ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿ
Team Udayavani, Dec 9, 2018, 6:00 AM IST
ಹಿಂದಿನ ವಾರದಿಂದ- ದೈಹಿಕ ಕಾಯಿಲೆಗಳಿದ್ದಾಗ
ಏನು ಮಾಡಬೇಕು?
ಯಾವುದೇ ರೀತಿಯ ದೈಹಿಕ ಕಾಯಿಲೆಗಳಿದ್ದರೆ ಅವುಗಳ ಬಗ್ಗೆ ವೈದ್ಯರಿಗೆ ತಿಳಿಸಬೇಕು. ದೀರ್ಘ ಕಾಲದ ಚರ್ಮದ ಕಾಯಿಲೆಗಳಿದ್ದರೆ (ಅರ್ಟಿಕೇರಿಯಾ, ಸೋರಿಯಾಸಿಸ್ ಅಥವಾ ಕ್ರೋನಿಕ್ ಡರ್ಮಾಟೈಟಿಸ್) ಪ್ಯಾಚನ್ನು ಉಪಯೋಗಿಸಬಾರದು. ಹೃದಯ ಸಂಬಂಧಿ ಕಾಯಿಲೆಗಳಿದ್ದಾಗ (ಹಾರ್ಟ್ ಅಟ್ಯಾಕ್ ಆದವರು, ಸ್ಟ್ರೋಕ್), ಅತಿಯಾದ ರಕ್ತದೊತ್ತಡ, ಥೈರಾಯx… ಹಾರ್ಮೋನಿನಲ್ಲಿ ಹೆಚ್ಚಳ, ನಿಯಂತ್ರಣದಲ್ಲಿಲ್ಲದೆ ಇನ್ಸುಲಿನ್ ಆವಶ್ಯಕತೆಯಿರುವ ಸಕ್ಕರೆ ಕಾಯಿಲೆ (ಡಯಾಬಿಟೀಸ್), ಲಿವರ್ (ಯಕೃತ್ತು) ಹಾಗೂ ಕಿಡ್ನಿ (ಮೂತ್ರಪಿಂಡ) ತೊಂದರೆಗಳಿದ್ದಾಗ ಇದನ್ನು ವೈದ್ಯರ ಮುತುವರ್ಜಿಯಲ್ಲಿಯೇ ಬಳಸಬೇಕು.
ಪ್ಯಾಚನ್ನು ಬಳಸುತ್ತಿರುವಾಗಲೂ
ತಂಬಾಕು ಬಳಸಿದರೆ ಏನಾಗುತ್ತದೆ?
ಇದನ್ನು ಬಳಸುವಾಗ ತಂಬಾಕನ್ನು ಸೇವಿಸಿದರೆ ದೇಹದಲ್ಲಿನ ನಿಕೊಟಿನ್ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ನಿಕೊಟಿನ್‌ನಿಂದ ಕಂಡುಬರುವ ಪರಿಣಾಮಗಳು ಹೆಚ್ಚಿನ ತೀವ್ರತೆಯಲ್ಲಿ ಕಂಡುಬರುತ್ತವೆ.
ಇದನ್ನು ಮಕ್ಕಳಲ್ಲಿ ಉಪಯೋಗಿಸಬಹುದೇ?
ವಯಸ್ಕರಲ್ಲಿ ಹಾಗೂ ಹದಿಹರೆಯದವರಲ್ಲಿ ನಿಕೊಟಿನ್ ಪ್ಯಾಚುಗಳನ್ನು ಉಪಯೋಗಿಸಬಹುದು. ಆದರೆ 12 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಇದರ ಉಪಯೋಗವನ್ನು ನಿಷೇಧಿಸಲಾಗಿದೆ.
ನಿಕೊಟಿನ್ ರಿಪ್ಲೇಸ್‌ಮೆಂಟ್ ಥೆರಪಿ ತಂಬಾಕು ಉಪಯೋಗ ನಿಲ್ಲಿಸಲು ಇರುವ ಚಿಕಿತ್ಸೆಯ ಒಂದು ಭಾಗವಾಗಿದೆ. ಇದರ ಜತೆಗೆ ನಿಕೊಟಿನ್ ಕೊಡದೇ ಇರುವ ಚಿಕಿತ್ಸೆ, ನಡವಳಿಕೆ ಚಿಕಿತ್ಸೆ ಕೂಡ ನೀಡಲಾಗುತ್ತದೆ. ನಡವಳಿಕೆ ಚಿಕಿತ್ಸೆ ಮತ್ತು ಔಷಧ ಚಿಕಿತ್ಸೆಯನ್ನು ಒಟ್ಟಿಗೆ ಕೊಡುವುದು ಅತ್ಯಂತ ಪರಿಣಾಮಕಾರಿ ಚಿಕಿತ್ಸೆ. ಬೇರೆ ಬೇರೆ ಚಿಕಿತ್ಸಾ ವಿಧಾನಗಳು ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುವುದರಿಂದ, ಈ ಚಿಕಿತ್ಸೆಗಳು ಒಟ್ಟಾಗಿ ಕೊಟ್ಟಾಗ ಒಂದಕ್ಕೊಂದು ಪೂರಕವಾಗುವುದಲ್ಲದೇ ಅತ್ಯಂತ ಪರಿಣಾಮಕಾರಿಯಾಗಿರುತ್ತವೆ. ಸ್ವಸಹಾಯ ಪದ್ಧತಿಗಳು ಸ್ವಲ್ಪಮಟ್ಟದಲ್ಲಿ ಮಾತ್ರ ಪರಿಣಾಮಕಾರಿಯಾಗಿರುತ್ತವೆ. ಆದರೆ ಮೇಲೆ ನಮೂದಿಸಿದ ಚಿಕಿತ್ಸಾ ವಿಧಾನಗಳು ಒಂದೇ ತರಹದ ಅಥವಾ ಒಟ್ಟಾಗಿ ಕೊಟ್ಟಾಗ ಪರಿಣಾಮವು ಹೆಚ್ಚಾಗಿರುತ್ತದೆ.
ತಂಬಾಕು, ಮದ್ಯ ಮತ್ತಿತರ ಮಾದಕ ವಸ್ತುಗಳ ಚಟದ ಚಿಕಿತ್ಸೆಗಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮನೋರೋಗ ಚಿಕಿತ್ಸಾ ವಿಭಾಗದಲ್ಲಿ ಪ್ರತ್ಯೇಕ ಘಟಕವನ್ನು ಮಾಡಲಾಗಿದೆ. ಪ್ರತೀ ಬುಧವಾರ ಮತ್ತು ಶನಿವಾರ (ಮೂರನೆಯ ಶನಿವಾರ ಹೊರತುಪಡಿಸಿ), ಮನೋರೋಗ ಚಿಕಿತ್ಸಾ ವಿಭಾಗದ ಒಪಿಡಿಯಲ್ಲಿ ನುರಿತ ತಜ್ಞ ಮನೋವೈದ್ಯರು ಲಭ್ಯರಿರುತ್ತಾರೆ ಹಾಗೂ ಅಡ್ಮಿಶನ್ ಸೌಲಭ್ಯ ಕೂಡ ಇರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.