ನೋವೆಲ್‌ ಕೊರೊನಾ ವೈರಸ್‌ : ನೀವು ತಿಳಿದಿರಬೇಕಾದ ಪ್ರಾಥಮಿಕ ಮಾಹಿತಿಗಳು


Team Udayavani, Feb 16, 2020, 4:04 AM IST

ನೋವೆಲ್‌ ಕೊರೊನಾ ವೈರಸ್‌ : ನೀವು ತಿಳಿದಿರಬೇಕಾದ ಪ್ರಾಥಮಿಕ ಮಾಹಿತಿಗಳು

ಚೀನದ ವುಹಾನ್‌ ಪ್ರಾಂತ್ಯದಲ್ಲಿ 2019ರ ಡಿಸೆಂಬರ್‌ ತಿಂಗಳಲ್ಲಿ ಅಸಾಮಾನ್ಯ ಬಗೆಯ ನ್ಯುಮೋನಿಯಾ ಪ್ರಕರಣಗಳಲ್ಲಿ ಹೆಚ್ಚಳ ಉಂಟಾಗುತ್ತಿರುವುದು ಕಂಡುಬಂತು. ಇದರ ಬಗ್ಗೆ ಡಿಸೆಂಬರ್‌ 31ರಂದು ಚೀನವು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ಮಾಡಿತು. 2020ರ ಜ.7ರಂದು ನೋವೆಲ್‌ ಕೊರೊನಾ ವೈರಸ್‌‍ನ್ನು ಪತ್ತೆಹಚ್ಚಲಾಯಿತು ಮತ್ತು ಇದಕ್ಕೆ ತಾತ್ಕಾಲಿಕವಾಗಿ ನೋವೆಲ್‌ ಕೊರೊನಾ ವೈರಸ್‌ 2019 (nCoV-2019) ಎಂದು ಹೆಸರಿಸಲಾಯಿತು.

ಹೆಚ್ಚಿನ ಪ್ರಕರಣಗಳಲ್ಲಿ ಈ ರೋಗಕ್ಕೂ ಚೀನದ ವುಹಾನ್‌ ನಗರದ ಹುಆನನ್‌ ಸೀ ಫುಡ್‌ ಮಾರ್ಕೆಟ್‌‍ಗೂ ಸಂಬಂಧ ಇರುವುದು ಕಂಡುಬಂತು. 2019ರ ಡಿಸೆಂಬರ್‌ನಲ್ಲಿ ಕೊರೊನಾ ವೈರಸ್‌ ಸೋಂಕಿನ 50ಕ್ಕಿಂತಲೂ ಕಡಿಮೆ ಪ್ರಕರಣಗಳು ವರದಿಯಾಗಿದ್ದವು. ಗಂಭೀರ ಪ್ರಕರಣಗಳು ಮತ್ತು ಕೆಲವು ಸಾವುಗಳು ಸಂಭವಿಸಿದ್ದರೂ ಇದು ಮನುಷ್ಯರಿಂದ ಮನುಷ್ಯರಿಗೆ ಹರಡಿರುವುದಕ್ಕೆ ಯಾವುದೇ ಪುರಾವೆ ಇಲ್ಲ.

ಆದರೆ 2020ರ ಜನವರಿಯ ಆರಂಭದಲ್ಲಿ ಸನ್ನಿವೇಶ ಸಂಪೂರ್ಣವಾಗಿ ಬದಲಾಗಿದೆ. ಈ ವೈರಸ್‌ ಸೋಂಕು ಜನರಿಂದ ಜನರಿಗೆ ಹರಡುವ ಪ್ರಮಾಣದಲ್ಲಿ ಹೆಚ್ಚಳವಾಗಿ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆಯಲ್ಲಿ ಕೂಡ ಆಧಿಕ್ಯ ಕಂಡುಬಂದಿದೆ.

ಅಂದಿನಿಂದ ಥೈಲ್ಯಾಂಡ್‌, ದಕ್ಷಿಣ ಕೊರಿಯಾ, ವಿಯೆಟ್ನಾಮ್‌, ಅಮೆರಿಕ, ಸಿಂಗಪೂರ, ಮಲೇಷ್ಯಾ, ಫ್ರಾನ್ಸ್, ಆಸ್ಟ್ರೇಲಿಯಾ, ನೇಪಾಲ, ಶ್ರೀಲಂಕಾ, ಯುಎಇ, ಜರ್ಮನಿ, ಕೆನಡ ಮತ್ತು ಭಾರತ ಒಳಗೊಂಡಂತೆ ಹಲವಾರು ದೇಶಗಳಲ್ಲಿ ಈ ವೈರಸ್‌ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಈ ಎಲ್ಲ ಪ್ರಕರಣಗಳು ಚೀನ ಭೇಟಿಯೊಂದಿಗೆ ನಂಟು ಹೊಂದಿವೆ.

ಇಷ್ಟರತನಕ ಭಾರತದಲ್ಲಿ nCoV-2019ನ ಒಂದು ಪ್ರಕರಣ ಕೇರಳದಲ್ಲಿ ವರದಿಯಾಗಿದೆ. ಈ ಆಘಾತಕಾರಿ ವೈರಸ್‌‍ನ ಸುದ್ದಿ ಸಾರ್ವಜನಿಕರಲ್ಲಿ ಹಲವು ತಪ್ಪು ಗ್ರಹಿಕೆಗಳನ್ನು ಉಂಟುಮಾಡಿದೆ. ಸಾರ್ವಜನಿಕರ ಆರೋಗ್ಯಕ್ಕೆ ಬೆದರಿಕೆ ಇರುವುದು ನಿಜವಾಗಿದ್ದರೂ ಭಯಪಡುವುದಕ್ಕೆ ಯಾವುದೇ ಕಾರಣವಿಲ್ಲ.

ಬದಲಿಗೆ, ಇಂಥ ಹೊತ್ತಿನಲ್ಲಿ ಜಾಗ್ರತೆ ವಹಿಸುವುದು ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದ ಉತ್ತಮ ಅಭ್ಯಾಸಗಳನ್ನು ಅನುಸರಿಸುವುದು ತುಂಬ ಅಗತ್ಯ. ಲಭ್ಯವಿರುವ ವೈಜ್ಞಾನಿಕ ಸಾಕ್ಷ್ಯಗಳನ್ನಾಧರಿಸಿ ಸಾರ್ವಜನಿಕರ ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಿಸಲು ನಾನಿಲ್ಲಿ ಪ್ರಯತ್ನ ಪಟ್ಟಿದ್ದೇನೆ.

1. ಕೊರೊನಾ ವೈರಸ್‌‍ ಎಂದರೇನು?
ಕೊರೊನಾ ವೈರಸ್‌‍ಗಳು, ವೈರಸ್‌‍ಗಳ ಒಂದು ಗುಂಪಾಗಿದ್ದು, ಅವು ‘ಕಿರೀಟ’ದಂಥ ರಚನೆ ಹೊಂದಿವೆ. ಪ್ರಾಣಿಗಳಲ್ಲಿ 50ಕ್ಕೂ ಹೆಚ್ಚು ವಿಧದ ಕೊರೊನಾ ವೈರಸ್‌‍ಗಳಿದ್ದು, ಅವುಗಳಲ್ಲಿ ಕೆಲವೇ ವಿಧಗಳು ಮನುಷ್ಯರಲ್ಲಿ ಸೋಂಕನ್ನು ಉಂಟು ಮಾಡುತ್ತವೆ.

2. ಕೊರೊನಾ ವೈರಸ್‌‍ಗಳು ಮನುಷ್ಯರಲ್ಲಿ ಯಾವ ಕಾಯಿಲೆಗಳನ್ನುಂಟು ಮಾಡುತ್ತವೆ?
CoV-NL63, CoV-229E, CoV-OC43, ಮತ್ತು CoV-HKU1ನಂಥ ಮನುಷ್ಯರಿಗೆ ತಗಲುವ ಕೊರೊನಾ ವೈರಸ್‌‍ಗಳು ಮನುಷ್ಯರಲ್ಲಿ ಸಾಮಾನ್ಯ ಶೀತವನ್ನುಂಟು ಮಾಡುತ್ತವೆ. SARS-CoVಯನ್ನು ಮೊತ್ತಮೊದಲ ಬಾರಿ ಚೀನದಲ್ಲಿ ಗುರುತಿಸಲಾಗಿತ್ತು ಮತ್ತು MERS-CoVಯನ್ನು ಮೊತ್ತಮೊದಲ ಬಾರಿಗೆ ಸೌದಿ ಅರೇಬಿಯಾದಲ್ಲಿ ಗುರುತಿಸಲಾಗಿದ್ದು, ಇದು ಗಂಭೀರ ಮತ್ತು ಮಾರಣಾಂತಿಕ ನ್ಯುಮೋನಿಯಾಕ್ಕೆ ಕಾರಣವಾಗುತ್ತದೆ.

3. ನೋವೆಲ್‌ ಕೊರೊನಾ ವೈರಸ್‌ ಎಂದರೇನು?
ಪ್ರಾಣಿಗಳಲ್ಲಿ ಮತ್ತು ಮನುಷ್ಯರಲ್ಲಿ ಈ ಹಿಂದೆ ಕಂಡುಬರದಿದ್ದಂಥ ಕೊರೊನಾ ವೈರಸ್‌‍ನ್ನು ನೋವೆಲ್‌ ಕೊರೊನಾ ವೈರಸ್‌ ಎಂದು ಕರೆಯುತ್ತಾರೆ.

4. ನೋವೆಲ್‌ ಕೊರೊನಾ ವೈರಸ್‌‍ನ ನೈಸರ್ಗಿಕ ಮೂಲ ಯಾವುದು?
ಪ್ರಾಣಿಗಳು ಕೊರೊನಾ ವೈರಸ್‌‍ಗಳ ನೈಸರ್ಗಿಕ ಮೂಲವಾಗಿವೆ. ಬಾವಲಿಗಳು ಕೊರೊನಾ ವೈರಸ್‌‍ಗಳಿಗೆ ಆಶ್ರಯ ನೀಡುವ ಪ್ರಮುಖ ಜೀವಿಗಳಾಗಿವೆ. ಪುನುಗು ಬೆಕ್ಕು (SARS-CoV), ಒಂಟಿ ಡುಬ್ಬದ ಒಂಟೆ (MERS-CoV) ಸೇರಿದಂತೆ ಇತರ ಹಲವು ಪ್ರಾಣಿಗಳು ಸಹ ಕೊರೊನಾ ವೈರಸ್‌‍ಗಳನ್ನು ಹೊಂದಿರುತ್ತವೆ.

5. ಇವು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದು ಸಾಧ್ಯವಿಲ್ಲವೇ?
ಹೌದು. ಸೋಂಕುಪೀಡಿತ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಲ್ಲಿ ಕೊರೊನಾ ವೈರಸ್‌ ಮನುಷ್ಯರಿಗೂ ಹರಡುತ್ತದೆ (ಪ್ರಾಣಿಗಳನ್ನು ನೋಡಿಕೊಳ್ಳುವುದು, ಜೀವಂತ ಪ್ರಾಣಿ ಮಾರುಕಟ್ಟೆಗಳಿಗೆ ಭೇಟಿ ನೀಡುವುದು, ಬೇಯಿಸದ ಅಥವಾ ಅರ್ಧ ಬೇಯಿಸಿದ ಪ್ರಾಣಿ ಉತ್ಪನ್ನಗಳ ಸೇವನೆ). ಪುನುಗು ಬೆಕ್ಕುಗಳಿಂದ SARS-CoV ಮತ್ತು ಒಂಟಿ ಡುಬ್ಬದ ಒಂಟೆಗಳಿಂದ MERS-CoV ಹರಡುತ್ತದೆ.

6. ನೋವೆಲ್‌ ಕೊರೊನಾ ವೈರಸ್‌ ಸೋಂಕಿನ ರೋಗ ಲಕ್ಷಣಗಳೇನು?
ನೋವೆಲ್‌ ಕೊರೊನಾ ವೈರಸ್‌ ವಿಭಿನ್ನ ವೈದ್ಯಕೀಯ ತೋರಿಕೆಯನ್ನು ಒಳಗೊಂಡಿದ್ದು, ಇದರಲ್ಲಿ ರೋಗಲಕ್ಷಣ ರಹಿತ, ಸೌಮ್ಯ, ತೀವ್ರ ಮತ್ತು ಮಾರಣಾಂತಿಕ ಎಂಬ ವಿವಿಧ ಪ್ರಕಾರಗಳಿವೆ. ಸಾಮಾನ್ಯ ರೋಗಲಕ್ಷ‌ಣಗಳು ಜ್ವರ, ಕೆಮ್ಮು, ಏದುಸಿರು ಮತ್ತು ಉಸಿರಾಟ ಕಷ್ಟವಾಗುವುದು ಇವುಗಳನ್ನು ಒಳಗೊಂಡಿವೆ. ಹೆಚ್ಚು ತೀವ್ರ ಪ್ರಕರಣಗಳಲ್ಲಿ ಕೊರೊನಾ ವೈರಸ್‌ ಸೋಂಕು ನ್ಯುಮೋನಿಯಾ, ಮೂತ್ರಪಿಂಡ ವೈಫಲ್ಯ ಮತ್ತು ಬಹು ಅಂಗಾಂಗಗಳ ವೈಫಲ್ಯ ಇವುಗಳನ್ನು ಉಂಟುಮಾಡಬಹುದು.

7. ನೋವೆಲ್‌ ಕೊರೊನಾ ವೈರಸ್‌ ಮನುಷ್ಯರಿಂದ ಮನುಷ್ಯರಿಗೆ ಹರಡಬಹುದೇ? ಹೌದಾದಲ್ಲಿ, ಹರಡಲು ಯಾವ ಮಾಧ್ಯಮವನ್ನು ಆಶ್ರಯಿಸುತ್ತದೆ?
ಹೌದು, ಸೋಂಕು ತಗುಲಿದ ವ್ಯಕ್ತಿಯ ತೀರಾ ಸನಿಹ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಅಂದರೆ ಕುಟುಂಬ ಸದಸ್ಯರು, ಆರೋಗ್ಯ ಆರೈಕೆ ಕೆಲಸಗಾರರು ಮತ್ತು ಇತರ ಸೇವೆ ನೀಡುವವರಿಗೆ ಇದು ಹರಡುವ ಸಾಧ್ಯತೆ ಇದೆ. ಈ ವೈರಸ್‌ ಮುಖ್ಯವಾಗಿ ಗಾಳಿಯಲ್ಲಿನ ಕಣಗಳ (droplets ) ಮೂಲಕ ಮತ್ತು ಬೇರೆ ವಸ್ತುಗಳ (formites) ಮೂಲಕ ಹರಡುತ್ತದೆ.

8. ನೋವೆಲ್‌ ಕೊರೊನಾ ವೈರಸ್‌‍ಗೆ ಲಸಿಕೆ ಲಭ್ಯವಿದೆಯೇ?
ಇಲ್ಲ. ಪ್ರಸ್ತುತ ಈ ವೈರಸ್‌ ವಿರುದ್ಧ ಯಾವುದೇ ಲಸಿಕೆ ಲಭ್ಯವಿಲ್ಲ. ಲಸಿಕೆ ಅಭಿವೃದ್ಧಿಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ಹಲವು ವರ್ಷಗಳಲ್ಲದಿದ್ದರೂ, ಹಲವು ತಿಂಗಳುಗಳು ತಗಲಬಹುದು.

9. ನೋವೆಲ್‌ ಕೊರೊನಾ ವೈರಸ್‌‍ಗೆ ಚಿಕಿತ್ಸೆ ಲಭ್ಯವಿದೆಯೇ?
ಯಾವುದೇ ನಿರ್ದಿಷ್ಟ ವೈರಸ್‌ ನಿರೋಧಕ ಔಷಧಗಳು ಲಭ್ಯವಿಲ್ಲ. ಆದರೆ ರೋಗಿಯ ವೈದ್ಯಕೀಯ ಪರಿಸ್ಥಿತಿಯನ್ನಾಧರಿಸಿ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು. ಬೆಂಬಲ ಆರೈಕೆ ಒದಗಿಸುವುದು ಹೆಚ್ಚು ಪರಿಣಾಮಕಾರಿ ಯಾಗಬಲ್ಲದು.

10. ಭಾರತದಲ್ಲಿ ನೋವೆಲ್‌ ಕೊರೊನಾ ವೈರಸ್‌ ವರದಿಯಾಗಿದೆಯೇ?
ಹೌದು, ಇಷ್ಟರತನಕ ಭಾರತದಲ್ಲಿ ಒಂದು ಪ್ರಕರಣ ಕೇರಳದಲ್ಲಿ ವರದಿಯಾಗಿದೆ.

11. ನೋವೆಲ್‌ ಕೊರೊನಾ ವೈರಸ್‌‍ನಿಂದ ನಾನು ನನ್ನನ್ನು ಹೇಗೆ ರಕ್ಷಿಸಿಕೊಳ್ಳಬಹುದು?
ಸೋಪ್‌ ಮತ್ತು ನೀರಿನಿಂದ ಅಥವಾ ಆಲ್ಕೊಹಾಲ್‌ ಆಧರಿತ ಹ್ಯಾಂಡ್‌‍ರಬ್‌‍ನಿಂದ (ಹ್ಯಾಂಡ್‌ ಹೈಜೀನ್‌) ಕೈಗಳನ್ನು ಆಗಾಗ್ಗೆ ತೊಳೆಯಬೇಕು. ನಿರ್ಜೀವ ವಸ್ತುಗಳನ್ನು ಮುಟ್ಟಿದ ಬಳಿಕ ಮುಖ, ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬಾರದು. ಜ್ವರ ಮತ್ತು ಕೆಮ್ಮು ಇರುವ ಯಾರೊಂದಿಗೂ ತುಂಬಾ ಹತ್ತಿರ ಹೋಗಬಾರದು. ರಕ್ಷಣೆ ಧರಿಸದೆ ಜೀವಂತ ಕಾಡುಪ್ರಾಣಿಗಳು ಅಥವಾ ಸಾಕು ಪ್ರಾಣಿಗಳ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ.

12. ನೋವೆಲ್‌ ಕೊರೊನಾ ವೈರಸ್‌ ತಗಲುವ ಅಪಾಯ ಯಾರಿಗಿದೆ?
ಸೋಂಕುಪೀಡಿತ ಪ್ರಾಣಿಗಳು ಅಥವಾ ರೋಗಿಗಳ ಸಂಪರ್ಕಕ್ಕೆ ಬರುವವರಿಗೆ ವೈರಸ್‌ ತಗಲುವ ಅಪಾಯ ಅತೀ ಹೆಚ್ಚಾಗಿರುತ್ತದೆ. ಕುಟುಂಬ ಸದಸ್ಯರು ಮತ್ತು ಆರೋಗ್ಯ ಆರೈಕೆ ಕಾರ್ಯಕರ್ತರಿಗೆ ಸೋಂಕು ತಗಲುವ ಅಪಾಯ ತುಂಬಾ ಹೆಚ್ಚಿರುತ್ತದೆ.

13. ಕೇಂದ್ರ ಮತ್ತು ರಾಜ್ಯ ಸರಕಾರಗಳು ಯಾವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿವೆ?
ಚೀನದಿಂದ ವಿಮಾನಗಳು ಇಳಿಯುವ 12 ವಿಮಾನ ನಿಲ್ದಾಣಗಳಲ್ಲಿ, ಚೀನದಿಂದ ಬರುವ ಎಲ್ಲ ಪ್ರಯಾಣಿಕರ ತಪಾಸಣೆ ಮಾಡಿ ಜ್ವರವಿದೆಯೇ ಎಂದು ಪರೀಕ್ಷಿಸಲಾಗುತ್ತದೆ. ನೆಗೆಟಿವ್‌ ಫಲಿತಾಂಶ ಬರುವ ತನಕ ಅನಾರೋಗ್ಯಪೀಡಿತ/ರೋಗಲಕ್ಷಣಗಳಿರುವ ಪ್ರಯಾಣಿಕರನ್ನು ಮೀಸಲು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗುವುದು.

ಚೀನದ ಪ್ರಯಾಣಿಕರನ್ನು ಅವರು ಚೀನ ಬಿಟ್ಟಂದಿನಿಂದ ತೊಡಗಿ 28 ದಿನಗಳ ಕಾಲ ಅವರ ಮನೆಗಳಲ್ಲಿ ನಿರ್ಬಂಧದಲ್ಲಿಡಲಾಗುವುದು. ಯಾರಿಗಾದರೂ ಜ್ವರ ಅಥವಾ ವೈದ್ಯಕೀಯ ರೋಗಲಕ್ಷಣಗಳು ಕಾಣಿಸಿಕೊಂಡಲ್ಲಿ ನೆಗೆಟಿವ್‌ ಫಲಿತಾಂಶ ಬರುವ ತನಕ ಪ್ರಯಾಣಿಕರನ್ನು ಮೀಸಲು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿ ಇರಿಸಲಾಗುವುದು.

14. ನಮ್ಮ ಪ್ರದೇಶದಲ್ಲಿನ ಆಸ್ಪತ್ರೆಗಳು ನೋವೆಲ್‌ ಕೊರೊನಾ ವೈರಸ್‌ ಪ್ರಕರಣಗಳನ್ನು ನಿಭಾಯಿಸಲು ಸಿದ್ಧವಾಗಿವೆಯೇ?
ಸರಕಾರದ ನಿರ್ದೇಶನದ ಮೇರೆಗೆ ಮಂಗಳೂರಿನ ವೆನ್‌‍ಲಾಕ್‌ ಆಸ್ಪತ್ರೆ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯು ನೋವೆಲ್‌ ಕೊರೊನಾ ವೈರಸ್‌ ಪ್ರಕರಣಗಳನ್ನು ನಿಭಾಯಿಸಲು ಪ್ರತ್ಯೇಕ ವಾರ್ಡ್‌‍ಗಳ ವ್ಯವಸ್ಥೆ ಮಾಡಿವೆ.

ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ಮಂಗಳೂರಿನ ಕೆಎಂಸಿ ಆಸ್ಪತ್ರೆಗಳು ಪ್ರತ್ಯೇಕ ವಾರ್ಡ್‌ ಸೌಕರ್ಯಗಳನ್ನು ಹೊಂದಿದ್ದು, ಇಂಥ ಪ್ರಕರಣಗಳನ್ನು ನಿಭಾಯಿಸುವ ಅನುಭವ ಹೊಂದಿವೆ. 2009ರಲ್ಲಿ ಇನ್‌ಫುಯೆಂಜಾ A/H1NI ವೈರಸ್‌‍ ಸೋಂಕನ್ನು ನಿಭಾಯಿಸಿದ ರೀತಿಯಲ್ಲೇ, ಅಗತ್ಯವಿದ್ದಲ್ಲಿ ಈಗಲೂ ಅದೇ ರೀತಿಯ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದು.

– ಪ್ರೊ| ಜಿ. ಅರುಣ್‌ ಕುಮಾರ್‌, ನಿರ್ದೇಶಕರು, ಮಣಿಪಾಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿ, ಮಾಹೆ, ಮಣಿಪಾಲ.

ಟಾಪ್ ನ್ಯೂಸ್

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಪ್ರೋತ್ಸಾಹ ಧನ: ಸಚಿವ ಶಿವಾನಂದ ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-Meningitis

Meningitis: ಮೆನಿಂಜೈಟಿಸ್‌ ಲಕ್ಷಣಗಳು, ಕಾರಣಗಳು, ಅಪಾಯಗಳು, ಪ್ರಸರಣ ಮತ್ತು ಚಿಕಿತ್ಸೆ

3-hearing

Ear: ಶೀಘ್ರ ಪತ್ತೆಯಿಂದ ಗರಿಷ್ಠ ಫ‌ಲಿತಾಂಶ- ನವಜಾತ ಶಿಶು ಶ್ರವಣ ಪರೀಕ್ಷೆಯ ನಿರ್ಣಾಯಕ ಪಾತ್ರ

2

Heart Health: ಹೃದಯ ಆರೋಗ್ಯದಲ್ಲಿ ಕೊಲೆಸ್ಟರಾಲ್‌ನ ಪಾತ್ರ

19-uv-fusion

UV Fusion: ನಮ್ಮಲ್ಲಿಯೂ ಕೊರತೆಗಳಿವೆ

18-uv-fusion

Learning: ಪ್ರಯತ್ನ ಮತ್ತು ಪ್ರಮಾದ ಕಲಿಕೆಯ ಮೊದಲ ಮೆಟ್ಟಿಲು

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.