ಹಲ್ಲುಗಳು ಬಣ್ಣಗೆಡಲು ಮತ್ತು ಪಾಚಿಗಟ್ಟಲು ಕಾರಣಗಳೇನು?


Team Udayavani, Jan 9, 2022, 6:25 AM IST

ಹಲ್ಲುಗಳು ಬಣ್ಣಗೆಡಲು ಮತ್ತು ಪಾಚಿಗಟ್ಟಲು ಕಾರಣಗಳೇನು?

ನಮ್ಮ ಹಲ್ಲುಗಳು ಬಣ್ಣಗೆಡುವುದು ಮತ್ತು ಹಲ್ಲುಗಳು ಪಾಚಿಗಟ್ಟುವುದು ಸಾಮಾನ್ಯವಾಗಿ ಕಂಡುಬರುತ್ತದೆ ಮತ್ತು ಇದಕ್ಕೆ ಹಲವು ಕಾರಣಗಳಿರುತ್ತವೆ. ಇದರ ನಡುವೆ ಶುಭ ಸುದ್ದಿ ಎಂದರೆ, ಪಾಚಿಗಟ್ಟಿರುವುದು, ಬಣ್ಣಗೆಟ್ಟಿರುವುದಕ್ಕೆ ಚಿಕಿತ್ಸೆ ನೀಡಬಹುದು ಮತ್ತು ಹಾಗಾಗದಂತೆ ತಡೆಯಬಹುದು.ಹಲ್ಲುಗಳು ಬಣ್ಣಗೆಡಲು, ಪಾಚಿಗಟ್ಟಲು ಕಾರಣಗಳೇನು ಮತ್ತು ನಿಮ್ಮ ಹಲ್ಲು ಶುಭ್ರವಾಗಿ ಹೊಳೆಯುವಂತಿರಲು ನೀವು ಏನು ಮಾಡಬೇಕು ಎಂಬುದಕ್ಕೆ ಉತ್ತರ ಇಲ್ಲಿದೆ.

ಯಾವುದರಿಂದಾಗಿ ಹಲ್ಲುಗಳು ಬಣ್ಣಗೆಡುತ್ತವೆ?
“ಹಲ್ಲುಗಳು ಬಣ್ಣಗೆಡುವುದು ಮತ್ತು ಪಾಚಿಗಟ್ಟುವುದಕ್ಕೆ ಮುಖ್ಯ ಕಾರಣಗಳು ನಾವು ಏನನ್ನು ತಿನ್ನುತ್ತೇವೆ, ಕುಡಿಯುತ್ತೇವೆ ಎಂಬುದು, ವಯಸ್ಸಾಗುವುದು ಮತ್ತು ಹಲ್ಲಿನ ಗಾಯಗಳು’. ಆಹಾರ, ಪಾನೀಯ ಮತ್ತು ತಂಬಾಕು.
ಕೆಲವು ಬಗೆಯ ಆಹಾರ ಮತ್ತು ಪಾನೀಯಗಳು ನಿಮ್ಮ ಹಲ್ಲುಗಳ ಸಂರಚನೆಯ ಹೊರ ಪದರಗಳನ್ನು ಕೂಡ ತಲುಪಬಲ್ಲವು ಮತ್ತು ಹಲ್ಲುಗಳ ಬಣ್ಣಗೆಡಿಸಬಲ್ಲವು. ಹಲ್ಲುಗಳನ್ನು ಬಣ್ಣಗೆಡಿಸಬಲ್ಲ ಇಂತಹ ಕೆಲವು ಆಹಾರ ಮತ್ತು ಪಾನೀಯಗಳೆಂದರೆ:
– ಕೆಂಪು ಸಾಸ್‌ಗಳು
– ಕೆಂಪು ವೈನ್‌
– ಚಹಾ
– ಕಾಫಿ
-ಚಾಕೊಲೇಟ್‌
– ಸಿಗರೇಟು ಸೇದುವುದು ಅಥವಾ ತಂಬಾಕನ್ನು ಜಗಿಯುವ ರೂಪಗಳಲ್ಲಿ ತಂಬಾಕಿನ ಬಳಕೆಯಿಂದ ಹಲ್ಲುಗಳು ಬಣ್ಣಗೆಡುತ್ತವೆ.

ಪಾಚಿಗಟ್ಟುವುದರ ವಿಧಗಳು
ಹಲ್ಲುಗಳು ಪಾಚಿಗಟ್ಟುವುದು ಮುಖ್ಯವಾಗಿ ಮೂರು ವರ್ಗಗಳಲ್ಲಿರುತ್ತದೆ:
ಬಾಹ್ಯ,  ಆಂತರಿಕ  , ವಯೋಸಂಬಂಧಿ

ಬಾಹ್ಯ: ಬಾಹ್ಯ ಪಾಚಿಗಟ್ಟಿರುವುದರಲ್ಲಿ ಪಾಚಿಗಟ್ಟುವುದು ಹಲ್ಲಿನ ಎನಾಮಲ್‌ ಅಥವಾ ಹಲ್ಲಿನ ಮೇಲ್ಮೆ„ಯ ಮೇಲೆ ಮಾತ್ರ ಪರಿಣಾಮ ಬೀರಿರುತ್ತದೆ. ಬಾಹ್ಯ ಪಾಚಿಗಟ್ಟಿರುವುದಕ್ಕೆ ಬಹು ಸಾಮಾನ್ಯ ಕಾರಣಗಳೆಂದರೆ:
-ಆಹಾರ
-ಪಾನೀಯಗಳು
-ತಂಬಾಕು

ಆಂತರಿಕ: ಈ ವಿಧವಾದ ಪಾಚಿಗಟ್ಟಿರುವುದು ಹಲ್ಲಿನ ಒಳಗೆ ಇರುತ್ತದೆ, ಇದು ಔಷಧ ಅಂಗಡಿಗಳಲ್ಲಿ ನೀವು ತೆಗೆದುಕೊಳ್ಳುವ ಹಲ್ಲು ಬಿಳುಪಾಗಿಸುವ ಉತ್ಪನ್ನಗಳಿಂದ ಹೋಗುವುದಿಲ್ಲ. ಇದು ಸಾಮಾನ್ಯವಾಗಿ ಕಂದುಬಣ್ಣದ್ದಾಗಿರುತ್ತದೆ. ಆಂತರಿಕ ಪಾಚಿಗಟ್ಟುವುದಕ್ಕೆ ಉದಾಹರಣೆಗಳು:
– ಕೆಲವು ಔಷಧಗಳು
– ಹಲ್ಲಿಗೆ ಅಪಘಾತ ಅಥವಾ ಗಾಯ
– ಹಲ್ಲು ಹುಳುಕಾಗುವುದು
– ಫ್ಲೋರೈಡ್‌ ಅಂಶ ಹೆಚ್ಚಾಗುವುದು
– ವಂಶವಾಹಿ ಕಾರಣಗಳು

ವಯೋಸಂಬಂಧಿ: ವಯಸ್ಸಾದಂತೆ ಹಲ್ಲುಗಳ ಎನಾಮಲ್‌ ಕ್ಷಯಿಸಲು ಆರಂಭವಾಗುತ್ತದೆ, ಇದರಿಂದಾಗಿ ಹಲ್ಲುಗಳು ಹಳದಿ ವರ್ಣದವಾಗಿ ಕಾಣುತ್ತವೆ. ಅನೇಕ ಸಂದರ್ಭಗಳಲ್ಲಿ ವಯೋಸಂಬಂಧಿ ಬಣ್ಣಗೆಡುವಿಕೆಯು ಆಂತರಿಕ ಮತ್ತು ಬಾಹ್ಯ ಕಾರಣಗಳೆರಡರಿಂದಲೂ ಸಂಭವಿಸಬಹುದು.

ಕ್ಲಿನಿಕಲ್‌ ಸಂಶೋಧನೆಯ ವಿಶ್ವಾಸಾರ್ಹ ಮೂಲಗಳ ಪ್ರಕಾರ, ಧೂಮಪಾನಿಗಳಲ್ಲಿ ಹಲ್ಲಿನ ಬಣ್ಣಗೆಡುವಿಕೆಯು ಧೂಮಪಾನಿಗಳಲ್ಲದವರಿಗಿಂತ ಹೆಚ್ಚಾಗಿರುತ್ತದೆ. ಇಷ್ಟಲ್ಲದೆ, ತಮ್ಮ ಹಲ್ಲುಗಳು ಬಣ್ಣಗೆಟ್ಟಿರುವುದರಿಂದ ಹೆಚ್ಚು ಅಸಮಾಧಾನ ಹೊಂದಿರುವವರು ಕೂಡ ಧೂಮಪಾನಿಗಳೇ ಆಗಿರುತ್ತಾರೆ ಎಂದು ಈ ಅಧ್ಯಯನ ಕಂಡುಕೊಂಡಿದೆ.
ಟಫ್ಟ್$Õ ಸ್ಕೂಲ್‌ ಆಫ್ ಡೆಂಟಲ್‌ ಮೆಡಿಸಿನ್‌ ಪ್ರಕಾರ, ನಮ್ಮ ಬಾಯಿಯಲ್ಲಿ ಆಮ್ಲಿàಯ ವಾತಾವರಣ ಇದ್ದರೆ ಅದರಿಂದ ಹಲ್ಲುಗಳ ಎನಾಮಲ್‌ ಬಣ್ಣಗೆಡುವುದಕ್ಕೆ ಪೂರಕ ಸ್ಥಿತಿ ನಿರ್ಮಾಣವಾಗುತ್ತದೆ.

ವಯಸ್ಸು, ಗಾಯಗಳು
ಮತ್ತು ಆ್ಯಂಟಿಬಯಾಟಿಕ್‌ಗಳು
“ವಯಸ್ಸಾಗುತ್ತಿದ್ದಂತೆ ನಿಮ್ಮ ಹಲ್ಲುಗಳು ಹೆಚ್ಚು ದುರ್ಬಲವಾಗುತ್ತವೆ ಮತ್ತು ಪಾಚಿಗಟ್ಟುವುದು ಅಥವಾ ಹಳದಿಗಟ್ಟುವುದಕ್ಕೆ ಅನುವಾಗುತ್ತದೆ’.

ಹಲ್ಲಿನ ಗಾಯಗಳು ಸಮಸ್ಯೆಯ ಮೂಲವಾಗಿದ್ದಾಗ ಕೆಲವೊಮ್ಮೆ ಹಾನಿಗೀಡಾದ ಹಲ್ಲು ಮಾತ್ರ ಕಪ್ಪಾಗುತ್ತದೆ.
ಮಗುವಾಗಿದ್ದಾಗ ಆ್ಯಂಟಿಬಯಾಟಿಕ್‌ ತೆಗೆದುಕೊಂಡಿದ್ದರೆ ನಿಮಗೆ ಯಾವ ಔಷಧವನ್ನು ಶಿಫಾರಸು ಮಾಡಲಾಗಿತ್ತು ಎಂಬುದನ್ನು ಕಂಡುಕೊಳ್ಳಬೇಕಾಗುತ್ತದೆ. ಫ‌ುಡ್‌ ಆ್ಯಂಡ್‌ ಡ್ರಗ್‌ ಅಡ್ಮಿನಿಸ್ಟ್ರೇಶನ್‌ ಟ್ರಸ್ಟೆಡ್‌ ಸೋರ್ಸ್‌ ಪ್ರಕಾರ, ಮಗುವಾಗಿದ್ದಾಗ ಟೆಟ್ರಾಸೈಕ್ಲಿನ್‌ ಆ್ಯಂಟಿಬಯಾಟಿಕ್‌ ತೆಗೆದುಕೊಂಡಿರುವುದಕ್ಕೂ ಹಲ್ಲುಗಳು ಶಾಶ್ವತ ಬಣ್ಣಗೆಡುವುದಕ್ಕೂ ಸಂಬಂಧ ಇದೆ.

ಹಲ್ಲುಗಳು ಬೇರೆ ಬಣ್ಣಕ್ಕೆ ತಿರುಗುವುದು
ಹಳದಿ: ಧೂಮಪಾನ ಮಾಡುವವರು ಅಥವಾ ತಂಬಾಕು ಜಗಿಯುವವರ ಹಲ್ಲುಗಳಲ್ಲಿ ಹಳದಿ ಕಲೆಗಳು ಉಂಟಾಗಬಹುದು. ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುವುದಕ್ಕೆ ಈ ಕೆಳಗಿನವು ಕೂಡ ಕಾರಣವಾಗಬಹುದು:
– ಚಹಾ, ಕಾಫಿ ಅಥವಾ ಕೆಂಪು ವೈನ್‌
-ಸರಳ ಸಕ್ಕರೆ ಹೆಚ್ಚು ಪ್ರಮಾಣದಲ್ಲಿರುವ ಆಹಾರ
– ಕೆಲವು ಔಷಧಗಳು
– ಬಾಯಿಯ ಕಳಪೆ ನೈರ್ಮಲ್ಯ
– ದೀರ್ಘ‌ಕಾಲದಿಂದ ಬಾಯಿ ಒಣಗಿರುವುದು

ಕಂದು: ಹಲ್ಲುಗಳ ಮೇಲೆ ಕಂದು ಕಲೆಗಳು ಅಥವಾ ಹಲ್ಲುಗಳು ಕಂದು ಬಣ್ಣಕ್ಕೆ ತಿರುಗುವುದಕ್ಕೆ ಹಲವಾರು ಕಾರಣಗಳಿರುತ್ತವೆ. ಕೆಲವು ಸಾಮಾನ್ಯ ಕಾರಣಗಳೆಂದರೆ:
– ತಂಬಾಕು ಬಳಕೆ
– ಚಹಾ, ಕಾಫಿ, ಕೋಲಾ ಮತ್ತು ಕೆಂಪು ವೈನ್‌ನಂತಹ ಪಾನೀಯಗಳು
– ಬ್ಲೂಬೆರಿ, ಬ್ಲ್ಯಾಕ್‌ಬೆರಿ ಮತ್ತು ದಾಳಿಂಬೆಯಂತಹ ಹಣ್ಣುಗಳು
– ಚಿಕಿತ್ಸೆ ನೀಡದ ಹಲ್ಲು ಹುಳುಕು
– ಪಾಚಿ ಶೇಖರವಾಗುವುದು

ಬಿಳಿ: ದಂತಕುಳಿಯಿಂದಾಗಿ ಹಲ್ಲಿನ ಮೇಲೆ ಬಿಳಿ ಕಲೆ ಉಂಟಾಗಬಹುದು. ಕುಳಿ ಉಲ್ಬಣಗೊಳ್ಳುತ್ತಿದ್ದಂತೆ ಇದು ಗಾಢವಾಗುತ್ತದೆ. ಫ್ಲೋರೈಡ್‌ ಪ್ರಮಾಣ ಹೆಚ್ಚಿರುವುದರಿಂದಲೂ ಹಲ್ಲುಗಳ ಮೇಲೆ ಬಿಳಿ ಕಲೆ ಕಾಣಿಸಿಕೊಳ್ಳಬಹುದು.

ಕಪ್ಪು: ಹಲ್ಲುಗಳ ಮೇಲೆ ಕಪ್ಪು ಕಲೆ ಅಥವಾ ಕೊಳಕು ಈ ಕೆಳಗಿನ ಕಾರಣಗಳಿಂದ ಉಂಟಾಗಬಹುದು:
– ಮುಂದುವರಿದ ಸ್ಥಿತಿಯಲ್ಲಿರುವ ದಂತಕುಳಿ
– ಸಿಲ್ವರ್‌ ಸಲ್ಫೆ„ಡ್‌ ಹೊಂದಿರುವ ಫಿಲ್ಲಿಂಗ್‌ ಮತ್ತು ಕ್ರೌನ್‌ಗಳು
– ದ್ರವರೂಪದ ಕಬ್ಬಿಣಾಂಶ ಪೂರಕ ಆಹಾರಗಳು

ನೇರಳೆ: ನಿಯಮಿತವಾಗಿ ವೈನ್‌ ಸೇವಿಸುವ ಅಭ್ಯಾಸ ಹೊಂದಿರುವವರ ಹಲ್ಲುಗಳು ಸ್ವಲ್ಪ ನೇರಳೆ ವರ್ಣಕ್ಕೆ ತಿರುಗಬಹುದು.

ಪಾಚಿಗಟ್ಟಿರುವುದನ್ನು ನಿವಾರಿಸಲು
ನೀವೇನು ಮಾಡಬಹುದು?
ಹಲ್ಲುಗಳು ಪಾಚಿಗಟ್ಟಿರುವುದನ್ನು ನಿವಾರಿಸಲು ಅಥವಾ ಕಡಿಮೆ ಮಾಡಲು ಅನೇಕ ಉತ್ಪನ್ನಗಳು ಮತ್ತು ಚಿಕಿತ್ಸೆಗಳು ಲಭ್ಯವಿವೆ. ಸಾಮಾನ್ಯವಾಗಿ ಹೇಳುವುದಾದರೆ ಹಲ್ಲು ಬಿಳುಪು ಮಾಡುವ ಆಯ್ಕೆಗಳಲ್ಲಿ ಮೂರು ವಿಭಾಗಗಳಿವೆ:

ಕ್ಲಿನಿಕ್‌ನಲ್ಲಿ ಚಿಕಿತ್ಸೆ:
ನಿಮ್ಮ ದಂತವೈದ್ಯರು ಸಾಮಾನ್ಯವಾಗಿ ಹಲ್ಲಿನ ಕಲೆಗಳನ್ನು ನಿವಾರಿಸಿ ಬಿಳುಪುಗೊಳಿಸಲು ಮನೆಗಳಲ್ಲಿ ಉಪಯೋಗಿಸುವುದಕ್ಕಿಂತ ಹೆಚ್ಚು ಸಾಂದ್ರತೆಯ ಹೈಡ್ರೋಜನ್‌ ಪೆರಾಕ್ಸೆ„ಡ್‌ ಉಪಯೋಗಿಸುತ್ತಾರೆ. ಕ್ಲಿನಿಕ್‌ನಲ್ಲಿ ನೀಡುವ ಚಿಕಿತ್ಸೆ ಹೆಚ್ಚು ಕ್ಷಿಪ್ರವಾಗಿ ಫ‌ಲಿತಾಂಶ ನೀಡುತ್ತದೆ ಮತ್ತು ಇತರ ವಿಧಾನಗಳಿಗಿಂತ ಹೆಚ್ಚು ದೀರ್ಘ‌ಕಾಲ ಬಾಳಿಕೆ ಹೊಂದಿರುತ್ತದೆ.

ದಂತವೈದ್ಯರ ಮೂಲಕ
ಮನೆಯಲ್ಲಿ ಚಿಕಿತ್ಸೆ. ಮನೆಯಲ್ಲಿ ಹಲ್ಲುಗಳ ಮೇಲೆ ಇರಿಸಿಕೊಳ್ಳುವುದಕ್ಕಾಗಿ ದಂತವೈದ್ಯರು ನಿಮ್ಮ ಹಲ್ಲುಗಳಿಗೆ ಸರಿಹೊಂದುವ ಟ್ರೇಗಳನ್ನು ತಯಾರಿಸಿ ಕೊಡುತ್ತಾರೆ. ಈ ಟ್ರೇಗೆ ವೈದ್ಯರು ನೀಡುವ ಜೆಲ್‌ ಹಾಕಿ ದಿನಕ್ಕೆ ಒಂದು ತಾಸು ಅಥವಾ ವೈದ್ಯರು ಹೇಳಿದಷ್ಟು ಹೊತ್ತು ಹಲ್ಲುಗಳ ಮೇಲಿರಿಸಬೇಕು. ಉತ್ತಮ ಫ‌ಲಿತಾಂಶ ಸಿಗಲು ಕೆಲವು ವಾರಗಳ ಕಾಲ ಹೀಗೆ ಟ್ರೇ ಇರಿಸಿಕೊಳ್ಳಬೇಕಾಗಬಹುದು.

ಔಷಧ ಮಳಿಗೆಗಳಲ್ಲಿ ಸಿಗುವ ಉತ್ಪನ್ನಗಳು: ಹಲ್ಲು ಬಿಳುಪು ಮಾಡುವ ಟೂತ್‌ಪೇಸ್ಟ್‌ಗಳು ಮತ್ತು ವೈಟ್ನಿಂಗ್‌ ಸ್ಟ್ರಿಪ್ಸ್‌ ಹಲ್ಲುಗಳ ಮೇಲ್ಮೆ„ಯಲ್ಲಿರುವ ಸಾದಾ ಕಲೆಗಳನ್ನು ನಿವಾರಿಸಲು ಉಪಯುಕ್ತ. ಆದರೆ ಆಂತರಿಕವಾಗಿ, ಹಲ್ಲುಗಳ ಒಳಗೆ ಇರುವ ಕಲೆಗಳನ್ನು ತೆಗೆದುಹಾಕಲು ಇವುಗಳಿಗೆ ಸಾಧ್ಯವಾಗುವುದಿಲ್ಲ.

ಜತೆಗೆ, ನಿಯಮಿತವಾಗಿ ಹಲ್ಲು ಶುಚಿಗೊಳಿಸುವುದಕ್ಕಾಗಿ ದಂತವೈದ್ಯರಲ್ಲಿಗೆ ಭೇಟಿ ನೀಡುವುದನ್ನು ಮರೆಯದಿರಿ. ನಿಯಮಿತವಾಗಿ ಚೆಕ್‌ಅಪ್‌ ಮಾಡಿಸಿಕೊಳ್ಳುವುದು ಮತ್ತು ಶುಚಿಗೊಳಿಸಿಕೊಳ್ಳುವುದರಿಂದ ಕಲೆಗಳು ಉಂಟಾಗುವುದನ್ನು ಮತ್ತು ಹಲ್ಲುಗಳು ಪಾಚಿಗಟ್ಟುವುದನ್ನು ತಡೆಯಬಹುದು.

ಯಾವಾಗ ದಂತವೈದ್ಯರನ್ನು ಕಾಣಬೇಕು?
ನಿಮ್ಮ ಹಲ್ಲುಗಳಲ್ಲಿ ಕಲೆಗಳು, ಹಲ್ಲು ಬಣ್ಣಗೆಟ್ಟಿರುವುದು ಕಂಡುಬಂದಿದ್ದು, ಸಾಮಾನ್ಯ ಹಲ್ಲು ಬಿಳುಪಾಗಿಸುವ ಉತ್ಪನ್ನಗಳಿಂದ ಪ್ರಯೋಜನವಾಗದೆ ಹೋದಲ್ಲಿ ನಿಮ್ಮ ದಂತವೈದ್ಯರನ್ನು ಕಾಣುವುದು ಸೂಕ್ತ.

ಹಲ್ಲುಗಳಲ್ಲಿ ಉಂಟಾದ ಕಲೆ ಆಳವಾಗಿರುವಂತೆ ತೋರುತ್ತಿದ್ದು, ಔಷಧ ಅಂಗಡಿಯಲ್ಲಿ ಸಿಗುವ ಉತ್ಪನ್ನಗಳಿಂದ ಪ್ರಯೋಜನವಾಗದೆ ಇದ್ದಲ್ಲಿ ಅದು ಹಲ್ಲು ಹುಳುಕು ಅಥವಾ ಎನಾಮಲ್‌ ಡಿಮಿನರಲೈಸೇಶನ್‌ ಆಗಿರುವಂತಹ ಹೆಚ್ಚು ಗಂಭೀರವಾದ ಸಮಸ್ಯೆಯಾಗಿರಬಹುದು.

ಒಂದು ಹಲ್ಲು ಮಾತ್ರ ಬಣ್ಣಗೆಟ್ಟಿ ದ್ದರೆ ಹಲ್ಲಿನ ಒಳಭಾಗಕ್ಕಾದ ಗಾಯ ಅಥವಾ ಹಲ್ಲು ಹುಳುಕಿನಿಂದಾಗಿ ಆಗಿರಬಹುದು. ಇಂತಹ ಸಮಸ್ಯೆಗಳಿಗೆ ದಂತವೈದ್ಯರಿಂದ ಎಷ್ಟು ಬೇಗನೆ ಚಿಕಿತ್ಸೆ ಪಡೆದುಕೊಳ್ಳುತ್ತೀರೋ ಅಷ್ಟು ಒಳ್ಳೆಯ ಫ‌ಲಿತಾಂಶ ಲಭ್ಯವಾಗಲು ಸಾಧ್ಯ.

ನಿಮ್ಮ ಹಲ್ಲುಗಳನ್ನು ಆರೋಗ್ಯಯುತವಾಗಿ ಇರಿಸಿಕೊಳ್ಳಲು ವರ್ಷಕ್ಕೆ ಎರಡು ಬಾರಿ ನಿಯಮಿತ ತಪಾಸಣೆಗಾಗಿ ದಂತವೈದ್ಯರನ್ನು ಕಾಣಬೇಕು. ಇಂತಹ ಭೇಟಿಗಳ ಸಂದರ್ಭದಲ್ಲಿ ಸಮಸ್ಯೆಯೇನಾದರೂ ಇದ್ದರೆ ಪತ್ತೆಯಾಗುತ್ತದೆ. ಚಿಕಿತ್ಸೆ ಬೇಗನೆ ಲಭಿಸಿದರೆ ಸಮಸ್ಯೆ ಹೆಚ್ಚು ಗಂಭೀರವಾಗದಂತೆ ತಡೆಯುವುದು ಸಾಧ್ಯವಾಗುತ್ತದೆ.

ಹಲ್ಲುಗಳು ಬಣ್ಣಗೆಡುವುದನ್ನು ಹೇಗೆ ತಡೆಯಬಹುದು?
ವರ್ಣಮಯ ಆಹಾರಗಳನ್ನು ಸೇವಿಸಿದ ಬಳಿಕ ಹಲ್ಲುಗಳ ಆರೈಕೆ ಮಾಡಿ. ಬಣ್ಣ ಹೊಂದಿರುವ ಆಹಾರ ಅಥವಾ ಪಾನೀಯ ಸೇವಿಸುವುದಿದ್ದರೆ ಸೇವಿಸಿದ ಕೂಡಲೇ ಹಲ್ಲುಜ್ಜಿ, ಫ್ಲಾಸ್‌ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಬಾಯಿ ಮುಕ್ಕಳಿಸುವುದು ಅಥವಾ ನೀರು ಕುಡಿಯಬಹುದು. ಇದರಿಂದ ಹಲ್ಲುಗಳು ಬಣ್ಣಗೆಡಲು ಕಾರಣವಾಗುವ ಆಹಾರದ ತುಣುಕುಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಬಾಯಿಯ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ. ಹಲ್ಲುಗಳನ್ನು ದಿನಕ್ಕೆ ಕನಿಷ್ಠ ಮೂರು ಬಾರಿ ಬ್ರಶ್‌ ಮಾಡಿ, ಪ್ರತೀ ದಿನವೂ ಫ್ಲಾಸ್‌ ಮಾಡಿ, ವಾಟರ್‌ ಫ್ಲಾಸ್‌ ಕೂಡ ಮಾಡಬಹುದು. ಜತೆಗೆ ಹಲ್ಲು ಬಿಳುಪಾಗಿಸುವ
ವೈಟ್ನಿಂಗ್‌ ಟೂತ್‌ಪೇಸ್ಟ್‌ ಅಥವಾ ಮೌತ್‌ರಿನ್ಸ್‌ ಬಳಕೆಯೂ ಮಾಡಬಹುದು. ಹಲ್ಲುಗಳ ಮೇಲೆ, ಹಲ್ಲುಗಳ ನಡುವೆ ಜಿಗುಟಾಗಿ ಅಂಟಿಕೂರುವ ಕಲೆಗಳನ್ನು ನಿವಾರಿಸಲು ಮೌತ್‌ ರಿನ್ಸ್‌ಗಳು ಮತ್ತು ವಾಟರ್‌ ಫ್ಲಾಸ್‌ಗಳು ಉತ್ತಮ ಆಯ್ಕೆಗಳಾಗಿವೆ.

ನಿಮ್ಮ ಹವ್ಯಾಸಗಳನ್ನು
ಬದಲಾಯಿಸಿಕೊಳ್ಳಿ.
ಧೂಮಪಾನ ಅಥವಾ ತಂಬಾಕು ಜಗಿಯುವ ಅಭ್ಯಾಸವಿದ್ದರೆ ನಿಮ್ಮ ವೈದ್ಯರ ಜತೆಗೆ ಮಾತನಾಡಿ ಹೇಗೆ ಈ ದುಶ್ಚಟಗಳಿಂದ ಮುಕ್ತಿ ಪಡೆಯಬಹುದು ಎಂದು ತಿಳಿದುಕೊಳ್ಳಿ. ಹಲ್ಲುಗಳಲ್ಲಿ ಕಲೆ ಉಂಟುಮಾಡುವ ಆಹಾರವಸ್ತುಗಳ ಸೇವನೆಯನ್ನು ಕಡಿಮೆ ಮಾಡಬಹುದು. ಅದು ಕಷ್ಟವಾದರೆ ತಿಂದ ಕೂಡಲೇ ಹಲ್ಲುಜ್ಜುವುದಕ್ಕಾಗಿ ಬ್ರಶ್‌ ಸದಾ ಜತೆಯಲ್ಲಿರಲಿ.

ಕೊನೆಯದಾಗಿ
ಹಲ್ಲುಗಳು ಬಣ್ಣಗೆಡುವುದು ಒಂದು ಸಾಮಾನ್ಯವಾದ ಸಮಸ್ಯೆಯಾಗಿದ್ದು, ಯಾರಿಗೂ ಹಲವು ಕಾರಣಗಳಿಂದ ಉಂಟಾಗಬಹುದಾಗಿದೆ. ಸಾಮಾನ್ಯವಾಗಿ ಇದು ಬಣ್ಣಗಳಿಂದ ಕೂಡಿದ ಆಹಾರ ಮತ್ತು ಪಾನೀಯಗಳ ಬಳಕೆ, ತಂಬಾಕು ಉತ್ಪನ್ನಗಳಾದ ಸಿಗರೇಟು, ಸಿಗಾರ್‌ ಬಳಕೆ ಅಥವಾ ತಂಬಾಕು ಜಗಿಯುವುದರಿಂದ ಉಂಟಾಗುತ್ತದೆ.
ಹಲ್ಲುಗಳ ಮೇಲ್ಮೆ„ಯಲ್ಲಿ ಉಂಟಾಗುವ ಸಾಮಾನ್ಯವಾದ ಕಲೆಗಳನ್ನು, ಹಲ್ಲು ಬಣ್ಣಗೆಟ್ಟಿರುವುದನ್ನು ಔಷಧ ಅಂಗಡಿಗಳಲ್ಲಿ ಸಿಗುವ ಹಲ್ಲು ಬಿಳುಪು ಮಾಡುವ ಉತ್ಪನ್ನಗಳಿಂದ ಅಥವಾ ಚಿಕಿತ್ಸೆಗಳಿಂದ ನಿವಾರಿಸಬಹುದು ಅಥವಾ ಕಡಿಮೆ ಮಾಡಬಹುದು. ಇದನ್ನು ನೀವೇ ಮನೆಯಲ್ಲಿ ಮಾಡಬಹುದು ಅಥವಾ ದಂತವೈದ್ಯರ ಸಹಾಯ ಪಡೆಯಬಹುದು.

ಹಲ್ಲುಗಳ ಒಳಭಾಗದಲ್ಲಿ ಕಂಡುಬರುವ ಆಳವಾಗಿ ಬೇರೂರಿರುವಕಲೆಗಳು, ಬಣ್ಣಗೆಟ್ಟಿರುವುದನ್ನು ಆಂತರಿಕ ಕಲೆ ಎಂದು ಕರೆಯಲಾಗುತ್ತಿದ್ದು,ಇದು ಹಲ್ಲು ಹುಳುಕಾಗಿರುವುದು, ಗಾಯ ಅಥವಾ ಔಷಧದಿಂದ ಆಗಿರಬಹುದು. ಇಂತಹ ಕಲೆಗಳನ್ನು ನಿವಾರಿಸುವುದಕ್ಕೆ ಅಥವಾ ಕಡಿಮೆ ಮಾಡುವುದಕ್ಕೆ ಸಹಕಾರಿಯಾದ ಚಿಕಿತ್ಸೆ/ ವಿಧಾನವನ್ನು ನಿಮ್ಮ ದಂತವೈದ್ಯರು ಶಿಫಾರಸು ಮಾಡಬಲ್ಲರು.

-ಡಾ| ಆನಂದದೀಪ್‌ ಶುಕ್ಲಾ
ಅಸೋಸಿಯೇಟ್‌ ಪ್ರೊಫೆಸರ್‌, ಓರಲ್‌ ಸರ್ಜರಿ ವಿಭಾಗ, ಎಂಸಿಒಡಿಎಸ್‌, ಮಾಹೆ, ಮಣಿಪಾಲ

 

ಟಾಪ್ ನ್ಯೂಸ್

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-health

Mother: ತಾಯಂದಿರ ಮಾನಸಿಕ ಆರೋಗ್ಯ

16

Vaccines: ವಯಸ್ಕರಿಗೆ ಲಸಿಕೆಗಳು

5-

ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ

4–Lupus-Nephritis

Lupus Nephritis: ಲೂಪಸ್‌ ನೆಫ್ರೈಟಿಸ್‌: ರೋಗಿಗಳಿಗೆ ಒಂದು ಮಾರ್ಗದರ್ಶಿ

3

Mental health: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.