ವೃದ್ಧಾಪ್ಯದಲ್ಲಿ ದೇಹಪುಷ್ಠಿ
Team Udayavani, Aug 11, 2019, 5:00 AM IST
ಕಳೆದ ಸಂಚಿಕೆಯಿಂದ- ನ್ಯೂರೊಮಸ್ಕಾಲರ್ ವ್ಯವಸ್ಥೆ
– ವಯಸ್ಸಾಗುತ್ತಿದ್ದಂತೆ ನರ-ಸ್ನಾಯು ಸಮನ್ವಯವು ನಶಿಸಲಾರಂಭಿಸುತ್ತದೆ.
– ಸಂಧಿವಾತದಂತಹ ಅನಾರೋಗ್ಯಗಳು ಸಂಕಷ್ಟ ತರುತ್ತವೆ.
– ಜೀರ್ಣಾಂಗವ್ಯೂಹದ ಕೆಳಭಾಗದಲ್ಲಿರುವ ಸ್ನಾಯುಗಳು ದುರ್ಬಲವಾಗುತ್ತವೆ.
– ಕೆಲವು ಸ್ನಾಯು ಅಂಗಾಂಶಗಳು ಸಂಕುಚನಗೊಂಡರೆ ಇನ್ನು ಕೆಲವು ನಶಿಸುತ್ತವೆ, ಇನ್ನು ಕೆಲವು ಸಂಕುಚನ ಗೊಳ್ಳುವ ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ.
– ಸ್ನಾಯು ಪರಿಮಾಣ ನಷ್ಟವು ಕಡಿಮೆ ಬಿಎಂಆರ್, ಸ್ನಾಯು ಸಾಮರ್ಥ್ಯ ಕುಸಿತ ಮತ್ತು ಶಕ್ತಿಯ ಅಗತ್ಯ ಕುಸಿಯಲು ಕಾರಣವಾಗುತ್ತದೆ.
– ಸಕ್ರಿಯ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದರಿಂದ ಮೇಲ್ಕಂಡ ಅಸಹಜತೆಗಳನ್ನು ಸಾಕಷ್ಟು ನಿವಾರಿಸಿಕೊಳ್ಳಬಹುದು.
ಹೃದಯದ ಆರೋಗ್ಯ
– ವಯೋವೃದ್ಧರಲ್ಲಿ ಹೃದಯವು ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಕುಸಿಯುತ್ತದೆ, ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿರುತ್ತದೆ.
– ದೈಹಿಕ ಚಟುವಟಿಕೆಗಳು ಕಡಿಮೆಯಾಗುವುದರಿಂದ ಲೊ ಎಚ್‌ಡಿಎಲ್, ಹೈ ಎಲ್‌ಡಿಎಲ್ ಸ್ಥಿತಿ ಉಂಟಾಗುತ್ತದೆ; ಇದು ಹೃದ್ರೋಗಗಳನ್ನು ಉಂಟು ಮಾಡಬಹುದು.
-ಉಪ್ಪು ಸೇವಿಸುವ ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು.
ಹಾರ್ಮೋನ್ ಕಾರ್ಯ
ಚಟುವಟಿಕೆಗಳಲ್ಲಿ ಬದಲಾವಣೆ
-ಉದಾಹರಣೆಗೆ, “ಗ್ರೋಥ್ ಹಾರ್ಮೋನ್’ ಸಾಂದ್ರತೆ ಕಡಿಮೆಯಾಗುವುದರಿಂದ ಲೀನ್ ಬಾಡಿ ಮಾಸ್ ಕೂಡ ಕುಸಿಯುತ್ತದೆ. ಟೆಸ್ಟೊಸ್ಟಿರೋನ್ ಸಾಂದ್ರತೆ ಕಡಿಮೆಯಾಗಿ ಸ್ನಾಯು ಸಾಮರ್ಥ್ಯ ಕುಸಿಯುತ್ತದೆ. ಪಿನಿಯಲ್ ಗ್ರಂಥಿ (ಮಿದುಳು) ಯು ಮೆಲಟೋನಿನ್ ಹಾರ್ಮೋನನ್ನು ಕಡಿಮೆ ಉತ್ಪಾದಿಸುವುದರಿಂದ ನಿದ್ದೆ ಕಡಿಮೆಯಾಗುತ್ತದೆ.
ಜ್ಞಾನ ಗ್ರಹಣ ಚಟುವಟಿಕೆಗಳು
-ಜ್ಞಾನ ಗ್ರಹಣದ ಚಟುವಟಿಕೆಗಳು ಮಾನಸಿಕ ಕ್ರಿಯೆಗಳಾಗಿದ್ದು, ನಾವು ಯಾವುದೇ ಕೆಲಸ ಕಾರ್ಯಗಳನ್ನು ನಡೆಸುವುದಕ್ಕೆ ಅನುವು ಮಾಡಿಕೊಡುತ್ತವೆ. ವಯೋವೃದ್ಧರಲ್ಲಿ ಪೌಷ್ಟಿಕಾಂಶ ಸ್ಥಿತಿಯನ್ನು ಉತ್ತಮಪಡಿಸಿದರೆ ಜ್ಞಾನಗ್ರಹಣ ಚಟುವಟಿಕೆಯನ್ನು ದಕ್ಷವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಮನೋ ವ್ಯಾಯಾಮಗಳಿಂದಲೂ ಇದಕ್ಕೆ ಸಹಾಯವಾಗುತ್ತದೆ.
ಸಾಮಾಜಿಕ- ಆರ್ಥಿಕ ಅಂಶಗಳು
-ಸಾಮಾಜಿಕ – ಆರ್ಥಿಕ ಅಂಶಗಳು ಮತ್ತು ಆರೋಗ್ಯದ ನಡುವಣ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಆವಶ್ಯಕ. ಏಕೆಂದರೆ, ಪುನರಪಿ ಹೇರಲ್ಪಡುವ ಬಡತನದ ಸರಪಣಿ ಚಕ್ರಕ್ಕೆ ಕಾರಣವೇನು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಸಾಮಾಜಿಕ- ಆರ್ಥಿಕವಾಗಿ ಕೆಳ ಸ್ಥಿತಿಗತಿಗಳು ಆರೋಗ್ಯ ಕೆಡಲು ಕಾರಣವಾಗುತ್ತವೆ, ಇದರಿಂದ ಆದಾಯ ಗಳಿಕೆಯ ಸಾಮರ್ಥ್ಯ ಕಡಿಮೆಯಾಗುತ್ತದೆ.
ಮುಂದುವರಿಯುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.