ಬಿಣಾಂಶ.
- ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳಿಂದ ಅಲರ್ಜಿ.
- ಹಲ್ಲು ಸರಿಪಡಿಸಲು ಹಾಕಿರುವ ಬ್ರೇಸ್.
- ಋತುಸ್ರಾವದ ಸಂದರ್ಭದಲ್ಲಿ ಹಾರ್ಮೋನ್ ಬದಲಾವಣೆ.
- ಭಾವನಾತ್ಮಕ ಒತ್ತಡ ಅಥವಾ ನಿದ್ರಾಹೀನತೆ.
- ಬ್ಯಾಕ್ಟೀರಿಯಾ, ವೈರಾಣು ಅಥವಾ ಫಂಗಲ್ ಸೋಂಕು.
ಬಾಯಿಹುಣ್ಣುಗಳು ಹೆಚ್ಚು ಗಂಭೀರವಾದ ಮತ್ತು ವೈದ್ಯಕೀಯ ನೆರವು, ನಿರ್ವಹಣೆ ಅಗತ್ಯವಾಗಿರುವ ಕೆಲವು ಆರೋಗ್ಯ ಸಮಸ್ಯೆಗಳ ಸೂಚನೆಯೂ ಆಗಿರಬಹುದು. ಅವುಗಳೆಂದರೆ:
- ಸೆಲಿಯಾಕ್ ಕಾಯಿಲೆ (ದೇಹವು ಗಲುಟೆನ್ ಸಹಿಸಿಕೊಳ್ಳದ ಸಮಸ್ಯೆ).
- ಉದರದ ಉರಿಯೂತ ಕಾಯಿಲೆ (ಐಬಿಡಿ- ಇನ್‌ಫ್ಲಮೇಟರಿ ಬವೆಲ್ ಡಿಸೀಸ್).
- ಮಧುಮೇಹ.
- ಬೆಚೆಟ್ಸ್ ಡಿಸೀಸ್ (ದೇಹವಿಡೀ ಉರಿಯೂತ ಉಂಟಾಗುವ ಕಾಯಿಲೆ).
- ದೇಹದ ರೋಗನಿರೋಧಕ ವ್ಯವಸ್ಥೆಯು ವೈರಾಣು ಅಥವಾ ಬ್ಯಾಕ್ಟೀರಿಯಾಗಳ ಬದಲಾಗಿ ಬಾಯಿಯ ಅಂಗಾಂಶಗಳ ವಿರುದ್ಧವೇ ದಾಳಿ ಮಾಡುವ ರೋಗ ನಿರೋಧಕ ಶಕ್ತಿಯ ತಪ್ಪು ಕಾರ್ಯಾಚರಣೆ ಸಮಸ್ಯೆ.
- ಎಚ್‌ಐವಿ/ ಏಡ್ಸ್.
- ಗುಣ ಕಾಣದ ಬಾಯಿ ಹುಣ್ಣುಗಳು ಬಾಯಿಯ ಕ್ಯಾನ್ಸರ್‌ನ ಲಕ್ಷಣವೂ ಆಗಿರಬಹುದು.
ಬಾಯಿ ಹುಣ್ಣುಗಳಿಗೆ ಸಂಬಂಧಿಸಿದ ಲಕ್ಷಣಗಳೇನು? ಬಾಯಿ ಹುಣ್ಣುಗಳಲ್ಲಿ ಪ್ರಧಾನವಾಗಿ ಮೂರು ವಿಧಗಳಿವೆ. ಅವುಗಳೆಂದರೆ, ಲಘು, ಗಂಭೀರ ಮತ್ತು ಹರ್ಪೆಟಿಫಾರ್ಮ್.
ಲಘು (ಮೈನರ್) : ಲಘು ಬಾಯಿ ಹುಣ್ಣುಗಳು ಸಣ್ಣದಾದ, ಮೊಟ್ಟೆಯ ಆಕಾರದವಾಗಿದ್ದು, ಒಂದೆರಡು ವಾರಗಳಲ್ಲಿ ತಾವಾಗಿ ವಾಸಿಯಾಗುತ್ತವೆ, ಕಲೆ ಉಳಿಯುವುದಿಲ್ಲ.
ಗಂಭೀರ (ಮೇಜರ್) :
ಇವು ಲಘು ಬಾಯಿ ಹುಣ್ಣುಗಳಿಗಿಂತ ಆಳವಾಗಿದ್ದು, ದೊಡ್ಡವಾಗಿರುತ್ತವೆ. ಇವುಗಳ ಅಂಚುಗಳು ಅವ್ಯವಸ್ಥಿತವಾಗಿದ್ದು, ಗುಣವಾಗಲು ಆರು ವಾರಗಳ ವರೆಗೆ ಸಮಯ ಹಿಡಿಯುತ್ತದೆ. ಇವುಗಳ ಗಾಯಕಲೆ ದೀರ್ಘ ಸಮಯದ ವರೆಗೆ ಇರಬಹುದು.
ಹರ್ಪೆಟಿಫಾರ್ಮ್ : ಇವು ಸೂಜಿಮೊನೆ ಗಾತ್ರದ ಹುಣ್ಣುಗಳಾಗಿದ್ದು, 10ರಿಂದ 100 ಹುಣ್ಣುಗಳ ಸಮೂಹವಾಗಿ ಉಂಟಾಗುತ್ತವೆ. ಇವು ವಯಸ್ಕರಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು. ಇವುಗಳ ಅಂಚುಗಳು ಕೂಡ ಅವ್ಯವಸ್ಥಿತವಾಗಿದ್ದು, ಗಾಯವುಳಿಸದೆ ಒಂದೆರಡು ವಾರಗಳಲ್ಲಿ ವಾಸಿಯಾಗುತ್ತವೆ.
ಡಾ| ಆನಂದ್‌ದೀಪ್ ಶುಕ್ಲಾ
ಓರಲ್ ಮತ್ತು ಮ್ಯಾಕ್ಸಿಲೊಫೇಶಿಯಲ್ ಸರ್ಜರಿ ವಿಭಾಗ,
ಮಣಿಪಾಲ ದಂತವೈದ್ಯಕೀಯ ಮಹಾವಿದ್ಯಾಲಯ,
ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Pandavapura: ಮೂರು ಕರುಗಳಿಗೆ ಜನ್ಮ ನೀಡಿದ ಸೀಮೆ ಹಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.