ಉಸಿರಿನ ದುರ್ವಾಸನೆ; ಮನೆ ಮದ್ದುಗಳು
Team Udayavani, Jun 27, 2021, 1:44 PM IST
ದಿನವೂ ಎರಡು ಬಾರಿ ಹಲ್ಲುಜ್ಜಿ
ಆಹಾರದ ಉಳಿಕೆಗಳು ಮತ್ತು ಕೊಳಕನ್ನು ತೆಗೆದುಹಾಕಲು ದಿನವೂ ಎರಡು ಬಾರಿ ಎರಡರಿಂದ ಮೂರು ನಿಮಿಷಗಳ ಕಾಲ ಹಲ್ಲುಜ್ಜಿ. ಮಲಗುವುದಕ್ಕೆ ಮುನ್ನ ಹಲ್ಲುಜ್ಜುವುದು ತುಂಬಾ ಮುಖ್ಯ. ಬಾಯಿಯಲ್ಲಿ ಆಮ್ಲಿàಯತೆ ಉಂಟಾಗಿ ಕೆಟ್ಟ ಉಸಿರಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಬೆಳೆಯುವುದಕ್ಕೆ ತಡೆ ಹಾಕುವುದಕ್ಕಾಗಿ ಬೇಕಿಂಗ್ ಸೋಡಾ ಉಪಯೋಗಿಸಿ ಇನ್ನೊಂದು ಸಲ ಹಲ್ಲುಜ್ಜುವುದನ್ನೂ ಪ್ರಯತ್ನಿಸಬಹುದು.
ದಿನವೂ ಫ್ಲಾಸ್ ಮಾಡಿ
ಹಲ್ಲುಜ್ಜುವ ಬ್ರಶ್ ತಲುಪಲು ಸಾಧ್ಯವಾಗದ ಹಲ್ಲುಗಳ ಸಂಧಿಗಳಲ್ಲಿ ಅಡಗಿರುವ ಆಹಾರದ ತುಣುಕುಗಳನ್ನು ತೆಗೆದುಹಾಕುವುದಕ್ಕಾಗಿ ದಿನವೂ ಫ್ಲಾಸ್ ಮಾಡಿ. ಈ ಆಹಾರದ ತುಣುಕುಗಳನ್ನು ತೆಗೆದುಹಾಕದೆ ಇದ್ದರೆ ಬ್ಯಾಕ್ಟೀರಿಯಾಗಳು ಅಲ್ಲಿ ಬೆಳೆದು ಉಸಿರಿನ ದುರ್ವಾಸನೆಗೆ ಕಾರಣವಾಗುತ್ತವೆ.
ನಾಲಗೆಯಿಂದ ಅಗ್ರ ತೆಗೆಯಿರಿ
ನಾಲಗೆಯ ಮಡಿಕೆಗಳು ಮತ್ತು ರುಚ್ಯಗ್ರಗಳ ನಡುವೆ ಆಹಾರದ ಉಳಿಕೆಗಳು ಸೇರಿ ಅಗ್ರ ರೂಪುಗೊಳ್ಳುತ್ತದೆ. ಅಗ್ಗದ ದರಕ್ಕೆ ಲಭಿಸುವ ಅಗ್ರ ತೆಗೆಯುವ ಸಾಧನದಿಂದ ಹಲ್ಲುಜ್ಜಿದ ಬಳಿಕ ಈ ಕೊಳಕನ್ನು ತೆಗೆದುಹಾಕಿ. ಅಗ್ರ ತೆಗೆಯುವ ಸಾಧನ ಇಲ್ಲವಾದರೆ ಹಲ್ಲುಜ್ಜುವ ಬ್ರಶ್‌ನಿಂದಲೇ ಮೃದುವಾಗಿ ನಾಲಗೆಯನ್ನು ಉಜ್ಜಿಕೊಳ್ಳಬಹುದು.
ಮೌತ್ ರಿನ್ಸ್ ಉಪಯೋಗಿಸಿ
ದೀರ್ಘಕಾಲಿಕ ಉಸಿರಿನ ದುರ್ವಾಸನೆಗೆ ಹಲ್ಲುಗಳ ಸಮಸ್ಯೆ ಕಾರಣವಾಗಿದ್ದರೆ ಮೌತ್ ರಿನ್ಸ್ ಉಪಯೋಗಿಸಿ ಬಾಯಿ ಮುಕ್ಕಳಿಸುವುದು ಒಂದು ತಾತ್ಕಾಲಿಕ ಉಪಶಮನ, ಅದು ದುರ್ವಾಸನೆಯ ಉಸಿರನ್ನು ಮರೆಮಾಚಬಲ್ಲುದೇ ವಿನಾ ನಿವಾರಿಸದು ಎಂಬುದನ್ನು ನೆನಪಿಟ್ಟುಕೊಳ್ಳಿ. ಕೆಲವು ಪ್ರಕರಣಗಳಲ್ಲಿ ಬಾಯಿಯ ಒಳಗಿನ ಮೃದುವಾದ ಅಂಗಾಂಶಗಳಿಗೆ ಹಾನಿ ಉಂಟುಮಾಡುವ ಮೂಲಕ ಮೌತ್ ರಿನ್ಸ್ ಸಮಸ್ಯೆಯನ್ನು ಉಲ್ಬಣಗೊಳಿಸಬಲ್ಲುದು ಎಂಬುದೂ ತಿಳಿದಿರಲಿ. ಉಸಿರಿನ ದುರ್ವಾಸನೆಯನ್ನು ಹೋಗಲಾಡಿಸುವ ತುರ್ತು ಅಗತ್ಯಕ್ಕಾಗಿ ನೀರಿನಲ್ಲಿ ಕೆಲವು ಬಿಂದು ಪೆಪ್ಪರ್‌ಮಿಂಟ್ ತೈಲದ ಹನಿಗಳನ್ನು ಮಿಶ್ರ ಮಾಡಿ ಬಾಯಿ ಮುಕ್ಕಳಿಸುವ ಉಪಾಯ ಅನುಸರಿಸಿ. ಬ್ಲ್ಯಾಕ್ ಅಥವಾ ಗ್ರೀನ್ ಟೀಯಿಂದ ಬಾಯಿ ಮುಕ್ಕಳಿಸುವುದು ಕೂಡ ಸಹಾಯ ಮಾಡುತ್ತದೆ. ಇದು ಉಸಿರಿನ ದುರ್ವಾಸನೆಯನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯುತ್ತದೆ.
ದಂತವೈದ್ಯರನ್ನು ಭೇಟಿಯಾಗಿ
ಉತ್ತಮ ದಂತ ಆರೋಗ್ಯವನ್ನು ನೀವು ಕಾಪಾಡಿಕೊಳ್ಳುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳುವ ಉತ್ತಮ ಉಪಾಯ ಎಂದರೆ, ನಿಮ್ಮ ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗುವುದು. ನಿಮಗೆ ದೀರ್ಘಕಾಲಿಕ ಉಸಿರಿನ ದುರ್ವಾಸನೆ ಇದ್ದಲ್ಲಿ ದಂತ ಸಂಬಂಧಿ ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಮೊದಲು ದಂತವೈದ್ಯರನ್ನು ಭೇಟಿಯಾಗಬೇಕು. ನಿಮಗಿರುವ ಉಸಿರಿನ ದುರ್ವಾಸನೆ ಸಮಸ್ಯೆಯು ದೇಹವ್ಯವಸ್ಥೆಗೆ ಸಂಬಂಧಿಸಿದ ಸೋಂಕಿನಂತಹ ಯಾವುದೇ ತೊಂದರೆಯಿಂದ ಉಂಟಾಗಿದೆ ಎಂಬುದಾಗಿ ನಿಮ್ಮ ದಂತವೈದ್ಯರು ಭಾವಿಸಿದರೆ ಅವರು ನಿಮ್ಮನ್ನು ನಿಮ್ಮ ಕುಟುಂಬ ವೈದ್ಯರಿಗೆ ಅಥವಾ ವಿಶೇಷ ತಜ್ಞರಿಗೆ ಶಿಫಾರಸು ಮಾಡಬಹುದಾಗಿದೆ. ಇದರಿಂದ ಸಮಸ್ಯೆಯ ಮೂಲ ಕಾರಣವನ್ನು ಪರಿಹರಿಸುವುದು ಸಾಧ್ಯವಾಗುತ್ತದೆ.
ಧೂಮಪಾನ , ತಂಬಾಕು ಉತ್ಪನ್ನಗಳ ಸೇವನೆಯನ್ನು ತ್ಯಜಿಸಿ
ಯಾವುದೇ ರೂಪದಲ್ಲಿ ತಂಬಾಕು ಸೇವನೆಯ ಚಟ ಉಸಿರಿನ ದುರ್ವಾಸನೆಗೆ ಕೊಡುಗೆ ನೀಡುತ್ತದೆ. ಹೀಗಾಗಿ ಈ ದುರಭ್ಯಾಸವನ್ನು ತ್ಯಜಿಸುವುದಕ್ಕೆ ಇದು ಉತ್ತಮ ಅವಕಾಶ. ತಂಬಾಕು ಬಳಕೆಯಿಂದ ಬಾಯಿ ಶುಷ್ಕವಾಗುತ್ತದೆ ಮತ್ತು ಹಲ್ಲುಜ್ಜಿದ ಬಳಿಕವೂ ಉಳಿಯುವ ಕಟುವಾದ ದುರ್ವಾಸನೆಯನ್ನು ಉಂಟು ಮಾಡುತ್ತದೆ.
ಸಾಕಷ್ಟು ನೀರು ಕುಡಿಯಿರಿ
ದಿನವೂ ಸಾಕಷ್ಟು ನೀರು (ಆರರಿಂದ ಎಂಟು ಲೋಟಗಳು) ಕುಡಿಯುವ ಮೂಲಕ ಬಾಯಿ ಒಣಗದಂತೆ ಎಚ್ಚರ ವಹಿಸಿ. ನೀರು ಕುಡಿಯುವುದರಿಂದ ಬಾಯಿಯಲ್ಲಿ ಉಳಿದಿರುವ ಆಹಾರದ ತುಣುಕುಗಳು ಮತ್ತು ಬ್ಯಾಕ್ಟೀರಿಯಾಗಳು ತೊಳೆದು ಹೋಗಿ ಉಸಿರಿನ ದುರ್ವಾಸನೆ ಕಡಿಮೆಯಾಗುತ್ತದೆ. ಆಹಾರದ ತುಣುಕುಗಳು ಮತ್ತು ಬ್ಯಾಕ್ಟೀರಿಯಾಗಳೇ ಉಸಿರಿನ ದುರ್ವಾಸನೆಯ ಪ್ರಾಥಮಿಕ ಕಾರಣಗಳಾಗಿವೆ. ನಿಮಗೆ ದೀರ್ಘಕಾಲದಿಂದ ಬಾಯಿ ಒಣಗುವ ಸಮಸ್ಯೆ ಇದ್ದರೆ ಅಥವಾ ಬಾಯಿ ಒಣಗುವುದಕ್ಕೆ ಕಾರಣವಾಗುವ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ಈ ಬಗ್ಗೆ ನಿಮ್ಮ ದಂತ ವೈದ್ಯರ ಬಳಿ ಮಾತನಾಡಿ. ಅವರು ಜೊಲ್ಲಿಗೆ ಪರ್ಯಾಯವಾಗಿ ಉಪಯೋಗಿಸಬಹುದಾದ ದ್ರಾವಣಗಳ ಕುರಿತು ಸಲಹೆ ನೀಡಬಲ್ಲರು.
ಸಕ್ಕರೆರಹಿತ ಚೂಯಿಂಗ್ಗಮ್ ಅಥವಾ ಸಕ್ಕರೆರಹಿತ ಕ್ಯಾಂಡಿ ಜಗಿಯುತ್ತಿರಿ
ಸಕ್ಕರೆರಹಿತ ಕ್ಯಾಂಡಿ ಅಥವಾ ಸಕ್ಕರೆ ರಹಿತ ಚೂÂಯಿಂಗ್ ಗಮ್ ಬಾಯಿಯಲ್ಲಿ ಇರಿಸಿ ಜಗಿಯುತ್ತಿರುವುದು ಜೊಲ್ಲು ಸ್ರಾವವಾಗುವಂತೆ ಪ್ರಚೋದನೆ ಒದಗಿಸುತ್ತದೆ. ಜೊಲ್ಲು ಬಾಯಿಯಲ್ಲಿ ಉಳಿದಿರುವ ಆಹಾರದ ತುಣುಕುಗಳು ಮತ್ತು ಬ್ಯಾಕ್ಟೀರಿಯಾಗಳು ತೊಳೆದುಹೋಗುವಂತೆ ಮಾಡಿ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ. ಇದು ಉಸಿರಿನ ದುರ್ವಾಸನೆಗೆ ಒಂದು ದಿಢೀರ್ ಪರಿಹಾರವಾಗಿದೆ.
ಕ್ಯಾರೆಟ್ ತುಂಡು, ಸೆಲೆರಿ ತುಂಡು ಅಥವಾ ಒಂದು ಸೇಬು ಜಗಿಯುತ್ತಿರಿ
ಆಹಾರ-ಉಪಾಹಾರಗಳ ನಡುವೆ ತಾಜಾ, ಕರುಮುರು ಹಣ್ಣು ಮತ್ತು ತರಕಾರಿಗಳನ್ನು ಆಗಾಗ ಜಗಿದು ನುಂಗುತ್ತಿದ್ದರೆ ಜೊಲ್ಲು ಉತ್ಪಾದನೆಯಾಗಲು ಪ್ರಚೋದನೆ ಸಿಗುತ್ತದೆ. ಇದರಿಂದ ಬಾಯಿ, ಹಲ್ಲುಗಳ ಸಂಧಿ, ವಸಡುಗಳಲ್ಲಿ ಉಳಿದಿರುವ ಆಹಾರದ ತುಣುಕುಗಳು ಮತ್ತು ಬ್ಯಾಕ್ಟೀರಿಯಾಗಳು ತೊಳೆದುಹೋಗಿ ಉಸಿರಿನ ದುರ್ವಾಸನೆ ನಿವಾರಣೆಯಾಗುತ್ತದೆ. ಹಸಿವು ಮತ್ತು ಉಪವಾಸದಿಂದ ಉಂಟಾಗುವ ಉಸಿರಿನ ದುರ್ವಾಸನೆಯ ನಿವಾರಣೆಗೂ ಇದು ಸಹಕಾರಿಯಾಗಿದೆ.
ಹೊಟ್ಟೆ ಹಸಿದಿದ್ದರೆ ಅಥವಾ ಖಾಲಿಯಾಗಿದ್ದರೆ ಹೊಟ್ಟೆಯಲ್ಲಿ ಆಮ್ಲಿàಯತೆ ಉಂಟಾಗುತ್ತದೆ, ಇದು ಕೂಡ ಉಸಿರು ದುರ್ವಾಸನೆಯಿಂದ ಕೂಡಿರಲು ಕಾರಣವಾಗುತ್ತದೆ. ಕ್ಯಾರೆಟ್, ಸೇಬು ಮತ್ತಿತರ ಹಣ್ಣು ತರಕಾರಿಗಳನ್ನು ಜಗಿದು ನುಂಗುವುದು ಈ ಕಾರಣದಿಂದ ಉಂಟಾಗುವ ಉಸಿರಿನ ದುರ್ವಾಸನೆಯನ್ನು ನಿವಾರಿಸುವುದಕ್ಕೂ ಸಹಕಾರಿಯಾಗಿದೆ.
ಆದರೆ ಇವೆಲ್ಲ ತಾತ್ಕಾಲಿಕ ಉಪಾಯಗಳು ಎಂಬುದನ್ನು ನೆನಪಿನಲ್ಲಿ ಇರಿಸಿಕೊಳ್ಳಿ. ಉಸಿರಿನ ದುರ್ವಾಸನೆಯ ಸಮಸ್ಯೆ ನಿಮಗಿದ್ದರೆ ತಪ್ಪದೆ ದಂತವೈದ್ಯರ ಬಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಿ. ಆಗ ಉಸಿರಿನ ದುರ್ವಾಸನೆಗೆ ಕಾರಣವಾಗುವ ಹಲ್ಲು, ವಸಡಿನ ಸಮಸ್ಯೆಗಳೇನಾದರೂ ಉಂಟಾಗಿದ್ದರೆ ಅವು ಪತ್ತೆಯಾಗಿ ಆರಂಭಿಕ ಹಂತದಲ್ಲಿಯೇ ಪರಿಹರಿಸುವುದಕ್ಕೆ ಸಾಧ್ಯವಾಗುತ್ತದೆ. ಇಲ್ಲವಾದರೆ ಅವು ಉಲ್ಬಣಿಸಿ ಹೆಚ್ಚು ತೊಂದರೆಯಾಗುತ್ತದೆ.
ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ:
ಮುಖ್ಯಸ್ಥರು,
ಓರಲ್ ಸರ್ಜರಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು
ಡಾ| ಆನಂದದೀಪ್ ಶುಕ್ಲಾ
ಅಸೋಸಿಯೇಟ್ ಪ್ರೊಫೆಸರ್,
ಓರಲ್ ಸರ್ಜರಿ ವಿಭಾಗ,
ಎಂಸಿಒಡಿಎಸ್, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು
Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.