ಧ್ವ ನಿ ಭಾಷಿಕ ಚಿಕಿತ್ಸಾ ತರಬೇತಿ
Team Udayavani, Jul 7, 2019, 5:00 AM IST
ಪೋಷಕರು ತಿಳಿದುಕೊಳ್ಳಬೇಕಾದ್ದೇನು
ಶ್ರವಣದೋಷವುಳ್ಳ ಮಕ್ಕಳಿಗಿರುವ ಕೇಳುವಿಕೆಯ ಸಮಸ್ಯೆಯಿಂದ ಹೊರಬರಲು ಸಾಮಾನ್ಯವಾಗಿ ಶ್ರವಣ ಸಾಧನವನ್ನು ಅಥವಾ ಕೊಕ್ಲಿಯಾರ್ ಇಂಪ್ಲಾಂಟ್ ಸಾಧನವನ್ನು ಅಳವಡಿಸುತ್ತಾರೆ. ಭಾಷೆ ಮತ್ತು ಸಂಭಾಷಣೆಯನ್ನು ಸಾಧಿಸಲು ಶ್ರವಣ ಸಾಧನ ಅಥವಾ ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಕೆಯಷ್ಟೇ ಸಾಕು ಎಂಬ ತಪ್ಪಭಿಪ್ರಾಯ ಹಲವರಲ್ಲಿದೆ. ಆದರೆ, ಧ್ವನಿವರ್ಧಕ ಉಪಕರಣವನ್ನು ಅಥವಾ ಕೊಕ್ಲಿಯಾರ್ ಇಂಪ್ಲಾಂಟ್ ಅಳವಡಿಸುವುದಷ್ಟೇ ಸಾಕಾಗುವುದಿಲ್ಲ. ವಯಸ್ಸಿಗೆ ತಕ್ಕುದಾದ ಧ್ವನಿಭಾಷಿಕ ಕೌಶಲಗಳನ್ನು ಕಲಿಯುವುದಕ್ಕೆ ಅವುಗಳಲ್ಲಿ ತರಬೇತಿ ಬಹಳ ಮುಖ್ಯವಾಗಿದೆ. ಆದರೆ ಇದನ್ನು ನಿರ್ಲಕ್ಷಿಸಲಾಗುತ್ತದೆ. ಅನೇಕ ಪ್ರಕರಣಗಳಲ್ಲಿ ಅಸಂಪೂರ್ಣ ಅಥವಾ ಅಸಮರ್ಪಕ ತರಬೇತಿಯಿಂದಾಗಿ ಇಂತಹ ಮಕ್ಕಳು ಧ್ವನಿಭಾಷಿಕ ಕೌಶಲಗಳನ್ನು ಕಲಿತುಕೊಳ್ಳುವ ಸಾಧ್ಯತೆಗಳು ಸೀಮಿತವಾಗಿಬಿಡುತ್ತವೆ. ಆಲಿಸುವಿಕೆಯನ್ನು ಪೂರ್ಣವಾಗಿ ಅವಲಂಬಿಸಲು ಸಾಧ್ಯವಿಲ್ಲವಾ ದ್ದರಿಂದ ಇದು ಅವರ ವ್ಯಕ್ತಿತ್ವ ಸಹಿತ ಒಟ್ಟು ಬೆಳವಣಿಗೆಯ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಭಾರತದಲ್ಲಿ ಸಂಜ್ಞಾ ಭಾಷೆಯಂತಹ ಸಂವಹನದ ಇತರ ವಿಧಾನಗಳು ಅರಿವಿನ ಕೊರತೆಯಿಂದಾಗಿ ಹೆಚ್ಚು ಪ್ರಚಲಿತದಲ್ಲಿಲ್ಲ. ಆದ್ದರಿಂದ ಧ್ವನಿಭಾಷಿಕ ತರಬೇತಿಯ ಕೊರತೆಯು ಶ್ರವಣ ದೋಷವುಳ್ಳ ಮಗು ಮತ್ತು ಅದರ ಹೆತ್ತವರ ಮೇಲೂ ಪರಿಣಾಮವನ್ನು ಉಂಟು ಮಾಡುತ್ತದೆ. ಹಲವಾರು ಧ್ವನಿಭಾಷಿಕ ತರಬೇತುದಾರರು ಈಗಲೂ ಹಳೆಯ ತರಬೇತಿ ವಿಧಾನದ ಮೇಲೆ ನಂಬಿಕೆ ಹೊಂದಿದ್ದಾರೆ ಮತ್ತು ಅವನ್ನೇ ಉಪಯೋಗಿಸುತ್ತಿದ್ದಾರೆ. ಆದರೆ ಹಳೆಯ ಧ್ವನಿಭಾಷಿಕ ತರಬೇತಿ ವಿಧಾನಗಳು ಹಳೆಯ ತಣ್ತೀಗಳನ್ನು ಆಧರಿಸಿದ್ದು, ಅವು ಅಪೇಕ್ಷಿತ ಪರಿಣಾಮವನ್ನು ಉಂಟು ಮಾಡಲಾರವು. ಕೊಕ್ಲಿಯಾರ್ ಇಂಪ್ಲಾಂಟ್‌ಗಳ ತಂತ್ರಜ್ಞಾನ ಇಂದು ಬಹಳಷ್ಟು ಪ್ರಗತಿ ಹೊಂದಿದೆ. ಇದರಿಂದಾಗಿ ಅತಿಹೆಚ್ಚು ಪ್ರಮಾಣದ ಶ್ರವಣ ದೋಷವುಳ್ಳವರು ಕೂಡ ಅವರ ಶ್ರವಣ ಮಾರ್ಗವು ತೊಂದರೆಗೆ ಈಡಾಗದೆ ಇದ್ದಲ್ಲಿ ಮಾತನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅಗತ್ಯವಿರುವ ಎಲ್ಲ ತರಂಗಾಂತರಗಳ ಸಹಜ ಮಟ್ಟದಲ್ಲಿರುವ ಸಂಭಾಷಣೆಯನ್ನು ಕೇಳಿ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಿದೆ. ಆದ್ದರಿಂದ ತರಬೇತಿಯ ವಿಧಾನಗಳು ಕೂಡ ವಿಭಿನ್ನವಾಗಿರುತ್ತವೆ. ತರಬೇತಿ ಪಡೆದ ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಧ್ವನಿಭಾಷಿಕ ತರಬೇತಿಯು ತುಲನಾತ್ಮಕವಾಗಿ ಹೊಸತಾದ ವಿಧಾನವಾಗಿದೆ. ಆದ್ದರಿಂದ ಶ್ರವಣದೋಷವುಳ್ಳ ಮಗುವಿನ ಹೆತ್ತವರು ಶ್ರವಣ ಸಾಧನ ಅಳವಡಿಕೆಯಾದ ಬಳಿಕ ಸರಿಯಾದ/ ಸಮರ್ಪಕವಾದ ವಿಧಾನದಲ್ಲಿ ಧ್ವನಿಭಾಷಿಕ ತರಬೇತಿಯನ್ನು ಒದಗಿಸಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಜಾಗೃತರಾಗಿರಬೇಕು. ಯಾಕೆಂದರೆ, ಈ ಧ್ವನಿಭಾಷಿಕ ಚಿಕಿತ್ಸೆಯನ್ನು ಒದಗಿಸುವ ಪರಿಣತ/ಪ್ರಮಾಣ ಪತ್ರ ಹೊಂದಿರುವ ತರಬೇತುದಾರರ ಸಂಖ್ಯೆ ತುಂಬಾ ಕಡಿಮೆ ಇದೆ.
ಧ್ವನಿಭಾಷಿಕ ಚಿಕಿತ್ಸೆಯು ಶ್ರವಣ ಸಾಮರ್ಥ್ಯದ ಗರಿಷ್ಠ ಮಟ್ಟದ ಪ್ರಗತಿಯನ್ನು ತಂತ್ರಜ್ಞಾನದ ನೆರವಿನಿಂದ ಸಾಧಿಸುವ ಅತ್ಯಂತ ಪರಿಣಾಮಕಾರಿಯಾದ ವಿಧಾನವಾಗಿದೆ. ಈ ವಿಧಾನವು ಅರ್ಥವತ್ತಾದ ಧ್ವನಿಯನ್ನು ಸಹಜವಾಗಿ ಮಿದುಳಿಗೆ ತಲುಪಿಸುವ ಕೆಲಸ ಮಾಡುತ್ತದೆ. ಸಹಜ ಶ್ರವಣ ಶಕ್ತಿಯುಳ್ಳ ಇತರರಂತೆಯೇ ತನ್ನ ಮೂಲಕ ಧ್ವನಿಯನ್ನು ಆಲಿಸಲು ಸಾಧ್ಯ ಎನ್ನುವುದಾಗಿ ಧ್ವನಿಭಾಷಿಕ ಚಿಕಿತ್ಸೆಯು ಪ್ರತಿಪಾದಿಸುತ್ತದೆ. ಆದ್ದರಿಂದ ಈ ತರಬೇತಿಯು ಸಹಜ ಧ್ವನಿಭಾಷಿಕ ಚಟುವಟಿಕೆಯನ್ನು ಹೊಂದಿರುತ್ತದೆ. ಧ್ವನಿ ತರಬೇತಿಯಲ್ಲಿ ಅಕ್ಷರಗಳ ಮೇಲೆ ಅಸಹಜ ಎನ್ನುವಷ್ಟು ಒತ್ತು ನೀಡಲಾಗುತ್ತದೆ. ಅಲ್ಲದೆ, ಅದು ಆರಂಭದಲ್ಲಿ ಅಕ್ಷರಗಳು, ಪದಗಳು ಮತ್ತು ವಾಕ್ಯಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ; ಆದರೆ ಸಹಜ ಕೇಳುವಿಕೆಯ ಸಾಮರ್ಥ್ಯ ಉಳ್ಳವರು ಅಕ್ಷರಗಳು, ಪದ ಅಥವಾ ವಾಕ್ಯಗಳ ಮೇಲೆ ಅಷ್ಟು ಅಸಹಜ ಪ್ರಮಾಣದ ಒತ್ತು ನೀಡುವುದಿಲ್ಲ.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊಕ್ಲಿಯರ್ ಇಂಪ್ಲಾಂಟ್ ವಿಶ್ಲೇಷಣೆ ಮತ್ತು ನಿರ್ವಹಣೆ ನಡೆಸುವ ವಿಶೇಷಜ್ಞ ತಂಡವಿದೆ. ಶ್ರವಣ ದೋಷವುಳ್ಳ ಮಕ್ಕಳಿಗೆ ಸಹಾಯ ಮಾಡುವುದಕ್ಕಾಗಿ ಧ್ವನಿಭಾಷಿಕ ಚಿಕಿತ್ಸೆಯ ತರಬೇತಿ ಪಡೆದ ತಂಡ ಇಲ್ಲಿದೆ. ಧ್ವನಿಭಾಷಿಕ ಚಿಕಿತ್ಸೆಯಲ್ಲಿ ಯಾವುದೇ ಸಹಾಯ ಅಥವಾ ನೆರವು ಬೇಕಾಗಿದ್ದಲ್ಲಿ ಸಂಪರ್ಕಿಸ ಬಹುದಾಗಿದೆ.
2. ಧ್ವನಿಯತ್ತ ಮಗುವಿನ ಗಮನವನ್ನು ಪ್ರೋತ್ಸಾಹಿಸಿ.
3. ಮಗು ಮಾತಿನ ಧ್ವನಿ ಗ್ರಹಣ ನಡೆಸುವುದನ್ನು ಉತ್ತೇಜಿಸಿ.
4. ಭಾಷೆಯ ಜ್ಞಾನವನ್ನು ಹೆಚ್ಚಿಸಿ.
5. ಭಾಷೆಯ ಮಾತುಕತೆ ಮತ್ತು ಗ್ರಹಿಸುವಿಕೆಯನ್ನು ಉತ್ತೇಜಿಸಿ.
6. ಸ್ವತಂತ್ರ ಕಲಿಕೆಯನ್ನು ಬೆಂಬಲಿಸಿ
2. ”ಬಾಯಿಯ ಮೇಲೆ ಕೈ”, ”ತುಟಿಗಳ ಚಲನೆ”ಯಂತಹ ದೃಶ್ಯ ಸಂಕೇತಗಳನ್ನು ಕೂಡ ಮರೆ ಮಾಚದಿರಿ. ಹಾಗೆ ಮಾಡಿದರೆ ದೃಶ್ಯ ಕಲಿಕೆ ಮತ್ತು ದೃಶ್ಯ ಸ್ಮರಣೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು.
3. ಮಗುವಿನ ಜತೆಗೆ ಮಾಡನಾಡುವಾಗ ಮುಖವನ್ನು ಕಿವಿಗೆ ತುಂಬಾ ಹತ್ತಿರ ತಂದು ಮಾಡನಾಡಬೇಡಿ. ಹಾಗೆ ಮಾಡುವುದರಿಂದ ಮಗು ಪರಿವರ್ತಿತ ಮಾತನ್ನು ಕಲಿಯುವ ಸಾಧ್ಯತೆಯಿದೆ.
ಡಾ| ರದೀಶ್ ಕುಮಾರ್ ಬಿ.,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Drama ಬಿಟ್ಟು ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ್ದಕ್ಕೆ ಕಾಂಗ್ರೆಸ್ ಕ್ಷಮೆ ಕೇಳಲಿ
You Tuber: ನೀಲಿ ಚಿತ್ರತಾರೆ ಆಗಲು ಪಿಎಚ್ ಡಿ ಕಲಿಕೆಯನ್ನೇ ತೊರೆದ ಖ್ಯಾತ ಯೂಟ್ಯೂಬರ್
UPSC ವಂಚನೆ ಪ್ರಕರಣ: ಪೂಜಾ ಖೇಡ್ಕರ್ ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ನಕಾರ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.