ಹಲ್ಲಿನ ಸೋಂಕು; ಸಂಧಿ ನೋವಿಗೆ ಕಾರಣವಾದೀತೇ ?


Team Udayavani, Jan 15, 2023, 3:28 PM IST

8–tooth-ache

ಆರ್ಥೈಟಿಸ್‌ ಫೌಂಡೇಶನ್‌ನವರು ಹೇಳುವ ಪ್ರಕಾರ, ಹಲ್ಲಿನ ಸೋಂಕು ಅಥವಾ ವಸಡಿನ ಕಾಯಿಲೆಯಿಂದಾಗಿ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ದೇಹದಲ್ಲಿ ರೋಗ ಪ್ರತಿರೋಧಕ ಪ್ರತಿಕ್ರಿಯೆಗಳನ್ನು ಉಂಟುಮಾಡಬಲ್ಲವು ಎಂಬುದಾಗಿ ಹೇಳಿದೆ.

ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾಗಳು ಆಟೋ ಆ್ಯಂಟಿ ಬಾಡಿಗಳ ಉತ್ಪಾದನೆಗೆ ಕಾರಣವಾಗಬಲ್ಲವು, ಇದರಿಂದಾಗಿ ದೇಹದ ಪ್ರೊಟೀನ್‌ಗಳಲ್ಲಿ ಬದಲಾವಣೆ ಕಂಡುಬರಬಹುದು. ಇದರಿಂದಾಗಿ ಸಂಧಿಗಳ ಜೋಡಣೆಯ ಭಾಗದಲ್ಲಿ ದೇಹವು ಕೆಲವು ಪ್ರೊಟೀನ್‌ಗಳನ್ನು ಅಪಾಯವೆಂಬಂತೆ ಪರಿಗಣಿಸುವ ಪರಿಸ್ಥಿತಿ ಮತ್ತು ಇದಕ್ಕೆ ಪ್ರತಿಕ್ರಿಯೆಯಾಗಿ ಈ ಪ್ರೊಟೀನ್‌ಗಳ ವಿರುದ್ಧ ರಕ್ಷಣೆಗಾಗಿ ಆ್ಯಂಟಿಬಾಡಿಗಳನ್ನು ಉತ್ಪಾದಿಸುವಂತೆ ಆಗಬಹುದು.

ಬ್ಯಾಕ್ಟೀರಿಯಾಗಳು ರಕ್ತಪ್ರವಾಹದಲ್ಲಿ ಸೇರಿಕೊಂಡು ಸಂಧಿಗಳ ಮೆತ್ತೆಭಾಗದಲ್ಲಿರುವ ದಪ್ಪನೆಯ ಸಿನೊವಯಲ್‌ ದ್ರವವನ್ನೂ ಪ್ರವೇಶಿಸಬಹುದಾಗಿದೆ. ರುಮಟಾಯಿಡ್‌ ಆರ್ಥೈಟಿಸ್‌ ಮತ್ತು ಓಸ್ಟಿಯೋ ಆರ್ಥೈಟಿಸ್‌ ಹೊಂದಿರುವವರ ಸಿನೊವಯಲ್‌ ದ್ರವದಲ್ಲಿ ಬಾಯಿಯ ಬ್ಯಾಕ್ಟೀರಿಯಾಗಳನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಹಲ್ಲು ಸೋಂಕು ಮತ್ತು ಸಂಧಿನೋವುಗಳ ನಡುವಣ ಸಂಬಂಧ

ಬಾಯಿಯಲ್ಲಿ ಉಂಟಾಗಿರುವ ಬ್ಯಾಕ್ಟೀರಿಯಾ ಸೋಂಕುಗಳು, ನಿರ್ದಿಷ್ಟವಾಗಿ ಅಗ್ರೆಗೇಟಿಬ್ಯಾಕ್ಟರ್‌ ಆ್ಯಕ್ಟಿನೊಮೈಸೆಟೆಮ್‌ ಕೊಮೈಟನ್ಸ್‌ (ಎಎ) ಎಂಬ ಬ್ಯಾಕ್ಟೀರಿಯಮ್‌ ರುಮಟಾಯಿಡ್‌ ಉಂಟಾಗಲು ಕಾರಣವಾಗಬಲ್ಲುದು.

ಎಎಯು ಬಿಳಿ ರಕ್ತಕಣಗಳಲ್ಲಿ ಇದು ರುಮಟಾಯಿಡ್‌ ಆರ್ಥೈಟಿಸ್‌ ಹೊಂದಿರುವವರ ಸಂಧಿಗಳಲ್ಲಿ ಕಂಡುಬರುವ ಬದಲಾವಣೆಯಂತಹುದೇ ಬದಲಾವಣೆಯನ್ನು ಉಂಟು ಮಾಡಬಹುದಾಗಿದೆ.

ಪೆರಿಯೋಡೊಂಟೈಟಿಸ್‌ ವಸಡುಗಳು ಮತ್ತು ಹಲ್ಲುಗಳ ಸುತ್ತಲು ಇರುವ ಎಲುಬುಗಳನ್ನು ಬಾಧಿಸುವ ಒಂದು ಅನಾರೋಗ್ಯ ಸ್ಥಿತಿ. ಇದರ ತೀವ್ರತರಹದ ಪ್ರಕರಣಗಳಲ್ಲಿ ಇದರಿಂದಾಗಿ ಎಲುಬು ಅಥವಾ ಹಲ್ಲು ನಷ್ಟವಾಗಬಹುದು. ಪೆರಿಯೊಡೊಂಟೈಟಿಸ್‌ ರುಮಟಾಯಿಡ್‌ ಆರ್ಥೈಟಿಸ್‌ ಉಂಟಾಗಬಲ್ಲಂತಹ ಆಟೊಇಮ್ಯೂನ್‌ ಪ್ರತಿಕ್ರಿಯೆಗೆ ಕಾರಣವಾಗಬಲ್ಲುದಾಗಿದೆ.

ರುಮಟಾಯಿಡ್‌ನ‌ ಆರಂಭಿಕ ಹಂತಗಳಲ್ಲಿ ಸಂಧಿಗಳು ಮೃದುವಾಗುವುದು ಅಥವಾ ಸಂಧಿನೋವು ಉಂಟಾಗಬಹುದು. ರುಮಟಾಯಿಡ್‌ ಆರ್ಥೈಟಿಸ್‌ನ ಇತರ ಲಕ್ಷಣಗಳೆಂದರೆ ­

-6 ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಸಂಧಿಗಳು ಊದಿಕೊಳ್ಳುವುದು ಅಥವಾ ಗಡುಸಾಗುವುದು ­

-ಬೆಳಗ್ಗೆ 30 ನಿಮಿಷಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಸಂಧಿಗಳು ಗಡುಸಾಗುವುದು ­

-ಒಂದಕ್ಕಿಂತ ಹೆಚ್ಚು ಸಂಧಿಗಳಲ್ಲಿ ಲಕ್ಷಣಗಳು ಕಾಣಿಸಿಕೊಳ್ಳುವುದು ­

-ಲಕ್ಷಣಗಳು ಆರಂಧಿಕವಾಗಿ ಮಣಿಕಟ್ಟು, ಪಾದ ಅಥವಾ ಹಸ್ತಗಳಂತಹ ಸಣ್ಣ ಸಂಧಿಗಳಲ್ಲಿ ಕಾಣಿಸಿಕೊಳ್ಳುವುದು

-ದೇಹದ ಎರಡೂ ಪಾರ್ಶ್ವಗಳಲ್ಲಿ ಲಕ್ಷಣಗಳು ಅವೇ ಸಂಧಿಗಳಲ್ಲಿ ಕಂಡುಬರುತ್ತವೆ ­

-ದಣಿವು ­

-ಕಡಿಮೆ ಪ್ರಮಾಣದಲ್ಲಿ ಜ್ವರ ­

-ಲಕ್ಷಣಗಳು ಒಮ್ಮೆ ಕಾಣಿಸಿಕೊಂಡು ಮಾಯವಾಗುವುದು, ಮತ್ತೆ ತಲೆದೋರುವುದು

ಚಿಕಿತ್ಸೆ

ಹಲ್ಲು ಸೋಂಕಿಗೆ ಈ ಕೆಳಗಿನ ಚಿಕಿತ್ಸೆಗಳನ್ನು ನಡೆಸಬಹುದು ­

-ಕೀವನ್ನು ಹೊರತೆಗೆಯುವುದು ­

-ಆ್ಯಂಟಿಬಯೋಟಿಕ್‌ ಚಿಕಿತ್ಸೆ ­

-ನೋವು ನಿವಾರಕ ಔಷಧಗಳು

-ಜ್ವರ ಅಥವಾ ತೀವ್ರ ಬಾವಿನಂತಹ ಸಮಸ್ಯೆಗಳಿಗೆ ಚಿಕಿತ್ಸೆ

-ರೂಟ್‌ ಕೆನಲ್‌ ಚಿಕಿತ್ಸೆ ­

-ದಂತ ವೈದ್ಯರಿಗೆ ಹಲ್ಲನ್ನು ಉಳಿಸಿಕೊಳ್ಳುವುದು ಸಾಧ್ಯವಾಗದೆ ಇದ್ದರೆ ಬಾಧಿತ ಹಲ್ಲನ್ನು ತೆಗೆಯುವುದು

ಪೆರಿಯೊಡೊಂಟೈಟಿಸ್‌ಗೆ ಚಿಕಿತ್ಸೆ-

-ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು

-ಬಾಯಿಯ ವೃತ್ತಿಪರ ಶುಚಿತ್ವ ಪ್ರಾವೀಣ್ಯವನ್ನು ಹೊಂದಿರುವ ದಂತವೈದ್ಯರಿಂದ ನಿಯಮಿತವಾಗಿ ಚೆಕ್‌ಅಪ್‌ ಮಾಡಿಸಿಕೊಳ್ಳುವುದು

-ವಸಡುಗಳ ಕೆಳಗಿರುವ ಹಲ್ಲುಗಳ ಆಸನ ಭಾಗದ ಸಹಿತ ಹಲ್ಲು ಬೇರುಗಳ ಮೇಲ್ಮೈಗಳನ್ನು ಆಳವಾಗಿ ಶುಚಿಗೊಳಿಸುವುದು

-ವಸಡುಗಳ ಕೆಳಭಾಗಕ್ಕೆ ಅಥವಾ ಬಾಯಿಗೆ ಔಷಧ

-ಕೆಲವು ಪ್ರಕರಣಗಳಲ್ಲಿ ತೊಂದರೆಯನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ

ಸಾರಾಂಶ

ರುಮಟಾಯಿಡ್‌ ಆರ್ಥೈಟಿಸ್‌ನಂತಹ ಸಂಧಿನೋವುಗಳ ಜತೆಗೆ ಬಾಯಿಯ ಬ್ಯಾಕ್ಟೀರಿಯಾ ಸೋಂಕುಗಳು ಸಂಬಂಧ ಹೊಂದಿರಬಹುದು. ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ರೋಗಪ್ರತಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಮೂಲಕ ರುಮಟಾಯಿಡ್‌ ಆರ್ಥೈಟಿಸ್‌ಗೆ ಕಾರಣವಾಗಬಲ್ಲುದು.

ಬ್ಯಾಕ್ಟೀರಿಯಾಗಳು ಬಾಯಿಯಿಂದ ರಕ್ತ ಪ್ರವಾಹದ ಮೂಲಕ ಸಂಚರಿಸಿ ಸಂಧಿಗಳನ್ನು ಮತ್ತು ಸಂಧಿ ಜೋಡಣೆಯ ಭಾಗವನ್ನು ಸೇರಿಕೊಳ್ಳಬಹುದು. ಇದನ್ನು ತಡೆಗಟ್ಟಲು ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು.

ಬಾಯಿಯ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ಪ್ರತೀ ದಿನ ಚೆನ್ನಾಗಿ ಹಲ್ಲುಜ್ಜುವುದು ಮತ್ತು ಫ್ಲಾಸ್‌ ಮಾಡಿ ಕೊಳ್ಳುವುದು ಅಗತ್ಯ. ಈ ಮೂಲಕ ಬಾಯಿಯ ಸೋಂಕನ್ನು ಮತ್ತು ಉರಿಯೂತವನ್ನು ಉಂಟುಮಾಡಬಹುದಾದ ಬ್ಯಾಕ್ಟೀರಿಯಾಗಳನ್ನು ನಿವಾರಿಸಿಕೊಳ್ಳಬಹುದು.

ನಿಯಮಿತವಾಗಿ ಬಾಯಿ, ಹಲ್ಲುಗಳ ತಪಾಸಣೆ ಮಾಡಿಸಿ ಕೊಳ್ಳುವುದು ಕೂಡ ಅಷ್ಟೇ ಮುಖ್ಯ. ವರ್ಷಕ್ಕೊಮ್ಮೆ ಅಥವಾ ಅಗತ್ಯಬಿದ್ದರೆ ಹೆಚ್ಚು ಬಾಯಿ ತಪಾಸಣೆ ಮಾಡಿಸಿಕೊಳ್ಳಬೇಕು.

ಸಂಧಿ ನೋವು ಅಥವಾ ಆರ್ಥೈಟಿಸ್‌ನ ಲಕ್ಷಣ ಇದ್ದರೆ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಅದಕ್ಕೆ ಕಾರಣವಾಗಿರ ಬಹುದಾದ ಆಂತರಿಕ ಕಾರಣಗಳನ್ನು ಕಂಡುಕೊಳ್ಳಬೇಕು.

ಡಾ| ಆನಂದದೀಪ್‌ ಶುಕ್ಲಾ,

ಅಸೋಸಿಯೇಟ್‌ ಪ್ರೊಫೆಸರ್‌,

ಓರಲ್‌ ಸರ್ಜರಿ ವಿಭಾಗ,

ಎಂಸಿಒಡಿಎಸ್‌, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಓರಲ್‌ ಸರ್ಜರಿ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು)

ಟಾಪ್ ನ್ಯೂಸ್

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.