ಮಕ್ಕಳಲ್ಲಿ  ಕ್ರೀಡೆ ಸಂಬಂಧಿ ಗಾಯಗಳು : ತಡೆ ಮತ್ತು ಆರೈಕೆ


Team Udayavani, Jun 20, 2021, 1:43 PM IST

Sports-related injuries

ಶಾಲೆಯ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮ ಮಕ್ಕಳು ಉತ್ತಮ ಸಾಧನೆಗಳನ್ನು ಮಾಡಿದಾಗ ಹೆತ್ತವರು ಹೆಮ್ಮೆ ಪಟ್ಟುಕೊಳ್ಳುತ್ತಾರೆ. ಮಕ್ಕಳು ಬಗಲಿಗೆ ಹಾಕಿಕೊಂಡ ರಿಬ್ಬನ್‌ಗಳು ಮತ್ತು ಪದಕಗಳನ್ನು ಸದಾ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ ಹಾಗೂ ಹುಮ್ಮಸ್ಸು ಮತ್ತು ಒಲುಮೆಯಿಂದ ಪ್ರದರ್ಶಿಸುತ್ತಾರೆ. ಆದರೆ ಮಗು ಕ್ರೀಡಾಂಗಣದಲ್ಲಿ ಗಾಯಗೊಂಡಾಗ ಅವರ ಮನಸ್ಸು ಅಷ್ಟೇ ಮರುಗುತ್ತದೆ. ಆಟೋಟಗಳಲ್ಲಿ ಪಾಲ್ಗೊಳ್ಳುವಾಗ ಮಕ್ಕಳು ಗಾಯಗೊಳ್ಳದಂತೆ ತಡೆಯುವುದು ಹೇಗೆ ಮತ್ತು ಗಾಯಗಳುಂಟಾದರೆ ಹೇಗೆ ಆರೈಕೆ ನೀಡಬೇಕು ಎಂಬ ವಿಚಾರವಾಗಿ ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಗಾಯಗಳಲ್ಲಿ ಸಾಮಾನ್ಯವಾಗಿ ಎರಡು ವಿಧಗಳು,

ಒಂದನೆಯದು ಟ್ರೊಮ್ಯಾಟಿಕ್‌ ಹಾನಿ (ಆಟವಾಡುತ್ತಿರುವ ಸಂದರ್ಭದಲ್ಲಿ ಮಗುವಿನ ಹಠಾತ್ತಾಗಿ ಅಂಗಾಂಗಗಳು ತಿರುಚಿಕೊಳ್ಳುವುದು ಅಥವಾ ಬೀಳುವುದು ಅಥವಾ ಢಿಕ್ಕಿ ಹೊಡೆಯುವುದು); ಇನ್ನೊಂದು ಅತೀ ಬಳಕೆಯ ಹಾನಿ (ಯಾವುದೇ ಗಾಯವಾಗುವ ಸಂದರ್ಭ ಇಲ್ಲದೆ ಪುನರಾವರ್ತಿತ ಚಟುವಟಿಕೆಯಿಂದ ಉಂಟಾಗುವಂಥದ್ದು).

ಹಾನಿಯ ಬಳಿಕ ಮಗುವಿಗೆ ತರಚುಗಾಯ, ಚರ್ಮ ಹರಿಯುವುದು, ಸ್ನಾಯು ಹರಿಯುವಿಕೆ/ ಲಿಗಮೆಂಟ್‌ ಹರಿಯುವಿಕೆ/ ಎಲುಬಿಗೆ ಗಾಯ (ಮುರಿತ ಮತ್ತು ಸ್ಥಾನಪಲ್ಲಟ), ಮಿದುಳಿಗೆ ಗೊಂದಲ ಇತ್ಯಾದಿಗಳು ಉಂಟಾಗಬಹುದು. ಹೆಚ್ಚು ತೀವ್ರವಾದ ತರಬೇತಿಗಳಿಂದ ಅತೀ ಬಳಕೆಯ ಸಮಸ್ಯೆಗಳಾದ ಒತ್ತಡದ ಮುರಿತದಂತಹವು ಉಂಟಾಗಬಹುದು.

ಯಾವ ಸಂದರ್ಭಗಳಲ್ಲಿ  ಮಗುವನ್ನು ವೈದ್ಯರ ಬಳಿಗೆ ಕರೆದೊಯ್ಯಬೇಕು?

ಮಗುವಿನ ತಲೆಗೆ ಗಾಯವಾಗಿದ್ದು, ಮಗು ಮಬ್ಟಾಗಿದ್ದರೆ, ನಿದ್ದೆ ತೂಗುತ್ತಿರುವಂತೆ ಇದ್ದರೆ, ಅವಘಡವನ್ನು ನೆನಪಿಸಿಕೊಳ್ಳಲು ಅಸಮರ್ಥವಾಗಿದ್ದರೆ, ಪ್ರಜ್ಞೆ ತಪ್ಪಿದ್ದರೆ, ತಲೆನೋವು ಉಂಟಾಗಿದ್ದರೆ, ಹೊಟ್ಟೆ ತೊಳೆಸುವಿಕೆ/ ವಾಂತಿ ಆಗುತ್ತಿದ್ದರೆ, ಮೈಕೈ ನಡುಕ ಉಂಟಾಗುತ್ತಿದ್ದರೆ ಅಥವಾ ದೃಷ್ಟಿ ಮಂಜು, ಮಾತನಾಡಲು ಸಮಸ್ಯೆ ಉಂಟಾಗಿದ್ದರೆ – ಮಿದುಳಿಗೆ ಹಾನಿಯಾಗಿರಬಹುದಾದ ಸಾಧ್ಯತೆಗಳಿದ್ದು, ತತ್‌ಕ್ಷಣ ವೈದ್ಯರ ಬಳಿಗೆ ಕರೆದೊಯ್ಯಬೇಕು. ಗಾಯವಾದ ಸ್ಥಳದಲ್ಲಿ ತೀವ್ರವಾದ ನೋವಿದ್ದು, ಆ ಭಾಗವನ್ನು ಮುಟ್ಟುವುದಕ್ಕೂ ಮಗು ಬಿಡದೆ ಇದ್ದರೆ, ಕೈ-ಕಾಲನ್ನು ಊರುವುದಕ್ಕೆ ಸಾಧ್ಯವಾಗದೆ ಇದ್ದರೆ, ಅಲ್ಲಿ ತತ್‌ಕ್ಷಣ ಊತ ಕಂಡುಬಂದಿದ್ದರೆ ಆಗ ಮೂಳೆ ಮುರಿತ ಅಥವಾ ಮೃದು ಅಂಗಾಂಶ ಗಾಯವಾಗಿರುವ ಸಾಧ್ಯತೆ ಇರುತ್ತದೆ. ಗಾಯದಿಂದ ಸತತ ರಕ್ತಸ್ರಾವವಾಗುತ್ತಿದ್ದು, ಐಸ್‌ ಇರಿಸಿ ಒತ್ತಡ ಹಾಕಿದ ಐದು ನಿಮಿಷಗಳ ಬಳಿಕವೂ ನಿಲ್ಲದೆ ಇದ್ದರೆ ಹೊಲಿಗೆ ಹಾಕಬೇಕಾದ ಆವಶ್ಯಕತೆ ಇರುತ್ತದೆ. ಹೊಟ್ಟೆ, ಎದೆಯಂತಹ ಭಾಗಗಳಲ್ಲಿ ಗಾಯವಾಗಿರುವ ಸಂದರ್ಭಗಳಲ್ಲಿಯೂ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

 ಮಗುವಿಗೆ ಕ್ರೀಡಾಂಗಣದಲ್ಲಿ ಗಾಯ ಉಂಟಾದಾಗ ನೀವು ಏನು ಮಾಡಬಹುದು?

ಗಡಿಬಿಡಿ ಮಾಡಬೇಡಿ! ಇಂತಹ ಬಹುತೇಕ ಗಾಯಗಳು, ಸರಿಯಾದ ಚಿಕಿತ್ಸೆ ನೀಡಿ ಸಾಕಷ್ಟು ವಿಶ್ರಾಂತಿ ತೆಗೆದುಕೊಂಡಾಗ ಪೂರ್ಣವಾಗಿ ಗುಣವಾಗುತ್ತವೆ ಮತ್ತು ಮಗು ಶೀಘ್ರವಾಗಿ ಸಹಜ ಸ್ಥಿತಿಗೆ ಬರುತ್ತದೆ. ಇಂಗ್ಲಿಷ್‌ ಭಾಷೆಯ ಅಕ್ಷರಗಳಾದ “Rಐಇಉ’ ಪದ್ಧತಿ (ಆರ್‌: ರೆಸ್ಟ್‌ – ವಿಶ್ರಾಂತಿ, ಐ: ಐಸ್‌ – ಮಂಜುಗಡ್ಡೆ, ಸಿ: ಕಂಪ್ರಶನ್‌ – ಒತ್ತುವಿಕೆ ಮತ್ತು ಇ: ಎಲೆವೇಶನ್‌ – ಎತ್ತರದಲ್ಲಿ ಇರಿಸುವುದು)ಯು ಇಂತಹ ಗಾಯಗಳುಂಟಾದ ಸಂದರ್ಭದಲ್ಲಿ ಅನುಸರಿಸುವ ಸಾರ್ವತ್ರಿಕವಾಗಿ ಸ್ವೀಕೃತವಾಗಿರುವ ಪದ್ಧತಿಯಾಗಿದೆ. ಬಾಧಿತ ಪ್ರದೇಶಕ್ಕೆ ವಿಶ್ರಾಂತಿ ನೀಡುವುದರಿಂದ (ಸ್ಪ್ಲಿಂಟ್‌ ಧರಿಸಿ ಅಥವಾ ಧರಿಸದೆ) ಆ ಭಾಗ ಚಲಿಸುವುದನ್ನು ತಡೆಯಬಹುದು ಮತ್ತು ನೋವು, ರಕ್ತಸ್ರಾವ ಮತ್ತು ಇನ್ನಷ್ಟು ಗಾಯವಾಗುವುದನ್ನು ತಡೆಯಬಹುದು. ಉದಾಹರಣೆಗೆ, ಮಗುವಿಗೆ ಪಾದ ಸಂಧಿಯ ಗಾಯವಾಗಿದ್ದರೆ ಮಗುವನ್ನು ನಡೆಯಿಸದೆ ಎತ್ತಿಕೊಂಡು ಕರೆದೊಯ್ಯಿರಿ. ಐಸ್‌ ಪ್ಯಾಕ್‌ಗಳು ಎಲ್ಲೆಡೆಯೂ ಲಭ್ಯವಿದ್ದು, ಹೆತ್ತವರು ತಮ್ಮ ಮನೆಯ ಫ್ರಿಜ್‌ನಲ್ಲಿ ಐಸ್‌ ಪ್ಯಾಕ್‌ಗಳನ್ನು ಇರಿಸಿಕೊಂಡಿರುವುದು ಉತ್ತಮ ಕ್ರಮವಾಗಿದೆ.

ಗಾಯವುಂಟಾದ ಆರಂಭಿಕ ತಾಸುಗಳಲ್ಲಿ ಆ ಭಾಗದ ಮೇಲೆ ಐಸ್‌ಪ್ಯಾಕ್‌ ಇರಿಸುವುದರಿಂದ ರಕ್ತನಾಳಗಳು ಸಂಕುಚನಗೊಂಡು ರಕ್ತಸ್ರಾವ ನಿಲ್ಲುತ್ತದೆ. ಇದರಿಂದಾಗಿ ಆ ಭಾಗ ಬಣ್ಣಗುಂದುವುದು, ಊದಿಕೊಳ್ಳುವುದು ಮತ್ತು ನೋವು ಕೂಡ ಕಡಿಮೆಯಾಗುತ್ತದೆ. ದಪ್ಪನೆಯ ಒದ್ದೆ ಬಟ್ಟೆಯಲ್ಲಿ ಮಂಜುಗಡ್ಡೆಯನ್ನು ಸುತ್ತಿ ಗಾಯವಾದ ಭಾಗದ ಮೇಲೆ ಇರಿಸಿ, ಇದನ್ನು 4 ತಾಸುಗಳಿಗೆ ಒಮ್ಮೆ ಪುನರಾವರ್ತಿಸಿ. ಗಾಯವಾದ ಮೊದಲ 2 ದಿನಗಳ ಕಾಲ ಆ ಭಾಗದ ಮೇಲೆ ಬಿಸಿ ತಾಗಿಸಬೇಡಿ. ಬಿಸಿ ತಾಗಿಸಿದರೆ ರಕ್ತನಾಳಗಳು ಮತ್ತೆ ತೆರೆದುಕೊಂಡು ಮತ್ತಷ್ಟು ಊತ ಮತ್ತು ನೋವು ಕಾಣಿಸಿಕೊಳ್ಳಬಹುದು. ಕ್ರೇಪ್‌ ಬ್ಯಾಂಡೇಜ್‌ ಬಿಗಿದು ಗಾಯವಾದ ಭಾಗದ ಮೇಲೆ ಲಘುವಾಗಿ ಒತ್ತಡ ಹಾಕುವುದು ಊತವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಆದರೆ ತೀರಾ ಬಿಗಿಯಾಗಿ ಕಟ್ಟಲೂ ಬಾರದು, ಹಾಗೆ ಮಾಡಿದರೆ ಅದು ಪ್ರಯೋಜನಕ್ಕಿಂತ ಹಾನಿಯನ್ನು ಉಂಟುಮಾಡುತ್ತದೆ.

ಗಾಯವಾದ ಕಾಲು ಅಥವಾ ತೋಳನ್ನು ಹೃದಯದ ಮಟ್ಟಕ್ಕಿಂತ ಎತ್ತರದಲ್ಲಿ ಇರಿಸುವುದು ಕೂಡ ಊತ ಮತ್ತು ನೋವನ್ನು ಕಡಿಮೆ ಮಾಡಲು ಸಹಕಾರಿ. ಗಾಯದಿಂದ ರಕ್ತಸ್ರಾವ ಆಗುತ್ತಿದ್ದರೆ ಅದನ್ನು ಶುದ್ಧವಾದ ನಲ್ಲಿ ನೀರಿನಲ್ಲಿ ತೊಳೆಯಬೇಕು (ಸಾಧ್ಯವಿದ್ದರೆ), ಶುದ್ಧ ಬಟ್ಟೆಯಿಂದ ಸುತ್ತಿ ಗಾಯದ ಮೇಲೆ ಬ್ಯಾಂಡೇಜ್‌ ಹಾಕಬೇಕು.

ಆಟವಾಡುವ ಮಗು: ನೆನಪಿಟ್ಟುಕೊಳ್ಳಬೇಕಾದ ಅಂಶಗಳು

ಕ್ರೀಡಾಕೂಟ/ ಪಂದ್ಯಾಟಕ್ಕಿಂತ 2-3 ತಾಸು ಮುನ್ನ ಮಗುವಿಗೆ ಉತ್ತಮ, ಪೌಷ್ಟಿಕಾಂಶ ಸಮತೋಲಿತ ಆಹಾರ (ಸಾಕಷ್ಟು ಪ್ರಮಾಣದಲ್ಲಿ ಕಾಬೊìಹೈಡ್ರೇಟ್‌/ ಸ್ವಲ್ಪ ಪ್ರೊಟೀನ್‌/ ಕಡಿಮೆ ಕೊಬ್ಬು/ ಹೆಚ್ಚು ಸಕ್ಕರೆಭರಿತ ಆಹಾರಗಳು ಅಥವಾ ಜಂಕ್‌ ಆಹಾರಗಳು ಬೇಡ)ದ ಅಗತ್ಯವಿರುತ್ತದೆ. ಮಕ್ಕಳಲ್ಲಿ ಬಿಸಿಲಿಗೆ ಒಡ್ಡಿಕೊಳ್ಳುವುದರಿಂದ ತೊಂದರೆಗಳು ಉಂಟಾಗುತ್ತವೆ. ಮಕ್ಕಳಿಗಾಗಿ ಲಭ್ಯವಿರುವ ಸನ್‌ಸ್ಕ್ರೀನ್‌ ಲೋಶನ್‌ಗಳನ್ನು ಉಪಯೋಗಿಸಬಹುದು.

ಮಗು ಚೆನ್ನಾಗಿ ನೀರು ಕುಡಿಯಲಿ. ಆಟೋಟ ಮುಗಿದ 20 ನಿಮಿಷಗಳ ಬಳಿಕ ನೀರು ಕುಡಿಯಬಹುದು. ಆಟೋಟದ ಸಂದರ್ಭದಲ್ಲಿ ಮಗು 1 ತಾಸಿಗೂ ಹೆಚ್ಚು ಕಾಲ ಹೊರಗೆ ಬಿಸಿಲಿನಲ್ಲಿ ಇರಬೇಕಾಗಿದ್ದರೆ ನೀರಿನ ಜತೆಗೆ ಸೋಡಿಯಂನಂತಹ ಎಲೆಕ್ಟ್ರೊಲೈಟ್‌ಗಳನ್ನೂ ಪೂರೈಸಬೇಕಾದ ಅಗತ್ಯವಿರುತ್ತದೆ. ಉಪ್ಪು ಬೆರೆಸಿದ ಲಿಂಬೂ ಶರಬತ್ತು ಇದಕ್ಕೆ ಉತ್ತಮ. ಮಗು ಆತ/ಆಕೆ ಆಡುತ್ತಿರುವ ಆಟಕ್ಕೆ ತಕ್ಕಂತಹ ರಕ್ಷಣಾತ್ಮಕ ತೊಡುಗೆಗಳನ್ನು ಧರಿಸಿರುವುದನ್ನು ಖಾತರಿಪಡಿಸಿಕೊಳ್ಳಿ. ಮಗುವಿಗೆ ಗಾಯವಾಗುವ ಸಾಧ್ಯತೆ ಇದ್ದಾಗ ಸನ್ನದ್ಧವಾಗಿರಿ. ಇದೆಲ್ಲದಕ್ಕಿಂತ ಹೆಚ್ಚಾಗಿ, ಗೆಲ್ಲುವುದಕ್ಕಾಗಿ ಅನಗತ್ಯ ಒತ್ತಡ ಹೇರದೆ ಕ್ರೀಡಾಸ್ಫೂರ್ತಿಯಿಂದ ಪ್ರೋತ್ಸಾಹಿಸಿ; ಏಕೆಂದರೆ ಗೆಲ್ಲುವುದೇ ಆಟವಾಡುವುದರ ಉದ್ದೇಶವಲ್ಲ.

ಬದಲಾಗಿ, ಕ್ರೀಡೆಯಲ್ಲಿ ಭಾಗವಹಿಸುವುದು, ಕಲಿಯುವುದು, ವೈಯಕ್ತಿಕ ಬೆಳವಣಿಗೆ ಮತ್ತು ಆಟವಾಡಿ ಖುಷಿ ಪಡುವುದು ಆರೋಗ್ಯಕರ ವಯಸ್ಕನಾ/ಳಾಗಿ ನಿಮ್ಮ ಮಗು ಬೆಳೆಯುವ ದೃಷ್ಟಿಯಿಂದ ಮುಖ್ಯವಾಗಿರುತ್ತದೆ. ಮಕ್ಕಳು ಮೆಡಲುಗಳನ್ನು ಮರೆಯಬಹುದು; ಆದರೆ ಆಟವಾಡಿದ್ದರಿಂದ ಸಿಗುವ ಮೋಜನ್ನು ಮರೆಯುವುದಿಲ್ಲ.

 

ಡಾ| ಆ್ಯನ್‌ ಮೇರಿ ಜಾನ್‌

ಅಸಿಸ್ಟೆಂಟ್‌ ಪ್ರೊಫೆಸರ್‌

ಪಿಸಿಕಲ್‌ ಮೆಡಿಸಿನ್‌ ಮತ್ತು ರಿಹ್ಯಾಬಿಲಿಟೇಶನ್‌ ವಿಭಾಗ, ಕೆಎಂಸಿ, ಮಂಗಳೂರು

 

ಟಾಪ್ ನ್ಯೂಸ್

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Naxal ಎನ್‌ಕೌಂಟರ್‌ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.