ಹಲ್ಲು ಸುತ್ತುಪರೆ ರೋಗ
Team Udayavani, Feb 19, 2017, 3:45 AM IST
ಹಿಂದಿನ ವಾರದಿಂದ – ಸಾಧಾರಣವಾಗಿ ಎಲುಬು ಇದರ ಸುತ್ತ ಕಳೆದುಕೊಂಡು ಹಲ್ಲು ಉದುರಿಹೋಗುವುದು ಸಾಮಾನ್ಯವಾದರೂ, ಕೆಲವರಲ್ಲಿ, ಏಕೋ ಏನೋ, ಯಾವುದೇ ಕಾರಣವಿಲ್ಲದೇ, ಎಲುಬು ನಾಶವಾಗುವುದು ತನ್ನಿಂದ ತಾನೇ ನಿಂತು, ಇಂತಹವರು ದಂತ ವೈದ್ಯರಲ್ಲಿ ವಾಡಿಕೆಯ ದಂತ ತಪಾಸಣೆಗೆ ಬರುವಾಗ ದಂತ ವೈದ್ಯರು ಹಲ್ಲು/ವಸಡು ಪರಿಶೀಲಿಸಿದಾಗ, ಹಲ್ಲಿನ ಸುತ್ತ ಎಲುಬು ನಾಶವಾಗಿರುವುದನ್ನು ಕಾಣುವುದು. ಮತ್ತೆ ಕೆಲವರಲ್ಲಿ, ಈ ಹಲ್ಲುಗಳಿಂದ ಇತರ ಹಲ್ಲುಗಳಿಗೂ ಈ ರೋಗವು ಹರಡಿರುವುದು ಕಂಡು ಬರುವುದು. ಕೆಲವೊಮ್ಮೆ ಇಂತಹವರಲ್ಲಿ ದೀರ್ಘಕಾಲದ ಹಲ್ಲು ಸುತ್ತ ಪರೆ ರೋಗಗಳಲ್ಲಿ ಕಂಡು ಬರುವ ವಸಡು ರೋಗ ಚಿಹ್ನೆಗಳು ಕಂಡು ಬರುವುದು.
ಹಲ್ಲಿನ ಮೇಲಿನ ಪಾಚಿ/ಕಿಟ್ಟ ಕಡಿಮೆಯಿದ್ದರೂ, ಇಂತಹ ತೀವ್ರ ತರಹದ ಹಲ್ಲು ಸುತ್ತು ಪರೆ ರೋಗ ಬರುವುದಕ್ಕೆ ಕಾರಣಗಳೇನು? ಎಂದು ತಿಳಿಯುವುದು ಅಗತ್ಯ. ಬೇರೆ ಬೇರೆ ಸಂಶೋಧನೆಗಳು ಬೇರೆ ಬೇರೆ ರೀತಿಯ ಫಲಿತಾಂಶ/ಪರಿಣಾಮ/ಕಾರಣಗಳನ್ನು ತಿಳಿಸಿರುತ್ತವೆ. ಆನುವಂಶಿಕವಾಗಿ ಬಂದಿರುವ ಸಾಧ್ಯತೆಗಳು ಇರುವುದರಿಂದ, ಮನೆಯಲ್ಲಿ ಒಬ್ಬರಲ್ಲಿ ಇಂತಹ ರೋಗ ಕಂಡು ಬಂದಲ್ಲಿ, ಅಕ್ಕ ತಂಗಿಯರು, ಸೋದರರಲ್ಲಿ ಮತ್ತು ಕುಟುಂಬದ ಹತ್ತಿರದ ಸಂಬಂಧಿಗಳಲ್ಲಿ ಬರುವ ಸಾಧ್ಯತೆಯಿರುವುದರಿಂದ ಇಂತಹವರು, ಹಲ್ಲಿನ ವೈದ್ಯರನ್ನು ಸಂದರ್ಶಿಸಿ, ಚಿಕಿತ್ಸೆಗೆ ಒಳಪಟ್ಟರೆ, ಹಲ್ಲನ್ನು ಉಳಿಸಿಕೊಳ್ಳಬಹುದು. ವಸಡಿಗೆ ಬೇಗ ಚಿಕಿತ್ಸೆಯನ್ನು ತೆಗೆದುಕೊಳ್ಳಬಹುದು. ಬಿಳಿ ರಕ್ತಕಣದ ಕೆಲವು ಕಾರ್ಯಗಳಲ್ಲಿ ಹೆಚ್ಚು /ಕಡಿಮೆಯಾಗಿ, ಅವುಗಳು ಸರಿಯಾಗಿ ಕಾರ್ಯ ನಿರ್ವಹಿಸದೇ, ವಸಡಿನ ರಕ್ಷಣೆಯಾಗದೇ, ಬ್ಯಾಕ್ಟೀರಿಯಾಗಳು ವಸಡು/ಎಲುಬನ್ನು ನಾಶಮಾಡಲು ಸಹಾಯವಾಗುವುದು ಎಂದೂ ಹೇಳಿರುವರು. ಇದಲ್ಲದೇ ಇಂತಹವರಲ್ಲಿ ಒಂದು ತರಹದ ರೋಗಕಾರಕ ಬ್ಯಾಕ್ಟೀರಿಯಾಗಳು ಜಾಸ್ತಿಯಾಗಿ, ಅವು ಸ್ರವಿಸುವ ಜೀವಾಣುಗಳಿ ಎಲುಬು ಕ್ರಮೇಣ ನಾಶವಾಗುವುದನ್ನು ಕಂಡು ಹಿಡಿಯಲಾಗಿದೆ.
ಹಾಗಾದರೆ ಇದಕ್ಕೆ
ಚಿಕಿತ್ಸೆಯೇನು?
ಇಂತಹ ಹಲ್ಲು ಸುತ್ತ ಪರೆ ರೋಗದಲ್ಲಿ, ಹಲ್ಲಿನ ಮೇಲಿರುವ ಪಾಚಿ ಕಡಿಮೆಯಿದ್ದು, ವಸಡಿನ ಒಳಹೊಕ್ಕ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುವುದರಿಂದ ಕೇವಲ ಹಲ್ಲು ಸ್ವತ್ಛಗೊಳಿಸುವುದರಿಂದ, ಬ್ಯಾಕ್ಟೀರಿಯಾಗಳಿಂದ ಮುಕ್ತಿ ಸಿಗಲಾರದು. ಅಲ್ಲದೆ ರೋಗವನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗದು. ಇದಕ್ಕಾಗಿ ಇಂತಹವರಲ್ಲಿ ದಂತವೈದ್ಯರು ಒಮ್ಮೆ ಹಲ್ಲು ಸ್ವತ್ಛಗೊಳಿಸಿ ವಸಡುಹೊಕ್ಕಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು, ತಕ್ಕುದಾದ ಆ್ಯಂಟಿಬಯೋಟಿಕ್‌ಗಳನ್ನು ಒಂದು ವಾರ ತೆಗೆದುಕೊಳ್ಳಲು ಹೇಳುತ್ತಾರೆ. ಈ ಆ್ಯಂಟಿ ಬಯೋಟಿಕ್‌ಗಳು ನಮ್ಮ ರಕ್ತದ ಮೂಲಕ ವಸಡಿನ ಒಳಗೆ ಪ್ರವೇಶಿಸಿ, ರೋಗಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತವೆ. ಇದಾದ ಅನಂತರ ವಸಡು ನಾಶದ ಪ್ರಮಾಣಕ್ಕೆ ಸರಿಯಾಗಿ, ವಸಡಿನ ಶಸ್ತ್ರ ಚಿಕಿತ್ಸೆಯನ್ನು ಮಾಡುತ್ತಾರೆ. ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎಲುಬನ್ನು ಪುನಃ ಸುಸ್ಥಿತಿಗೆ ತರಲು, ಎಲುಬು/ಮೂಳೆ ನಾಟಿಯನ್ನು (ಆಟnಛಿ ಜrಚfಠಿ) ನ್ನು ಅಲ್ಲದೇ ಎಲುಬು ರಚನೆ ಸುಲಭವಾಗಿ ಆಗಲು ಸಹಕರಿಸುವ ಬೇರೆ ಬೇರೆ, ನವ ನವೀನ ವಿಧಾನವನ್ನು ಉಪಯೋಗಿಸುವರು ಕೂಡ. ಒಂದೊಮ್ಮೆ ಹಲ್ಲು ತುಂಬಾ ಅಲುಗಾಡುತ್ತಿದ್ದಲ್ಲಿ ಹಲ್ಲನ್ನು ತೆಗೆಯಲೇ ಬೇಕಾಗುವುದು ಮತ್ತು ಆ ಹಲ್ಲು ತೆಗೆದ ಜಾಗದಲ್ಲಿ ಸಿಗುವ ಎಲುಬಿನ ಪ್ರಮಾಣಕ್ಕೆ ಸರಿಯಾಗಿ, ಇಂಪ್ಲಾಂಟನ್ನು ಮೂಳೆಯೊಳಗೆ ಶಸ್ತ್ರಚಿಕಿತ್ಸೆಯ ಮೂಲಕ ಇರಿಸಿ ಅದರ ಮೇಲೆ ಕೃತಕ ಹಲ್ಲನ್ನು ಇಡುವರು.
ಆದರೆ, ಒಮ್ಮೆ ಶಸ್ತ್ರ ಚಿಕಿತ್ಸೆಯಾದ ಅನಂತರ ಎಲ್ಲವೂ ಸರಿಯಾಯಿತು. ಇನ್ನೇನೂ ತೊಂದರೆಯಿಲ್ಲ ಎಂದು ತಿಳಿಯಬಾರದು, ಅವಾಗಾವಾಗ ಬಂದು (ಸಾಧಾರಣ ಮೂರು ತಿಂಗಳಿಗೊಮ್ಮೆ) ದಂತ ವೈದ್ಯರನ್ನು ಭೇಟಿಯಾಗಿ ದಂತ ವೈದ್ಯರ ಸೂಚನೆಯಂತೆ ಹಲ್ಲು ಸ್ವತ್ಛಗೊಳಿಸಿಕೊಳ್ಳುವುದು, ಮತ್ತು ಅವರು ಸೂಚಿಸಿದ ದಂತ /ವಸಡು ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅಗತ್ಯ. ಇಂತಹವರಲ್ಲಿ ದೇಹದ ಪ್ರತಿರಕ್ಷಣಾ ಕವಚಗಳಾದ, ಬಿಳಿರಕ್ತಕಣಗಳ ಕಾರ್ಯವೈಖರಿ ಸರಿಯಾಗಿ ಇಲ್ಲದಿರುವ ಸಾಧ್ಯತೆಯಿರುವುದರಿಂದ ಮತ್ತೆ ಮತ್ತೆ ರೋಗಕಾರಕ ಬ್ಯಾಕ್ಟೀರಿಯಾಗಳ ಉಲ್ಬಣವಾಗುವ ಸಾಧ್ಯತೆಯನ್ನು ತಡೆದು ಹಾಕಲಾಗುವುದು, ಅದಕ್ಕಾಗಿ ದಂತ ವೈದ್ಯರ ಮೂರು ತಿಂಗಳಿಗೊಮ್ಮೆ ಭೇಟಿ ಅತ್ಯಗತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.