ಎಳೆಯರಲ್ಲಿ ತೊದಲು ಮಾತು


Team Udayavani, Feb 4, 2018, 6:00 AM IST

stuttering1.jpg

ಎಳೆಯ ಮಕ್ಕಳು ನಡೆಯಲು ಕಲಿಯುವಾಗ ಹೆತ್ತವರು ಅವರ ಕೈಹಿಡಿದು ಮುನ್ನಡೆಸುವುದನ್ನು ನೋಡುವುದೇ ಒಂದು ಚೆಂದ. ಪ್ರತಿ ಬಾರಿ ಮಗು ಮುಗ್ಗರಿಸಿದಾಗ, ಕೆಳಬಿದ್ದಾಗ ಹೆತ್ತವರು ಮಗುವನ್ನು ಮೇಲೆದ್ದು ನಡೆಯುವಂತೆ ಹುರಿದುಂಬಿಸುತ್ತಾರೆ. ಆದರೆ, ಮಗು ಮಾತನಾಡಲು ಕಲಿಯುತ್ತಾ ತೊದಲು ನುಡಿಗಳನ್ನು ಆಡುವಾಗ ಅಪ್ಪ – ಅಮ್ಮಂದಿರ ಆ ಹುರಿದುಂಬಿಸುವಿಕೆ ಎಲ್ಲಿ ಮಾಯವಾಗುತ್ತದೆ ಎಂದು ಸಖೇದಾಶ್ಚರ್ಯವಾಗುತ್ತದೆ. ನಿಜ, ನಿಮ್ಮ ಆಲೋಚನೆ ಸರಿ. ನಾನು ಹೇಳುತ್ತಿರುವುದು ಬೆಳೆಯುತ್ತಿರುವ ಮಗುವಿನ ತೊದಲು ಮಾತಿನ ಬಗ್ಗೆ. ಎಳೆಯ ಮಗುವಿನ ಮಾತು ಸರಾಗವಾಗಿ ಇರದೆ ಅಡಚಣೆ ವ್ಯಕ್ತಗೊಂಡು ತೊದಲಿದರೆ (ನ…ನ…. ನನಾನು…. ಗ….ಗಗಗಗನ್‌…- ಹೀಗೆ) ಕೆಲವು ಹೆತ್ತವರು ಮಗುವಿನ ಮಾತಿನ ಬಗ್ಗೆ ತೀವ್ರ ಕಳವಳಗೊಳ್ಳುತ್ತಾರೆ ಮತ್ತು ಋಣಾತ್ಮಕ ತೀರ್ಮಾನಕ್ಕೆ ಬರುತ್ತಾರೆ. 

ಹೆತ್ತವರ ಈ ಕಳವಳ ಸಹಜವೇ ಆದರೂ ಅದು ಮಗುವಿನ ಸ್ಥಿತಿ ಇನ್ನಷ್ಟು ಕಂಗೆಡಲು ಕಾರಣವಾಗುತ್ತದೆ; ಮಗು ತನ್ನ ಮಾತಿನ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತದೆ, ಮಾತನ್ನು ದೂರ ಮಾಡಲು ಹವಣಿಸುತ್ತದೆ, ಅದರ ಆತ್ಮವಿಶ್ವಾಸ ಕುಗ್ಗುತ್ತದೆ, ಕೀಳರಿಮೆ ಬೆಳೆಯಿಸಿಕೊಳ್ಳುತ್ತದೆ. ಮಗುವಿನ ತೊದಲುವಿಕೆಯ ಬಗ್ಗೆ ಕಾಳಜಿ ಉತ್ತಮವೇ ಆದರೂ ಅದನ್ನು ವ್ಯಕ್ತಪಡಿಸುವಾಗ ಎಚ್ಚರಿಕೆ ಬೇಕು. ತೊದಲು ಮಾತನ್ನು ಅತಿಯಾಗಿ ಸರಿಪಡಿಸುವುದು ಅಥವಾ ಸಿಟ್ಟುಗೊಳ್ಳುವಂತಹ ಋಣಾತ್ಮಕ ರೀತಿಗಳಲ್ಲಿ ಹೆತ್ತವರು ತಮ್ಮ ಕಾಳಜಿಯನ್ನು ವ್ಯಕ್ತಪಡಿಸುವುದು ಯಾವುದೇ ರೀತಿಯಲ್ಲಿ ಪ್ರಯೋಜನಕಾರಿಯಲ್ಲ. ಮಗುವಿನ ಮಾತುಗಾರಿಕೆಯ ಬಗ್ಗೆ ಹೆತ್ತವರಿಗೆ ಇರುವ ಕಾಳಜಿಯನ್ನು ಸರಿಯಾದ ರೀತಿಯಲ್ಲಿ, ಸರಿಯಾದ ದಿಕ್ಕಿನಲ್ಲಿ ವ್ಯಕ್ತಪಡಿಸುವುದು ಬಹಳ ಮುಖ್ಯ. ಮಾತುಗಾರಿಕೆಯಲ್ಲಿ ಸಹಜವಾದ ತಡೆ ಮತ್ತು ತೊದಲುವಿಕೆಯ ನಡುವೆ ಬಹಳ ತೆಳುವಾದ ಅಂತರವಿದೆ; ಇವೆರಡನ್ನೂ ಪ್ರತ್ಯಪ್ರತ್ಯೇಕವಾಗಿ ನಿಭಾಯಿಸಬೇಕಾದ ಅಗತ್ಯವಿದೆ. 

ಮಗುವಿನ ಮಾತಿನಲ್ಲಿ ವ್ಯಕ್ತವಾಗುವ ಅಡೆತಡೆಗಳು ಸಹಜವೇ ಅಥವಾ ಅಸಹಜ ಸ್ವರೂಪದ ಸಮಸ್ಯೆಯೇ ಎಂಬುದನ್ನು ತಿಳಿದುಕೊಳ್ಳಲು ಹೆತ್ತವರು ಪರಿಣತ ವಾಕ್‌ಶಾಸ್ತ್ರಜ್ಞ  (ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿಸ್ಟ್‌)ಜತೆಗೆ ಸಮಾಲೋಚಿಸಬೇಕು. ಈ ಎರಡೂ ಸಂದರ್ಭಗಳಲ್ಲಿ ಮಗುವಿನ ಮಾತುಗಾರಿಕೆಯನ್ನು ಸರಿಪಡಿಸಲು ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬುದಾಗಿ ವಾಕ್‌ಶಾಸ್ತ್ರಜ್ಞರು ಸಲಹೆ ನೀಡಬಹುದಾಗಿದೆ. ಬಾಲ್ಯದಲ್ಲಿ, ಅಂದರೆ 3ರಿಂದ 6 ವರ್ಷದೊಳಗಿನ ವಯೋಮಾನದಲ್ಲಿ ಈ ಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸದೆ ಇದ್ದರೆ ಅದು ಪೂರ್ಣ ಪ್ರಮಾಣದ ತೊದಲುವಿಕೆ ಅಥವಾ ಉಗ್ಗುವಿಕೆಯಾಗಿ ಉಲ್ಬಣಗೊಂಡು ಜೀವನಪೂರ್ತಿ ಮುಂದುವರಿಯಬಲ್ಲುದು. 

ನಮ್ಮ ಸಾಮಾಜಿಕ ಬದುಕು, ಸಂವಹನದಲ್ಲಿ ಮಾತುಗಾರಿಕೆಯು ಬಹಳ ಪ್ರಾಮುಖ್ಯವಾದ ಪಾತ್ರವನ್ನು ಹೊಂದಿರುವುದರಿಂದ ಉಗ್ಗುವಿಕೆಯು ವ್ಯಕ್ತಿಯ ಮುಂದಿನ ಜೀವನದಲ್ಲಿ ಅನೇಕ ಚಟುವಟಿಕೆಗಳಿಂದ ದೂರವಿರಬೇಕಾದಂತಹ ಸ್ಥಿತಿ, ಚಟುವಟಿಕೆಗಳಿಗೆ ಅಡಚಣೆ ಉಂಟು ಮಾಡುವ ಸಾಧ್ಯತೆ ಇರುತ್ತದೆ. ತರಗತಿಯಲ್ಲಿ ಸಹಪಾಠಿಗಳಿಂದ ನಿಂದನೆ, ತಮಾಷೆಗೀಡಾಗುವುದು, ಶಾಲಾಕಾಲೇಜು ವರ್ಷಗಳಲ್ಲಿ ಶೈಕ್ಷಣಿಕವಾಗಿ ಅಡಚಣೆ, ಗೆಳೆಯ-ಗೆಳತಿಯರು ಮತ್ತು ಅಪರಿಚಿತರ ಜತೆಗೆ ಸಂಭಾಷಿಸಲು ಅನನುಕೂಲ, ಸರಿಯಾದ ಉದ್ಯೋಗ ಲಭಿಸಲು ಕಷ್ಟ, ವೈವಾಹಿಕ ಬದುಕಿನಂತಹ ಅನೇಕ ಖಾಸಗಿ ತೊಂದರೆಗಳ ಸಹಿತ ಉಗ್ಗುವಿಕೆಯು ವ್ಯಕ್ತಿಯ ಬದುಕಿಗೆ ಮಿತಿಯನ್ನು ವಿಧಿಸುತ್ತದೆ. 

ಎಳೆಯ ಮಕ್ಕಳ ಬೆಳೆಯುವ ವಯಸ್ಸಿನಲ್ಲಿಯೇ ತೊದಲುವಿಕೆಯನ್ನು ಸಮರ್ಪಕ ಪರಿಹಾರದ ಮೂಲಕ ಸರಿಯಾಗಿ ನಿಭಾಯಿಸುವುದು ಬಳ ಮುಖ್ಯ. ಈ ಕ್ಷೇತ್ರದಲ್ಲಿ ಪರಿಣತರಾದ ಅಧ್ಯಯನಕಾರರು “ಮಗುವಿನ ತೊದಲು ನುಡಿ ಆರಂಭವಾಗುವುದು ತಾಯ್ತಂದೆಯರ ಕಿವಿಗಳಲ್ಲಿ, ಮಗುವಿನ ಬಾಯಲ್ಲಲ್ಲ’ ಎಂದು ಪ್ರತಿಪಾದಿಸುತ್ತಾರೆ. ಮಗುವಿನ ತೊದಲು ಮಾತಿನ ಕಡೆಗೆ ಹೆತ್ತವರ ಋಣಾತ್ಮಕ ಪ್ರತಿಕ್ರಿಯೆಯೇ ಮಾತಿನ ಸಹಜ ಅಡೆತಡೆ, ತೊದಲುವಿಕೆಯನ್ನು ಉಗ್ಗುವಿಕೆಯಾಗಿ ಬೆಳೆಸುತ್ತದೆ. 

ಹೆತ್ತವರಾಗಿ ಪ್ರತಿಯೊಬ್ಬರೂ ತಮ್ಮ ಮಗುವಿನ ಮಾತಿನ ಲೋಪದೋಷಗಳ ಬಗ್ಗೆ ಗಮನವಿರಿಸಬೇಕಾಗುತ್ತದೆ. ಆದರೆ ಇದೇ ವೇಳೆ ಅದು ಮಗುವಿನ ಭವಿಷ್ಯ ಜೀವನದ ಒಂದು ಪ್ರಮುಖ ಸಮಸ್ಯೆಯಾಗಿ ಬೆಳೆದು ನಿಲ್ಲುವುದಕ್ಕೆ ಕಾರಣರಾಗದಂತೆ ಎಚ್ಚರವನ್ನೂ ವಹಿಸಬೇಕಾಗುತ್ತದೆ. ಆದ ಕಾರಣ, ನಿಮ್ಮ ಮಗು ಅಥವಾ ನಿಮಗೆ ಗೊತ್ತಿರುವ ಯಾವುದೇ ಮಗು ಅಡೆತಡೆದು ಮಾತನಾಡುತ್ತಿದ್ದರೆ, ತೊದಲುತ್ತಿದ್ದರೆ ಮಗುವಿನ ಮಾತಿನ ಬಗ್ಗೆ ಋಣಾತ್ಮಕ ಪ್ರತಿಕ್ರಿಯೆ ನೀಡದಿರಿ. ಮಗು ಎದ್ದು ಬಿದ್ದು ನಡೆಯಲು ಕಲಿಯುವಾಗ ಹೇಗೆ ಎಷ್ಟು ಪ್ರೀತಿಯಿಂದ ಅದನ್ನು ಆಧರಿಸಿ, ಎದ್ದು ನಿಲ್ಲಿಸಿ ಮುನ್ನಡೆಸುತ್ತೀರೋ ಅಷ್ಟೇ ಪ್ರೀತಿಯನ್ನು ಮಗು “ಮಾತಿನ ಅಂಬೆಗಾಲು’ ಇರಿಸುವಾಗಲೂ ತೋರಿಸಿ. ಮಗು ಎಳೆಯ ಪ್ರಾಯದಲ್ಲಿದ್ದಾಗಲೇ, ಆದಷ್ಟು ಬೇಗನೆ ವಾಕ್‌ತಜ್ಞರನ್ನು ಸಂಪರ್ಕಿಸುವುದು ತೊದಲು ಮಾತಿನ ಯಶಸ್ವೀ ನಿಭಾವಣೆ, ಸರಿಪಡಿಸುವಿಕೆಗೆ ಬಹಳ ಮುಖ್ಯ. ಹೀಗಾಗಿ ಮಕ್ಕಳ ಬದುಕು “ತೊದಲುಮುಕ್ತ’ವಾಗಿರುವಂತೆ ನಾವೆಲ್ಲರೂ ಕೈಜೋಡಿಸೋಣ.

– ಡಾ| ಗಗನ್‌ ಬಜಾಜ್‌
ಅಸಿಸ್ಟೆಂಟ್‌ ಪ್ರೊಫೆಸರ್‌ – ಸೀನಿಯರ್‌ ಸ್ಕೇಲ್‌
ಆಡಿಯಾಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪೆಥಾಲಜಿ ವಿಭಾಗ,
ಕೆಎಂಸಿ, ಮಂಗಳೂರು

 

ಟಾಪ್ ನ್ಯೂಸ್

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.