ಸ್ಕೋಲಿಯೋಸಿಸ್‌:ವಕ್ರ ಬೆನ್ನುಮೂಳೆ ತೊಂದರೆಯ ಬಗ್ಗೆ ತಿಳಿಯಿರಿ


Team Udayavani, Jul 4, 2021, 11:57 AM IST

Scoliosis

ಬೆನ್ನುಮೂಳೆಯು ಒಂದು ಬದಿಗೆ ಬಾಗುವ ಸಮಸ್ಯೆಯನ್ನು ಸ್ಕೋಲಿಯೋಸಿಸ್‌ ಎಂದು ಕರೆಯಲಾಗುತ್ತದೆ. ಬೆನ್ನುಮೂಳೆಯ ರೇಡಿಯೋಗ್ರಾಫ್ನಲ್ಲಿ ಈ ಬಾಗುವಿಕೆಯು ಶೇ. 10ಕ್ಕಿಂತ ಹೆಚ್ಚು ಇರುವುದು ಕಂಡುಬಂದರೆ ಅದನ್ನು ಸ್ಕೋಲಿಯೋಸಿಸ್‌ ಎನ್ನಲಾಗುತ್ತದೆ. ಇಂಗ್ಲಿಷ್‌ ವರ್ಣಮಾಲೆಯ “ಸಿ’ ಅಕ್ಷರದಂತೆ ಬೆನ್ನುಮೂಳೆ ಬಾಗಿರುವುದು ಕಂಡುಬರುತ್ತದೆ. ಸ್ಕೋಲಿಯೋಸಿಸ್‌ ಹೊಂದಿರುವ ಮಕ್ಕಳಲ್ಲಿ ಪಕ್ಕೆಲುಬುಗಳು ಒಂದು ಬದಿಗೆ ಉಬ್ಬಿರುವುದು ಅಥವಾ ಒಂದು ಪೃಷ್ಠ ಅಸಹಜವಾಗಿ ಉಬ್ಬಿರುವುದು ಅಥವಾ ಒಂದು ಭುಜವು ಇನ್ನೊಂದಕ್ಕಿಂತ ಎತ್ತರವಾಗಿರುವುದು ಕಂಡುಬರುತ್ತದೆ. ಬಹುತೇಕ ಸ್ಕೋಲಿಯೋಸಿಸ್‌ ಪ್ರಕರಣಗಳಲ್ಲಿ (ಶೇ. 80ಕ್ಕಿಂತ ಅಧಿಕ) ಸಮಸ್ಯೆಗೆ ನಿರ್ದಿಷ್ಟ ಕಾರಣ ತಿಳಿದುಬರುವುದಿಲ್ಲ. ಇಂತಹ ಪ್ರಕರಣಗಳನ್ನು ಸ್ವಯಂಜನ್ಯ (ಈಡಿಯೋಪಥಿಕ್‌) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಇಂತಹ ಸ್ಕೋಲಿಯೋಸಿಸ್‌ ಪ್ರಕರಣಗಳು ಹದಿಹರಯದ ಹುಡುಗಿಯರಲ್ಲಿ ಕಂಡುಬರುತ್ತವೆ.

ಮಗುವಿಗೆ ಸ್ಕೋಲಿಯೋಸಿಸ್‌ ಇದೆಯೇ  ಇಲ್ಲವೇ ಎಂದು ತಿಳಿಯುವುದು ಹೇಗೆ?

 ಒಂದು ಭುಜವು ಇನ್ನೊಂದಕ್ಕಿಂತ ಎತ್ತರವಾಗಿರುವುದು

 ತಲೆಯು ಒಂದು ಬದಿಗೆ ಸ್ವಲ್ಪ ಬಾಗಿರುವುದು

 ಮಗು ಒಂದು ಬದಿಗೆ ಬಾಗುವುದು

 ಒಂದು ಕಾಲು ಇನ್ನೊಂದಕ್ಕಿಂತ ಉದ್ದವಾಗಿರುವಂತೆ ಕಂಡುಬರುವುದು

 ಒಂದು ಪೃಷ್ಠವು ಇನ್ನೊಂದಕ್ಕಿಂತ ಮುಂದಿರುವಂತೆ ಕಾಣಿಸುವುದು

 ಪಕ್ಕೆಲುಬುಗಳು ಅಸಮಾನವಾಗಿರುವಂತೆ ಅಥವಾ ತಿರುಚಿರುವಂತೆ ಕಾಣಿಸುವುದು – ಒಂದು ಬದಿಯದು ಇನ್ನೊಂದಕ್ಕಿಂತ ಉಬ್ಬಿರುವಂತೆ ಕಂಡುಬರುವುದು. ಇದನ್ನು ರಿಬ್‌ ಹಂಪ್‌ ಎಂದೂ ಕರೆಯುತ್ತಾರೆ.

ಸ್ಕೋಲಿಯೋಸಿಸ್‌ ಸಾಮಾನ್ಯವಾಗಿ ಬೆನ್ನು ನೋವಿಗೆ ಕಾರಣವಾಗುವುದಿಲ್ಲ. ಅಲ್ಲದೆ, ಹದಿಹರಯದವರಲ್ಲಿ ಅನೇಕ ಬಾರಿ ಅರ್ಧಾಂಶದಷ್ಟು ಮಂದಿ ಲಂಬೊ-ಸೇಕ್ರಲ್‌ ಸ್ಟ್ರೈನ್‌ನಂತಹ ಇತರ ಕಾರಣಗಳಿಂದ ಬೆನ್ನುನೋವು ಅನುಭವಿಸುತ್ತಾರೆ.

ವೈದ್ಯರು ಬೆನ್ನಿನ ಪರೀಕ್ಷೆಯನ್ನು ನಡೆಸುವ ಮೂಲಕ ಸ್ಕೋಲಿಯೋಸಿಸ್‌ ಇರುವುದನ್ನು ಪತ್ತೆಹಚ್ಚುತ್ತಾರೆ.

 ವೈದ್ಯರು ಬೆನ್ನಿನ ಭಾಗದಲ್ಲಿ ಬೆನ್ನುಮೂಳೆಯ ಬಾಗುವಿಕೆಯನ್ನು ಪರೀಕ್ಷಿಸುತ್ತಾರೆ. ವ್ಯಕ್ತಿಯನ್ನು ಅನು ಕೂಲಕರ ಭಂಗಿಯಲ್ಲಿ ಇರಿಸಿ ಭುಜಗಳ ಅಸಮಾನತೆ, ಸೊಂಟ ರೇಖೆಯ ಅಸಮಾನತೆ ಮತ್ತು ಕುತ್ತಿಗೆಯಿಂದ ಸೊಂಟದ ತನಕದ ಭಾಗದ ಸ್ವರೂಪದಲ್ಲಿ ಯಾವುದೇ ಬದಲಾವಣೆ ಇದೆಯೇ ಎಂದು ಪರೀಕ್ಷಿಸುತ್ತಾರೆ.

 “ಫಾರ್ವರ್ಡ್‌ ಬೆಂಡಿಂಗ್‌ ಟೆಸ್ಟ್‌’ ಎಂಬ ಪರೀಕ್ಷೆಯಿದೆ. ಇದರಲ್ಲಿ ಮಗು ಸೊಂಟವನ್ನು ಬಾಗಿಸಿ ಮುಂದಕ್ಕೆ ಬಾಗುವಂತೆ ಹೇಳಲಾಗುತ್ತದೆ. ಬೆನ್ನುಮೂಳೆಯಲ್ಲಿ ವಕ್ರತೆ ಇದ್ದರೆ ಬೆನ್ನಿನ ಮೇಲ್ಭಾಗದಲ್ಲಿ ಪಕ್ಕೆಲುಬುಗಳು ಉಬ್ಬಿಕೊಂಡು ಕಾಣಿಸುತ್ತವೆ ಮತ್ತು/ ಅಥವಾ ಕೆಳಬೆನ್ನಿನಲ್ಲಿ ಸೊಂಟ ಉಬ್ಬಿರುವುದು ಕಾಣಿಸುತ್ತದೆ.

 ಸೊಸಿಯೊಮೀಟರ್‌. ಈ ಉಪಕರಣವನ್ನು ಶಂಕಿತ ಸ್ಕೋಲಿಯೋಸಿಸ್‌ ಇರುವ ಭಾಗದಲ್ಲಿ ಮಾಪನಕ್ಕಾಗಿ ಇರಿಸಲಾಗುತ್ತದೆ. ಇದು ಬೆನ್ನುಮೂಳೆಯ ಬಾಗುವಿಕೆಯ ಮಾಪನವನ್ನು ನೀಡುತ್ತದೆ.

 ಸ್ಕೋಲಿಯೋಸಿಸ್‌ ಇದೆ ಎಂದು ಶಂಕಿಸಲಾದರೆ ಕುತ್ತಿಗೆಯಿಂದ ಪೆಲ್ವಿಸ್‌ ತನಕದ ಸಂಪೂರ್ಣ ಬೆನ್ನುಮೂಳೆಯ ಎಕ್ಸ್‌ರೇಯನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ.

ಸ್ಕೋಲಿಯೋಸಿಸ್‌ಗೆ ಚಿಕಿತ್ಸೆಯ ಆಯ್ಕೆಗಳು

ನಿರೀಕ್ಷಣೆ

ಬೆನ್ನುಮೂಳೆಯ ಕೆಲವು ವ್ಯಾಯಾಮಗಳು, ಆರು ತಿಂಗಳುಗಳಿಗೆ ಒಮ್ಮೆ ವೈದ್ಯರಿಂದ ನಿಯಮಿತ ಚೆಕ್‌-ಅಪ್‌ಗ್ಳನ್ನು ನಡೆಸಿ ಬೆನ್ನುಮೂಳೆಯ ಬಾಗುವಿಕೆ ಹೆಚ್ಚಿದೆಯೇ ಎಂದು ಪತ್ತೆಹಚ್ಚುವುದು. ಬೆನ್ನುಮೂಳೆಯ ಬಾಗುವಿಕೆ 25 ಡಿಗ್ರಿಗಳಿಂದ 30 ಡಿಗ್ರಿ ವರೆಗೆ ಇದ್ದ ಸಂದರ್ಭಗಳಲ್ಲಿ ಇದನ್ನು ನಡೆಸಲಾಗುತ್ತದೆ.

ಸ್ಪೈನಲ್‌ ಬ್ರೇಸಿಂಗ್‌

ಬೆಳೆಯುತ್ತಿರುವ ಮಗುವಿನಲ್ಲಿ ಬೆನ್ನುಮೂಳೆಯ ಬಾಗುವಿಕೆ 25 ಡಿಗ್ರಿಗಳಿಗಿಂತ ಹೆಚ್ಚು, ಆದರೆ 45 ಡಿಗ್ರಿಗಳಿಗಿಂತ ಕಡಿಮೆ ಇದ್ದ ಸಂದರ್ಭದಲ್ಲಿ ಬೆನ್ನುಮೂಳೆಗೆ ಕವಚ (ಸ್ಪೈನಲ್‌ ಬ್ರೇಸಿಂಗ್‌) ತೊಡಿಸಲಾಗುತ್ತದೆ. ಕವಚವು ಬಾಗುವಿಕೆ ಹೆಚ್ಚುವುದನ್ನು ತಡೆಯಬಹುದಾಗಿ ಮತ್ತು ಪರಿಣಾಮವಾಗಿ, ಸ್ಪೈನಲ್‌ ಫ್ಯೂಶನ್‌ ಶಸ್ತ್ರಚಿಕಿತ್ಸೆಯ ಅಗತ್ಯ ಬೀಳದೆ ಹೋಗಬಹುದು.

ಶಸ್ತ್ರಚಿಕಿತ್ಸೆ

ಬೆನ್ನುಮೂಳೆಯ ಬಾಗುವಿಕೆ 45 ಡಿಗ್ರಿ ಅಥವಾ 50 ಡಿಗ್ರಿಗಳಿಗಿಂತ ಹೆಚ್ಚು ಇದ್ದ ಸಂದರ್ಭಗಳಲ್ಲಿ ಮತ್ತು/ ಅಥವಾ ವ್ಯಕ್ತಿಯ ಬೆಳೆಯುವಿಕೆ ನಿಂತ ಬಳಿಕವೂ ಬಾಗುವಿಕೆ ತೀವ್ರಗೊಳ್ಳುವ ಅಪಾಯ ಹೆಚ್ಚಿದ್ದರೆ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.

ಪರ್ಯಾಯ ಚಿಕಿತ್ಸೆಗಳು?

ಯೋಗ, ಫಿಸಿಕಲ್‌ ಥೆರಪಿ ಮತ್ತು ಚಿರೊಪ್ರ್ಯಾಕ್ಟಿಕ್‌ ಚಿಕಿತ್ಸೆಗಳು ಸ್ಕೊಲಿಯೊಸಿಸ್‌ನ ಬಾಗುವಿಕೆಯ ಬೆಳವಣಿಗೆಯನ್ನು ತಡೆಯುವುದು ವೈದ್ಯಕೀಯವಾಗಿ ಸಾಬೀತಾಗಿಲ್ಲ. ಆದರೆ ಇವು ಪ್ರಧಾನ ಸ್ನಾಯುಗಳು ಬಲಗೊಳ್ಳಲು ಸಹಾಯಕವಾಗಬಹುದು.

ಶಸ್ತ್ರಚಿಕಿತ್ಸೆ

ವಯಸ್ಕರ ಈಡಿಯೋಪಥಿಕ್‌ ಸ್ಕೊಲಿಯೋಸಿಸ್‌ಗೆ ಫ್ಯೂಶನ್‌ ಶಸ್ತ್ರಚಿಕಿತ್ಸೆಯು ಬಹಳ ಸಾಮಾನ್ಯವಾಗಿ ಅನುಸರಿಸುವ ಚಿಕಿತ್ಸಾ ವಿಧಾನವಾಗಿದೆ. ಬಹುತೇಕ ಪ್ರಕರಣಗಳಲ್ಲಿ ರೋಗಿಯ ಬೆನ್ನುಭಾಗದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ. ಬಾಗುವಿಕೆಯನ್ನು ಸರಿಪಡಿಸಲು ಬೆನ್ನುಮೂಳೆಯಲ್ಲಿ ಲೋಹದ ಇಂಪ್ಲಾಂಟ್‌ಗಳನ್ನು ಇರಿಸಿ ಅವುಗಳನ್ನು ಎರಡು ಲೋಹದ ಸರಳುಗಳಿಗೆ ಜೋಡಿಸಲಾಗುತ್ತದೆ. ಪಕ್ಕೆಲುಬುಗಳು ಸರಿಯಾದ ಸ್ಥಾನದಲ್ಲಿ ಹೊಂದಿಕೊಳ್ಳುವವರೆಗೆ ಈ ವ್ಯವಸ್ಥೆಯು ಬೆನ್ನುಮೂಳೆಯನ್ನು ಸರಿಯಾದ ಭಂಗಿಯಲ್ಲಿ ಇರಿಸುತ್ತದೆ. ಬೆನ್ನುಮೂಳೆ ಫ್ಯೂಶನ್‌ ಶಸ್ತ್ರಚಿಕಿತ್ಸೆಯು ಬೆನ್ನುಮೂಳೆಯು ಇನ್ನಷ್ಟು ಬಾಗುವುದನ್ನು ತಡೆಯುತ್ತದೆ. ಸಾಮಾನ್ಯವಾಗಿ ಈ ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳು ಬೇಗನೆ ಚೇತರಿಸಿಕೊಳ್ಳುತ್ತಾರೆ. ಈ ಶಸ್ತ್ರಚಿಕಿತ್ಸೆಯ ಬಳಿಕ ಸಾಮಾನ್ಯವಾಗಿ 6-7 ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ ಮತ್ತು 3 ವಾರಗಳ ಬಳಿಕ ಶಾಲೆಗೆ ಹೋಗುವುದನ್ನು ಪುನರಾರಂಭಿಸಬಹುದಾಗಿದೆ.

ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಆರು ತಿಂಗಳುಗಳ ಬಳಿಕ ಮಗು ರೂಢಿಗತ ಎಲ್ಲ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ.

ಸ್ಕೊಲಿಯೋಸಿಸ್‌ ಜತೆಗೆ ಜೀವನ

ಸ್ಕೋಲಿಯೋಸಿಸ್‌ ರೋಗಿಗಳಿಗೆ ದೈಹಿಕ ಚಟುವಟಿಕೆಗಳು ಸಹಾಯ ಮಾಡುತ್ತವೆ. ಹೀಗಾಗಿ ತೊಂದರೆ ಇಲ್ಲದೆ ಇದ್ದರೆ ಅಥವಾ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದ ನಿರ್ದಿಷ್ಟ ಸೂಚನೆ ಇಲ್ಲದೆ ಇದ್ದರೆ ಸ್ಕೋಲಿಯೋಸಿಸ್‌ ರೋಗಿಗಳು ಇಷ್ಟದ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ. ಸ್ಪೈನಲ್‌ ಬ್ರೇಸ್‌ ಅಳವಡಿಸಿದ್ದರೂ ಮಗು ಆಟಗಳಲ್ಲಿ ಅಥವಾ ದಿನನಿತ್ಯದ ಚಟುವಟಿಕೆಗಳನ್ನು ಮಾಡಬಹುದು. ಪ್ರಧಾನ ಸ್ನಾಯುಗಳ ಬಲವರ್ಧನೆ ಬೆನ್ನಿಗೆ ಪ್ರಯೋಜನಕಾರಿಯಾಗುತ್ತದೆ. ಭಾರವಾದ ಬೆನ್ನುಚೀಲವನ್ನು ಧರಿಸುವುದು ತೊಂದರೆದಾಯಕವಾಗಿರುತ್ತದೆ. ಸಾಮಾನ್ಯವಾಗಿ ಭಾರೀ ತೂಕದ ಚೀಲವನ್ನು ಬೆನ್ನಿನಲ್ಲಿ ಹೊರುವುದು ಬೆನ್ನಿಗೆ ಮತ್ತು ಸರಿಯಾದ ಭಂಗಿಗೆ ತೊಂದರೆ ಉಂಟುಮಾಡುತ್ತದೆ. ಆದರೆ ಇದರಿಂದ ಸ್ಕೋಲಿಯೋಸಿಸ್‌ ಉಲ್ಬಣವಾಗುವುದಿಲ್ಲ. ಆದರೆ ಮಕ್ಕಳು ಸರಿಯಾದ ಭಂಗಿಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ.
ಸ್ಕೋಲಿಯೋಸಿಸ್‌ ಎಂಬುದು ತಡೆಗಟ್ಟಬಹುದಾದ ಮತ್ತು ಸುಲಭವಾಗಿ ಚಿಕಿತ್ಸೆಗೆ ಒಳಪಡಿಸಿ ಸರಿಪಡಿಸಬಹುದಾದ ಒಂದು ಸಮಸ್ಯೆ ಎಂಬುದನ್ನು ಎಲ್ಲರೂ ಅರಿತುಕೊಳ್ಳುವುದು ಬಹಳ ಮುಖ್ಯ. ಬೇಗನೆ ಪತ್ತೆಹಚ್ಚುವುದು ಮತ್ತು ಸರಿಯಾದ ಚಿಕಿತ್ಸೆಯನ್ನು ಒದಗಿಸುವುದು ಸ್ಕೋಲಿಯೋಸಿಸ್‌ ತೊಂದರೆ ಹೊಂದಿರುವ ಮಕ್ಕಳು ಚಿಕಿತ್ಸೆಗೆ ಒಳಪಟ್ಟು ಯಶಸ್ವಿಯಾಗಲು ಪ್ರಾಮುಖ್ಯವಾಗಿವೆ. ಸ್ಕೋಲಿಯೋಸಿಸ್‌ಗೆ ತುತ್ತಾಗಿರುವ ಮಕ್ಕಳು ಇತರರಂತೆಯೇ ಸಹಜ ಸಾಮಾನ್ಯ ಜೀವನವನ್ನು ನಡೆಸಬಹುದಾಗಿದೆ.

ತನಗೆ ಸ್ಕೋಲಿಯೋಸಿಸ್‌ ಇದೆ ಎನ್ನುವುದು ಗೊತ್ತಾದರೆ ಸಹಾಯ ಮಾಡಬಲ್ಲ ಮತ್ತು ಹೆಚ್ಚುವರಿ ಮಾಹಿತಿ ಒದಗಿಸಬಲ್ಲ ಜನರನ್ನು ಸಂಪರ್ಕಿಸಬೇಕು. ಈ ನೆರವನ್ನು ಪಡೆದ ಬಳಿಕ ಸ್ಕೋಲಿಯೋಸಿಸ್‌ ತೊಂದರೆ ಹೊಂದಿರುವ ಇತರ ಜನರನ್ನು ಸಂಪರ್ಕಿಸಿ ಅವರಿಂದ ಮಾಹಿತಿ, ಸಲಹೆ ಪಡೆಯಬಹುದು. ಇದರಿಂದ ಮಗುವಿಗೆ ಆತ್ಮವಿಶ್ವಾಸ ವೃದ್ಧಿಸುತ್ತದೆ. ಮಗುವನ್ನು ಆದಷ್ಟು ಬೇಗನೆ ಕುಟುಂಬ ವೈದ್ಯರು ಅಥವಾ ತಜ್ಞ ವೈದ್ಯರಲ್ಲಿಗೆ ಕರೆದೊಯ್ದು ಅದರ ನಿರ್ವಹಣೆಯ ಬಗ್ಗೆ ಸಲಹೆ ಸೂಚನೆಗಳನ್ನು ಪಡೆಯಬೇಕು. ಬೇಗನೆ ಪತ್ತೆ ಮಾಡಲಾದ ಸ್ಕೋಲಿಯೋಸಿಸ್‌ ತೊಂದರೆಯನ್ನು ಸರಳ ವಿಧಾನಗಳಿಂದ ಸರಿಪಡಿಸಬಹುದು; ಮುಂದುವರಿದ ಹಂತಗಳಲ್ಲಿ ಪತ್ತೆಯಾದರೆ ನಿರ್ವಹಣೆ ಕ್ಲಿಷ್ಟವಾಗುತ್ತದೆ.

 

ಡಾ| ಈಶ್ವರಕೀರ್ತಿ ಸಿ.

 ಕನ್ಸಲ್ಟಂಟ್‌ ಸ್ಪೈನ್‌ ಸರ್ಜನ್‌

ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್‌ ರನ್ ಆರಂಭಿಸಿದ ಸಿ.ಟಿ.ರವಿ

Minister Priyank Kharge stays away from Jayadeva Hospital inauguration ceremony

Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

4

Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.