ಪುರಾತನ ಕಾಯಿಲೆ ಮಲೇರಿಯ 


Team Udayavani, Nov 18, 2018, 6:00 AM IST

malaria-aad.jpg

ಹಿಂದಿನ ವಾರದಿಂದ– ಈ ಸೊಳ್ಳೆ ಯಾವುದೇ ವ್ಯಕ್ತಿಗೆ ಆಹಾರಕ್ಕಾಗಿ ರಕ್ತ ಹೀರಲು ಕಡಿದಾಗ, ರೋಗಾಣುಗಳು ಸೊಳ್ಳೆ ಕಡಿದ ವ್ಯಕ್ತಿಯ ರಕ್ತಕ್ಕೆ ಸೇರುತ್ತದೆ. ಸಾಕಷ್ಟು Sporozoites  ಸೊಳ್ಳೆ ಕಡಿತದ ಮೂಲಕ ಮನುಷ್ಯನ ದೇಹಕ್ಕೆ ಸೇರಿದರೆ ಅಂದಿನಿಂದ 10 -15 ದಿನಗಳಲ್ಲಿ ಅ ವ್ಯಕ್ತಿಯಲ್ಲಿ ಮಲೇರಿಯಾ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. 

ಅಂದರೆ ಜನ ಸಮುದಾಯದಲ್ಲಿ ಮಲೇರಿಯಾ ರೋಗಿಗಳಿದ್ದರೆ, ಅಲ್ಲಿ ಕೆಲವೇ ಅನಾಫಿಲಿಸ್‌ ಸೊಳ್ಳೆಗಳಿದ್ದರೆ, ಮಳೆ ನಿಂತ 40-45 ದಿನಗಳಲ್ಲಿ  ಸಂಖ್ಯೆ ತೀವ್ರವಾಗಿ ಹೆಚ್ಚಬಹುದು. ಆದರೆ ಮಳೆ ಬರುತ್ತಿರುವಾಗ ಸಹ ಪರಿಸರದಲ್ಲಿ ಎಲ್ಲಿಯಾದರೂ ಮಳೆ ನೀರಿಗೆ ನೇರ ಸಂಪರ್ಕವಿಲ್ಲದೆ ನಿಂತ ನೀರಿದ್ದರೆ, ಆಗ ಮಳೆಗಾಲದಾದ್ಯಂತ ಸೊಳ್ಳೆಗಳು, ಮಲೇರಿಯಾ ಕಾಯಿಲೆ ಇರಬಹುದಾಗಿದೆ. ಈ ಸೊಳ್ಳೆಗಳು 30-45 ದಿನಗಳವರೆಗೆ ಬದುಕಬಲ್ಲವು. ಆದ್ದರಿಂದ ಪರಿಸರದಲ್ಲಿನ ಹಳ್ಳ ಕೊಳ್ಳಗಳಲ್ಲಿನ ನೀರು ಸಂಪೂರ್ಣ ಆವಿಯಾದ ಮೇಲೆ ಸಹ 45 ದಿನಗಳ ಕಾಲ ರೋಗ ಹರಡಬಲ್ಲವು. ಅಲ್ಲದೆ ನೀರಿನ ಮೂಲದಿಂದ 3 ರಿಂದ 5 ಕಿ.ಮಿ. ದೂರ ಹಾರಬಲ್ಲ ವಾದರಿಂದ ಅಷ್ಟು ದೂರ ವ್ಯಾಪ್ತಿಯಲ್ಲಿ ರೋಗ ಹರಡಬಹುದು. 

ಒಟ್ಟಿನಲ್ಲಿ ಮಲೇರಿಯಾ ಹರಡುವಿಕೆಗೆ ಮುಖ್ಯವಾಗಿ  3 ಅಂಶಗಳು ಅವಶ್ಯವಾಗಿರಬೇಕು. 
1. ಮಲೇರಿಯಾ  ರೋಗಿಯ ರಕ್ತದಲ್ಲಿ ಸಾಕಷ್ಟು ಗಂಡು ಮತ್ತು ಹೆಣ್ಣು ಪ್ಲಾಸೊ¾ಡಿಯಂ ಪರೋಪ ಜೀವಿಯ ಲೈಂಗಿಕ ಕಣಗಳಿರಬೇಕು. 
2. ವಾಹಕ ಅನಾಫಿಲಿಸ್‌ ಹೆಣ್ಣು ಸೊಳ್ಳೆ  ಈ ಸೊಳ್ಳೆ ಮಲೇರಿಯಾ ರೋಗಿ ರಕ್ತ ಅದರ ಆಹಾರಕ್ಕಾಗಿ ಹೀರುವಾಗ ರೋಗಿಯ ರಕ್ತದಲ್ಲಿರುವ ಸಾಕಷ್ಟು gametes ಗಳನ್ನು ಹೀರಿಕೊಂಡು ಅನಂತರ ಕನಿಷ್ಠ 15 ದಿನ ಬದುಕಿರಬೇಕು ಹಾಗೂ ಮತ್ತೂಬ್ಬ ಆರೋಗ್ಯವಂತ ವ್ಯಕ್ತಿಯ ರಕ್ತ ಹೀರುವಾಗ ಸಾಕಷ್ಟು ಸಂಖ್ಯೆಯಲ್ಲಿ ಅವನ ದೇಹಕ್ಕೆ ರೋಗ ಕಣಗಳನ್ನು ಸಾಗಿಸಬೇಕು.
3. ಸೋಂಕಿಗೀಡಾಗುವ ಮನುಷ್ಯರು – ಸಮುದಾಯದಲ್ಲಿ ಮಲೇರಿಯಾ ರೋಗವಿರುವಾಗ , ಸೋಂಕಿರುವ ಸೊಳ್ಳೆಗಳಿರುವಾಗ ಸೊಳ್ಳೆ ಕಚ್ಚುವುದನ್ನು ತಪ್ಪಿಸಿಕೊಳ್ಳಲಾಗದ ಆರೋಗ್ಯವಂತ ಜನರು. ಈ ಜೋಡಣೆಯ ಯಾವುದೇ ಕೊಂಡಿ ಕಳಚಿ ಬಿದ್ದಾಗ ಮಾತ್ರ ಮಲೇರಿಯಾ ಹರಡುವುದನ್ನು ತಡೆಗಟ್ಟಬಹುದು.

ರೋಗ ವಿಧಗಳು
ಮಲೇರಿಯಾಕ್ಕೆ ಕಾರಣವಾದ ಪರೋಪಜೀವಿ ಪ್ಲಾಸೊ¾ಡಿಯಂ ನಾಲ್ಕು ಪ್ರಭೇದಗಳನ್ನು ಹೊಂದಿದೆ. ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುವುದು ಪ್ಲಾಸೊ¾ಡಿಯಂ ವೈವ್ಯಾಕ್ಸ್‌ ಹಾಗೂ ಪ್ಲಾಸೊ¾ಡಿಯಂ ಫಾಲ್ಸಿಪಾರಮ್‌. ಕೆಲವು ಸಂದರ್ಭದಲ್ಲಿ ಒಂದೇ ರೋಗಿಯಲ್ಲಿ ವೈರಾಕ್ಸ್‌ ಮತ್ತು ಫಾಲ್ಸಿಪಾರಮ್‌ ಬೆರಕೆ ಸೋಂಕು ಸಹ ಬರಬಹುದು.

ರೋಗ ಲಕ್ಷಣಗಳು
ಮನುಷ್ಯ ಮಲೇರಿಯಾ ಸೋಂಕಿರುವ ಸೊಳ್ಳೆಯಿಂದ ಕಡಿಸಿಕೊಂಡ 10-14 ದಿನಗಳಲ್ಲಿ ಬಿಟ್ಟು ಬಿಟ್ಟು ಬರುವ ಚಳಿ ಜ್ವರ ಕಾಣಿಸಿಕೊಳ್ಳಬಹುದು. ಹಲವು ಬಾರಿ ವಾಂತಿ ಸಹ ಆಗಬಹುದು. ಕೆಲವು ವರ್ಷಗಳ ಮೊದಲು ಕೇವಲ ಈ ಲಕ್ಷಣಗಳಿಂದಲೇ ಮಲೇರಿಯಾವನ್ನು ಗುರುತಿಸಿ ಚಿಕಿತ್ಸೆ ನೀಡಲು ಸಾಧ್ಯವಿದ್ದಿತ್ತಾದರೂ ಈಗ ಸಮುದಾಯದಲ್ಲಿ ಮಲೇರಿಯಾದೊಂದಿಗೆ, ಇಲಿ ಜ್ವರ, ಡೆಂಗ್ಯೂ, ಎಚ್‌1ಎನ್‌1, ಚಿಕೂನ್‌ಗುನ್ಯ, ಟೈಫಾಯ್ಡ ಇತರ ಗಂಭೀರ ಕಾಯಿಲೆಗಳು ಜ್ವರ ಬಾಧೆಯ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುವುದರಿಂದ ಹಾಗೂ ಒಂದೇ ವ್ಯಕ್ತಿಯಲ್ಲಿ ಏಕಕಾಲಕ್ಕೆ 2 ಅಥವಾ ಮೂರು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುವುದರಿಂದ ರೋಗ ಪತ್ತೆ ಮಾಡದೆ ಚಿಕಿತ್ಸೆ ನೀಡುವುದು ಸಮಂಜಸವಲ್ಲ.  ಮಲೇರಿಯಾದಲ್ಲಿ ರೋಗಾಣುಗಳು ಕೆಂಪು ರಕ್ತ ಕಣಗಳನ್ನು ನಾಶಪಡಿಸುವುದರಿಂದ ಅನೀಮಿಯಾ, ಜಾಂಡೀಸ್‌ ಲಕ್ಷಣಗಳು ಕೂಡ ಕಾಣಿಸಿಕೊಳ್ಳಬಹುದು. ರಕ್ತ ಕಣಗಳ ಕ್ರೋಡೀಕರಣದಿಂದ ಸಣ್ಣ ಸಣ್ಣ ರಕ್ತ ಕಣಗಳು ಮುಚ್ಚಿ ಹೋಗಿ ಅಂಗಾಂಗ ವೈಫ‌ಲ್ಯ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ರೋಗ ಪತ್ತೆ 
ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ರಕ್ತ ಲೇಪನ ಪರೀಕ್ಷೆ (Blood smear) ಮಲೇರಿಯಾ ಪತ್ತೆಗೆ ಬಳಸುವ  ಪರೀಕ್ಷೆ ವಿಧಾನ. ಚಳಿ ಜ್ವರ ಬಂದಾಗ ರೋಗಿಯ ಒಂದೆರಡು ಹನಿ ರಕ್ತವನ್ನು , ಚೂರು ಗಾಜಿನಲ್ಲಿ ತೆಗೆದುಕೊಂಡು ತೆಳು ಪದರದಂತೆ ಹರಡಿ ಒಣಗಿಸಿ ವಿವಿಧ ಬಣ್ಣಗಳನ್ನು ಹಾಕಿ ಸೂಕ್ಷ್ಮದರ್ಶಿಕದಡಿಯಲ್ಲಿ ಪರೀಕ್ಷಿಸುವುದರಿಂದ ರೋಗಾಣುಗಳನ್ನು ಕೌಶಲತೆ ಹಾಗೂ ಅನುಭವ ಹೊಂದಿದ ಟೆಕ್ನಿಶಿಯನ್‌ಗಳು ಪತ್ತೆ ಹಚ್ಚಬಲ್ಲರು. ಆದರೆ ಕೇವಲ ಒಂದು ರಕ್ತ ಲೇಪನ ಪರೀಕ್ಷೆಯಲ್ಲಿ ಮಲೇರಿಯಾ ರೋಗಾಣುಗಳು ಕಂಡು ಬಾರದಿದ್ದರೆ ವ್ಯಕ್ತಿಗೆ ಮಲೇರಿಯವಿಲ್ಲವೆಂದು ಖಚಿತವಾಗಿ ಹೇಳಲಾಗದು. 

ಶಿಫಾರಸಿನ ಪ್ರಕಾರ 6 ರಿಂದ 12 ಗಂಟೆಗಳ ಅಂತರದಲ್ಲಿ 2 ದಿನಗಳೊಳಗೆ ಪದೇ ಪದೆ ರಕ್ತ ಲೇಪನ ಪರೀಕ್ಷೆ ಮಾಡಿ, ಕನಿಷ್ಠ ಮೂರು ಬಾರಿ ಲೇಪನ ಪರೀಕ್ಷೆಗಳಲ್ಲಿ ರೋಗಾಣುಗಳು ಕಂಡು ಬಾರದೆ ಇರಬೇಕು.

ರೋಗ ಚಿಕೆತ್ಸೆ  
ಪ್ಲಾ ವೈವ್ಯಾಕ್ಸ್‌ ಮಲೇರಿಯಾ ಸಾಮಾನ್ಯ ತೆರನಾದ್ದು ಎಂದು ಭಾವಿಸಿದ್ದರೂ ಕೂಡ ಕೆಲವು ಬಾರಿ ಭಯಾನಕ ಸ್ವರೂಪ ಪಡೆದುಕೊಳ್ಳಬಹುದು. ಈ ಮಲೇರಿಯಾ ಒಮ್ಮೆ ಬಂದರೆ ರೋಗಾಣುಗಳು ರೋಗಿಯ ಪಿತ್ತಕೋಶದಲ್ಲಿ ಅಡಗಿ ಕುಳಿತು ಪುನಃ ಪುನಃ ಮರು ಕಳಿಸುವ (Relapse) ಸಾಧ್ಯತೆಗಳು ಹೆಚ್ಚು. ಅದಕ್ಕಾಗಿ ರೋಗಿಗಳು 3 ಡೋಸ್‌ Chloroquine   ಮಾತ್ರೆಗಳೊಂದಿಗೆ 14 ದಿನ ತಪ್ಪದೇ Primaquine  ಮಾತ್ರೆಗಳನ್ನು ತೆಗೆದುಕೊಳ್ಳುವುದು  ಅಗತ್ಯ. ಈ 14 ದಿನದ Primaquine  ಮಾತ್ರೆಗಳು ರೋಗ ಮರುಕಳಿಸುವುದನ್ನು ತಡೆಯುತ್ತದೆ.

ಪಿ. ಫಾಲ್ಸಿಪಾರಮ್‌- ಸ್ವಲ್ಪ ತೀವ್ರ ತರನಾದದ್ದು. ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ಇದ್ದಲ್ಲಿ (  Cerebral malaria, Renal failure, circulatory collapse)  ತೀವ್ರ ಸ್ವರೂಪ ಪಡೆಯಬಹುದು ಹಾಗೂ  ಜೀವ ಹಾನಿ ಸಹ ಉಂಟಾಗ ಬಹುದು. ಇದಕ್ಕೆ 3 ದಿನಗಳ ಅಇಖ CT Combination  ಮಾತ್ರೆಗಳು, ಒಂದು ಡೋಸ್‌  Primaquine ಸಾಮಾನ್ಯವಾಗಿ ನೀಡಲಾಗುತ್ತದೆ. ಈ ಎಲ್ಲ ಮಲೇರಿಯಾ ಮಾತ್ರೆಗಳನ್ನು ಜ್ವರದ ಮಾತ್ರೆಗಳಿಂದ ಜ್ವರ ಕಡಿಮೆಯಾದ ಅನಂತರ, ವಾಂತಿ ಇದ್ದರೆ ವಾಂತಿ ಮಾತ್ರೆಗಳಿಂದ , ವಾಂತಿ ಕಡಿಮೆಯಾದ ಅನಂತರ ಹೊಟ್ಟೆ ಉರಿ ತಡೆಯುವ (Antacid) ದೊಂದಿಗೆ ನೀಡುವುದು ಸಹ ಮುಖ್ಯವಾಗುತ್ತದೆ. ಮಲೇರಿಯಾ ಮಾತ್ರೆಗಳನ್ನು ತೆಗೆದುಕೊಂಡ ಕೂಡಲೆ ವಾಂತಿಯಾದರೆ ಚಿಕಿತ್ಸೆ ಪ್ರಯೋಜನಕಾರಿಯಾಗುವುದಿಲ್ಲ. ಅಲ್ಲದೆ ಮಲೇರಿಯಾ ರೋಗ ಚಿಕಿತ್ಸೆಗೆ ಬಳಸುವ ಎಲ್ಲ ಔಷಧಗಳಿಗೆ ರೋಗಾಣುಗಳು ಪ್ರತಿರೋಧಕತೆ (resistance) ಬೆಳೆಸಿಕೊಂಡಿವೆಯೋ ಎನ್ನುವುದನ್ನು ಸಹ ನಿರಂತರವಾಗಿ ಆರೋಗ್ಯ ಇಲಾಖೆ, ಸಂಶೋಧನಾ ಸಂಸ್ಥೆಗಳು ಪರಿಶೀಲಿಸುತ್ತಿರುವುದು, ಅದರಂತೆಯೇ ವೈದ್ಯರಿಗೆ ಚಿಕಿತ್ಸಾ ಮಾರ್ಗದರ್ಶನ ಕಾಲ ಕಾಲಕ್ಕೆ ನೀಡಬೇಕಿರುತ್ತದೆ. 

ಮಲೇರಿಯಾ ರೋಗಿಯನ್ನು ಶೀಘ್ರವಾಗಿ ಪತ್ತೆ ಹಚ್ಚಿ ಅವರಿಗೆ ಸೂಕ್ತ ಸಂಪೂರ್ಣ ಚಿಕಿತ್ಸೆ ನೀಡುವುದು, ಆ ಮೂಲಕ  ಸೊಳ್ಳೆಗಳು ರೋಗ ವಾಹಕವಾಗದಂತೆ ತಡೆಯುವುದು, ಅಲ್ಲದೆ ಪರಿಸರದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯುವುದು ಹಾಗೂ ಮನುಷ್ಯ ಸೊಳ್ಳೆಗಳಿಂದ ರಕ್ಷಣೆ ಪಡೆಯುವ ವಿಧಾನಗಳನ್ನು ಅನುಸರಿಸುವುದು ರೋಗ ನಿಯಂತ್ರಣಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ.
ಪರಿಸರದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು ಅನಗತ್ಯ ನೀರು ನಿಲ್ಲುವುದನ್ನು ತಡೆಯಲು ಅಥವಾ ಕನಿಷ್ಠ ವಾರಕ್ಕೆ 1 ದಿನ ಪರಿಸರದಲ್ಲಿರುವ ನೀರೆಲ್ಲ ಬರಿದು ಮಾಡಿ ಒಣದಿನ (Dry Day  ) ಮಾಡಿದರೆ ಆ ನೀರಿನಲ್ಲಿ ಬೆಳೆಯುತ್ತಿರುವ ಸೊಳ್ಳೆಗಳ ಮರಿಗಳನ್ನು ನಾಶ ಮಾಡಬಹುದು. ಆದರೆ ಕೃಷಿಗಾಗಿ ಮಳೆಯನ್ನು ನಂಬಿದ ಪ್ರದೇಶಗಳಲ್ಲಿ ವಾರಕ್ಕೊಂದು ದಿನವೂ ಕ್ರಷಿ ಭೂಮಿಯಲ್ಲಿ ನೀರು ನಿಲ್ಲದೆ ಇರುವಂತೆ ಮಾಡಿದರೆ ಮುಂದೆ ಬೆಳೆಹಾನಿಯಾಗಬಹುದು. ಭೂಮಿಯ ಅಂತರ್ಜಲ ಕುಸಿಯುತ್ತಿರುವ ಈ ಕಾಲದಲ್ಲಿ ಪ್ರತೀ ಊರಿನಲ್ಲಿ , ಕೃಷಿಕರ ಜಾಗಗಳಲ್ಲಿ  ಕೃಷಿ ಹೊಂಡ (Infliltration pond) ನಿರ್ಮಿಸುವ ಅಂದೋಲನ ಕೃಷಿ – ಭೂಗರ್ಭ ಇಲಾಖೆ ಹಮ್ಮಿಕೊಂಡಿದೆ. ಯಾವುದೇ ಹೊಂಡಗಳಲ್ಲಿ 15-20 ದಿನಗಳಿಗಿಂತ ಹೆಚ್ಚು ದಿನ ನೀರು ನಿಂತಾಗ ಸೊಳ್ಳೆ ಉತ್ಪಾದನೆಯಾಗುವ ಸಂಭವವಿದೆ. 

ಆ ತರಹದ ನಿಂತ ನೀರಿನಲ್ಲಿ ಸೊಳ್ಳೆ ಮರಿಗಳನ್ನು ತಿಂದು ಬದುಕುವ ಪ್ರಾಣಿಗಳಾದ ಮೀನುಗಳು, ಕಪ್ಪೆ ಮರಿಗಳು, ಕೀಟಗಳು, ಆಮೆಗಳು, ಹಕ್ಕಿಗಳು ಇರುವಂತೆ ನೋಡಿಕೊಂಡು ಪ್ರಾಕೃತಿಕ ಸಮತೋಲನ ಕಾಯ್ದುಕೊಂಡು (Eco system) ಸೊಳ್ಳೆಗಳನ್ನು ನಿಯಂತ್ರಿಸುವುದು ಪರಿಸರಕ್ಕೆ ಸಹ ಆರೋಗ್ಯಕರ.

ಟಾಪ್ ನ್ಯೂಸ್

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT Series: ವಿರಾಟ್‌ ಕೊಹ್ಲಿ ಜತೆ ವೈಯಕ್ತಿಕ ಪೈಪೋಟಿಗೆ ಇಳಿದಿದ್ದೆ: ಮಿಚೆಲ್‌ ಜಾನ್ಸನ್

BGT 2024: Gill Injured: Lucky for Kannadiga in third position

BGT 2024: ಗಾಯಗೊಂಡ ಗಿಲ್:‌ ಮೂರನೇ ಕ್ರಮಾಂಕದಲ್ಲಿ ಕನ್ನಡಿಗನಿಗೆ ಒಲಿದ ಅದೃಷ್ಟ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

Viral Video: ಪಟಾಕಿ ಸಿಡಿಸುತ್ತಿದ್ದ ವಧುವಿನ ಸಂಬಂಧಿಕರ ಮೇಲೆ ಕಾರು ಹತ್ತಿಸಿದ ವರನ ಕಡೆಯವ

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ‌ ಕೇಜ್ರಿವಾಲ್‌ ಆಪ್ತ ಕೈಲಾಶ್‌ ಗೆಹ್ಲೋಟ್!

Father and children who went to fishing went missing in hukkeri

Hukkeri: ಮೀನು ಹಿಡಿಯಲು ಹೋಗಿದ್ದ ತಂದೆ, ಇಬ್ಬರು ಮಕ್ಕಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

ಹೋಮ್‌ ವರ್ಕ್‌ ಮಾಡದ್ದಕ್ಕೆ ಥಳಿಸಿದ ಶಿಕ್ಷಕ; ಕಣ್ಣ ದೃಷ್ಟಿಯನ್ನೇ ಕಳೆದುಕೊಂಡ ವಿದ್ಯಾರ್ಥಿ

8

Mudhol: ಎರಡೂ ಬಣಗಳಿಂದ ಪ್ರತಿಭಟನೆ ಬಿಸಿ; ಸ್ಥಳದಲ್ಲೇ ಬೀಡುಬಿಟ್ಟಿರುವ ಎಸ್ಪಿ; ಹೈ ಅಲರ್ಟ್

Belagavi: ವರ್ಷದ ಹಿಂದೆ ಪಕ್ಷಕ್ಕೆ ಬರುವಂತೆ ಬಿಜೆಪಿ ಆಹ್ವಾನಿಸಿತ್ತು: ಬಾಬಾಸಾಹೇಬ ಪಾಟೀಲ್

Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್

naa ninna bidalaare movie releasing on Nov 29

Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್‌ ಬಂತು: ನ.29ಕ್ಕೆ ಸಿನಿಮಾ ತೆರೆಗೆ

police-ban

Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.