ಸ್ತನ ಕ್ಯಾನ್ಸರ್‌ ಭಯ ಬೇಡ ;ಇವೆ ಚಿಕಿತ್ಸೆಯ ಸರಳ ವಿಧಾನಗಳು


Team Udayavani, Feb 20, 2022, 8:00 AM IST

ಸ್ತನ ಕ್ಯಾನ್ಸರ್‌ ಭಯ ಬೇಡ ;ಇವೆ ಚಿಕಿತ್ಸೆಯ ಸರಳ ವಿಧಾನಗಳು

ಜಾಗತಿಕವಾಗಿ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್‌ ಒಂದು. ಭಾರತದಲ್ಲಿ ಮತ್ತು ಜಗತ್ತಿನಾದ್ಯಂತ ಮಹಿಳೆಯರಲ್ಲಿ ಅತೀ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳಲ್ಲಿ ಇದು ಸೇರಿದೆ. ಉತ್ತರ ಅಮೆರಿಕ ಖಂಡದ ದೇಶಗಳ ಮಹಿಳೆಯರ ಪೈಕಿ ಪ್ರತೀ 8ರಲ್ಲಿ ಒಬ್ಬರಿಗೆ ಅವರ ಜೀವಮಾನದಲ್ಲಿ ಸ್ತನ ಕ್ಯಾನ್ಸರ್‌ ತಲೆದೋರುವ ಸಾಧ್ಯತೆಗಳಿರುತ್ತವೆ. ಭಾರತದ ಮಟ್ಟಿಗೆ ಹೇಳುವುದಾದರೆ ಈ ಅನುಪಾತ ಸದ್ಯ ಸ್ವಲ್ಪ ಉತ್ತಮವಾಗಿದ್ದು, ಪ್ರತೀ 28 ಮಂದಿ ಮಹಿಳೆಯರಲ್ಲಿ ಒಬ್ಬರಿಗೆ ಇದು ಕಂಡುಬರುವ ಸಾಧ್ಯತೆಯಿದೆ. ಯಾವುದೇ ಕ್ಯಾನ್ಸರ್‌ ಆಗಿರಲಿ, ಬೇಗನೆ ಪತ್ತೆ ಮಾಡಿದಷ್ಟು ಹೆಚ್ಚು ಪರಿಣಾಮಕಾರಿಯಾದ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತದೆ. ಆದರೆ ಭಾರತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶ. ಇಲ್ಲಿ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ಗಳ ಪೈಕಿ ಶೇ. 14ರಷ್ಟು ಸ್ತನ ಕ್ಯಾನ್ಸರ್‌ ಆಗಿರುತ್ತವೆ. ಪ್ರಸೂತಿ, ಹೆರಿಗೆಗೆ ಸಂಬಂಧಿಸಿದ ಮರಣ ಪ್ರಮಾಣಕ್ಕಿಂತ ಸ್ತನ ಕ್ಯಾನ್ಸರ್‌ನಿಂದಾಗುವ ಮರಣ ಪ್ರಮಾಣವು 1.7 ಪಟ್ಟು ಹೆಚ್ಚು ಇರುವುದು ಈ ಕಾಯಿಲೆಯ ಗಂಭೀರತೆಯನ್ನು ಸೂಚಿಸುತ್ತದೆ. ಭಾರತದಲ್ಲಿ ಪ್ರತೀ ನಾಲ್ಕು ನಿಮಿಷಗಳಿಗೆ ಒಬ್ಬ ಮಹಿಳೆಯಲ್ಲಿ ಕ್ಯಾನ್ಸರ್‌ ಪತ್ತೆಯಾಗುತ್ತದೆ, ಪ್ರತೀ 13 ನಿಮಿಷಗಳಿಗೆ ಒಬ್ಬರು ಇದರಿಂದ ಸಾವನ್ನಪ್ಪುತ್ತಿದ್ದಾರೆ.

ನಿರ್ಲಕ್ಷ್ಯ: ಯಾವುದೇ ಒಂದು ಗಡ್ಡೆ ಕ್ಯಾನ್ಸರ್‌ಕಾರಕ ಆಗಿರಬಹುದು. ಕ್ಯಾನ್ಸರ್‌ ಬಗ್ಗೆ ಜನರಲ್ಲಿ ಅರಿವಿನ ಕೊರತೆ ಬಹಳವಾಗಿದೆ. ಕ್ಯಾನ್ಸರ್‌ ಆರಂಭದಲ್ಲಿಯೇ ನೋವು ಸಹಿತ ಕಂಡುಬರುತ್ತದೆ ಎಂದು ಅನೇಕರು ತಿಳಿದುಕೊಂಡಿರುತ್ತಾರೆ. ನಿಜವಾಗಿ ಕ್ಯಾನ್ಸರ್‌ ಮುಂದುವರಿದ ಹಂತಗಳಲ್ಲಿ ಮಾತ್ರ ನೋವಿನಿಂದ ಕೂಡಿರುತ್ತದೆ. ಯಾವುದೇ ಶಂಕಾಸ್ಪದ ಲಕ್ಷಣ, ಗಡ್ಡೆಗಳು, ಬೆಳವಣಿಗೆಗಳು ಇದ್ದರೆ ಮುಚ್ಚುಮರೆ ಇಲ್ಲದೆ ಆದಷ್ಟು ಬೇಗನೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಸ್ತನದಲ್ಲಿ ಗಡ್ಡೆ, ಸ್ತನದ ಚರ್ಮದಲ್ಲಿ ಬದಲಾವಣೆ, ಸ್ತನತೊಟ್ಟುಗಳು ಅಸಹಜವಾಗಿ ಹಿಂದಕ್ಕೆ ಜರುಗಿ ಮುದುಡಿಕೊಂಡಿರುವುದು, ಸ್ತನ ತೊಟ್ಟು ಮತ್ತು ಅದರ ಸುತ್ತುವರಿದ ಭಾಗದ ತ್ವಚೆಯ ಬಣ್ಣದಲ್ಲಿ ಬದಲಾವಣೆಗಳು ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಾಗಿದ್ದು, ಎಚ್ಚರಿಕೆಯಿಂದ ತಪಾಸಣೆ ಮಾಡಿಸಿಕೊಳ್ಳಬೇಕು.

ನಿರಾಕರಣೆ: “ಕ್ಯಾನ್ಸರ್‌ ಒಂದು ಪದ, ಒಂದು ವಾಕ್ಯವಲ್ಲ’ – ನನ್ನ ಆಲೋಚನೆಯ ಸಾರ ಇದು. ಕ್ಯಾನ್ಸರ್‌ ಇರುವುದು ಪತ್ತೆಯಾದರೆ ಅದು ಜಗತ್ತಿನ ಅಂತ್ಯವಲ್ಲ. ಕ್ಯಾನ್ಸರ್‌ ಪತ್ತೆಯಾದ ಅನಂತರದ ಪ್ರಕ್ರಿಯೆಗಳು ಮತ್ತು ಚಿಕಿತ್ಸೆ ಕಳೆದ ಹಲವು ದಶಕಗಳಲ್ಲಿ ಕ್ರಾಂತಿಕಾರಿಯಾಗಿ ವಿಕಸನ ಹೊಂದಿದೆ. ಉತ್ತಮ ಚಿಕಿತ್ಸೆ ಮತ್ತು ಉತ್ಕೃಷ್ಟ ಫ‌ಲಿತಾಂಶಗಳಿವೆ. ಕ್ಯಾನ್ಸರನ್ನು ಗಮನಿಸುವುದು, ರೋಗ ಪತ್ತೆ ಮತ್ತು ಚಿಕಿತ್ಸೆಯಲ್ಲಿ ವೈಜ್ಞಾನಿಕ ಕ್ರಮಗಳಿವೆ. ಜಗತ್ತಿನ ಯಾವುದೇ ಭಾಗದಲ್ಲಾಗಲಿ, ಕ್ಯಾನ್ಸರನ್ನು ತತ್‌ಕ್ಷಣ, ಆದಷ್ಟು ಶೀಘ್ರವಾಗಿ ಪತ್ತೆ ಮಾಡಿ ಚಿಕಿತ್ಸೆಗೆ ಒಳಪಡಿಸಿದರೆ ಅದರಿಂದ ಹೆಚ್ಚೇನೂ ಹಾನಿ ಉಂಟಾಗುವುದಿಲ್ಲ. ಸ್ತನ ಕ್ಯಾನ್ಸರ್‌ಗೆ ಶಸ್ತ್ರಕ್ರಿಯೆ ಮುಖ್ಯವಾದ ಚಿಕಿತ್ಸಾ ವಿಧಾನವಾಗಿದೆ. ಶಸ್ತ್ರಚಿಕಿತ್ಸೆಯ ಸಮಯ ಮತ್ತು ಅದಕ್ಕೆ ಹಿಂದಿನ ಮತ್ತು ಶಸ್ತ್ರಚಿಕಿತ್ಸೆಯ ಬಳಿಕದ ಪ್ರಕ್ರಿಯೆಗಳು ಕೂಡ ಪ್ರಧಾನ ಪಾತ್ರ ವಹಿಸುತ್ತವೆ. ಅಗತ್ಯ ಬಿದ್ದಾಗ ಕಿಮೊಥೆರಪಿ ಮತ್ತು ರೇಡಿಯೋ ಥೆರಪಿಗಳನ್ನು ಉಪಯೋಗಿಸುವುದು ಕೂಡ ಮುಖ್ಯ ಪಾತ್ರ ವಹಿಸುತ್ತದೆ.

ಜನಪ್ರಿಯವಾಗಿ ಎಂಆರ್‌ಎಂ ಎಂದು ಕರೆಸಿಕೊಳ್ಳುವ ಪರಿವರ್ತಿತ ರ್ಯಾಡಿಕಲ್‌ ಮ್ಯಾಸ್ಟೆಕ್ಟಮಿಯು ಸ್ತನ ಕ್ಯಾನ್ಸರ್‌ಗೆ ಉತ್ಕೃಷ್ಟ ದರ್ಜೆಯ ಶಸ್ತ್ರಚಿಕಿತ್ಸೆಯಾಗಿದೆ. ಇದರಲ್ಲಿ ಮ್ಯಾಸ್ಟೆಕ್ಟೊಮಿ (ಸ್ತನದ ರೋಗಬಾಧಿತ ಅಂಗಾಂಶಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದು) ಮತ್ತು ಆಕ್ಸಿಲರಿ ಡಿಸೆಕ್ಷನ್‌ (ಕ್ಯಾನ್ಸರ್‌ ಹರಡಬಹುದಾದ ಇನ್ನೊಂದು ಪ್ರಸಾರ ಕೇಂದ್ರವಾಗಿರುವ ಆ್ಯಕ್ಸಿಲಾದಿಂದ ದುಗ್ಧ ರಸ ಗ್ರಂಥಿಗಳನ್ನು ತೆಗೆದುಹಾಕುವುದು) ಒಳಗೊಂಡಿರುತ್ತದೆ. ಮುಂದಿನ ಚಿಕಿತ್ಸಾ ವಿಧಿ ವಿಧಾನಗಳು ಕೂಡ ಕಾಲಾಂತರದಲ್ಲಿ ಪರಿಣಾಮಕಾರಿಯಾಗಿ ರಚನೆಗೊಂಡಿವೆ. ಈ ಎಲ್ಲ ಬದಲಾವಣೆಗಳಿಂದ ರೋಗಿಯ ರೋಗಬಾಧೆಯನ್ನು ಕಡಿಮೆ ಮಾಡಬಹುದಾಗಿದೆ.

ಲಂಪೆಕ್ಟೊಮಿ (ಗಡ್ಡೆಗಳನ್ನು ಮಾತ್ರ ಸಮರ್ಪಕವಾದ ಅಂತರ ಬಿಟ್ಟು ತೆಗೆದುಹಾಕುವುದು) ಮತ್ತು ಆಕ್ಸಿಲರಿ ಡಿಸೆಕ್ಷನ್‌ ಅಗತ್ಯಬಿದ್ದಾಗ ಅನುಸರಿಸಲಾಗುವ ಲಘು ಸ್ವರೂಪದ ಶಸ್ತ್ರಚಿಕಿತ್ಸೆ. ಇದರಲ್ಲಿ ರೋಗಿ ಮಹಿಳೆಯ ಸ್ತನವನ್ನು ಸಂರಕ್ಷಿಸಲಾಗುತ್ತದೆ; ಹೀಗಾಗಿ ಸ್ತನ ಸಂರಕ್ಷಕ ಶಸ್ತ್ರಚಿಕಿತ್ಸೆ ಎಂದು ಇದನ್ನು ಕರೆಯಲಾಗುತ್ತದೆ. ಈ ಶಸ್ತ್ರಚಿಕಿತ್ಸೆಯಲ್ಲಿ ಸ್ತನದ ಅಂಚುಗಳನ್ನು ತೆಗೆಯಲಾಗುತ್ತದೆ. ಹೀಗಾಗಿ ಇತ್ತೀಚೆಗಿನ ವರ್ಷಗಳಲ್ಲಿ ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆ ನಡೆಸುವ ತಜ್ಞರು ಸ್ತನದ ಸ್ವರೂಪ ಮತ್ತು ಸೌಂದರ್ಯವನ್ನು ಉಳಿಸಿಕೊಳ್ಳುವುದರತ್ತ ಗಮನ ಹರಿಸುತ್ತಿದ್ದಾರೆ. ಇದರಿಂದಾಗಿ ಇದನ್ನು ಸ್ತನದ ಓಂಕೊಪ್ಲಾಸ್ಟಿ ಎಂಬುದಾಗಿಯೂ ಕರೆಯಲಾಗುತ್ತದೆ.

ಆಕ್ಸಿಲರಿ ಡಿಸೆಕ್ಷನ್‌ ಕೈಗೊಂಡಾಗ ಲಿಂಫೊ ಎಡೆಮಾ ಅಥವಾ ದುಗ್ಧರಸ ಗ್ರಂಥಿಗಳ ಊತದಿಂದಾಗಿ ದೀರ್ಘ‌ಕಾಲಿಕ ತೋಳುಗಳ ಊತಕ್ಕೆ ಕಾರಣವಾಗಬಹುದು. ಆಕ್ಸಿಲರಿ ಡಿಸೆಕ್ಷನ್‌ಗೆ ಒಳಗಾಗುವ ಶೇ. 20ರಷ್ಟು ಮಂದಿಯಲ್ಲಿ ಈ ಸಮಸ್ಯೆ ಉಂಟಾಗುತ್ತದೆ. ಈಚೆಗೆ ತಜ್ಞರು ಈ ಬಗ್ಗೆಯೂ ಗಮನ ಹರಿಸಿದ್ದು, ವೈಜ್ಞಾನಿಕವಾಗಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಆಕ್ಸಿಲರಿ ನೋಡ್‌ಗಳು ಒಳಗೊಂಡಿದ್ದಾಗ ಮಾತ್ರ ಆಕ್ಸಿಲರಿ ಡಿಸೆಕ್ಷನ್‌ ಕೈಗೊಳ್ಳಲಾಗುತ್ತದೆ. ಇತರ ರೋಗಿಗಳಲ್ಲಿ ಸಮರ್ಪಕವಾದ ಆಯ್ಕೆಯ ಬಳಿಕ ಸೆಂಟಿನಲ್‌ ನೋಡ್‌ ಬಯಾಪ್ಸಿಯ ಫ‌ಲಿತಾಂಶ ನೆಗೆಟಿವ್‌ ಇದ್ದಾಗ ಆಕ್ಸಿಲರಿ ಡಿಸೆಕ್ಷನ್‌ ಮಾಡದೆ ಇರಬಹುದು. ಸೆಂಟಿನಲ್‌ ನೋಡ್‌ ಎಂದರೆ ದುಗ್ಧರಸ ಹರಿಯುವ ನೋಡ್‌ಗಳ ಗುಂಪು ಅಥವಾ ಏಕ ನೋಡ್‌. ಶಸ್ತ್ರಚಿಕಿತ್ಸೆಯ ಮೂಲಕ ಈ ನೋಡನ್ನು ಗುರುತಿಸಬಹುದು, ಅವುಗಳ ಬಯಾಪ್ಸಿ ನಡೆಸಬಹುದು ಮತ್ತು ಫ‌ಲಿತಾಂಶ ನೆಗೆಟಿವ್‌ ಇದ್ದರೆ ಆಕ್ಸಿಲರಿ ಡಿಸೆಕ್ಷನ್‌ ಮಾಡದೆ ಇರಬಹುದು.

ಒಟ್ಟು ಸಾರಾಂಶವಾಗಿ ಹೇಳಬಹುದಾದರೆ, ಸ್ತನವು ಮಹಿಳೆಯರಿಗೆ ಸಹಜ ಸೌಂದರ್ಯವನ್ನು ಒದಗಿಸುವ ಒಂದು ಬಾಹ್ಯ ಅಂಗವಾಗಿದ್ದು, ಸ್ತನ ಕ್ಯಾನ್ಸರನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸುವ ಅವಕಾಶವನ್ನು ನಾವು ಕಳೆದುಕೊಳ್ಳಬಾರದು. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ ತಪಾಸಣೆಗೆ ಒಳಗಾಗುವುದನ್ನು ಜನಪ್ರಿಯಗೊಳಿಸುವ ಅಗತ್ಯ ಇದೆ. ಸ್ತನ ಕ್ಯಾನ್ಸರ್‌ ಚಿಕಿತ್ಸೆಯ ಸುಲಭ ವಿಧಾನಗಳ ಬಗ್ಗೆ ಜನರು ಅರಿತುಕೊಳ್ಳುವ ಮೂಲಕ ಅದು ಎಲ್ಲರ ಕೈಗೆಟಕಬೇಕಾಗಿದೆ. ಚಿಕಿತ್ಸೆಯ ಉತ್ತಮ ಆಯ್ಕೆಗಳು, ವಿಧಾನಗಳ ಬಗ್ಗೆ ಜನರು ಅರಿವು ಮೂಡಿಸಿಕೊಂಡು ಅವುಗಳ ಉಪಯೋಗ ಪಡೆದುಕೊಳ್ಳಬೇಕು.

ಸ್ತನ ಕ್ಯಾನ್ಸರ್‌ನಿಂದ ಉಂಟಾಗುವ ಸಾವಿನ ಪ್ರಮಾಣವನ್ನು
ಕಡಿಮೆ ಮಾಡುವುದೇ ಗುರಿಯಾಗಿದೆ. ಇದನ್ನು ಸಾಧಿಸುವುದು ಹೇಗೆ?
1. ಸ್ತನ ಕ್ಯಾನ್ಸರ್‌ ಉಂಟಾಗುವುದನ್ನು ಕಡಿಮೆ ಮಾಡುವುದು: ಕ್ಯಾನ್ಸರ್‌ ಪ್ರಕರಣಗಳು ಕಡಿಮೆಯಾದರೆ ಮರಣ ಪ್ರಮಾಣವೂ ಕಡಿಮೆಯಾಗುತ್ತದೆ.
2. ತಪಾಸಣೆ ಮತ್ತು ಬೇಗನೆ ರೋಗ ಪತ್ತೆಯನ್ನು ಉತ್ತೇಜಿಸುವುದು: ಕ್ಯಾನ್ಸರ್‌ ಅದರ ಪ್ರಾಥಮಿಕ ಹಂತಗಳಲ್ಲಿ ಹೆಚ್ಚು ಚೆನ್ನಾಗಿ ಚಿಕಿತ್ಸೆಗೆ ಬಗ್ಗುತ್ತದೆ, ಇದರಿಂದ ಚಿಕಿತ್ಸೆಯ ಬಳಿಕ ಉತ್ತಮ ಫ‌ಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.
ಮ್ಯಾಮೊಗ್ರಾಮ್‌ ಮೂಲಕ ತಪಾಸಣೆಯನ್ನು 40 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತೀ ವರ್ಷವೂ ಮಾಡಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಸಮುದಾಯದಲ್ಲಿ ಮ್ಯಾಮೊಗ್ರಾಮ್‌ ತಪಾಸಣೆ ತುಂಬಾ ಉಪಯುಕ್ತವಾಗಿದೆ.
3. ರೋಗಲಕ್ಷಣಗಳುಳ್ಳ ಮಹಿಳೆಯರು ಆದಷ್ಟು ಬೇಗನೆ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ, ತಪಾಸಣೆಗೆ ಒಳಗಾಗುವುದನ್ನು ಉತ್ತೇಜಿಸಬೇಕು. ನಿರ್ಲಕ್ಷ್ಯ ಮತ್ತು ನಿರಾಕರಣೆ ಕ್ಯಾನ್ಸರ್‌ ವಿರುದ್ಧ ಹೋರಾಟಕ್ಕೆ ತುಂಬಾ ಹಿನ್ನಡೆ ಉಂಟುಮಾಡುತ್ತದೆ.

-ಡಾ| ಕಾರ್ತಿಕ್‌ ಕೆ.ಎಸ್‌.
ಸರ್ಜಿಕಲ್‌ ಓಂಕಾಲಜಿ,
ಕೆಎಂಸಿ ಆಸ್ಪತ್ರೆ, ಮಂಗಳೂರು

ಟಾಪ್ ನ್ಯೂಸ್

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IPL: Players from these countries are fully available for the next three seasons of IPL

IPL: ಇನ್ನು ಮೂರು ಸೀಸನ್‌ ಐಪಿಎಲ್‌ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ

1-a-raga-pg

Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Talk war between Minister Sharanabasappa Darshanapura and MLA Sharanagouda Kandakur in KDP meeting

Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌

BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್:‌ ಭಾರತದ ಹಿಡಿತದಲ್ಲಿ ಪರ್ತ್‌ ಟೆಸ್ಟ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-remo

Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ

ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.