ನಿಫಾ ವೈರಸ್‌ ಸೋಂಕು


Team Udayavani, Jun 10, 2018, 6:45 AM IST

nipah-ss.jpg

ಹಿಂದಿನ ವಾರದಿಂದ- ಬಾವಲಿಗಳ ನೈಸರ್ಗಿಕ ಆವಾಸ ಸ್ಥಾನಗಳು ಮನುಷ್ಯರ ಕೈವಾಡದಿಂದ ನಶಿಸಿಹೋದಾಗ ಬಾವಲಿಗಳು ಒತ್ತಡಕ್ಕೆ ತುತ್ತಾಗುತ್ತವೆ ಹಾಗೂ ಹಸಿವಿನಿಂದಿರುತ್ತವೆ; ಅವುಗಳ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ; ಅವುಗಳಲ್ಲಿ ವೈರಸ್‌ ಸಾಂದ್ರತೆ ಹೆಚ್ಚಿ ವೈರಸ್‌ಗಳು ಅಧಿಕ ಪ್ರಮಾಣದಲ್ಲಿ ಮೂತ್ರ ಮತ್ತು ಜೊಲ್ಲಿನ ಮೂಲಕ ಹೊರಚೆಲ್ಲುತ್ತವೆ. ಇದೇ ರೀತಿಯ ಒತ್ತಡಪೂರ್ವಕ ವೈರಸ್‌ ಸ್ರಾವವು ದೈಹಿಕ ಬದಲಾವಣೆಗಳ ಆಧಾರದಲ್ಲಿ ಅಥವಾ ಋತುಮಾನ ಆಧಾರದಲ್ಲಿಯೂ ನಡೆಯಬಹುದಾಗಿದೆ. ಪಿ.ಲೈಲೇಯಿ ಪ್ರಭೇದದ ಬಾವಲಿಗಳಲ್ಲಿ ಸೋಂಕು ಪ್ರಸರಣವು ಋತುಮಾನ ಆಧಾರಿತವಾಗಿಯೇ ಹೆಚ್ಚು ನಡೆಯುವುದು ಥಾçಲಂಡ್‌ನ‌ಲ್ಲಿ ಈಚೆಗೆ ನಡೆದಿರುವ ಅಧ್ಯಯನದ ಮೂಲಕ ಸಾಬೀತಾಗಿದೆ. ಎಪ್ರಿಲ್‌ನಿಂದ ಜೂನ್‌ ವರೆಗಿನ ಅವಧಿಯಲ್ಲಿ (ಮೇ ತಿಂಗಳಿನಲ್ಲಿ ಅತಿಹೆಚ್ಚು) ಈ ಪ್ರಭೇದದ ಬಾವಲಿಗಳ ಮೂತ್ರದಲ್ಲಿ ವೈರಲ್‌ ಆರ್‌ಎನ್‌ಎ ಹೆಚ್ಚು ಗುರುತಿಸಬಹುದಾಗಿದ್ದು, ಇದು ಇದೇ ಮೇ ಅವಧಿಯಲ್ಲಿ ಗಮನಿಸಬಹುದಾದ ಬಾವಲಿಗಳ ಸಂಖ್ಯೆಯ ಜತೆಗೆ ಸಂಬಂಧ ಹೊಂದಿದೆ; ಈ ಅವಧಿಯಲ್ಲಿ ಮರಿ ಬಾವಲಿಗಳು ಗೂಡು ಬಿಟ್ಟು ಹಾರಲು ಆರಂಭಿಸುತ್ತವೆ. ಬಾಂಗ್ಲಾದೇಶ ಮತ್ತು ಭಾರತದಲ್ಲಿ 2001ರ ಚಳಿಗಾಲದ ಅವಧಿಯಲ್ಲಿ ಗಮನಾರ್ಹ ಎನ್‌ಐವಿ ಸೋಂಕು ಪ್ರಸರಣ ಕಂಡುಬಂದಿದೆ. 

ಚಳಿಗಾಲದಲ್ಲಿ ಹಣ್ಣಿನ ಬಾವಲಿ (ಪಿ. ಜೈಜಾಂಟಸ್‌)ಗಳಿಂದ ಕಲುಷಿತಗೊಂಡಿರುವ ತಾಜಾ ತಾಳೆ ಶೇಂದಿಯನ್ನು ಕುಡಿಯುವುದು ನಿಫಾ ವೈರಸ್‌ ಮನುಷ್ಯರಿಗೆ ಅಪರೋಕ್ಷವಾಗಿ ಹರಡುವುದಕ್ಕೆ ಸಂಭಾವ್ಯ ಕಾರಣವಾಗಿರಬಹುದು. ಭಾರತದಲ್ಲಿ 2001ರಲ್ಲಿ ಮನುಷ್ಯರಿಂದ ಮನುಷ್ಯರಿಗೆ ನಿಫಾ ಸೋಂಕು ಹರಡಿರುವುದಕ್ಕೆ ಸಾಂದರ್ಭಿಕ ಸಾಕ್ಷ್ಯಗಳಿವೆ. ಸಿಲಿಗುರಿಯಲ್ಲಿ ನಿಫಾ ವೈರಸ್‌ ಸೋಂಕು ಹರಡಿದ್ದ ವೇಳೆ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳನ್ನು ಉಪಚರಿಸಿದ್ದ 33 ಮಂದಿ ಆರೋಗ್ಯ ಸೇವಾ ಕಾರ್ಯಕರ್ತರು ಸೋಂಕಿಗೆ ಒಳಗಾಗಿದ್ದರು; ಇದು ಮೂಗು-ಬಾಯಿಯ ಮಾರ್ಗದ ಮೂಲಕ (ನ್ಯಾಸೊಕಾಮಿಕಲ್‌- ಕಫ‌, ಕೆಮ್ಮು, ಸೀನು ಇತ್ಯಾದಿಗಳಿಂದ ಸೋಂಕು ಪ್ರಸರಣ) ಸೋಂಕು ಪ್ರಸರಣವನ್ನು ಸೂಚಿಸುತ್ತದೆ. ಬಾಂಗ್ಲಾದೇಶದಲ್ಲಿ ನಿಫಾ ವೈರಸ್‌ ಹಾವಳಿ ಉಂಟಾದ ಸಂದರ್ಭದಲ್ಲಿ ಸೋಂಕು ಪೀಡಿತ ಬಾವಲಿಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಮನುಷ್ಯರಿಗೆ ಹರಡಿತ್ತು ಎನ್ನಲಾಗಿದೆ. 

ಬಾಂಗ್ಲಾದೇಶದಲ್ಲಿಯೂ 2004ರಲ್ಲಿ ನಿಫಾ ವೈರಸ್‌ ಕಾಯಿಲೆ ಕಂಡುಬಂದಿದ್ದಾಗ ಮನುಷ್ಯರಿಂದ ಮನುಷ್ಯರಿಗೆ ಸೋಂಕು ಪ್ರಸರಣ ನಡೆದಿದ್ದುದಕ್ಕೆ ಬಲವಾದ ಸಾಕ್ಷ್ಯಗಳು ಲಭಿಸಿದ್ದವು. ಕೇರಳದಲ್ಲಿ ಇತ್ತೀಚೆಗೆ ಉಂಟಾದ ನಿಫಾ ಸೋಂಕಿನ ಮೂಲ ಚಂಗರೋತ್‌ ಗ್ರಾಮದ ಒಂದು ಹಳೆಯ ಬಾವಿ (ವಳಚೆಕುಟ್ಟಿ ಮೂಸಾ ಎಂಬವರಿಗೆ ಸೇರಿದ್ದು) ಎಂಬುದಾಗಿ ಕಂಡು ಹಿಡಿಯಲಾಗಿದ್ದು, ಬಾವಿಯಲ್ಲಿ ಬಾವಲಿ ಸತ್ತು ಬಿದ್ದಿರುವುದೇ ಇದಕ್ಕೆ ಕಾರಣ. ವಳಚೆಕುಟ್ಟಿ ಮೂಸಾ ಅವರ ಕುಟುಂಬವೇ ಪ್ರಸ್ತುತ ನಿಫಾ ಸೋಂಕಿನ ಗಮನಕೇಂದ್ರವಾಗಿದೆ. 

ಬಾವಿಯನ್ನು ಶುಚಿಗೊಳಿಸುವ ಕೆಲಸ ಮಾಡಿದ್ದ ಮೂಸಾ ಅವರ ಇಬ್ಬರು ಪುತ್ರರಾದ ಮೊಹಮ್ಮದ್‌ ಸಾಲಿಯಾ (28) ಮತ್ತು ಮೊಹಮ್ಮದ್‌ ಸಾದಿಕ್‌ (26) ನಿಫಾ ವೈರಸ್‌ ಸೋಂಕಿಗೆ ತುತ್ತಾದವರಲ್ಲಿ ಮೊದಲಿಗರು. ಅದು 2018ರ ಮೇ 19ರಂದು ಕೋಯಿಕ್ಕೋಡ್‌ನ‌ ಪೆರಂಬ್ರಾದಿಂದ ಮೊತ್ತಮೊದಲ ಬಾರಿಗೆ ವರದಿಯಾಯಿತು. ಕೇರಳದಲ್ಲಿ ನಿಫಾದಿಂದ ಮೃತಪಟ್ಟವರ ಸಂಖ್ಯೆ ನಿಧಾನವಾಗಿ ಏರುತ್ತಿದ್ದು, ಮೂಸಾ ಮತ್ತವರ ಮಕ್ಕಳು ಕೂಡ ಮರಣವನ್ನಪ್ಪಿದ್ದಾರೆ. 

ಮಣಿಪಾಲ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌ (ಮಾಹೆ)ಯ ಅಂಗಸಂಸ್ಥೆಯಾಗಿರುವ ಮಣಿಪಾಲ್‌ ಸೆಂಟರ್‌ ಫಾರ್‌ ವೈರಸ್‌ ರಿಸರ್ಚ್‌ (ಎಂಸಿವಿಆರ್‌)ನ ಮುಖ್ಯಸ್ಥರಾಗಿರುವ ಡಾ| ಜಿ. ಅರುಣ್‌ಕುಮಾರ್‌ ನಿಫಾ ವೈರಸ್‌ ಸೋಂಕು ಪೀಡಿತರಾಗಿದ್ದ ದ್ವಿತೀಯ ವ್ಯಕ್ತಿಯಲ್ಲಿ ನಿಫಾ ವೈರಸ್‌ ಪತ್ತೆ ಮಾಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಗಂಟಲಿನ ದ್ರವ, ರಕ್ತ, ಮೂತ್ರ ಮತ್ತು ಬೆನ್ನುಹುರಿಯ ದ್ರವ (ಸೆರಬೊÅಸ್ಪೈನಲ್‌ ಫ‌ೂÉಯಿಡ್‌ – ಸಿಎಸ್‌ಎಫ್)ಗಳು ಈ ಪರೀಕ್ಷೆಯನ್ನು ಕೈಗೊಳ್ಳಲು ಅಗತ್ಯವಾಗಿರುತ್ತವೆ. ದ್ವಿತೀಯ ರೋಗಿಯಿಂದ ಈ ಮಾದರಿಗಳನ್ನು ಸಂಗ್ರಹಿಸಿ ಮಣಿಪಾಲದ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಮಾದರಿಗಳು ಮಣಿಪಾಲ ತಲುಪಿದ ಬಳಿಕ ಹನ್ನೆರಡು ತಾಸುಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಪರೀಕ್ಷೆಯ ಫ‌ಲಿತಾಂಶ ಹೊರಬಂತು. ಮಾದರಿಗಳು ನಿಫಾ ವೈರಸ್‌ ಪರೀಕ್ಷೆಗೆ ಪಾಸಿಟಿವ್‌ ಫ‌ಲಿತಾಂಶ ನೀಡಿದ ತತ್‌ಕ್ಷಣ ವೈದ್ಯಕೀಯ ಸಮುದಾಯದಲ್ಲಿ ಕಟ್ಟೆಚ್ಚರದ ಸ್ಥಿತಿ ಘೋಷಿಸಲಾಯಿತು. ಮೊದಲನೇ ರೋಗಿಯು ಮಾದರಿಗಳನ್ನು ಸಂಗ್ರಹಿಸುವುದಕ್ಕೂ ಮುನ್ನವೇ ಸಾವನ್ನಪ್ಪಿದ್ದರಿಂದ ಅವರಲ್ಲಿ ಈ ಪರೀಕ್ಷೆಗಳನ್ನು ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. 

ಪ್ರಯೋಗಾಲಯ ಪರೀಕ್ಷೆ
ನಿಫಾ ವೈರಸ್‌ನ ಪ್ರಯೋಗಾಲಯ ಪರೀಕ್ಷೆಯ ಪ್ರಕ್ರಿಯೆಗಳಲ್ಲಿ ಸೆರಾಲಜಿ, ಹಿಸ್ಟೊಪೆಥಾಲಜಿ, ಪಿಸಿಆರ್‌ ಮತ್ತು ವೈರಸ್‌ ಪ್ರತ್ಯೇಕೀಕರಣ ಸೇರಿವೆ. ಗಂಟಲಿನ ದ್ರವ, ರಕ್ತ, ಮೂತ್ರ ಮತ್ತು ಬೆನ್ನುಹುರಿಯ ದ್ರವ (ಸೆರಬೊÅಸ್ಪೈನಲ್‌ ಫ‌ೂÉಯಿಡ್‌ – ಸಿಎಸ್‌ಎಫ್)ಗಳಂತಹ ದೇಹದ್ರವಗಳು ಈ ಪರೀಕ್ಷೆಯನ್ನು ಕೈಗೊಳ್ಳಲು ಅಗತ್ಯವಾಗಿರುತ್ತವೆ. ಪ್ರಯೋಗಾಲಯದಲ್ಲಿ ನಿಫಾ ವೈರಸ್‌ ಅನ್ನು ಖಚಿತಪಡಿಸಿಕೊಳ್ಳಲು ಸೀರಮ್‌ ನ್ಯೂಟ್ರಲೈಸೇಶನ್‌ ಪರೀಕ್ಷೆ, ಎಲಿಸಾ, ಆರ್‌ಟಿ-ಪಿಸಿಆರ್‌ಗಳನ್ನು ಅನುಸರಿಸಲಾಗುತ್ತದೆ. ಆಗ್ನೇಯ ಏಶ್ಯಾ ಭಾಗದ ಬಹುತೇಕ ದೇಶಗಳಲ್ಲಿ ನಿಫಾ ವೈರಸ್‌ ಪತ್ತೆ ಮಾಡುವುದಕ್ಕೆ ಅಗತ್ಯವಾದ ಅಥವಾ ಅದನ್ನು ನಿಯಂತ್ರಿಸುವುದಕ್ಕೆ ಅಗತ್ಯವಾದ ಸಮರ್ಪಕ ವ್ಯವಸ್ಥೆಗಳಿಲ್ಲ. 

ಬಾಂಗ್ಲಾದೇಶ, ಭಾರತ ಮತ್ತು ಥಾçಲಂಡ್‌ಗಳು ರೋಗಪತ್ತೆ ಮತ್ತು ಅಧ್ಯಯನ ಉದ್ದೇಶಗಳಿಗಾಗಿ ಪ್ರಯೋಗಾಲಯ ಸೌಕರ್ಯಗಳನ್ನು ಸ್ಥಾಪಿಸಿಕೊಂಡಿವೆ. 

ಅಂತಾರಾಷ್ಟ್ರೀಯವಾಗಿ ನಿಫಾ ವೈರಸ್‌ ಅನ್ನು ಚತುರ್ಥ ಸ್ತರದ ಜೈವಿಕ ಭದ್ರತಾ ಏಜೆಂಟ್‌ (ಬಯೋಸೆಕ್ಯುರಿಟಿ ಲೆವೆಲ್‌ – ಬಿಎಸ್‌ಎಲ್‌4 ಏಜೆಂಟ್‌) ಎಂಬುದಾಗಿ ವರ್ಗೀಕರಿಸಲಾಗಿದೆ. 

ರೋಗಿಯ ದೇಹದಿಂದ ದೇಹದ್ರವ ಮಾದರಿಗಳನ್ನು ಸಂಗ್ರಹಿಸಿದ ಬಳಿಕ ವೈರಸ್‌ ಅನ್ನು ನಿಷ್ಕ್ರಿಯಗೊಳಿಸುವುದು ಸಾಧ್ಯವಾಗುವುದಾದರೆ ಬಿಎಸ್‌ಎಲ್‌2 ಮಟ್ಟದ ಪ್ರಯೋಗಾಲಯ ಸೌಲಭ್ಯಗಳು ಸಾಕಾಗುತ್ತವೆ. ನಿಫಾ ವೈರಸ್‌ “ಪರಾರಿಯಾಗಿ’ ಇನ್ನಷ್ಟು ಮಂದಿಗೆ ರೋಗ ಉಂಟು ಮಾಡದಂತೆ ಕಾಯ್ದಿರಿಸಿ ಸುರಕ್ಷಿತವಾಗಿ ಅಧ್ಯಯನ ನಡೆಸಬಹುದಾದ ಪ್ರಯೋಗಾಲಯಗಳು ಕೆಲವಷ್ಟೇ ಇವೆ.  

ರೋಗಲಕ್ಷಣಗಳು
ಪ್ರಾಣಿಗಳ ಪೈಕಿ ಹಂದಿಗಳಲ್ಲಿ ನಿಫಾ ವೈರಸ್‌ ಸೋಂಕಿನ ಪ್ರದಾನ ಲಕ್ಷಣಗಳನ್ನು ಗುರುತಿಸಲಾಗಿದೆ, ಅವುಗಳಲ್ಲಿ ಶ್ವಾಸಾಂಗ ಅಸ್ವಸ್ಥತೆಯ ಲಕ್ಷಣಗಳು ಪ್ರಧಾನವಾಗಿರುತ್ತವೆ. ವೈದ್ಯಕೀಯ ಪರಿಶೀಲನೆ – ಲಕ್ಷಣಗಳ ಆಧಾರದಲ್ಲಿ ಹಂದಿಗಳಲ್ಲಿ ನಿಫಾ ವೈರಸ್‌ ಸೋಂಕು ಕಾಯಿಲೆಯನ್ನು ಪೋಕೈìನ್‌ ರೆಸ್ಪಿರೇಟರಿ ಮತ್ತು ನ್ಯುರಾಲಾಜಿಕಲ್‌ ಸಿಂಡ್ರೋಮ್‌ ಎಂಬುದಾಗಿಯೂ ಹಾಗೂ ಬಾರ್ಕಿಂಗ್‌ ಪಿಗ್‌ ಸಿಂಡ್ರೋಮ್‌ ಎಂಬುದಾಗಿಯೂ ಕರೆಯುತ್ತಾರೆ. ಮನುಷ್ಯರಲ್ಲಿ ನಿಫಾ ವೈರಸ್‌ ಸೋಂಕಿನ ಲಕ್ಷಣಗಳು ಇನ್‌ಫ‌ುÉಯೆಂಜಾ ಸೋಂಕಿನ ಲಕ್ಷಣಗಳನ್ನು ಹೋಲುತ್ತವೆ – ಜ್ವರ ಮತ್ತು ಸ್ನಾಯು ನೋವು ಇರುತ್ತದೆ. ಕೆಲವು ಪ್ರಕರಣಗಳಲ್ಲಿ ಮಾನಸಿಕ ಗೊಂದಲ ಅಥವಾ ಕೋಮಾಗಳಿಗೆ ಕಾರಣವಾಗುವ ಮಿದುಳಿನ ಉರಿಯೂತವೂ ಕಂಡುಬರುತ್ತದೆ. ಎನ್‌ಸೆಫ‌ಲೈಟಿಸ್‌ – ಮಿದುಳಿನ ಉರಿಯೂತವು ಹಠಾತ್ತಾಗಿ ಉಂಟಾಗಬಹುದು ಅಥವಾ ಕಾಯಿಲೆಯ ಮುಂದುವರಿದ ಹಂತದಲ್ಲಿ ಕಾಣಿಸಿಕೊಳ್ಳಬಹುದು. ಮುಂದುವರಿದ ಹಂತದಲ್ಲಿ ಉಂಟಾದರೆ ರೋಗಪತ್ತೆ ಕಠಿನ, ಏಕೆಂದರೆ ಸೋಂಕು ಹಲವು ತಿಂಗಳುಗಳ ಹಿಂದೆಯೇ ತಗುಲಿರಬಹುದು. ಇಷ್ಟಲ್ಲದೆ, ಹಠಾತ್ತಾಗಿ ಮಿದುಳಿನ ಉರಿಯೂತ ಉಂಟಾದವರು ಗುಣಮುಖರಾದರೂ ಮರುಕಳಿಕೆ ಸಂಭವಿಸುವ ಸಾಧ್ಯತೆ ಇದೆ. ಆದರೆ, ಮಿದುಳಿನ ಎಂಆರ್‌ಐ – ಮ್ಯಾಗ್ನೆಟಿಕ್‌ ರೆಸೊನೆನ್ಸ್‌ ತಪಾಸಣೆಯು ನಿಫಾದಿಂದ ಉಂಟಾಗಿರುವ ಮಿದುಳಿನ ಉರಿಯೂತವೇ ಅಥವಾ ಇತರ ಕಾರಣಗಳಿಂದ ಉಂಟಾದ ಮಿದುಳಿನ ಉರಿಯೂತವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ; ಅಲ್ಲದೆ ಕಾಯಿಲೆಯ ಹಠಾತ್‌ ಬೆಳವಣಿಗೆಯೇ, ಮುಂದುವರಿದ ಹಂತವೇ ಯಾ ಮರುಕಳಿಕೆಯೇ ಎಂಬುದನ್ನು ಕಂಡುಹಿಡಿಯುವುದಕ್ಕೂ ಸಹಾಯ ಮಾಡುತ್ತದೆ. ನಿಫಾ ಪ್ರಕರಣಗಳ ಮರಣ ಪ್ರಮಾಣವು ಶೇ.9ರಿಂದ ಶೇ.75ರ ವರೆಗೂ ಇದೆ. ಸೋಂಕು ತಗುಲಿ ಪ್ರಬಲಗೊಂಡು ರೋಗಲಕ್ಷಣಗಳನ್ನು ಪ್ರದರ್ಶಿಸಲು ತೆಗೆದುಕೊಳ್ಳುವ (ಇನ್‌ಕುÂಬೇಶನ್‌) ಅವಧಿ ನಾಲ್ಕರಿಂದ 18 ದಿನಗಳು.  

ತಡೆ ಮತ್ತು ನಿಯಂತ್ರಣ
ನಿಫಾ ವೈರಸ್‌ ಕಾಯಿಲೆಗೆ ಪರಿಣಾಮಕಾರಿಯಾದ ಚಿಕಿತ್ಸೆ ಇಲ್ಲ; ಆದರೆ ರಿಬಾವೇರಿನ್‌ ಹೊಟ್ಟೆತೊಳೆಸುವಿಕೆ, ವಾಂತಿ ಮತ್ತು ಸೆಳವು ಲಕ್ಷಣಗಳನ್ನು ನಿವಾರಿಸಬಹುದಾಗಿದೆ. ಜ್ವರವನ್ನು ಮತ್ತು ನರಶಾಸ್ತ್ರೀಯ ಲಕ್ಷಣಗಳನ್ನು ನಿಭಾಯಿಸುವುದಕ್ಕೆ ಚಿಕಿತ್ಸೆಯಲ್ಲಿ ಮುಖ್ಯ ಗಮನ ನೀಡಲಾಗುತ್ತದೆ. ತೀವ್ರವಾಗಿ ಅಸ್ವಸ್ಥಗೊಂಡಿರುವ ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಬೇಕಾಗುತ್ತದೆ ಹಾಗೂ ವೆಂಟಿಲೇಟರ್‌ ನೆರವಿನ ಅಗತ್ಯವಿರುತ್ತದೆ. ಇತ್ತೀಚೆಗಿನ ನಿಫಾ ಹಾವಳಿಗಳ ಸಂದರ್ಭದಲ್ಲಿ ಮನುಷ್ಯರಿಂದ ಮನುಷ್ಯರಿಗೆ ಸೋಂಕು ಪ್ರಸರಣ ಉಂಟಾಗುವುದು ಕಂಡುಬಂದಿದ್ದು, ಸೋಂಕು ಪೀಡಿತ ರೋಗಿಗಳಿಂದ ಅವರ ಆರೈಕೆಯಲ್ಲಿ ತೊಡಗಿರುವ ಆರೋಗ್ಯ ಸೇವಾ ಸಿಬಂದಿಗೆ ಸೋಂಕು ಇರುವ ದೇಹದ್ರವಗಳು, ವಿಸರ್ಜನೆಗಳು, ರಕ್ತ ಅಥವಾ ಜೀವಕೋಶಗಳಿಂದ ರೋಗ ಪ್ರಸರಣವಾಗುವ ಅಪಾಯವನ್ನು ಪ್ರದರ್ಶಿಸಿದೆ. ನಿಫಾ ಖಚಿತಗೊಂಡ ಅಥವಾ ಶಂಕಿತ ರೋಗಿಗಳ ಆರೈಕೆ ಮಾಡುವ ಮತ್ತು ಅವರ ಮಾದರಿಗಳನ್ನು ನಿರ್ವಹಿಸುವಾಗ ಆರೋಗ್ಯ ಸೇವಾ ಸಿಬಂದಿಗಳು ಪ್ರಮಾಣೀಕೃತ ಮುನ್ನೆಚ್ಚರಿಕೆಗಳನ್ನು ವಹಿಸಬೇಕು. 

ನಿಫಾ ವೈರಸ್‌ ಪ್ರತಿಬಂಧಕ ಲಸಿಕೆಯೊಂದು ಅಭಿವೃದ್ಧಿಗೊಳ್ಳುತ್ತಿದೆ. ಬೆಕ್ಕುಗಳಲ್ಲಿ ನಿಫಾ ವೈರಸ್‌ ಮಾರಕ ಸೋಂಕಿನ ವಿರುದ್ಧ ಪುನರ್‌ಸಂಯೋಜಿತ (ರಿ ಕಾಂಬಿನೆಂಟ್‌) ಸಬ್‌ ಯೂನಿಟ್‌ ಲಸಿಕೆಯೊಂದು ರಕ್ಷಣೆ ಒದಗಿಸುತ್ತದೆ. ಎಎಲ್‌ವಿಎಸಿ ಕಾನರಿಪಾಕ್ಸ್‌ ವೆಕ್ಟರ್‌ಡ್‌ ನಿಫಾ ಎಫ್ ಮತ್ತು ಜಿ ಲಸಿಕೆಗಳು ಹಂದಿಗಳಲ್ಲಿ ಆಶಾದಾಯಕ ಲಸಿಕೆಯಾಗಿ ಕಂಡುಬಂದಿದೆ ಮತ್ತು ಮನುಷ್ಯರಿಗೂ ಲಸಿಕೆಯಾಗಿ ಒದಗುವ ಸಂಭಾವ್ಯತೆ ಇದೆ. 

ಮನುಷ್ಯರಲ್ಲಿ ನಿಫಾ ಸೋಂಕನ್ನು ತಡೆಯುವುದೇ ನಿಫಾ ಹಾವಳಿಯ ವಿರುದ್ಧ ಅನುಸರಿಸಬೇಕಾದ ಮುಖ್ಯ ಕಾರ್ಯತಂತ್ರವಾಗಿದೆ. ನಿಫಾ ವೈರಸ್‌ ಹಾವಳಿಯನ್ನು ಕ್ಷಿಪ್ರವಾಗಿ ಪತ್ತೆ ಮಾಡಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಆರಂಭಿಸುವುದಕ್ಕಾಗಿ ಸಮರ್ಪಕವಾದ ಸರ್ವೇಕ್ಷಣಾ ವ್ಯವಸ್ಥೆಗಳನ್ನು ಸ್ಥಾಪಿಸುವುದು ಬಹಳ ಅಗತ್ಯ ಮತ್ತು ಪ್ರಾಮುಖ್ಯವಾಗಿದೆ. 

ಟಾಪ್ ನ್ಯೂಸ್

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

5-dinesh

Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?

3-ct-ravi

ರಾತ್ರಿಯಿಡೀ ಸಿ.ಟಿ. ರವಿಯನ್ನು ಸುತ್ತಾಡಿಸಿದ ಪೊಲೀಸರು: ಮಧ್ಯರಾತ್ರಿ ರಸ್ತೆಯಲ್ಲೇ ಪ್ರತಿಭಟನೆ

2-r-ashwin

Ravichandran Ashwin: ಯಾವುದೇ ಪಶ್ಚಾತ್ತಾಪವಿಲ್ಲ: ಅಶ್ವಿ‌ನ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

ಟ್ರಕ್ ಡಿಕ್ಕಿ ಹೊಡೆದು ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ… ಓರ್ವ ಸಾ*ವು

Tragedy: ಬೆಳ್ಳಂಬೆಳಗ್ಗೆ ಭೀಕರ ಅಪಘಾತ… ಗ್ಯಾಸ್ ಟ್ಯಾಂಕರ್ ಸೇರಿ ಹಲವು ವಾಹನ ಬೆಂಕಿಗಾಹುತಿ

7-icc

ICC Champions Trophy: ಹೈಬ್ರಿಡ್‌ ಮಾದರಿಯೇ ಅಂತಿಮ

6-mandya

Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ  87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ

5-dinesh

Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.