ಉವೈಟಿಸ್‌


Team Udayavani, Mar 3, 2019, 12:30 AM IST

uveitis-d.jpg

ಮುಂದುವರಿದುದು– ಯಾರಿಗೆ ಉವೈಟಿಸ್‌ ಉಂಟಾಗಬಹುದು?
– ಯಾವುದೇ ಲಿಂಗ, ವಯೋಮಾನ, ಜನಾಂಗ ಅಥವಾ ಸಾಮಾಜಿಕ- ಆರ್ಥಿಕ ವರ್ಗದವರಿಗೆ ಉವೈಟಿಸ್‌ ಉಂಟಾಗಬಹುದು.
– ಟೋಕೊಪ್ಲಾಸ್ಮೋಸಿಸ್‌ ಅಥವಾ ಸೈಟೊಮೆಗಾಲೊವೈರಸ್‌ನಂತಹ ಉವೈಟಿಸ್‌ಗಳು ಗರ್ಭದಲ್ಲಿರುವ ಶಿಶುವನ್ನೂ ಬಾಧಿಸಬಹುದು.
– 10ರಿಂದ 15 ವರ್ಷ ವಯಸ್ಸಿನ ವರೆಗಿನ ಮಕ್ಕಳಿಗೆ ಉವೈಟಿಸ್‌ ಸಂಬಂಧಿ ಜುವೆನೈಲ್‌ ರುಮಟಾಯ್ಡ ಆಥೆùಟಿಸ್‌ ಉಂಟಾಗಬಹುದು; ಇದು ಮಕ್ಕಳಲ್ಲಿ ಗಡ್ಡೆಗಳು ಅಥವಾ ಸೋಂಕು ಕಣ್ಣುಗಳಿಗೆ ಹರಡುವುದರಿಂದ ಉಂಟಾಗುತ್ತದೆ. 
– ಯುವಕರು ಆ್ಯಂಕೊಲೈಸಿಂಗ್‌ ಸ್ಪಾಂಡಿಲೈಟಿಸ್‌ ಅಥವಾ ಇನ್‌ಫ್ಲಮೇಟರಿ ಬವೆಲ್‌ ಡಿಸೀಸ್‌ನಿಂದ ಉಂಟಾಗುವ ಕೆಳ ಬೆನ್ನು ನೋವಿನೊಂದಿಗೆ ಸಂಬಂಧ ಹೊಂದಿರುವ ಉವೈಟಿಸ್‌ಗೆ ತುತ್ತಾಗುವ ಸಾಧ್ಯತೆ ಹೆಚ್ಚು. 
– ಮಧ್ಯವಯಸ್ಕರಲ್ಲಿ ಇತರ ಇಮ್ಯುನೊಲಾಜಿಕಲ್‌ ಕಾರಣಗಳಿಂದ ಇದು ಉಂಟಾಗಬಹುದು. 
– ಅವಘಡ ಯಾವುದೇ ವಯಸ್ಸಿನಲ್ಲಿ ಉಂಟಾಗಬಹುದು.
– ಗದ್ದೆಗಳಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಲ್ಲಿ ಲೆಪ್ಟೊಸ್ಪಿರೋಸಿಸ್‌ ಮತ್ತು ಅದರಿಂದ ಉಂಟಾಗುವ ಉವೈಟಿಸ್‌ಗೆ ತುತ್ತಾಗುವ ಸಾಧ್ಯತೆ ಅಧಿಕ.

ಉವೈಟಿಸ್‌ ಉಲ್ಬಣಾವಸ್ಥೆಯ 
ಸಂಕೀರ್ಣ ಸಮಸ್ಯೆಗಳೇನು?

ಉವೈಟಿಸ್‌ ಅಂಧತ್ವಕ್ಕೆ ಕಾರಣವಾಗಬಹುದು.ಉವೈಟಿಸ್‌ ಕಣ್ಣಿನ ಒಳಭಾಗದಲ್ಲಿ, ಸೂಕ್ಷ್ಮಸಂವೇದಿ ರೆಟಿನಲ್‌ ಪದರ ಅಥವಾ ದೃಷ್ಟಿ ನರದ ಸನಿಹ ಉಂಟಾಗಿದ್ದರೆ ಈ ಸಾಧ್ಯತೆ ಅಧಿಕ. ನರ ಜೀವಕೋಶ ಊದಿಕೊಂಡು ದೃಷ್ಟಿ ಮಂಜಾಗಬಹುದು.

ಹೊರ ಪದರದಲ್ಲಿ ಉವೈಟಿಸ್‌ ಉಂಟಾಗಿದ್ದರೆ ಕಣ್ಣಿನ ಒಳಭಾಗದ ದ್ರವ ಉತ್ಪಾದನೆ ಸ್ಥಗಿತಗೊಂಡು ಮೃದು, ಕುರುಡು, ಕುಗ್ಗಿದ ಕಣ್ಣಿಗೆ ಕಾರಣವಾಗಬಹುದು ಅಥವಾ ಕಣ್ಣಿನಿಂದ ದ್ರವದ ಹೊರ ಹರಿಯುವಿಕೆಗೆ ತಡೆ ಒಡ್ಡುವ ಮೂಲಕ ಕಣ್ಣಿನ ಒಳಭಾಗದಲ್ಲಿ ಒತ್ತಡ ಹೆಚ್ಚಳಕ್ಕೆ ಕಾರಣವಾಗಿ ದ್ವಿತೀಯಕ ಗುÉಕೋಮಾ ಉಂಟು ಮಾಡಬಹುದು.

ದೀರ್ಘ‌ಕಾಲಿಕ ಉವೈಟಿಸ್‌ನಿಂದ ಬಾಧಿತ ಕಣ್ಣಿನಲ್ಲಿ ಕ್ಯಾಟರ್ಯಾಕ್ಟ್ ಕಾಣಿಸಿಕೊಳ್ಳಬಹುದು.

ಉವೈಟಿಸ್‌ ತಪಾಸಣೆ- ಪರೀಕ್ಷೆ
ವೈದ್ಯಕೀಯ ರೋಗ ಪತ್ತೆಯ ಜತೆಗೆ ಕಾಯಿಲೆಯ ಪ್ರಗತಿ ಅಥವಾ ಚಿಕಿತ್ಸೆಯ ಪರಿಣಾಮದ ಬಗ್ಗೆ ತಿಳಿಯಲು ತಪಾಸಣೆಗಳು ಮತ್ತು ಪರೀಕ್ಷೆಗಳು ಅಗತ್ಯವಾಗಿವೆ. 

ಕಣ್ಣಿನ ತಪಾಸಣೆಗಳಲ್ಲಿ, ಒಳಪ್ರವೇಶಿಸದ ಕಣ್ಣಿನ ಅಲ್ಟ್ರಾಸೌಂಡ್‌ ಸ್ಕ್ಯಾನ್‌, ಒಸಿಟಿ ಇಮೇಜಿಂಗ್‌, ಫ‌ಂಡಸ್‌ ಆ್ಯಂಜಿಯೊಗ್ರಾಮ್‌ ಹಾಗೂ ಒಳ ಪ್ರವೇಶಿಸುವ ಪರೀಕ್ಷೆಗಳಾದ ಬಯಾಪ್ಸಿ ಸೇರಿವೆ.

ಸಿಸ್ಟೆಮಿಕ್‌ ಇಮೇಜಿಂಗ್‌ನಲ್ಲಿ ಸೋಂಕು ಪತ್ತೆಗಾಗಿ ರಕ್ತ ಪರೀಕ್ಷೆಗಳು, ರಕ್ತದಲ್ಲಿ ಸಕ್ಕರೆಯ ಅಂಶ ಪರೀಕ್ಷೆ, ಕ್ಷಯ ಪತ್ತೆಗಾಗಿ ಚರ್ಮದ ಪರೀಕ್ಷೆ, ಎದೆಯ ಎಕ್ಸ್‌ರೇ ಮತ್ತು ಸಿಟಿ/ಎಂಆರ್‌ಐಗಳು ಸೇರಿರುತ್ತವೆ.

ವಂಶವಾಹಿ ವಿಶ್ಲೇಷಣೆ, ದೃಷ್ಟಿ ದ್ರವಗಳ ಪಿಸಿಆರ್‌ ವಿಶ್ಲೇಷಣೆಗಳನ್ನು ಕೂಡ ಕೆಲವು ಪ್ರಕರಣಗಳಲ್ಲಿ ಮಾಡಬೇಕಾಗಬಹುದು.

ಸಾರಾಂಶ
ಉವೈಟಿಸ್‌ ಒಂದು ಉರಿಯೂತ ಅನಾರೋಗ್ಯ ಸ್ಥಿತಿಯಾಗಿದ್ದು, ಕಣ್ಣುಗಳನ್ನು ಬಾಧಿಸುತ್ತದೆ. ಕಣ್ಣು ಕೆಂಪಾಗುವುದು, ದೃಷ್ಟಿ ಸಾಮರ್ಥ್ಯ ಕಡಿಮೆಯಾಗುವಂತಹ ಲಕ್ಷಣಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಕಣ್ಣು ಅಥವಾ ದೇಹದ ಇತರ ಯಾವುದೇ ಅಂಗಾಂಗವನ್ನು ಬಾಧಿಸಿದ ಇನ್ಯಾವುದೋ ಒಂದು ಅನಾರೋಗ್ಯದೊಂದಿಗೆ ಉವೈಟಿಸ್‌ ಸಂಬಂಧ ಹೊಂದಿರುತ್ತದೆ. ಈ ಮೂಲ ಕಾರಣವನ್ನು ಪತ್ತೆ ಮಾಡುವುದು ಸವಾಲಾಗಿದ್ದು, ಅದು ತಿಳಿದುಬಂದ ತತ್‌ಕ್ಷಣ ಚಿಕಿತ್ಸೆ ಒದಗಿಸುವುದು ಸುಲಭವಾಗುತ್ತದೆ. ಆದರೆ ಶೇ.50ರಷ್ಟು ಉವೈಟಿಸ್‌ ಪ್ರಕರಣಗಳು ಮೂಲ ಕಾರಣ ಇನ್ನೆಲ್ಲೋ ಇರುವ ಪ್ರಕರಣಗಳಾಗಿರುತ್ತವೆ; ಹೀಗಾಗಿ ಸ್ಟಿರಾಯ್ಡ ಮತ್ತು ಇತರ ಆ್ಯಂಟಿ ಇನ್‌ಫ್ಲಮೇಟರಿ ಔಷಧಗಳನ್ನು ಒಳಗೊಂಡ ತಾತ್ಕಾಲಿಕ ಪೋಷಕ ಚಿಕಿತ್ಸೆಯನ್ನು ಒದಗಿಸುತ್ತ ಅಂಧತ್ವವನ್ನೂ ಒಳಗೊಂಡ ಉವೈಟಿಸ್‌ನ ಸಂಕೀರ್ಣ ಸಮಸ್ಯೆಗಳನ್ನು ದೂರ ಮಾಡಬೇಕಾಗುತ್ತದೆ.

ಉವೈಟಿಸ್‌ ಚಿಕಿತ್ಸೆ
ಉವೈಟಿಸ್‌ ಉಂಟಾಗಿರುವ ಮೂಲ ಕಾರಣಕ್ಕೆ ಚಿಕಿತ್ಸೆ ಒದಗಿಸಿದರೆ ಉವೈಟಿಸ್‌ ಪೂರ್ಣ ಪ್ರಮಾಣದಲ್ಲಿ ಎನ್ನುವಷ್ಟು ಗುಣ ಕಾಣಲು ಸಾಧ್ಯವಿದೆ. ಇದಕ್ಕಾಗಿ ಸಮರ್ಪಕವಾದ ಆ್ಯಂಟಿ ಮೈಕ್ರೋಬಿಯಲ್‌ ಏಜೆಂಟನ್ನು ಆ್ಯಂಟಿ ಇನ್‌ಫ್ಲಮೇಟರಿ ಚಿಕಿತ್ಸೆಯ ಜತೆಗೆ ಒದಗಿಸಲಾಗುತ್ತದೆ. 

ಆದರೆ, ಕಾರಣವನ್ನು ಶೋಧಿಸುವವರೆಗೆ ಅಥವಾ ಅನಾರೋಗ್ಯ ಸ್ಥಿತಿಯು ಇಮ್ಯುನೊಲಾಜಿಕ್‌ ಸ್ಥಿತಿಯಾಗಿದ್ದರೆ ಯಾ ಉವೈಟಿಸ್‌ ದೃಷ್ಟಿಯನ್ನು ಬಾಧಿಸಬಲ್ಲ ಕಣ್ಣಿನ ಸೂಕ್ಷ್ಮಸಂವೇದಿ ಪದರಗಳನ್ನು ಒಳಗೊಂಡಿದ್ದರೆ ಉರಿಯೂತವನ್ನು ನಿಯಂತ್ರಿಸಲು ಶಕ್ತಿಶಾಲಿ ಔಷಧಗಳನ್ನು ಉಪಯೋಗಿಸಬೇಕಾಗುತ್ತದೆ. ಸ್ಟಿರಾಯ್ಡಗಳನ್ನು ಕೂಡ ಮುಕ್ತವಾಗಿ ಬಳಸಬೇಕಾಗುತ್ತದೆ. 

ಸ್ಟಿರಾಯ್ಡಗಳನ್ನು ಕಣ್ಣಿನ ಡ್ರಾಪ್‌ಗ್ಳಾಗಿ ಅಥವಾ ಮುಲಾಮುಗಳಾಗಿ, ಮಾತ್ರೆಗಳಾಗಿ, ನರಗಳಿಗೆ ನೀಡುವ ಇಂಜೆಕ್ಷನ್‌ ಆಗಿ ಯಾ ಕಣ್ಣಿನ ಇಂಜೆಕ್ಷನ್‌ ಆಗಿ ಪ್ರಯೋಗಿಸಲಾಗುತ್ತದೆ. 

ದೀರ್ಘ‌ಕಾಲಿಕವಾಗಿ ಸ್ಟಿರಾಯ್ಡಗಳನ್ನು ಉಪಯೋಗಿಸಿದರೆ ಕ್ಯಾಟರ್ಯಾಕ್ಟ್ ಅಥವಾ ಗುÉಕೋಮಾ ಉಂಟಾಗಬಹುದು; ದೇಹವ್ಯವಸ್ಥೆಯಲ್ಲಿ ಮಧುಮೇಹ, ಗ್ಯಾಸ್ಟ್ರಿಕ್‌ ಅಲ್ಸರ್‌ ಉಂಟುಮಾಡಬಹುದು. ಹೀಗಾಗಿ ಅಪಾರ ಎಚ್ಚರಿಕೆ, ನಿಗಾ ಮತ್ತು ಪೋಷಕ ಚಿಕಿತ್ಸೆಯಿಂದ ಅತಿ ಹೆಚ್ಚಿನ “ಚಿಕಿತ್ಸಕ ಮೌಲ್ಯ’ವನ್ನು ಗಳಿಸಿಕೊಂಡು ಅಡ್ಡ ಪರಿಣಾಮಗಳನ್ನು ಅತಿ ಕನಿಷ್ಠಕ್ಕಿಳಿಸಬಹುದು.

ಸ್ಟಿರಾಯ್ಡಗಳಿಗಿಂತಲೂ ಶಕ್ತಿಶಾಲಿಯಾದ ಔಷಧಗಳಲ್ಲಿ ಮೆಥೊಟ್ರೆಕ್ಸೇಟ್‌, ಅಝಾಥಿಯೊಪ್ರೈನ್‌ ಮತ್ತು ಸೈಕ್ಲೊನ್ಪೊರಿನ್‌ನಂತಹ ಇಮ್ಯುನೊಸಪ್ರಸೆಂಟ್‌ಗಳು ಸೇರಿವೆ. 

ಟಾಪ್ ನ್ಯೂಸ್

horatti

C.T.Ravi ಪ್ರಕರಣ ಸಿಐಡಿಗೆ ನೀಡಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ

joe-bidden

Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್‌

vijayaendra

ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ

Citizen-annamali

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

Tulu-Nataka-KM

ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್‌’ ದ್ವಿತೀಯ

DH-Heggade

Dharmasthala: ಜನಜಾಗೃತಿ ವೇದಿಕೆ ನೂರಾರು ಕವಲಿರುವ ವೃಕ್ಷ: ಡಾ.ಹೇಮಾವತಿ ಹೆಗ್ಗಡೆ

1-kamb

ತುಳುವಿಗೆ ರಾಜ್ಯಭಾಷೆ ಗೌರವ ಪರಿಗಣನೆ; ನರಿಂಗಾನ ಕಂಬಳೋತ್ಸವದಲ್ಲಿ ಸಿಎಂ ಭರವಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

horatti

C.T.Ravi ಪ್ರಕರಣ ಸಿಐಡಿಗೆ ನೀಡಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಆಕ್ಷೇಪ

joe-bidden

Donald Trump ಸೋಲಿಸುತ್ತಿದ್ದೆ, ಪಕ್ಷಕ್ಕಾಗಿ ಹಿಂದೆ ಸರಿದೆ: ಅಧ್ಯಕ್ಷ ಜೋ ಬೈಡೆನ್‌

vijayaendra

ಹಿಂದೂ ಕಾರ್ಯಕರ್ತರ ಪರ ಕಾನೂನು ಪ್ರಕೋಷ್ಠ ಹೋರಾಟ: ಬಿ.ವೈ.ವಿಜಯೇಂದ್ರ

Citizen-annamali

ಇಂದಿರಾ ಗಾಂಧಿ ಸಂವಿಧಾನ ತಿದ್ದುಪಡಿ ಮಾಡಿದ್ದರಿಂದ ದೇಶಕ್ಕೆ ಭಾರೀ ಹಿನ್ನಡೆ: ಕೆ.ಅಣ್ಣಾಮಲೈ

Tulu-Nataka-KM

ಕೆಮ್ತೂರು ತುಳು ನಾಟಕ ಸ್ಪರ್ಧೆ: “ಈದಿ’ ಪ್ರಥಮ, “ದಿ ಫೈಯರ್‌’ ದ್ವಿತೀಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.