ಮಾನಸಿಕ ಪುನಶ್ಚೇತನ ಕೇಂದ್ರ
Team Udayavani, Oct 1, 2017, 6:50 AM IST
ಅಂದು ಫಾಲೋ-ಅಪ್ ಗೆ ಬಂದ ಪೋಷಕರೊಬ್ಬರು ಮನೋರೋಗದಿಂದ ಬಳಲಿದ್ದ ತನ್ನ ಮಗನಿಗೆ ಮಾನಸಿಕ ಪುನಶ್ಚೇತನ ಕೇಂದ್ರದಿಂದಾದ ಸಹಾಯದ ಬಗ್ಗೆ ಧನ್ಯತಾ ಭಾವದಿಂದ ಹೇಳುತ್ತಿದ್ದರು. ಒಂದು ಕಾಲದಲ್ಲಿ ಮಾನಸಿಕ ಕಾಯಿಲೆಯಿಂದ ಮನೆಮಂದಿಗೆಲ್ಲ ತಲೆನೋವಾಗಿದ್ದ ತನ್ನ ಮಗ ಇಂದು ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುವುದು ಮಾತ್ರವಲ್ಲದೆ ಸಣ್ಣ ಪ್ರಮಾಣದ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವುದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.
ಇದು ಕೇವಲ ಅವರೊಬ್ಬರ ಕತೆಯಲ್ಲ. ಇಂದು ಮಾನಸಿಕ ಪುನಶ್ಚೇತನ ಕೇಂದ್ರಗಳು ಅನೇಕ ರೋಗಿಗಳಿಗೆ ಹಾಗೂ ಅವರ ಪೋಷಕರ ಪಾಲಿನ ಆಶಾಕಿರಣವಾಗಿದೆ.
ಒಬ್ಬ ವ್ಯಕ್ತಿ ನೆಮ್ಮದಿ ಸುಖದಿಂದ ಜೀವನ ನಡೆಸಲು ದೈಹಿಕ ಆರೋಗ್ಯವು ಎಷ್ಟು ಮುಖ್ಯವೋ ಸಮಗ್ರ ಯೋಗಕ್ಷೇಮಕ್ಕೆ ಮಾನಸಿಕ ಆರೋಗ್ಯವು ಬಹಳ ಮುಖ್ಯ. ಮಾನಸಿಕ ಕಾಯಿಲೆ ಅಂದ ಕೂಡಲೇ ಮನಸ್ಸಿಗೆ ಬರುವುದು ಅ ಕೆದರಿದ ಗಡ್ಡ, ಅವರಲ್ಲಿನ ಅಶುಚಿತ್ವತೆ, ಅಸಹಜ ಆಲೋಚನೆ, ಅವರಲ್ಲಿನ ಭಾವನೆಯ ಸಮಸ್ಯೆ ಹಾಗೂ ಅವರ ವಿಚಿತ್ರ ವರ್ತನೆಯ ಚಿತ್ರಣ.
ಮಾನಸಿಕ ಪುನಶ್ಚೇತನ ಕೇಂದ್ರದ ಆವಶ್ಯಕತೆಯೇನು
ದೀರ್ಘ ಕಾಲದ ಮಾನಸಿಕ ಕಾಯಿಲೆಗಳಾದ ಚಿತ್ತವಿಕಲತೆ (schizophrenia). ಉನ್ಮಾದ – ವಿಷಾದ (Bipolar Affective disorder) ಕಾಯಿಲೆಯಂತಹುಗಳು ರೋಗಿಯ ವಿವಿಧ ಆಯಾಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಅದು ಆತನ ದೈನಂದಿನ ಜೀವನದ ಮೇಲೆ ತಾನು ಮಾಡುವ ವೃತ್ತಿಯ ಮೇಲೆ ಅಥವಾ ಆತನ ಸಾಮಾಜಿಕ ಜೀವನದ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಸಾಮಾನ್ಯವಾಗಿ ತೀವ್ರ ಅಥವಾ ದೀರ್ಘ ಕಾಲದ ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಇತರರ ಮೇಲೆ ಅವಲಂಭಿತರಾಗಿರುತ್ತಾರೆ ಹಾಗೂ ಅವರ ದಿನನಿತ್ಯದ ಕೆಲಸಗಳಿಗೆ ಇತರರ ಸಹಾಯ ಬೇಕಾಗುತ್ತದೆ. ಇಂತಹ ರೋಗಿಗಳಿಗೆ ಕೇವಲ ಮದ್ದು ಅಥವಾ ಮಾತ್ರೆಗಳಲ್ಲದೆ ಇವರ ದೈನಂದಿನ ಜೀವನದ ಕೌಶಲಗಳನ್ನು ಹೆಚ್ಚಿಸಲು ಮಾನಸಿಕ ಪುನಶ್ಚೇತನ ಕೇಂದ್ರದ ಆವಶ್ಯಕತೆ ಬೇಕಾಗುತ್ತದೆ.
ಮಾನಸಿಕ ಪುನಶ್ಚೇತನ
ಕೇಂದ್ರ ಎಂದರೇನು?
ಮಾನಸಿಕ ಪುನಶ್ಚೇತನ ಚಿಕಿತ್ಸೆಯು ಒಂದು ವ್ಯವಸ್ಥಿತ ಚಿಕಿತ್ಸಾ ಕಾರ್ಯಕ್ರಮ. ಇಲ್ಲಿ ಮಾತ್ರೆ, ಔಷಧಿಯೊಂದಿಗೆ ಇನ್ನಿತರ ಚಿಕಿತ್ಸಾ ಚಟುವಟಿಕೆಗಳು ಇರುತ್ತವೆ. ರೋಗಿಗಳ ಕಾಯಿಲೆಯನ್ನು ಹತೋಟಿಗೆ ತರುವುದು. ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಮತ್ತು ಅವರ ಜೀವನಮಟ್ಟವನ್ನು ಸುಧಾರಿಸಿಕೊಳ್ಳಲು ಸಹಾಯ ಮಾಡುವುದು ಮಾನಸಿಕ ಪುನಶ್ಚೇತನ ಕೇಂದ್ರದ ಅತೀ ಮುಖ್ಯ ಉದ್ದೇಶವಾಗಿರುತ್ತದೆ. ಇದನ್ನು ಕೆಲವರು ಡೇ ಕೇರ್ ಕೇಂದ್ರ ಅಥವಾ ಹಾಫ್ ವೇ ಹೋಂ ಎಂದೂ ಕೂಡ ಕರೆಯುವುದುಂಟು.
ಯಾರಿಗೆ ಮಾನಸಿಕ ಪುನಶ್ಚೇತನ ಕೇಂದ್ರವು ಸೂಕ್ತ?
ದೀರ್ಘ ಕಾಲದ ಮಾನಸಿಕ ಕಾಯಿಲೆಯಿಂದಾಗಿ ದೈನಂದಿನ ಜೀವನವನ್ನು ನಡೆಸಲಾಗದವರಿಗೆ, ಸಾಮಾಜಿಕ ಜೀವನದಲ್ಲಿ ಸಮಸ್ಯೆ ಉಳ್ಳವರಿಗೆ (ಮುಖ್ಯವಾಗಿ ಇತರರೊಂದಿಗೆ ಹೊಂದಾಣಿಕೆಯಾಗುವುದಲ್ಲಿ) ಹಾಗೂ ಸಂವಹನ ಕೌಶಲದ ಸಮಸ್ಯೆಯನ್ನು ಎದುರಿಸುತ್ತಿರುವ ರೋಗಿಗಳು ಮಾನಸಿಕ ಪುನಶ್ಚೇತನ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಲು ಸೂಕ್ತರು. ಹಾಗೆಯೇ ಅನೇಕ ವರ್ಷಗಳಿಂದ ರೋಗಿಗಳ ಆರೈಕೆಯಿಂದ ಬೇಸತ್ತುಕೊಂಡಿರುವ ಪೋಷಕರು ರೋಗಿಯನ್ನು ಅಲ್ಪ ಅವಧಿಗೆ ಇಂತಹ ಪುನಶ್ಚೇತನ ಕೇಂದ್ರದಲ್ಲಿ ಬಿಟ್ಟು ತಾವು ಬಿಡುವು ಮಾಡಿಕೊಳ್ಳಬಹುದು.
ಮಾನಸಿಕ ಪುನಶ್ಚೇತನ ಕೇಂದ್ರದ ಕಾರ್ಯಗಳು: ಕೇಂದ್ರದಲ್ಲಿ ರೋಗಿಯ ಕಾಯಿಲೆಯ ಸ್ವರೂಪ ಮತ್ತು ತೀವ್ರತೆ. ಹಿಂದಿನ ಮನೋ ಚಿಕಿತ್ಸೆಯ ವಿವರಗಳು. ಉದ್ಯೋಗದ ಅನುಭವ. ರೋಗಿಯಲ್ಲಿರುವ ಇತರ ಕೌಶಲಗಳು ಮತ್ತು ಆತನ ಸಾಮರ್ಥ್ಯ ಹಾಗೂ ರೋಗಿಯ ಮೇಲಿನ ಪೋಷಕರ ಕಾಳಜಿ, ಸಹಕಾರವನ್ನು ಪ್ರಾಥಮಿಕ ಹಂತದಲ್ಲಿ ಪರಿಶೀಲಿಸಲಾಗುವುದು. ಇವೆಲ್ಲವನ್ನು ಆಧರಿಸಿ ರೋಗಿಗೆ ಚಿಕಿತ್ಸೆಯ ಯೋಜನೆಗಳನ್ನು ರೂಪಿಸಲಾಗುವುದು.
ಈ ಚಿಕಿತ್ಸಾ ಯೋಜನೆಯನ್ನು ಪುನಶ್ಚೇತನ ಕೇಂದ್ರದ ನಾನಾ ಚಟುವಟಿಕೆಗಳ ಮೂಲಕ ಕಾರ್ಯಗತಗೊಳಿಸಲಾಗುವುದು. ಕೇಂದ್ರದ ಮುಖ್ಯ ಚಟುವಟಿಕೆಗಳೆಂದರೆ, ದಿನನಿತ್ಯದ ಕಾರ್ಯಗಳನ್ನು ಮಾಡಲು ಬೇಕಾದ ಕೌಶಲ್ಯಗಳ ತರಬೇತಿ (Activities of daily living). ಸಾಮಾಜಿಕ ಕೌಶಲಗಳ ತರಬೇತಿ (Social Skills training). ಒತ್ತಡ ನಿರ್ವಹಣೆ (Stress management). ಕಲೆ ಹಾಗೂ ಅಡುಗೆ ಕಾರ್ಯಗಳು (Art therapy and Home management skills training). ಮನರಂಜನ ಕಾರ್ಯಕ್ರಮಗಳು, ಯೋಗ, ಪ್ರಾರ್ಥನೆ, ಹಣಕಾಸಿನ ನಿರ್ವಹಣೆಯೇ (Money management) ಬಗ್ಗೆಯೂ ತರಬೇತಿ ನೀಡಲಾಗುವುದು. ಇಲ್ಲಿನ ಚಟುವಟಿಕೆಗಳು ಕೇವಲ ನಾಲ್ಕು ಗೋಡೆಯ ಒಳಗಿನ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರದೆ ರೋಗಿಗಳು ತಮಗೆ ಇಷ್ಟವಾದ ಉದಾಹರಣೆಗೆ ಬ್ಯುಟಿಶಿಯನ್ ಕೋರ್ಸ್ ಕಂಪ್ಯೂಟರ್ ಕಲಿಕೆಯಂತಹ ತರಬೇತಿಗೂ ಸೇರಿಕೊಳ್ಳಬಹುದು.
ಮಾನಸಿಕ ಪುನಶ್ಚೇತನ ಕೇಂದ್ರದ ಮತ್ತೂಂದು ಮುಖ್ಯ ಕಾರ್ಯವೆಂದರೆ ರೋಗಿಯ ಪೋಷಕರನ್ನು ಪುನಶ್ಚೇತನ ಪ್ರಕ್ರಿಯೆಯ ಅಂಗವಾಗಿಸುವುದು. ರೋಗಿಯು ಕೇಂದ್ರದಿಂದ ಡಿಸಾcರ್ಜ್ ಆದ ಬಳಿಕ ಇರಬೇಕಾದದ್ದು ತಮ್ಮ ಪೋಷಕರ ಜೊತೆ. ಈ ನಿಟ್ಟಿನಲ್ಲಿ ಪುನಶ್ಚೇತನ ಕೇಂದ್ರಗಳು ಕೇವಲ ರೋಗಿಯನ್ನು ಮಾತ್ರವಲ್ಲದೆ ಅವರ ಪೋಷಕರನ್ನು ತೊಡಗಿಸಿಕೊಳ್ಳುತ್ತದೆ. ಪೋಷಕರಿಗೆ ರೋಗಿಯ ಕಾಯಿಲೆಯ ಸಂಪೂರ್ಣ ಮಾಹಿತಿ ಬಗ್ಗೆ ಅದರ ನಿರ್ವಹಣೆಯ ಬಗ್ಗೆ ಅದಲ್ಲದೆ ರೋಗಿಯ ಜೊತೆ ನಡೆದುಕೊಳ್ಳಬೇಕಾದ ತಮ್ಮ ವರ್ತನೆಯ ಬಗ್ಗೆಯೂ ಇಲ್ಲಿ ಮಾಹಿತಿಯನ್ನು ನೀಡಲಾಗುವುದು. ಪೋಷಕರು ಇಲ್ಲಿನ ಆಪ್ತಸಮಾಲೋಚಕರ ಜೊತೆ ತಮ್ಮ ಸಮಸ್ಯೆಗಳನ್ನು ಹಂಚಿಕೊಂಡು ಅದಕ್ಕೆ ಸೂಕ್ತವಾದ ಪರಿಹಾರವನ್ನು ಕೂಡಾ ಕಂಡುಕೊಳ್ಳಬಹುದು.
ಯಾರನ್ನು
ಒಳಗೊಂಡಿರುತ್ತದೆ?:
ಪುನಶ್ಚೇತನ ಕೇಂದ್ರದಲ್ಲಿನ ಚಿಕಿತ್ಸೆಯು ನಾನಾ ತಜ್ಞರನ್ನು ಒಳಗೊಂಡ ಕಾರ್ಯಕ್ರಮವಾಗಿದೆ. ಇಲ್ಲಿ ಮನೋ ವೈದ್ಯರುಗಳು. ಮನೋಸಾಮಾಜಿಕ ತಜ್ಞರುಗಳಲ್ಲದೆ ಔದ್ಯೋಗಿಕ ಸಲಹಾ ತಜ್ಞರು (Occupational Therpist), ದಾದಿಯರು. ಯೋಗ ತಜ್ಞರುಗಳು, ವೃತ್ತಿ ತರಬೇತಿದಾರರು (Vocational trainers) ಇರುತ್ತಾರೆ. ಹಾಗೆಯೇ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಸುಧಾರಿಸಿದ ರೋಗಿಗಳು ಬಂದು ತಮ್ಮ ಕಾಯಿಲೆಯೊಂದಿಗಿನ ಜೀವನ ಮತ್ತು ಅದನ್ನು ಮೆಟ್ಟಿ ನಿಲ್ಲುವುದರ ಬಗ್ಗೆ ಅನುಭವಗಳನ್ನು ಹಂಚಿಕೊಂಡು ಇತರ ರೋಗಿಗಳಿಗೆ ತಮ್ಮ ಕಾಯಿಲೆಯಿಂದ ಚೇತರಿಸಿಕೊಳ್ಳಲು ಪ್ರೇರಣೆಯಾಗುತ್ತಾರೆ.
ಒಟ್ಟಿನಲ್ಲಿ ಹೇಳುವುದಾದರೆ ಮಾನಸಿಕ ಪುನಶ್ಚೇತನ ಕೇಂದ್ರವು ರೋಗಿಗಳ ಕಾಯಿಲೆಯನ್ನು ಮಾತ್ರ ನೋಡದೆ ಅವರಲ್ಲಿನ ಕೌಶಲವನ್ನು ಗುರುತಿಸಿ ಅದಕ್ಕೆ ಸೂಕ್ತ ತರಬೇತಿಯನ್ನು ನೀಡಿ ಸಮಾಜಕ್ಕೆ ಅವರನ್ನು ಮರಳಿ ತರುವ ಮಹತ್ತರ ಪಾತ್ರವನ್ನು ವಹಿಸುತ್ತದೆ. ಮದ್ದು ಔಷಧಿಯೊಂದಿಗೆ ನೀಡಲಾಗುವ ಇತರ ಚಟುವಟಿಕೆಗಳು ರೋಗಿಯನ್ನು ಬೇಗ ಚೇತರಿಸುವಂತೆ ಮಾಡಿ. ಅವರೂ ಸಮಾಜದಲ್ಲಿ ಇತರರಂತೆ ಗೌರವದಿಂದ ಬಾಳುವಂತೆ ಮಾಡುತ್ತದೆ.
– ಪ್ರವೀಣ್ ಎ. ಜೈನ್,
ಮನೋಸಾಮಾಜಿಕ ತಜ್ಞ,
ಮನೋರೋಗ ಚಿಕಿತ್ಸಾ ವಿಭಾಗ,
ಕೆ.ಎಂ.ಸಿ., ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.