ಕಣಕಾಲು, ಪಾದದ ತೊಂದರೆ – ಸುರಕ್ಷತೆ
Team Udayavani, Jul 30, 2017, 6:00 AM IST
ಶ್ರೀಮತಿ ಸಾವಿತ್ರಮ್ಮ (ಹೆಸರು ಬದಲಾಯಿಸಲಾಗಿದೆ) ವಯಸ್ಸು 36 ವರ್ಷ, ಗೃಹಿಣಿ, ಹಿಂದಿನ ಒಂದು ತಿಂಗಳಿಂದ ಪಾದದಡಿಯ ನೋವಿನಿಂದ ಬಳಲುತ್ತಿದ್ದು, ಹಿಂದೆ ಸಣ್ಣಕ್ಕೆ ಕಾಣಿಸಿಕೊಂಡು, ಈಗ ಮುಂಜಾನೆ ಎದ್ದು ನಡೆಯುವ ಕೆಲವು ಹೆಜ್ಜೆಗಳಲ್ಲಿ ಹಾಗೂ ಕೂತು ಎದ್ದಾಗೆಲ್ಲಾ ನೋವು ಹೆಚ್ಚಾಗುತ್ತಿದೆ.
ಶ್ರೀಪಾದ (ಹೆಸರು ಬದಲಾಯಿಸಲಾಗಿದೆ), 20 ವರ್ಷ ವಯಸ್ಸು, ಪಾದದ ಮತ್ತು ಕಣ ಕಾಲಿನಲ್ಲಿ ಕಾಣಿಸಿಕೊಂಡ ನೋವು. ಕಾಲೇಜಿನಲ್ಲಿ ಪಾದರಕ್ಷೆಯಲ್ಲಿ ನಡೆಯುವಾಗ, ಮೆಟ್ಟಿಲುಗಳನ್ನು ಏರುವಾಗ, ಇಳಿಯುವಾಗ ಹಾಗೂ ಆಟೋಟಗಳಲ್ಲಿ ಭಾಗವಹಿಸುವಾಗ ಹೆಚ್ಚಾಗುತ್ತಿದೆ.
ಶ್ರೀ ವಿಕ್ಟ್ರಿ (ಹೆಸರು ಬದಲಾಯಿಸಲಾಗಿದೆ) ವಯಸ್ಸು 56 ವರ್ಷ, ಸಾವಯವ ಕೃಷಿಕ, ಕಳೆದ ಐದಾರು ವರ್ಷಗಳಿಂದ ಕಣಕಾಲಿನ ನೋವಿನಿಂದ ಬಳಲುತ್ತಿದ್ದು, ಗದ್ದೆ ತೋಟದಲ್ಲಿ ಓಡಾಡುವುದರಿಂದ ಜಾಸ್ತಿ ತೊಂದರೆ.
ಶ್ರೀ ಸಾಮೀರ್ (ಹೆಸರು ಬದಲಾಯಿಸಲಾಗಿದೆ), 53 ವರ್ಷ, ಬ್ಯಾಂಕ್ ಒಂದರ ಆಫೀಸರ್ ತಮ್ಮ ದಿನನಿತ್ಯದ ಓಡಾಟದಲ್ಲಿ ಸಣ್ಣಕ್ಕೆ ಕಾಣಿಸಿಕೊಂಡ ನೋವು, ಬ್ಯಾಂಕಿನ ಮೆಟ್ಟಿಲುಗಳನ್ನು ಹತ್ತುವುದು, ಇಳಿಯುವುದರಿಂದ ಜಾಸ್ತಿಯಾಗುತ್ತಿದೆ.
ಈ ಮೇಲಿನ ಉದಾಹರಣೆಗಳು ಪಾದ ಮತ್ತು ಕಣ ಕಾಲಿನ ತೊಂದರೆಯ ಲಕ್ಷಣಗಳು. ಸಾಮಾನ್ಯವಾಗಿ ಪಾದದ ಮತ್ತು ಕಣಕಾಲಿನ ಆರೋಗ್ಯ ಇಡೀ ದೇಹದ ಆರೋಗ್ಯದ ಬಿಂಬ ಎಂಬುದು ಅಕ್ಷರಶಃ ಸತ್ಯ.
ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕಣ ಕಾಲಿನ ಮತ್ತು ಪಾದದ ತೊಂದರೆಗಳು
1. ಪಾದದ ಅಡಿಯ ನೋವು
(Plantar fasciitis)
ಲಕ್ಷಣಗಳು
ಆರಂಭದಲ್ಲಿ ಪಾದದ ಅಡಿಯಲ್ಲಿ ಕಾಣಿಸಿಕೊಳ್ಳುವ ಈ ನೋವು ಮುಂಜಾವಿನ ಮೊದಲ ಕೆಲವು ಹೆಜ್ಜೆಗಳು ಅತೀ ನೋವಿನಿಂದಿದ್ದು, ನಡೆದಂತೆ ಕಡಿಮೆಯಾಗುವುದು. ಅನಂತರದ ದಿನಗಳಲ್ಲಿ ಈ ನೋವು ದೈನಂದಿನ ಚಟುವಟಿಕೆಗಳು (ಅಡುಗೆ ಮನೆಯಲ್ಲಿ ನಿಲ್ಲುವುದು, ಸಂಜೆಯ ವಾಕಿಂಗ್) ಕಷ್ಟವಾಗುವಷ್ಟು ಉಲ್ಬಣಗೊಳ್ಳುತ್ತದೆ.
ಕಾರಣಗಳು
1. ಕಾಲಿನ ಸ್ನಾಯುವಿನ ಗಟ್ಟಿತನ
2. ಪಾದದ ತಂತುಕೋಶದ ಊತ
3. ಪಾದದ ಕೊಬ್ಬಿನ ಕೊರತೆ
2. ಕಣ ಕಾಲಿನ
ಹಿಮ್ಮಡಿಯ ನೋವು
(Retrocalcanial pain)
ಲಕ್ಷಣಗಳು
ಕಣಕಾಲಿನ ಹಿಮ್ಮಡಿಯ ನೋವು, ಹಿಮ್ಮಡಿ ಊತದಿಂದ ಶುರುವಾಗಿ ದಿನ ಹೋದಂತೆ ಮೆಟ್ಟಿಲು ಏರಲು ಇಳಿಯಲು ತೊಂದರೆಯಾಗುವಷ್ಟು ಹೆಚ್ಚಿಗೆಯಾಗುವುದು. ಆಮೇಲಿನ ದಿನಗಳಲ್ಲಿ ನಡೆಯಲೂ ಕಷ್ಟವಾಗಿ ಪರಿಣಮಿಸುವುದು.
ಕಾರಣಗಳು
1. ಹಿಮ್ಮಡಿಯ ನೀರಿನ ಚೀಲದ ಊತ
2. ಹಿಮ್ಮಡಿಯ ಸ್ನಾಯುವಿನ ಊತ ಮತ್ತು ಹರಿಯುವಿಕೆ
3. ಸ್ನಾಯುವಿನಲ್ಲಿ ಕ್ಯಾಲ್ಸಿಯಂ ಸಂಗ್ರಹ
3. ಚಪ್ಪಟೆ ಪಾದ
(Flat foot)
ಎಲ್ಲ ಚಪ್ಪಟೆ ಪಾದಗಳು ತೊಂದರೆ ಯಿಂದ ಕೂಡಿರುವುದಿಲ್ಲ. ಕೆಲವರಲ್ಲಿ ಮಾತ್ರ ತೊಂದರೆಯಾಗಿ ಕಾಣಿಸಿಕೊಳ್ಳುತ್ತದೆ.
ಲಕ್ಷಣಗಳು
1. ನಡೆಯುವಾಗ ನೋವು
2. ಪಾದದ ಆಕರದ ಬದಲಾವಣೆ
3. ಪಾದದ ಊತ
4. ಕಾಲಿನ ಸ್ನಾಯುವಿನ ನೋವು
ಕಾರಣಗಳು
1. ಪ್ರೌಢಾವಸ್ಥೆಯಲ್ಲಿ (18-30 ವರ್ಷ) ಸ್ನಾಯುವಿನ ಊತ ದಿಂದ ಮತ್ತು ಸರಿಯಾದ ಅಳತೆಯ ಪಾದರಕ್ಷೆ ಧರಿಸದೆ ಇರುವುದರಿಂದ,
2. 40-50 ವರ್ಷ ವಯಸ್ಸಿನಲ್ಲಿ ಸ್ನಾಯುವಿನ ಹರಿಯು ವಿಕೆಯಿಂದ, ಎಲುಬಿನ ರಚನಾ ಬದಲಾವಣೆಯಿಂದ
4. ಕಣಕಾಲಿನ/ಪಾದದ ಸಂಧಿವಾತ
(Ankle/subtalar Arthritis)
ಇದು ಪಾದದ ಮತ್ತು ಕಣಕಾಲಿನ ತೊಂದರೆಯಿಂದ ಅಥವಾ ದೇಹದ ಇತರ ಸಂದು ನೋವಿನ ಲಕ್ಷಣವಾಗಿರುತ್ತದೆ.
ಲಕ್ಷಣಗಳು
1. ಕಣಕಾಲಿನ / ಪಾದದ, ಗಂಟಿನ ನೋವು
2. ಕಣಕಾಲಿನ/ಪಾದದ, ಗಂಟಿನ ಊತ
3. ನಡೆಯಲು ತೊಂದರೆ, ಹೆಚ್ಚಾಗಿ ಸಮತಟ್ಟಲ್ಲದ ನೆಲದಲ್ಲಿ
4. ಕಣಕಾಲಿನ/ಪಾದದ ರಚನಾ ನೂನ್ಯತೆ (Aquired deforimity)
ಕಾರಣಗಳು
1. ವಂಶಪಾರಂಪರ್ಯದಿಂದ
2. ಸ್ನಾಯುವಿನ ಅಸಾಮರ್ಥ್ಯತೆಯಿಂದ
3. ಪ್ರಾಯ (ವೃದ್ಧಾಪ್ಯ)
5. ಮಧುಮೇಹದ ಪಾದ
(Diabetic Foot)
ಲಕ್ಷಣಗಳು
1. ಪಾದದ ಊತ
2. ಪಾದದಲ್ಲಿ ದಡ್ಡುಕಟ್ಟುವಿಕೆ (Callosities)
3. ಪಾದದ ಚರ್ಮದಲ್ಲಿ ಸೀಳು ಗಾಯ
4. ಪಾದದಲ್ಲಿ ಹುಣ್ಣು (Callosities)
ಕಾರಣಗಳು
1. ಮಧುಮೇಹದ ಅಸಮರ್ಪಕ ಹತೋಟಿ
2. ಪಾದದ ನೈರ್ಮಲ್ಯ ಮತ್ತು ರಕ್ಷಣೆಯ ಕೊರತೆ
ಪಾದದ ಮತ್ತು ಕಣಕಾಲಿನ ತೊಂದರೆಗಳು
ಈ ಕಾರಣಗಳಿಂದಾಗಿ
ಕಾಣಿಸಿಕೊಳ್ಳಬಹುದು.
1. ಪಾದದ ತೊಂದರೆಗಳು.
2. ದೇಹದ ಇತರ ಕಾಯಿಲೆಗಳಿಂದ ಬರುವ ನೋವು.
ಎ) ಮಧುಮೇಹ (diabetes)
ಬಿ) ಸಂಧಿವಾತ (Rheumatoid arthritis)
ಸಿ) ರಕ್ತ ಸಂಚಾರದ ಅಡಚಣೆ (Rheumatoid arthritis)
ಡಿ) ಯೂರಿಕ್ ಆ್ಯಸಿಡ್‌ನ ಏರುಪೇರು (Gouty arthritis)
ಪಾದದ ಮತ್ತು ಕಣ ಕಾಲಿನ ಆರೋಗ್ಯ
ಹೇಗೆ ಕಾಪಾಡಿಕೊಳ್ಳಬಹುದು?
1. ಪಾದದ ಶುಚಿತ್ವ ನಿರ್ವಹಣೆ
2. ಪಾದದೆಡೆ ಗಮನ, ಪಾದದ ಅಡಿಯನ್ನು ಕನ್ನಡಿಯ ಸಹಾಯದಿಂದ ಆಗಾಗ್ಗೆ ನೋಡಿಕೊಳ್ಳುತ್ತಿರುವುದು.
3. ಸರಿಯಾದ ಪಾದರಕ್ಷೆಯ ಬಳಕೆಯಿಂದ ಪಾದದ ರಕ್ಷಣೆ.
ಕಣ ಕಾಲಿನ ಹಾಗೂ ಪಾದದ ತೊಂದರೆಗಳು ಯಾವ ರೀತಿ ಕಾಣಿಸಿಕೊಳ್ಳ ಬಹುದು?
1. ಸಣ್ಣ ನೋವಿನೊಂದಿಗೆ
2. ಬಾವಿನೊಂದಿಗೆ
3. ಗಟ್ಟಿತನವಾಗಿ
4. ತಮ್ಮ ದೈನಂದಿನ ಚಟುವಟಿಕೆಗಳು ಕಷ್ಟಕರ
ಸರಿಯಾದ ಪಾದರಕ್ಷೆಯ ಆಯ್ಕೆ ಹೇಗೆ?
– ಪಾದರಕ್ಷೆಗಳನ್ನು ಕೊಳ್ಳುವಾಗ ಸರಿಯಾದ ಅಳತೆಯನ್ನು ಅನುಸರಿಸುವುದು ಬಹುಮುಖ್ಯ.
– ನಿಮ್ಮ ಕಾಲನ್ನು ಒಂದು ಕಾಗದದ ಮೇಲಿಟ್ಟು ಪಾದದ ಸುತ್ತ ಗೆರೆಯನ್ನು ಬರೆಯಿರಿ. ಯಾವುದೇ ಪಾದರಕ್ಷೆ ಈ ಗೆರೆಗಿಂತ ಕಡಿಮೆ ಇರುವುದು ಸೂಕ್ತ ಪಾದರಕ್ಷೆಯಲ್ಲ.
– ಹೈ ಹೀಲ್ಡ್ , ಪಾಯಿಂಟೆಡ್ ಪಾದರಕ್ಷೆಗಳು ತೊಂದರೆಗೆ ಮೂಲ ಕಾರಣ, ಅಗಲ ಮುಂಭಾಗದ ತೆಳು ಹಿಂಭಾಗದ ಪಾದರಕ್ಷೆಗಳು ಸೂಕ್ತ.
– ತುಂಬಾ ಹೊಂದಿಕೊಳ್ಳುವ, ಸುಲಭವಾಗಿ ಮಡಚಿಕೊಳ್ಳುವ (flexible) , ಪಾದರಕ್ಷೆಗಳು ಸೂಕ್ತವಲ್ಲ. ತುಂಬಾ ಗಟ್ಟಿತನದ ಪಾದರಕ್ಷೆಗಳೂ ಒಳ್ಳೆಯದಲ್ಲ.
-ಸೂಕ್ತ ವೈದ್ಯರ ಸಲಹೆ, ಕಣಕಾಲು ಮತ್ತು ಪಾದದ ತೊಂದರೆಗಳನ್ನು ತಡೆಗಟ್ಟುವಲ್ಲಿ ಹಾಗೂ ಇತರ ತೊಂದರೆಗಳಿಂದ ನರಳುವಂತಹವುದನ್ನು ತಡೆಯುವಲ್ಲಿ ಅಗತ್ಯ.
– ಡಾ| ಕೃಷ್ಣ ಪ್ರಸಾದ್ ,
ಸಹಾಯಕ ಪ್ರಾಧ್ಯಾಪಕರು,
ಫೂಟ್ ಆ್ಯಂಡ್ ಆ್ಯಂಕಲ್ ಸ್ಪೆಶಾಲಿಟಿ ಕ್ಲಿನಿಕ್, ಆಥೊìಪೀಡಿಕ್ ವಿಭಾಗ ಕೆ.ಎಂ.ಸಿ. ಮಣಿಪಾಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.