ಸಾಂಪ್ರದಾಯಿಕ ಆಹಾರ ಪದ್ಧತಿ ಪಾಲಿಸಿ


Team Udayavani, Apr 25, 2021, 5:29 PM IST

ಸಾಂಪ್ರದಾಯಿಕ ಆಹಾರ ಪದ್ಧತಿ ಪಾಲಿಸಿ

ಭಾರತೀಯ ಸಾಂಪ್ರದಾಯಿಕ ಆಹಾರ ಪದಾರ್ಥಗಳು, ಅವುಗಳ ಚಿಕಿತ್ಸಾ ಗುಣಗಳು, ತಯಾರಿಸುವ ವಿಧಾನ, ಆಹಾರ ಸಂಸ್ಕರಣೆ ಮತ್ತು ಶೇಖರಿಸುವ ವಿಧಾನ ತಲೆಮಾರುಗಳಿಂದ ಬಂದ ಬಳುವಳಿಯಾಗಿದೆ. ಈ ಕ್ರಿಯಾತ್ಮಕ ಆಹಾರ ವ್ಯವಸ್ಥೆಯು ಅನೇಕ ರೀತಿಯ ವ್ಯಾಧಿಗಳನ್ನು ಗುಣಪಡಿಸುವ ರಾಸಾಯನಿಕಗಳು, ಆಂಟಿಓಕ್ಸಿಡೆಂಟ್‌ಗಳು, ನಾರು ಪದಾರ್ಥಗಳು ಹಾಗೂ ಕೆಲವು ಉಪಯುಕ್ತ ಸೂಕ್ಷ್ಮಾಣುಜೀವಿಗಳಂತಹ (ಪ್ರೊಬಯೋಟಿಕ್‌) ಆಹಾರ ಘಟಕಗಳನ್ನು ಒಳಗೊಂಡಿರುತ್ತದೆ. ಇಂತಹ ಆಹಾರ ಮಾನವನ ದೇಹದಲ್ಲಿ ಹಲವಾರು ಜೈವಿಕ ಕಾರ್ಯಗಳನ್ನು ನಿರ್ವಹಿಸಬಲ್ಲುದು.

ಜೀವನದ ವಿವಿಧ ಹಂತಗಳಲ್ಲಿ ಆಗುವ ಬೆಳವಣಿಗೆ ಮತ್ತು ಬದಲಾವಣೆಗಳಿಗೆ ಈ ಆಹಾರ ಪದ್ಧತಿ ತುಂಬಾ ಅಗತ್ಯವಾಗಿದೆ. ಪ್ರಮುಖವಾಗಿ ಆಹಾರದ ಔಷಧೀಯ ಗುಣಗಳು ದೇಹದ ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಬಹಳ ಉಪಯುಕ್ತವಾಗಿವೆ. ಇದಕ್ಕಾಗಿಯೇ ನಮ್ಮ ಪೂರ್ವಜರು ಬೆಳವಣಿಗೆಯ ವಿವಿಧ ಹಂತಗಳಿಗುಣವಾಗಿ ಆರೋಗ್ಯಕರ ಮತ್ತು ಪೌಷ್ಠಿಕಾಂಶಗಳನ್ನು ಒನ್ನೊಳಗೊಂಡ ವಿಭಿನ್ನ ಆಹಾರ ಪದಾರ್ಥಗಳನ್ನು ತಯಾರಿಸಿ ಸೇವಿಸುತ್ತಿದ್ದರು. ಉದಾಹರಣೆಗೆ, ಔಷಧೀಯ ಗುಣಗಳಿರುವ ಸಸ್ಯಗಳಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಮಾಡುವ ತಿಂಡಿ ತಿನಿಸುಗಳು, ಖಾದ್ಯ, ರಸಾಯನ, ಪಲ್ಯ, ಅಂಬಲಿ, ಕಷಾಯ, ಪಾನೀಯಗಳು ಇತ್ಯಾದಿ. ಪುರಾತನ ಕಾಲದಿಂದಲೂ ಭಾರತದಲ್ಲಿ ವಾಸಿಸುತ್ತಿದ್ದ ಪ್ರತಿಯೊಂದು ಸಮುದಾಯಕ್ಕೂ ಈ ಆಹಾರ ವ್ಯವಸ್ಥೆಯ ಮೇಲೆ ಸ್ಪಷ್ಟ ಮತ್ತು ಪ್ರತ್ಯೇಕ ನಂಬಿಕೆಯಿತ್ತು. ಆದರೆ ಈಗಿನ ಪೀಳಿಗೆ ಆಧುನಿಕತೆ ಮತ್ತು ಪಾಶ್ಚಾತ್ಯ ಜೀವನ ಶೈಲಿಯ ಪ್ರಭಾವದಿಂದಾಗಿ ನಾಲಗೆಯ ರುಚಿಗಷ್ಟೇ ಬೆಲೆಕೊಟ್ಟು, ಸಾಂಪ್ರದಾಯಿಕ ಆಹಾರದ ಉಪಯುಕ್ತತೆಯನ್ನು ಅರಿಯದೆ ಪಾಶ್ಚಾತ್ಯ ಶೈಲಿಯ ಆಹಾರವನ್ನು ತಿಂದು, ಅದೆಷ್ಟೋ ರೀತಿಯ ಕಾಯಿಲೆಗಳನ್ನು ಆಹ್ವಾನಿಸುತ್ತಿದ್ದೇವೆ.

ಸಾಂಪ್ರದಾಯಿಕ ಆಹಾರ: ಕಾರ್ಯನಿರ್ವಹಣೆ ಹೇಗೆ? :

ಈ ಆಹಾರ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ನೋಡೋಣ.

ಮಾನವನ ದೇಹವು ಹಲವಾರು ರೀತಿಯ ಸೂಕ್ಷ್ಮಾಣುಜೀವಿಗಳಿಂದ ಆವರಿತವಾಗಿದೆ. ಅಲ್ಲದೆ ದೇಹದ ವಿವಿಧ ಭಾಗಗಳಾದ ಚರ್ಮ, ಶ್ವಾಸಕೋಶ, ಜೀರ್ಣಾಂಗವ್ಯೂಹ, ಮೂತ್ರಕೋಶ, ಯೋನಿ ಹಾಗೂ ಹಾಲುಣಿಸುವ ಮೊಲೆಯ ಗ್ರಂಥಿಗಳಲ್ಲಿ ಈ ಸೂಕ್ಷ್ಮಾಣುಜೀವಿಗಳು ಇರುತ್ತವೆ. ಮಗುವು ತಾಯಿಯ ಗರ್ಭದಿಂದ ಜನಿಸಿದ ಕೂಡಲೇ ಬೇರೆ ಬೇರೆ ರೀತಿಯ ಸೂಕ್ಷ್ಮಾಣುಜೀವಿಗಳೊಂದಿಗೆ ಸಹಜೀವನ ಪ್ರಾರಂಭಿಸುವುದು ಸಾಮಾನ್ಯ. ದೇಹದಲ್ಲಿರುವ ಈ ಸೂಕ್ಷ್ಮಾಣುಜೀವಿಗಳ ಸಮೂಹವು ಮನುಷ್ಯನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಬಹುಮುಖ್ಯವಾಗಿ ಅನೇಕ ವಿಧದ ಸೂಕ್ಷ್ಮಾಣುಜೀವಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ದೊಡ್ಡಕರುಳಿನಲ್ಲಿ ಕಾಣಸಿಗುತ್ತವೆ. ಇವುಗಳ ಸಂಖ್ಯೆಯು ಸಾಮಾನ್ಯವಾಗಿ ಸುಮಾರು 1013ರಿಂದ 1014ರಷ್ಟು ಇರುತ್ತದೆ. ಸೂಕ್ಷ್ಮಾಣುಜೀವಿಗಳ ವಿಧಗಳು ಮತ್ತು ಸಂಖ್ಯೆಯು ಮನುಷ್ಯನ ಪ್ರಾಯ, ಪೋಷಣೆ, ಆಹಾರ ಪದ್ಧತಿ, ಜೀವನಶೈಲಿ, ಹಾರ್ಮೋನುಗಳ ಬದಲಾವಣೆ, ಆನುವಂಶಿಕ ವಂಶವಾಹಿಗಳು, ಜನ್ಮಜಾತ ಕಾಯಿಲೆಗಳು ಇತ್ಯಾದಿ ಅಂಶಗಳ ಮೇಲೆ ಅವಲಂಬಿತವಾಗಿರುತ್ತವೆ. ಈ ಸೂಕ್ಷ್ಮಾಣುಜೀವಿಗಳ ವಿಧಗಳಲ್ಲಿ ಅಥವಾ ಸಂಖ್ಯೆಗಳಲ್ಲಿ ಏನೇ ವ್ಯತ್ಯಾಸ ಕಂಡುಬಂದರೂ ಅದು ಮುಂಬರುವ ರೋಗಗಳಿಗೆ ಕಾರಣವಾಗಬಹುದು.

ನಮ್ಮ ಸಹಜೀವಿಗಳಾದ ಉಪಯೋಗಿ ಸೂಕ್ಷ್ಮಾಣುಜೀವಿಗಳು ಮತ್ತು ನಮ್ಮ ನಡುವಣ ಪರಸ್ಪರ ಪ್ರಯೋಜನಕಾರಿ ಸಂಬಂಧ ಹೃದಯದ ಸಮಸ್ಯೆ, ಮಾನಸಿಕ ಸಮಸ್ಯೆಗಳು, ಗರ್ಭ ಕೋಶದ ಸಮಸ್ಯೆ, ಕ್ಯಾನ್ಸರ್‌, ಸಾಂಕ್ರಾಮಿಕ ರೋಗಗಳು, ರೋಗನಿರೋಧಕ ಶಕ್ತಿಯ ಕೊರತೆಯಿಂದ ಬರುವ ಅನಾರೋಗ್ಯಗಳು, ಕರುಳು, ಮೂತ್ರಜನಕಾಂಗ ಅಥವಾ ದೇಹದ ಯಾವುದೇ ಭಾಗದಲ್ಲಿ ಉಲ್ಬಣಿಸುವ ಯಾವುದೇ ಕಾಯಿಲೆಗಳು ಇತ್ಯಾದಿ ರೋಗಗಳನ್ನು ಬಾರದಂತೆ ತಡೆಯುವಲ್ಲಿ ತುಂಬಾ ಅನುಕೂಲಕರವಾಗಿವೆ. ಸೂಕ್ಷ್ಮಾಣುಜೀವಿಗಳಲ್ಲಿ ಮುಖ್ಯವಾಗಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಜೀರ್ಣವಾಗದ ನಾರಿನಂಶ ಇರುವ ಆಹಾರ ಪದಾರ್ಥಗಳ ಚಯಾಪಚಯ ಕ್ರಿಯೆಯಲ್ಲಿ ಭಾಗವಹಿಸಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಪೂರೈಸುತ್ತವೆ. ಅಲ್ಲದೆ, ಯಾವುದೇ ರೋಗಕಾರಕ ಬ್ಯಾಕ್ಟೀರಿಯಾಗಳ ವಿರುದ್ಧ ದೇಹವನ್ನು ರಕ್ಷಿಸಲು ಕರುಳಿನ ರಚನೆಯನ್ನು ಭದ್ರಗೊಳಿಸುತ್ತವೆ. ಉದಾಹರಣೆಗೆ, ಬ್ಯಾಕ್ಟೀರಾಯ್ಡ್ಸ್ ಎಂಬ ಜಾತಿಯ ಬ್ಯಾಕ್ಟೀರಿಯಾಗಳು ಜಠರ ಮತ್ತು ಸಣ್ಣ ಕರುಳಿನಲ್ಲಿ ಜೀರ್ಣವಾಗದೇ ಉಳಿಯುವ ಆಹಾರವಾದ ತರಕಾರಿಗಳ ನಾರು ಪದಾರ್ಥ (ಕ್ಸೆ„ಲೋಗುÉಕನ್ಸ್‌)ಗಳನ್ನು ಜೀರ್ಣಿಸಲು ಸಹಾಯ ಮಾಡುವುದಲ್ಲದೆ ದೇಹದಲ್ಲಿ ಶಕ್ತಿಯ ಸಂತುಲತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.  ಇವಲ್ಲದೆ ಲ್ಯಾಕ್ಟೋಬ್ಯಾಸಿಲಸ್‌ ಮತ್ತು ಬೈಫಿಡೊ ಬ್ಯಾಕ್ಟೀರಿಯಾಗಳು ಕೂಡ ಸುಲಭವಾಗಿ ಜೀರ್ಣವಾಗದ ಆಹಾರವನ್ನು ಜೀರ್ಣವಾಗಿಸಲು ಸಹಾಯ ಮಾಡುತ್ತವೆ. ಚಯಾಪಚಯ ಕ್ರಿಯೆ ಮಾತ್ರವಲ್ಲದೆ, ಈ ಬ್ಯಾಕ್ಟೀರಿಯಾಗಳು ದೇಹದಲ್ಲಿ ಮೇದಸ್ಸು (ಲಿಪಿಡ್‌) ಮತ್ತು ಪ್ರೋಟೀನ್‌ ಇವುಗಳ ಸಮತೋಲನವನ್ನು ಕಾಪಾಡುತ್ತವೆ. ಜತೆಗೆ, ದೇಹಕ್ಕೆ ಬೇಕಾದ ಅಗತ್ಯ ವಿಟಮಿನ್‌ ಪೋಷಕಾಂಶಗಳನ್ನು ಮತ್ತು ಕರುಳಿನ ಜೀವಕೋಶಗಳಿಗೆ ಶಕ್ತಿಯನ್ನು ಪೂರೈಸುವ ಶಾರ್ಟ್‌ ಚೈನ್‌ ಫ್ಯಾಟಿ ಆಸಿಡ್‌ಳನ್ನು ಉತ್ಪಾದಿಸುತ್ತವೆ. ಒಟ್ಟಿನಲ್ಲಿ ಸೂಕ್ಷ್ಮಾಣುಜೀವಿಗಳು ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಕರುಳಿನಲ್ಲಿರುವ ಎಲ್ಲ ಸೂಕ್ಷ್ಮಾಣು ಜೀವಿಗಳೂ ಮಾನವನ ಆರೋಗ್ಯ ಕಾಪಾಡುವಲ್ಲಿ ಪ್ರಯೋಜನಕಾರಿಯಾಗಿರುವುದಿಲ್ಲ. ಉಪಯೋಗಿ ಸೂಕ್ಷ್ಮಾಣುಜೀವಿಗಳ ಸಂಖ್ಯೆ ಹಾಗೂ ವಿಧಗಳಲ್ಲಿ ಏರುಪೇರಾದರೆ ರೋಗಕಾರಿ ಸೂಕ್ಷ್ಮಾಣುಜೀವಿಗಳು ಕರುಳಿನ ಲೋಳೆಪೊರೆಯ ಮೇಲಿನ ಉಪ ಯೋಗಿ ಸೂಕ್ಷ್ಮಾಣುಜೀವಿಗಳನ್ನು ನಾಶ ಮಾಡಿ ಕರುಳಿನಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ.

 (ಮುಂದಿನ ವಾರಕ್ಕೆ)

 

ಡಾ| ಕುಸುಮಾಕ್ಷಿ   ನಾಯಕ್‌

ಅಸೋಸಿಯೇಟ್‌ ಪ್ರೊಫೆಸರ್‌

ರೇಷ್ಮಾ ಡಿ’ಸೋಜಾ

ಅಸಿಸ್ಟೆಂಟ್‌ ಪ್ರೊಫೆಸರ್‌ (ಸೀನಿಯರ್‌ ಸ್ಕೇಲ್‌)

ವೈದ್ಯಕೀಯ ಪ್ರಯೋಗಾಲಯ ವಿಭಾಗ

ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ

Travis Head made a controversial statement about BCCI

INDvAUS: ಬಿಸಿಸಿಐ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ರಾ ಟ್ರಾವಿಸ್‌ ಹೆಡ್? Video


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Health: ಶೀಘ್ರ ಕ್ಯಾನ್ಸರ್‌ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?

3(1

Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ

1

Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.