ಸರ್ಪಸುತ್ತಿನ ನಂತರದ ನರವೇದನೆ


Team Udayavani, Oct 15, 2017, 6:35 AM IST

Arogyavani-15.jpg

ಸರ್ಪಸುತ್ತು ಅಥವಾ ಹರ್ಪೆಸ್‌ ಝಾಸ್ಟರ್‌ ನರಗಳನ್ನು ಬಾಧಿಸುವ ವೈರಸ್‌ ಸೋಂಕು. ಇದರಲ್ಲಿ ಚರ್ಮದ ಮೇಲೆ ಕಾಣಿಸಿಕೊಳ್ಳುವ ಗುಳ್ಳೆಗಳು ಬಹಳ ನೋವಿನಿಂದ ಕೂಡಿರುತ್ತವೆ. ಸರ್ಪಸುತ್ತು ಬಾಧಿತವಾದ ನರಗಳು ಅಪರೂಪಕ್ಕೆ ಕೆಲವು ಸಲ ಕಾಯಿಲೆಯು ಗುಣವಾದ ಬಳಿಕವೂ ತೀವ್ರ ಯಾತನೆಯನ್ನು ಉಂಟು ಮಾಡುವುದಿದೆ. 

ಸರ್ಪಸುತ್ತಿನ ಗುಳ್ಳೆಗಳು, ತೇಪೆ, ಪಟ್ಟಿಗಳು ಚರ್ಮದ ಮೇಲೆ ನೀರಿನ ಗುಳ್ಳೆಗಳ ಗೆರೆಗಳ ರೀತಿಯಲ್ಲಿ, ನರಗಳ ಮೇಲಿನ ಚರ್ಮದಲ್ಲಿ ಪಟ್ಟೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಈ ಪಟ್ಟೆಯು, ವೈರಸ್‌ ಚರ್ಮಕ್ಕೆ ಹರಡುವುದಕ್ಕೆ ಮೊದಲು ಬಾಧಿತ ನರಗಳಿಗೆ ಹರಡುತ್ತದೆ. ಸರ್ಪಸುತ್ತು ಮಹಿಳೆ ಮತ್ತು ಪುರುಷ ಇಬ್ಬರಲ್ಲಿಯೂ ಸಮಾನವಾಗಿ ಕಾಣಿಸಿಕೊಳ್ಳುತ್ತದೆ. ಚಿಕನ್‌ ಪಾಕ್ಸ್‌ ಅಥವಾ ಸೀತಾಳೆ ಸಿಡುಬನ್ನು ಹರಡುವ ಅದೇ ವೈರಸ್‌ (ವೆರಿಸೆಲ್ಲಾ ಝೊಸ್ಟರ್‌) ಈ ಕಾಯಿಲೆಯನ್ನೂ ಹರಡುತ್ತದೆ. ಸೀತಾಳೆ ಸಿಡುಬು ಸಾಮಾನ್ಯವಾಗಿ ಹದಿಹರಯದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಇದರಲ್ಲಿ ತುರಿಸುವ ನೀರಿನ ಗುಳ್ಳೆಗಳು ದೇಹದಾದ್ಯಂತ ಕಾಣಿಸಿಕೊಳ್ಳುತ್ತವೆ. ಒಂದು ಸಲ ಈ ಲಕ್ಷಣಗಳು ಮರೆಯಾದ ಬಳಿಕ ವೆರಿಸೆಲ್ಲಾ ಝೊಸ್ಟರ್‌ ವೈರಸ್‌ ಬೆನ್ನುಮೂಳೆಯ ಹತ್ತಿರದ ನರಗಳಲ್ಲಿ ತಳವೂರುತ್ತದೆ. ಅಂದರೆ ಇಲ್ಲಿ ವೈರಸ್‌ ಸುಪ್ತಾವಸ್ಥೆಯಲ್ಲಿ ಇರುತ್ತದೆ. ಸುಪ್ತಾವಸ್ಥೆಯಲ್ಲಿ ಇರುವ ಈ ವೈರಾಣು ದೇಹದ ಪ್ರತಿರೋಧಕ ವ್ಯವಸ್ಥೆಯು ದುರ್ಬಲವಾದ ಕೂಡಲೇ ಮತ್ತೆ ಜಾಗೃತವಾಗುತ್ತದೆ. ಆಮೇಲೆ ವೈರಸ್‌ ನರಗಳಲ್ಲಿ ಬೆಳವಣಿಗೆ ಹೊಂದುತ್ತದೆ ಮತ್ತು ಈ ಕಾರಣದಿಂದಾಗಿ ತೀವ್ರ ನೋವು ಬಾಧಿಸುತ್ತದೆ. ಯಾವಾಗ ವೈರಸ್‌ ಚರ್ಮಕ್ಕೆ ಹರಡುತ್ತದೆಯೋ ಆಗ ಚರ್ಮದ ಮೇಲೆ ಸರ್ಪಸುತ್ತಿನ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಪೋಸ್ಟ್‌ ಹರ್ಪೆಟಿಕ್‌ ನ್ಯುರಾಲ್ಜಿಯಾ (PHN)
ಅಂದರೆ ಸರ್ಪಸುತ್ತಿನ ಅನಂತರ ನರಗಳಲ್ಲಿ ಕಾಣಿಸಿಕೊಳ್ಳುವ ನೋವು, ಇದನ್ನು ಸರ್ಪಸುತ್ತಿನ ನಂತರದ ನರವೇದನೆ ಎಂದು ಕರೆಯಬಹುದು. ಇದು ಹಪೇಸ್‌ ಝಾಸ್ಟರ್‌ (Herpes Zoste) ಅಥವಾ ಸರ್ಪಸುತ್ತಿನ ಕಾಯಿಲೆಯಲ್ಲಿ ಕಂಡು ಬರುವ ಬಹಳ ಸಾಮಾನ್ಯ ತೊಂದರೆ. ಇದನ್ನು ಸ್ಥೂಲವಾಗಿ, ಸರ್ಪಸುತ್ತಿನ ಲಕ್ಷಣಗಳು ಅಥವಾ ಗುಳ್ಳೆಗಳು ಮರೆಯಾದ ಬಳಿಕ, ಅಂದರೆ ಸುಮಾರು ಮೂರು ತಿಂಗಳವರೆಗೆ ಬಾಧಿಸುವ ನೋವು ಎಂಬುದಾಗಿ ವಿವರಿಸಬಹುದು. ಲಕ್ಷಣಗಳು ಮರೆಯಾಗುವವರೆಗೂ ಕಾಯಿಲೆಯ ತೀವ್ರ ಸ್ಥಿತಿಯು ಮುಂದುವರಿಯುತ್ತದೆ. ಸಾಮಾನ್ಯವಾಗಿ ಗುಳ್ಳೆಗಳು ಒಮ್ಮಿಂದೊಮ್ಮೆಗೆಯೇ ಕಾಣಿಸಿಕೊಂಡ ಕೆಲವು ವಾರಗಳ ವರೆಗೆ ನೋವು ಇರುತ್ತದೆ.

ಪೋಸ್ಟ್‌  ಹರ್ಪೆಟಿಕ್‌ ನ್ಯುರಾಲ್ಜಿಯಾ (PHN)  ವನ್ನು ಸರ್ಪಸುತ್ತು ಕಾಯಿಲೆಯ ತೀವ್ರ ಸ್ಥಿತಿಯ ಅನಂತರ ನರಗಳಲ್ಲಿ  ಮರುಕಳಿಸುವ ನೋವು ಎಂಬುದಾಗಿ ವಿವರಿಸಬಹುದು. ಆದರೆ ನಿಖರವಾಗಿ ಸರ್ಪಸುತ್ತಿನ ನಂತರದ ನರವೇದನೆ ಯಾವ ಘಟ್ಟದಲ್ಲಿ ತೀವ್ರ ಸರ್ಪಸುತ್ತು, ಪೋಸ್ಟ್‌ ಹರ್ಪೆಟಿಕ್‌ ನ್ಯುರಾಲ್ಜಿಯಾ ಆಗಿ ಪರಿವರ್ತಿತವಾಗುತ್ತದೆ ಎಂದು ಹೇಳುವುದು ಅಸಾಧ್ಯ. ಸರ್ಪಸುತ್ತಿನ ತೀವ್ರ ನೋವು ಕೊನೆಗೊಂಡ ಮೂರು ತಿಂಗಳ ಬಳಿಕ, ಅಂದರೆ ಲಕ್ಷಣಗಳೆಲ್ಲ ಮರೆಯಾದ ಬಳಿಕ ಪೋಸ್ಟ್‌ ಹರ್ಪೆಟಿಕ್‌ ನ್ಯುರಾಲ್ಜಿಯಾ ಕಾಣಿಸಿಕೊಳ್ಳುತ್ತದೆ ಅಥವಾ ಚರ್ಮದಲ್ಲಿ ಲಕ್ಷಣಗಳು ಕಾಣಿಸಿಕೊಂಡ ಆರಂಭದಿಂದಲೇ 3ರಿಂದ 6 ತಿಂಗಳವರೆಗೆ ನೋವು ಮರುಕಳಿಸುತ್ತದೆ ಎಂಬುದು ಒಂದು ವಾದವಾದರೆ, ಚರ್ಮದಲ್ಲಿ ಗುಳ್ಳೆಗಳು ಕಾಣಿಸಿಕೊಂಡ ನಾಲ್ಕು ವಾರಗಳ ಅನಂತರ ನೋವು ಆಗಾಗ ಮರುಕಳಿಸುತ್ತದೆ ಇದು ಪೋಸ್ಟ್‌ ಹರ್ಪೆಟಿಕ್‌ ನ್ಯುರಾಲ್ಜಿಯಾ ಎಂಬುದು ಇನ್ನು ಕೆಲವರ ಅನಿಸಿಕೆ. ಪೋಸ್ಟ್‌ ಹರ್ಪೆಟಿಕ್‌ ನ್ಯುರಾಲ್ಜಿಯಾ ಅಥವಾ ಸರ್ಪಸುತ್ತಿನ ಅನಂತರದ ನರವೇದನೆ ಅಥವಾ ನೋವು ಎಷ್ಟು ತೀವ್ರವಾಗಿರುತ್ತದೆ ಎಂದರೆ ಇದರ ಬಾಧೆಗೊಳಗಾದ ಸುಮಾರು 11-15% ನಷ್ಟು ಜನರು ನೋವಿನ ಕ್ಲಿನಿಕ್‌ಗೆ ದಾಖಲಾಗಬೇಕಾಗುತ್ತದೆ.

ಸರ್ಪಸುತ್ತಿನ ನಂತರದ ನರವೇದನೆ
ಬಾಧೆಗೆ ಕಾರಣವಾಗುವ ಅಂಶಗಳು

ಚಿಕನ್‌ ಪಾಕ್ಸ್‌ ಅಥವಾ ಸೀತಾಳೆ ಸಿಡುಬು ಅನ್ನು ಉಂಟು ಮಾಡುವ ವೈರಸ್‌ ಸರ್ಪಸುತ್ತನ್ನೂ ಉಂಟು ಮಾಡುವ ಕಾರಣದಿಂದ, ಈ ಹಿಂದೆ ಚಿಕನ್‌ ಪಾಕ್ಸ್‌ ಆಗಿದ್ದ ಜನರಿಗೆ ಸರ್ಪಸುತ್ತು ಆಗುವ ಸಾಧ್ಯತೆಗಳೂ ಇವೆ. ವ್ಯಕ್ತಿಯ ದೇಹದಲ್ಲಿ ಪ್ರತಿರಕ್ಷಣಾ ಶಕ್ತಿ ಕಡಿಮೆಯಾದ ಬಳಿಕ ಸರ್ಪಸುತ್ತು ಕಾಣಿಸಿಕೊಳ್ಳುತ್ತದೆ. ಮನುಷ್ಯರಿಗೆ ವಯಸ್ಸಾಗುತ್ತಿದ್ದಂತೆ ಸಹಜವಾಗಿಯೇ ಅವರ ದೇಹದ ಪ್ರತಿರಕ್ಷಣಾ ಶಕ್ತಿಯು ದುರ್ಬಲಗೊಳ್ಳುತ್ತದೆ. ಹಾಗಾಗಿ ವಯಸ್ಸಾದವರಿಗೆ ಸರ್ಪಸುತ್ತು ಆಗುವ ಅಪಾಯ ಸಾಧ್ಯತೆ ಹೆಚ್ಚು. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲ ಗೊಳಿಸುವ ಯಾವುದೇ ಅಂಶಗಳು ಅಂದರೆ ಏಡ್ಸ್‌, ಮಧುಮೇಹ, ಹಾಡ್‌ ಕಿನ್ಸ್‌  ಕಾಯಿಲೆ, ರಕ್ತದ ಕ್ಯಾನ್ಸರ್‌ ಮತ್ತು ಕೆಲವು ರೀತಿಯ ಔಷಧಿಗಳಾದ ಸ್ಟೀರಾಯ್ಡ್ಸ್ ಇತ್ಯಾದಿಗಳು ಸರ್ಪಸುತ್ತು ಆಗುವ ಅಪಾಯವನ್ನು ಹೆಚ್ಚಿಸುತ್ತವೆ.

ಮನುಷ್ಯರಿಗೆ ವಯಸ್ಸಾದ ಮೇಲೆ ಸರ್ಪಸುತ್ತು ಕಾಯಿಲೆ ಆದರೆ, ಅವರಿಗೆ ಸರ್ಪಸುತ್ತಿನ ಅನಂತರದ ನ್ಯುರಾಲ್ಜಿಯಾ ಅಥವಾ ನರವೇದನೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ವಯಸ್ಸಾಗುವಿಕೆಗೆ ಸಂಬಂಧಿಸಿದ ಇಂತಹ ಪ್ರಕರಣಗಳು ಹೆಚ್ಚುವುದಷ್ಟೇ ಅಲ್ಲದೆ, ಹಿರಿಯ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಸರ್ಪ ಸುತ್ತಿನ ಅನಂತರದ ನೋವಿನ ತೀವ್ರತೆ ಮತ್ತು ಅವಧಿಯೂ ಹೆಚ್ಚಾಗಿರುತ್ತದೆ. ಹದಿಹರೆಯದವರಿಗೂ ಸಹ ಸರ್ಪಸುತ್ತು ಮತ್ತು ಆ ಬಳಿಕದ ನರವೇದನೆ ಕಾಣಿಸಿಕೊಳ್ಳಬಹುದು ಆದರೆ ಅದು ಬಹಳ ಅಪರೂಪ. ಸರ್ಪಸುತ್ತು ಮತ್ತು ಆ ಬಳಿಕದ ನರವೇದನೆಯ ತೊಡಕನ್ನು ಹೆಚ್ಚಿಸುವ ಇನ್ನಿತರ ಅಪಾಯಗಳೆಂದರೆ ಒತ್ತೂತ್ತಾಗಿ ಕಾಣಿಸಿಕೊಳ್ಳುವ ಸರ್ಪಸುತ್ತಿನ ಗುಳ್ಳೆಗಳದ್ದು. ಅಧ್ಯಯನಗಳು ಹೇಳುವ ಪ್ರಕಾರ ಕಾಯಿಲೆಯ ಆರಂಭಿಕ ಹಂತದಲ್ಲಿ ಬಹಳ ನೋವು ಇದ್ದ ರೋಗಿಗಳಿಗೆ, ಸರ್ಪಸುತ್ತಿನ ಅನಂತರದ ನರವೇದನೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಗುಳ್ಳೆಗಳ ತೀವ್ರತೆ ಮತ್ತು ಆ ಅವಧಿಯಲ್ಲಿ ರೋಗಿಯನ್ನು ಬಾಧಿಸುವ ಮಾನಸಿಕ ಕಿರಿಕಿರಿಗಳೂ ಸಹ ಅಪಾಯಕಾರಿ ಅಂಶಗಳೇ ಆಗಿವೆ. ಇಷ್ಟು ಮಾತ್ರವಲ್ಲದೆ, ಸರ್ಪಸುತ್ತು ಬಾಧಿತನಾದ ರೋಗಿಯ ಹಣೆ ಮತ್ತು ಕಣ್ಣುಗಳೂ ಸಹ ರೋಗದ ಪ್ರಭಾವಕ್ಕೆ ಒಳಗಾಗುತ್ತವೆ, ಈ ಸ್ಥಿತಿಗೆ ಆಪ್‌ಥಾಲಿ¾ಕ್‌ ಸರ್ಪಸುತ್ತು ಎಂದು ಹೆಸರು. ಸರ್ಪಸುತ್ತಿನ ಅನಂತರ ನರವೇದನೆ ಕಾಣಿಸಿಕೊಂಡರೆ ಹೀಗಾಗುವ ಅಪಾಯ ಇನ್ನೂ ಹೆಚ್ಚು. ಸರ್ಪಸುತ್ತಿನ ನಂತರದ ನರವೇದನೆಯ ಲಕ್ಷಣಗಳು ಸರ್ಪಸುತ್ತು ಕಾಯಿಲೆಯು ದೇಹದ ಒಂದು ಬದಿಯಲ್ಲಿ ಪಟ್ಟಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. 

ಗುಳ್ಳೆಗಳು ಸಾಮಾನ್ಯವಾಗಿ ಎದೆಯ ಮೇಲೆ ಕಾಣಿಸಿಕೊಳ್ಳುತ್ತವೆ, ಆದರೆ ಈ ಗುಳ್ಳೆಗಳು ಹಣೆ, ಹೊಟ್ಟೆ ಅಥವಾ ದೇಹದ ಇನ್ನಾವುದೇ ಭಾಗದಲ್ಲಿಯಾದರೂ ಕಾಣಿಸಿಕೊಳ್ಳಬಹುದು. ಗುಳ್ಳೆಗಳು ಕಾಣಿಸಿಕೊಳ್ಳುವುದಕ್ಕೆ ಸ್ವಲ್ಪ$ ದಿನ ಮೊದಲು ಸರ್ಪಸುತ್ತಿಗೆ ಸಂಬಂಧಿಸಿದ ನೋವು ಕಾಣಿಸಿಕೊಳ್ಳುತ್ತದೆ. ಕ್ರಮೇಣ ನೀರಿನ ಗುಳ್ಳೆಗಳು ಗುಣವಾಗುತ್ತವೆ ಮತ್ತು ಹುರುಪೆಗಳು ಉದುರುತ್ತವೆ, ಆದರೆ ನೋವು ಹಾಗೆಯೇ ಮುಂದುವರಿಯಬಹುದು. ಸರ್ಪಸುತ್ತಿನ ಕಾಯಿಲೆಯ ಇನ್ನಿತರ  ಲಕ್ಷಣಗಳು ಅಂದರೆ (ಅದು ಕಾಣಿಸಿಕೊಂಡಿರುವ ಜಾಗವನ್ನು  ಆಧರಿಸಿಕೊಂಡು) ದುಗ್ಧ ಗ್ರಂಥಿಗಳ ಬಾವು, ದೃಷ್ಟಿಯ ಅಸಹಜತೆ, ರುಚಿಯ ಅಸಹಜತೆ, ಕಣ್ಣಿನ ರೆಪ್ಪೆಗಳು ಜೋತು ಬೀಳುವುದು, ಕಣ್ಣಿನ ಚಲನೆ ನಷ್ಟವಾಗುವುದು, ಶ್ರವಣ ಶಕ್ತಿ ಕಡಿಮೆಯಾಗುವುದು, ಸಂಧಿಗಳಲ್ಲಿ ನೋವು, ಜನನಾಂಗದಲ್ಲಿ  ರೋಗ ಲಕ್ಷಣಗಳು ಮತ್ತು  ಕಿಬ್ಬೊಟ್ಟೆಯಲ್ಲಿ ನೋವು. ಮುಖದ  ಮೇಲಿನ ಭಾಗದಲ್ಲಿ ರೋಗ  ಲಕ್ಷಣಗಳು ಕಾಣಿಸಿಕೊಂಡರೆ  (ವಿಶೇಷವಾಗಿ ಮೂಗಿನ  ತುದಿಯಲ್ಲಿ) ಅದು ಕಾಯಿಲೆಯು  ಕಣ್ಣು ಮತ್ತು ಚರ್ಮವನ್ನು  ಆವರಿಸಿರುವ ಸೂಚನೆಯಾಗಿರುತ್ತದೆ.  

ಇಂತಹ ರೋಗ ಸ್ಥಿತಿಯು  ದೀರ್ಘ‌ಕಾಲಿಕ ಉರಿಯೂತ  ಮತ್ತು ದೃಷ್ಟಿ ಹಾನಿಯಂತಹ  ಅಪಾಯಗಳನ್ನು ತರಬಹುದು. ಒಂದು ವೇಳೆ ಈ ಲಕ್ಷಣಗಳು  ಕಂಡು ಬಂದರೆ ಆ ಕೂಡಲೆ ಕಣ್ಣಿನ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು.  ಸರ್ಪಸುತ್ತಿನ ಆರಂಭಿಕ ಹಂತದಲ್ಲಿ ತಲೆನೋವು, ವಾಕರಿಕೆ, ಜ್ವರ ಮತ್ತು ಚಳಿ ಇತ್ಯಾದಿ ಸಾಮಾನ್ಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಮಾತ್ರವಲ್ಲದೆ, ದೇಹ ಅಥವಾ ಮುಖದ ಒಂದು ಭಾಗದಲ್ಲಿ  ನೋವು, ಉರಿ, ತುರಿಕೆ ಅಥವಾ ಜುಮುಗುಡುವಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಆರಂಭಿ ಕ ಲಕ್ಷಣಗಳು ಇನ್ನಿತರ ಕಾಯಿಲೆಗಳ ಲಕ್ಷಣಗಳಂತೆಯೇ ಇರುವ ಕಾರಣಕ್ಕಾಗಿ ಸರ್ಪಸುತ್ತು ಕಾಯಿಲೆಯು ಕೆಲವು ಸಲ ತಪ್ಪು ತಪಾಸಣೆಯಾಗುವುದಿದೆ. ಕೆಲವು ವೈದ್ಯರುಗಳಿಗೆ ಸರ್ಪಸುತ್ತು ಮತ್ತು ಇತರ ಕಾಯಿಲೆಗಳ ವ್ಯತ್ಯಾಸ ತಿಳಿಯುವುದಿಲ್ಲ ಅಥವಾ ಗೊಂದಲವಾಗುವುದಿದೆ. ಅಂದರೆ ಫ‌ೂ ಜ್ವರದ ಆರಂಭಿಕ ಹಂತದ ಲಕ್ಷಣಗಳು ಹೀಗೆಯೇ ಇರುವ ಕಾರಣ ಗೊಂದಲಕ್ಕೆ ಅದೂ ಒಂದು ಕಾರಣ ಎಂದು ಹೇಳಬಹುದು.

ಸರ್ಪಸುತ್ತಿಗೆ ವಿಶೇಷವಾಗಿ ಈ ಆರಂಭಿಕ ಹಂತದಲ್ಲಿ ಚಿಕಿತ್ಸೆ ನೀಡುವುದು ಅತ್ಯಾವಶ್ಯಕ. ಯಾಕೆಂದರೆ ಈ ಹಂತದಲ್ಲಿ ಸರ್ಪಸುತ್ತಿಗೆ ಚಿಕಿತ್ಸೆ ನೀಡದಿದ್ದರೆ, ಆ ಬಳಿಕ ಸರ್ಪಸುತ್ತಿನ ಅನಂತರದ ನರವೇದನೆ ಕಾಣಿಸಿಕೊಳ್ಳುವ ಅಪಾಯ ಸಾಧ್ಯತೆ ಹೆಚ್ಚು. ಸರ್ಪಸುತ್ತಿಗೆ ಸಂಬಂಧಿಸಿದ ನೋವು ಸಾಮಾನ್ಯವಾಗಿ ಮರೆಯಾಗುತ್ತದೆ. ಆದರೆ ಗುರುತಿಸಲಾಗಿರುವಂತೆ, ಅನೇಕ ಹಿರಿಯ ವಯಸ್ಸಿನ ರೋಗಿಗಳಲ್ಲಿ  ನೋವು ದೀರ್ಘ‌ಕಾಲಿಕವಾಗಿರುತ್ತದೆ ಮತ್ತು ಇದು ಅನಂತರದ ನರವ್ಯಾಧಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ರೋಗಿಗಳಿಗೆ ಈ ದೀರ್ಘ‌ಕಾಲಿಕ ನೋವು ಕ್ರಮೇಣ ಸರಿಹೋಗುತ್ತದೆ. ಆದರೆ ಕೆಲವರಿಗೆ ಹಾಗಾಗದೆ ನೋವು ದೀರ್ಘ‌ಕಾಲಿಕವಾಗಬಹುದು. ಸರ್ಪಸುತ್ತಿನ ಅನಂತರದ ನೋವು, ಸರ್ಪಸುತ್ತು ಆಗಿದ್ದ  ಅದೇ ಜಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ, ಈ ಭಾಗದ ಚರ್ಮದ ಸಂವೇದನಾಶೀಲತೆ ಸಹಜವಾಗಿರಬಹುದು, ಕಡಿಮೆ ಸಂವೇದನಾಶೀಲತೆ ಇರಬಹುದು ಅಥವಾ ಸಂವೇದನಾಶೀಲತೆ ಹೆಚ್ಚಾಗಬಹುದು. ನೋವು ಹೆಚ್ಚು, ಕಡಿಮೆಯಾಗುತ್ತಾ ಮುಂದುವರಿಯಬಹುದು ಅಥವಾ ಸೆಳೆತದ ರೂಪದಲ್ಲಿ ಕಾಣಿಸಿಕೊಳ್ಳಬಹುದು.

ನೋವಿನ ವಿಧಗಳಲ್ಲೂ ವೈವಿಧ್ಯತೆ ಇರುತ್ತದೆ ಅಂದರೆ: ನಿರಂತರವಾಗಿ ಬಾಧಿಸುವ ನೋವು ಉರಿಯುವಂತೆ, ಮಿಡಿಯುವಂತೆ, ಜುಮುಗುಡುವಂತೆ, ಇರಿಯುವಂತೆ, ಚುಚ್ಚುವಂತೆ, ತಿವಿಯುವಂತೆ, ತೀಕ್ಷ್ಣವಾಗಿ ಅಥವಾ ಯಾತನಾಮಯವಾಗಿರಬಹುದು. ನೋವು ಇರುವ ಜಾಗದಲ್ಲಿ ತೀವ್ರ ತುರಿಕೆಯೂ ಇರಬಹುದು. ಚರ್ಮವನ್ನು ಮುಟ್ಟಿದಾಗ ಅಥವಾ ಉಷ್ಣತೆಯಲ್ಲಿ ಬದಲಾವಣೆಗಳಾದಾಗ ನೋವು ಕಾಣಿಸಿಕೊಳ್ಳಬಹುದು. ಪ್ರಚೋದನೆಗಳಿಂದ ಹುಟ್ಟಿಕೊಳ್ಳುವ ನೋವು ಹೆಚ್ಚು ಬಾಧೆ ಕೊಡುವುದಿಲ್ಲ, ಈ ನೋವಿಗೆ ಅಲ್ಲೋಡಿನಿಯಾ ಎಂದು ಹೆಸರು. ಕೆಲವು ರೋಗಿಗಳಿಗೆ ಸ್ಪರ್ಧಿಸದೆಯೇ ತೀವ್ರ ಸಂವೇದನಾ ನಷ್ಟ ಕಾಣಿಸಿಕೊಳ್ಳಬಹುದು – ಇದು ಇವೋಕ್ಡ್ ಅಲ್ಲೋಡಿನಿಯಾ. ಇನ್ನು ಕೆಲವು ರೋಗಿಗಳಿಗೆ ತೀವ್ರ ನೋವು ಮತ್ತು ಅಲ್ಲೋಡಿನಿಯಾ ಇದ್ದರೂ ಸ್ವಲ್ಪವೇ ಸಂವೇದನೆ ನಷ್ಟವಾಗಬಹುದು ಅಥವಾ ಸಂವೇದನೆ ನಷ್ಟವಿಲ್ಲದಿರಬಹುದು. ಕೆಲವು ಸಲ ಸರ್ಪಸುತ್ತು ಕಾಣಿಸಿಕೊಂಡ ಆರಂಭಿಕ ಜಾಗಕ್ಕಿಂತಲೂ ನೋವು ವಿಸ್ತಾರವಾಗಿ ಹರಡಬಹುದು. ಸರ್ಪಸುತ್ತಿನ ಅನಂತರದ ನರವೇದನೆ ಕಾಣಿಸಿಕೊಂಡ ಜನರು ತೀವ್ರ ನೋವಿನ ಕಾರಣದಿಂದಾಗಿ ಖನ್ನತೆಗೆ ಒಳಗಾಗುತ್ತಾರೆ, ಆತಂಕಕ್ಕೊಳಗಾಗುತ್ತಾರೆ, ಅನಾಸಕ್ತರಾಗುತ್ತಾರೆ ಮತ್ತು ಅವರಿಗೆ ನಿದ್ರಿಸಲು ಕಷ್ಟವಾಗುತ್ತದೆ. ಒಂದುವೇಳೆ ರೋಗಿಯು ಈ ಭಾವನಾತ್ಮಕ ವ್ಯತ್ಯಾಸಗಳನ್ನು ಮತ್ತು ನಿದ್ದೆಯಲ್ಲಿನ ವ್ಯತ್ಯಾಸಗಳನ್ನು ವರದಿ ಮಾಡಿದರೆ ರೋಗಿಗೆ ಉಪಶಮನ ದೊರಕಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬಹುದು. ಯಾಕೆಂದರೆ ದೀರ್ಘ‌ಕಾಲಿಕ ನೋವು ಹೆಚ್ಚಾಗಿ ನಿದ್ದೆಯ ನಷ್ಟ, ನಿದ್ರಾಹೀನತೆಗಳನ್ನು ಉಂಟು ಮಾಡಬಹುದು. ಇದರಿಂದಾಗಿ ವ್ಯಕ್ತಿಗೆ ದೈನಂದಿನ ಸರಳ ಕೆಲಸಗಳನ್ನು ಪೂರೈಸಿಕೊಳ್ಳಲೂ ಸಹ ಕಷ್ಟವಾಗುತ್ತದೆ.

ತಪಾಸಣೆ
ಸರ್ಪಸುತ್ತಿನ ಅನಂತರದ ನರವೇದನೆಯ ತಪಾಸಣೆ ಬಹಳ ಸರಳವಾದುದು. ಸರ್ಪಸುತ್ತಿನ ಗುಳ್ಳೆಗಳು ಕಾಣಿಸಿಕೊಂಡ ಜಾಗದಲ್ಲಿ ರೋಗಿಗೆ ದೀರ್ಘ‌ಕಾಲಿಕ ನೋವು ಕಾಣಿಸಿಕೊಂಡರೆ ಅದು ಹರ್ಪಿಸ್‌ ಅನಂತರದ ನರವೇದನೆಯಾಗಿರುತ್ತದೆ. ಹರ್ಪಿಸ್‌ ಅನಂತರದ ನರವೇದನೆ ಕಾಣಿಸಿಕೊಳ್ಳುವ ಸ್ಥಳವು ಸರ್ಪಸುತ್ತಿನ ಗುಳ್ಳೆಗಳು ಕಾಣಿಸಿಕೊಂಡಿದ್ದ ಜಾಗಕ್ಕಿಂತ ಸಣ್ಣಕಿರಬಹುದು ಅಥವಾ ಅದಕ್ಕಿಂತ ಕೆಲವು ಇಂಚುಗಳಷ್ಟು ಹೆಚ್ಚು ವಿಸ್ತಾರವಾಗಿ ಹರಡಬಹುದು. ಬೇರೆ ಯಾವುದೋ ಕಾರಣಗಳಿಂದ ನೋವು ಬಾಧಿಸುತ್ತಿಲ್ಲ ಎಂಬುದನ್ನು ಖಚಿತ ಪಡಿಸಿ ಕೊಳ್ಳಲು ವೈದ್ಯರು ನೋವಿನ ಕಾರಣವನ್ನು ಸರಿಯಾಗಿ ವಿಶ್ಲೇಷಿಸಬೇಕಾಗುವುದು. ವೈರಸ್‌-ನಿರೋಧಕ ಚಿಕಿತ್ಸೆಯು ಕಾಯಿಲೆಯ ಅವಧಿ ಮತ್ತು ಸರ್ಪಸುತ್ತಿನ ಅನಂತರದ ನರವೇದನೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎನ್ನುವುದಕ್ಕೆ ಬಲವಾದ ಆಧಾರಗಳಿವೆ. ಒಂದು ಅಧ್ಯಯನದ ಪ್ರಕಾರ ಕಡಿಮೆ-ಪ್ರಮಾಣದ ಟ್ರೆ„ಸೈಕ್ಲಿಕ್‌ ಆಂಟಿಡಿಪ್ರಸೆಂಟ್‌ಗಳನ್ನು  (ಅಮಿಟ್ರಿಪಾrಲೈನ್‌ ಅಥವಾ ನಾರ್‌ ಟ್ರಿಪ್ಟಿಲೈನ್‌) ತೀವ್ರ ಸರ್ಪಸುತ್ತಿನ ತಪಾಸಣೆಯ ಸಮಯದಲ್ಲಿ  ಕೊಡುವುದರಿಂದ ಹರ್ಪಿಸ್‌ಅನಂತರದ ನರವೇದನೆಯನ್ನು ಶೇಕಡಾ 50ರಷ್ಟು ಕಡಿಮೆ ಮಾಡಿಕೊಳ್ಳಬಹುದು. 

ಸರ್ಪಸುತ್ತಿನ ನಂತರದ ನರವೇದನೆ  ಶಿಫಾರಸುಗಳು
1. ಚಿಕಿತ್ಸೆಯನ್ನು ಆದಷ್ಟು ಶೀಘ್ರವಾಗಿ ಆರಂಭಿಸಿ.
2. ಕಾಯಿಲೆಯನ್ನು ಸರಿಯಾಗಿ ನಿಭಾಯಿಸಲು, ಮನಸ್ಸು , ನಿದ್ರೆಯ ಕಿರಿಕಿರಿಗಳನ್ನು ತಪ್ಪಿಸಲು ಮನಸ್ಸು ಮತ್ತು ದೇಹಗಳ ನಿರ್ವಹಣಾ ಕೌಶಲಗಳನ್ನು ಅಳವಡಿಸಿಕೊಳ್ಳಿ.
3. ಹದದಿಂದ ಸಾಧಾರಣ ನೋವು ಇದ್ದರೆ ಹಚ್ಚುವಂತಹ ಮುಲಾಮು ಇತ್ಯಾದಿಗಳನ್ನು ಮತ್ತು ದೈಹಿಕ ನೋವು ಉಪಶಮನಕಾರಿಗಳನ್ನು ಉಪಯೋಗಿಸ ಬಹುದು ಅಂದರೆ ಲಿಡೋಕೈನ್‌ ಪ್ಯಾಚ್‌ ಟೆನ್ಸ್‌ ಅಥವಾ ಕ್ಯಾಪ್ಸೆಸಿನ್‌ ಕ್ರೀಂ ಇತ್ಯಾದಿಗಳನ್ನು ಉಪಯೋಗಿಸಬಹುದು. ನೋವು ಮತ್ತೆ ಮತ್ತೆ ಮರುಕಳಿಸಿದರೆ ಹೆಚ್ಚುವರಿಯಾಗಿ ನಾರ್‌ಟ್ರಿಪ್ಟಿಲೈನ್‌ನಂತಹ ಆಂಟಿಡಿಪ್ರಸೆಂಟ್‌. ಔಷಧಿ ಅಥವಾ ಗಾಬಾಪೆಂಟೀನ್‌ನಂತಹ ಆಂಟಿಕನ್ಸಲ್ಟೆಂಟ್‌ಗಳನ್ನು ಪ್ರಯತ್ನಿಸಬಹುದು.
4. ನೋವು ಬಹಳ ತೀವ್ರವಾಗಿದ್ದರೆ, ಲಿಡೋಕೈನ್‌ ಪ್ಯಾಚ್‌ ಜತೆಗೆ ಆಂಟಿಡಿಪ್ರಸೆಂಟ್‌ ಅಥವಾ ಆಂಟಿಕನ್ಸಲ್ಟೆಂಟ್‌ಗಳನ್ನು ಆರಂಭಿಸಬೇಕು. ಓಪಿಯಾಯ್ಡ ಅನ್ನು ಸಹ ಪರಿಗಣಿಸಬಹುದು. ಒಂದು ವೇಳೆ ನೋವು ಕಡಿಮೆಯಾಗದಿದ್ದರೆ, ಓಪಿಯಾಯ್ಡ ಸೇರಿದಂತೆ (ಸೂಕ್ತ ಪ್ರಮಾಣದಲ್ಲಿ) ಇನ್ನಿತರ ಸೂಕ್ತ ಔಷಧಿಗಳನ್ನು  ಪರಿಗಣಿಸಬಹುದು.

ನರವೇದನೆ
ಸಮಗ್ರ ನೋವಿನ ಚಿಕಿತ್ಸೆ  ಸರ್ಪಸುತ್ತಿನ ಅನಂತರದ ನರವೇದನೆಯ ಚಿಕಿತ್ಸೆಯ ಪ್ರಾಥಮಿಕ ಉದ್ದೇಶ ಅಂದರೆ ನೋವಿನಿಂದ ಉಪಶಮನ ಪಡೆಯುವುದು ಮತ್ತು ಜೀವನ ಮಟ್ಟವನ್ನು ಸುಧಾರಿಸುವುದು. ಸರ್ಪಸುತ್ತಿನ ಅನಂತರದ ವಿಶೇಷ ನರವೇದನೆ ಇರುವ ರೋಗಿಗಳಿಗೆ, ಟ್ರೆ„ಸೈಕ್ಲಿಕ್‌ ಆಂಟಿಡಿಪ್ರಸೆಂಟ್ಸ್‌, ಟಾಪಿಕಲ್‌ ಲಿಡೋಕೈನ್‌ ಪ್ಯಾಚಸ್‌, ಟಾಪಿಕಲ್‌ ಕ್ಯಾಪ್ಸೆ„ಸಿನ್‌ 0.075%, ಗಾಬಾಪೆಂಟೀನ್‌ (ಒಂದು ಆಂಟಿ ಕನ್‌ವಲ್ಸೆಂಟ್‌) ಮತ್ತು ನಿಯಂತ್ರಿತ ಬಿಡುಗಡೆಯ ಆಕ್ಸಿಕೊಡೋನ್‌ (ಒಂದು ಓಪಿಯಾಯ್ಡ) ಚಿಕಿತ್ಸೆಯು ಪರಿಣಾಮಕಾರಿಯಾಗಿರುವುದು ಕ್ಲಿನಿಕಲ್‌ ಟ್ರಯಲ್‌ಗ‌ಳಿಂದ ಸಾಬೀತಾಗಿದೆ. ಈ ಚಿಕಿತ್ಸೆಗಳ ಪರಿಣಾಮಕಾರಿ ಪುರಾವೆಗಳಿಂದಾಗಿ, ಇನ್ನಿತರ ಅನೇಕ ಔಷಧಿಗಳನ್ನು ಪರಿಗಣಿಸಲು ನೋವು ನಿಭಾವಣಾ ತಜ್ಞರಿಗೆ (ಪೇನ್‌ ಸ್ಪೆಷಲಿಸ್ಟ್‌) ಸಹಾಯಕವಾಗಿವೆ (ಇನ್ನಿತರ ಅನಾಲೆjಸಿಕ್‌ ಆಂಟಿಡಿಪ್ರಸೆಂಟ್‌ಗಳು, ಅನಾಲೆjಸಿಕ್‌ ಆಂಟಿಕನ್‌ ವಲ್ಸೆಂಟ್‌ಗಳು, ಓಪಿಯಾಯ್ಡ ಗಳು ಮತ್ತು ಸಂಬಂಧಿಸಿರದ ಔಷಧಿಗಳು). ಒಂದು ಔಷಧಿಯನ್ನು ಪ್ರಯತ್ನಿಸಿದ ಸುಮಾರು ಮೂರನೇ ಒಂದು ಭಾಗದಿಂದ ಎರಡನೇ ಒಂದು ಭಾಗದಷ್ಟು ರೋಗಿಗಳಿಗೆ ಸುಮಾರು 50% ನಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೋವಿನಿಂದ ಉಪಶಮನವನ್ನು ಒದಗಿಸಬಹುದು ಎಂಬುದು ವೈಜ್ಞಾನಿಕ ಅಧ್ಯಯನಗಳಅಭಿಪ್ರಾಯ. ಸರ್ಪಸುತ್ತಿನ ಚಿಕಿತ್ಸೆಯಲ್ಲಿ ಕೇವಲ 10% ನಷ್ಟು ರೋಗಿಗಳಿಗೆ ಮಾತ್ರವೇ ನೋವಿನಿಂದ ಸಂಪೂರ್ಣ ಉಪಶಮನ ದೊರಕುವ ಕಾರಣದಿಂದ, ಸರ್ಪಸುತ್ತಿನ ಅನಂತರದ ನರವೇದನೆಗೆ ಬಹು ಚಿಕಿತ್ಸಾ ಕ್ರಮಗಳು ಆವಶ್ಯಕವೆನಿಸಿವೆ. ಈ ಚಿಕಿತ್ಸೆಗಳ ವಿರುದ್ಧ ಪರಿಣಾಮಗಳು ಅಥವಾ ವೆಚ್ಚಗಳನ್ನು ವೈಯಕ್ತಿಕ ನೆಲೆಯಲ್ಲಿ  ಪರಿಗಣಿಸಬೇಕಾಗುತ್ತದೆ.

– ಡಾ| ಶಿವಾನಂದ ಪೈ,   
ಅಸೋಸಿಯೇಟ್‌ ಪ್ರೊಫೆಸರ್, ನರರೋಗಗಳ ಚಿಕಿತ್ಸಾ  ವಿಭಾಗ,
ಕೆ.ಎಂ.ಸಿ., ಅಂಬೇಡ್ಕರ್‌ ವೃತ್ತ, ಮಂಗಳೂರು

ಟಾಪ್ ನ್ಯೂಸ್

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.