ಕೋವಿಡ್‌ನಿಂದ  ಚೇತರಿಸಿಕೊಂಡವರು  :ಮ್ಯುಕೊರ್ಮೈಕೋಸಿಸ್


Team Udayavani, May 23, 2021, 4:27 PM IST

Mycorrhomycosis

ಕಳೆದ ಕೆಲವು ದಿನಗಳಿಂದ ಭಾರತದಲ್ಲಿ ಪ್ರತೀ ದಿನ ಲಕ್ಷಾಂತರ ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿವೆ ಮತ್ತು ಮರಣ ಪ್ರಮಾಣವೂ ಹೆಚ್ಚಿದೆ. ದೇಶದಲ್ಲಿ ಕಂಡುಬರುತ್ತಿರುವ ಹೊಸ ಪ್ರಕರಣಗಳ ಹೊಸ ಲಕ್ಷಣಗಳನ್ನು ನಿಭಾಯಿಸುವಲ್ಲಿ ವೈದ್ಯಕೀಯ ವ್ಯವಸ್ಥೆ ಹೋರಾಡುತ್ತಿರುವಾಗಲೇ ಕೋವಿಡ್‌ನಿಂದ ಗುಣ ಹೊಂದುತ್ತಿರುವ ರೋಗಿಗಳಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಸೋಂಕು ಹೆಚ್ಚುತ್ತಿರುವುದು ವರದಿಯಾಗುತ್ತಿದೆ. ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಬ್ಲ್ಯಾಕ್‌ ಫ‌ಂಗಸ್‌ ಎಂದೂ ಕರೆಯಲಾಗುವ ಮ್ಯುಕೋರ್ಮೈಕೋಸಿಸ್‌ ಸೋಂಕು ತಗಲುತ್ತಿರುವುದು ಮಹಾನಗರಗಳಲ್ಲಿ ಮಾತ್ರವಲ್ಲದೆ ಇತರ ಕಡೆಗಳಲ್ಲಿಯೂ ಕಂಡುಬರುತ್ತಿದೆ.

ಮ್ಯುಕೋರ್ಮೈಕೋಸಿಸ್ಅಂದರೇನು: ನೀವು ತಿಳಿದಿರಬೇಕಾದದ್ದು

ಇದು ಕೋವಿಡ್‌-19 ರೋಗಿಗಳಲ್ಲಿ ಕಾಣಿಸಿಕೊಳ್ಳುವ ಒಂದು ಅನಾರೋಗ್ಯ ಸ್ಥಿತಿ. ಕೆಲವೊಮ್ಮೆ ಕೊರೊನಾ ಸೋಂಕು ಇರುವಾಗಲೇ ಉಂಟಾಗುತ್ತದೆ. ಆದರೆ ಕೋವಿಡ್‌ನಿಂದ ಗುಣಹೊಂದಿದ ಬಳಿಕ ಕೆಲವು ವಾರಗಳಿಂದ ತಿಂಗಳುಗಳ ವರೆಗಿನ ಅವಧಿಯಲ್ಲಿ ಉಂಟಾಗುವುದು ಹೆಚ್ಚು. ಮ್ಯುಕೋರ್ಮೈಸಿಟಿಸ್‌ ಎಂಬ, ನಿಸರ್ಗದಲ್ಲಿ ಸಹಜವಾಗಿ ಇರುವ ಶಿಲೀಂಧ್ರಗಳ ಸಮೂಹದಿಂದ ಈ ಅಪರೂಪದ ಆದರೆ ಅಪಾಯಕಾರಿ ಸೋಂಕು ಉಂಟಾಗುತ್ತದೆ. ಸೈನಸ್‌/ ಮೂಗು/ ಹಲ್ಲುಗಳಲ್ಲಿ ಇದು ಕಾಣಿಸಿಕೊಂಡು ಆ ಬಳಿಕ ಕಣ್ಣುಗಳು ಮತ್ತು ಮೆದುಳಿಗೆ ಹರಡುವ ಸಾಧ್ಯತೆಗಳನ್ನು ಹೊಂದಿರುತ್ತದೆ. ಸರಿಯಾದ ಸಮಯದಲ್ಲಿ ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸದೆ ಹೋದರೆ ಶಾಶ್ವತ ಅಂಗವೈಕಲ್ಯ, ದೃಷ್ಟಿನಾಶ ಮತ್ತು ಪ್ರಾಣಾಪಾಯವನ್ನು ಕೂಡ ಉಂಟುಮಾಡಬಲ್ಲುದು.

ಮ್ಯುಕೋರ್ಮೈಕೋಸಿಸ್‌  ಮೂಲತಃ

– ತೇವಾಂಶಸಹಿತ ಮೇಲ್ಮೆ„ಗಳಲ್ಲಿ ಉಂಟಾಗುತ್ತದೆ.

-ಮಧುಮೇಹಿ ರೋಗಿಗಳಲ್ಲಿ ಉಂಟಾಗುವುದು ಹೆಚ್ಚು.

-ಸೂಕ್ತವಾದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ತಡೆಗಟ್ಟಬಹುದಾಗಿದೆ.

– ಕೋವಿಡ್‌ ಮಾತ್ರ ಅಲ್ಲ; ರೋಗನಿರೋಧಕ ಶಕ್ತಿ ಕುಂದಿರುವುದು ಕೂಡ ನಿರ್ಣಾಯಕ ಅಂಶ.

ಯಾರಿಗೆ ಇದು ತಗಲುವ ಅಪಾಯ ಹೆಚ್ಚು?

ಈಗಾಗಲೇ ಅನಾರೋಗ್ಯ ಹೊಂದಿರುವವರು ಮತ್ತು ರೋಗ ನಿರೋಧಕ ಶಕ್ತಿ ಕುಂದುವಂತಹ ಔಷಧಗಳನ್ನು ಸೇವಿಸುತ್ತಿರುವವರಿಗೆ ಮಾತ್ರ ಬ್ಲ್ಯಾಕ್‌ ಫಂಗಸ್‌ ಸೋಂಕು ತೀವ್ರತರಹದ ಅಪಾಯಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಕೋವಿಡ್‌ -19 ಚಿಕಿತ್ಸೆಯ ಭಾಗವಾಗಿ ಸ್ಟಿರಾಯ್ಡ ಔಷಧಗಳನ್ನು ಸ್ವೀಕರಿಸಿದ ರೋಗಿಗಳಿಗೆ ಅಪಾಯ ಹೆಚ್ಚು. ರೋಗನಿರೋಧಕ ಶಕ್ತಿ ಕಡಿಮೆಯಾಗುವ ಟೊಸಿಸಿಜುಮಾಬ್‌ನಂತಹ ಔಷಧಗಳನ್ನು ಪಡೆದವರಲ್ಲೂ ಇದರ ಅಪಾಯ ಹೆಚ್ಚು. ಅನಿಯಂತ್ರಿತ ಮಧುಮೇಹದಷ್ಟು ಅಪಾಯಕಾರಿಯಾದದ್ದು ಇನ್ಯಾವುದೂ ಅಲ್ಲ ಎಂದು ವೈದ್ಯರು ಹೇಳುತ್ತಾರೆ. ಕ್ಯಾನ್ಸರ್‌ ರೋಗಿಗಳಾಗಿದ್ದು, ರೋಗನಿರೋಧಕ ಶಕ್ತಿ ಕಡಿಮೆಯಾಗಿರುವವರಿಗೆ ಅಪಾಯ ಹೆಚ್ಚಿರುತ್ತದೆ. ಆಟೊಇಮ್ಯೂನ್‌ ಅನಾರೋಗ್ಯ ಸ್ಥಿತಿ ಹೊಂದಿರುವವರೂ ಇದರ ಅಪಾಯದಲ್ಲಿರುತ್ತಾರೆ. ಇತರ ಅನಾರೋಗ್ಯಗಳಿಗಾಗಿ ಸ್ಟಿರಾಯ್ಡ ಚಿಕಿತ್ಸೆಯಲ್ಲಿರುವ ರೋಗಿಗಳಿಗೂ ಹೆಚ್ಚು ಅಪಾಯವಿದೆ.

ಮ್ಯುಕೋರ್ಮೈಕೋಸಿಸ್ತಡೆಯಲು ಕ್ರಮಗಳು

– ರಕ್ತದಲ್ಲಿಯ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು.

– ಕೋವಿಡ್‌ಗೆ ಚಿಕಿತ್ಸೆ ನೀಡುವಾಗ ಸ್ಟಿರಾಯ್ಡಗಳನ್ನು ವಿವೇಚನೆಯಿಂದ, ಮಿತಿಯಲ್ಲಿ ಉಪಯೋಗಿಸಬೇಕು.

– ಆಮ್ಲಜನಕದ ನೆರವು ನೀಡುವಾಗ ಹ್ಯೂಮಿಡಿಫೈಯರ್‌ನಲ್ಲಿ ಶುದ್ಧ ನೀರನ್ನು ಉಪಯೋಗಿಸಬೇಕು.

– ಕೋವಿಡ್‌ ರೋಗಿಯ ಪರಿಸರದಲ್ಲಿ ಸಂಪೂರ್ಣ ನೈರ್ಮಲ್ಯವನ್ನು ಪಾಲಿಸಬೇಕು.

– ಬಾಯಿಯ ಹುಣ್ಣು ಉಂಟಾದರೆ ತತ್‌ಕ್ಷಣ ಚಿಕಿತ್ಸೆ ಒದಗಿಸಬೇಕು.

ಮ್ಯುಕೋರ್ಮೈಕೋಸಿಸ್ಪ್ರಗತಿ ಹೊಂದುವುದನ್ನು ತಡೆಯುವುದು ಹೇಗೆ?

ಸದ್ಯದ ಸ್ಥಿತಿಯಲ್ಲಿ ಇದನ್ನು ತಡೆಯುವುದಕ್ಕೆ ಯಾವುದೇ ವೈದ್ಯಕೀಯ ಉಪಕ್ರಮ ಪರಿಣಾಮಕಾರಿ ಎಂಬುದು ಸಾಬೀತಾಗಿಲ್ಲ. ಹೀಗಾಗಿ ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವುದೊಂದೇ ಪರಿಣಾಮಕಾರಿಯಾಗಿದೆ. ಬೆಟಾಡಿನ್‌ ದ್ರಾವಣದಲ್ಲಿ ಗಾರ್ಗಲ್‌ ಮಾಡುವುದು ಮತ್ತು ಮೂಗನ್ನು ಶುದ್ಧೀಕರಿಸಿಕೊಳ್ಳುವುದು, ಮಧುಮೇಹವನ್ನು ಕಠಿನವಾಗಿ ನಿಯಂತ್ರಿಸಿಕೊಳ್ಳುವುದು, ವೈದ್ಯರು ಶಿಫಾರಸು ಮಾಡಿದ್ದರೆ ಮಾತ್ರ ಸ್ಟಿರಾಯ್ಡ ಉಪಯೋಗಿಸುವುದು ಬ್ಲ್ಯಾಕ್‌ ಫ‌ಂಗಸ್‌ ಸೋಂಕು ತಡೆಗೆ ಕೆಲವು ಮಾರ್ಗೋಪಾಯಗಳಾಗಿವೆ. ಅರಶಿಣದಲ್ಲಿರುವ ಕರ್ಕಮಿನ್‌ ಶಿಲೀಂಧ್ರ ನಿರೋಧಕ ಗುಣಗಳನ್ನು ಹೊಂದಿದೆ.

 

ಡಾ| ಆನಂದ್ದೀಪ್ಶುಕ್ಲಾ

ಓರಲ್ಸರ್ಜರಿ ವಿಭಾಗ

ಎಂಸಿಒಡಿಎಸ್‌, ಮಾಹೆ, ಮಣಿಪಾಲ

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.