ಶ್ರವಣ ಸಾಧನ ಬಳಕೆದಾರರು ತಿಳಿದುಕೊಳ್ಳಬೇಕಾದದ್ದೇನು?


Team Udayavani, Feb 17, 2019, 12:45 AM IST

hearing-aid.jpg

ಶ್ರವಣ ಸಾಧನದ ಕಾಳಜಿ ಮತ್ತು ನಿರ್ವಹಣೆ
ಶ್ರವಣ ಸಾಧನವು ಒಂದು ಇಲೆಕ್ಟ್ರಾನಿಕ್‌ ಉಪಕರಣವಾಗಿದ್ದು, ಧ್ವನಿಯನ್ನು ವರ್ಧಿಸಿ ಕೇಳುವಂತೆ ಮಾಡುತ್ತದೆ.
ಸಮಾಜದಲ್ಲಿ ಬದುಕಲು ಸಂವಹನವು ಅತ್ಯಂತ ಮುಖ್ಯವಾಗಿದೆ. ಶ್ರವಣ ದೋಷವನ್ನು ಹೊಂದಿರುವವರು ಸಮಾಜದಲ್ಲಿ ಜೀವಿಸಲು ಹಾಗೂ ಇತರರ ಜತೆಗೆ ಸಂವಹನ ನಡೆಸಲು ಅಡೆತಡೆಗಳನ್ನು ಅನುಭವಿಸುತ್ತಾರೆ. 

ಶ್ರವಣ ಸಾಧನವನ್ನು ಉಪಯೋಗಿಸುವವರಿಗೆ ಅದರ ಸಂಕಷ್ಟಗಳ ಅರಿವಿರುತ್ತದೆ. ಒಂದು ದಿನ ಶ್ರವಣ ಸಾಧನವು ಕೈಕೊಟ್ಟರೆ ಅಥವಾ ಸರಿಯಾಗಿ ಕೇಳಿಸದೆ ಇದ್ದರೆ ಆ ದಿನದ ಕೆಲಸಕಾರ್ಯಗಳು, ಚಟುವಟಿಕೆಗಳ ಮೇಲೆ ಅದು ಭಾರೀ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಜತೆಗೆ, ರೋಗಿಯಲ್ಲಿ ಆತಂಕ, ಉದ್ವೇಗ, ಭಯ, ಹಿಂಜರಿಕೆ ಇತ್ಯಾದಿಗಳನ್ನು ಹುಟ್ಟು ಹಾಕುತ್ತದೆ.

ನಾವು ಖರೀದಿರಿಸುವ ಟಿವಿ ಅಥವಾ ಫ್ರಿಜ್ಜನ್ನು ನಾವು ಹೋಗುವಲ್ಲೆಲ್ಲ ನಮ್ಮ ಜತೆಗೆ ಹೊತ್ತೂಯ್ಯುವುದಿಲ್ಲ.  ಆದರೆ ಶ್ರವಣ ದೋಷ ಹೊಂದಿರುವವರ ಪಾಲಿಗೆ ಶ್ರವಣ ಸಾಧನ ಅತ್ಯಗತ್ಯವಾದುದು, ಅದು ಸದಾ ಅವರ ಜತೆಗಿರಬೇಕಾಗುತ್ತದೆ. 

ಶ್ರವಣ ಸಾಧನವನ್ನು ಖರೀದಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಅದರ ಬಗ್ಗೆ ಕಾಳಜಿ ವಹಿಸುವುದು ಹಾಗೂ ನಿರ್ವಹಣೆ ಮಾಡುವುದು.

ಕಿವಿ ಗುಗ್ಗೆ ರಕ್ಷಕ
– ಕಿವಿಗುಗ್ಗೆ ರಕ್ಷಕವನ್ನು ಶ್ರವಣ ಸಾಧನದ ರಿಸೀವರ್‌ ತುದಿಗೆ ಅಳವಡಿಸಿರಲಾಗುತ್ತದೆ. ಇದು ಗುಗ್ಗೆ ಅದರೊಳಗೆ ಹೋಗದಂತೆ ತಡೆಯುತ್ತದೆ.
– ಕಿವಿಗುಗ್ಗೆ ಒಳಹೊಕ್ಕರೆ ತಡೆಯುಂಟಾಗಿ ಕೇಳದಂತಾಗುತ್ತದೆ.
– ಕಿವಿಗುಗ್ಗೆ ತುಂಬಿ ಗುಗ್ಗೆ ರಕ್ಷಕವೂ ಬ್ಲಾಕ್‌ ಆದಾಗ ಜತೆಗೆ ಒದಗಿಸಲಾದ ಸಲಕರಣೆಗಳನ್ನು ಉಪಯೋಗಿಸಿ ಅದನ್ನು ಶುಚಿಗೊಳಿಸಬೇಕು.
– ಬಳಕೆಯಲ್ಲಿ ಇಲ್ಲದಾಗ ಶ್ರವಣ ಸಾಧನವನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಬೇಕು.
– ಏನಾದರೂ ಸಮಸ್ಯೆ ಉಂಟಾದಾಗ ನಿಮ್ಮ ಶ್ರವಣ ಸಾಧನವನ್ನು ದುರಸ್ತಿ ಮಾಡಲು ಪ್ರಯತ್ನಿಸಬೇಡಿ.
– ಕಿವಿ ಸೋರುವಿಕೆ ಇದ್ದರೆ ಆಗ ಶ್ರವಣ ಸಾಧನವನ್ನು ಉಪಯೋಗಿಸಬೇಡಿ.
– ನಿಮ್ಮ ಶ್ರವಣ ಸಾಧನವನ್ನು ಬೇರೆಯವರಿಗೆ ಉಪಯೋಗಿಸಲು ಕೊಡಬೇಡಿ. ಶ್ರವಣ ದೋಷ ಇರುವ ಯಾರೇ ಆದರೂ ಪರೀಕ್ಷಿಸಿಕೊಂಡು ವೈದ್ಯರ ಶಿಫಾರಸು ಪಡೆದ ಬಳಿಕವಷ್ಟೇ ಶ್ರವಣ ಸಾಧನ ಉಪಯೋಗಿಸಬೇಕು.
– ಶ್ರವಣಸಾಧನವನ್ನು ಪ್ರತಿದಿನವೂ ಒರೆಸಿ ಶುಚಿಗೊಳಿಸಬೇಕು.
– ಶುಚಿಗೊಳಿಸುವ ಸಂದರ್ಭದಲ್ಲಿ ಮೌಲ್ಡ್‌ನ ಬಗೆಗೆ ಎಚ್ಚರಿಕೆಯಿಂದ ಇರಬೇಕು.
– ಮೌಲ್ಡ್‌ ಬಣ್ಣಗೆಟ್ಟಿದ್ದರೆ, ಬಿರುಕು ಬಿಟ್ಟಿದ್ದರೆ ಆಡಿಯಾಲಜಿಸ್ಟ್‌ ಅವರನ್ನು ಸಂಪರ್ಕಿಸಿ ಮತ್ತು ಅದನ್ನು ಬದಲಾಯಿಸಿ.
– ಮಕ್ಕಳ ಕಿವಿಯ ಗಾತ್ರ ಪ್ರತೀ ಆರು ತಿಂಗಳಿಗೊಮ್ಮೆ ಬದಲಾಗುತ್ತದೆ. ಆದ್ದರಿಂದ 12 ವರ್ಷ ವಯಸ್ಸಿನ ವರೆಗೆ ಮಕ್ಕಳಿಗೆ ಪ್ರತೀ ಆರು ತಿಂಗಳಿಗೆ ಹೊಸ ಮೌಲ್ಡ್‌ ಅಗತ್ಯವಾಗುತ್ತದೆ.
– ಶ್ರವಣ ಸಾಧನದ ಕೊಳವೆ ಬಿರುಕು ಬಿಟ್ಟಾಗ/ ತುಂಡಾದಾಗ/ ಸೋರಿಕೆಯಾದಾಗ ಅಥವಾ ಪೆಡಸಾದಾಗ ಅದನ್ನು ದುರಸ್ತಿ ಮಾಡಬೇಕು ಅಥವಾ ಬದಲಾಯಿಸಬೇಕು.
– ಮೌಲ್ಡನ್ನು ಉಗುರು ಬಿಸಿ ನೀರಿನಲ್ಲಿ ಅಥವಾ ಸೋಪು ನೀರಿನಲ್ಲಿ ತೊಳೆದು ಕಿವಿಗುಗ್ಗೆಯನ್ನು ಶುಚಿಗೊಳಿಸಬೇಕು.
– ಕೊಳೆ ತುಂಬಿದಾಗ ಶುಚಿಯಾದ ಬಟ್ಟೆಯಿಂದ ಅಥವಾ ವೈರ್‌ ಯಾ ಟೂತ್‌ ಬ್ರಶ್‌ ಉಪಯೋಗಿಸಿ ಶುಚಿಗೊಳಿಸಬೇಕು.
– ಹೀಗೆ ತೊಳೆದ ಬಳಿಕ ಮೌಲ್ಡನ್ನು ಮರಳಿ ಶ್ರವಣ ಸಾಧನಕ್ಕೆ ಅಳವಡಿಸುವುದಕ್ಕೆ ಮುನ್ನ ಅದು ಸಂಪೂರ್ಣವಾಗಿ ತೇವಾಂಶ ಮುಕ್ತವಾಗಿರಬೇಕು.

ಕೆಲವು ಸಲಹೆಗಳು
– ಶ್ರವಣ ಸಾಧನವು ಬಹಳ ಮುಖ್ಯವಾದದ್ದು ಎಂಬುದನ್ನು ಮರೆಯಬೇಡಿ.
– ಶ್ರವಣ ಸಾಧನವನ್ನು ದಿನವೂ ಕನಿಷ್ಠ 8-10 ತಾಸುಗಳ ಕಾಲ ನಿಯಮಿತವಾಗಿ ಬಳಸಿ. ಅದಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ.
– ಶ್ರವಣ ಸಾಧನವು ಕಾರ್ಯಾಚರಿಸಲು ಬ್ಯಾಟರಿ ಅಗತ್ಯವಾಗಿದೆ.

ಹೊಸ ಶ್ರವಣ ಸಾಧನ ಖರೀದಿಸುವಾಗ ಗಮನಿಸಬೇಕಾದ್ದೇನು?
– ಝಿಂಕ್‌ ಏರ್‌ ಬ್ಯಾಟರಿ ಉಪಯೋಗಿಸುವ ಶ್ರವಣ ಸಾಧನ ಖರೀದಿಸಿ. ಇದನ್ನು ಅದರ ಹಿಂದುಗಡೆ ನಮೂದಿಸಿರುತ್ತಾರೆ.
– ವಿಭಿನ್ನ ಗಾತ್ರದ ಬ್ಯಾಟರಿಗಳು ಮಾರುಕಟ್ಟೆಯಲ್ಲಿವೆ – ಉದಾ: 675, 13, 312, 10, 5.
– ಬ್ಯಾಟರಿ ಗಾತ್ರ ಮತ್ತು ಬಣ್ಣದ ಟ್ಯಾಬ್‌ಗಳನ್ನು ನೆನಪಿರಿಸಿಕೊಳ್ಳಿ. ಇದರಿಂದ ಶ್ರವಣ ಸಾಧನದ ಬ್ಯಾಟರಿ ಖರೀದಿ ಸುಲಭವಾಗುತ್ತದೆ.

ಕಿತ್ತಳೆ ಬಣ್ಣದ ಟ್ಯಾಬ್‌ ಗಾತ್ರ: 13
ಕಂದು ಟ್ಯಾಬ್‌: 312
ಹಳದಿ ಟ್ಯಾಬ್‌: 10
ನೀಲಿ ಟ್ಯಾಬ್‌: 675
– ಸ್ಥಳೀಯ ಅಥವಾ ಕಳಪೆ ಗುಣಮಟ್ಟದ ಬ್ಯಾಟರಿಗಳನ್ನು ಉಪಯೋಗಿಸಬೇಡಿ.
– ತೆರೆದ ಪೊಟ್ಟಣದ ಬ್ಯಾಟರಿಯನ್ನು 
ಖರೀದಿಸಬೇಡಿ. ಖರೀದಿಸುವ ಮುನ್ನ ಕೂಲಂಕಷವಾಗಿ ಪರಿಶೀಲಿಸಿ.
– ಟ್ಯಾಬ್‌ ತೆಗೆಯಲಾದ ಬ್ಯಾಟರಿ ಖರೀದಿಸಬೇಡಿ.
– ಸರಿಯಾದ ಗಾತ್ರದ ಬ್ಯಾಟರಿಗಳನ್ನೇ ಉಪಯೋಗಿಸಿ.
– ದೇಹದ ಮಟ್ಟದ ಶ್ರವಣ ಸಾಧನಗಳಿಗೆ ಪೆನ್ಸಿಲ್‌ ಸೆಲ್‌ (ಎಎ ಬ್ಯಾಟರಿ) ಮಾತ್ರ ಬಳಸಿ.
– ಮೊದಲಿಗೆ ಧನ ಮತ್ತು ಋಣ ಧ್ರುವಗಳಿಗೆ ಸರಿಯಾಗಿ ಬ್ಯಾಟರಿಗಳನ್ನು ಅಳವಡಿಸಿ.
– ಅಂಟಿನ ಟ್ಯಾಬ್‌ ತೆಗೆಯುವಾಗ ಬ್ಯಾಟರಿಗಳಿಗೆ ಗಾಳಿಗೆ ತೆರೆದುಕೊಳ್ಳಲು ಸಮಯ ಕೊಡಿ.
– ಸ್ಟಿಕರ್‌ ತೆಗೆದ ಬಳಿಕ ಶ್ರವಣ ಸಾಧನದೊಳಗೆ ಬ್ಯಾಟರಿ ಅಳವಡಿಸುವುದಕ್ಕೆ ಒಂದೆರಡು ನಿಮಿಷ ಕಾಯಿರಿ. ಶ್ರವಣ ಸಾಧನಗಳು ಏರ್‌ ಟೈಟ್‌ ಆಗಿರುತ್ತವೆ. ಆದರೆ ಹೊಸ ಬ್ಯಾಟರಿಗಳು ಪೂರ್ಣ ಚಟುವಟಿಕೆ ಆರಂಭಿಸುವುದಕ್ಕೆ ಹೆಚ್ಚು ಆಮ್ಲಜನಕ ಬೇಕಾಗುತ್ತದೆ.
– ಶ್ರವಣ ಸಾಧನವು ಬಳಕೆಯಲ್ಲಿ ಇಲ್ಲದಿದ್ದಾಗ ಬ್ಯಾಟರಿಗಳನ್ನು ತೆಗೆದಿರಿಸಿ.
– ಬ್ಯಾಟರಿಗಳನ್ನು ಮೂಸಿ ನೋಡಬೇಡಿ.
– ಅಡುಗೆ ಕೋಣೆ, ಬಚ್ಚಲು ಮನೆಯಂತಹ ಆದ್ರì ಸ್ಥಳಗಳಲ್ಲಿ ಶ್ರವಣ ಸಾಧನದ ಬ್ಯಾಟರಿಗಳನ್ನು ಇರಿಸಬೇಡಿ.
– ಅವುಗಳನ್ನು ಫ್ರಿಜ್‌ನಲ್ಲಿಯೂ ಇರಿಸಬಾರದು.
– ಬ್ಯಾಟರಿಗಳ ಸಹಿತ ಶ್ರವಣಸಾಧನವನ್ನು ಶುಷ್ಕವಾಗಿ ಇರಿಸಿಕೊಳ್ಳಬೇಕು, ಒದ್ದೆಯಾಗಬಾರದು. ನಿಮಗೆ ಬೆವರುತ್ತಿದ್ದರೆ ಶ್ರವಣ ಸಾಧನವನ್ನು ಹೊರ ತೆಗೆದು ಟಿಶ್ಯೂ ಪೇಪರ್‌ನಿಂದ ಒರೆಸಿಕೊಳ್ಳಬೇಕು. 
– ಶ್ರವಣ ಸಾಧನದ ಬ್ಯಾಟರಿ ಕಂಪಾರ್ಟ್‌ಮೆಂಟ್‌ನಲ್ಲಿ ತೇವಾಂಶ ಸಂಗ್ರಹವಾದರೆ ಬ್ಯಾಟರಿ ತುಕ್ಕು ಹಿಡಿಯಲು ಕಾರಣವಾಗಬಹುದು. ದೀರ್ಘ‌ಕಾಲದಲ್ಲಿ ಇದು ಶ್ರವಣ ಸಾಧನಕ್ಕೂ ಹಾನಿ ಉಂಟು ಮಾಡಬಹುದು. ಆದ್ದರಿಂದ ಆಗಾಗ ಶ್ರವಣ ಸಾಧನದ ಧ್ರುವಗಳನ್ನು ಶುಚಿಗೊಳಿಸಲು ಮರೆಯಬೇಡಿ.
– ಮಕ್ಕಳು, ಸಾಕುಪ್ರಾಣಿಗಳಿಂದ ನಿಮ್ಮ ಶ್ರವಣ ಸಾಧನವನ್ನು ಸುರಕ್ಷಿತವಾಗಿರಿಸಿ.
– ಹಳೆಯ, ಬಳಕೆಯಲ್ಲಿಲ್ಲದ ಬ್ಯಾಟರಿಗಳನ್ನು ಮಕ್ಕಳು, ಸಾಕುಪ್ರಾಣಿಗಳಿಗೆ ಎಟುಕದಂತೆ ಇರಿಸಿ. ಹಲವು ವಿಧದ ಬ್ಯಾಟರಿಗಳಲ್ಲಿ ಅಪಾಯಕಾರಿ ವಸ್ತುಗಳಿರುತ್ತವೆ.
– ಶ್ರವಣ ಸಾಧನವನ್ನು ತೇವಾಂಶ ನಿವಾರಿಸುವ ಕಿಟ್‌ನಲ್ಲಿ ಬ್ಯಾಟರಿಗಳನ್ನು ತೆಗೆದು ಪ್ರತಿದಿನ ಅಥವಾ ವಾರಕ್ಕೊಮ್ಮೆಯಾದರೂ ಇರಿಸಿ.
– ನಿಮ್ಮ ಶ್ರವಣ ಸಾಧನವನ್ನು ಇಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ ಇರಿಸಬೇಡಿ.
– ಸ್ನಾನ ಮಾಡುವಾಗ, ಈಜುವಾಗ, ನಿದ್ರಿಸುವಾಗ ಶ್ರವಣ ಸಾಧನವನ್ನು ತೆಗೆದಿರಿಸಿ.
– ಶ್ರವಣ ಸಾಧನವನ್ನು ಈಜುವಾಗ, ಸ್ನಾನ ಮಾಡುವಾಗ, ನಿದ್ರಿಸುವಾಗ ತೆಗೆದಿರಿಸಬೇಕು. ಇದೇ ಕಾರಣಕ್ಕಾಗಿ ನಿಮ್ಮ ಶ್ರವಣ ಸಾಧನವನ್ನು ಮಳೆಯಿಂದ ರಕ್ಷಿಸಬೇಕು. ಇದಕ್ಕಾಗಿ ನೀವು ಟೊಪ್ಪಿಗೆ ಧರಿಸಬಹುದು ಅಥವಾ ಕೊಡೆ ಉಪಯೋಗಿಸಬಹುದು.

ಶ್ರವಣಸಾಧನವನ್ನು ಖರೀದಿಸುವ ಮುನ್ನ ಈ ಅಂಶಗಳನ್ನು ನೆನಪಿಡಿ.
– ನೀವು ಖರೀದಿಸಬಯಸುವ ಶ್ರವಣಸಾಧನವನ್ನು ಆಡಿಯಾಲಜಿಸ್ಟ್‌ಗೆ ತೋರಿಸಿ ಪರಿಶೀಲಿಸಿಕೊಳ್ಳಿ.
– ಕಿವಿ ಸೋರಿಕೆ ಇದ್ದರೆ ನಿರ್ಲಕ್ಷಿಸಬೇಡಿ.
– ಶ್ರವಣ ಸಾಧನವನ್ನು ಆನ್‌ಲೈನ್‌ ಆಗಿ ಖರೀದಿಸಬೇಡಿ.
– ಆಡಿಯಾಲಜಿಸ್ಟ್‌ ಸಲಹೆ ಪಡೆಯದೆ ಶ್ರವಣಸಾಧನ ಖರೀದಿ ಬೇಡ.
– ಶ್ರವಣ ಸಾಧನದ ಮೌಲ್ಡ್‌ಗೆ ಮಗುವಿನ ಚರ್ಮದಲ್ಲಿ ಯಾವುದೇ ಪ್ರತಿಕ್ರಿಯೆ ಉಂಟಾದರೆ ಇಎನ್‌ಟಿ ವೈದ್ಯರನ್ನು ಸಂಪರ್ಕಿಸಿ.
– ಆಡಿಯಾಲಜಿಸ್ಟ್‌ ಸಂಪರ್ಕಿಸಿ ಅವರ ಸಲಹೆ-ಮಾಹಿತಿ ಪಡೆದ ಬಳಿಕವೇ ಶ್ರವಣ ಸಾಧನ ಖರೀದಿಸಿ.

– ರೇಖಾ ಪಾಟೀಲ್‌ ಎಸ್‌.
ಸ್ಪೀಚ್‌ ಆ್ಯಂಡ್‌ ಹಿಯರಿಂಗ್‌ ವಿಭಾಗ,
ಎಸ್‌ಒಎಎಚ್‌ಎಸ್‌, ಮಾಹೆ, ಮಣಿಪಾಲ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5–jaundice

Jaundice: ಜಾಂಡಿಸ್‌ ಅಥವಾ ಅರಶಿನ ಕಾಮಾಲೆ

4-oral-cancer-2

Oral cancer: ನಿಶ್ಶಬ್ದ ಅಪಾಯ; ಬಾಯಿಯ ಕ್ಯಾನ್ಸರ್‌ ವಿರುದ್ಧ ಹೋರಾಟ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

6-surgery

Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.