ನ್ಯುಮೋನಿಯಾ
Team Udayavani, Nov 19, 2017, 6:50 AM IST
ಹಿಂದಿನ ವಾರದಿಂದ – ನ್ಯುಮೋನಿಯಾ ತಡೆಗಟ್ಟುವಿಕೆ
ಹಿಮೊಫಿಲಸ್ ಇನ್‌ಫುಯೆಂಝೇ ಬಿ (ಎಚ್‌ಐಬಿ), ನ್ಯುಮೋಕಾಕಸ್, ದಡಾರ ಮತ್ತು ನಾಯಿಕೆಮ್ಮು (ಪರ್ಟುಸಿಸ್) ವೈರಸ್‌ಗಳಿಗೆ ಪ್ರತಿಬಂಧಕವಾಗಿ ಲಸಿಕೆ ಹಾಕಿಸುವ ಮೂಲಕ ಮಕ್ಕಳಲ್ಲಿ ನ್ಯುಮೋನಿಯಾವನ್ನು ಪ್ರತಿಬಂಧಿಸಬಹುದು. ಸಮರ್ಪಕ ಪೌಷ್ಟಿಕತೆಯನ್ನು ಒದಗಿಸುವುದು ಮತ್ತು ಜನಿಸಿದ ಬಳಿಕ ಆರು ತಿಂಗಳ ತನಕ ಸಂಪೂರ್ಣ ಎದೆಹಾಲೂಡುವಿಕೆ ಶಿಶುಗಳಲ್ಲಿ ನ್ಯುಮೋನಿಯಾ ವಿರುದ್ಧ ರೋಗ ನಿರೋಧಕ ಶಕ್ತಿ ವೃದ್ಧಿಯಾಗಲು ಸಹಾಯ ಮಾಡುತ್ತದೆ. ಮಗು ಅನಾರೋಗ್ಯಕ್ಕೆ ಒಳಗಾದರೂ ಅನಾರೋಗ್ಯದ ಅವಧಿಯನ್ನು ಕುಗ್ಗಿಸಲು ಇದು ನೆರವಾಗುತ್ತದೆ.
ಮನೆಗಳನ್ನು ಒಳಾಂಗಣ ವಾಯುಮಾಲಿನ್ಯ ಮುಕ್ತವಾಗಿ ಇರಿಸಿಕೊಳ್ಳುವುದು ಮತ್ತು ತುಂಬಾ ಮಂದಿ ಸದಸ್ಯರಿರುವ ಮನೆಗಳಲ್ಲಿ ಉತ್ತಮ ನೈರ್ಮಲ್ಯವನ್ನು ರೂಢಿಸಿಕೊಳ್ಳಲು ಪ್ರೋತ್ಸಾಹಿಸುವುದರಿಂದಲೂ ಮಕ್ಕಳು ನ್ಯುಮೋನಿಯಾ ಪೀಡಿತರಾಗುವ ಸಂಭಾವ್ಯತೆಯನ್ನು ಕಡಿಮೆ ಮಾಡಬಹುದು.
ಶುದ್ಧ ಕುಡಿಯುವ ನೀರಿನ ಲಭ್ಯತೆ, ನೈರ್ಮಲ್ಯ ಮತ್ತು ಕೈಗಳನ್ನು ಸಾಬೂನು ಉಪಯೋಗಿಸಿ ತೊಳೆದುಕೊಳ್ಳುವುದರಿಂದ ನ್ಯುಮೋನಿಯಾ ಉಂಟು ಮಾಡುವ ರೋಗಕಾರಕ ಸೂಕ್ಷ್ಮ ಜೀವಿಗಳಿಗೆ ಒಡ್ಡಿಕೊಳ್ಳುವುದನ್ನು ತಡೆಯಬಹುದಾಗಿದೆ. ಆರೋಗ್ಯಕರ ಅಭ್ಯಾಸಗಳನ್ನು ಸ್ವಯಂ ರೂಢಿಸಿಕೊಳ್ಳಲು ಉತ್ತೇಜನ ನೀಡುವುದು ಬಹಳ ನಿರ್ಣಾಯಕವಾಗಿದೆ.
ವಯಸ್ಕರಲ್ಲೂ ನ್ಯುಮೋನಿಯಾ
ಉಂಟಾಗಬಹುದೇ?
ಹೌದು. ವಯಸ್ಕರು, ಅದರಲ್ಲೂ 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರು ನ್ಯುಮೋನಿಯಾಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚು ಹೊಂದಿದ್ದಾರೆ. ಒಂದು ಅಧ್ಯಯನದ ಪ್ರಕಾರ, 2015ನೇ ಇಸವಿಯಲ್ಲಿ 12.7 ಲಕ್ಷ ಮಂದಿ 70 ಅಥವಾ ಅದಕ್ಕಿಂತ ಹೆಚ್ಚು ವಯಸ್ಸಿನವರ ಮರಣಕ್ಕೆ ನ್ಯುಮೋನಿಯಾ ಕಾರಣವಾಗಿತ್ತು.
ವಯಸ್ಕರಲ್ಲಿ ನ್ಯುಮೋನಿಯಾದ ಇತರ ಅಪಾಯಾಂಶಗಳಲ್ಲಿ, ಧೂಮಪಾನ, ಅಪೌಷ್ಟಿಕತೆ, ಶ್ವಾಸಕೋಶ ಕಾಯಿಲೆಗಳಿಗೆ ತುತ್ತಾಗಿರುವುದು, ಅಸ್ತಮಾ ಅಥವಾ ದೀರ್ಘಕಾಲಿಕ ಅಬ್‌ಸ್ಟ್ರಕ್ಟಿವ್ ಪಲ್ಮನರಿ ಕಾಯಿಲೆ, ಮಧುಮೇಹ ಅಥವಾ ಹೃದ್ರೋಗಗಳಂತಹ ವೈದ್ಯಕೀಯ ಸಮಸ್ಯೆಗಳಿರುವುದು, ಎಚ್‌ಐವಿ, ಅಂಗಾಂಗ ಕಸಿ, ಕಿಮೋಥೆರಪಿ ಅಥವಾ ದೀರ್ಘಕಾಲಿಕ ಸ್ಟಿರಾಯ್ಡ ಬಳಕೆಯಿಂದಾಗಿ ರೋಗ ಪ್ರತಿರೋಧಕ ಶಕ್ತಿ ದುರ್ಬಲಗೊಂಡಿರುವುದು, ಲಕ್ವಾ ಆಘಾತದಿಂದಾಗಿ ಕೆಮ್ಮಲು ಕಷ್ಟ, ಸೆಡೇಟಿವ್ ಔಷಧಗಳ ಬಳಕೆ ಅಥವಾ ಮದ್ಯಪಾನ ಅಥವಾ ಚಲನೆ ಸೀಮಿತಗೊಂಡಿರುವುದು ಅಥವಾ ಇತ್ತೀಚೆಗೆ ಇನ್‌ಫುಯೆಂಜಾ ಸಹಿತ ಮೇಲ್‌ಶ್ವಾಸಾಂಗ ವ್ಯೂಹದ ವೈರಲ್ ಸೋಂಕುಗಳಿಗೆ ತುತ್ತಾಗಿರುವುದು ಸೇರಿವೆ. ನ್ಯುಮೋನಿಯಾಕ್ಕೆ ತುತ್ತಾಗಿರುವ ವಯಸ್ಕರು ನ್ಯುಮೋನಿಯಾ ಪೀಡಿತ ಮಕ್ಕಳಂತೆಯೇ ಚಿಹ್ನೆಗಳನ್ನು ಹೊಂದಿರುತ್ತಾರೆ: ಕೆಮ್ಮು, ಜ್ವರ ಮತ್ತು ಉಸಿರಾಟಕ್ಕೆ ಬವಣೆ.
ಇತರ ಚಿಹ್ನೆಗಳು: ಮಾನಸಿಕ ಗೊಂದಲ, ತೀವ್ರ ಬೆವರುವಿಕೆ ಮತ್ತು ಕಳೆಗುಂದಿದ ಚರ್ಮ, ತಲೆನೋವು, ಹಸಿವಿಲ್ಲದಿರುವಿಕೆ, ದಣಿವು, ಅಸೌಖ್ಯದ ಅನುಭವ ಮತ್ತು ಉಸಿರಾಡುವಾಗ ತೀವ್ರವಾಗುವ ಎದೆಯಲ್ಲಿ ಚುಚ್ಚಿದಂತಹ ತೀಕ್ಷ್ಣ ನೋವು.
ವಯಸ್ಕರು ಆಸ್ಪತ್ರೆಗೆ ದಾಖಲಾಗುವುದು ಯಾವಾಗ ಅಗತ್ಯ: ಮಧುಮೇಹ, ರೋಗಪ್ರತಿರೋಧ ಶಕ್ತಿ ದುರ್ಬಲವಾಗಿರುವುವುದು, ಶ್ವಾಸಕೋಶ ಅಥವಾ ಮೂತ್ರಪಿಂಡದ ಕಾಯಿಲೆಗಳು ಇದ್ದಾಗ ಅಥವಾ ಮನೆಯಲ್ಲಿ ಆರೋಗ್ಯ ಯೋಗಕ್ಷೇಮ ನಿಗಾವಹಿಸಲು ಸಾಧ್ಯವಿಲ್ಲದಿರುವಾಗ, ಕುಡಿಯಲು ಅಥವಾ ಆಹಾರ ಸೇವಿಸಲು ಸಾಧ್ಯವಿಲ್ಲದಿರುವಾಗ, 65 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಾಗಿದ್ದರೆ, ಮನೆಯಲ್ಲಿ ಆ್ಯಂಟಿಬಯಾಟಿಕ್ ಔಷಧಿಗಳನ್ನು ತೆಗೆದುಕೊಂಡರೂ ಆರೋಗ್ಯ ಸುಧಾರಿಸದಿದ್ದರೆ ನ್ಯುಮೋನಿಯಾ ಪೀಡಿತ ಹಿರಿಯರು ಆಸ್ಪತ್ರೆಗೆ ದಾಖಲಾಗುವುದು ಅನಿವಾರ್ಯವಾಗುತ್ತದೆ.
ಚಿಕಿತ್ಸೆ: ಆ್ಯಂಟಿಬಯಾಟಿಕ್ ಔಷಧಿ, ಆಮ್ಲಜನಕ, ಮತ್ತು ಅಗತ್ಯ ಬಿದ್ದಾಗ ತೀವ್ರ ನಿಗಾ.
ವಯಸ್ಕರಲ್ಲಿ ನ್ಯುಮೋನಿಯಾ
ತಡೆಗಟ್ಟುವಿಕೆ
ಧೂಮಪಾನ ತ್ಯಜಿಸುವುದು, ಕೈಗಳನ್ನು ತೊಳೆದುಕೊಳ್ಳುವ ಉತ್ತಮ ಅಭ್ಯಾಸ ರೂಢಿಸಿಕೊಳ್ಳುವುದು, ಋತುಮಾನ ಆಧರಿಸಿ ಫೂ ಮತ್ತು ನ್ಯುಮೋಕಾಕಲ್ ಲಸಿಕೆ ಹಾಕಿಸಿಕೊಳ್ಳುವ ಮೂಲಕ ನ್ಯುಮೋನಿಯಾ ತಡೆಗಟ್ಟಬಹುದು.
ಕೆಮ್ಮು ಇರುವ ವ್ಯಕ್ತಿಗಳು ಕೆಮ್ಮುವಾಗ ಅಥವಾ ಸೀನುವಾಗ ಟಿಶ್ಯೂ ಅಥವಾ ಕರವಸ್ತ್ರದಿಂದ ಮುಖವನ್ನು ಮುಚ್ಚಿಕೊಳ್ಳಬೇಕು ಮತ್ತು ಬಳಸಿದ ಟಿಶ್ಯೂವನ್ನು ಮುಚ್ಚಿದ ಕಸದಬುಟ್ಟಿಯಲ್ಲಿ ಹಾಕಬೇಕು. ಕರವಸ್ತ್ರ ಅಥವಾ ಟಿಶ್ಯೂ ಇಲ್ಲವಾದಲ್ಲಿ, ಹಸ್ತಗಳಿಗೆ ಕೆಮ್ಮದೆ ಅಥವಾ ಸೀನದೆ ಒಂದು ಕಡೆಗೆ ತಿರುಗಿ ಮೇಲೊ¤àಳ ಬಳಿ ಸೀನಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
T20: ಗೆಲ್ಲುವ ಹಂತದಲ್ಲಿದ್ದ ಶ್ರೀಲಂಕಾವನ್ನು ಹಿಡಿದು ನಿಲ್ಲಿಸಿದ ಕಿವೀಸ್…
ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
Chikkamagaluru: ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.