Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ


Team Udayavani, Nov 17, 2024, 3:32 PM IST

3(1)

ಇಂದು ನಮ್ಮ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಂಡು ಉತ್ತಮ ಜೀವನ ನಡೆಸಲು ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಸಿದ್ಧ, ಯುನಾನಿ ಹೀಗೆ ಹಲವಾರು ಚಿಕಿತ್ಸಾ ಪದ್ಧತಿಗಳಿವೆ. ಇವುಗಳಲ್ಲಿ ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪತಿ ಕೂಡ ಒಂದು.

ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪತಿ
ಇದೊಂದು ನೈಸರ್ಗಿಕ ಚಿಕಿತ್ಸಾ ವ್ಯವಸ್ಥೆಯಾಗಿದ್ದು, ಇದರಲ್ಲಿ ಯಾವುದೇ ರಾಸಾಯನಿಕ ಜನ್ಯ ಔಷಧಗಳನ್ನು ಬಳಸಲಾಗುವುದಿಲ್ಲ. ಬದಲಾಗಿ ಈ ವಿಶಿಷ್ಟ ಚಿಕಿತ್ಸಾ ವಿಧಾನವು ದೇಹವನ್ನು ಒಳಗಿನಿಂದ ಬಲಪಡಿಸುವುದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಅಗತ್ಯವಿರುವಲ್ಲಿ ಜೀವನಶೈಲಿಯ ಬದಲಾವಣೆಗಳನ್ನು ಅಳವಡಿಸಿಕೊಂಡು ಉತ್ತಮ ಸುರಕ್ಷಿತ ಮತ್ತು ನೈಸರ್ಗಿಕ ವಿಧಾನದಿಂದ ನಮ್ಮ ದೇಹವು ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ‘ಪ್ರಕೃತಿಯು ನಮ್ಮನ್ನು ಗುಣಪಡಿಸುತ್ತದೆ, ಔಷಧಗಳಲ್ಲ’ ಎಂಬುದು ಪ್ರಕೃತಿ ಚಿಕಿತ್ಸೆಯ ಮೂಲತತ್ವವಾಗಿದೆ.

ಭಾರತದಲ್ಲಿ ಪ್ರತೀ ವರ್ಷ ನವೆಂಬರ್‌ 18ರಂದು ಪ್ರಕೃತಿ ಚಿಕಿತ್ಸಾ ದಿನವನ್ನು ಆಚರಿಸಲಾಗುತ್ತದೆ. ಔಷಧ ಮುಕ್ತ ಚಿಕಿತ್ಸೆಯ ಮೂಲಕ ಧನಾತ್ಮಕ, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಪ್ರಕೃತಿ ಚಿಕಿತ್ಸೆಯ ಜನಪ್ರಿಯತೆಯು ಜಾಗತಿಕವಾಗಿ ಹೆಚ್ಚುತ್ತಿದೆ ಮತ್ತು ಜನರು ಹೆಚ್ಚು ಆರೋಗ್ಯ ಪ್ರಜ್ಞೆ ಮತ್ತು ಅನೇಕ ಚಿಕಿತ್ಸೆಗಳ ಸಂಭಾವ್ಯ ಅಡ್ಡ ಪರಿಣಾಮಗಳ ಬಗ್ಗೆ ತಿಳಿದಿರುವಂತೆ, ಅನೇಕರು ನೈಸರ್ಗಿಕ ಮತ್ತು ಸುರಕ್ಷಿತ ಪರ್ಯಾಯ ವಿಧಾನವಾಗಿ ಪ್ರಕೃತಿ ಚಿಕಿತ್ಸೆಯತ್ತ ಮುಖ ಮಾಡುತ್ತಿದ್ದಾರೆ. ಇದಲ್ಲದೆ ಮುಖ್ಯವಾಹಿನಿಯ ಆರೋಗ್ಯ ವ್ಯವಸ್ಥೆಗಳಲ್ಲಿ ಪ್ರಕೃತಿ ಚಿಕಿತ್ಸೆಯ ಏಕೀಕರಣವು ಸಾಂಪ್ರದಾಯಿಕ ಮತ್ತು ಪರ್ಯಾಯ ಔಷಧಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತಿದೆ. ಪ್ರಕೃತಿ ಚಿಕಿತ್ಸೆಯು ವ್ಯಕ್ತಿಯ ದೇಹ, ಮನಸ್ಸು ಮತ್ತು ಆತ್ಮವನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಈ ಸಮಗ್ರ ದೃಷ್ಟಿಕೋನದಿಂದ ಪ್ರಕೃತಿ ಚಿಕಿತ್ಸಕ ವೈದ್ಯರು ಪ್ರತಿಯೊಬ್ಬ ವ್ಯಕ್ತಿಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆಯನ್ನು ನೀಡುತ್ತಾರೆ. ಇದಲ್ಲದೆ ಪ್ರಕೃತಿ ಚಿಕಿತ್ಸೆಯು ಆರೋಗ್ಯಕರ ಜೀವನಶೈಲಿ, ರೋಗ ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿಸುತ್ತದೆ. ಈ ಚಿಕಿತ್ಸಾ ವಿಧಾನವು ದೀರ್ಘ‌ಕಾಲದ ಕಾಯಿಲೆಗಳ ತೊಂದರೆಯನ್ನು ತಡೆದು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

ಮಾನವನ ದೇಹವು ಸ್ವತಃ ರೋಗವನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಮತ್ತು ಅದಕ್ಕೆ ಸಮಯಾವಕಾಶ ಬೇಕು. ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಈ ಐದು ಮೂಲಭೂತ ಅಂಶಗಳನ್ನು ಬಳಸಿಕೊಂಡು ಪ್ರಕೃತಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪ್ರಕೃತಿ ಚಿಕಿತ್ಸೆಯು ಪಂಚಭೂತಗಳ ಅಸಮತೋಲನವನ್ನು ಸಾಮಾನ್ಯಗೊಳಿಸಲು, ದುರ್ಬಲಗೊಂಡ ಅಂಗಗಳ ಕಾರ್ಯಗಳನ್ನು ಸರಿಪಡಿಸಲು, ರಕ್ತ ಮತ್ತು ದೇಹದ ದ್ರವಗಳ ಅಸಹಜತೆಯನ್ನು ಸರಿಪಡಿಸಲು ಮತ್ತು ದೇಹದ ವಿಸರ್ಜನಾ ಅಂಗಗಳ ಕಾರ್ಯಗಳನ್ನು ಸುಧಾರಿಸುವ ಮೂಲಕ ದೇಹದಲ್ಲಿ ಸಂಗ್ರಹವಾದ ಕಲ್ಮಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಪ್ರಕೃತಿಯ ಹತ್ತಿರ ಇರುವುದೇ ಪ್ರಕೃತಿ ಚಿಕಿತ್ಸೆ.

ಪ್ರಕೃತಿ ಚಿಕಿತ್ಸೆಯ ವಿಧಗಳು
ಪ್ರಕೃತಿ ಚಿಕಿತ್ಸೆಯಲ್ಲಿ ವಿವಿಧ ಸಮಸ್ಯೆಗಳಿಗೆ ತಕ್ಕಂತೆ ಜಲ ಚಿಕಿತ್ಸೆ, ಮಣ್ಣಿನ ಚಿಕಿತ್ಸೆ, ಸೂರ್ಯ ಚಿಕಿತ್ಸೆ, ಬಣ್ಣ ಚಿಕಿತ್ಸೆ, ಆಯಸ್ಕಾಂತ ಚಿಕಿತ್ಸೆ, ನೈಸರ್ಗಿಕ ಆಹಾರ ಮತ್ತು ಉಪವಾಸ ಚಿಕಿತ್ಸೆ, ಸೂಜಿ ಚಿಕಿತ್ಸೆ ಹೀಗೆ ಹತ್ತು ಹಲವಾರು ಚಿಕಿತ್ಸೆಗಳಿವೆ. ಸಂಕ್ಷಿಪ್ತವಾಗಿ ಹೇಳುವುದಾದರೆ

– ಜಲಚಿಕಿತ್ಸೆಯು ನೋವು ನಿವಾರಿಸಲು, ರಕ್ತದ ಹರಿವನ್ನು ಸುಧಾರಿಸಲು ಮತ್ತು ದೇಹಕ್ಕೆ ವಿಶ್ರಾಂತಿಯನ್ನು ನೀಡಲು ಸಹಾಯವಾಗುತ್ತದೆ. ನೀರಿನ ತಾಪಮಾನ ಮತ್ತು ಒತ್ತಡವನ್ನು ಬಳಸಿ ಜಲಚಿಕಿತ್ಸೆಯನ್ನು ನೀಡಲಾಗುತ್ತದೆ.
– ಮಣ್ಣಿನ ಚಿಕಿತ್ಸೆಯು ಮಣ್ಣು ಅಥವಾ ಜೇಡಿಮಣ್ಣನ್ನು ಬಳಸಿ ನೀಡುವ ನೈಸರ್ಗಿಕ ಚಿಕಿತ್ಸೆಯಾಗಿದೆ. ಮಣ್ಣಿನಲ್ಲಿರುವ ಖನಿಜಗಳು, ಮೆಗ್ನಿàಸಿಯಮ್‌ ಮತ್ತು ಕ್ಯಾಲ್ಸಿಯಂ ದೇಹದಲ್ಲಿರುವ ಕಲ್ಮಶವನ್ನು ಹೊರಹಾಕಲು ಮತ್ತು ನೋವನ್ನು ಶಮನಗೊಳಿಸಲು ಸಹಾಯ ಮಾಡುತ್ತವೆ. ಸಂಧಿವಾತ, ಚರ್ಮದ ಸಮಸ್ಯೆಗಳು ಮತ್ತು ಸ್ನಾಯುಗಳ ನೋವಿಗೆ ಉತ್ತಮ ಫ‌ಲಿತಾಂಶ ನೀಡುತ್ತದೆ.
– ಸೂರ್ಯನ ಚಿಕಿತ್ಸೆಯಲ್ಲಿ ನೈಸರ್ಗಿಕವಾಗಿ ಸೂರ್ಯನ ಕಿರಣಗಳನ್ನು ಬಳಸಿ ದೇಹದಲ್ಲಿ ವಿಟಮಿನ್‌ ಡಿ ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಈ ಚಿಕಿತ್ಸೆಯು ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅಲ್ಲದೇ ದೇಹದ ಎಲುಬುಗಳ ಆರೋಗ್ಯಕ್ಕೆ ಒಳ್ಳೆಯದು. ಸುರಕ್ಷೆಯ ದೃಷ್ಟಿಯಿಂದ ಸೂರ್ಯನ ಬೆಳಗಿನ ಹಾಗೆಯೇ ಸಂಜೆಯ ಕಿರಣಗಳು ಉತ್ತಮ.
– ಬಣ್ಣದ ಚಿಕಿತ್ಸೆಯಲ್ಲಿ ಪ್ರತೀ ಬಣ್ಣವು ನಿರ್ದಿಷ್ಟ ಪರಿಣಾಮಗಳನ್ನು ಹೊಂದಿದೆ. ಈ ಚಿಕಿತ್ಸೆಯು ಮನಃಸ್ಥಿತಿಯನ್ನು ಸುಧಾರಿಸಲು, ಒತ್ತಡವನ್ನು ಕಡಿಮೆ ಮಾಡಲು ಮತ್ತು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತದೆ.
– ಆಯಸ್ಕಾಂತ ಚಿಕಿತ್ಸೆಯು ದೇಹದ ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆಯಸ್ಕಾಂತಗಳು ರಕ್ತದ ಹರಿವನ್ನು ಸುಧಾರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.
– ಉಪವಾಸ ಚಿಕಿತ್ಸೆಯು ದೇಹವನ್ನು ಶುದ್ಧೀಕರಿಸಲು ಮತ್ತು ರೋಗವನ್ನು ಗುಣಪಡಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ. ನಿರ್ದಿಷ್ಟ ಅವಧಿಯವರೆಗೆ ಆಹಾರವನ್ನು ತ್ಯಜಿಸುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ವಿರಾಮ ಸಿಗುತ್ತದೆ. ಉಪವಾಸದಲ್ಲಿ ನೀರು, ಬೇಯಿಸಿದ ಆಹಾರ, ಹಸಿ ತರಕಾರಿ ಸಲಾಡ್‌, ಹಣ್ಣಿನ ಜ್ಯೂಸ್‌ಗಳನ್ನು ಸೇವಿಸಬಹುದು. ಉಪವಾಸ ಮಾಡಲು ಪ್ರಕೃತಿ ಚಿಕಿತ್ಸಾ ವೈದ್ಯರ ಮಾರ್ಗದರ್ಶನ ಅಗತ್ಯ.
– ನೈಸರ್ಗಿಕ ಆಹಾರವು ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಒಣಬೀಜಗಳನ್ನು ಒಳಗೊಂಡಿರುತ್ತದೆ. ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಪ್ರಕೃತಿ ಚಿಕಿತ್ಸೆಯು ತಾಜಾ, ಸಂಸ್ಕರಿಸಿದ ಆಹಾರವನ್ನು ಸೇವಿಸುವುದನ್ನು ಮತ್ತು ಸಂಸ್ಕರಿಸಿದ ಆಹಾರಗಳು, ಮೈದಾ, ಸಕ್ಕರೆಯನ್ನು ತ್ಯಜಿಸುವುದನ್ನು ಒತ್ತಿ ಹೇಳುತ್ತದೆ. ನಾವು ಸೇವಿಸುವ ತಪ್ಪು ಆಹಾರಗಳೇ ನಮ್ಮನ್ನು ಕೊಲ್ಲುತ್ತವೆ. ಆಯಾಯ ಪ್ರದೇಶಗಳಲ್ಲಿ ಬೆಳೆಯುವ ಆಹಾರ, ತರಕಾರಿ, ಹಣ್ಣು, ಧಾನ್ಯಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ದೇಹಕ್ಕೆ ಸುಲಭವಾಗಿ ಪಚನವಾಗುವ ಆಹಾರವನ್ನು ಹೆಚ್ಚು ಸೇವಿಸಬೇಕು. ತಾಜಾ ಹಣ್ಣುಗಳು ಹಾಗೂ ತರಕಾರಿಯನ್ನು ಸೇವಿಸುವುದು ಅತೀ ಉತ್ತಮ. ಸೂರ್ಯ ಮುಳುಗುವ ಮೊದಲು ಆಹಾರ ಸೇವಿಸುವುದು ಉತ್ತಮ. ಅಂದರೆ ಮಲಗುವಾಗ ನಾವು ಸೇವಿಸುವ ಆಹಾರ ಜೀರ್ಣವಾಗಿರಬೇಕು. ಬೆಳಗ್ಗೆ ಬೇಗನೆ ಎದ್ದು ಬೇಗನೆ ಮಲಗುವುದು ಆರೋಗ್ಯಕ್ಕೆ ಉತ್ತಮ.
– ಇತರ ಚಿಕಿತ್ಸೆಗಳು: ಅಕ್ಯುಪಂಕ್ಚರ್‌, ಅಕ್ಯುಪ್ರಶರ್‌, ಕಪ್ಪಿಂಗ್‌ ಥೆರಪಿ. ಅಕ್ಯುಪಂಕ್ಚರ್‌ ಎನ್ನುವುದು ಶಕ್ತಿಯ ಹರಿವನ್ನು ಸಮತೋಲನಗೊಳಿಸಲು ಮತ್ತು ಗುಣಪಡಿಸುವಿಕೆಯನ್ನು ಉತ್ತೇಜಿಸಲು ದೇಹದ ನಿರ್ದಿಷ್ಟ ಬಿಂದುಗಳಿಗೆ ತೆಳುವಾದ ಸೂಜಿಗಳನ್ನು ಚುಚ್ಚುವುದು. ಅಕ್ಯುಪ್ರಶರ್‌ ಅಕ್ಯುಪಂಕ್ಚರ್‌ ಅನ್ನು ಹೋಲುತ್ತದೆ. ಆದರೆ ಅದೇ ಬಿಂದುಗಳಲ್ಲಿ ಸೂಜಿಗಳ ಬದಲಿಗೆ ಬೆರಳಿನ ಒತ್ತಡವನ್ನು ಬಳಸುತ್ತದೆ. ಇದು ನೋವನ್ನು ನಿವಾರಿಸಲು, ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕಪ್ಪಿಂಗ್‌ ಚಿಕಿತ್ಸೆಯು ರಕ್ತದ ಹರಿವನ್ನು ಹೆಚ್ಚಿಸಿ ಸ್ನಾಯುವಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಬೆನ್ನುನೋವು, ಸ್ನಾಯು ನೋವನ್ನು, ಉರಿಯೂತ ನಿವಾರಿಸಲು ಬಳಸಲಾಗುತ್ತದೆ.
– ಯೋಗ ಚಿಕಿತ್ಸೆಯಲ್ಲಿ ಯೋಗವನ್ನು ನೈಸರ್ಗಿಕ ಚಿಕಿತ್ಸೆ ವಿಧಾನಗಳೊಂದಿಗೆ ಸಂಯೋಜಿಸಲಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಲು ಯೋಗ ಭಂಗಿಗಳು, ಉಸಿರಾಟದ ವ್ಯಾಯಾಮಗಳು ಮತ್ತು ಧ್ಯಾನವನ್ನು ಬಳಸುತ್ತಾರೆ. ಯೋಗ ಚಿಕಿತ್ಸೆಯು ವೈಯುಕ್ತಿಕ ಅಗತ್ಯಗಳಿಗೆ ಅನುಗುಣವಾಗಿರುತ್ತದೆ ಮತ್ತು ಉತ್ತಮ ಆರೋಗ್ಯಕ್ಕಾಗಿ ಯೋಗವನ್ನು ಇತರ ನೈಸರ್ಗಿಕ ಚಿಕಿತ್ಸೆಗಳೊಂದಿಗೆ ಸಂಯೋಜಿಸುತ್ತದೆ. ಯೋಗ ಚಿಕಿತ್ಸೆಯನ್ನು ಪ್ರಕೃತಿ ಚಿಕಿತ್ಸೆಯ ಜತೆಗೆ ನೀಡಲಾಗುತ್ತದೆ.

ಪ್ರಕೃತಿ ಚಿಕಿತ್ಸೆಯಲ್ಲಿ ವೈದ್ಯರು ನಿತ್ಯ ಜೀವನದಲ್ಲಿ ಕಾಯಿಲೆರಹಿತ ಜೀವನ ನಡೆಸುವ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಸಾಮಾನ್ಯವಾಗಿ ವೈದ್ಯರು ರೋಗಕ್ಕೆ ಮದ್ದು ಕೊಡುತ್ತಾರೆ. ಆದರೆ ಪ್ರಕೃತಿ ಚಿಕಿತ್ಸೆಯಲ್ಲಿ ರೋಗಕ್ಕೆ ಅಲ್ಲ, ವ್ಯಕ್ತಿಯನ್ನು ಗಮನಿಸಿ ಚಿಕಿತ್ಸೆ ನೀಡುತ್ತಾರೆ. ಗ್ರೀಕ್‌ನ ವೈದ್ಯಶಾಸ್ತ್ರದ ಪಿತಾಮಹ ಹಿಪಾಕ್ರಟೀಸ್‌, “ಆಹಾರವು ನಿಮ್ಮ ಔಷಧಯಾಗಿರಲಿ ಮತ್ತು ಔಷಧವು ನಿಮ್ಮ ಆಹಾರವಾಗಲಿ’ ಎಂದು ಹೇಳಿದ್ದರು- ಅಂದರೆ ಮಿತವಾದ ಆಹಾರ ಸೇವನೆ ಉತ್ತಮ ಆರೋಗ್ಯಕ್ಕೆ ಬುನಾದಿ ಎಂದರ್ಥ. ಈತ ಹೇಳಿದ ಎರಡು ಸೂತ್ರ ವಾಕ್ಯಗಳಿವು- “ಉಗ್ರ ವ್ಯಾಧಿಗೆ ಉಗ್ರ ಚಿಕಿತ್ಸೆ ಅಗತ್ಯ’ ಮತ್ತು “ಒಬ್ಬನ ಉಣಿಸು ಇನ್ನೊಬ್ಬನ ಗರಳ (ವಿಷ)’. ಒತ್ತಡವನ್ನು ಕಡಿಮೆ ಮಾಡಿಕೊಂಡು ಆರೋಗ್ಯಕರ ಆಹಾರ ಹಾಗೂ ಜೀವನ ಪದ್ಧತಿಗಳ ಅಳವಡಿಕೆಗಳಿಂದ ರೋಗ ನಿಯಂತ್ರಣಕ್ಕೆ ಒತ್ತು ನೀಡಲಾಗುತ್ತದೆ.

ಮಹಾತ್ಮಾ ಗಾಂಧೀಜಿಯವರು 1900ರ ಸುಮಾರಿಗೆ ಐರ್ಲೆಂಡ್‌ನ‌ ಡರ್ಬನ್‌ನಲ್ಲಿ ಇರುವಾಗ ಪ್ರಕೃತಿ ಚಿಕಿತ್ಸೆಯನ್ನು ತನ್ನ ಜೀವನದಲ್ಲಿ ಪ್ರಾರಂಭಿಸಿದರು ಮತ್ತು ಅದನ್ನು ಅಳವಡಿಸಿಕೊಂಡು ಆರೋಗ್ಯಕರ ಜೀವನ ನಡೆಸಿ ಎಂದು ಜನರಿಗೂ ಕರೆ ಕೊಟ್ಟರು. ಸಸ್ಯಾಹಾರವು ಪ್ರಕೃತಿಯ ಜತೆಗೆ ಸಾಮರಸ್ಯದಿಂದ ಬದುಕಲು ಅನುಕೂಲ ಎಂದು ಪ್ರತಿಪಾದಿಸಿದ್ದರು. 1932ರಲ್ಲಿ ಡಾ| ದಿನ್ಶಾ ಮೆಹ್ರಾ ಅವರು ಗಾಂಧೀಜಿಯವರನ್ನು ಪುಣೆಯಲ್ಲಿ ಬೇಟಿಯಾಗಿದ್ದರು ಮತ್ತು ಅವರ ಚಿಕಿತ್ಸಕರಾಗಿದ್ದರು. ಗಾಂಧೀಜಿಯವರು 1945ರಲ್ಲಿ ಪುಣೆಯ ಆಲ್‌ ಇಂಡಿಯಾ ನೇಚರ್‌ ಕ್ಯೂರ್‌ ಫೌಂಡೇಶನ್‌ ಟ್ರಸ್ಟ್‌ ಅನ್ನು ಸ್ಥಾಪಿಸಿದರು. ಈಗ National Institutte of Naturopathy Pune ಎನ್ನುವ ಹೆಸರಿನಲ್ಲಿ ನ್ಯಾಚುರೋಪತಿಗೆ ಸಂಬಂಧಿಸಿದಂತೆ ಕಾಲೇಜು ಮತ್ತು ಆಸ್ಪತ್ರೆಯನ್ನು ಆಯುಷ್‌ ಇಲಾಖೆ ನಡೆಸುತ್ತಿದೆ. ಪ್ರಸ್ತುತ ಪ್ರಕೃತಿ ಚಿಕಿತ್ಸೆ ಆಯುಷ್‌ ಇಲಾಖೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಎನ್ನುವ ಹೆಸರಿನಲ್ಲಿ ಅನೇಕ ಕಾಲೇಜು, ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಕೃತಿ ಚಿಕಿತ್ಸೆಯು ಜರ್ಮನಿಯಲ್ಲಿ 1822ರಲ್ಲಿ ಪ್ರಾರಂಭಗೊಂಡು, ಮುಂದುವರಿದು ಯುರೋಪಿನಲ್ಲಿ 1895ರಲ್ಲಿ ಜಾನ್‌ ಸ್ಕೀಲ್‌ ಎನ್ನುವವರಿಂದ ಮುಂದುವರಿದು 1970ರಲ್ಲಿ ಬೆನೆಡಿಕ್ಟ್ ಲಿನ್‌ ಅವರು “ಪರಿಪೂರ್ಣ ಆರೋಗ್ಯ’ ಎನ್ನುವ ಹೆಸರನಲ್ಲಿ ಮುಂದುವರೆಸಿದರು. ಮಾನವನು ತನ್ನ ಜೀವನದ ಭೌತಿಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಆಯಾಮಗಳಲ್ಲಿ ನಿಸರ್ಗದ ರಚನಾತ್ಮಕ ನಿಯಮಗಳೊಂದಿಗೆ ಸಾಮರಸ್ಯವನ್ನು ಇಟ್ಟುಕೊಂಡು ಅದಕ್ಕೆ ಗುರುತರವಾದ ಆರೋಗ್ಯವರ್ಧಕ, ರೋಗ ತಡೆಗಟ್ಟುವ, ಚಿಕಿತ್ಸಾತ್ಮಕ ಹಾಗೂ ಮೊದಲಿನ ಶಕ್ತಿ ಮತ್ತು ಆರೋಗ್ಯವನ್ನು ನೀಡುವ ಸಾಮರ್ಥ್ಯವಿದೆ.

“ರೋಗವನ್ನು ಗುಣಪಡಿಸುವುದಕ್ಕಿಂತ ರೋಗ ಬರದಂತೆ ತಡೆಯುವುದೇ ಪ್ರಕೃತಿ ಚಿಕಿತ್ಸೆಯ ಉದ್ದೇಶ.’

ಡಾ| ಆತ್ಮಿಕಾ ಶೆಟ್ಟಿ, ಅಸಿಸ್ಟೆಂಟ್‌ ಪ್ರೊಫೆಸರ್‌, ಯೋಗ ವಿಭಾಗ, ಸಿಐಎಂಆರ್‌, ಮಾಹೆ, ಮಣಿಪಾಲ

ಟಾಪ್ ನ್ಯೂಸ್

1-mannn

Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

13-belagavi

ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Yasin Malik

SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-mannn

Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

1-prathvi

Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Loksabha:ಕಾಂಗ್ರೆಸ್‌ ಅಂಬೇಡ್ಕರ್‌ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.