ಸ್ಕಿಝೋಫ್ರೆನಿಯಾ


Team Udayavani, May 30, 2021, 4:14 PM IST

Schizophrenia

21ನೇ ಶತಮಾನದಲ್ಲಿಯೂ ನಮ್ಮ ದೇಶದಲ್ಲಿ ಹಾಗೂ ಇತರ ಹಿಂದುಳಿದ ದೇಶಗಳಲ್ಲಿ ಜನರು ಮಾನಸಿಕ ಅನಾರೋಗ್ಯವನ್ನು ನಾನಾ ರೀತಿಯ ಮೂಢನಂಬಿಕೆಯ ದೃಷ್ಟಿಕೋನದಲ್ಲಿ ನೋಡಲಾಗುತ್ತದೆ. ಪ್ರತೀ ವರ್ಷ ಮೇ ತಿಂಗಳ 24ರಂದು ವಿಶ್ವ ಸ್ಕಿಝೋಫ್ರೇನಿಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ರೀತಿಯ ದಿನಗಳನ್ನು ಆಚರಿಸುವ ಮೂಲಕ ಜನರಲ್ಲಿ  ಮಾನಸಿಕ ಕಾಯಿಲೆಗಳ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಹಾಗೂ ಮಾನಸಿಕ ಸಮಸ್ಯೆಗಳು ಕೂಡ ದೈಹಿಕ ಸಮಸ್ಯೆಗಳಂತೆ ಸಮಾನ್ಯ, ಇವುಗಳಿಗೆ ವೈಜ್ಞಾನಿಕ ಚಿಕಿತ್ಸೆ ಲಭ್ಯವಿದೆ ಎಂಬ ಅರಿವನ್ನು ಮೂಡಿಸಲು ಸಹಕಾರಿಯಾಗುತ್ತದೆ.

ಸ್ಕಿಜೋಫ್ರೇನಿಯಾ ಒಂದು ದೀರ್ಘ‌ಕಾಲದ ಮಾನಸಿಕ ಕಾಯಿಲೆಯಾಗಿದೆ. ಇದು ಮೆದುಳಿನಲ್ಲಿ ನರವಾಹಕಗಳಲ್ಲಿ ಉಂಟಾಗುವ ಬದಲಾವಣೆಯಿಂದ ಆಗುವಂತಹ ಒಂದು ತೀವ್ರ ತರಹವಾದ ಮಾನಸಿಕ ಕಾಯಿಲೆ. ಈ ಸಮಸ್ಯೆಯಲ್ಲಿ ವ್ಯಕ್ತಿಗೆ ಇತರರಿಗೆ ಕೇಳದ ಶಬ್ದಗಳು ಅಥವಾ ಶೂನ್ಯದಲ್ಲಿ ಯಾರೋ ಮಾತನಾಡಿದ ಅನುಭವಗಳು ಆಗಬಹುದು. ವ್ಯಕ್ತಿ ತನ್ನ ಮನಸ್ಸನ್ನು ಮತ್ತು ಅತನ ಆಲೋಚನೆಯನ್ನು ಯಾರೋ ನಿಯಂತ್ರಿಸುತ್ತಿದ್ದಾರೆ ಎಂದು ಭಾವಿಸುತ್ತಾನೆ. ಈ ಕಾಯಿಲೆ ಸಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿ ಅಂದರೆ 15-25 ವರ್ಷದಲ್ಲಿ ಆರಂಭವಾಗುತ್ತದೆ. ಆದರೆ ಈ ಸಮಸ್ಯೆಯನ್ನು ಗುರುತಿಸುವಲ್ಲಿ ನಿಧಾನವಾಗುವುದರಿಂದ ಅವರ ಸಮಸ್ಯೆಗಳು ಉಲ್ಬಣಗೊಳ್ಳುತ್ತವೆ.

ಜಾಗತಿಕವಾಗಿ ಸುಮಾರು ಶೇ. 1ರಷ್ಟು ಮಂದಿ ಸ್ಕಿಜೋಫ್ರೇನಿಯಾ ಕಾಯಿಲೆಗೆ ತುತ್ತಾಗಿದ್ದಾರೆ. ಭಾರತದಲ್ಲಿ ಇತ್ತೀಚಿನ ಒಂದು ಅಧ್ಯಯನದ ಪ್ರಕಾರ ಸುಮಾರು ಏಳರಲ್ಲಿ ಒಬ್ಬರು ತೀವ್ರ ತರಹದ ಮಾನಸಿಕ ರೋಗದಿಂದ ಬಳಲುತ್ತಿದ್ದರೆ, ಅದರಲ್ಲಿ ಸುಮಾರು ಶೇ. 0.3ರಷ್ಟು ಮಂದಿ ಈ ಸಿಜೋಫ್ರೆàನಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬೇರೆ ಮಾನಸಿಕ ಕಾಯಿಲೆಗಳಿಗೆ ಹೋಲಿಸಿದರೆ ಸ್ಕಿಝೋಫ್ರೇನಿಯಾ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ಕಡಿಮೆ. ಆದರೂ ಸ್ಕಿಜೋಫ್ರೇನಿಯಾವು ಸಾಕಷ್ಟು ನಕಾರಾತ್ಮಕ ಪರಿಣಾಮವನ್ನು ಬೀರುವ ಕಾಯಿಲೆ ಆಗಿದೆ. ಏಕೆಂದರೆ ಈ ಕಾಯಿಲೆಯು ರೋಗಿಯ ವೈಯಕ್ತಿಕ, ಸಾಮಾಜಿಕ, ಕೌಟುಂಬಿಕ ಮತ್ತು ಉದ್ಯೋಗದ ಮೇಲೆ ಪರಿಣಾಮವನ್ನು ಬೀರುವ ಸಾಧ್ಯತೆ ಜಾಸ್ತಿ.

ಸ್ಕಿಜೋಫ್ರೇನಿಯಾ ಉಂಟಾಗಲು ಕಾರಣ ಇನ್ನೂ ತಿಳಿದಿಲ್ಲ. ಆದಾಗ್ಯೂ ಅಧ್ಯಯನಗಳ ಪ್ರಕಾರ ಅನುವಂಶೀಯತೆ, ಅತಿಯಾದ ಮಾನಸಿಕ ಒತ್ತಡ, ಅಹಿತಕರ ಜೀವನ ಘಟನೆ, ಮಾದಕವಸ್ತುಗಳ ವ್ಯಸನ ಅಥವಾ ಇವೆಲ್ಲದರ ಒಟ್ಟು ಪರಿಣಾಮಗಳಿಂದ ವ್ಯಕ್ತಿ ಸ್ಕಿಜೋಫ್ರೇನಿಯಕ್ಕೆ ಒಳಗಾಗಬಹುದು. ರೋಗಿಯು ಸರಿಯಾದ ಸಮಯಕ್ಕೆ ಚಿಕಿತ್ಸೆಗೆ ಬಾರದೆ ಇರಲು ಸಾಮಾಜಿಕ ಕಳಂಕ, ತಾರತಮ್ಯ, ಕಾಯಿಲೆಯ ಬಗ್ಗೆ ಅರಿವಿನ ಕೊರತೆ, ಆರ್ಥಿಕ ಸಮಸ್ಯೆ ಅಥವಾ ಮನೋರೋಗ ಚಿಕಿತ್ಸೆಯ ಅಲಭ್ಯತೆಯು ಸಾಮಾನ್ಯ ಕಾರಣಗಳಾಗಿರುತ್ತವೆ.

ಧನಾತ್ಮಕ ಚಿಹ್ನೆಗಳು ಭ್ರಮೆ

ಶೂನ್ಯದಲ್ಲಿ ಯಾರೂ ಮಾತನಾಡಿದ ಅಥವಾ ಏನನ್ನೂ ನೋಡಿದ ಹಾಗೆ ಅನುಭವ ಆಗುವುದು. ಉದಾಹರಣೆಗೆ, ಯಾರೋ ಅಜ್ಞಾತ ವ್ಯಕ್ತಿಗಳು ಇವರೊಡನೆ ಸಂಭಾಷಣೆ ನಡೆಸಿದ ಹಾಗೆ ಆಗುವುದು, ಯಾವುದೋ ವಿಚಿತ್ರ ಆಕೃತಿಗಳು ತನ್ನ ಮುಂದೆ ಹಾದುಹೊದಂತೆ ಅನ್ನಿಸುವುದು.

ಆಲೋಚನೆಯಲ್ಲಿ ವ್ಯತ್ಯಾಸ

ಆಲೋಚನೆಗಳು ಒಂದಕ್ಕೆ ಒಂದು ಸಂಬಂದವಿಲ್ಲದಂತೆ ಇರುತ್ತವೆ, ಮಾತಿನಲ್ಲಿ ಮತ್ತು ಆಲೋಚನೆಯಲ್ಲಿ ಭಾವನಾತ್ಮಕತೆಯ ಅಂಶ ಇರುವುದಿಲ್ಲ.

ಭ್ರಾಂತಿ

ಬಲವಾದ ಮತ್ತು ವಿಚಿತ್ರವಾದ ಬದಲಿಸಲಾಗದ ನಂಬಿಕೆ. ಉದಾಹರಣೆಗೆ, ನನ್ನ ಮನೆಯವರು ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ, ಅವರು ನನ್ನನ್ನು ಕೊಲ್ಲಲು ಊಟದಲ್ಲಿ ವಿಷ ಬೆರೆಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾರೋ ಯಂತ್ರಗಳ ಮೂಲಕ ನನ್ನ ಆಲೋಚನೆಯನ್ನು ನಿಯಂತ್ರಿಸುತ್ತಿದ್ದಾರೆ ಎಂಬಂಥ ಭ್ರಮೆಗಳು ಕಾಡಲಾರಂಬಿಸುತ್ತದೆ.

ಸ್ವ ಅನುಭವದಲ್ಲಿ ಬದಲಾವಣೆ

ಬೇರೆಯವರೊಂದಿಗೆ ಮತ್ತು ಪ್ರಪಂಚಕ್ಕೆ ಸಂಬಂಧಿಸಿದಂತೆ ಅವಾಸ್ತವಿಕ ಪ್ರಜ್ಞೆ. ಮನೆಯ ಅಥವಾ ಇನ್ನಿತರ ಸಾಮಾಜಿಕ ಚಟುವಟಿಕೆಯಿಂದ ದೂರ ಉಳಿಯಲು ಆರಂಭಿಸುತ್ತಾರೆ.

 

ಆರಂಭದ ಲಕ್ಷಣಗಳು

 ಆಲೋಚನೆಯಲ್ಲಿ ಬದಲಾವಣೆ

 ಕೇಳುವ ನೋಡುವ, ರುಚಿ, ವಾಸನೆಯನ್ನು ಗ್ರಹಿಸುವ ಶಕ್ತಿಯಲ್ಲಿ ಬದಲಾವಣೆಗಳಾಗಿ ಭ್ರಮೆಗಳು ಕಂಡುಬರುತ್ತವೆ.

 ಮನಸ್ಥಿತಿಯಲ್ಲಿ ಸಮಸ್ಯೆ

 ಇತರರ ಜತೆಗಿನ ಸಂಬಂಧಗಳಲ್ಲಿ ಮತ್ತು ನಡವಳಿಕೆಯಲ್ಲಿ ಸಮಸ್ಯೆ

 ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಸಮಸ್ಯೆ

 ದೇಹದ ಚಲನೆಯಲ್ಲಿ ಬದಲಾವಣೆ

 ನಿದ್ರೆ, ಹಸಿವೆಯಲ್ಲಿ ವ್ಯತ್ಯಾಸ

 ವಿಚಿತ್ರ ವರ್ತನೆಗಳು

 ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಸಮಸ್ಯೆ

 ಮಾತಿನಲ್ಲಿ ಸ್ಪಷ್ಟತೆ ಇಲ್ಲದಿರುವುದು

 ವಿಚಿತ್ರ ಆಲೋಚನೆಗಳು

ಅರಿವಿಗೆ ಸಂಬಂಧಿಸಿದ ಲಕ್ಷಣಗಳು

ನೆನಪಿನ ಶಕ್ತಿಯಲ್ಲಿ ತೊಂದರೆ, ಏಕಗ್ರಾತೆ ಯಲ್ಲಿ ಕೊರತೆ, ನಿರ್ಧಾರಗಳನ್ನು ತೆಗೆದು ಕೊಳ್ಳುವಲ್ಲಿ ಅಸ್ಪಷ್ಟತೆಗಳು ಕಂಡು ಬರುತ್ತದೆ.

ಸಂಶಯಗ್ರಸ್ತ ವಿಧ

ಈ ವಿಧದಲ್ಲಿ ಭ್ರಮೆಗಳು ಮತ್ತು ವಿಭ್ರಮೆಗಳು ಹೆಚ್ಚಾಗಿ ಕಂಡುಬರುತ್ತವೆ. ಆಲೋಚನೆಯಲ್ಲಿ ಅಸ್ಪಷ್ಟತೆ, ಅಸ್ತವ್ಯಸ್ತವಾದ ನಡವಳಿಕೆ ಮತ್ತು ಭಾವನೆಗಳಿಗೆ ಸ್ಪಂಪದಿಸುವಲ್ಲಿ ವಿಫಲವಾಗುವುದು ಕಂಡುಬರುತ್ತದೆ. ಈ ವಿಧದಲ್ಲಿ ವ್ಯಕ್ತಿ ಎಲ್ಲರ ಮೇಲೂ ಸಂಶಯಗ್ರಸ್ತನಾಗಿದ್ದು, ಯಾರನ್ನು ನಂಬುವ ಸ್ಥಿತಿಯಲ್ಲಿ ಇರುವುದಿಲ್ಲ.

ಅಸ್ತವ್ಯಸ್ತವಾದ ಬಗೆ

ಈ ಬಗೆಯ ಸಮಸ್ಯೆಯಲ್ಲಿ ವ್ಯಕ್ತಿಯ ಆಲೋಚನೆಗಳು ಅಸ್ತವ್ಯಸ್ತವಾಗಿರುತ್ತವೆ ಮತ್ತು ಕೆಲವೊಮ್ಮೆ ಸಿಟ್ಟು ಅಥವಾ ನಿರ್ದಾಕ್ಷಿಣ್ಯ ಪ್ರವೃತ್ತಿಗಳು ಕಂಡುಬರುತ್ತವೆ. ಇವರು ಕೆಲವೊಮ್ಮೆ ಕೊಳಕಾಗಿ ಇರುವುದು ಅಸ್ತವ್ಯಸ್ತವಾಗಿ ಬಟ್ಟೆಯನ್ನು ದರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಅಸಂಬದ್ಧವಾಗಿ ವರ್ತಿಸುವುದನ್ನು ಕಾಣಬಹುದು.

ಕ್ಯಾಟಟೋನಿಕ ಸ್ಕಿಝೋಫ್ರೇನಿಯಾ

ಈ ವಿಧದಲ್ಲಿ ವ್ಯಕ್ತಿ ಕೆಲವೊಮ್ಮೆ ಯಾವುದೇ ಚಲನೆಯನ್ನು ತೋರದೆ ನಿಶ್ಚಲನಾಗಿರಬಹುದು ಅಥವಾ ಉದ್ದೇಶರಹಿತವಾದ ಚಲನೆಯನ್ನು ಪ್ರದರ್ಶಿಸಬಹುದು. ಇವರಲ್ಲಿ ಸಂವೇದನೆಗಳಿಗೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ತೋರದೆ ಇರುವ ಲಕ್ಷಣಗಳು ಕಂಡುಬರುತ್ತವೆ.

ಅನ್‌ ಡಿಫ‌ರೆನ್ಶಿಯೇಟೆಡ್‌

ಈ ವಿಧದಲ್ಲಿ ಸಿಜೋಫ್ರೆàನಿಯಾ ರೋಗ ಲಕ್ಷಣಗಳು ಕಂಡುಬಂದರೂ ಮೇಲೆ ಹೇಳಿದ ವಿಧಗಳಲ್ಲಿ ಇರುವಂತೆ ರೋಗಲಕ್ಷಣಗಳ ನಿಖರತೆ ಇರುವುದಿಲ್ಲ. ಹಾಗಾಗಿ ಇದನ್ನು ಅನ್‌ ಡಿಫ‌ರೆನ್ಶಿಯೇಟೆಡ್‌ ಸಿಝೋಫ್ರೇನಿಯಾ ಎಂದು ಕರೆಯುತ್ತಾರೆ.

ಸಿಝೋಫ್ರೇನಿಯಾ:  ತಪ್ಪು ನಂಬಿಕೆಗಳು

ಎಲ್ಲ ಮಾನಸಿಕ ಸಮಸ್ಯೆಗಳ ಬಗ್ಗೆ ಇರುವ ಹಾಗೆ ಸಿಝೋಫ್ರೇನಿಯಾ ಸಮಸ್ಯೆಯ ಬಗೆಗೂ ಜನರಲ್ಲಿ ಅನೇಕ ತಪ್ಪು ನಂಬಿಕೆಗಳು ಕಂಡುಬರುತ್ತವೆ ಹಾಗೂ ಇವರು ಸಾಮಾಜಿಕ ಕಳಂಕಕ್ಕೆ ಒಳಗಾಗುತ್ತಾರೆ.

ತಪ್ಪು ನಂಬಿಕೆ: ಸಿಝೋಫ್ರೇನಿಯಾ ತುಂಬ ಅಪರೂಪದ ಕಾಯಿಲೆ.

ಸರಿ: ಸಿಝೋಫ್ರೇನಿಯಾ ಅಪರೂಪದ ಖಾಯಿಲೆ ಅಲ್ಲ. ಪ್ರಪಂಚದಲ್ಲಿ ಶೇ. 1 ಜನರು ಈ ಸಮಸ್ಯೆಗೆ ಒಳಗಾಗುತ್ತಾರೆ.

ತಪ್ಪು ನಂಬಿಕೆ: ಸಿಝೋಫ್ರೇನಿಯಾ ರೋಗಿಗಳು ಕೆಲಸ ಮಾಡಲು ಸಾಧ್ಯವಿಲ್ಲ.

ಸರಿ: ಸಿಝೋಫ್ರೇನಿಯಾ ರೋಗಿಗಳು ಎಲ್ಲರಂತೆ ಸುಸೂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದಿರಬಹುದು, ಆದರೆ ಸರಿಯಾದ ಸಮಯ ಚಿಕಿತ್ಸೆ ದೊರೆತರೆ ಅವರಲ್ಲಿ ಇರುವ ನೈಪುಣ್ಯದ ಚೌಕಟಿನಲ್ಲಿ ಕೆಲಸವನ್ನು ನಿರ್ವಹಿಸಲು ಸಾಧ್ಯ.

ತಪ್ಪು : ಸಿಝೋಫ್ರೇನಿಯಾದಿಂದ ವ್ಯಕ್ತಿಗಳು ಸೋಮಾರಿಯಾಗುತ್ತಾರೆ.

ಸರಿ : ಸಿಝೋಫ್ರೇನಿಯಾದಿಂದ ಅವರು ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಯನ್ನು ಮಾಡುವಲ್ಲಿ ಸ್ವಲ್ಪ ವಿಳಂಬವಾಗಬಹುದು. ಆದರೆ ಅವರು ಸೋಮಾರಿಯೆಂದಲ್ಲ, ಅವರಿಗೆ ಸ್ವಲ್ಪ ಹೆಚ್ಚಿನ ಸಮಯ ಮತ್ತು ಪ್ರೇರಣೆಯನ್ನು ನೀಡಿದರೆ ಅವರು ಸಾಮಾನ್ಯ ಜೀವನ ನಡೆಸಬಹುದು.

ತಪ್ಪು : ಸೀಝೋಫ್ರೇನಿಯಾ ಬಂದರೆ ಅವರು ಜೀವನ ಪರ್ಯಾಂತ ಆಸ್ಪತ್ರೆಯಲ್ಲಿ ಇರಬೇಕು.

ಸರಿ: ಹಿಂದೆ ತೀವ್ರತರಹದ ಮಾನಸಿಕ ಸಮಸ್ಯೆ ಉಳ್ಳವರನ್ನು ಮಾನಸಿಕ ಆಶ್ರಯ ಕೇಂದ್ರಗಳಲ್ಲಿ ಇರಿಸಬೇಕಾಗಿತ್ತು. ಆದರೆ ಈಗ ಲಭ್ಯವಿರುವ ಚಿಕಿತ್ಸಾ ಪದ್ದತಿಯಿಂದ ಮತ್ತು ಅವರ ಮನೆಯ ಸದಸ್ಯರಿಂದ ಆರೈಕೆ ಮತ್ತು ಸಹಾಯ ದೊರೆತರೆ ಅವರು ಕೂಡ ಎಲ್ಲರಂತೆ ತಮ್ಮ ಮನೆಯ ಸದ್ಯರೊಂದಿಗೆ ಸಮಾಜದಲ್ಲಿ ಒಬ್ಬರಾಗಿ ಇರಲು ಸಾಧ್ಯ.

ತಪ್ಪು : ಸೀಝೋಫ್ರೇನಿಯಾ ಇರುವವರು, ಯಾವುದೇ ಉತ್ಪಾದಕ ಕೆಲಸವನ್ನು ಮಾಡಲು ಸಾಧ್ಯವಿಲ್ಲ.

ಸರಿ : ಹೆಚ್ಚಿನ ರೋಗಿಗಳು ಎಲ್ಲರಂತೆ ಸಂತೋಷ ಮತ್ತು ಉತ್ಪಾದಕ ಜೀವನವನ್ನು ನಡೆಸಲು ಸಾಧ್ಯ. ಈ ಸಮಸ್ಯೆ ಕೂಡ ಸಕ್ಕರ ಕಾಯಿಲೆ ಮತ್ತು ಬಿ.ಪಿ ಕಾಯಿಲೆ ಇದ್ದಂತೆ. ಸರಿಯಾದ ಔಷಧಿ ಮತ್ತು ವೈದ್ಯಕೀಯ ಸಲಹೆ ಸೂಚನೆಯನ್ನು ಪಾಲಿಸಿದರೆ ಎಲ್ಲರಂತೆ ಸಮಾಜದಲ್ಲಿ ಗೌರವಯುತ ಮತ್ತು ಉತ್ಪಾದಕ ಜೀವನ ನಡೆಸಲು ಸಾಧ್ಯ.

ತಪ್ಪು: ಸಿಝೋಫ್ರೇನಿಯಾ ರೋಗಿಗಳಲ್ಲಿ ಬೌದ್ಧಿಕ ಮಟ್ಟ ಕಡಿಮೆ ಇರುತ್ತದೆ.

ಸರಿ: ಸಿಝೋಫ್ರೇನಿಯಾ ಬಾಧಿತರಲ್ಲಿ ಕೆಲವರಿಗೆ ಏಕಾಗ್ರತೆ, ನಿರ್ಧಾರ ತೆಗೆದುಕೊಳ್ಳುವುದು, ನೆನಪಿನ ಶಕ್ತಿಯಲ್ಲಿ ವ್ಯತ್ಯಾಸ ಕಂಡು ಬರಬಹುದು. ಹಾಗೆಂದು ಅವರ ಬೌದ್ಧಿಕ ಮಟ್ಟ ಕಡಿಮೆ ಎಂದಲ್ಲ. ಈ ಸಮಸ್ಯೆ ಇದ್ದವರಲ್ಲಿಯೂ ಬುದ್ಧಿ ಮಟ್ಟ ಹೆಚ್ಚು ಇದ್ದದ್ದನ್ನು ಕಾಣಬಹುದು. ಉದಾ. ಶ್ರೇಷ್ಠ ಗಣಿತ ತಜ್ಞ ಡಾ| ಜಾನ್‌ ನ್ಯಾಶ್‌ ಅವರಿಗೂ ಸಿಜೋಫ್ರೆàನಿಯಾ ಇತ್ತು.

ಕಾಯಿಲೆಯ ನಿರ್ವಹಣೆ

ಸಿಜೋಫ್ರೇನಿಯಾವು ಒಂದು ಗುಣಪಡಿಸಬಹುದಾದ ಕಾಯಿಲೆ. ಇದನ್ನು ಹೊಂದಿರುವ ಅನೇಕರು ಸಮಾಜದಲ್ಲಿ ಇತರರಂತೆ ಬದುಕುತ್ತಿರುವ ನಿದರ್ಶನಗಳು ಇವೆ. ವ್ಯಕ್ತಿಗೆ ಔಷಧದ ಜತೆಗೆ ಮಾನಸಿಕ ಬೆಂಬಲದ ಆವಶ್ಯಕತೆ ಅನಿವಾರ್ಯವಾಗಿರುತ್ತದೆ.  ಆದಾರೂ ದೀರ್ಘ‌ಕಾಲದ ಸಿಜೋಫ್ರೇನಿಯಾದಿಂದ ಬಳಲುತ್ತಿರುವ ಜನರಿಗೆ ಚಿಕಿತ್ಸೆಯ ಜತೆಗೆ ಸಾಮಾಜಿಕ ಕೌಶಲ ತರಬೇತಿ ಅಥವಾ ಮಾನಸಿಕ ಪುನರ್ವಸತಿ ಕೇಂದ್ರಗಳ ಸಹಾಯ ಬೇಕಾಗಬಹುದು. ಮಾನಸಿಕ ವೈದ್ಯರ ಸಲಹೆ, ನಿಯತ ಚಿಕಿತ್ಸಾ ಫಾಲೋ ಅಪ್‌, ಮನೆಮಂದಿಯ ಸಹಾಯ, ಉತ್ತಮ ರೀತಿಯ ಜೀವನ ಶೈಲಿ ಹಾಗೂ ದಿನನಿತ್ಯದ ಕೆಲಸದಲ್ಲಿ ತೊಡಗಿಸಿಕೊಳ್ಳುವಿಕೆಗಳಂತಹ ಅಂಶಗಳು ರೋಗಿಯ ಚೇತರಿಕೆಯ ಮೇಲೆ ಪರಿಣಾಮ ಬೀರುತ್ತವೆ.

ಒಟ್ಟಿನಲ್ಲಿ ಸ್ಕಿಝೋಫ್ರೆನಿಯಾವು ಒಂದು ತೀವ್ರ ತರಹದ ಮಾನಸಿಕ ಕಾಯಿಲೆಯಾಗಿದ್ದು, ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಔಷಧ ದೊರೆತಲ್ಲಿ ಆತ ಕಾಯಿಲೆಯಿಂದ ಹೊರಬಂದು ಸಮಾಜದಲ್ಲಿ ಇತರರಂತೆ ಬದುಕಬಲ್ಲ. ಔಷಧದ ಜತೆಗೆ ಕೌಟುಂಬಿಕರ ಬೆಂಬಲ ಹಾಗೂ ದಿನನಿತ್ಯದ ಕೆಲಸದಲ್ಲಿ ತೊಡಗಿಸಿಕೊಳ್ಳುವಿಕೆಯಿಂದ ರೋಗಿಯು ಶೀಘ್ರವಾಗಿ ಚೇತರಿಕೆ ಹೊಂದಬಹುದು.

 

ಪ್ರವೀಣ್. ಜೈನ್

ಮನೋಸಾಮಾಜಿಕ ತಜ್ಞ

ವಿದ್ಯಾಶ್ರೀ

ಮನೋಸಾಮಾಜಿಕ ವಿದ್ಯಾರ್ಥಿನಿ,

ಮನೋರೋಗ ಚಿಕಿತ್ಸಾ ವಿಭಾಗ

ಕೆಎಂಸಿ ಮಣಿಪಾಲ

 

ಟಾಪ್ ನ್ಯೂಸ್

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.