ಚಹಾ …ರುಚಿ ಸ್ವಾದ ಆಹಾ!


Team Udayavani, Jan 28, 2018, 6:00 AM IST

57788072.jpg

ಜಗತ್ತಿನಾದ್ಯಂತ ಜನರು ಸೇವಿಸುವ ಪೇಯಗಳಲ್ಲಿ ಚಹಾ ಅತ್ಯಂತ ಪ್ರಮುಖವಾಗಿದೆ. ರುಚಿ, ಸ್ವಾದದ ಆಸ್ವಾದನೆಯೊಂದಿಗೆ ಆಹಾ… ಎಂಬ ಆಹ್ಲಾದದ ಅನುಭೂತಿಯನ್ನು ನೀಡುವ ಚಹಾ ಜನರ ಅತ್ಯಂತ ಪ್ರೀತಿಯ ನಿತ್ಯ ಸಂಗಾತಿಯಾಗಿದೆ. ಬ್ಲ್ಯಾಕ್‌ ಟೀ, ಗ್ರೀನ್‌ ಟೀ ಅಥವಾ ಹಾಲು ಹಾಕಿದ ಟೀ ಅಥವಾ ಚಹಾ, ಹೀಗೆ ಹಲವು ವಿಧಗಳಲ್ಲಿ ಚಹಾ ಜನರನ್ನು ತಲುಪುತ್ತಿದೆ. ಚಹಾದ ಮೂಲ ಧಾತು ಚಹಾ ಎಲೆಗಳು. ಉಳಿದಂತೆ ಚಹಾದ ರುಚಿ ಹಾಗೂ ಸ್ವಾದ ಈ ಎಲೆಗಳ ಸಂಸ್ಕರಣೆಯ ಮೇಲೆ ಅವಲಂಬಿಸಿದೆ. 

ಬ್ಲ್ಯಾಕ್‌ ಟೀ ಸಹಜ ಬಯೋಕೆಮಿಕಲ್‌ ಸಂಸ್ಕರಣೆಯಿಂದಾಗಿ ಗಾಢ ಕೆಂಪು-ಕಂದು ಮಿಶ್ರಿತ ವರ್ಣ ಮತ್ತು ವಿಶಿಷ್ಟ ಫ್ಲೇವರ್‌ ಹೊಂದಿದೆ. ಗ್ರೀನ್‌ ಟೀ ಬಳಕೆಯು ಚೀನ ಮತ್ತು ಜಪಾನ್‌ನ ಜನರಿಂದ ಆರಂಭವಾಯಿತು. ಇದರಲ್ಲಿ ಚಹಾ ಎಲೆಗಳನ್ನು ಇತರ ಚಹಾಕ್ಕೆ ಬೇಕಾದ ಎಲೆಗಳನ್ನು ಸಂಸ್ಕರಣೆ ಮಾಡುವ ಮಟ್ಟಕ್ಕೆ ಸಂಸ್ಕರಿಸಲಾಗುವುದಿಲ್ಲ. ಹಸಿರು ಬಣ್ಣವನ್ನು ಉಳಿಸುವ ಉದ್ದೇಶದಿಂದಾಗಿ ಅವುಗಳನ್ನು ಶೀಘ್ರವಾಗಿ ಬಿಸಿ ಮಾಡಲಾಗುತ್ತದೆ ಅಥವಾ ಸ್ಟೀಮ್‌ ಮಾಡಲಾಗುತ್ತದೆ. ಗ್ರೀನ್‌ ಟೀ ತಯಾರಿಸುವ ವಿಧಾನವೂ ಸುಲಭ. ಕುದಿಯುವ ನೀರನ್ನು ಟೀ ಎಲೆ ಗಳ ಮೇಲೆ ಹಾಕಿ 2-3 ನಿಮಿಷಗಳ ಕಾಲ ಮುಚ್ಚಿಟ್ಟರೆ ಟೀ ಸವಿಯಲು ಸಿದ್ಧ.  ಚಹಾಕ್ಕೆ ಸಬಂಧಿಸಿದಂತೆ ಅದರಲ್ಲಿರುವ ಫ್ಲೇವೊನಾಯ್ಡ್ಸ್ ಗಳಿಂದ ಆರೋಗ್ಯ ಸಂಬಂಧಿ ಲಾಭಗಳಿವೆ. ಫ್ಲೇವೊನಾಯ್ಡ್ಸ್ ಮತ್ತು ಪಾಲಿಫಿನೋಲ್‌ಗ‌ಳು ಸಸ್ಯಜನ್ಯ ಪೋಷಕಾಂಶಗಳಾಗಿವೆ. ಇವುಗಳು ದೇಹದ ರೋಗಕಾರಕಗಳನ್ನು ತೊಡೆದು ಹಾಕುವ ಆ್ಯಂಟಿ ಆಕ್ಸಿಡೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. 

ಚಹಾದಲ್ಲಿ ಸ್ವಲ್ಪಾಂಶ ಫ‌ೂರೈಡ್‌ ಇರುತ್ತದೆ. ಇದು ಹಲ್ಲಿನ ಪ್ರಮುಖ ಅಂಗಾಂಶಗಳನ್ನು ಸದೃಢಗೊಳಿಸುತ್ತದೆ. ಕ್ಯಾವಿಟೀಸ್‌ ವಿರುದ್ಧದ ರಕ್ಷಣೆಯೂ ಇದರಿಂದ ದೊರೆಯುತ್ತದೆ;  ಇದರೊಂದಿಗೆ ಹಲ್ಲುಗಳನ್ನು ಬ್ರಶ್‌ ಮಾಡುವುದು ಮತ್ತು ಹಲ್ಲುಗಳ ನಡುವೆ ಫ್ಲಾಸ್‌ ಮಾಡುವುದು ಕೂಡ ಅಗತ್ಯ. ಚಹಾದಿಂದ ಹೆಚ್ಚಿನ ಫ್ಲ್ಯಾವೊನಾಯ್ಡ್ಸ್ಗಳನ್ನು ಪಡೆಯುವಂತಾಗಲು ಚಹಾವನ್ನು 3 ನಿಮಿಷಗಳ ಕಾಲ ಕುದಿಸುವುದು ಅತ್ಯಂತ ಅಗತ್ಯ. 

ಗಿಡಮೂಲಿಕೆಗಳ ಚಹಾ
ಕೆಲವು ಔಷಧಗಳ ಮೂಲ ಸತ್ವಗಳು ಗಿಡಮೂಲಿಕೆಗಳಾಗಿರುತ್ತವೆ. ಹಾಗಾಗಿ ದಾಲಿcನ್ನಿ ಹಾಕಿದ ಚಹಾ, ಪುದೀನಾ ಹಾಕಿದ ಚಹಾ, ಶುಂಠಿ, ತುಳಸಿ, ಮ್ಯಾಂಗೊ ಜಿಂಜರ್‌ ಟೀ ಇತ್ಯಾದಿಗಳ ಸೇವನೆ ಇತರ ಔಷಧಗಳನ್ನು ತೆಗೆದುಕೊಳ್ಳುತ್ತಿರುವಾಗಲೂ  ಯಾವುದೇ ವ್ಯತಿರಿಕ್ತ ಪರಿಣಾಮ ಉಂಟುಮಾಡುವುದಿಲ್ಲ. ಗ್ರೀನ್‌ ಟೀಗೆ ಸಲ್ಪ ಪ್ರಮಾಣದಲ್ಲಿ ಜೇನನ್ನು ಸೇರಿಸಿ ಸೇವಿಸಬಹುದು.

ಚಹಾದಲ್ಲಿರುವ ಕೆಫೀನ್‌ನ್ನು ಕಡಿಮೆ ಮಾಡಲು ಚಹಾವನ್ನು ಮಿತಿ ಮೀರಿ ಕುದಿಸುವುದನ್ನು ನಿಲ್ಲಿಸಬೇಕು. ಕೆಲವರು ಅರ್ಧ ಗಂಟೆ ಕಾಲ ಚಹಾವನ್ನು ಕುದಿಸುವುದನ್ನು ಗಮನಿಸಿರಬಹುದು. ಇದರಿಂದ ಕೆಫೀನ್‌ ಹೆಚ್ಚಾಗುತ್ತದೆ ಮಾತ್ರವಲ್ಲದೆ ಪೌಷ್ಟಿಕಾಂಶಗಳೂ ನಷ್ಟಗೊಳ್ಳುತ್ತವೆ. ಸುಲಭದ ವಿಧಾನವೆಂದರೆ ತಣ್ಣನೆ ನೀರಿಗೆ ಚಹಾ ಎಲೆಗಳನ್ನು ಹಾಕಿ ಕುದಿಸುವುದಕ್ಕಿಂತ ಕುದಿಯುವ ನೀರಿಗೆ ಚಹಾ ಎಲೆಗಳನ್ನು ಹಾಕುವುದಾಗಿದೆ. ತೂಕದ ಮೇಲೆ ಗಮನವಹಿಸಿರುವವರು ಸಕ್ಕರೆ ಇಲ್ಲದ ಚಹಾವನ್ನು ಸೇವಿಸಬಹುದಾಗಿದೆ. 

ಚಹಾ ಅಥವಾ ಕಾಫಿಯನ್ನು ನಿರಂತರ ಸೇವಿಸುವುದರಿಂದ ಕ್ಯಾನ್ಸರ್‌ ಉಂಟಾಗುವ ಅಪಾಯ ಇಲ್ಲ ಎಂಬುದು ಸಂಶೋಧನೆಗಳಿಂದ ದೃಢೀಕೃತವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಚಹಾ ಅಥವಾ ಹರ್ಬಲ್‌ ಚಹಾಗಳ ಬ್ರ್ಯಾಂಡ್‌ಗಳನ್ನು ಸುರಕ್ಷಿತ ಎಂಬುದಾಗಿ ಪರಿಗಣಿಸಬಹುದಾಗಿದೆ. ಕೆಲವು ಐಸ್‌ ಟೀಗಳಲ್ಲಿ ಹೆಚ್ಚಿನ ಸಕ್ಕರೆ ಇರುತ್ತದೆ. ಆದ್ದರಿಂದ ಖರೀದಿಗೂ ಮುನ್ನ ಲೇಬಲ್‌ನ್ನು ಸರಿಯಾಗಿ ಪರಿಶೀಲಿಸುವುದು ಅತ್ಯಗತ್ಯ.

ಅತಿ ಚಹಾ ಸೇವನೆ ಸಲ್ಲದು 
ಕೆಲವರು ದಿನಕ್ಕೆ 4-5 ಕಪ್‌ ಚಹಾ ಸೇವಿಸುತ್ತಾರೆ. ದಿನವೊಂದಕ್ಕೆ 2ಕ್ಕಿಂತ ಹೆಚ್ಚು ಕಪ್‌ ಚಹಾ ಸೇವನೆ ಮಾಡುವುದನ್ನು ಶಿಫಾರಸು ಮಾಡಲಾಗುವುದಿಲ್ಲ. ಕೆಲವರು ಅತಿಯಾದ ಚಹಾ ಸೇವನೆಯಿಂದ ಹೊರಬರಲು ಯತ್ನಿಸುವಾಗ ನಿದ್ದೆಯ ಕೊರತೆ, ಕಿರಿಕಿರಿ, ತಲೆ ಸಿಡಿತ ಇತ್ಯಾದಿಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿ ಇರುವವರಿಗೆ ನಮ್ಮ ಸಲಹೆಯೇನೆಂದರೆ; ಅವರು ಚಹಾ ಸೇವನೆಯನ್ನು ನಿಧಾನವಾಗಿ ಕಡಿಮೆ ಮಾಡಬೇಕು. ಒಂದು ಕಪ್‌ ಬದಲಿಗೆ ಅರ್ಧ ಕಪ್‌ ಕುಡಿಯುವುದನ್ನು ಆರಂಭಿಸಬೇಕು. ಕ್ರಮೇಣ ಕಡಿಮೆ ಮಾಡುತ್ತಾ ಬರಬೇಕು. ಸಾಮಾನ್ಯ ಚಹಾಕ್ಕಿಂತ ಹರ್ಬಲ್‌ ಟೀ ಸೇವನೆಯನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. 

ಚಹಾ….ಆಸ್ವಾದಿಸಿ  ಸೇವಿಸುವುದರಲ್ಲೇ ಖುಷಿ
– ನಾನ್‌ ಕ್ಯಾಲರಿಕ್‌ ಸಿಹಿ ಇರುವ ಬಾಟ್‌ಲ್ಡ್‌ ಟೀ ಅಥವಾ ಕ್ಯಾನ್‌x ಐಸ್‌ ಟೀಯನ್ನೊಮ್ಮೆ ಸವಿದು ನೋಡಿ
– ನೀವು ಕ್ಯಾಲರಿಗಳ ಮೇಲೆ ಗಮನಹರಿಸುವವರಾಗಿದ್ದರೆ ಸಿಹಿ ಇರದ ಚಹಾವನ್ನು ಲಿಂಬೆಯ ತುಂಡು, ಶುಂಠಿ ತುಂಡು ಅಥವಾ ತಾಜಾ ಪುದೀನಾದೊಂದಿಗೆ ಸವಿಯಬಹುದು.
– ವಿಟಮಿನ್‌ ಸಿಯನ್ನು ಹೆಚ್ಚಿಸಲು ಮತ್ತು ಫ್ಲೇವರ್‌ಗಾಗಿ ಸಿಟ್ರಸ್‌ ಜ್ಯೂಸ್‌ನ್ನು ಸೇರಿಸಬಹುದಾಗಿದೆ. ಆದರೆ ಇದು ಮಿತಿ ಮೀರಬಾರದು. ಇದು ಹೆಚ್ಚಾದಲ್ಲಿ  ಕಾಳು, ಧಾನ್ಯ, ಮೊಟ್ಟೆ ಇತ್ಯಾದಿಗಳಲ್ಲಿರುವ ಕಬ್ಬಿಣಾಂಶವನ್ನು ಹೀರುವ ಶಾರೀರಿಕ ಕ್ಷಮತೆಗೆ ತಡೆ ಉಂಟಾಗುವ ಸಾಧ್ಯವಿದೆ. 
– ಕ್ಯಾಲ್ಸಿಯಂ ಪಡೆಯಲು ಹಾಲು ಹಾಕಿದ ಚಹಾವನ್ನು ಸೇವಿಸಬಹುದಾಗಿದೆ. ಬಿಸಿ ಹಾಗೂ ಕೋಲ್ಡ್‌ ಹಾಲನ್ನು ಬಳಸಬಹುದಾಗಿದೆ. 

– ಡಾ| ಅರುಣಾ ಮಲ್ಯ
ಸೀನಿಯರ್‌ ಡಯೆಟಿಶನ್‌
ಕೆಎಂಸಿ ಆಸ್ಪತ್ರೆ ಡಾ| ಅಂಬೇಡ್ಕರ್‌ ವೃತ್ತ, ಮಂಗಳೂರು

ಟಾಪ್ ನ್ಯೂಸ್

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.