ಸುಮ್ನಿರು ಅಂತಿದೀನಿ, ಹೃದಯ ಕೇಳ್ತಿಲ್ಲ….
Team Udayavani, Nov 20, 2018, 6:00 AM IST
ನೀನು ಪೋಸ್ಟ್ ಮಾಡಿದ ಫೋಟೊಗಳಿಗೆಲ್ಲಾ ಚಾಚೂ ತಪ್ಪದೆ ಲೈಕ್, ಕಮೆಂಟ್ ಮಾಡುತ್ತೇನೆ. ನನ್ನ ಲೈಕ್, ಕಮೆಂಟ್ ಇರದ ಒಂದಾದರೂ ಫೋಟೊ ನಿನ್ ಫೇಸ್‌ಬುಕ್ ಗೋಡೆಯಲ್ಲಿ ಇದೆಯಾ ಅಂತ ಒಮ್ಮೆ ನೋಡು.
ನಿನ್ನ ನೆನಪುಗಳು ಇಷ್ಟು ನೋವುಂಟು ಮಾಡುತ್ತವೆ ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ. ನಿನ್ನೊಂದಿಗೆ ಕಳೆದ ನೆನಪುಗಳು ಬಿಟ್ಟೂ ಬಿಡದೆ ಕಾಡುತ್ತಿವೆ. ಹಳೆಯ ದಿನಗಳನ್ನು ನೆನೆದರೆ ಮನಸ್ಸು ಭಾರವಾಗುತ್ತದೆ.
ನಮ್ಮಿಬ್ಬರ ಭೇಟಿಯಾಗಿದ್ದು ಆಕಸ್ಮಿಕ ಘಳಿಗೆಯೊಂದರಲ್ಲಿ. ಅಂದು ಕಾಲೇಜು ಅಡ್ಮಿಶನ್‌ಗೆ ಅಂತ ಬಂದಿದ್ದಾಗ ನಿನ್ನನ್ನು ಮೊದಲ ಬಾರಿಗೆ ನೋಡಿದ್ದು. ಪೆನ್ನು ಮರೆತು ಬಂದಿದ್ದ ನಾನು, ನಿನ್ನನ್ನು ಮಾತನಾಡಿಸಲು ಅದೇ ಸರಿಯಾದ ನೆಪವೆಂದು ನಿನ್ನ ಬಳಿ ಪೆನ್ನು ಕೇಳಿದ್ದೆ . ನೀನು ಅದರ ಕ್ಯಾಪ್ ತೆಗೆದು, ಬರೀ ಪೆನ್ನನ್ನು ಮಾತ್ರ ನನ್ನ ಕೈಗಿಟ್ಟಿದ್ದು ಈಗಲೂ ನೆನಪಿದೆ. ನಾನು ಪೆನ್ನನ್ನು ಕಿಸೆಗೆ ಹಾಕಿಕೊಂಡು ಹೋಗಿಬಿಟ್ಟರೆ ಅಂತ ನಿನಗೆ ಅನುಮಾನವಾಗಿತ್ತಾ?
ನಿನ್ನ ಮುದ್ದು ಮುಖ ನೋಡಿದ ತಕ್ಷಣವೇ ನಾನು ನಿನಗೆ ಸೋತಿದ್ದೆ . ಬಾಳಸಂಗಾತಿ ನೀನೇ ಆಗಬೇಕು ಅಂತ, ಹೃದಯವು ಜೋಗುಳ ಹಾಡಿದರೆ ತೂಗುವ ಕೈ ನಿನದಾಗಿರಲಿ ಅಂತ ಮನಸ್ಸು ಬೇಡಿತು. ನಾನೊಬ್ಬ ಹುಚ್ಚು ಹುಡುಗ, ನಿನ್ನ ಮುಖ ಕಂಡಾಗ ಆಗುವ ಖುಷಿಯನ್ನು ಅಳೆಯುವ ಯಾವ ಮಾಪನವೂ ಇದುವರೆಗೆ ಸೃಷ್ಟಿಯಾಗಿಲ್ಲ. ಅಂದಿನಿಂದ ಚಂದಕ್ಕಿಂತ ಚಂದದ ನಿನ್ನ ನಗು ಮೊಗವ ನೋಡುತ್ತಾ ಕಲಿತಿದ್ದು ಪ್ರೇಮಪಾಠವೇ ಹೊರತು ಮತ್ತೇನನ್ನೂ ಅಲ್ಲ.
ನಿನಗಾಗಿ ಪ್ರತಿದಿನವೂ ಕಾಲೇಜು ಗೇಟಿನಲ್ಲಿ ನಿಂತು ಕಾಯುವುದು, ಕ್ಲಾಸಿನಲ್ಲಿ ಕದ್ದು ಮುಚ್ಚಿ ನಿನ್ನನ್ನು ನೋಡುವುದೇ ಪೂರ್ಣ ಕೆಲಸವಾಗಿತ್ತು ನನಗೆ. ನಿನ್ನನ್ನು ಮಾತನಾಡಿಸಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ನಿನ್ನ ಬಗ್ಗೆ ಅಷ್ಟಾಗಿ ಗೊತ್ತಿರದ ನನಗೆ ನಿನ್ನನ್ನು ಮತ್ತೆ ಪರಿಚಯಿಸಿದ್ದು ಫೇಸುºಕ್ ಎಂಬ ಮಾಯಾಜಾಲ.
ಫೇಸ್‌ಬುಕ್‌ನಲ್ಲಿ ನಿನ್ನನ್ನು ಹುಡುಕುವುದು ಕಷ್ಟವೇನೂ ಆಗಲಿಲ್ಲ. ನೀನು ಪೋಸ್ಟ್ ಮಾಡಿದ ಫೋಟೊಗಳಿಗೆಲ್ಲಾ ಚಾಚೂ ತಪ್ಪದೆ ಲೈಕ್, ಕಮೆಂಟ್ ಮಾಡುತ್ತೇನೆ. ನನ್ನ ಲೈಕ್, ಕಮೆಂಟ್ ಇರದ ಒಂದಾದರೂ ಫೋಟೊ ನಿನ್ ಫೇಸ್‌ಬುಕ್ ಗೋಡೆಯಲ್ಲಿ ಇದೆಯಾ ಅಂತ ಒಮ್ಮೆ ನೋಡು. ಆದರೆ, ಇವನ್ನೆಲ್ಲ ನೀನು ನಿರ್ಲಕ್ಷಿಸುತ್ತಿರುವುದು ಅತೀವ ನೋವುಂಟು ಮಾಡುತ್ತಿದೆ. ಮನಸಿನ ಭಾವನೆಗಳನ್ನೆಲ್ಲ ನಿನ್ನೆದುರಿಗೆ ಬಿಚ್ಚಿ ಹೇಳಿ, ಪ್ರೇಮ ನಿವೇದಿಸಿಕೊಂಡಾಗ ನೀನು ಅದನ್ನು ನಯವಾಗಿ ತಿರಸ್ಕರಿಸಿದೆ. ಬದುಕಿನ ಬಗ್ಗೆ ಪಾಠವನ್ನೂ ಮಾಡಿದೆ. ಪ್ರೀತಿ-ಪ್ರೇಮ ಅಂತ ಜೀವನ ಹಾಳು ಮಾಡಿಕೊಳ್ಳಬೇಡ ಅಂತ ಬುದ್ಧಿವಾದ ಹೇಳಿದೆ.
ನೀನು ಹೇಳಿದ್ದೆಲ್ಲವೂ ಸರಿ ಇದೆ. ಅದು ನನಗೂ ಅರ್ಥವಾಗುತ್ತದೆ. ಆದರೆ, ಹೃದಯ ಕೇಳಬೇಕಲ್ಲ. ದಿನವೂ ನಿನ್ನನ್ನು ಧ್ಯಾನಿಸಿ ಪರಿತಪಿಸುತ್ತಿದೆ. ನಿನ್ನ ಪುಟ್ಟ ಹೃದಯದಲ್ಲಿ ನನಗೊಂದು ಜಾಗ ಬೇಕು. ಇದುವರೆಗೂ ಒಮ್ಮೆಯೂ ಸೋತಿಲ್ಲ ನಾನು. ಈಗ ನಿನಗೆ ಸೋತಿದ್ದೇನೆ, ನಿನ್ನಿಂದ ಸೋತಿದ್ದೇನೆ. ಪ್ಲೀಸ್, ನನ್ನ ಪ್ರೀತಿಯನ್ನು ಗೆಲ್ಲಿಸು.
– ಅಂಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.