ಮೂತ್ರಪಿಂಡಗಳ ವೈದ್ಯಕೀಯ ಪರೀಕ್ಷಾ ವಿಧಗಳು ಮತ್ತು ವಿಧಾನಗಳು
Team Udayavani, May 16, 2021, 2:58 PM IST
ಮೂತ್ರಪಿಂಡ ಕಾಯಿಲೆಯ ವಿಧಗಳು
ವೈದ್ಯಕೀಯ ವಿಜ್ಞಾನದ ಸಂಶೋಧನ ಜಗತ್ತು ಕಂಡುಕೊಂಡಂತೆ ಹೆಸರಿಸಲು ನೂರಾರು ಮೂತ್ರಪಿಂಡ ಕಾಯಿಲೆಗಳಿವೆಯಾದರೂ, ಸಾಮಾನ್ಯವಾಗಿ ಅವುಗಳನ್ನು ವಿವರಿಸುವಾಗ ಈ ಕೆಳಕಂಡಂತೆ ಕೆಲವು ಪ್ರಮುಖ ಗುಂಪುಗಳಾಗಿ ವಿಂಗಡಿಸಬಹುದು.
1.ಹಠಾತ್/ಕ್ಷಣಿಕ ಮೂತ್ರಪಿಂಡ ಹಾನಿ
2.ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆ
3.ಗ್ಲೋಮರುಲರ್‌ಕಾಯಿಲೆಗಳು
4.ಅನುವಂಶಿಕ ಕಾಯಿಲೆಗಳು
5.ಮೂತ್ರಪಿಂಡದ ಕಲ್ಲು ಕಾಯಿಲೆ
6.ಜನ್ಮಜಾತ ಕಾಯಿಲೆಗಳು
ಇವುಗಳ ಪೈಕಿ ಹಠಾತ್/ಕ್ಷಣಿಕ ಮೂತ್ರಪಿಂಡ ಹಾನಿ ಮತ್ತು ದೀರ್ಘಕಾಲೀನ ಮೂತ್ರಪಿಂಡ ಕಾಯಿಲೆಗಳು ಆಸ್ಪತ್ರೆಯ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುವ ಸಾಮಾನ್ಯ ಗುಂಪುಗಳಾಗಿವೆ.
1.ಹಠಾತ್ /ತಾತ್ಕಾಲಿಕ /ಕ್ಷಣಿಕ ಹಾನಿ (ಅಓಐ)
ಈ ರೀತಿಯ ತೊಂದರೆ ಹಠಾತ್ತನೆ, ತೀವ್ರಗತಿಯಲ್ಲಿ ಸಂಭವಿಸಿ ಒಮ್ಮಿಂದೊಮ್ಮೆಲೆ ಮೂತ್ರಪಿಂಡಗಳ ಕಾರ್ಯವೈಖರಿಯಲ್ಲಿ ಅಸಹಜತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆಯಿಂದ ಮೂತ್ರಪಿಂಡಗಳು ಸಹಜತೆಗೆ ಮರಳಿ ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
2.ದೀರ್ಘಕಾಲಿಕ ಮೂತ್ರಪಿಂಡ ಕಾಯಿಲೆ
ಈ ರೀತಿಯಾದ ಮೂತ್ರಪಿಂಡದ ಕಾಯಿಲೆಯನ್ನು “ದೀರ್ಘಕಾಲೀನ’ ಎಂದೂ ಕರೆಯಲಾಗುತ್ತದೆ. ಏಕೆಂದರೆ ಮೊದಲ ಎರಡು ಹಂತಗಳಲ್ಲೇ ಕಾಯಿಲೆಯ ತಡೆಗೆ ಸೂಕ್ತ ರೀತಿಯ ಚಿಕಿತ್ಸೆ ನೀಡದಿದ್ದಲ್ಲಿ ಕಾಲಾನಂತರದಲ್ಲಿ ಮೂತ್ರಪಿಂಡದ ಕುಂಠಿತ ಕಾರ್ಯವು ನಿಧಾನಗತಿಯಲ್ಲಿ ಕ್ರಮೇಣವಾಗಿ ಮುಂದುವರೆದು ಕೊನೆಯ ಹಂತಕ್ಕೆ ತಲುಪುತ್ತದೆ. ಈ ಹಂತದಲ್ಲಿ ಜೀವನ ಮುಂದುವರಿಸಲು ಡಯಾಲಿಸಿಸ್ (ಕೃತಕ ರೀತಿಯಿಂದ ರಕ್ತ ಶುದ್ಧಿಗೊಳಿಸುವುದು) ಅಥವಾ ಮೂತ್ರಪಿಂಡ ಕಸಿ ಚಿಕಿತ್ಸೆಯ ಅಗತ್ಯವಿರುತ್ತದೆ.
ಮೂತ್ರಪಿಂಡಗಳ ವೈದ್ಯಕೀಯ ತಪಾಸಣೆ ಯಾಕೆ?
ಮೂತ್ರಪಿಂಡ ಕಾಯಿಲೆಯ ಎರಡು ಅತೀ ಅಪಾಯಕಾರಿ ಹಾಗೂ ಕಳವಳದ ಅಂಶಗಳೆಂದರೆ, ಪ್ರಾರಂಭಿಕ ಹಂತದಲ್ಲಿ ಇದು ಯಾವುದೇ ರೋಗಲಕ್ಷಣಗಳ ಸುಳಿವೂ ತೋರಿಸದೆ ಗೌಪ್ಯವಾಗಿದ್ದು, ನಿಧಾನವಾಗಿ ಕೊನೆಯ ಹಂತವನ್ನು ತಲುಪಿ ಶಾಶ್ವತ ಹಾನಿ ಗೊಳಗಾಗುವುದು ಮತ್ತು ಮರಳಿ ಸಹಜತೆಗೆ ಬಾರದಿರುವುದು.
ಕಾಯಿಲೆಯ 3ನೇ ಹಂತ ತಲಪುವವರೆಗೆ ಹೆಚ್ಚಿನ ಎಲ್ಲ ರೋಗಿಗಳು ರೋಗಲಕ್ಷಣರಹಿತ ರಾಗಿರುತ್ತಾರೆ. ಈ ಸ್ಥಿತಿಯು ಮುಂದುವರಿದಂತೆ ಅಂಗದ ಕಾರ್ಯವು ತೀವ್ರವಾಗಿ ದುರ್ಬಲಗೊಂಡು ಉತ್ಪತ್ತಿಯಾದ ಅಪಾಯಕಾರಿ ತ್ಯಾಜ್ಯ ಮತ್ತು ದ್ರವವು ಮೂತ್ರರೂಪದಲ್ಲಿ ಹೊರಹಾಕಲ್ಪಡದೆ ದೇಹದಲ್ಲೇ ಉಳಿದು ವೇಗವಾಗಿ ಆತಂಕಕಾರಿ ಮಟ್ಟದಲ್ಲಿ ಶೇಖರಣೆಗೊಳ್ಳುತ್ತವೆ.
ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯನ್ನು ಗುಣಪಡಿಸುವ ಯಾವುದೇ ಚಿಕಿತ್ಸೆ ಇಲ್ಲವಾದರೂ ಚಿಕಿತ್ಸೆಯು ರೋಗದ ಪ್ರಗತಿಯನ್ನು ನಿಲ್ಲಿಸುವ ಅಥವಾ ನಿಧಾನಗೊಳಿಸುವ ಅಥವಾ ರೋಗಲಕ್ಷಣಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದನ್ನು ಸಾಮಾನ್ಯವಾಗಿ ಪ್ರಾರಂಭಿಕ ಹಂತದಲ್ಲೇ ಕಾಯಿಲೆಯ ಸುಳಿವು ಹಾಗೂ ಮೂಲ ಕಾರಣಗಳನ್ನು ತಿಳಿದು ಸೂಕ್ತ ಚಿಕಿತ್ಸೆಯಿಂದ (ಆಹಾರ ಪಥ್ಯಕ್ರಮ/ಜೀವನಶೈಲಿಯಲ್ಲಿ ಮಾರ್ಪಡು/ ಔಷಧಗಳ ಸೇವನೆ) ನಿಯಂತ್ರಿಸುವ ಮೂಲಕ ಮಾಡಲಾಗುತ್ತದೆ. ಈ ಕಾರಣಗಳಿಂದಾಗಿಯೇ ಮೂತ್ರಪಿಂಡ ತಜ್ಞರು ನಿಯಮಿತ ಮತ್ತು ಸಂದಭೋìಚಿತ ತಪಾಸಣೆಯನ್ನು ಶಿಫಾರಸು ಮಾಡುತ್ತಾರೆ.
ಮೂತ್ರಪಿಂಡಗಳ ತಪಾಸಣೆ ಯಾವಾಗ ಮಾಡಿಕೊಳ್ಳಬೇಕು ಎಂದು ವೈದ್ಯಕೀಯ ಶಿಫಾರಸು ಹೇಳುತ್ತದೆ? ಆರೋಗ್ಯವಂತರೂ ಸಹ ನಿಯಮಿತವಾಗಿ ಮಾಡಿಸಿಕೊಳ್ಳಬೇಕೇ?
ಈ ಶಿಫಾರಸನ್ನು ಮೂರು ವಿಭಾಗದ ಜನರಲ್ಲಿ ವಿವರಿಸಬಹುದು.
- ಆರೋಗ್ಯವಂತರು
ಸಾಮಾನ್ಯವಾಗಿ ಎಲ್ಲರೂ ತಿಳಿದಿರುವಂತೆ ನಿಯಮಿತ ಅರೋಗ್ಯ ತಪಾಸಣೆ ತುಂಬಾ ಮುಖ್ಯವಾದ ವಿಷಯ. ಇದನ್ನು ಹೆಚ್ಚಾಗಿ 30ರ ಮೇಲಿನ ವಯಸ್ಕರಿಗೆ ಶಿಫಾರಸು ಮಾಡಲಾಗುತ್ತದೆ. ಈ ತಪಾಸಣೆಯಲ್ಲಿ ಮೂತ್ರಪಿಂಡಗಳ ಪರೀಕ್ಷೆಯೂ ಕೂಡ ಮಾಡಲಾಗುತ್ತದೆ.
ಪ್ರಯೋಜನ: ಮೂತ್ರಪಿಂಡಗಳು ಸುಸ್ಥಿತಿಯಲ್ಲಿವೆ ಎಂದು ದೃಢಪಡಿಸಲು.
- ಕಾಯಿಲೆ ಬರುವುದಕ್ಕೆ ಅವಕಾಶ ತರುವಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವವರು ನಿಯಮಿತವಾಗಿ ಹಾಗೂ ಸಮಯೋಚಿತ /ಸಂದರ್ಭಕ್ಕೆ ಅನುಗುಣವಾಗಿ ತಪಾಸಣೆಗೆ ಒಳಗಾಗಬೇಕು.
ಪ್ರಯೋಜನ: ಅಪಾಯಕಾರಿ ಅಂಶಗಳು ಯಾವುವು? ನಿಯಂತ್ರಣ ಹೇಗೆ ಎಂದು ವೈದ್ಯರ ಸಹಾಯದಿಂದ ಅರಿತು ಚಿಕಿತ್ಸೆಯ ಸಲಹೆ ಸೂಚನೆಯನ್ನು ಪಾಲಿಸಿ ಮೂತ್ರಪಿಂಡಗಳನ್ನು ಸಂರಕ್ಷಿಸುವುದು.
- ಕಾಯಿಲೆಯ ಲಕ್ಷಣ ಹೊಂದಿರುವವರು ಅಥವಾ ಕಾಯಿಲೆಯ ಮೊದಲ ಹಂತದಲ್ಲಿರುವವರು ವೈದ್ಯರ ಸಲಹೆಯಂತೆ ತಪಾಸಣೆಗೆ ಒಳಗಾಗಬೇಕು.
ಪ್ರಯೋಜನ: ಕಾಯಿಲೆಯು ಉಲ್ಬಣಗೊಂಡು ಅಂತಿಮ ಹಂತಕ್ಕೆ ತಲುಪದಂತೆ ನೋಡಿಕೊಳ್ಳುವುದು
ಮೂತ್ರಪಿಂಡಗಳಿಗೆ ಸಂಬಂಧಿಸಿದಂತೆ ಲಭ್ಯವಿರುವ ಹಾಗೂ ಸೂಚಿಸಲ್ಪಡುವ ವೈದ್ಯಕೀಯ ತಪಾಸಣೆ, ಪ್ರಯೋಗಾಲಯ ಹಾಗೂ ರೋಗನಿರ್ಣಯ ಪರೀಕ್ಷೆಗಳು ಯಾವುವು?
ಮೂತ್ರಪಿಂಡಗಳ ಆರೋಗ್ಯ ತಪಾಸಣೆಯಲ್ಲಿ ಸಾಮಾನ್ಯವಾಗಿ ಶಿಫಾರಸು ಮಾಡಲಾಗುವ ಸೂಚಿಸಲಾಗುವ/ ಬಳಸಲ್ಪಡುವ ದೈಹಿಕ, ಪ್ರಯೋಗಾಲಯ ಹಾಗೂ ರೋಗನಿರ್ಣಯ ಪರೀಕ್ಷೆಗಳೆಂದರೆ
-ಕಾಯಿಲೆ ಹಿನ್ನೆಲೆ
– ದೈಹಿಕ ಪರೀಕ್ಷೆ
– ಮೂತ್ರ ಪರೀಕ್ಷೆ
– ರಕ್ತ ಪರೀಕ್ಷೆ
– ಮೂತ್ರಪಿಂಡ ಚಿತ್ರಣ ಪರೀಕ್ಷೆ
– ಮೂತ್ರಪಿಂಡದ ಜೀವಕಣವನ್ನು ದೇಹದಿಂದ ಬೇರ್ಪಡಿಸಿ ಪರೀಕ್ಷೆ
ಮೇಲಿನ ಮೊದಲ ನಾಲ್ಕು ವೈದ್ಯಕೀಯ ಪರೀಕ್ಷೆಗಳು ಕಾಯಿಲೆಯ ಇರುವಿಕೆ ಅಥವಾ ಇಲ್ಲದಿರುವಿಕೆಯನ್ನು ಖಾತ್ರಿಗೊಳಿಸಲು, ಕಾಯಿಲೆ ಇರುವುದಾದಲ್ಲಿ ಮೂತ್ರಪಿಂಡಗಳ ಕಾರ್ಯಕ್ಷಮತೆಯ ಬಗ್ಗೆ ತಿಳಿಸಿ ಕಾಯಿಲೆ ಯಾವ ಹಂತದಲ್ಲಿದೆ ಎಂದು ತಿಳಿಸುತ್ತದೆ
ಕೊನೆಯ ಎರಡು ಪರೀಕ್ಷೆಗಳನ್ನು ಮೂತ್ರಪಿಂಡ ತಜ್ಞರು ಇನ್ನೂ ಹೆಚ್ಚಿನ ವಿವರಗಳ ಅಗತ್ಯವಿದ್ದಲ್ಲಿ ಮಾತ್ರ ನಡೆಸುವ ನಿರ್ಧಾರವನ್ನು ಮಾಡುತ್ತಾರೆ. ಈ ಪರೀಕ್ಷೆಗಳು ಕಾಯಿಲೆಯನ್ನು ದೃಢಪಡಿಸುವಲ್ಲಿ, ಕಾಯಿಲೆಯು ಯಾವ ಹಂತದಲ್ಲಿದೆ ಮತ್ತು ಮೂತ್ರಪಿಂಡಗಳು ಎಷ್ಟರಮಟ್ಟಿಗೆ ಘಾಸಿಗೊಂಡಿವೆ ಎಂಬುವುದನ್ನು ತಿಳಿಯಲು ಉಪಯುಕ್ತವಾಗಿವೆ.
ಕಾಯಿಲೆಯ ಹಿನ್ನೆಲೆಯ ವಿವರಗಳಿಂದ ಪ್ರಯೋಜನಗಳೇನು?
ಕಾಯಿಲೆಯ ಹಿನ್ನೆಲೆಯ ವಿವರಗಳಿಂದ ಕಾಯಿಲೆಯ ಮೂಲ ಕಾರಣಗಳನ್ನು (ಮಧುಮೇಹ, ರಕ್ತದೊತ್ತಡ, ಸೋಂಕು, ಮೂತ್ರಪಿಂಡದಲ್ಲಿ ಕಲ್ಲು, ಔಷಧ ಸೇವನೆ, ಚಿಕಿತ್ಸೆ ಇತ್ಯಾದಿ) ಗುರುತಿಸಲು ಹಾಗೂ ಮುಂದಿನ ಚಿಕಿತ್ಸಾ ಕ್ರಮಗಳ ಬಗ್ಗೆ ನಿರ್ಧರಿಸಲು ಸಹಾಯವಾಗುತ್ತದೆ.
ಕೆಲವರು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುವ ಅನ್ಯ ರೀತಿಯ ಕಾಯಿಲೆ/ ಮೂಲವನ್ನು ಬಾಲ್ಯದಲ್ಲಿಯೇ ಹೊಂದಿರಬಹುದು. ಹಿನ್ನೆಲೆಯ ವಿವರಗಳಿಂದ ಪ್ರಾರಂಭದ ಹಂತದಲ್ಲೇ ಅವುಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆಯಿಂದ ಕಾಯಿಲೆಯ ಗತಿಯನ್ನು ನಿಧಾನಿಸಿ ಅಪಾಯದ ಹಂತವನ್ನು ತಲುಪದಂತೆ ತಡೆಯಬಹುದು.
ಕುಟುಂಬದ ಸದಸ್ಯರ ಕಾಯಿಲೆಯ ಹಿನ್ನೆಲೆ ವಿವರಗಳಿಂದ ಪ್ರಯೋಜನಗಳೇನು?
ಮೂತ್ರಪಿಂಡ ವೈಫಲ್ಯಕ್ಕೆ ಕೆಲವೊಮ್ಮೆ ವಂಶವಾಹಿನಿ ತೊಂದರೆಗಳು ಅಥವಾ ಕಾಯಿಲೆಗಳೂ ಕಾರಣಗಳಾಗಬಹುದು. ಹೆಚ್ಚಿನ ಅಪಾಯದಲ್ಲಿರುವ ವ್ಯಕ್ತಿಗಳನ್ನು ಸಮರ್ಥವಾಗಿ ಪತ್ತೆಹಚ್ಚಲು ಕುಟುಂಬದ ಸದಸ್ಯರ ಕಾಯಿಲೆಯ ಹಿನ್ನೆಲೆಯ ವಿವರಗಳನ್ನು ಬಳಸಿಕೊಳ್ಳಬಹುದು.
ಗ್ಲೋಮರುಲಸ್
ಇದು ಮೂತ್ರಪಿಂಡದ ಶೋಧಕ ರಚನೆಯಾಗಿದ್ದು, ಇದರ ಮೂಲಕ ಮೂತ್ರಪಿಂಡವು ರಕ್ತದಲ್ಲಿನ ಅನಗತ್ಯ ಕಲ್ಮಶಗಳನ್ನು ಹೋಗಲಾಡಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಗ್ಲೋಮರುಲರ್ ಸೋಸುವಿಕೆ ಮಟ್ಟ
ವೈದ್ಯರು ಇದನ್ನು ಆಧರಿಸಿ ಮೂತ್ರಪಿಂಡ ಕಾಯಿಲೆಯ ತೀವ್ರತೆಯನ್ನು ವಿವಿಧ ಹಂತಗಳಲ್ಲಿ ವಿಂಗಡಿಸುತ್ತಾರೆ 3ರಲ್ಲಿ ವಿವರಿಸಲಾಗಿದೆ)
ಸೂತ್ರ ಬಳಸಿ ಗ್ಲೋಮರುಲರ್‌ಸೋಸುವಿಕೆಯ ಕಾರ್ಯಮಟ್ಟವನ್ನು ಅಳೆಯುವ ಪರೀಕ್ಷೆ
ಮೂತ್ರಪಿಂಡದ ಕಾರ್ಯಕ್ಷಮತೆಯ ನಿಖರವಾದ ಮೌಲ್ಯಮಾಪನಕ್ಕಾಗಿ ಗ್ಲೋಮರುಲರ್‌ಸೋಸುವಿಕೆ ಮಟ್ಟವನ್ನು ವಯಸ್ಸು, ಲಿಂಗ ಮತ್ತು ರಕ್ತದಲ್ಲಿನ ಕ್ರಿಯಾಟಿನಿನ್ ಮಟ್ಟದ ಫಲಿತಾಂಶಗಳನ್ನು ಸಂಗ್ರಹಿಸಿ ಸೂತ್ರ ಬಳಸಿ ಲೆಕ್ಕ ಮಾಡಲಾಗುತ್ತದೆ.
ಕಿಡ್ನಿ ಕಾಯಿಲೆ ಹಾಗೂ ವೈಫಲ್ಯದ ದೃಢೀಕರಣ ಮಾಡುವ ಪರೀಕ್ಷೆಗಳನ್ನು ಯಾವ ರೀತಿಯಲ್ಲಿ ಮಾಡಲಾಗುತ್ತದೆ? ಮತ್ತು ಯಾಕೆ ಮಾಡಲಾಗುತ್ತದೆ?
ಮೂತ್ರ ಮತ್ತು ರಕ್ತ ಪರೀಕ್ಷೆಗಳು ಕಾಯಿಲೆ ತಡೆಗಟ್ಟಲು ಅಗತ್ಯವಿರುವ ಬಹುತೇಕ ಮಾಹಿತಿಗಳನ್ನು ನೀಡುವುದರಿಂದ ಈ ದೃಢೀಕರಣ ಮಾಡುವ ಪರೀಕ್ಷೆಗಳನ್ನು ತೀರಾ ಅಗತ್ಯವಿದ್ದಲ್ಲಿ ಮತ್ತು ಮೂತ್ರಪಿಂಡ ತಜ್ಞರು ಅಭಿಪ್ರಾಯಪಟ್ಟರೆ ಮಾತ್ರ ನಡೆಸಲಾಗುತ್ತದೆ.
- ಮೂತ್ರಪಿಂಡ ಚಿತ್ರಣ ಪರೀಕ್ಷೆ
ಈ ಪರೀಕ್ಷೆಯಿಂದ ಮೂತ್ರಪಿಂಡಗಳ ರಚನೆ, ಗಾತ್ರ ಅಥವಾ ಸ್ಥಾನದಲ್ಲಿಅಸಹಜತೆ ಅಥವಾ ಕಲ್ಲು, ಹರಳು ಅಥವಾ ಗೆಡ್ಡೆಗಳಂತಹ ಅಡಚಣೆಗಳಿದ್ದರೆ ಗುರುತಿಸಲಾಗುತ್ತದೆ.
ಚ. ಅಲ್ಟ್ರಾಸೌಂಡ್
ಈ ಪರೀಕ್ಷೆಯಲ್ಲಿ ಶಬ್ದ ತರಂಗಗಳನ್ನು ಬಳಸಿ ಮೂತ್ರಪಿಂಡಗಳ ಚಿತ್ರಣವನ್ನು ಪಡೆಯಲಾಗುತ್ತದೆ.
ಚಿ. ಹೊಟ್ಟೆಯ ಕ್ಷ ಕಿರಣ
ಈ ಪರೀಕ್ಷೆಯನ್ನು ವಿಶೇಷವಾಗಿ ಮೂತ್ರಪಿಂಡದಲ್ಲಿನ ಕಲ್ಲುಗಳನ್ನು ಕಂಡುಹಿಡಿಯಲು ಮಾಡಲಾಗುತ್ತದೆ.
- ಮ್ಯಾಗ್ನೆಟಿಕ್ ರೆಸೋನೆ®Õ… ಇಮೇಜಿಂಗ್ (MRಐ)/ ಕಂಪ್ಯೂಟೆಡ್ ಟೊಮೊಗ್ರಫಿ (ಸಿಟಿ) ಸ್ಕ್ಯಾನ್
ಇದೊಂದು ಸುಧಾರಿತಗೊಂಡ ಪರೀಕ್ಷಾವಿಧಾನ. ಇದನ್ನು ಉತ್ತಮ ಗುಣಮಟ್ಟದ ಮೂತ್ರಪಿಂಡಗಳ ಚಿತ್ರಣ ಪಡೆಯಲು ಬಳಸಲಾಗುತ್ತದೆ.
- ಮೂತ್ರಪಿಂಡ ಜೀವಕಣವನ್ನು ದೇಹದಿಂದ ಬೇರ್ಪಡಿಸಿ ಪರೀಕ್ಷೆ
ಅಂದರೆ ಮೂತ್ರಪಿಂಡದ ಅಂಗಾಂಶದ ಮಾದರಿಯನ್ನು ತೆಗೆಯುವುದು (ಬಯಾಪ್ಸಿ) ತೆಳುವಾದ ಸೂಜಿಯ ತೀಕ್ಷ್ಣವಾದ ಕತ್ತರಿಸುವ ಅಂಚನ್ನು ಬಳಸಿ ಮೂತ್ರಪಿಂಡದ ಅಂಗಾಂಶದ ಸಣ್ಣ ತುಂಡನ್ನು ಕತ್ತರಿಸಿ ಅದನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷೆಮಾಡಲಾಗುತ್ತದೆ. ಅಲಕ್ಷಿಸದಿರಿ! ನಿಯಮಿತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ. “ಮೂತ್ರಪಿಂಡ ವೈಫಲ್ಯ ಯಾವುದೇ ಸುಳಿವು ನೀಡದೆ ನಿಧಾನವಾಗಿ ಬೆಳೆದು ಕಾಡುವ ಮೌನ ಶತ್ರು’
ಗಮನದಲ್ಲಿಡಬೇಕಾದ ಕೆಲವು ಕಾಳಜಿಯ ಅಂಶಗಳು
ಮೂತ್ರಪಿಂಡ ವೈಫಲ್ಯ ಹೊಂದುತ್ತಿರುವವರ ಸಂಖ್ಯೆ ಲಿಂಗ ಮತ್ತು ಪ್ರಾಯ ಬೇಧವಿಲ್ಲದೆ ತೀವ್ರಗತಿಯಲ್ಲಿ ಬೆಳೆಯುತ್ತಿರುವುದು ಎಚ್ಚರಿಕೆಯ ಗಂಟೆ!
ಗಾಬರಿ ಹಾಗೂ ಭಯ ಬೇಡ. ಆದರೆ ಕಾಯಿಲೆ ಬರುವ ಸಾಧ್ಯತೆ ತೀರಾ ಕಡಿಮೆ ಎನ್ನುವ ಅತಿಯಾದ ಅಂಧವಿಶ್ವಾಸವೂ ಬೇಡ. ಏಕೆಂದರೆ ಅನೇಕ ಸಂದರ್ಭಗಳಲ್ಲಿ, ಮೂತ್ರಪಿಂಡಗಳ ಕಾಯಿಲೆಗೆ ಕಾರಣ ತಿಳಿದುಬರುವುದಿಲ್ಲ.
ನಿಯಮಿತ ಹಾಗೂ ಸಮಯೋಚಿತ ಮೂತ್ರಪಿಂಡ ತಪಾಸಣೆಯಿಂದ ಮೂತ್ರಪಿಂಡ ರೋಗ/ವೈಫಲ್ಯವನ್ನು ನಿಯಂತ್ರಿಸಲು ಸಾಧ್ಯ ಮೂತ್ರಪಿಂಡಗಳು ಹಾನಿಗೊಳಗಾಗಿ ಕೊನೆಯ ಹಂತದ ವೈಫಲ್ಯಕ್ಕೆ ತಲುಪಿದರೆ ಚಿಕಿತ್ಸೆ ಬಹಳ ದುಬಾರಿ ಹಾಗೂ ಜೀವನಪರ್ಯಂತವಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.