ಆರ್ಥೊಡಾಂಟಿಕ್ಸ್ ಚಿಕಿತ್ಸೆಯಲ್ಲಿ ಆಯ್ಕೆಗಳು
Team Udayavani, Aug 6, 2017, 6:20 AM IST
ಸರಿಯಾದ ಕಚ್ಚುವಿಕೆಯು ಹಲ್ಲುಗಳ ಆರೋಗ್ಯವನ್ನು ಉತ್ತಮಪಡಿಸುತ್ತದೆ, ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ವಸಡಿನ ತೊಂದರೆಗಳಿಗೆ ಕಾರಣವಾಗಬಲ್ಲ ಲೋಳೆಯ ನಿಕ್ಷೇಪವನ್ನು ತಡೆಯುತ್ತದೆ. ಸಾಂಪ್ರದಾಯಿಕವಾದ ಮೆಟಲ್ ಬ್ರೇಸ್, ಕ್ಲಿಯರ್ ಬ್ರೇಸ್, ಕ್ಲಿಯರ್ ಟ್ರೇಗಳು ಅಥವಾ ಬಯೋಸ್ಟಾರ್‌ಗಳು, ಲಿಂಗÌಲ್ ಆರ್ಚ್‌ವೈರ್, ತೆಗೆಯಬಹುದಾದ ಸಲಕರಣೆಗಳು ಅಥವಾ ಭಾಗಶಃ ಚಿಕಿತ್ಸೆಗಳಂತಹ ವೈವಿಧ್ಯಮಯ ಚಿಕಿತ್ಸೆಯ ಆಯ್ಕೆಗಳು ಲಭ್ಯವಿವೆ. ರೋಗಿಯ ಅಗತ್ಯ ಮತ್ತು ನಿರೀಕ್ಷೆಗಳು, ಹಲ್ಲುಗಳ ಕಿಕ್ಕಿರಿದಿರುವಿಕೆಯ ಪ್ರಮಾಣ ಮತ್ತು ಚಿಕಿತ್ಸೆಯ ಅವಧಿಯನ್ನು ಆಧರಿಸಿ ಚಿಕಿತ್ಸೆಯ ಆಯ್ಕೆಯನ್ನು ಮಾಡಲಾಗುತ್ತದೆ.
ಅಸಮರ್ಪಕ ಕಚ್ಚುವಿಕೆಗೆ ಬ್ರೇಸ್‌ಗಳು
ಅಡ್ಡಾದಿಡ್ಡಿ ಕಚ್ಚುವಿಕೆ, ತೆರೆದ ಕಚ್ಚುವಿಕೆ ಅಥವಾ ಇತರ ಅಸಮರ್ಪಕ ಕಚ್ಚುವಿಕೆಗಳನ್ನು ಬ್ರೇಸ್‌ಗಳು ಸರಿಪಡಿಸಬಲ್ಲವು. ಬ್ರೇಸ್‌ಗಳ ಸಹಾಯದಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿದರೆ ಓರೆಕೋರೆಯಾದ ಹಲ್ಲುಗಳನ್ನು ನೇರಗೊಳಿಸಬಹುದು ಮತ್ತು ಭವಿಷ್ಯದಲ್ಲಿ ಉಂಟಾಗಬಹುದಾದ ಅವಧಿಪೂರ್ವ ಹಲ್ಲು ನಷ್ಟ, ಹಲ್ಲುಗಳ ಎನಾಮಲ್‌ಗಳಿಗೆ ಉಂಟಾಗುವ ಅಧಿಕ ಹಾನಿ, ಮಾತು ಮತ್ತು ಜಗಿಯುವ ಸಮಸ್ಯೆಗಳು ಹಾಗೂ ದವಡೆಗೆ ಸಂಬಂಧಿಸಿದ ಇನ್ನಷ್ಟು ಗಂಭೀರವಾದ ತೊಂದರೆಗಳನ್ನು ತಡೆಯಬಹುದು. ಚಿಕಿತ್ಸೆಯ ಮೂಲಕ ಆನುವಂಶಿಕವಾಗಿ ಉಂಟಾದ ದವಡೆಯ ಸಮಸ್ಯೆಗಳು ಹಾಗೂ ಹೆಬ್ಬೆಟ್ಟು ಚೀಪುವುದು ಅಥವಾ ಬಾಯಿಯಿಂದ ಉಸಿರಾಡುವಂತಹ ದುರಭ್ಯಾಸಗಳಿಗೂ ಮಂಗಳ ಹಾಡಬಹುದು.
ಕ್ಲಿಯರ್ ಬ್ರ್ಯಾಕೆಟ್‌ಗಳು
ಕ್ಲಿಯರ್ ಬ್ರೇಸ್‌ಗಳು ಮೆಟಲ್ ಬ್ರೇಸ್‌ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಆದರೆ, ಇವುಗಳನ್ನು ಅರೆಪಾರದರ್ಶಕ ವಸ್ತುಗಳಿಂದ ತಯಾರಿಸಿರುತ್ತಾರೆ.
ಲೋಹದ ಬ್ರ್ಯಾಕೆಟ್‌ಗಳು
ಇವು ಅತ್ಯಂತ ಸಾಮಾನ್ಯವಾಗಿ ಚಿಕಿತ್ಸೆಯಲ್ಲಿ ಉಪಯೋಗಿಸುವ ಬ್ರ್ಯಾಕೆಟ್‌ಗಳು. ಲೋಹದ ಬ್ರೇಸ್‌ಗಳ ಜತೆಗೆ ಬಣ್ಣದ ಇಲಾಸ್ಟಿಕ್ ಬ್ಯಾಂಡ್‌ಗಳನ್ನು ಬಳಸಿ ಅವುಗಳನ್ನು ವರ್ಣಮಯ ಮತ್ತು ಸುಂದರವಾಗಿಸಬಹುದಾಗಿದೆ.
ಕ್ಲಿಯರ್ ಟ್ರೇಗಳು ಅಥವಾ ಬಯೋಸ್ಟಾರ್‌ಗಳು,
ನಿಮ್ಮ ಹಲ್ಲುಗಳ ಸ್ಥಾನಗಳಿಗೆ ಸರಿಯಾಗಿ ಹೊಂದಿ ಕೊಳ್ಳುವಂತೆ ಸಿದ್ಧಪಡಿಸಿದ ಪಾರದರ್ಶಕ, ತೆಗೆಯಬಲ್ಲ ಹಲ್ಲುಕವಚ (ಟ್ರೇ) ಗಳನ್ನು ಇದು ಹೊಂದಿದೆ. ಇವು ಸಾಕಷ್ಟು ಅನುಕೂಲಕರವಾಗಿದ್ದು, ತೆಗೆದು ಹಾಕುವ ಸಾಧ್ಯತೆಯನ್ನು ಹೊಂದಿರುವ ಕಾರಣ ಉತ್ತಮ ಮೌಖೀಕ ಆರೋಗ್ಯ ನಿರ್ವಹಣೆಗೆ ಸಹಾಯಕವಾಗಿವೆ.
ಭಾಗಶಃ ಆರ್ಥೊಡಾಂಟಿಕ್ಸ್ ಚಿಕಿತ್ಸೆ
ಭಾಗಶಃ ಚಿಕಿತ್ಸೆ ಅಥವಾ ಭಾಗ ನಿರ್ದಿಷ್ಟ ಚಿಕಿತ್ಸೆಯು ಕೆಲವೇ ಹಲ್ಲುಗಳಿಗೆ ಚಿಕಿತ್ಸೆಯನ್ನು ಒಳಗೊಳ್ಳುವುದರಿಂದ ಇದಕ್ಕೆ ತಗಲುವ ಅವಧಿ ಸಾಮಾನ್ಯವಾಗಿ ಅಲ್ಪವಾಗಿರುತ್ತದೆ.
ಎಳೆಯ ಮಕ್ಕಳಿಗೆ ದ್ವಿ-ಹಂತದ ಆರ್ಥೊಡಾಂಟಿಕ್ಸ್ ಚಿಕಿತ್ಸೆ
ದವಡೆಯ ಬೆಳವಣಿಗೆಯನ್ನು ಸಮರ್ಪಕಗೊಳಿಸಲು ಬೇಗನೆ ಚಿಕಿತ್ಸೆ ಒದಗಿಸುವುದು ಅತ್ಯಂತ ಮುಖ್ಯ. ಇದನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲ ಹಂತವನ್ನು ಹಾಲುಹಲ್ಲುಗಳು ಇನ್ನೂ ಇರುವಾಗಲೇ ಆರಂಭಿಸಲಾಗುತ್ತದೆ. ದ್ವಿತೀಯ ಹಂತವನ್ನು ನಿಮ್ಮ ಮಗುವಿನ ಬೆಳವಣಿಗೆ ಮತ್ತು ಪ್ರಗತಿಯನ್ನು ಆಧರಿಸಿ ಮಗು ತುಸು ದೊಡ್ಡದಾದಾಗ; ಸಾಮಾನ್ಯವಾಗಿ, ಹದಿಹರಯದಲ್ಲಿ ನಡೆಸಲಾಗುತ್ತದೆ.
ಎಳೆಯ ಪ್ರಾಯದಲ್ಲಿಯೇ ಚಿಕಿತ್ಸೆ ಒದಗಿಸಿದರೆ, ಮಗು ದೊಡ್ಡದಾದ ಬಳಿಕ ದೊಡ್ಡ ಪ್ರಮಾಣದ ಚಿಕಿತ್ಸೆಗೆ ಒಳಗಾಗುವ ಅಗತ್ಯ ಉಂಟಾಗುವುದನ್ನು ತಡೆಯಬಹುದು. ಆರ್ಥೊಡಾಂಟಿಕ್ಸ್ ಚಿಕಿತ್ಸೆಗಳು ನಿಮ್ಮ ಕಚ್ಚುವಿಕೆ ಮತ್ತು ಜಗಿಯುವಿಕೆಗಳನ್ನು ಸಮರ್ಪಕಗೊಳಿಸಲು; ನಿಮ್ಮ ಮುಖ ಸೌಂದರ್ಯ ಮತ್ತು ಬಾಯಿಯ ಆರೋಗ್ಯವನ್ನು ವೃದ್ಧಿಸಲು ಹಾಗೂ ಒಟ್ಟಾರೆಯಾಗಿ ನಿಮಗೆ ಚೆನ್ನಾಗಿರಲು ಸಹಾಯ ಮಾಡುತ್ತವೆ.
– ಡಾ|ಸಿದ್ಧಾರ್ಥ ಮೆಹ್ತಾ,
ರೀಡರ್, ಆರ್ಥೊಡಾಂಟಿಕ್ಸ್ ವಿಭಾಗ,ಎಂಸಿಒಡಿಎಸ್, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.