ಈ ರೀತಿಯ ಡಯಟ್ ಪ್ರಯೋಜನವಿಲ್ಲ !
Team Udayavani, May 27, 2018, 6:00 AM IST
ಅಧಿಕ ತೂಕ ಹಾಗೂ ಸ್ಥೂಲತೆಯನ್ನು ಕಡಿಮೆ ಮಾಡುವ ಸಲುವಾಗಿ ಜನರು ವಿವಿಧ ರೀತಿಯಲ್ಲಿ ಡಯೆಟ್ ಕ್ರಮಗಳನ್ನು ಅನುಸರಿಸುತ್ತಾರೆ. ವ್ಯಾಯಾಮವನ್ನು ಮಾಡುವ ಮೂಲಕ ತೂಕವನ್ನು ಇಳಿಸುವ ಪ್ರಯತ್ನ ಮಾಡುವ ಮನಸ್ಸಿಲ್ಲದವರು ಮತ್ತು ಈ ರೀತಿಯ ಪ್ರಯತ್ನಗಳನ್ನು ಮಾಡಿಯೂ ನಿರೀಕ್ಷಿತ ಫಲಿತಾಂಶವನ್ನು ಪಡೆಯಲು ಅಸಾಧ್ಯವಾದವರು ಡಯೆಟ್‌ಗಳ ಮೊರೆ ಹೋಗುತ್ತಾರೆ. ಈ ಕೆಳಗೆ ವಿವರಿಸಿದ ಡಯೆಟ್‌ಗಳನ್ನು ಅನುಸರಿಸುವುದನ್ನು ಹೆಚ್ಚಾಗಿ ಗಮನಿಸಬಹುದಾಗಿದೆ.
ಮ್ಯಾಜಿಕ್ ಫುಡ್:
ಕೆಲವರು ತೂಕವನ್ನು ಇಳಿಸುವುದಕ್ಕಾಗಿ ಮ್ಯಾಜಿಕ್ ಫುಡ್ ಮೊರೆ ಹೋಗುತ್ತಾರೆ. ಈ ಮೂಲಕ ತೂಕ ಇಳಿಯುತ್ತದೆ ಎಂಬುದು ಅವರ ಭಾವನೆಯಾಗಿದೆ. ಆದರೆ ವಾಸ್ತವದಲ್ಲಿ ಮ್ಯಾಜಿಕ್ ಫುಡ್ ಎಂದು ವಿಶ್ಲೇಷಿಸಬಹುದಾದ ಆ್ಯಪ್‌ಲ್ ಸಿಡಾರ್ ವಿನೆಗರ್, ಗ್ರೇಪ್‌ಫೂÅಟ್, ಕ್ಯಾಬೇಜ್ ಸೂಪ್ ಇತ್ಯಾದಿಗಳನ್ನು ವ್ಯಕ್ತಿಯು ಪ್ರತಿನಿತ್ಯ ಹಾಗೂ ದೀರ್ಘ ಸಮಯ ತೆಗೆದುಕೊಳ್ಳುವುದು ಸಾಧ್ಯವಿಲ್ಲ. ಇದಕ್ಕೆ ದೇಹವು ಒಗ್ಗಿಕೊಳ್ಳುವುದಿಲ್ಲ. ಹಾಗಾಗಿ ಜನರು ಇವುಗಳನ್ನು ಬಿಟ್ಟು ಮತ್ತೆ ಸಾಮಾನ್ಯ ಆಹಾರ ಕ್ರಮಕ್ಕೆ ಹಿಂದಿರು ಗುತ್ತಾರೆ. ಇಲ್ಲದಿದ್ದರೆ ಪೋಷಕಾಂಶಗಳ ಕೊರತೆ ಉಂಟಾಗುವ ಪರಿಣಾಮ ಅವರು ತೂಕ ಇಳಿಸಿಕೊಳ್ಳುವ ಭರವಸೆ ಕಳೆದುಕೊಳ್ಳುತ್ತಾರೆ. ಹಾಗಾಗಿ ಎಲ್ಲರೂ ತಿಳಿದುಕೊಳ್ಳಬೇಕಾದ ಪ್ರಮುಖಾಂಶ ವೆಂದರೆ ಮ್ಯಾಜಿಕ್ ಫುಡ್ ಎಂಬುದೇ ಇಲ್ಲ.
ಹೈ ಪ್ರೊಟೀನ್, ನೋ
ಕಾಬೊìಹೈಡ್ರೇಟ್ ಡಯೆಟ್: ಈ ಡಯೆಟ್‌ನ್ನು ಸರಿಯಾದ ಸಮಯಕ್ಕೆ ಮುಟ್ಟಾಗದ ಹುಡುಗಿಯರು ಮತ್ತು ವೇಟ್‌ಲಿಫ್ಟಿಂಗ್‌ಗೆ ತೆರಳುವ ಹುಡುಗರು ಅನುಸರಿಸುತ್ತಾರೆ. ಅದಾಗ್ಯೂ ಈ ಆಹಾರ ಕ್ರಮವು ದೇಹದ ತೂಕವನ್ನು ಕಡಿಮೆ ಮಾಡುತ್ತದಾದರೂ ಕೊಬ್ಬನ್ನು ಕಡಿಮೆ ಮಾಡುವುದರಲ್ಲಿ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ. ಇದರಿಂದ ಸಾಮಾನ್ಯವಾಗಿ ನಿರ್ಜಲೀಕರಣವೂ ಉಂಟಾಗಬಹುದು. ಕೆಲವೊಂದು ಮಾಂಸಾಹಾರ ಖಾದ್ಯಗಳು ಕೊಲೆಸ್ಟರಾಲ್‌ನ್ನು ಹೆಚ್ಚು ಹೊಂದಿರುತ್ತವೆ. ಇವುಗಳಿಂದಾಗಿ ಹೃದಯದ ಕಾಯಿಲೆಗಳು ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಪ್ರೊಟೀನ್‌ನ್ನು ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ಆಸ್ಟೆಯೋಪೊರೋಸಿಸ್ ,ಕಾನ್ಸ್ಟಿಪೇಶನ್ , ಜೀರ್ಣಿ ಸುವುದಕ್ಕೆ ಹೆಚ್ಚಿನ ಸಾಮರ್ಥ್ಯದ ಅಗತ್ಯವಿರುವುದರಿಂದ ಪಿತ್ತಜನಕಾಂಗ ಹಾಗೂ ಮೂತ್ರಪಿಂಡಗಳ ಮೇಲೆ ಒತ್ತಡ ಉಂಟಾಗುವ ಅಪಾಯವಿದೆ. ಹಸಿವನ್ನು ಹಿಡಿದಿಟ್ಟುಕೊಳ್ಳುವುದರಿಂದ kಛಿಠಿಟsಜಿs ಉಂಟಾಗುವ ಸಾಧ್ಯತೆಗಳೂ ಇವೆ.
ಹೈ ಫೈಬರ್ ಲೋ ಕ್ಯಾಲರಿ ಡಯೆಟ್:
ಈ ರೀತಿಯ ಆಹಾರ ಕ್ರಮದಿಂದ ಅಂದರೆ ಫೈಬರ್ (ನಾರು) ಪದಾರ್ಥ ಸೇವನೆಯಿಂದಾಗಿ ಕೊಲೆಸ್ಟರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದಾಗಿ ವ್ಯಕ್ತಿಯು cಟnsಠಿಜಿಟಚಠಿಜಿಟn ಮುಕ್ತಿ ಹೊಂದುತ್ತಾನೆ ಮತ್ತು ಉತ್ತಮ ಆರೋಗ್ಯವನ್ನು ಹೊಂದುತ್ತಾನೆ. ಆದರೆ ಈ ರೀತಿಯ ಆಹಾರಕ್ರಮವನ್ನು ಅನುಸರಿಸುವುದರಿಂದ ಕೆಲವೊಂದು ಸಮಸ್ಯೆಗಳೂ ಇವೆ. ಹೆಚ್ಚಿನ ಪ್ರಮಾಣದ ನಾರಿನಾಂಶವುಳ್ಳ ಆಹಾರದ ಸೇವನೆಯು ಪೂರಕ ಪ್ರಮಾಣದ ನೀರಿನಾಂಶವನ್ನು ದೇಹವು ಪಡೆಯದ ಸಂದರ್ಭದಲ್ಲಿ ನಿರ್ಜಲೀಕರಣ ಉಂಟಾಗುವ ಸಾಧ್ಯತೆ ಇದೆ. ಹಾಗಾಗಿ ಬೇಕಾದಷ್ಟು ನೀರು ಕುಡಿಯುವುದರಿಂದ ಈ ಡಯೆಟ್‌ನ್ನು ಫಲಪ್ರದಗೊಳಿಸಬಹುದಾಗಿದೆ.
ಅತಿಯಾದ ನಾರಿನಂಶ ಸೇವನೆಯಿಂದ ಜೀರ್ಣ ಪ್ರಕ್ರಿಯೆ ತ್ವರಿತಗೊಳ್ಳುತ್ತದೆ. ಇದರಿಂದ ಈ ಪ್ರಕ್ರಿಯೆಯಲ್ಲಿ ಪೋಷಕಾಂಶಗಳನ್ನು ಹೀರಿಕೊಳ್ಳುವುದು ಕಡಿಮೆಯಾಗುತ್ತದೆ.
ದ್ರವಾಂಶ ಡಯೆಟ್:
ಸರ್ಜರಿಗೆ ಒಳಗಾಗುವ ವ್ಯಕ್ತಿಗೆ ತೂಕ ಇಳಿಸುವ ಅನಿವಾರ್ಯತೆ ಇರುವುದರಿಂದ ಈ ರೀತಿಯ ದ್ರವಾಂಶ ಡಯೆಟ್ ಪದ್ಧತಿಯು ಪೂರಕವಾಗಿದೆ. ಈ ಡಯೆಟ್‌ಗಳು ಸಾಮಾನ್ಯವಾಗಿ ದಿನಂಪ್ರತಿ 700-800 kcಚl ಒದಗಿಸುತ್ತವೆ. ದೀರ್ಘ ಕಾಲ ಈ ಡಯೆಟ್ ಪದ್ಧತಿಯನ್ನು ಅನುಸರಿಸುವುದರಿಂದ ಕೂದಲು ನಷ್ಟ ಸಂಭವಿಸುತ್ತದೆ. ಇಟnsಠಿಜಿಟಚಠಿಜಿಟn ಉಂಟಾಗುವ ಸಾಧ್ಯತೆ ಇದ್ದು ವೈದ್ಯಕೀಯ ನಿಗಾ ದೊರೆಯದೇ ಹೋದಲ್ಲಿ ಅಪಾಯ ಸಂಭವಿಸುವ ಸಾಧ್ಯತೆಯೂ ಇದೆ. ಶಸ್ತ್ರಕ್ರಿಯೆಗೆ ಒಳಗಾಗುವ ವ್ಯಕ್ತಿಯು ದೈನಂದಿನ ದೇಹದ ಅಗತ್ಯಗಳಿಗಾಗಿ ಪೂರಕ ಆಹಾರ ಸೇವಿಸುವುದರಿಂದ ಈ ರೀತಿಯ ಡಯೆಟ್‌ನ್ನು ಯಶಸ್ವಿಗೊಳಿಸಬಹುದಾಗಿದೆ.
ಸಂತುಲಿತ ಡಯೆಟ್ ಮಾತ್ರ ಸತ್ಯ:
ಆದ್ದರಿಂದ ಕಾಬೊìಹೈಡ್ರೇಟ್ಸ್, ಪ್ರೊಟೀನ್ಸ್, ಕೊಬ್ಬು, ವಿಟಮಿನ್, ಲವಣಗಳನ್ನು ಹೊಂದಿರುವ ಸಮತೋಲಿತ ಡಯೆಟ್ ಮತ್ತು ವ್ಯಾಯಾಮವು ತೂಕ ಇಳಿಸುವಲ್ಲಿ ಸಹಕಾರಿಯಾಗಿದೆಯೇ ಹೊರತು ಬೇರಾವ ಕ್ರಮಗಳಿಂದಲೂ ತೂಕ ಇಳಿಸುವುದು ಸಾಧ್ಯವಿಲ್ಲ. ಕ್ಯಾಲರಿಗಳನ್ನು ಕಡಿಮೆ ಮಾಡುವುದು ಮತ್ತು 30-45 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ವ್ಯಕ್ತಿಯು ತೂಕವನ್ನು ಕಳೆದುಕೊಳ್ಳುವುದು ಮತ್ತು ಆರೋಗ್ಯಯುತವಾಗಿ ಬಾಳುವುದು ಸಾಧ್ಯವಿದೆ. ಯಾವತ್ತೂ ಜೀವನೋತ್ಸಾಹವನ್ನು ಕಳೆದುಕೊಳ್ಳದೆ ನಿಧಾನಗತಿಯ ಪ್ರಯೋಜನಕಾರಿ ಡಯೆಟ್ ಮೂಲಕ ತೂಕ ಇಳಿಸಿಕೊಳ್ಳಬಹುದು. ನಿಧಾನಗತಿಯ ಈ ಕ್ರಮಗಳು ಪೂರಕ ಪರಿಣಾಮಗಳನ್ನು ಉಂಟು ಮಾಡುತ್ತವೆ. ಕ್ಷಿಪ್ರ ಡಯೆಟ್ ಕ್ರಮಗಳಿಂದ ದೀರ್ಘ ಕಾಲಿಕ ಪ್ರಯೋಜನ ಲಭಿಸುವುದಿಲ್ಲ. ಕಳೆದುಕೊಂಡ ತೂಕವನ್ನು ಮತ್ತೆ ಹೊಂದುವುದು ಆರೋಗ್ಯಕರವಲ್ಲ. ಆದ್ದರಿಂದ ಸಮತೋಲಿತ ಡಯೆಟ್ ಪದ್ಧತಿಯನ್ನು ಅನುಸರಿಸಿ, ಒಂದು ವರ್ಷದ ವರೆಗೆ ನಿರ್ದಿಷ್ಟ ತೂಕ ಇಳಿಕೆಯನ್ನು ಕಾಯ್ದುಕೊಂಡು ಉತ್ತಮ ಆಹಾರವನ್ನು ಸೇವಿಸುವುದು ಸೂಕ್ತ.
ತೂಕ ಇಳಿಸುವ ಮಾತ್ರೆಗಳು, ಯಂತ್ರಗಳು
ಈ ರೀತಿಯ ಯಾವುದೇ ಪ್ರಯತ್ನ ಗಳು ಫಲಪ್ರದವಾಗಿರುವುದು ಈ ವರೆಗೆ ಸಾಬೀತಾಗಿಲ್ಲ. ಇವು ಸುಳ್ಳು ಗಿಮಿಕ್‌ಗಳಾಗಿದ್ದು, ಇವುಗಳಿಂದಾಗಿ ನೀರಿನಾಂಶ ವನ್ನು ಕಳೆದುಕೊಳ್ಳಲು ಮಾತ್ರ ಸಾಧ್ಯವಾಗಿದೆ. ಸೋನಾ ಅಥವಾ ಬೆಲ್ಟ್‌ಗಳನ್ನು ಧರಿಸುವು ದರಿಂದ ತೂಕ ಇಳಿಯುತ್ತದೆ ಎಂಬುದು ಶುದ್ಧ ಸುಳ್ಳು. ಇದರಿಂದ ನೀರಿನಾಂಶ ಕಡಿಮೆಯಾಗಿ ತೂಕ ಕಡಿಮೆಯಾದಂತೆ ಗೋಚರಿಸುತ್ತದೆ. ನೀರು ಕುಡಿದಾಕ್ಷಣ ತೂಕವು ಮತ್ತೆ ಯಥಾಸ್ಥಿತಿಗೆ ಬರುತ್ತದೆ.
ಉಪವಾಸ ಪೂರಕವಲ್ಲ
ಕೆಲವರು ತೂಕವನ್ನು ಇಳಿಸಿಕೊಳ್ಳುವುದಕ್ಕೆ ಉಪವಾಸ ಮಾಡುತ್ತರೆ. ಕೆಲವರು ನಿಗದಿತವಾಗಿ ಉಪವಾಸ ಮಾಡಿದರೆ ಕೆಲವು ದಿನ ಬಿಟ್ಟು ದಿನ ಉಪವಾಸ ಮಾಡುತ್ತಾರೆ. ಇದರಿಂದಾಗಿ ಪೋಷಕಾಂಶ ನ್ಯೂನತೆ ಉಂಟಾಗುತ್ತದೆ ಮತ್ತು ದೀರ್ಘ ಸಮಯ ಮುಂದುವರಿದರೆ ವ್ಯಕ್ತಿಯ ಆರೋಗ್ಯ ಹದಗೆಡುವ ಸಾಧ್ಯತೆ ಇದೆ.
– ಅರುಣಾ ಮಲ್ಯ,
ಡಯೆಟಿಷನ್, ಕೆಎಂಸಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.