ಪೆರಿಫೆರಲ್ ವಾಸ್ಕಾಲಾರ್ ಕಾಯಿಲೆಗಳು
Team Udayavani, Oct 28, 2018, 6:00 AM IST
ಹಿಂದಿನ ವಾರದಿಂದ
ಫಿಮೊರೊ ಪೊಪ್ಲೈಟಿಯಲ್ ಬೈಪಾಸ್
ಬಾಧಿತ ತೊಡೆ ಅಥವಾ ಕಾಲಿಗೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ರೋಗಿಯ ಕಾಲಿನಿಂದ ಒಂದು ರಕ್ತನಾಳ (ಸಾಫೆನಸ್ ರಕ್ತನಾಳ)ವನ್ನು ತೆಗೆದು ತಿರುಗಿಸಿ ಬೈಪಾಸ್‌ಗಾಗಿ ಉಪಯೋಗಿಸಲಾಗುತ್ತದೆ. ರಕ್ತನಾಳವನ್ನು ತೊಡೆಯ ಹತ್ತಿರ ಮತ್ತು ದೂರವಾಗಿ ಸಂಪರ್ಕಿಸಲಾಗುತ್ತದೆ. ಶಸ್ತ್ರಕ್ರಿಯೆಗೆ 3ರಿಂದ 4 ತಾಸುಗಳು ತಗಲುತ್ತವೆ ಹಾಗೂ ಈ ವೇಳೆ ರೋಗಿಗೆ ಜನರಲ್ ಮತ್ತು ಬೆನ್ನುಹುರಿಯ ಅರಿವಳಿಕೆ ನೀಡಲಾಗುತ್ತದೆ.
ಶಸ್ತ್ರಚಿಕಿತ್ಸೆಯ ಬಳಿಕ ರೋಗಿ ಒಂದು ವಾರಕಾಲ ಆಸ್ಪತ್ರೆಯಲ್ಲಿರಬೇಕಾಗುತ್ತದೆ ಹಾಗೂ ಒಂದೆರಡು ಔಷಧಗಳನ್ನು ಜೀವನಪರ್ಯಂತ ತೆಗೆದುಕೊಳ್ಳಬೇಕಾಗುತ್ತದೆ.
ನಡಿಗೆಯ ವೇಳೆ ಉಂಟಾಗುವ ಹಿಡಿದಂತಹ ನೋವು ಸಂಪೂರ್ಣವಾಗಿ ಮಾಯವಾಗುತ್ತದೆ ಹಾಗೂ ರೋಗಿ ಓಡುವುದು, ಎಲ್ಲ ಕಾರ್ಯಚಟುವಟಿಕೆಗಳನ್ನು ನಡೆಸುವುದು ಸಾಧ್ಯವಾಗುತ್ತದೆ. ರೋಗಿಯ ರಕ್ತನಾಳ ಆರೋಗ್ಯಯುತವಲ್ಲದಿದ್ದು, ವೆರಿಕೋಸ್ ವೈನ್ಸ್ ಹೊಂದಿದ್ದರೆ ಆ ರಕ್ತನಾಳವನ್ನು ಬೈಪಾಸ್‌ಗೆ ಉಪಯೋಗಿಸುವುದು ಸಾಧ್ಯವಾಗುವುದಿಲ್ಲ. ಆಗ ಗಾರ್ಟೆಕ್ಸ್ ಅಥವಾ ಡ್ಯಾಕ್ರನ್ ಎಂದು ಕರೆಯಲ್ಪಡುವ ಕೃತಕ ಕಸಿಯನ್ನು ಉಪಯೋಗಿಸಬೇಕಾಗುತ್ತದೆ. ಈ ಸಿಂಥೆಟಿಕ್ ಕಸಿಗಳು ಬಹಳ ದುಬಾರಿಯಾಗಿರುತ್ತವೆ.
ಫಿಮೊರೊ ಪೊಪ್ಲೈಟಿಯಲ್ ಬೈಪಾಸ್
ಆ್ಯಂಜಿಯೊಪ್ಲಾಸ್ಟಿ/ಸ್ಟೆಂಟಿಂಗ್
ರಕ್ತನಾಳದಲ್ಲಿ ತಡೆ ಕಿರಿದಾಗಿದ್ದಾಗ ಬಲೂನ್ ಆ್ಯಂಜಿಯೊಪ್ಲಾಸ್ಟಿ ಮತ್ತು ಸ್ಟೆಂಟಿಂಗ್ ಮೂಲಕ ನಿವಾರಿಸುವುದು ಸಾಧ್ಯ. ಇಲ್ಲಿ ಶಸ್ತ್ರಚಿಕಿತ್ಸೆ ಅಗತ್ಯವಿಲ್ಲ. ಆ್ಯಂಜಿಯೊಗ್ರಾಮ್ ನಡೆಸಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.
ಶಸ್ತ್ರಚಿಕಿತ್ಸೆ ನಡೆಸಲಾಗದ ಪ್ರಕರಣಗಳು
ಬೈಪಾಸ್ ಶಸ್ತ್ರಚಿಕಿತ್ಸೆ ಮತ್ತು ಆ್ಯಂಜಿಯೊಪ್ಲಾಸ್ಟಿ ನಡೆಸಲು ಸಾಧ್ಯವಿಲ್ಲದ ಕೆಲವು ರೋಗಿಗಳು ಔಷಧಯನ್ನು ಮಾತ್ರ ಮುಂದುವರಿಸಬೇಕಾಗುತ್ತದೆ. ಇಂಥ ರೋಗಿಗಳಿಗೆ ಹೆಚ್ಚು ದೂರ ನಡೆಯಲು ಸಾಧ್ಯವಾಗುವುದಿಲ್ಲ, ನೋವು ಕಾಣಿಸಿಕೊಂಡಾಗ ನಿಲ್ಲಬೇಕಾಗುತ್ತದೆ. ಗಾಯ ಗುಣವಾಗುವುದು ನಿಧಾನವಾದ ಕಾರಣ ಪಾದದಲ್ಲಿ ಗಾಯ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಅಗತ್ಯ. ಯಾವಾಗಲೂ ವಾಹನದಲ್ಲಿ ಪ್ರಯಾಣಿಸಬೇಕಾಗುತ್ತದೆ.
ಕಡಿಮೆ ಮಾಲೆಕ್ಯುಲಾರ್ ತೂಕದ ಹೆಪಾರಿನ್ ಔಷಧವನ್ನು ರೋಗಿಗೆ ಒಂದು ವಾರ ನೀಡಿ ಕೊಲ್ಯಾಟರಲ್ ಹರಿವನ್ನು ಹೆಚ್ಚಿಸಬೇಕಾಗುತ್ತದೆ. ಐದು ದಿನಗಳ ಕಾಲ ಐವಿ ಪ್ರೊಸ್ಟಾಗ್ಲಾಂಡಿನ್‌ಗಳನ್ನು ಕೂಡ ನೀಡಬಹುದಾಗಿದ್ದು, ಇದನ್ನು ಐದು ತಿಂಗಳುಗಳ ಕಾಲ ಪ್ರತೀ ತಿಂಗಳೂ ಪುನರಾವರ್ತಿಸಲಾಗುತ್ತದೆ. ಇದು ಕೊಲ್ಯಾಟರಲ್ ಹರಿವನ್ನು ಉತ್ತಮಪಡಿಸುತ್ತದೆಯಲ್ಲದೆ ಹಾಲಿ ಇರುವ ಕಿರು ಅಪಧಮನಿಗಳನ್ನು ತೆಳುಗೊಳಿಸುತ್ತದೆ.
ತಡೆ
ಇನ್ಸುಲಿನ್ ಅಗತ್ಯವಿರುವ ಸ್ಥಿತಿಯಿದ್ದರೂ ಮಧುಮೇಹದ ಉತ್ತಮ ನಿಯಂತ್ರಣ ಮತ್ತು ರಕ್ತದೊತ್ತಡದ ಸಮರ್ಪಕ ನಿಯಂತ್ರಣ ಅಗತ್ಯ. ಹೆಚ್ಚು ಕೊಲೆಸ್ಟರಾಲ್ ಹೊಂದಿರುವವರು ಅದನ್ನು ನಿಯಂತ್ರಿಸಲು ಸ್ಟಾಟಿನ್‌ಗಳನ್ನು ತೆಗೆದುಕೊಳ್ಳಬೇಕು ಹಾಗೂ ಕೊಬ್ಬು ಮತ್ತು ಎಣ್ಣೆಗಳನ್ನು ಕಡಿಮೆ ಸೇವಿಸಬೇಕು. ಇತರರು ಅಧಿಕ ದೇಹತೂಕ ಹೊಂದಿದ್ದಾಗ ತೂಕ ಇಳಿಸಿಕೊಳ್ಳಬೇಕು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಧೂಮಪಾನ ಮಾಡಬಾರದು, ಕೆಲವರು ತಮ್ಮ ಜೀವನಶೈಲಿ ಯನ್ನು ಬದಲಾಯಿಸಿಕೊಳ್ಳಬೇಕು ಹಾಗೂ ನಿಯಮಿತವಾಗಿ ಪ್ರತಿಬಂಧಕ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.
ಔಷಧಗಳು
ಇಂತಹ ಪ್ರಕರಣಗಳಲ್ಲಿ ಉಪಯೋಗಿಸುವ ಔಷಧಗಳೆಂದರೆ, ಪೆಂಟಾಕ್ಸಿಫೈಲೈನ್, ಸಿಲಾಸ್ಟೊಝೋಲ್, ಆಸ್ಪಿರಿನ್, ಕ್ಲೊಪಿಡ್ರೊಜೆಲ್ ಮತ್ತು ಸ್ಟಾಟಿನ್‌ಗಳು. ಕಡಿಮೆ ಮಾಲೆಕ್ಯುಲಾರ್ ತೂಕದ ಹೆಪಾರಿನ್ ಅನ್ನು ಸ್ನಾಯುಗಳಿಗೆ ಮತ್ತು ಪ್ರೊಸ್ಟಾಗ್ಲಾಂಡಿನ್‌ಗಳನ್ನು ರಕ್ತನಾಳಗಳಿಗೆ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.