ಅಲ್ಜೀಮರ್ಸ್-ಡಿಮೆನ್ಶಿಯಾ ಬಗ್ಗೆ ಅರಿವು ವಿಸ್ತರಿಸಲಿ
Team Udayavani, Sep 23, 2018, 6:00 AM IST
ಪ್ರತಿವರ್ಷ ಸಪ್ಟಂಬರ್ 21ನ್ನು ಜಾಗತಿಕ ಅಲ್ಜೀಮರ್ಸ್ ದಿನವನ್ನಾಗಿ ಆಚರಿಸಲಾಗುತ್ತದೆ. ಅಲ್ಜೀಮರ್ಸ್ ಅಥವಾ ಮರೆಗುಳಿ ಕಾಯಿಲೆ ಮತ್ತು ಡಿಮೆನ್ಶಿಯಾ ಕಾಯಿಲೆಗಳ ಬಗ್ಗೆ ಅರಿವನ್ನು ವಿಸ್ತರಿಸುವ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸುವುದಕ್ಕಾಗಿ ಜಗತ್ತಿನೆಲ್ಲೆಡೆಯ ಅಲ್ಜೀಮರ್ಸ್ ಸಂಘಸಂಸ್ಥೆಗಳು ಈ ದಿನವನ್ನು ಮೀಸಲಿರಿಸುತ್ತವೆ. ಮಿದುಳಿನ ಕಾರ್ಯನಿರ್ವಹಣೆಯನ್ನು ಬಾಧಿಸುವ ಕಾಯಿಲೆಗಳ ಸಮೂಹವಾಗಿರುವ ಡಿಮೆನ್ಶಿಯಾದ ಅತ್ಯಂತ ಸಾಮಾನ್ಯ ಸ್ವರೂಪವೇ ಅಲ್ಜೀಮರ್ಸ್ ಆಗಿದೆ.
ಜಾಗತಿಕವಾಗಿ ಪ್ರಸ್ತುತ 3.6 ಕೋಟಿ ಮಂದಿ ಡಿಮೆನ್ಶಿಯಾ ರೋಗಿಗಳಿದ್ದಾರೆ ಎಂದು ಅಂದಾಜಿಸಲಾಗಿದ್ದು, ಇವರ ಸಂಖ್ಯೆ 2050ರ ಹೊತ್ತಿಗೆ 11.5 ಕೋಟಿಗಳಿಗೆ ಏರುವ ಲಕ್ಷಣಗಳಿವೆ. ಇಷ್ಟು ಭಾರೀ ಸಂಖ್ಯೆಯಲ್ಲಿ ಜನರು ಡಿಮೆನ್ಶಿಯಾ ಬಾಧೆಗೆ ಒಳಗಾಗುತ್ತಿರುವುದರಿಂದ ಇದನ್ನೊಂದು ಆದ್ಯತೆಯ ಜಾಗತಿಕ ಆರೋಗ್ಯ ಕಾಳಜಿಯಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಈ ಬಗೆಗಿನ ಅಸಡ್ಡೆ, ತಪ್ಪಭಿಪ್ರಾಯ, ಮೂಢನಂಬಿಕೆಗಳನ್ನು ತೊಡೆದುಹಾಕಿ ಡಿಮೆನ್ಶಿಯಾಗೆ ತುತ್ತಾಗಿರುವ ವ್ಯಕ್ತಿಗಳು ಅವರಿಗೆ ಅಗತ್ಯವಾದ ಚಿಕಿತ್ಸೆ, ಆರೈಕೆ ಮತ್ತು ಗಮನವನ್ನು ಪಡೆಯುವುದಕ್ಕೆ ಸಹಕರಿಸಬೇಕಾಗಿದೆ.
ಡಿಮೆನ್ಶಿಯಾ ರೋಗಿಗಳಲ್ಲಿ ಉಂಟಾಗಲಿರುವ ಸಂಖ್ಯಾವೃದ್ಧಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅದರಲ್ಲೂ ವಿಶೇಷವಾಗಿ ಚೀನ, ಭಾರತ ಮತ್ತು ಲ್ಯಾಟಿನ್ ಅಮೆರಿಕದಂತಹ ಕಿಕ್ಕಿರಿದ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿಯೇ ಕಂಡುಬರುವ ಸಾಧ್ಯತೆಯಿದೆ.
ಭಾರತದಲ್ಲಿ ಅಲ್ಜೀಮರ್ಸ್
ಭಾರೀ ಜನಸಂಖ್ಯೆ ಹೊಂದಿರುವ ಎಲ್ಲ ದೇಶಗಳಂತೆಯೇ ಭಾರತದಲ್ಲಿಯೂ (ಭಾರತ ವಿಶ್ವದಲ್ಲಿ ದ್ವಿತೀಯ ಅತಿದೊಡ್ಡ ಜನಬಾಹುಳ್ಯವಿರುವ ದೇಶ) ಹಿರಿಯರು ದೊಡ್ಡ ಪ್ರಮಾಣದಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ತನ್ನ ಅಂತಿಮವಾದ ಮಾರಕ ಆಕ್ರಮಣಕ್ಕೆ ಮುನ್ನ ಸ್ವಲ್ಪವೂ ಮುನ್ಸೂಚನೆಯನ್ನಾಗಲೀ ಎಚ್ಚರಿಕೆಯನ್ನಾಗಲೀ ನೀಡದೆ ಎರಗುವ ಅಲ್ಜೀಮರ್ಸ್ ಕಾಯಿಲೆಯೇ ಈ ಬಿಕ್ಕಟ್ಟು. ನಿಜ, ಆರೋಗ್ಯ ಸಮಸ್ಯೆಗಳು ಅನಿರೀಕ್ಷಿತ; ಆದರೆ ಅವುಗಳನ್ನು ಎದುರಿಸುವ ನಿಟ್ಟಿನಲ್ಲಿ ಸನ್ನದ್ಧರಾಗಿರುವುದು ನಮ್ಮ ಜವಾಬ್ದಾರಿ.
ರೋಗಿಗಳಲ್ಲಿ ಈ ರೋಗಸ್ಥಿತಿಯು ಸಾಮಾನ್ಯವಾಗಿ 50 ವರ್ಷ ವಯಸ್ಸಿನ ಬಳಿಕ ಬಹಿರಂಗವಾಗಲು ತೊಡಗುತ್ತವೆ; ಆದರೆ ಉಲ್ಬಣಗೊಳ್ಳುವ ತನಕ ಕಾಣಿಸಿಕೊಳ್ಳದೆ ಇರಲೂ ಬಹುದು, ಕೆಲವು ಅಪರೂಪದ ಪ್ರಕರಣಗಳಲ್ಲಿ 40 ವರ್ಷ ವಯೋಮಾನದಲ್ಲಿಯೇ ಅಲ್ಜೀಮರ್ಸ್ ಆರಂಭದ ಪೂರ್ವಸೂಚನೆಯಾಗಿ ಗೋಚರಕ್ಕೆ ಬರಬಹುದು.
ಅಲ್ಜೀಮರ್ಸ್ ಡಿಮೆನ್ಶಿಯಾಸ್‌ನ
ಹತ್ತು ಪೂರ್ವಭಾವಿ ಲಕ್ಷಣ ಮತ್ತು
ಸಂಕೇತಗಳು
1. ದೈನಿಕ ಜೀವನವನ್ನು ದಿಕ್ಕುಗೆಡಿಸುವ ಸ್ಮರಣಶಕ್ತಿ ನಷ್ಟ
ಅಲ್ಜೀಮರ್ಸ್ ಕಾಯಿಲೆಯ ಅತ್ಯಂತ ಸಾಮಾನ್ಯ ಲಕ್ಷಣಗಳಲ್ಲಿ ಒಂದು ಸ್ಮರಣ ಶಕ್ತಿ ನಷ್ಟವಾಗುವುದು. ಅದರಲ್ಲೂ ಇತ್ತೀಚೆಗೆ ಕಲಿತ ವಿಷಯಗಳನ್ನು ಮರೆಯುವುದು. ಮರೆತು ಹೋಗುವ ಇತರ ವಿಚಾರಗಳೆಂದರೆ ದಿನಾಂಕಗಳು ಮತ್ತು ಘಟನೆಗಳು, ಪದೇಪದೇ ಒಂದೇ ಮಾಹಿತಿಯನ್ನು ಕೇಳುವುದು, ಸ್ಮರಣೆಗೆ ಸಹಕಾರಿಯಾಗುವ ವಸ್ತು-ವಿಷಯ (ಉದಾ., ಟಿಪ್ಪಣಿಗಳು ಅಥವಾ ಎಲೆಕ್ಟ್ರಾನಿಕ್ ಉಪಕರಣಗಳು)ಗಳನ್ನು ಹೆಚ್ಚು ಅವಲಂಬಿಸುವುದು ಅಥವಾ ಹಿಂದೆ ಸ್ವತಃ ನಿಭಾಯಿಸುತ್ತಿದ್ದ ಕೆಲಸಗಳಿಗೆ ಕುಟುಂಬ ಸದಸ್ಯರನ್ನು ಅವಲಂಬಿಸುವುದು.
– ವಯೋಸಹಜವಾದ ಬದಲಾವಣೆ ಏನು?
ಕೆಲವೊಮ್ಮೆ ಹೆಸರು ಅಥವಾ ದಿನಾಂಕಗಳನ್ನು ಮರೆತು ಆ ಬಳಿಕ ನೆನಪು ಮಾಡಿಕೊಳ್ಳುವುದು.
2. ಯೋಜಿಸುವುದು ಮತ್ತು ಸಮಸ್ಯೆಗಳ ಪರಿಹಾರಕ್ಕೆ ಕಷ್ಟವಾಗುವುದು
ಕೆಲವು ವ್ಯಕ್ತಿಗಳಿಗೆ ಯಾವುದೇ ಒಂದು ಯೋಜನೆಯನ್ನು ಅನುಸರಿಸಲು ಅಥವಾ ಅಂಕಿಸಂಖ್ಯೆಗಳ ಜತೆಗೆ ಕೆಲಸ ಮಾಡಲು ಕಷ್ಟವಾಗಬಹುದು. ಚಿರಪರಿಚಿತ ಅಡುಗೆ ತಯಾರಿ ಅಥವಾ ತಿಂಗಳ ಬಿಲ್ಲುಗಳ ಪಾವತಿ ಆಗಿದೆಯೇ ಇಲ್ಲವೇ ಎಂಬುದರ ಬಗ್ಗೆ ಖಚಿತವಾಗಿರಲು ಸಾಧ್ಯವಾಗದೆ ಇರಬಹುದು. ಏಕಾಗ್ರತೆಯ ಕುಸಿತ ಉಂಟಾಗಬಹುದು, ಹಿಂದೆ ಮಾಡುತ್ತಿದ್ದ ಕೆಲಸಗಳನ್ನು ಮಾಡಲು ಹೆಚ್ಚು ಕಾಲ ತಗಲಬಹುದು.
– ವಯೋಸಹಜವಾದ ಬದಲಾವಣೆ ಏನು?
ಚೆಕ್‌ಬುಕ್ ಲೆಕ್ಕಾಚಾರ ತಾಳೆ ನೋಡುವಾಗ ಯಾವತ್ತಾದರೊಮ್ಮೆ ತಪ್ಪಾಗುವುದು.
3. ಮನೆಯಲ್ಲಿ, ಉದ್ಯೋಗ ಸ್ಥಳದಲ್ಲಿ ಅಥವಾ ವಿಶ್ರಾಮದ ಸಮಯದಲ್ಲಿ ಚಿರಪರಿಚಿತ ಕೆಲಸಗಳನ್ನು ಕೈಗೊಳ್ಳಲು ಕಷ್ಟವಾಗುವುದು
ಅಲ್ಜೀಮರ್ಸ್‌ಗೆ ತುತ್ತಾಗಿರುವ ವ್ಯಕ್ತಿಗಳು ಸಾಮಾನ್ಯವಾಗಿ ದೈನಿಕ ಕೆಲಸ ಕಾರ್ಯಗಳನ್ನು ಪೂರೈಸಲು ತೊಂದರೆ ಅನುಭವಿಸುತ್ತಾರೆ. ಕೆಲವೊಮ್ಮೆ ಪರಿಚಿತವಾದ ಸ್ಥಳಗಳಿಗೆ ವಾಹನ ಚಲಾಯಿಸಲು ಅಥವಾ ಹೋಗುವುದು ಸಮಸ್ಯೆಯಾಗಬಹುದು, ಉದ್ಯೋಗ ಸ್ಥಳದಲ್ಲಿ ದಿನವೂ ನಿರ್ವಹಿಸುವ ಕೆಲಸ ಮಾಡಲು ಕಷ್ಟವಾಗಬಸುದು ಅಥವಾ ಇಷ್ಟವಾಗಿ ಯಾವತ್ತೂ ಆಡುವ ಆಟದ ನಿಯಮಗಳನ್ನು ನೆನಪಿಸಿಕೊಳ್ಳಲು ಸಮಸ್ಯೆಯಾಗಬಹುದು.
– ವಯೋಸಹಜವಾದ ಬದಲಾವಣೆ ಏನು?
ಮೈಕ್ರೊವೇವ್ ಒಲೆಯ ಸೆಟಿಂಗ್ ಮಾಡಲು ಅಥವಾ ಟಿವಿ ಶೋ ಒಂದನ್ನು ರೆಕಾರ್ಡ್ ಮಾಡಿಕೊಳ್ಳಲು ಯಾವತ್ತಾದರೊಮ್ಮೆ ಸಹಾಯ ಬೇಕಾಗಬಹುದು.
4. ಕಾಲ ಮತ್ತು ಸ್ಥಳದ ಕುರಿತು ಗೊಂದಲ/ ಮರೆವು
ಅಲ್ಜೀಮರ್ಸ್‌ಗೆ ತುತ್ತಾಗಿರುವ ರೋಗಿಗಳು ದಿನಾಂಕಗಳು, ಋತುಮಾನ ಮತ್ತು ಸಮಯ ಸರಿದುದನ್ನು ಮರೆತುಬಿಡಬಹುದು. ತತ್‌ಕ್ಷಣವಾದುದರ ಹೊರತಾಗಿ ಇತರ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಕಷ್ಟವಾಗಬಹುದು. ಕೆಲವೊಮ್ಮೆ ತಾವು ಎಲ್ಲಿದ್ದೇವೆ ಅಥವಾ ಇಲ್ಲಿಗೆ ಹೇಗೆ ಬಂದೆವು ಎಂಬುದೇ ಅವರಿಗೆ ಜ್ಞಾಪಕವಿಲ್ಲದೆ ಇರಬಹುದು.
– ವಯೋಸಹಜವಾದ ಬದಲಾವಣೆ ಏನು?
ದಿನಾಂಕ ಅಥವಾ ವಾರವನ್ನು ಯಾವಾಗಾದರೊಮ್ಮೆ ಮರೆಯುವುದು, ಆದರೆ ಬಳಿಕ ನೆನಪಾಗುವುದು.
5. ದೃಶ್ಯ ಚಿತ್ರಣ ಮತ್ತು ದೂರ, ಅಂತರಗಳನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಮಸ್ಯೆ
ಕೆಲವು ಮಂದಿಗೆ ದೃಷ್ಟಿ ದೋಷಗಳೂ ಅಲ್ಜೀಮರ್ಸ್‌ನ ಲಕ್ಷಣವಾಗಿರುತ್ತವೆ. ಓದುವುದಕ್ಕೆ, ದೂರವನ್ನು ಅಂದಾಜು ಮಾಡುವುದಕ್ಕೆ ಅಥವಾ ಬಣ್ಣವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಅವರಿಗೆ ತೊಡಕಾಗುತ್ತದೆ, ಇದರಿಂದ ವಾಹನ ಚಲಾಯಿಸುವುದು ಕಷ್ಟವಾಗುತ್ತದೆ.
– ವಯೋಸಹಜವಾದ ಬದಲಾವಣೆ ಏನು?
ಕ್ಯಾಟರ್ಯಾಕ್ಟ್ಗೆ ಸಂಬಂಧಿಸಿದ ದೃಷ್ಟಿ ಶಕ್ತಿ ಬದಲಾವಣೆಗಳು.
6. ಮಾತನಾಡುವುದು ಮತ್ತು ಬರವಣಿಗೆಯಲ್ಲಿ ಶಬ್ದಗಳಿಗೆ ಸಂಬಂಧಿಸಿ ಹೊಸ ಸಮಸ್ಯೆಗಳು
ಅಲ್ಜೀಮರ್ಸ್‌ಗೆ ತುತ್ತಾಗಿರುವ ವ್ಯಕ್ತಿಗಳಿಗೆ ಮಾತನಾಡುವಾಗ ವಾಕ್ಯಗಳನ್ನು ಜೋಡಿಸಲು ಸಮಸ್ಯೆಯಾಗುತ್ತದೆ. ಸಂಭಾಷಣೆ ನಡೆಸುತ್ತಿರುವಾಗ ಹೇಗೆ ಮುಂದುವರಿಸುವುದು ಎಂಬುದು ಗೊತ್ತಾಗದೆ ಅರ್ಧದಲ್ಲಿಯೇ ನಿಲ್ಲಿಸಿಬಿಡಬಹುದು ಅಥವಾ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರಬಹುದು. ಪದಗಳಿಗಾಗಿ ತಡಕಾಡಬಹುದು ಅಥವಾ ಸರಿಯಾದ ಪದಗಳು ಸಿಗದಿರಬಹುದು ಅಥವಾ ವಸ್ತುಗಳನ್ನು ತಪ್ಪಾಗಿ ಸಂಬೋಧಿಸಬಹುದು.
– ವಯೋಸಹಜವಾದ ಬದಲಾವಣೆ ಏನು?
ಯಾವಾಗಾದರೊಮ್ಮೆ ಸರಿಯಾದ ಪದಗಳು ಸಿಗದೆ ಗೊಂದಲವಾಗುವುದು.
(ಮುಂದುವರಿಯುತ್ತದೆ)
ಡಾ| ಕೇಶವ ಪೈ,
ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು
ಮನೋವೈದ್ಯಕೀಯ ವಿಭಾಗ,
ಕೆಎಂಸಿ ಆಸ್ಪತ್ರೆ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.