ಪ್ರಸವಾನಂತರದ ಮಾನಸಿಕ ಖನ್ನತೆ

ಕಾಯಿಲೆಯ ಬಗೆಗಿನ ಅಪನಂಬಿಕೆಗಳು ಮತ್ತು ಪರಿಹಾರಗಳು

Team Udayavani, Dec 22, 2019, 4:59 AM IST

cd-14

ಮೊನ್ನೆ ಕ್ಲಿನಿಕ್‌ಗೆ ಬಂದ ರೋಗಿಯ ಪೋಷಕರೋರ್ವರು ತನ್ನ ಮಗಳ ಸಮಸ್ಯೆಯ ಬಗ್ಗೆ ಹೇಳುತ್ತಿದ್ದರು. “ಡಾಕ್ಟರೇ ಹೋದ ವಾರದ ತನಕ ಚೆನ್ನಾಗಿದ್ದ ನನ್ನ ಮಗಳು ಪ್ರಸವದ ಅನಂತರ ಒಂಥರಾ ಮಾಡುತ್ತಿದ್ದಾಳೆ. ಅದೇನೋ ಒಬ್ಬಳೇ ಅಳ್ತಾಳೆ, ಯಾವುದೂ ಬೇಡ ಅಂತಾಳೆ, ಮಗುವನ್ನು ಕಣ್ಣೆತ್ತಿ ಕೂಡ ನೋಡ್ತಾ ಇಲ್ಲ. ಸರಿಯಾಗಿ ನಿದ್ದೆ ಆಗಲಿ ಅಥವಾ ಊಟ ಆಗಲಿ ಮಾಡ್ತಾ ಇಲ್ಲ. ಒಂಚೂರೂ ನೋಡಿ ಡಾಕ್ಟ್ರೇ’

ಪ್ರಸವಾನಂತರದ ಮಾನಸಿಕ ಖನ್ನತೆಯು ಮಗುವನ್ನು ಹೆತ್ತ ಬಳಿಕ ಮಹಿಳೆಯರನ್ನು ಕಾಡಬಲ್ಲ ಒಂದು ಭಾವನಾತ್ಮಕ ಸಮಸ್ಯೆ. ಭಾರತದಲ್ಲಿ ಶೇ.22ರಷ್ಟು ಚೊಚ್ಚಲ ತಾಯಂದಿರು ಈ ಸಮಸ್ಯೆಯಿಂದ ಬಳಲುತ್ತಾರೆ. ಮಗುವನ್ನು ಹೆತ್ತ ಬಳಿಕ ಶೇ.60ರಿಂದ 80ರಷ್ಟು ಮಹಿಳೆಯರು ಚಿಂತೆ, ಅಸಂತೋಷ, ದಣಿವು ಇತ್ಯಾದಿಗಳನ್ನು ಅನುಭವಿಸುತ್ತಾರೆ; ಇದು ಒಂದೆರಡು ವಾರಗಳ ಕಾಲ ಇದ್ದು ಆ ಬಳಿಕ ತಂತಾನೆ ಮಾಯವಾಗುತ್ತದೆ. ಆದರೆ ಪ್ರಸವಾನಂತರದ ಖನ್ನತೆಯಿಂದ ಬಳಲುವ ತಾಯಂದಿರು ತೀವ್ರ ದುಃಖ, ಆತಂಕ, ಉದ್ವಿಗ್ನತೆ ಮತ್ತು ಕಂಗಾಲುತನದಂತಹ ಸಮಸ್ಯೆಗಳಿಂದ ಬಳಲುತ್ತಿದ್ದು, ತನ್ನ ಅಥವಾ ಇತರರಿಗಾಗಿನ ದೈನಿಕ ಚಟುವಟಿಕೆಗಳನ್ನು ನಡೆಸುವಲ್ಲಿ ತೊಂದರೆ ಎದುರಿಸುತ್ತಾರೆ. ಇದು ಹಲವು ಅಂಶಗಳಿಂದಾಗಿ ಉಂಟಾಗುವ ಸಂಕೀರ್ಣ ಸಮಸ್ಯೆ. ಪ್ರಸವಾನಂತರದ ಖನ್ನತೆಯು ಏಕ ಕಾರಣದಿಂದ ಉಂಟಾಗುವ ತೊಂದರೆಯಲ್ಲ; ದೈಹಿಕ ಮತ್ತು ಮಾನಸಿಕವಾದ ಹಲವು ಅಂಶಗಳ ಒಟ್ಟಾರೆ ಫ‌ಲವಾಗಿರುವ ಸಾಧ್ಯತೆಯೇ ಅಧಿಕ.

ಪ್ರಸವಾನಂತರದ ಮಾನಸಿಕ ಖನ್ನತೆ: ಕಾರಣಗಳೇನು?
ಮಗುವನ್ನು ಹೆತ್ತ ಬಳಿಕ ಮಹಿಳೆಯ ದೇಹದಲ್ಲಿ ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟರಾನ್‌ ಹಾರ್ಮೋನ್‌ಗಳ ಪ್ರಮಾಣವು ಹಠಾತ್ತಾಗಿ ಕುಸಿತ ಕಾಣುತ್ತದೆ. ಇದರಿಂದಾಗಿ ಆಕೆಯ ಮಿದುಳಿನಲ್ಲಿ ರಾಸಾಯನಿಕ ಪ್ರತಿಸ್ಪಂದನಗಳು ಉಂಟಾಗುತ್ತವೆ ಮತ್ತು ಇದರ ಪರಿಣಾಮವಾಗಿ ಭಾವನಾತ್ಮಕ ಏರುಪೇರುಗಳು ಕಾಣಿಸಿಕೊಳ್ಳುತ್ತವೆ. ಇದಲ್ಲದೆ, ಅನೇಕ ಮಹಿಳೆಯರಿಗೆ ಪ್ರಸವದ ಬಳಿಕ ಚೇತರಿಸಿಕೊಳ್ಳುವುದಕ್ಕೆ ಅತ್ಯಗತ್ಯವಾಗಿರುವ ಸಂಪೂರ್ಣ ವಿಶ್ರಾಂತಿ ಲಭ್ಯವಾಗುವುದಿಲ್ಲ. ಮಗುವಿನ ಆರೈಕೆಯ ಕಾರಣ ಅಥವಾ ಇನ್ನಾéವುದೋ ಕಾರಣಗಳಿಂದ ಸತತ ನಿದ್ರಾಭಂಗ ಉಂಟಾಗುವುದರಿಂದ ದೈಹಿಕ ದಣಿವು ಮತ್ತು ಕಂಗಾಲುತನ ಆಕೆಯನ್ನು ಕಾಡುತ್ತವೆ. ಇವುಗಳು ಕೂಡ ಪ್ರಸವಾನಂತರದ ಮಾನಸಿಕ ಖನ್ನತೆಯುಂಟಾಗುವುದಕ್ಕೆ ಕೊಡುಗೆ ನೀಡುತ್ತವೆ.

ಭಾವನಾತ್ಮಕ/ ಒತ್ತಡಯುಕ್ತ ಘಟನೆಗಳಿಂದ ಅಥವಾ ದೈಹಿಕವಾಗಿ ಉಂಟಾಗುವ ಬದಲಾವಣೆಯಿಂದ ಮಿದುಳಿನ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಕಾಣಿಸಿಕೊಳ್ಳುವ ಅಸಮತೋಲನ ಯಾ ಇವೆರಡರಿಂದಲೂ ಖನ್ನತೆಯು ಉಂಟಾಗಬಹುದು.

ಪ್ರಸವಾನಂತರದ ಮಾನಸಿಕ ಖನ್ನತೆ:
ಮಹಿಳೆ ಅನುಭವಿಸುವ ಸಾಮಾನ್ಯವಾದ ಲಕ್ಷಣಗಳಾವುವು?
 ದುಃಖ, ಹತಾಶೆ, ಶೂನ್ಯ ಅಥವಾ ಸಂತೋಷದ ಅನುಭವ
 ಸಾಮಾನ್ಯವಾದ್ದಕ್ಕಿಂತ ಹೆಚ್ಚು ಅಥವಾ ಯಾವುದೇ ನಿರ್ದಿಷ್ಟ ಕಾರಣ ಇಲ್ಲದೆ ಅಳುವುದು
 ವಿನಾಕಾರಣ ದುಗುಡ ಅಥವಾ ಅತಿಯಾದ ಉದ್ವಿಗ್ನತೆ
 ಭಾವನಾತ್ಮಕ ಏರುಪೇರು, ಕಿರಿಕಿರಿಯಾಗುವುದು, ಚಡಪಡಿಕೆ
 ಅತಿಯಾದ ನಿದ್ದೆ ಅಥವಾ ಮಗು ನಿದ್ರಿಸಿದ್ದಾಗಲೂ ನಿದ್ದೆ ಮಾಡುವುದಕ್ಕೆ ಆಗದೆ ಇರುವುದು
 ಏಕಾಗ್ರತೆಯ ಕೊರತೆ, ವಿವರಗಳನ್ನು ನೆನಪಿರಿಸಿಕೊಳ್ಳುವುದಕ್ಕೆ, ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಕಷ್ಟವಾಗುವುದು
 ಸಾಮಾನ್ಯವಾಗಿ ಸಂತೋಷ ತರುವ ಚಟುವಟಿಕೆಗಳನ್ನು ನಡೆಸುವ ಆಸಕ್ತಿಯನ್ನು ಕಳೆದುಕೊಳ್ಳುವುದು
 ಆಗಾಗ ತಲೆನೋವು, ಹೊಟ್ಟೆಯ ಸಮಸ್ಯೆಗಳು ಮತ್ತು ಸ್ನಾಯು ನೋವು ಸಹಿತ ದೈಹಿಕವಾದ ನೋವು, ಬೇನೆಗಳನ್ನು ಅನುಭವಿಸುವುದು
 ಅತಿಯಾಗಿ ತಿನ್ನುವುದು ಅಥವಾ ಏನೂ ತಿನ್ನದೆ ಇರುವುದು
 ಕುಟುಂಬ ಮತ್ತು ಗೆಳೆಯ ಗೆಳತಿಯರಿಂದ ದೂರ ಇರುವುದು
 ಮಗುವಿನ ಜತೆಗೆ ಆಪ್ತತೆ, ಬಂಧವನ್ನು ಬೆಸೆದುಕೊಳ್ಳುವಲ್ಲಿ ಹಿಂದೆ ಬೀಳುವುದು
 ಮಗುವನ್ನು ನೋಡಿಕೊಳ್ಳುವುದಕ್ಕೆ, ಲಾಲನೆ ಪಾಲನೆ ಮಾಡುವುದಕ್ಕೆ ತನ್ನಿಂದ ಸಾಧ್ಯವೇ ಎಂಬ ಅನುಮಾನ
 ತನಗೆ ಅಥವಾ ಮಗುವಿಗೆ ಹಾನಿ ಉಂಟು ಮಾಡುವ ಆಲೋಚನೆಗಳು

ಡಾ| ಸೋನಿಯಾ ಶೆಣೈ,
ಅಸಿಸ್ಟೆಂಟ್‌ ಪ್ರೊಫೆಸರ್‌, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಣಿಪಾಲ

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.